Shanti Parva: Chapter 320

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೨೦

ಶುಕನಿಗೆ ಪರಮ ಪದ ಪ್ರಾಪ್ತಿ (1-19); ಪುತ್ರಶೋಕ ಪೀಡಿತನಾದ ವ್ಯಾಸನಿಗೆ ಮಹಾದೇವನಿಂದ ಸಮಾಧಾನ (20-41).

12320001 ಭೀಷ್ಮ ಉವಾಚ|

12320001a ಇತ್ಯೇವಮುಕ್ತ್ವಾ ವಚನಂ ಬ್ರಹ್ಮರ್ಷಿಃ ಸುಮಹಾತಪಾಃ|

12320001c ಪ್ರಾತಿಷ್ಠತ ಶುಕಃ ಸಿದ್ಧಿಂ ಹಿತ್ವಾ ಲೋಕಾಂಶ್ಚತುರ್ವಿಧಾನ್||

12320002a ತಮೋ ಹ್ಯಷ್ಟವಿಧಂ ಹಿತ್ವಾ ಜಹೌ ಪಂಚವಿಧಂ ರಜಃ|

12320002c ತತಃ ಸತ್ತ್ವಂ ಜಹೌ ಧೀಮಾಂಸ್ತದದ್ಭುತಮಿವಾಭವತ್||

ಭೀಷ್ಮನು ಹೇಳಿದನು: “ಈ ಮಾತನ್ನು ಹೇಳಿ ಸುಮಹಾತಪಸ್ವೀ ಬ್ರಹ್ಮರ್ಷಿಯು ಮುಂದುವರಿದನು. ಧೀಮಂತ ಶುಕನು ನಾಲ್ಕು ವಿಧದ ಲೋಕಗಳನ್ನೂ, ಎಂಟು ವಿಧದ ತಮೋಗುಣವನ್ನೂ, ಐದು ವಿಧದ ರಜೋಗುಣವನ್ನೂ ತ್ಯಜಿಸಿ ನಂತರದ ಸತ್ತ್ವಗುಣವನ್ನೂ ತ್ಯಜಿಸಿದನು. ಅದೊಂದು ಅದ್ಭುತವಾಗಿತ್ತು.

12320003a ತತಸ್ತಸ್ಮಿನ್ ಪದೇ ನಿತ್ಯೇ ನಿರ್ಗುಣೇ ಲಿಂಗವರ್ಜಿತೇ|

12320003c ಬ್ರಹ್ಮಣಿ ಪ್ರತ್ಯತಿಷ್ಠತ್ ಸ ವಿಧೂಮೋಽಗ್ನಿರಿವ ಜ್ವಲನ್||

ಅವನು ಆ ನಿತ್ಯ, ನಿರ್ಗುಣ, ಲಿಂಗವರ್ಜಿತ ಬ್ರಹ್ಮನಲ್ಲಿ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ನಿಂತುಕೊಂಡನು.

12320004a ಉಲ್ಕಾಪಾತಾ ದಿಶಾಂ ದಾಹಾ ಭೂಮಿಕಂಪಸ್ತಥೈವ ಚ|

12320004c ಪ್ರಾದುರ್ಭೂತಾಃ ಕ್ಷಣೇ ತಸ್ಮಿಂಸ್ತದದ್ಭುತಮಿವಾಭವತ್||

ಆ ಅದ್ಭುತವು ನಡೆಯಲು ಕ್ಷಣದಲ್ಲಿಯೇ ಉಲ್ಕಾಪಾತಗಳು ದಿಕ್ಕುಗಳನ್ನು ಬೆಳಗಿದವು. ಭೂಮಿಯು ಕಂಪಿಸಿತು.

12320005a ದ್ರುಮಾಃ ಶಾಖಾಶ್ಚ ಮುಮುಚುಃ ಶಿಖರಾಣಿ ಚ ಪರ್ವತಾಃ|

12320005c ನಿರ್ಘಾತಶಬ್ದೈಶ್ಚ ಗಿರಿರ್ಹಿಮವಾನ್ ದೀರ್ಯತೀವ ಹ||

ಮರಗಳಿಂದ ಶಾಖೆಗಳು ತುಂಡಾದವು. ಪರ್ವತಗಳು ಶಿಖರಗಳನ್ನು ಕಳೆದುಕೊಂಡವು. ಹಿಮವಂತನ ಗಿರಿಯು ಸೀಳುತ್ತಿದೆಯೋ ಎಂಬಂತೆ ನಿರ್ಘಾತ ಶಬ್ದಗಳಾದವು.

12320006a ನ ಬಭಾಸೇ ಸಹಸ್ರಾಂಶುರ್ನ ಜಜ್ವಾಲ ಚ ಪಾವಕಃ|

12320006c ಹ್ರದಾಶ್ಚ ಸರಿತಶ್ಚೈವ ಚುಕ್ಷುಭುಃ ಸಾಗರಾಸ್ತಥಾ||

ಸಹಸ್ರಾಂಶುವು ಬೆಳಗಲಿಲ್ಲ. ಪಾವಕನು ಪ್ರಜ್ವಲಿಸಲಿಲ್ಲ. ಸರೋವರಗಳೂ, ನದಿಗಳೂ, ಮತ್ತು ಸಾಗರಗಳೂ ಉಕ್ಕಿ ಬಂದವು.

12320007a ವವರ್ಷ ವಾಸವಸ್ತೋಯಂ ರಸವಚ್ಚ ಸುಗಂಧಿ ಚ|

12320007c ವವೌ ಸಮೀರಣಶ್ಚಾಪಿ ದಿವ್ಯಗಂಧವಹಃ ಶುಚಿಃ||

ವಾಸವನು ಸುಗಂಧಯುಕ್ತವಾದ ಮತ್ತು ರಸವತ್ತಾದ ಮಳೆಯನ್ನು ಸುರಿಸಿದನು. ವಾಯುವೂ ಕೂಡ ಶುಚಿಯಾದ ದಿವ್ಯಗಂಧವನ್ನು ಹೊತ್ತು ಬೀಸಿದನು.

12320008a ಸ ಶೃಂಗೇಽಪ್ರತಿಮೇ ದಿವ್ಯೇ ಹಿಮವನ್ಮೇರುಸಂಭವೇ|

12320008c ಸಂಶ್ಲಿಷ್ಟೇ ಶ್ವೇತಪೀತೇ ದ್ವೇ ರುಕ್ಮರೂಪ್ಯಮಯೇ ಶುಭೇ||

12320009a ಶತಯೋಜನವಿಸ್ತಾರೇ ತಿರ್ಯಗೂರ್ಧ್ವಂ ಚ ಭಾರತ|

12320009c ಉದೀಚೀಂ ದಿಶಮಾಶ್ರಿತ್ಯ ರುಚಿರೇ ಸಂದದರ್ಶ ಹ||

ಭಾರತ! ಉತ್ತರದ ದಿಶೆಯಲ್ಲಿ ಹೋಗುತ್ತಿದ್ದ ಅವನು ದಿವ್ಯ ಹಿಮವತ್ ಮತ್ತು ಮೇರುಪರ್ವತಗಳ ಅಪ್ರತಿಮ ಬೆಳ್ಳಿಯ ಬಿಳಿ ಮತ್ತು ಬಂಗಾರದ ಹೊಂಬಣ್ಣದ ಶುಭ ಶೃಂಗಗಳು ಒಂದಕ್ಕೊಂದು ತಾಗಿಕೊಂಡಿರುವ ಸುಂದರ ದೃಶ್ಯವನ್ನು ನೋಡಿದನು.

12320010a ಸೋಽವಿಶಂಕೇನ ಮನಸಾ ತಥೈವಾಭ್ಯಪತಚ್ಚುಕಃ|

12320010c ತತಃ ಪರ್ವತಶೃಂಗೇ ದ್ವೇ ಸಹಸೈವ ದ್ವಿಧಾಕೃತೇ|

12320010e ಅದೃಶ್ಯೇತಾಂ ಮಹಾರಾಜ ತದದ್ಭುತಮಿವಾಭವತ್||

ಮಹಾರಾಜ! ಶುಕನು ಯಾವ ಶಂಕೆಯೂ ಇಲ್ಲದೇ ಆ ಶಿಖರಗಳನ್ನು ಏರಿದನು. ಆಗ ಕೂಡಲೇ ಆ ಪರ್ವತ ಶಿಖರಗಳು ಎರಡು ಭಾಗಗಳಾಗಿ ಸೀಳಿ ಹೋದವು. ಅದೊಂದು ಅದ್ಭುತವಾಗಿ ತೋರಿತು.

12320011a ತತಃ ಪರ್ವತಶೃಂಗಾಭ್ಯಾಂ ಸಹಸೈವ ವಿನಿಃಸೃತಃ|

12320011c ನ ಚ ಪ್ರತಿಜಘಾನಾಸ್ಯ ಸ ಗತಿಂ ಪರ್ವತೋತ್ತಮಃ||

ಆಗ ಕೂಡಲೇ ಅವನು ಆ ಎರಡು ಪರ್ವತಶೃಂಗಗಳ ಮಧ್ಯದಿಂದ ಹೊರಬಂದನು. ಮುಂದೆ ಹೋಗುತ್ತಿದ್ದ ಶುಕನ ಮಾರ್ಗವನ್ನು ಆ ಪರ್ವತೋತ್ತಮನು ಮತ್ತೆ ತಡೆಯಲಿಲ್ಲ.

12320012a ತತೋ ಮಹಾನಭೂಚ್ಚಬ್ದೋ ದಿವಿ ಸರ್ವದಿವೌಕಸಾಮ್|

12320012c ಗಂಧರ್ವಾಣಾಮೃಷೀಣಾಂ ಚ ಯೇ ಚ ಶೈಲನಿವಾಸಿನಃ||

ಆಗ ದಿವಿಯಲ್ಲಿ ಸರ್ವದಿವೌಕಸರೂ ಗಂಧರ್ವ-ಋಷಿಗಳೂ ಮತ್ತು ಆ ಶೈಲನಿವಾಸಿಗಳೂ ಮಹಾ ಹರ್ಷೋದ್ಗಾರ ಮಾಡಿದರು.

12320013a ದೃಷ್ಟ್ವಾ ಶುಕಮತಿಕ್ರಾಂತಂ ಪರ್ವತಂ ಚ ದ್ವಿಧಾಕೃತಮ್|

12320013c ಸಾಧು ಸಾಧ್ವಿತಿ ತತ್ರಾಸೀನ್ನಾದಃ ಸರ್ವತ್ರ ಭಾರತ||

ಭಾರತ! ಎರಡಾಗಿ ಸೀಳಿಹೋದ ಪರ್ವತವನ್ನು ದಾಟಿ ಮುಂದೆ ಹೋಗುತ್ತಿದ್ದ ಆ ಶುಕನನ್ನು ನೋಡಿ “ಸಾಧು! ಸಾಧು!” ಎಂದು ಎಲ್ಲಕಡೆ ನಾದಗಳಾದವು.

12320014a ಸ ಪೂಜ್ಯಮಾನೋ ದೇವೈಶ್ಚ ಗಂಧರ್ವೈರೃಷಿಭಿಸ್ತಥಾ|

12320014c ಯಕ್ಷರಾಕ್ಷಸಸಂಘೈಶ್ಚ ವಿದ್ಯಾಧರಗಣೈಸ್ತಥಾ||

ದೇವತೆಗಳು, ಗಂಧರ್ವರು, ಋಷಿಗಳು, ಯಕ್ಷ-ರಾಕ್ಷಸ ಸಂಘಗಳು ಮತ್ತು ವಿದ್ಯಾಧರಗಣಗಳು ಅವನನ್ನು ಪೂಜಿಸಿದರು.

12320015a ದಿವ್ಯೈಃ ಪುಷ್ಪೈಃ ಸಮಾಕೀರ್ಣಮಂತರಿಕ್ಷಂ ಸಮಂತತಃ|

12320015c ಆಸೀತ್ಕಿಲ ಮಹಾರಾಜ ಶುಕಾಭಿಪತನೇ ತದಾ||

ಮಹಾರಾಜ! ಶುಕನು ಮೇಲೆ ಹೋಗುತ್ತಿದ್ದಾಗ ಅಂತರಿಕ್ಷದ ಎಲ್ಲಕಡೆ ದಿವ್ಯ ಪುಷ್ಪಗಳು ಹರಡಿಹೋಗಿದ್ದವು.

12320016a ತತೋ ಮಂದಾಕಿನೀಂ ರಮ್ಯಾಮುಪರಿಷ್ಟಾದಭಿವ್ರಜನ್|

12320016c ಶುಕೋ ದದರ್ಶ ಧರ್ಮಾತ್ಮಾ ಪುಷ್ಪಿತದ್ರುಮಕಾನನಾಮ್||

ಮೇಲು ಮೇಲಕ್ಕೆ ಹೋಗುತ್ತಿದ್ದಾಗ ಧರ್ಮಾತ್ಮ ಶುಕನು ಪುಷ್ಪಿತ ವೃಕ್ಷ-ಕಾನನಗಳಿಂದ ಕೂಡಿದ್ದ ರಮ್ಯವಾದ ಮಂದಾಕಿನೀ ನದಿಯನ್ನು ನೋಡಿದನು.

12320017a ತಸ್ಯಾಂ ಕ್ರೀಡಂತ್ಯಭಿರತಾಃ ಸ್ನಾಂತಿ ಚೈವಾಪ್ಸರೋಗಣಾಃ|

12320017c ಶೂನ್ಯಾಕಾರಂ ನಿರಾಕಾರಾಃ ಶುಕಂ ದೃಷ್ಟ್ವಾ ವಿವಾಸಸಃ||

ಅದರಲ್ಲಿ ಜಲಕ್ರೀಡೆಯನ್ನಾಡುತ್ತಿದ್ದ ಅಪ್ಸರಗಣಗಳು ನಗ್ನರಾಗಿದ್ದರೂ ಶೂನ್ಯಾಕಾರ ನಿರಾಕಾರ ಶುಕನನ್ನು ನೋಡಿ ಯಾವರೀತಿಯ ವಿಕಾರವನ್ನೂ ಹೊಂದಲಿಲ್ಲ.

12320018a ತಂ ಪ್ರಕ್ರಮಂತಮಾಜ್ಞಾಯ ಪಿತಾ ಸ್ನೇಹಸಮನ್ವಿತಃ|

12320018c ಉತ್ತಮಾಂ ಗತಿಮಾಸ್ಥಾಯ ಪೃಷ್ಠತೋಽನುಸಸಾರ ಹ||

ಹೀಗೆ ಶುಕನು ಉತ್ತಮ ಮಾರ್ಗದಲ್ಲಿ ಹೊರಟುಹೋದುದನ್ನು ತಿಳಿದ ಅವನ ಪಿತ ವ್ಯಾಸನು ಸ್ನೇಹಸಮನ್ವಿತನಾಗಿ ಅವನನ್ನು ಹಿಂಬಾಲಿಸಿ ಹೋದನು.

12320019a ಶುಕಸ್ತು ಮಾರುತಾದೂರ್ಧ್ವಂ ಗತಿಂ ಕೃತ್ವಾಂತರಿಕ್ಷಗಾಮ್|

12320019c ದರ್ಶಯಿತ್ವಾ ಪ್ರಭಾವಂ ಸ್ವಂ ಸರ್ವಭೂತೋಽಭವತ್ತದಾ||

ಅಷ್ಟರಲ್ಲಿ ಶುಕನಾದರೋ ವಾಯುಮಂಡಲದಿಂದಲೂ ಮೇಲಿನ ಅಂತರಿಕ್ಷಗರ ಮಾರ್ಗವನ್ನು ಆಶ್ರಯಿಸಿ ತನ್ನ ಪ್ರಭಾವವನ್ನು ಪ್ರದರ್ಶಿಸಿ ಸರ್ವಭೂತನಾದನು.

12320020a ಮಹಾಯೋಗಗತಿಂ ತ್ವಗ್ರ್ಯಾಂ ವ್ಯಾಸೋತ್ಥಾಯ ಮಹಾತಪಾಃ|

12320020c ನಿಮೇಷಾಂತರಮಾತ್ರೇಣ ಶುಕಾಭಿಪತನಂ ಯಯೌ||

ಮಹಾತಪಸ್ವೀ ವ್ಯಾಸನು ಮಹಾಯೋಗಗತಿಯನ್ನು ಆಶ್ರಯಿಸಿ ನಿಮಿಷಮಾತ್ರದಲ್ಲಿ ಶುಕಾಭಿಪತನದ ಸ್ಥಳವನ್ನು ತಲುಪಿದನು.

12320021a ಸ ದದರ್ಶ ದ್ವಿಧಾ ಕೃತ್ವಾ ಪರ್ವತಾಗ್ರಂ ಶುಕಂ ಗತಮ್|

12320021c ಶಶಂಸುರೃಷಯಸ್ತಸ್ಮೈ ಕರ್ಮ ಪುತ್ರಸ್ಯ ತತ್ತದಾ||

ಪರ್ವತಾಗ್ರವನ್ನು ಎರಡಾಗಿ ಸೀಳಿ ಶುಕನು ಹೋಗಿದ್ದ ಆ ಸ್ಥಳವನ್ನು ಅವನು ನೋಡಿದನು. ಆಗ ಋಷಿಗಳು ಅವನ ಪುತ್ರನ ಆ ಕರ್ಮವನ್ನು ಪ್ರಶಂಸಿಸುತ್ತಿದ್ದರು.

12320022a ತತಃ ಶುಕೇತಿ ದೀರ್ಘೇಣ ಶೈಕ್ಷೇಣಾಕ್ರಂದಿತಸ್ತದಾ|

12320022c ಸ್ವಯಂ ಪಿತ್ರಾ ಸ್ವರೇಣೋಚ್ಚೈಸ್ತ್ರೀಽಲ್ಲೋಕಾನನುನಾದ್ಯ ವೈ||

12320023a ಶುಕಃ ಸರ್ವಗತೋ ಭೂತ್ವಾ ಸರ್ವಾತ್ಮಾ ಸರ್ವತೋಮುಖಃ|

12320023c ಪ್ರತ್ಯಭಾಷತ ಧರ್ಮಾತ್ಮಾ ಭೋಃಶಬ್ದೇನಾನುನಾದಯನ್||

ಆಗ ಅವನು “ಶುಕಾ!” ಎಂದು ದೀರ್ಘಸ್ವರದಲ್ಲಿ ಕೂಗಿಕೊಂಡನು. ತನ್ನ ಪಿತುವು ಉಚ್ಛ ಸ್ವರದಲ್ಲಿ ಮೂರುಲೋಕಗಳೂ ಕೇಳುವಂತೆ ಹಾಗೆ ಕೂಗಿಕೊಳ್ಳಲು ಸರ್ವಭೂತಾತ್ಮನಾಗಿದ್ದ ಧರ್ಮಾತ್ಮ ಶುಕನು ಸರ್ವಾತ್ಮನಾಗಿ ಸರ್ವತೋಮುಖನಾಗಿ “ಭೋಃ!” ಎಂಬ ಶಬ್ದದಿಂದ ಅನುನಾದಿಸಿ ಉತ್ತರಿಸಿದನು.

12320024a ತತ ಏಕಾಕ್ಷರಂ ನಾದಂ ಭೋ ಇತ್ಯೇವ ಸಮೀರಯನ್|

12320024c ಪ್ರತ್ಯಾಹರಜ್ಜಗತ್ಸರ್ವಮುಚ್ಚೈಃ ಸ್ಥಾವರಜಂಗಮಮ್||

ಆಗ ಭೋ ಎಂಬ ಏಕಾಕ್ಷರ ನಾದದಿಂದ ಜಗತ್ತಿನ ಎಲ್ಲ ಸ್ಥಾವರ-ಜಂಗಮಗಳೂ ಒಂದಾಗಿ ಗಟ್ಟಿಯಾಗಿ ಕೂಗಿ ಪ್ರತಿಧ್ವನಿಸಿದವು.

12320025a ತತಃ ಪ್ರಭೃತಿ ಚಾದ್ಯಾಪಿ ಶಬ್ದಾನುಚ್ಚಾರಿತಾನ್ ಪೃಥಕ್|

12320025c ಗಿರಿಗಹ್ವರಪೃಷ್ಠೇಷು ವ್ಯಾಜಹಾರ ಶುಕಂ ಪ್ರತಿ||

ಅಂದಿನಿಂದ ಈಗಲೂ ಕೂಡ ಗಿರಿಗಹ್ವರ ಪೃಷ್ಠಗಳಲ್ಲಿ ಶುಕನ ಕುರಿತಾದ ವ್ಯಾಸನ ಕೂಗನ್ನೂ, ಅದಕ್ಕುತ್ತರವಾಗಿ ಶುಕನ ಭೋ ಶಬ್ಧವನ್ನೂ ಮತ್ತು ಅಲ್ಲುಂಟಾದ ಪ್ರತಿಧ್ವನಿಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಹೇಳುತ್ತಾರೆ.

12320026a ಅಂತರ್ಹಿತಃ ಪ್ರಭಾವಂ ತು ದರ್ಶಯಿತ್ವಾ ಶುಕಸ್ತದಾ|

12320026c ಗುಣಾನ್ ಸಂತ್ಯಜ್ಯ ಶಬ್ದಾದೀನ್ ಪದಮಧ್ಯಗಮತ್ ಪರಮ್||

ಹೀಗೆ ಶುಕನು ತನ್ನ ಪ್ರಭಾವವನ್ನು ತೋರಿಸುತ್ತಾ ಶಬ್ದಾದಿ ಗುಣಗಳನ್ನು ಪರಿತ್ಯಜಿಸಿ ಪರಮಪದದ ಮಧ್ಯಂಗತನಾದನು.

12320027a ಮಹಿಮಾನಂ ತು ತಂ ದೃಷ್ಟ್ವಾ ಪುತ್ರಸ್ಯಾಮಿತತೇಜಸಃ|

12320027c ನಿಷಸಾದ ಗಿರಿಪ್ರಸ್ಥೇ ಪುತ್ರಮೇವಾನುಚಿಂತಯನ್||

ಅಮಿತತೇಜಸ್ವೀ ಪುತ್ರನ ಮಹಿಮೆಯನ್ನು ಕಂಡ ವ್ಯಾಸನು ಮಗನ ಕುರಿತೇ ಚಿಂತಿಸುತ್ತಾ ಗಿರಿಪ್ರಸ್ಥದಲ್ಲಿ ಕುಳಿತುಕೊಂಡನು.

12320028a ತತೋ ಮಂದಾಕಿನೀತೀರೇ ಕ್ರೀಡಂತೋಽಪ್ಸರಸಾಂ ಗಣಾಃ|

12320028c ಆಸಾದ್ಯ ತಮೃಷಿಂ ಸರ್ವಾಃ ಸಂಭ್ರಾಂತಾ ಗತಚೇತಸಃ||

ಆಗ ಮಂದಾಕಿನೀ ತೀರದಲ್ಲಿ ಕ್ರೀಡಿಸುತ್ತಿದ್ದ ಅಪ್ಸರಗಣಗಳು ಆ ಋಷಿಯನ್ನು ನೋಡಿ ಎಲ್ಲರೂ ಸಂಭ್ರಾಂತರಾಗಿ ಬುದ್ಧಿಗೆಟ್ಟರು.

12320029a ಜಲೇ ನಿಲಿಲ್ಯಿರೇ ಕಾಶ್ಚಿತ್ಕಾಶ್ಚಿದ್ಗುಲ್ಮಾನ್ ಪ್ರಪೇದಿರೇ|

12320029c ವಸನಾನ್ಯಾದದುಃ ಕಾಶ್ಚಿದ್ದೃಷ್ಟ್ವಾ ತಂ ಮುನಿಸತ್ತಮಮ್||

ಕೆಲವರು ನೀರಿನಲ್ಲಿಯೇ ಅಡಗಿಕೊಂಡರು. ಕೆಲವರು ಪೊದೆಗಳಲ್ಲಿ ಅವಿತುಕೊಂಡರು. ಇನ್ನು ಕೆಲವರು ಆ ಮುನಿಸತ್ತಮನನ್ನು ನೋಡಿ ವಸ್ತ್ರಗಳನ್ನು ಹುಡುಕತೊಡಗಿದರು.

12320030a ತಾಂ ಮುಕ್ತತಾಂ ತು ವಿಜ್ಞಾಯ ಮುನಿಃ ಪುತ್ರಸ್ಯ ವೈ ತದಾ|

12320030c ಸಕ್ತತಾಮಾತ್ಮನಶ್ಚೈವ ಪ್ರೀತೋಽಭೂದ್ವ್ರೀಡಿತಶ್ಚ ಹ||

ತನ್ನ ಪುತ್ರನು ಮುಕ್ತತ್ವವನ್ನು ಪಡೆದುಕೊಂಡನು ಎಂದು ತಿಳಿದ ಆ ಮುನಿಯು ಪ್ರೀತನಾದನು ಮತ್ತು ಅಂತೆಯೇ ತನ್ನಲ್ಲಿರುವ ಆಸಕ್ತಿಯನ್ನು ಮನಗಂಡು ನಾಚಿದನು.

12320031a ತಂ ದೇವಗಂಧರ್ವವೃತೋ ಮಹರ್ಷಿಗಣಪೂಜಿತಃ|

12320031c ಪಿನಾಕಹಸ್ತೋ ಭಗವಾನಭ್ಯಾಗಚ್ಚತ ಶಂಕರಃ||

ಆಗ ದೇವಗಂಧರ್ವರಿಂದ ಆವೃತನಾಗಿ ಮಹರ್ಷಿಗಣ ಪೂಜಿತನಾಗಿ ಪಿನಾಕಹಸ್ತ ಭಗವಾನ್ ಶಂಕರನು ಅಲ್ಲಿಗೆ ಆಗಮಿಸಿದನು.

12320032a ತಮುವಾಚ ಮಹಾದೇವಃ ಸಾಂತ್ವಪೂರ್ವಮಿದಂ ವಚಃ|

12320032c ಪುತ್ರಶೋಕಾಭಿಸಂತಪ್ತಂ ಕೃಷ್ಣದ್ವೈಪಾಯನಂ ತದಾ||

12320033a ಅಗ್ನೇರ್ಭೂಮೇರಪಾಂ ವಾಯೋರಂತರಿಕ್ಷಸ್ಯ ಚೈವ ಹ|

12320033c ವೀರ್ಯೇಣ ಸದೃಶಃ ಪುತ್ರಸ್ತ್ವಯಾ ಮತ್ತಃ ಪುರಾ ವೃತಃ||

ಮಹಾದೇವನು ಅವನಿಗೆ ಸಾಂತ್ವಪೂರ್ವಕವಾದ ಈ ಮಾತನ್ನಾಡಿದನು: “ಹಿಂದೆ ನೀನು ಅಗ್ನಿ-ಭೂಮಿ-ಜಲ-ವಾಯು-ಅಂತರಿಕ್ಷಗಳ ವೀರ್ಯ ಸಮಾನ ಶಕ್ತಿಯಿರುವ ಪುತ್ರನನ್ನು ನನ್ನಲ್ಲಿ ಕೇಳಿಕೊಂಡಿದ್ದೆ.

12320034a ಸ ತಥಾಲಕ್ಷಣೋ ಜಾತಸ್ತಪಸಾ ತವ ಸಂಭೃತಃ|

12320034c ಮಮ ಚೈವ ಪ್ರಭಾವೇನ ಬ್ರಹ್ಮತೇಜೋಮಯಃ ಶುಚಿಃ||

ನಿನ್ನ ತಪಸ್ಸಿನಿಂದಾಗಿ ಮತ್ತು ನನ್ನ ಪ್ರಭಾವದಿಂದಾಗಿ ನಿನಗೆ ಅದೇ ಲಕ್ಷಣಗಳಿದ್ದ ಬ್ರಹ್ಮತೇಜೋಮಯ ಶುಚಿ ಪುತ್ರನು ಹುಟ್ಟಿದನು.

12320035a ಸ ಗತಿಂ ಪರಮಾಂ ಪ್ರಾಪ್ತೋ ದುಷ್ಪ್ರಾಪಾಮಜಿತೇಂದ್ರಿಯೈಃ|

12320035c ದೈವತೈರಪಿ ವಿಪ್ರರ್ಷೇ ತಂ ತ್ವಂ ಕಿಮನುಶೋಚಸಿ||

ವಿಪ್ರರ್ಷೇ! ಅಜಿತೇಂದ್ರಿಯರಿಗೆ ಮತ್ತು ದೇವತೆಗಳಿಗೂ ಪಡೆಯಲು ಅಸಾಧ್ಯವಾದ ಪರಮ ಗತಿಯನ್ನು ಅವನು ಪಡೆದುಕೊಂಡಿದ್ದಾನೆ. ಅವನ ವಿಷಯವಾಗಿ ನೀನು ಏಕೆ ಶೋಕಿಸುತ್ತಿರುವೆ?

12320036a ಯಾವತ್ಸ್ಥಾಸ್ಯಂತಿ ಗಿರಯೋ ಯಾವತ್ ಸ್ಥಾಸ್ಯಂತಿ ಸಾಗರಾಃ|

12320036c ತಾವತ್ತವಾಕ್ಷಯಾ ಕೀರ್ತಿಃ ಸಪುತ್ರಸ್ಯ ಭವಿಷ್ಯತಿ||

ಎಲ್ಲಿಯವರೆಗೆ ಗಿರಿಗಳಿರುತ್ತವೆಯೋ ಮತ್ತು ಎಲ್ಲಿಯವರೆಗೆ ಸಾಗರಗಳು ಇರುತ್ತವೆಯೋ ಅಲ್ಲಿಯವರೆಗೆ ಪುತ್ರನೊಂದಿಗೆ ನಿನ್ನ ಕೀರ್ತಿಯು ಅಕ್ಷಯವಾಗಿರುತ್ತದೆ.

12320037a ಚಾಯಾಂ ಸ್ವಪುತ್ರಸದೃಶೀಂ ಸರ್ವತೋಽನಪಗಾಂ ಸದಾ|

12320037c ದ್ರಕ್ಷ್ಯಸೇ ತ್ವಂ ಚ ಲೋಕೇಽಸ್ಮಿನ್ಮತ್ಪ್ರಸಾದಾನ್ಮಹಾಮುನೇ||

ಮಹಾಮುನೇ! ನನ್ನ ಪ್ರಸಾದದಿಂದ ನೀನು ಈ ಲೋಕದಲ್ಲಿ ನಿನ್ನ ಪುತ್ರನ ಸದೃಶವಾದ ಛಾಯೆಯನ್ನು ಸರ್ವದಾ ಸರ್ವತ್ರ ಕಾಣುವೆ. ಅದು ಎಂದೂ ನಿನ್ನ ದೃಷ್ಟಿಪಥವನ್ನು ಬಿಟ್ಟು ಹೋಗುವುದಿಲ್ಲ.”

12320038a ಸೋಽನುನೀತೋ ಭಗವತಾ ಸ್ವಯಂ ರುದ್ರೇಣ ಭಾರತ|

12320038c ಚಾಯಾಂ ಪಶ್ಯನ್ಸಮಾವೃತ್ತಃ ಸ ಮುನಿಃ ಪರಯಾ ಮುದಾ||

ಭಾರತ! ಸ್ವಯಂ ಭಗವಂತ ರುದ್ರನಿಂದ ಸಂತವಿಸಲ್ಪಟ್ಟ ಮುನಿಯು ಎಲ್ಲೆಲ್ಲಿಯೂ ಮಗನ ಛಾಯೆಯನ್ನೇ ಕಾಣುತ್ತಾ ಪರಮ ಮುದದಿಂದ ಆಶ್ರಮಕ್ಕೆ ಹಿಂದಿರುಗಿದನು.

12320039a ಇತಿ ಜನ್ಮ ಗತಿಶ್ಚೈವ ಶುಕಸ್ಯ ಭರತರ್ಷಭ|

12320039c ವಿಸ್ತರೇಣ ಮಯಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ||

ಭರತರ್ಷಭ! ಇಗೋ ನೀನು ಕೇಳಿದಂತೆ ನಿನಗೆ ಶುಕನ ಜನ್ಮ ಮತ್ತು ಗತಿಗಳ ಕುರಿತು ವಿಸ್ತಾರವಾಗಿ ನಾನು ಹೇಳಿದ್ದೇನೆ.

12320040a ಏತದಾಚಷ್ಟ ಮೇ ರಾಜನ್ ದೇವರ್ಷಿರ್ನಾರದಃ ಪುರಾ|

12320040c ವ್ಯಾಸಶ್ಚೈವ ಮಹಾಯೋಗೀ ಸಂಜಲ್ಪೇಷು ಪದೇ ಪದೇ||

ರಾಜನ್! ಹಿಂದೆ ನಾರದನು ನನಗೆ ಇದನ್ನು ಹೇಳಿದ್ದನು. ಮಹಾಯೋಗಿ ವ್ಯಾಸನೂ ಕೂಡ ಪದೇ ಪದೇ ಇದರ ಕುರಿತು ಹೇಳುತ್ತಿದ್ದನು.

12320041a ಇತಿಹಾಸಮಿಮಂ ಪುಣ್ಯಂ ಮೋಕ್ಷಧರ್ಮಾರ್ಥಸಂಹಿತಮ್|

12320041c ಧಾರಯೇದ್ಯಃ ಶಮಪರಃ ಸ ಗಚ್ಚೇತ್ ಪರಮಾಂ ಗತಿಮ್||

ಮೋಕ್ಷಧರ್ಮಾರ್ಥಸಂಹಿತವಾದ ಈ ಪುಣ್ಯ ಇತಿಹಾಸವನ್ನು ಶಮಪರನಾಗಿ ಧಾರಣೆಮಾಡಿದವನು ಪರಮ ಗತಿಯಲ್ಲಿ ಹೋಗುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತನಸಮಾಪ್ತಿರ್ನಾಮ ವಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತನಸಮಾಪ್ತಿ ಎನ್ನುವ ಮುನ್ನೂರಾಇಪ್ಪತ್ತನೇ ಅಧ್ಯಾಯವು.

Mountain White Background Images | AWB

Comments are closed.