ಹರಿವಂಶ: ಹರಿವಂಶ ಪರ್ವ

೧೭

ಪಿತೃಕಲ್ಪಃ - ೧

19017001  ಭೀಷ್ಮ ಉವಾಚ|

19017001a ತತೋಽಹಂ ತಸ್ಯ ವಚನಾನ್ಮಾರ್ಕಂಡೇಯಂ ಸಮಾಹಿತಃ |

19017001c ಪ್ರಶ್ನಂ ತಮೇವಾನ್ವಪೃಚ್ಛಂ ಯನ್ಮೇ ಪೃಷ್ಠಃ ಪುರಾ ಪಿತಾ ||

ಭೀಷ್ಮನು ಹೇಳಿದನು: “ತಂದೆಯ ಮಾತಿನಂತೆ ನಾನು ಸಮಾಹಿತನಾಗಿ ಹಿಂದೆ ನನ್ನ ತಂದೆಗೆ ಕೇಳಿದ ಪ್ರಶ್ನೆಯನ್ನೇ ಮಾರ್ಕಂಡೇಯನಲ್ಲಿ ಕೇಳಿದೆ.

19017002a ಸ ಮಾಮುವಚ ಧರ್ಮಾತ್ಮಾ ಮಾರ್ಕಂಡೇಯೋ ಮಹಾತಪಾಃ |

19017002c ಭೀಷ್ಮ ವಕ್ಷ್ಯಾಮಿ ಕಾರ್ತ್ಸ್ಯೇನ ಶೃಣುಷ್ವ ಪ್ರಯತೋಽನಘ ||

ಆಗ ಮಹಾತಪಸ್ವಿ ಧರ್ಮಾತ್ಮಾ ಮಾರ್ಕಂಡೇಯನು ನನಗೆ ಹೇಳಿದನು: “ಅನಘ! ಭೀಷ್ಮ! ನಿನಗೆ ಸಂಪೂರ್ಣವಾಗಿ ಹೇಳುತ್ತೇನೆ. ಪ್ರಯತನಾಗಿ ಕೇಳು.

19017003a ಅಹಂ ಪಿತೃಪ್ರಸಾದಾದ್ವೈ ದೀರ್ಘಾಯುಷ್ಟ್ವಮವಾಪ್ತವಾನ್ |

19017003c ಪಿತೃಭಕ್ತ್ಯೈವ ಲಬ್ಧಂ ಚ ಪ್ರಾಗ್ಲೋಕೇ ಪರಮಂ ಯಶಃ ||

ನಾನು ಪಿತೃಪ್ರಸಾದದಿಂದಲೇ ದೀರ್ಘಾಯುಸ್ಸನ್ನು ಪಡೆದಿದ್ದೇನೆ. ಪಿತೃಭಕ್ತಿಯಿಂದಲೇ ನನಗೆ ಲೋಕಗಳಲ್ಲಿ ಪರಮ ಯಶಸ್ಸು ದೊರಕಿದೆ.

19017004a ಸೋಽಹಂ ಯುಗಸ್ಯ ಪರ್ಯಂತೇ ಬಹುವರ್ಷಸಹಸ್ರಿಕೇ |

19017004c ಅಧಿರುಹ್ಯ ಗಿರಿಂ ಮೇರುಂ ತಪೋಽತಪ್ಯಂ ಸುದುಶ್ಚರಮ್ ||

ಒಮ್ಮೆ ನಾನು ಮೇರುಗಿರಿಯನ್ನು ಏರಿ ಅಲ್ಲಿ ಯುಗಪರ್ಯಂತದ ಅನೇಕ ಸಹಸ್ರವರ್ಷಗಳ ಸುದುಶ್ಚರ ತಪಸ್ಸನ್ನು ತಪಿಸುತ್ತಿದ್ದೆ.

19017005a ತತಃ ಕದಾಚಿತ್ಪಶ್ಯಾಮಿ ದಿವಂ ಪ್ರಜ್ವಾಲ್ಯ ತೇಜಸಾ |

19017005c ವಿಮಾನಂ ಮಹದಾಯಾಂತಮುತ್ತರೇಣ ಗಿರೇಸ್ತದಾ ||

ಆಗ ಒಮ್ಮೆ ಗಿರಿಯ ಉತ್ತರದಿಕ್ಕಿನಿಂದ ತನ್ನದೇ ತೇಜಸ್ಸಿನಿಂದ ದಿವವನ್ನು ಪ್ರಜ್ವಲಿಸುತ್ತಾ ಬರುತ್ತಿದ್ದ ಮಹಾ ವಿಮಾನವನ್ನು ನೋಡಿದೆನು.

19017006a ತಸ್ಮಿನ್ವಿಮಾನೇ ಪರ್ಯಂಕೇ ಜ್ವಲಿತಾದಿತ್ಯಸನ್ನಿಭಮ್ |

19017006c ಅಪಶ್ಯಂ ತತ್ರ ಚೈವಾಹಂ ಶಯಾನಂ ದೀಪ್ತತೇಜಸಮ್ ||

19017007a ಅಂಗುಷ್ಠಮಾತ್ರಂ ಪುರುಷಮಗ್ನಾವಗ್ನಿಮಿವಾಹಿತಮ್ |

ಆ ವಿಮಾನದ ಪರ್ಯಂಕದಲ್ಲಿ ಪ್ರಜ್ವಲಿತ ಆದಿತ್ಯನಂತಿದ್ದ, ಅಗ್ನಿಯಲ್ಲಿ ಆವಾಹಿಸಿದ ಅಗ್ನಿಯಂತೆ ದೀಪ್ತತೇಜಸನಾಗಿದ್ದ ಅಂಗುಷ್ಠಮಾತ್ರದ ಪುರುಷನು ಮಲಗಿರುವುದನ್ನು ನೋಡಿದೆನು.

19017007c ಸೋಽಹಂ ತಸ್ಮೈ ನಮಸ್ಕೃತ್ಯ ಪ್ರಣಮ್ಯ ಶಿರಸಾ ವಿಭುಮ್ ||

19017008a ಸನ್ನಿವಿಷ್ಟಂ ವಿಮಾನಸ್ಥಂ ಪಾದ್ಯಾರ್ಘಾಭ್ಯಾಮಪೂಜಯಮ್ |

19017008c ಅಪೃಚ್ಛಂ ಚೈವ ದುರ್ಧರ್ಷಂ ವಿದ್ಯಾಮ ತ್ವಾಂ ಕಥಂ ವಿಭೋ ||

ಆ ವಿಭುವಿಗೆ ನಾನು ಶಿರಬಾಗಿ ನಮಸ್ಕರಿಸಿದೆನು. ವಿಮಾನಸ್ಥನಾದ ಆ ದುರ್ಧರ್ಷನನ್ನು ಪಾದ್ಯ-ಅರ್ಘ್ಯಗಳಿಂದ ಪೂಜಿಸಿ ಕೇಳಿದೆನು: “ವಿಭೋ! ನೀನು ಯಾರೆಂದು ನಾನು ಹೇಗೆ ತಿಳಿದುಕೊಳ್ಳಲಿ?

19017009a ತಪೋವೀರ್ಯಾತ್ಸಮುತ್ಪನ್ನಂ ನಾರಾಯಣಗುಣಾತ್ಮಕಮ್ |

19017009c ದೈವತಂ ಹ್ಯಸಿ ದೇವಾನಮಿತಿ ಮೇ ವರ್ತತೇ ಮತಿಃ ||

ನಾರಾಯಣನ ಸತ್ತ್ವಗುಣಾತ್ಮಿಕ ಈ ತಪೋವೀರ್ಯದಿಂದ ಸಮುತ್ಪನ್ನನಾಗಿರುವ ನೀನು ದೇವತೆಗಳಿಗೂ ದೇವತೆಯಾಗಿರುವೆಯೆಂದು ನನಗನ್ನಿಸುತ್ತಿದೆ.”

19017010a ಸ ಮಾಮುವಾಚ ಧರ್ಮಾತ್ಮಾ ಸ್ಮಯಮಾನ ಇವಾನಘ |

19017010c ನ ತೇ ತಪಃ ಸುಚರಿತಂ ಯೇನ ಮಾಂ ನಾವಬುದ್ಧ್ಯಸೇ ||

ಅನಘ! ಆ ಧರ್ಮಾತ್ಮನು ನನಗೆ ನಸುನಗುತ್ತಾ “ನೀನು ಸರಿಯಾಗಿ ತಪಸ್ಸನ್ನಾಚರಿಸುತ್ತಿಲ್ಲ. ಆದುದರಿಂದ ನಿನಗೆ ನಾನು ಯಾರೆಂದು ತಿಳಿಯಲಿಲ್ಲ!” ಎಂದನು.

19017011a ಕ್ಷಣೇನೈವ ಪ್ರಮಾಣಂ ಸಃ ಬಿಭ್ರದನ್ಯದನುತ್ತಮಮ್ |

19017011c ರೂಪೇಣ ನ ಮಯಾ ಕಶ್ಚಿದ್ದೃಷ್ಟಪೂರ್ವಃ ಪುಮಾನ್ಕ್ವಚಿತ್ ||

ಕ್ಷಣದಲ್ಲಿಯೇ ಅವನು ಇನ್ನೊಂದು ಅನುತ್ತಮ ರೂಪದಲ್ಲಿ ಕಾಣಿಸಿಕೊಂಡನು. ಅಂತಹ ರೂಪವಂತ ಪುರುಷನನ್ನು ಅದಕ್ಕೆ ಹಿಂದೆ ಎಂದೂ ನಾನು ಕಂಡಿರಲಿಲ್ಲ.

19017012  ಸನತ್ಕುಮಾರ ಉವಾಚ

19017012a ವಿದ್ಧಿ ಮಾಂ ಬ್ರಹ್ಮಣಃ ಪುತ್ರಂ ಮಾನಸಂ ಪೂರ್ವಜಂ ವಿಭೋಃ |

19017012c ತಪೋವೀರ್ಯಸಮುತ್ಪನ್ನಂ ನಾರಾಯಣಗುಣಾತ್ಮಕಮ್ ||

ಸನತ್ಕುಮಾರನು ಹೇಳಿದನು: “ನೀನು ನನ್ನನ್ನು ವಿಭು ಬ್ರಹ್ಮನ ಜ್ಯೇಷ್ಠ ಮಾನಸಪುತ್ರನೆಂದು ತಿಳಿ. ನಾರಾಯಣಗುಣಾತ್ಮಕ ತಪೋವೀರ್ಯದಿಂದ ಸಮುತ್ಪನ್ನನಾಗಿದ್ದೆ.

19017013a ಸನತ್ಕುಮಾರ ಇತಿ ಯಃ ಶ್ರುತೋ ದೇವೇಷು ವೈ ಪುರಾ |

19017013c ಸೋಽಸ್ಮಿ ಭಾರ್ಗವ ಭದ್ರಂ ತೇ ಕಂ ಕಾಮಂ ಕರವಾಣಿ ತೇ ||

ಭಾರ್ಗವ! ಪುರಾಣಗಳಲ್ಲಿ ದೇವರಲ್ಲಿ ಸನತ್ಕುಮಾರನೆಂದು ವಿಶ್ರುತನಾದವನು ನಾನೇ. ನಿನಗೆ ಮಂಗಳವಾಗಲಿ! ನಿನಗಿಷ್ಟವಾದ ಏನನ್ನು ಮಾಡಲಿ?

19017014a ಯೇ ತ್ವನ್ಯೇ ಬ್ರಹ್ಮಣಃ ಪುತ್ರಾಃ ಯವೀಯಾಂಸಸ್ತು ತೇ ಮಮ |

19017014c ಭ್ರಾತರಃ ಸಪ್ತ ದುರ್ಧರ್ಷಾಸ್ತೇಷಾಂ ವಂಶಾಃ ಪ್ರತಿಷ್ಠಿತಾಃ ||

ಬ್ರಹ್ಮನಿಗೆ ಹುಟ್ಟಿದ ಅನ್ಯ ಮಕ್ಕಳು ನನಗಿಂತಲೂ ಕಿರಿಯವರು. ನನ್ನ ಸಹೋದರರು ಏಳುಮಂದಿ. ದುರ್ಧರ್ಷರಾದ ಅವರ ವಂಶವು ಪ್ರತಿಷ್ಠಿತಗೊಂಡಿವೆ.

19017015a ಕ್ರತುರ್ವಸಿಷ್ಠಃ ಪುಲಹಃ ಪುಲಸ್ತ್ಯೋಽತ್ರಿಸ್ತಥಾಂಗಿರಾಃ |

19017015c ಮರೀಚಿಸ್ತು ತಥಾ ಧೀಮಾನ್ ದೇವಗಂಧರ್ವಸೇವಿತಾಃ |

19017015e ತ್ರೀಽನ್ಲ್ಲೋಕಾಂಧಾರಯಂತೀಮಾಂದೇವಗಂಧರ್ವಪೂಜಿತಾಃ||

ಕ್ರತು, ವಸಿಷ್ಠ, ಪುಲಹ, ಪುಲಸ್ತ್ಯ, ಅತ್ರಿ, ಅಂಗಿರಸ, ಮತ್ತು ಧೀಮಾನ್ ಮರೀಚಿ – ಇವರನ್ನು ದೇವ-ಗಂಧರ್ವರು ಸೇವಿಸುತ್ತಾರೆ. ದೇವ-ಗಂಧರ್ವಪೂಜಿತರಾದ ಇವರು ಮೂರೂ ಲೋಕಗಳನ್ನೂ ಧರಿಸಿದ್ದಾರೆ.

19017016a ವಯಂ ತು ಯತಿಧರ್ಮಾಣಃ ಸಂಯೋಜ್ಯಾತ್ಮಾನಮಾತ್ಮನಿ |

19017016c ಪ್ರಜಾ ಧರ್ಮಂ ಚ ಕಾಮಂ ಚ ವ್ಯಪಹಾಯ ಮಹಾಮುನೇ ||

ಮಹಾಮುನೇ! ನಾವಾದರೋ ಆತ್ಮನಲ್ಲಿ ಆತ್ಮನನ್ನಿರಿಸಿ, ಕಾಮ ಮತ್ತು ಪ್ರಜಾಧರ್ಮಗಳನ್ನು ತೊರೆದು ಯತಿಧರ್ಮವನ್ನು ಅನುಸರಿಸುತ್ತಿದ್ದೇವೆ.

19017017a ಯಥೋತ್ಪನ್ನಸ್ತಥೈವಾಹಂ ಕುಮಾರ ಇತಿ ವಿದ್ಧಿ ಮಾಮ್ |

19017017c ತಸ್ಮಾತ್ಸನತ್ಕುಮಾರೇತಿ ನಾಮೈತನ್ಮೇ ಪ್ರತಿಷ್ಠಿತಮ್ ||

ನಾನು ಹೇಗೆ ಉತ್ಪನ್ನನಾಗಿದ್ದೆನೋ ಅದೇ ಕುಮಾರನ ಅವಸ್ಥೆಯಲ್ಲಿ ಇರುವವನೆಂದು ತಿಳಿ. ಆದುದರಿಂದಲೇ ನಾನು ಸನತ್ಕುಮಾರ[1] ಎಂಬ ಹೆಸರಿನಿಂದ ಪ್ರತಿಷ್ಠಿತನಾಗಿದ್ದೇನೆ.

19017018a ಮದ್ಭಕ್ತ್ಯಾ ತೇ ತಪಶ್ಚೀರ್ಣಂ ಮಮ ದರ್ಶನಕಾಂಕ್ಷಯಾ |

19017018c ಏಷ ದೃಷ್ಟೋಽಸ್ಮಿ ಭವತಾ ಕಂ ಕಾಮಂ ಕರವಾಣಿ  ತೇ ||

ನನ್ನ ದರ್ಶನವನ್ನು ಬಯಸಿ ನನ್ನ ಮೇಲೆ ಭಕ್ತಿಪೂರ್ವಕ ತಪಸ್ಸನ್ನು ಮಾಡಿದ್ದೀಯೆ. ಇದೋ ನಿನಗೆ ಕಾಣಿಸಿಕೊಂಡಿದ್ದೇನೆ. ನಿನಗಿಷ್ಟವಾದ ಏನನ್ನು ಮಾಡಲಿ?”

19017019a ಇತ್ಯುಕ್ತವಂತಂ ತಮಹಂ ಪ್ರತ್ಯವೋಚಂ ಸನಾತನಮ್ |

19017019c ಅನುಜ್ಞಾತೋ ಭಗವತಾ ಪ್ರೀಯಮಾಣೇನ ಭಾರತ ||

ಭಾರತ! ಹೀಗೆ ಹೇಳುತ್ತಿದ್ದ ಅವನಿಂದ ಅನುಜ್ಞಾತನಾದ ನಾನು ಪ್ರೀತಿತೋರಿಸಿದ ಆ ಸನಾತನ ಭಗವಂತನನ್ನು ಕೇಳಿದೆನು.

19017020a ತತೋಽಹಮೇನಮರ್ಥಂ ವೈ ತಮಪೃಚ್ಛಂ ಸನಾತನಮ್ |

19017020c ಪೃಷ್ಟಃ ಪಿತೄಣಾಂ ಸರ್ಗಂ ಚ ಫಲಂ ಶ್ರಾದ್ಧಸ್ಯ ಚಾನಘ ||

ಅನಘ! ಆಗ ನಾನು ಪಿತೃಗಳ ಸೃಷ್ಟಿ ಮತ್ತು ಶ್ರಾದ್ಧದ ಫಲದ ಕುರಿತಾದ ಅರ್ಥವನ್ನು ಆ ಸನಾತನನಲ್ಲಿ ಕೇಳಿದ್ದೆ.

19017020c ಚಿಚ್ಛೇದ ಸಂಶಯಂ ಭೀಷ್ಮ ಸ ತು ದೇವೇಶ್ವರೋ ಮಮ |

19017021a ಸ ಮಾಮುವಾಚ ಧರ್ಮಾತ್ಮಾ ಕಥಾಂತೇ ಬಹುವಾರ್ಷಿಕೇ |

19017021c ರಮೇ ತ್ವಯಾಽಹಂ ವಿಪ್ರರ್ಷೇ ಶೃಣು ಸರ್ವಂ ಯಥಾತಥಮ್ ||

ಭೀಷ್ಮ! ಆ ದೇವೇಶ್ವರನು ನನ್ನ ಸಂಶಯವನ್ನು ಭೇದಿಸಿದ್ದನು. ಬಹುವರ್ಷಗಳ ಕಥೆಯ ಅಂತ್ಯದಲ್ಲಿ ಆ ಧರ್ಮಾತ್ಮನು ನನಗೆ ಹೇಳಿದನು: “ವಿಪ್ರರ್ಷೇ! ನಿನ್ನ ಮೇಲೆ ನಾನು ಪ್ರೀತನಾಗಿದ್ದೇನೆ. ಎಲ್ಲವನ್ನೂ ಹೇಗಿದೆಯೋ ಹಾಗೆ ಕೇಳು.

19017022a ದೇವಾನಸೃಜತ ಬ್ರಹ್ಮಾ ಮಾಂ ಯಕ್ಷ್ಯಂತೀತಿ ಭಾರ್ಗವ |

19017022c ತಮುತ್ಸೃಜ್ಯ ತಥಾತ್ಮಾನಮಯಜಂಸ್ತೇ ಫಲಾರ್ಥಿನಃ ||

ಭಾರ್ಗವ! ಇವರು ನನ್ನನ್ನೇ ಪೂಜಿಸುತ್ತಾರೆಂದು ಬ್ರಹ್ಮನು ದೇವತೆಗಳನ್ನು ಸೃಷ್ಟಿಸಿದನು. ಆದರೆ ಫಲಾರ್ಥಿಗಳಾದ ಅವರು ಅವನನ್ನು ಬಿಟ್ಟು ತಮ್ಮನ್ನು ತಾವೇ ಪೂಜಿಸತೊಡಗಿದರು.

19017023a ತೇ ಶಪ್ತಾ ಬ್ರಹ್ಮಣಾ ಮೂಢಾ ನಷ್ಟಸಂಜ್ಞಾ ದಿವೌಕಸಃ |

19017023c ನ ಸ್ಮ ಕಿಂಚಿದ್ವಿಜಾನಂತಿ ತತೋ ಲೋಕೋಽಪ್ಯಮುಹ್ಯತ ||

ಬ್ರಹ್ಮನಿಂದ ಶಪಿತರಾದ ಆ ಮೂಢ ದಿವೌಕಸರು ನಷ್ಟಸಂಜ್ಞರಾದರು. ಅವರಿಗೆ ಸ್ವಲ್ಪವೂ ಜ್ಞಾನವಿರಲಿಲ್ಲ. ಅವರನ್ನು ಅನುಸರಿಸುವ ಲೋಕವೂ ಹಾಗೆಯೇ ಆಯಿತು.

19017024a ತೇ ಭೂಯಃ ಪ್ರಣತಾಃ ಶಪ್ತಾಃ ಪ್ರಾಯಾಚಂತ ಪಿತಾಮಹಮ್|

19017024c ಅನುಗ್ರಹಾಯ ಲೋಕಾನಾಂ ತತಸ್ತಾನಬ್ರವೀದಿದಮ್ ||

ಹೀಗೆ ಶಪಿತರಾದ ಅವರು ಪುನಃ ತಲೆಬಾಗಿ ನಮಸ್ಕರಿಸಿ ಪಿತಾಮಹನನ್ನು ಬೇಡಿಕೊಂಡರು. ಆಗ ಲೋಕಗಳ ಅನುಗ್ರಹಕ್ಕಾಗಿ ಅವನು ಅವರಿಗೆ ಇದನ್ನು ಹೇಳಿದನು:

19017025a ಪ್ರಾಯಶ್ಚಿತ್ತಂ ಚರಧ್ವಂ ವೈ ವ್ಯಭಿಚಾರೋ ಹಿ ವಃ ಕ್ರಿತ |

19017025c ಪುತ್ರಾಂಶ್ಚ ಪರಿಪೃಚ್ಛಧ್ವಂ ತತೋ ಜ್ಞಾನಮವಾಪ್ಸ್ಯಥ ||

“ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಿ. ಏಕೆಂದರೆ ನೀವು ವ್ಯಭಿಚಾರಿಗಳಾಗಿದ್ದೀರಿ. ನಿಮಗೆ ಜ್ಞಾನವು ಎಂದುಂಟಾಗುತ್ತದೆಯೆಂದು ನಿಮ್ಮ ಪುತ್ರರನ್ನು ಕೇಳಿ!”

19017026a ಪ್ರಾಯಶ್ಚಿತ್ತಕ್ರಿಯಾರ್ಥಂ ತೇ ಪುತ್ರಾನ್ಪಪ್ರಚ್ಛುರಾರ್ತವತ್ |

19017026c ತೇಭ್ಯಸ್ತೇ ಪ್ರಯತಾತ್ಮಾನಃ ಶಶಂಸುಸ್ತನಯಾಸ್ತದಾ ||

ಆರ್ತರಾದ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಲು ತಮ್ಮ ಪುತ್ರರನ್ನು ಕೇಳಿದರು. ಆಗ ಅವರ ಪ್ರಯಾತಾತ್ಮ ಮಕ್ಕಳು ಅವರಿಗೆ ಹೇಳಿದರು.

19017027a ಪ್ರಾಯಶ್ಚಿತ್ತಾನಿ ಧರ್ಮಜ್ಞಾ ವಾಙ್ಮನಃಕರ್ಮಜಾನಿ ವೈ |

19017027c ಶಂಸಂತಿ ಕುಶಲಾ ನಿತ್ಯಂ ಚಕ್ಷುರ್ಭ್ಯಾಮಪಿ ನಿತ್ಯಶಃ ||

“ಮಾತು, ಮನಸ್ಸು ಮತ್ತು ಕರ್ಮಗಳಿಂದ ಮತ್ತು ಕಣ್ಣುಗಳಿಂದ ನಿತ್ಯವೂ ಪ್ರಾಯಶ್ಚಿತ್ತವುಂಟಾಗುತ್ತದೆ ಎಂದು ಧರ್ಮಜ್ಞ ಕುಶಲರು ಸದಾ ಹೇಳುತ್ತಾರೆ.

19017028a ಪ್ರಾಯಶ್ಚಿತ್ತಾರ್ಥತತ್ತ್ವಜ್ಞಾ ಲಬ್ಧಸಂಜ್ಞಾ ದಿವೌಕಸಃ |

19017028c ಗಮ್ಯಂತಾಂ ಪುತ್ರಕಾಶ್ಚೇತಿ ಪುತ್ರೈರುಕ್ತಾಶ್ಚ ತೇ ತದಾ ||

ದಿವೌಕಸರೇ! ಪ್ರಾಯಶ್ಚಿತ್ತದ ಅರ್ಥ-ತತ್ತ್ವಗಳನ್ನು ತಿಳಿದು ಸಂಜ್ಞೆಗಳನ್ನು ಪಡೆದುಕೊಳ್ಳಿರಿ.” ಅನಂತರ ಪುತ್ರರು ಅವರಿಗೆ “ಪುತ್ರರೇ! ನೀವು ಹೊರಡಿ!” ಎಂದು ಹೇಳಿದರು.

19017029a ಅಭಿಶಪ್ತಾಸ್ತು ತೇ ದೇವಾಃ ಪುತ್ರವಾಕ್ಯೇನ ನಿಂದಿತಾಃ |

19017029c ಪಿತಾಮಹಮುಪಾಗಚ್ಛನ್ಸಂಶಯಚ್ಛೇದನಾಯ ವೈ ||

ಪುತ್ರವಾಕ್ಯಗಳಿಂದ ನಿಂದಿತರಾಗಿ ಅಭಿಶಪ್ತರಾದ ಆ ದೇವತೆಗಳು ತಮ್ಮ ಸಂಶಯವನ್ನು ಪರಿಹಾರಗೊಳಿಸಿಕೊಳ್ಳಲು ಪಿತಾಮಹನ ಬಳಿ ಬಂದರು.

19017030a ತತಸ್ತಾನಬ್ರವೀದ್ದೇವೋ ಯೂಯಂ ವೈ ಬ್ರಹ್ಮವಾದಿನಃ |

19017030c ತಸ್ಮಾದ್ಯದುಕ್ತಂ ಯುಷ್ಮಾಕಂ ತತ್ತಥಾ ನ ತದನ್ಯಥಾ ||

ಆಗ ಆ ದೇವನು ಅವರಿಗೆ ಹೇಳಿದನು: “ನೀವು ಬ್ರಹ್ಮವಾದಿಗಳು. ಆದುದರಿಂದ ಅವರು ನಿಮಗೆ ಹೇಳಿದ್ದುದು ಸರಿಯಾಗಿಯೇ ಇದೆ. ಅದರಲ್ಲಿ ಅನುಚಿತವಾದುದು ಸ್ವಲ್ಪವೂ ಇಲ್ಲ.

19017031a ಯೂಯಂ ಶರೀರಕರ್ತಾರಸ್ತೇಷಾಂ ದೇವಾ ಭವಿಷ್ಯಥ |

19017031c ತೇ ತು ಜ್ಞಾನಪ್ರದಾತಾರಃ ಪಿತರೋ ವೋ ನ ಸಂಶಯಃ ||

ನೀವು ಅವರ ಶರೀರಗಳನ್ನು ರಚಿಸುವ ದೇವತೆಗಳಾಗುವಿರಿ. ಅವರು ನಿಮಗೆ ಜ್ಞಾನವನ್ನು ನೀಡುವ ಪಿತೃಗಳಾಗುತ್ತಾರೆ. ಅದರಲ್ಲಿ ಸಂಶಯವಿಲ್ಲ.

19017032a ಅನ್ಯೋನ್ಯಂ ಪಿತರೋ ಯೂಯಂ ತೇ ಚೈವೇತಿ ನ ಸಂಶಯಃ |

19017032c ದೇವಾಶ್ಚ ಪಿತರಶ್ಚೈವ ತದ್ಬುಧ್ಯಧ್ವಂ ದಿವೌಕಸಃ ||

ದೇವತೆಗಳು ಮತ್ತು ಪಿತೃಗಳೇ! ನೀವು ಅನ್ಯೋನ್ಯರ ಪಿತೃಗಳು ಎನ್ನುವುದರಲ್ಲಿ ಸಂಶಯವಿಲ್ಲ. ದಿವೌಕಸರೇ! ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ.”

19017033a ತತಸ್ತೇ ಪುನರಾಗಮ್ಯ ಪುತ್ರಾನೂಚುರ್ದಿವೌಕಸಃ |

19017033c ಬ್ರಹ್ಮಣಾ ಚ್ಛಿನ್ನಸಂದೇಹಾಃ ಪ್ರೀತಿಮಂತಃ ಪರಸ್ಪರಮ್ ||

ಆಗ ಬ್ರಹ್ಮನಿಂದ ಸಂದೇಹವನ್ನು ನಿವಾರಿಸಿಕೊಂಡು ಪರಸ್ಪರರಲ್ಲಿ ಪ್ರೀತಿಮಂತರಾದ ದಿವೌಕಸರು ಪುನಃ ತಮ್ಮ ಪುತ್ರರಲ್ಲಿಗೆ ಬಂದು ಹೇಳಿದರು.

19017034a ಯೂಯಂ ವೈ ಪಿತರೋಽಸ್ಮಾಕಂ ಯೈರ್ವಯಂ ಪ್ರತಿಬೋಧಿತಾಃ |

19017034c ಧರ್ಮಜ್ಞಾಃ ಕಶ್ಚ ವಃ ಕಾಮಃ ಕೋ ವರೋ ವಃ ಪ್ರದೀಯತಾಮ್ ||

“ನೀವು ನಮ್ಮ ಪಿತೃಗಳು. ನೀವು ನಮಗೆ ಜ್ಞಾನವನ್ನು ನೀಡಿದ್ದೀರಿ. ಧರ್ಮಜ್ಞರೇ! ನಿಮ್ಮ ಇಚ್ಛೆಯೇನು? ನಿಮಗೆ ನಾವು ಯಾವ ವರವನ್ನು ನೀಡಬೇಕು?

19017035a ಯದುಕ್ತಂ ಚೈವ ಯುಷ್ಮಾಭಿಸ್ತತ್ತಥಾ ನ ತದನ್ಯಥಾ |

19017035c ಉಕ್ತಾಶ್ಚ ಯಸ್ಮಾದ್ಯುಷ್ಮಾಭಿಃ ಪುತ್ರಕಾ ಇತಿ ವೈ ವಯಮ್ |

19017035e ತಸ್ಮಾದ್ಭವಂತಃ ಪಿತರೋ ಭವಿಷ್ಯಂತಿ ನ ಸಂಶಯಃ ||

ನೀವು ನಮಗೆ ಹೇಳಿದುದು ಸರಿಯಾಗಿಯೇ ಇದೆ. ಅದರಲ್ಲಿ ಸ್ವಲ್ಪವೂ ಅನುಚಿತವಾದುದಿಲ್ಲ. ನಮ್ಮನ್ನು ಪುತ್ರಕರು ಎಂದು ಕರೆದುದುದರಿಂದ ನೀವು ನಮ್ಮ ಪಿತೃಗಳಾಗುತ್ತೀರಿ. ಅದರಲ್ಲಿ ಸಂಶಯವಿಲ್ಲ.

19017036a ಯೋಽನಿಷ್ಟ್ವಾ ತು ಪಿತೄಂಶ್ರಾದ್ಧೈಃ ಕ್ರಿಯಾಃ ಕಾಶ್ಚಿತ್ಕರಿಷ್ಯತಿ |

19017036c ರಾಕ್ಷಸಾ ದಾನವಾ ನಾಗಾಃ ಫಲಂ ಪ್ರಾಪ್ಸ್ಯಂತಿ ತಸ್ಯ ತತ್ ||

ಶ್ರಾದ್ಧಗಳಿಂದ ಪಿತೃಗಳನ್ನು ಪೂಜಿಸದೇ ತಮ್ಮ ಇಷ್ಟ ಕರ್ಮಗಳನ್ನು ಮಾಡುವವರ ಕರ್ಮಫಲಗಳು ರಾಕ್ಷಸರು, ದಾನವರು ಮತ್ತು ನಾಗಗಳ ಪಾಲಿಗಾಗುತ್ತವೆ.

19017037a ಶ್ರಾದ್ಧೈರಾಪ್ಯಾಯಿತಾಶ್ಚೈವ ಪಿತರಃ ಸೋಮಮವ್ಯಯಮ್ |

19017037c ಆಪ್ಯಾಯ್ಯಮಾನಾ ಯುಷ್ಮಾಭಿರ್ವರ್ಧಯಿಷ್ಯತಿ ನಿತ್ಯದಾ ||

ಪಿತೃಗಳಾದ ನೀವು ಶ್ರಾದ್ಧಗಳಿಂದ ತೃಪ್ತರಾಗಿ ಅವ್ಯಯ ಸೋಮನನ್ನು ತೃಪ್ತಿಗೊಳಿಸಿ ನಿತ್ಯವೂ ಅವನನ್ನು ವರ್ಧಿಸುತ್ತೀರಿ.

19017038a ಶ್ರಾದ್ಧೈರಾಪ್ಯಾಯಿತಃ ಸೋಮೋ ಲೋಕಾನಾಪ್ಯಾಯಯಿಷ್ಯತಿ|

19017038c ಸಮುದ್ರಪರ್ವತವನಂ ಜಂಗಮಾಜಂಗಮೈರ್ವೃತಮ್ ||

ಶ್ರಾದ್ಧಗಳಿಂದ ತೃಪ್ತನಾದ ಸೋಮನು ಸಮುದ್ರ-ಪರ್ವತ-ವನಗಳಿಂದ ತುಂಬಿದ ಜಂಗಮಾಜಂಗಮ ಲೋಕಗಳನ್ನು ತೃಪ್ತಿಗೊಳಿಸುತ್ತಾನೆ.

19017039a ಶ್ರಾದ್ಧಾನಿ ಪುಷ್ಟಿಕಾಮಾಶ್ಚ ಯೇ ಕರಿಷ್ಯಂತಿ ಮಾನವಾಃ |

19017039c ತೇಭ್ಯಃ ಪುಷ್ಟಿಂ ಪ್ರಜಾಶ್ಚೈವ ದಾಸ್ಯಂತಿ ಪಿತರಃ ಸದಾ ||

ಪುಷ್ಟಿಯನ್ನು ಬಯಸಿ ಶ್ರಾದ್ಧಗಳನ್ನು ಮಾಡುವ ಮಾನವರಿಗೆ ಪಿತೃಗಳು ಸದಾ ಪುಷ್ಟಿಯನ್ನೂ ಸಂತಾನವನ್ನೂ ನೀಡುತ್ತಾರೆ.

19017040a ಶ್ರಾದ್ಧೇ ಯೇ ಚ ಪ್ರದಾಸ್ಯಂತಿ ತ್ರೀನ್ಪಿಂಡಾನ್ನಾಮಗೋತ್ರತಃ |

19017040c ಸರ್ವತ್ರ ವರ್ತಮಾನಾಂಸ್ತಾನ್ಪಿತರಃ ಸಪಿತಾಮಹಾನ್ |

19017040e ಭಾವಯಿಷ್ಯಂತಿ ಸತತಂ ಶ್ರಾದ್ಧದಾನೇನ ತರ್ಪಿತಾಃ ||

ಸರ್ವತ್ರ ವಿದ್ಯಮಾನರಾಗಿರುವ ಪಿತ, ಪಿತಾಮಹ ಮತ್ತು ಪ್ರಪಿತಾಮಹರಿಗೆ ಅವರ ನಾಮ-ಗೋತ್ರಗಳೊಂದಿಗೆ ಮೂರು ಪಿಂಡಗಳನ್ನು ನೀಡಿದರೆ ನೀಡಿದ ಶ್ರಾದ್ಧದಿಂದ ತೃಪ್ತರಾದ ಪಿತೃಗಳು ಸದಾ ಅವರಿಗೆ ಅಭ್ಯುದಯವನ್ನು ಮಾಡುತ್ತಾರೆ.

19017041a ಏವಮಾಜ್ಞಾಪಿತಂ ಪೂರ್ವಂ ಬ್ರಹ್ಮಣಾ ಪರಮೇಷ್ಠಿನಾ |

19017041c ಇತಿ ತದ್ವಚನಂ ಸತ್ಯಂ ಭವತ್ವದ್ಯ ದಿವೌಕಸಃ |

19017041e ಪುತ್ರಾಶ್ಚ ಪಿತರಶ್ಚೈವ ವಯಂ ಸರ್ವೇ ಪರಸ್ಪರಮ್ ||

ಸ್ವರ್ಗವಾಸಿಗಳೇ! ಪರಮೇಷ್ಠಿ ಬ್ರಹ್ಮನು ಮೊದಲು ಹೀಗೆ ಆಜ್ಞಾಪಿಸಿದ್ದನು. ಇಂದು ಅವನ ವಚನವು ಸತ್ಯವಾಯಿತು. ನಾವೆಲ್ಲರೂ ಪರಸ್ಪರರ ಪುತ್ರರು ಮತ್ತು ಪಿತೃಗಳೂ ಹೌದು.”

19017042 ಸನತ್ಕುಮಾರ ಉವಾಚ

19017042a ತ ಏತೇ ಪಿತರೋ ದೇವಾ ದೇವಾಶ್ಚ ಪಿತರಸ್ತಥಾ |

19017042c ಅನ್ಯೋನ್ಯಂ ಪಿತರೋ ಹ್ಯೇತೇ ದೇವಾಶ್ಚ ಪಿತರಶ್ಚ ಹ ||

ಸನತ್ಕುಮಾರನು ಹೇಳಿದನು: “ಪಿತೃಗಳೇ ದೇವತೆಗಳು. ಮತ್ತು ದೇವತೆಗಳೇ ಪಿತೃಗಳು. ಹೀಗೆ ಪಿತೃಗಳು ಮತ್ತು ದೇವತೆಗಳು ಅನ್ಯೋನ್ಯರಿಗೆ ಪಿತೃಗಳು ಮತ್ತು ಪೂಜ್ಯರು.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪಿತುಕಲ್ಪೇ ಸಪ್ತದಶೋಽಧ್ಯಾಯಃ|

Related image

[1] ಸನತ್ ಅಂದರೆ ನಿರಂತರ ಕುಮಾರನಾಗಿರುವ, ಕುಮಾರನಂತೆ ರಾಗ-ದ್ವೇಷಾದಿಗಳಿಂದ ಶೂನ್ಯನಾಗಿರುವವನು ಎಂದರ್ಥ.

Comments are closed.