Shanti Parva: Chapter 313

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೩

ರಾಜಾ ಜನಕನು ಶುಕನನ್ನು ಸತ್ಕರಿಸಿದುದು (1-9). ಜನಕನು ಶುಕನ ಪ್ರಶ್ನೆಗೆ ಉತ್ತರಿಸುತ್ತಾ ಬ್ರಹ್ಮಚರ್ಯಾಶ್ರಮದಲ್ಲಿ ಪರಮಾತ್ಮಪ್ರಾಪ್ತಿಯಾದ ಬಳಿಕ ಉಳಿದ ಮೂರು ಆಶ್ರಮಗಳ ಅವಶ್ಯಕತೆಯಿಲ್ಲವೆಂದು ಪ್ರತಿಪಾದಿಸಿ ಮುಕ್ತಪುರುಷನ ಲಕ್ಷಣಗಳನ್ನು ತಿಳಿಸಿದುದು (10-51).

ashtavakra gita 212313001 ಭೀಷ್ಮ ಉವಾಚ| 

12313001a ತತಃ ಸ ರಾಜಾ ಜನಕೋ ಮಂತ್ರಿಭಿಃ ಸಹ ಭಾರತ|

12313001c ಪುರಃ ಪುರೋಹಿತಂ ಕೃತ್ವಾ ಸರ್ವಾಣ್ಯಂತಃಪುರಾಣಿ ಚ||

12313002a ಆಸನಂ ಚ ಪುರಸ್ಕೃತ್ಯ ರತ್ನಾನಿ ವಿವಿಧಾನಿ ಚ|

12313002c ಶಿರಸಾ ಚಾರ್ಘ್ಯಮಾದಾಯ ಗುರುಪುತ್ರಂ ಸಮಭ್ಯಗಾತ್||

12313003a ಸ ತದಾಸನಮಾದಾಯ ಬಹುರತ್ನವಿಭೂಷಿತಮ್|

12313003c ಸ್ಪರ್ಧ್ಯಾಸ್ತರಣಸಂಸ್ತೀರ್ಣಂ ಸರ್ವತೋಭದ್ರಮೃದ್ಧಿಮತ್||

ಭೀಷ್ಮನು ಹೇಳಿದನು: “ಭಾರತ! ಅನಂತರ ರಾಜಾ ಜನಕನು ಮಂತ್ರಿಗಳೊಂದಿಗೆ ಪುರೋಹಿತನನ್ನು ಮುಂದೆ ಮಾಡಿಕೊಂಡು, ಎಲ್ಲ ಅಂತಃಪುರದ ಸ್ತ್ರೀಯರೊಂದಿಗೆ ಆಸನ ಮತ್ತು ವಿವಿಧ ರತ್ನಗಳನ್ನು ತೆಗೆದುಕೊಂಡು ತಲೆಯಮೇಲೆ ಅರ್ಘ್ಯವನ್ನು ಹೊತ್ತುಕೊಂಡು, ಬಹು ರತ್ನವಿಭೂಷಿತ ಬಹುಮೂಲ್ಯ ವಸ್ತ್ರಗಳಿಂದ ಆಚ್ಛಾದಿತವಾಗಿ ಪರಿಪೂರ್ಣವಾಗಿದ್ದ ಸರ್ವತೋಭದ್ರವೆಂಬ ಪೂಜಾರ್ಹ ಆಸನವನ್ನು ತೆಗೆದುಕೊಂಡು ಗುರುಪುತ್ರನ ಬಳಿ ಹೋದನು.

12313004a ಪುರೋಧಸಾ ಸಂಗೃಹೀತಂ ಹಸ್ತೇನಾಲಭ್ಯ ಪಾರ್ಥಿವಃ|

12313004c ಪ್ರದದೌ ಗುರುಪುತ್ರಾಯ ಶುಕಾಯ ಪರಮಾರ್ಚಿತಮ್||

ಕೈಯಲ್ಲಿಯೇ ಹಿಡಿತುಕೊಂಡು ಬಂದಿದ್ದ ಪುರೋಧಸವನ್ನು ಪಾರ್ಥಿವನು ಗುರುಪುತ್ರ ಶುಕನಿಗೆ ನೀಡಿ ಅವನನ್ನು ಅರ್ಚಿಸಿದನು.

12313005a ತತ್ರೋಪವಿಷ್ಟಂ ತಂ ಕಾರ್ಷ್ಣಿಂ ಶಾಸ್ತ್ರತಃ ಪ್ರತ್ಯಪೂಜಯತ್|

12313005c ಪಾದ್ಯಂ ನಿವೇದ್ಯ ಪ್ರಥಮಮರ್ಘ್ಯಂ ಗಾಂ ಚ ನ್ಯವೇದಯತ್|

12313005e ಸ ಚ ತಾಂ ಮಂತ್ರವತ್ಪೂಜಾಂ ಪ್ರತ್ಯಗೃಹ್ಣಾದ್ಯಥಾವಿಧಿ||

ಅಲ್ಲಿ ಕುಳಿತಿದ್ದ ಕಾರ್ಷ್ಣಿ[1]ಯನ್ನು ಶಾಸ್ತ್ರತಃ ಪೂಜಿಸಿದನು. ಪ್ರಥಮವಾಗಿ ಪಾದ್ಯವನ್ನಿತ್ತು ಅರ್ಘ್ಯವನ್ನೂ ಗೋವನ್ನೂ ನಿವೇದಿಸಿದನು. ಅವನು ಆ ಮಂತ್ರವತ್ತಾದ ಪೂಜೆಯನ್ನು ಯಥಾವಿಧಿಯಾಗಿ ಸ್ವೀಕರಿಸಿದನು.

12313006a ಪ್ರತಿಗೃಹ್ಯ ಚ ತಾಂ ಪೂಜಾಂ ಜನಕಾದ್ದ್ವಿಜಸತ್ತಮಃ|

12313006c ಗಾಂ ಚೈವ ಸಮನುಜ್ಞಾಯ ರಾಜಾನಮನುಮಾನ್ಯ ಚ||

ಜನಕನಿಂದ ಆ ಪೂಜೆಯನ್ನು ಸ್ವೀಕರಿಸಿ ದ್ವಿಜಸತ್ತಮನು ಗೋವನ್ನು ಬಿಟ್ಟುಬಿಡಲು ಹೇಳಿ ರಾಜನನ್ನೂ ಗೌರವಿಸಿದನು.

12313007a ಪರ್ಯಪೃಚ್ಚನ್ಮಹಾತೇಜಾ ರಾಜ್ಞಃ ಕುಶಲಮವ್ಯಯಮ್|

12313007c ಅನಾಮಯಂ ಚ ರಾಜೇಂದ್ರ ಶುಕಃ ಸಾನುಚರಸ್ಯ ಹ||

ರಾಜೇಂದ್ರ! ಆ ಮಹಾತೇಜಸ್ವಿ ಶುಕನು ರಾಜನ ಕುಶಲ ಮತ್ತು ಅವನ ಅನುಚರರ ಆರೋಗ್ಯದ ಕುರಿತು ಕೇಳಿದನು.

12313008a ಅನುಜ್ಞಾತಃ ಸ ತೇನಾಥ ನಿಷಸಾದ ಸಹಾನುಗಃ|

12313008c ಉದಾರಸತ್ತ್ವಾಭಿಜನೋ ಭೂಮೌ ರಾಜಾ ಕೃತಾಂಜಲಿಃ||

ಶುಕನಿಂದ ಅನುಜ್ಞಾತನಾದ ಉದಾರಸತ್ತ್ವ ಸತ್ಕುಲ ಪ್ರಸೂತ ರಾಜನು ಅಂಜಲೀ ಬದ್ಧನಾಗಿ ಅನುಗರೊಂದಿಗೆ ಅಲ್ಲಿಯೇ ಕುಳಿತುಕೊಂಡನು.

12313009a ಕುಶಲಂ ಚಾವ್ಯಯಂ ಚೈವ ಪೃಷ್ಟ್ವಾ ವೈಯಾಸಕಿಂ ನೃಪಃ|

12313009c ಕಿಮಾಗಮನಮಿತ್ಯೇವ ಪರ್ಯಪೃಚ್ಚತ ಪಾರ್ಥಿವಃ||

ನೃಪನು ಶುಕನ ಅವ್ಯಯ ಕುಶಲವನ್ನು ಕೇಳಿ ವಿಚಾರಿಸಿದನು. ಪಾರ್ಥಿವನು ಅವನ ಆಗಮನಕ್ಕೆ ಕಾರಣವನ್ನೂ ಕೇಳಿದನು.

12313010 ಶುಕ ಉವಾಚ|

12313010a ಪಿತ್ರಾಹಮುಕ್ತೋ ಭದ್ರಂ ತೇ ಮೋಕ್ಷಧರ್ಮಾರ್ಥಕೋವಿದಃ|

12313010c ವಿದೇಹರಾಜೋ ಯಾಜ್ಯೋ ಮೇ ಜನಕೋ ನಾಮ ವಿಶ್ರುತಃ||

ಶುಕನು ಹೇಳಿದನು: “ನಿನಗೆ ಮಂಗಳವಾಗಲಿ! “ನನ್ನ ಯಾಜ್ಯ ವಿದೇಹರಾಜ ಜನಕನೆಂಬ ಹೆಸರಿನಿಂದ ವಿಶ್ರುತನಾಗಿರುವ ವಿದೇಹರಾಜನು ಮೋಕ್ಷಧರ್ಮಾರ್ಥಕೋವಿದನು” ಎಂದು ನನ್ನ ತಂದೆಯು ಹೇಳಿದ್ದಾನೆ.

12313011a ತತ್ರ ಗಚ್ಚಸ್ವ ವೈ ತೂರ್ಣಂ ಯದಿ ತೇ ಹೃದಿ ಸಂಶಯಃ|

12313011c ಪ್ರವೃತ್ತೌ ವಾ ನಿವೃತ್ತೌ ವಾ ಸ ತೇ ಚೇತ್ಸ್ಯತಿ ಸಂಶಯಮ್||

“ಪ್ರವೃತ್ತಿ ಅಥವಾ ನಿವೃತ್ತಿ ಮಾರ್ಗಗಳ ವಿಷಯದಲ್ಲಿ ನಿನ್ನ ಹೃದಯದಲ್ಲಿ ಸಂಶಯವಿದ್ದರೆ ಬೇಗನೇ ಅವನಲ್ಲಿಗೆ ಹೋಗು. ಅವನು ನಿನ್ನ ಸಂಶಯವನ್ನು ದೂರಮಾಡುತ್ತಾನೆ.”

12313012a ಸೋಽಹಂ ಪಿತುರ್ನಿಯೋಗಾತ್ತ್ವಾಮುಪಪ್ರಷ್ಟುಮಿಹಾಗತಃ|

12313012c ತನ್ಮೇ ಧರ್ಮಭೃತಾಂ ಶ್ರೇಷ್ಠ ಯಥಾವದ್ವಕ್ತುಮರ್ಹಸಿ||

ತಂದೆಯ ನಿಯೋಗದಂತೆ ನಾನು ನಿನ್ನಿಂದ ಕೇಳಲು ಇಲ್ಲಿಗೆ ಬಂದಿದ್ದೇನೆ. ಧರ್ಮಬೃತರಲ್ಲಿ ಶ್ರೇಷ್ಠ! ಯಥಾವತ್ತಾಗಿ ಹೇಳಬೇಕು.

12313013a ಕಿಂ ಕಾರ್ಯಂ ಬ್ರಾಹ್ಮಣೇನೇಹ ಮೋಕ್ಷಾರ್ಥಶ್ಚ ಕಿಮಾತ್ಮಕಃ|

12313013c ಕಥಂ ಚ ಮೋಕ್ಷಃ ಕರ್ತವ್ಯೋ ಜ್ಞಾನೇನ ತಪಸಾಪಿ ವಾ||

ಇಲ್ಲಿ ಬ್ರಾಹ್ಮಣನ ಕರ್ತವ್ಯವೇನು? ಮೋಕ್ಷವು ಎಂಥಹುದು? ಮೋಕ್ಷವನ್ನು ಪಡೆದುಕೊಳ್ಳುವುದು ಹೇಗೆ? ಜ್ಞಾನದಿಂದಲೋ ಅಥವಾ ತಪಸ್ಸಿನಿಂದಲೋ?”

12313014 ಜನಕ ಉವಾಚ|

12313014a ಯತ್ಕಾರ್ಯಂ ಬ್ರಾಹ್ಮಣೇನೇಹ ಜನ್ಮಪ್ರಭೃತಿ ತಚ್ಚೃಣು|

12313014c ಕೃತೋಪನಯನಸ್ತಾತ ಭವೇದ್ವೇದಪರಾಯಣಃ||

12313015a ತಪಸಾ ಗುರುವೃತ್ತ್ಯಾ ಚ ಬ್ರಹ್ಮಚರ್ಯೇಣ ಚಾಭಿಭೋ|

12313015c ದೇವತಾನಾಂ ಪಿತೃಣಾಂ ಚಾಪ್ಯನೃಣಶ್ಚಾನಸೂಯಕಃ||

12313016a ವೇದಾನಧೀತ್ಯ ನಿಯತೋ ದಕ್ಷಿಣಾಮಪವರ್ಜ್ಯ ಚ|

12313016c ಅಭ್ಯನುಜ್ಞಾಮಥ ಪ್ರಾಪ್ಯ ಸಮಾವರ್ತೇತ ವೈ ದ್ವಿಜಃ||

ಜನಕನು ಹೇಳಿದನು: “ಜನ್ಮಪ್ರಭೃತಿ ಬ್ರಾಹ್ಮಣನ ಕರ್ತವ್ಯಗಳೇನು ಎನ್ನುವುದನ್ನು ಕೇಳು. ಅಯಾ! ಉಪನಯನ ಮಾಡಿಸಿಕೊಂಡು ಬ್ರಾಹ್ಮಣನು ವೇದಪರಾಯಣನಾಗಿರಬೇಕು. ವಿಭೋ! ತಪಸ್ಸು, ಗುರುಸೇವೆ, ಬ್ರಹ್ಮಚರ್ಯೆಗಳಿಂದ ದೇವ-ಪಿತೃಗಳ ರುಣವನ್ನು ತೀರಿಸಬೇಕು. ಯಾರಕುರಿತು ಅಸೂಯೆಪಡೆಯದೇ ಸಂಯಮಿಯಾಗಿದ್ದುಕೊಂಡು ವೇದಾಧ್ಯಯನ ಮಾಡಬೇಕು. ನಂತರ ಗುರುದಕ್ಷಿಣೆಯನ್ನಿತ್ತು ಸಮಾವರ್ತನೆಯಾದ ನಂತರ ಗುರುವಿನ ಅನುಮತಿಯನ್ನು ಪಡೆದು ಮನೆಗೆ ಹಿಂದಿರುಗಬೇಕು.

12313017a ಸಮಾವೃತ್ತಸ್ತು ಗಾರ್ಹಸ್ಥ್ಯೇ ಸದಾರೋ ನಿಯತೋ ವಸೇತ್|

12313017c ಅನಸೂಯುರ್ಯಥಾನ್ಯಾಯಮಾಹಿತಾಗ್ನಿಸ್ತಥೈವ ಚ||

ಸಮಾವರ್ತನೆಯ ನಂತರ ಗೃಹಸ್ಥನಾಗಿ ಪತ್ನಿಯೊಡನೆ ನಿಯತನಾಗಿ ವಾಸಿಸಬೇಕು. ಮತ್ತೊಬ್ಬರಲ್ಲಿ ದೊಷವನ್ನೆಣಿಸದೇ ಇತರೊಡನೆ ಯಥಾನ್ಯಾಯವಾಗಿ ವ್ಯವಹರಿಸಬೇಕು. ಸಂಸ್ಕೃತವಾದ ಅಗ್ನಿಯುಳ್ಳವನಾಗಿರಬೇಕು.

12313018a ಉತ್ಪಾದ್ಯ ಪುತ್ರಪೌತ್ರಂ ತು ವನ್ಯಾಶ್ರಮಪದೇ ವಸೇತ್|

12313018c ತಾನೇವಾಗ್ನೀನ್ಯಥಾಶಾಸ್ತ್ರಮರ್ಚಯನ್ನತಿಥಿಪ್ರಿಯಃ||

ಪುತ್ರ-ಪೌತ್ರರನ್ನು ಪಡೆದು ವನದ ಆಶ್ರಮಪದದಲ್ಲಿ ವಾಸಿಸಬೇಕು. ಅದೇ ಅಗ್ನಿಯನ್ನು ಯಥಾಶಾಸ್ತ್ರವಾಗಿ ಅರ್ಚಿಸಬೇಕು. ಅತಿಥಿಪ್ರಿಯನಾಗಿರಬೇಕು.

12313019a ಸ ವನೇಽಗ್ನೀನ್ಯಥಾನ್ಯಾಯಮಾತ್ಮನ್ಯಾರೋಪ್ಯ ಧರ್ಮವಿತ್|

12313019c ನಿರ್ದ್ವಂದ್ವೋ ವೀತರಾಗಾತ್ಮಾ ಬ್ರಹ್ಮಾಶ್ರಮಪದೇ ವಸೇತ್||

ವನದಲ್ಲಿ ಆ ಅಗ್ನಿಯನ್ನು ಯಥಾನ್ಯಾಯವಾಗಿ ಆತ್ಮಸಮಾರೋಪಣೆ ಮಾಡಿಕೊಂಡು ಧರ್ಮವಿದುವು ನಿರ್ದ್ವಂದ್ವನಾಗಿ ಅನಾಸಕ್ತನಾಗಿ ಸಂನ್ಯಾಸಾಶ್ರಮದಲ್ಲಿ ವಾಸಿಸಬೇಕು.”

12313020 ಶುಕ ಉವಾಚ|

12313020a ಉತ್ಪನ್ನೇ ಜ್ಞಾನವಿಜ್ಞಾನೇ ಪ್ರತ್ಯಕ್ಷೇ ಹೃದಿ ಶಾಶ್ವತೇ|

12313020c ಕಿಮವಶ್ಯಂ ನಿವಸ್ತವ್ಯಮಾಶ್ರಮೇಷು ವನೇಷು ಚ||

ಶುಕನು ಹೇಳಿದನು: “ಹೃದಯದಲ್ಲಿ ಶಾಶ್ವತ ಜ್ಞಾನವಿಜ್ಞಾನವು ಪ್ರತ್ಯಕ್ಷವಾಗಿ ಉತ್ಪನ್ನವಾದರೆ ಗ್ರಹಸ್ಥಾಶ್ರಮ, ವಾನಪ್ರಸ್ಥಾಶ್ರಮ ಮೊದಲಾದವುಗಳ ಅವಶ್ಯಕತೆಯಾದರೂ ಏನು?  

12313021a ಏತದ್ಭವಂತಂ ಪೃಚ್ಚಾಮಿ ತದ್ಭವಾನ್ವಕ್ತುಮರ್ಹತಿ|

12313021c ಯಥಾವೇದಾರ್ಥತತ್ತ್ವೇನ ಬ್ರೂಹಿ ಮೇ ತ್ವಂ ಜನಾಧಿಪ||

ಇದನ್ನು ನಿನ್ನಲ್ಲಿ ಕೇಳುತ್ತಿದ್ದೇನೆ. ನೀನು ಹೇಳಬೇಕು. ಜನಾಧಿಪ! ವೇದಾರ್ಥತತ್ತ್ವದೊಂದಿಗೆ ನೀನು ನನಗೆ ಹೇಳು.”

12313022 ಜನಕ ಉವಾಚ|

12313022a ನ ವಿನಾ ಜ್ಞಾನವಿಜ್ಞಾನಂ ಮೋಕ್ಷಸ್ಯಾಧಿಗಮೋ ಭವೇತ್|

12313022c ನ ವಿನಾ ಗುರುಸಂಬಂಧಂ ಜ್ಞಾನಸ್ಯಾಧಿಗಮಃ ಸ್ಮೃತಃ||

ಜನಕನು ಹೇಳಿದನು: “ಜ್ಞಾನವಿಜ್ಞಾನದ ವಿನಹ ಮೋಕ್ಷವನ್ನು ಪಡೆಯುವುದಿಕ್ಕಾಗುವುದಿಲ್ಲ. ಮತ್ತು ಗುರುಸಂಬಂಧದ ವಿನಹ ಜ್ಞಾನವನ್ನು ಪಡೆಯುವುದಿಕ್ಕಾಗುವುದಿಲ್ಲ.

12313023a ಆಚಾರ್ಯಃ ಪ್ಲಾವಿತಾ ತಸ್ಯ ಜ್ಞಾನಂ ಪ್ಲವ ಇಹೋಚ್ಯತೇ|

12313023c ವಿಜ್ಞಾಯ ಕೃತಕೃತ್ಯಸ್ತು ತೀರ್ಣಸ್ತದುಭಯಂ ತ್ಯಜೇತ್||

ಆಚಾರ್ಯನು ನಾವಿಕ ಮತ್ತು ಜ್ಞಾನವೇ ನಾವೆ ಎಂದು ಹೇಳುತ್ತಾರೆ. ಇದನ್ನು ತಿಳಿದು ಸಂಸಾರಸಾಗರವನ್ನು ದಾಟಿದನಂತರ ಇವೆರಡನ್ನೂ ತ್ಯಜಿಸಿಬಿಡಬೇಕು.

12313024a ಅನುಚ್ಚೇದಾಯ ಲೋಕಾನಾಮನುಚ್ಚೇದಾಯ ಕರ್ಮಣಾಮ್|

12313024c ಪೂರ್ವೈರಾಚರಿತೋ ಧರ್ಮಶ್ಚಾತುರಾಶ್ರಮ್ಯಸಂಕಥಃ[2]||

ಲೋಕಗಳು ನಿರಂತರವಾಗಿರಲು ಮತ್ತು ಕರ್ಮಗಳು ನಿರಂತರವಾಗಿರಲು ಮೊದಲಿನಿಂದಲೂ ನಾಲ್ಕು ಆಶ್ರಮಧರ್ಮಗಳನ್ನು ಆಚರಣೆಗೆ ತರಲಾಯಿತು.

12313025a ಅನೇನ ಕ್ರಮಯೋಗೇನ ಬಹುಜಾತಿಷು ಕರ್ಮಣಾ|

12313025c ಕೃತ್ವಾ[3] ಶುಭಾಶುಭಂ ಕರ್ಮ ಮೋಕ್ಷೋ ನಾಮೇಹ ಲಭ್ಯತೇ||

ಈ ಕ್ರಮಯೋಗ[4]ದ ಪ್ರಕಾರ ಶುಭಾಶುಭಕರ್ಮಗಳನ್ನು ಮಾಡಿದ ಅನೇಕ ಜನ್ಮಗಳ ನಂತರ ಇಲ್ಲಿಯೇ ಮೋಕ್ಷವು ದೊರೆಯುತ್ತದೆ.

12313026a ಭವಿತೈಃ ಕಾರಣೈಶ್ಚಾಯಂ ಬಹುಸಂಸಾರಯೋನಿಷು|

12313026c ಆಸಾದಯತಿ ಶುದ್ಧಾತ್ಮಾ ಮೋಕ್ಷಂ ವೈ ಪ್ರಥಮಾಶ್ರಮೇ||

ಅನೇಕ ಸಂಸಾರಯೋನಿಗಳಲ್ಲಿ ಹುಟ್ಟಿ ಕರ್ಮಗಳೀಂದ ಶುದ್ಧಾತ್ಮನಾದವನು ಮೊದಲನೆಯ ಬ್ರಹ್ಮಚರ್ಯಾಶ್ರಮದಲ್ಲಿಯೇ ಮೋಕ್ಷವನ್ನು ಹೊಂದುತ್ತಾನೆ.

12313027a ತಮಾಸಾದ್ಯ ತು ಮುಕ್ತಸ್ಯ ದೃಷ್ಟಾರ್ಥಸ್ಯ ವಿಪಶ್ಚಿತಃ|

12313027c ತ್ರಿಷ್ವಾಶ್ರಮೇಷು ಕೋ ನ್ವರ್ಥೋ ಭವೇತ್ಪರಮಭೀಪ್ಸತಃ||

ಬ್ರಹ್ಮಚರ್ಯಾಶ್ರಮದಲ್ಲಿಯೇ ಉದ್ದೇಶವನ್ನು ಸಾಧಿಸಿಕೊಂಡ ಮುಕ್ತನಿಗೆ ಉಳಿದ ಮೂರು ಆಶ್ರಮಗಳ ಅವಶ್ಯಕತೆಯಾದರೂ ಏನು?

12313028a ರಾಜಸಾಂಸ್ತಾಮಸಾಂಶ್ಚೈವ ನಿತ್ಯಂ ದೋಷಾನ್ವಿವರ್ಜಯೇತ್|

12313028c ಸಾತ್ತ್ವಿಕಂ ಮಾರ್ಗಮಾಸ್ಥಾಯ ಪಶ್ಯೇದಾತ್ಮಾನಮಾತ್ಮನಾ||

ನಿತ್ಯವೂ ರಾಜಸ ತಾಮಸ ದೋಷಗಳನ್ನು ವರ್ಜಿಸಬೇಖು. ಸಾತ್ತ್ವಿಕ ಮಾರ್ಗವನ್ನು ಹಿಡಿದು ಆತ್ಮನಲ್ಲಿ ಆತ್ಮನನ್ನು ಕಾಣಬೇಕು.

12313029a ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ|

12313029c ಸಂಪಶ್ಯನ್ನೋಪಲಿಪ್ಯೇತ ಜಲೇ ವಾರಿಚರೋ ಯಥಾ||

ಇರುವ ಎಲ್ಲವುಗಳಲ್ಲಿ ತನ್ನನ್ನೂ ಮತ್ತು ತನ್ನಲ್ಲಿ ಎಲ್ಲವನ್ನೂ ಕಾಣುವವನು ಜಲಚರ ಪ್ರಾಣಿಯು ನೀರಿಗೆ ಅಂಟಿಕೊಂಡಿರದಂತೆ ಸಂಸಾರದಲ್ಲಿದ್ದರೂ ಅದಕ್ಕೆ ಅಂಟಿಕೊಂಡಿರುವುದಿಲ್ಲ.

12313030a ಪಕ್ಷೀವ ಪ್ಲವನಾದೂರ್ಧ್ವಮಮುತ್ರಾನಂತ್ಯಮಶ್ನುತೇ|

12313030c ವಿಹಾಯ ದೇಹಂ ನಿರ್ಮುಕ್ತೋ ನಿರ್ದ್ವಂದ್ವಃ ಪ್ರಶಮಂ ಗತಃ||

ಗೂಡನ್ನು ಬಿಟ್ಟು ಮೇಲಕ್ಕೆ ಹಾರುವ ಪಕ್ಷಿಯಂತೆ ದ್ವಂದ್ವಗಳಿಲ್ಲದ ಮತ್ತು ಶಾಂತನಾದ ಮುಕ್ತನು ದೇಹವನ್ನು ತ್ಯಜಿಸಿ ಊರ್ಧ್ವಮುಖನಾಗಿ ಹೋಗುತ್ತಾನೆ.

12313031a ಅತ್ರ ಗಾಥಾಃ ಪುರಾ ಗೀತಾಃ ಶೃಣು ರಾಜ್ಞಾ ಯಯಾತಿನಾ|

12313031c ಧಾರ್ಯಂತೇ ಯಾ ದ್ವಿಜೈಸ್ತಾತ ಮೋಕ್ಷಶಾಸ್ತ್ರವಿಶಾರದೈಃ||

ಅಯ್ಯಾ! ಇದರ ಕುರಿತು ಮೋಕ್ಷಶಾಸ್ತ್ರವಿಶಾರದ ದ್ವಿಜರು ತಿಳಿದುಕೊಂಡಿರುವ ರಾಜ ಯಯಾತಿಯ ಈ ಪುರಾತನ ಗೀತೆಯನ್ನು ಕೇಳು.

12313032a ಜ್ಯೋತಿರಾತ್ಮನಿ ನಾನ್ಯತ್ರ ರತಂ ತತ್ರೈವ ಚೈವ ತತ್[5]|

12313032c ಸ್ವಯಂ ಚ ಶಕ್ಯಂ ತದ್ದ್ರಷ್ಟುಂ ಸುಸಮಾಹಿತಚೇತಸಾ||

ಜ್ಯೋತಿಯು ತನ್ನ ಶರೀರದಲ್ಲಿಯೇ ಇದೆ. ದೇಹದ ಹೊರಗೆ ಬೇರೆ ಎಲ್ಲಿಯೂ ಇಲ್ಲ. ಸಮಾಹಿತ ಚೇತನನು ಸ್ವಯಂ ತಾನೇ ಆ ಜ್ಯೋತಿಯನ್ನು ನೋಡಲು ಶಕ್ಯನು.

12313033a ನ ಬಿಭೇತಿ ಪರೋ ಯಸ್ಮಾನ್ನ ಬಿಭೇತಿ ಪರಾಚ್ಚ ಯಃ|

12313033c ಯಶ್ಚ ನೇಚ್ಚತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ||

ಯಾರಕುರಿತು ಇತರರು ಭಯಪಡುವುದಿಲ್ಲವೋ, ಯಾರು ಇತರರಿಂದ ಭಯಗೊಳ್ಳುವುದಿಲ್ಲವೋ ಮತ್ತು ಯಾರು ಎನನ್ನೂ ಇಚ್ಛಿಸುವುದಿಲ್ಲವೋ ಮತ್ತು ಏನನ್ನೂ ದ್ವೇಷಿಸುವುದಿಲ್ಲವೋ ಅವನು ಆಗ ಬ್ರಹ್ಮಭಾವವನ್ನು ಹೊಂದುತ್ತಾನೆ.

12313034a ಯದಾ ಭಾವಂ ನ ಕುರುತೇ ಸರ್ವಭೂತೇಷು ಪಾಪಕಮ್|

12313034c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ||

ಸರ್ವಭೂತಗಳ ವಿಷಯದಲ್ಲಿ ಕರ್ಮ, ಮನಸ್ಸು ಮತ್ತು ಮಾತುಗಳಿಮ್ದ ಪಾಪಭಾವವನ್ನು ಹೊಂದದೇ ಇರುವಾಗ ಮನುಷ್ಯನು ಬ್ರಹ್ಮಭಾವವನ್ನು ಹೊಂದುತ್ತಾನೆ.

12313035a ಸಂಯೋಜ್ಯ ತಪಸಾ[6]ತ್ಮಾನಮೀರ್ಷ್ಯಾಮುತ್ಸೃಜ್ಯ ಮೋಹಿನೀಮ್|

12313035c ತ್ಯಕ್ತ್ವಾ ಕಾಮಂ ಚ ಲೋಭಂ ಚ ತತೋ ಬ್ರಹ್ಮತ್ವಮಶ್ನುತೇ||

ಈರ್ಷೆ, ಮೋಹ, ಕಾಮ ಲೋಭಗಳನ್ನು ತ್ಯಜಿಸಿ ತಪಸ್ಸಿನಿಂದ ಆತ್ಮನನ್ನು ಸಂಯೋಜಿಸಿದಾಗ ಬ್ರಹ್ಮತ್ವವನ್ನು ಪಡೆದುಕೊಳ್ಳುತ್ತಾನೆ.

12313036a ಯದಾ ಶ್ರವ್ಯೇ ಚ ದೃಶ್ಯೇ ಚ ಸರ್ವಭೂತೇಷು ಚಾಪ್ಯಯಮ್|

12313036c ಸಮೋ ಭವತಿ ನಿರ್ದ್ವಂದ್ವೋ ಬ್ರಹ್ಮ ಸಂಪದ್ಯತೇ ತದಾ||

ಕೇಳುವುದರಲ್ಲಿ, ನೋಡುವುದರಲ್ಲಿ ಮತ್ತು ಸರ್ವಭೂತಗಳಲ್ಲಿ ಸಮಭಾವದಿಂದ ನಿರ್ದ್ವಂದ್ವನಾಗಿ ಇದ್ದಾಗ ಬ್ರಹ್ಮಭಾವವನ್ನು ಹೊಂದುತ್ತಾನೆ.

12313037a ಯದಾ ಸ್ತುತಿಂ ಚ ನಿಂದಾಂ ಚ ಸಮತ್ವೇನೈವ ಪಶ್ಯತಿ|

12313037c ಕಾಂಚನಂ ಚಾಯಸಂ ಚೈವ ಸುಖದುಃಖೇ ತಥೈವ ಚ||

12313038a ಶೀತಮುಷ್ಣಂ ತಥೈವಾರ್ಥಮನರ್ಥಂ ಪ್ರಿಯಮಪ್ರಿಯಮ್|

12313038c ಜೀವಿತಂ ಮರಣಂ ಚೈವ ಬ್ರಹ್ಮ ಸಂಪದ್ಯತೇ ತದಾ||

ಸ್ತುತಿ ಮತ್ತು ನಿಂದನೆಗಳಲ್ಲಿ, ಹಾಗೆಯೇ, ಚಿನ್ನ-ಕಬ್ಬಿಣಗಳಲ್ಲಿ, ಸುಖ-ದುಃಖಗಳಲ್ಲಿ, ಹಾಗೆಯೇ ಚಳಿ-ಸೆಖೆಗಳಲ್ಲಿ, ಅರ್ಥಾನರ್ಥಗಳಲ್ಲಿ, ಪ್ರಿಯ-ಅಪ್ರಿಯಗಳಲ್ಲಿ ಮತ್ತು ಜನನ-ಮರಣಗಳಲ್ಲಿ ಸಮತ್ವವನ್ನೇ ಕಂಡಾಗ ಬ್ರಹ್ಮಭಾವವನ್ನು ಹೊಂದುತ್ತಾನೆ.

12313039a ಪ್ರಸಾರ್ಯೇಹ ಯಥಾಂಗಾನಿ ಕೂರ್ಮಃ ಸಂಹರತೇ ಪುನಃ|

12313039c ತಥೇಂದ್ರಿಯಾಣಿ ಮನಸಾ ಸಂಯಂತವ್ಯಾನಿ ಭಿಕ್ಷುಣಾ||

ಆಮೆಯು ತನ್ನ ಅಂಗಗಳನ್ನು ಹೊರಚಾಚಿ ಪುನಃ ಒಳಕ್ಕೆ ಸೆಳೆದುಕೊಳ್ಳುವಂತೆ ಸಂನ್ಯಾಸಿಯು ಇಂದ್ರಿಯಗಳನ್ನು ಮನಸ್ಸಿನ ಮುಲಕ ಒಳಗೆ ಸೆಳೆದುಕೊಳ್ಳಬೇಕು.

12313040a ತಮಃಪರಿಗತಂ ವೇಶ್ಮ ಯಥಾ ದೀಪೇನ ದೃಶ್ಯತೇ|

12313040c ತಥಾ ಬುದ್ಧಿಪ್ರದೀಪೇನ ಶಕ್ಯ ಆತ್ಮಾ ನಿರೀಕ್ಷಿತುಮ್||

ಕತ್ತಲೆಯಿದ್ದ ಮನೆಯಲ್ಲಿ ದೀಪವನ್ನು ಬೆಳಗಿಸುವುದರಿಂದ ಹೇಗೆ ಕಾಣುತ್ತದೆಯೋ ಹಾಗೆಯೇ ಬುದ್ಧಿಯೆಂಬ ದೀಪದಿಂದ ಆತ್ಮನನ್ನು ನೋಡಲು ಸಾಧ್ಯವಾಗುತ್ತದೆ.

12313041a ಏತತ್ಸರ್ವಂ ಪ್ರಪಶ್ಯಾಮಿ ತ್ವಯಿ ಬುದ್ಧಿಮತಾಂ ವರ|

12313041c ಯಚ್ಚಾನ್ಯದಪಿ ವೇತ್ತವ್ಯಂ ತತ್ತ್ವತೋ ವೇದ ತದ್ಭವಾನ್||

ಬುದ್ಧಿವಂತರಲ್ಲಿ ಶ್ರೇಷ್ಠ! ಈ ಎಲ್ಲ ಗುಣಗಳನ್ನೂ ನಿನ್ನಲ್ಲಿ ಕಾಣುತ್ತಿದ್ದೇನೆ. ತಿಳಿದುಕೊಳ್ಳಲು ಬೇರೆ ಯಾವುದೇ ಇದ್ದರೂ ಅದನ್ನೂ ಕೂಡ ನೀನು ತಿಳಿದುಕೊಂಡಿರುವೆ.

12313042a ಬ್ರಹ್ಮರ್ಷೇ ವಿದಿತಶ್ಚಾಸಿ ವಿಷಯಾಂತಮುಪಾಗತಃ|

12313042c ಗುರೋಸ್ತವ ಪ್ರಸಾದೇನ ತವ ಚೈವೋಪಶಿಕ್ಷಯಾ||

ಬ್ರಹ್ಮರ್ಷೇ! ನಿನ್ನ ಗುರುವಿನ ಕೃಪೆಯಿಂದ ಮತ್ತು ಅವನು ನೀಡಿದ ಶಿಕ್ಷಣದಿಂದ ನೀನು ವಿಷಯಸುಖಗಳಿಂದ ದೂರನಾಗಿರುವೆಯಿಂದು ತಿಳಿಯುತ್ತೇನೆ.

12313043a ತಸ್ಯೈವ ಚ ಪ್ರಸಾದೇನ ಪ್ರಾದುರ್ಭೂತಂ ಮಹಾಮುನೇ|

12313043c ಜ್ಞಾನಂ ದಿವ್ಯಂ ಮಮಾಪೀದಂ ತೇನಾಸಿ ವಿದಿತೋ ಮಮ||

ಮಹಾಮುನೇ! ಅವನದೇ ಕೃಪೆಯಿಂದ ನನ್ನಲ್ಲಿಯೂ ಕೂಡ ದಿವ್ಯ ಜ್ಞಾನವು ಹುಟ್ಟಿಕೊಂಡಿದೆ. ಅದರಿಂದಲೇ ನಾನು ನಿನ್ನ ನಿಜಸ್ವರೂಪವನ್ನು ತಿಳಿದುಕೊಂಡಿದ್ದೇನೆ.

12313044a ಅಧಿಕಂ ತವ ವಿಜ್ಞಾನಮಧಿಕಾ ಚ ಗತಿಸ್ತವ|

12313044c ಅಧಿಕಂ ಚ ತವೈಶ್ವರ್ಯಂ ತಚ್ಚ ತ್ವಂ ನಾವಬುಧ್ಯಸೇ||

ನಿನ್ನ ವಿಜ್ಞಾನವೂ ಅಧಿಕವಾದುದು. ನಿನ್ನ ಗತಿಯೂ ಅಧಿಕವಾದುದು. ನಿನ್ನ ಯೋಗೈಶ್ವರ್ಯವೂ ಅಧಿಕವಾದುದು. ಆದರೆ ಇದರ ಅರಿವೆಯು ನಿನಗಿಲ್ಲವಾಗಿದೆ.

12313045a ಬಾಲ್ಯಾದ್ವಾ ಸಂಶಯಾದ್ವಾಪಿ ಭಯಾದ್ವಾಪ್ಯವಿಮೋಕ್ಷಜಾತ್|

12313045c ಉತ್ಪನ್ನೇ ಚಾಪಿ ವಿಜ್ಞಾನೇ ನಾಧಿಗಚ್ಚತಿ ತಾಂ ಗತಿಮ್||

ವಿಜ್ಞಾನವು ಉತ್ಪನ್ನವಾಗಿದ್ದರೂ ಬಾಲತನದಿಂದ ಅಥವಾ ಸಂಶಯದಿಂದ ಅಥವಾ ಮೋಕ್ಷವು ಲಭಿಸುವುದಿಲ್ಲವೆಂಬ ಭಯದಿಂದ ಅವನು ಮೋಕ್ಷದ ಗತಿಯನ್ನು ಹೊಂದುವುದಿಲ್ಲ.

12313046a ವ್ಯವಸಾಯೇನ ಶುದ್ಧೇನ ಮದ್ವಿಧೈಶ್ಚಿನ್ನಸಂಶಯಃ|

12313046c ವಿಮುಚ್ಯ ಹೃದಯಗ್ರಂಥೀನಾಸಾದಯತಿ ತಾಂ ಗತಿಮ್||

ನನ್ನಂತೆ ಸಂಶಯಗಳನ್ನು ಕಳೆದುಕೊಂಡವನು ಶುದ್ಧ ಪ್ರಯತ್ನದಿಂದ ಹೃದಯದ ಗಂಟುಗಳನ್ನು ಕಳಚಿಕೊಂಡು ಮೋಕ್ಷಗತಿಯನ್ನು ಹೊಂದುತ್ತಾನೆ.

12313047a ಭವಾಂಶ್ಚೋತ್ಪನ್ನವಿಜ್ಞಾನಃ ಸ್ಥಿರಬುದ್ಧಿರಲೋಲುಪಃ|

12313047c ವ್ಯವಸಾಯಾದೃತೇ ಬ್ರಹ್ಮನ್ನಾಸಾದಯತಿ ತತ್ಪರಮ್||

ಬ್ರಹ್ಮನ್! ನಿನ್ನಲ್ಲಿ ವಿಜ್ಞಾನದ ಉದಯವಾಗಿದೆ. ನಿನ್ನ ಬುದ್ಧಿಯು ಸ್ಥಿರವಾಅಗಿದೆ. ನಿನಗೆ ವಿಷಯ ಲೋಲುಪತೆಯು ಸ್ವಲ್ಪವೂ ಇ. ಆದರೆ ಪ್ರಯತ್ನಪಡದೇ ಆ ಪರಮ ಬ್ರಹ್ಮಭಾವವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

12313048a ನಾಸ್ತಿ ತೇ ಸುಖದುಃಖೇಷು ವಿಶೇಷೋ ನಾಸ್ತಿ ಲೋಲುಪಾ|

12313048c ನೌತ್ಸುಕ್ಯಂ ನೃತ್ತಗೀತೇಷು ನ ರಾಗ ಉಪಜಾಯತೇ||

ನಿನಗೆ ಸುಖ-ದುಃಖಗಳಲ್ಲಿ ವ್ಯತ್ಯಾಸವೇ ಇಲ್ಲ. ವಿಷಯ ಲೋಲುಪತೆ ಇಲ್ಲ. ನೃತ್ಯ-ಗೀತಗಳಲ್ಲಿ ಉತ್ಸಾಹವಿಲ್ಲ. ನಿನ್ನಲ್ಲಿ ರಾಗವೆಂಬುದೇ ಹುಟ್ಟುವುದಿಲ್ಲ.

12313049a ನ ಬಂಧುಷು ನಿಬಂಧಸ್ತೇ ನ ಭಯೇಷ್ವಸ್ತಿ ತೇ ಭಯಮ್|

12313049c ಪಶ್ಯಾಮಿ ತ್ವಾಂ ಮಹಾಭಾಗ ತುಲ್ಯಲೋಷ್ಟಾಶ್ಮಕಾಂಚನಮ್||

ಮಹಾಭಾಗ! ನಿನಗೆ ಬಂಧುಗಳ ನಿಬಂಧನವಿಲ್ಲ. ಭಯದ ಸನ್ನಿವೇಶಗಳಲ್ಲಿಯೂ ನಿನಗೆ ಭಯವಾಗುವುದಿಲ್ಲ. ನಿನಗೆ ಕಲ್ಲು, ಮಣ್ಣು ಮತ್ತು ಸುವರ್ಣಗಳು ಸಮ ಎನ್ನುವುದನ್ನು ನಾನು ಕಾಣುತ್ತಿದ್ದೇನೆ.

12313050a ಅಹಂ ಚ ತ್ವಾನುಪಶ್ಯಾಮಿ ಯೇ ಚಾಪ್ಯನ್ಯೇ ಮನೀಷಿಣಃ|

12313050c ಆಸ್ಥಿತಂ ಪರಮಂ ಮಾರ್ಗಮಕ್ಷಯಂ ತಮನಾಮಯಮ್||

ನೀನು ಆ ಅನಾಮಯ ಅಕ್ಷಯ ಪರಮ ಮಾರ್ಗದಲ್ಲಿ ತೊಡಗಿರುವೆ ಎನ್ನುವುದನ್ನು ನಾನೂ ಮತ್ತು ಅನ್ಯ ಮನೀಷಿಣರೂ ಕಾಣುತ್ತಿದ್ದೇವೆ.

12313051a ಯತ್ಫಲಂ ಬ್ರಾಹ್ಮಣಸ್ಯೇಹ ಮೋಕ್ಷಾರ್ಥಶ್ಚ ಯದಾತ್ಮಕಃ|

12313051c ತಸ್ಮಿನ್ವೈ ವರ್ತಸೇ ವಿಪ್ರ ಕಿಮನ್ಯತ್ಪರಿಪೃಚ್ಚಸಿ||

ವಿಪ್ರ! ಬ್ರಾಹ್ಮಣನಿಗೆ ಇಲ್ಲಿ ಫಲವಾಗಿರುವ ಮತ್ತು ಉದ್ದೇಶವಾಗಿರುವ ಆ ಮೋಕ್ಷವನ್ನು ನೀನು ಹೊಂದಿರುವೆ. ಅದರಂತಲೇ ನೀನು ವರ್ತಿಸುತ್ತಿರುವೆ. ಬೇರೆ ಯಾವ ವಿಷಯದ ಕುರಿತು ನನ್ನಲ್ಲಿ ಪ್ರಶ್ನಿಸಬೇಕೆಂದಿರುವೆ?””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತ್ತೌ ತ್ರಯೋದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹದಿಮೂರನೇ ಅಧ್ಯಾಯವು.

Bouquet Of Flowers Top View Isolated On White. Stock Photo ...

[1] ಕೃಷ್ಣ(ದ್ವೈಪಾಯನ)ನ ಮಗ ಕಾರ್ಷ್ಣಿ.

[2] ಸಂಕಟಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಹಿತ್ವಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಆಶ್ರಮಧರ್ಮಗಳನ್ನು ಅನುಕ್ರಮವಾಗಿ ಅಂದರೆ ಒಂದಾದ ಮೇಲೊಂದರಂತೆ ಅನುಸರಿಸುವುದು ಕ್ರಮ ಯೋಗ.

[5] ಸರ್ವಜಂತುಷು ತತ್ಸಮಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಮನಸಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.