ಹರಿವಂಶ: ಹರಿವಂಶ ಪರ್ವ

೧೬

ಶ್ರಾದ್ಧಕಲ್ಪಪ್ರಸಂಗಃ

19016001 ಜನಮೇಜಯ ಉವಾಚ|

19016001a ಕಥಂ ವೈ ಶ್ರಾದ್ಧದೇವತ್ವಮಾದಿತ್ಯಸ್ಯ ವಿವಸ್ವತಃ |

19016001c ಶ್ರೋತುಮಿಚ್ಛಾಮಿ ವಿಪ್ರಾಗ್ರ್ಯ ಶ್ರಾದ್ಧಸ್ಯ ಚ ಪರಂ ವಿಧಿಮ್ ||

ಜನಮೇಜಯನು ಹೇಳಿದನು: “ವಿಪ್ರಾಗ್ರ್ಯ! ಆದಿತ್ಯ ವಿವಸ್ವತನ ಮಗನು ಶ್ರಾದ್ಧದೇವತ್ವವನ್ನು ಹೇಗೆ ಪಡೆದನೆನ್ನುವುದನ್ನೂ ಶ್ರಾದ್ಧದ ಪರಮ ವಿಧಿಯನ್ನೂ ಕೇಳಬಯಸುತ್ತೇನೆ.

19016002a ಪಿತೄಣಾಮಾದಿಸರ್ಗಂ ಚ ಕ ಏತೇ ಪಿತರಃ ಸ್ಮೃತಾಃ |

19016002c ಏವಂ ಚ ಶ್ರುತಮಸ್ಮಾಭಿಃ ಕಥ್ಯಮಾನಂ ದ್ವಿಜಾತಿಭಿಃ ||

19016003a ಸ್ವರ್ಗಸ್ಥಾಃ ಪಿತರೋ ಯೇ ಚ ದೇವಾನಾಮಪಿ ದೇವತಾಃ |

19016003c ಇತಿ ವೇದವಿದಃ ಪ್ರಾಹುರೇತದಿಚ್ಛಾಮಿ ವೇದಿತುಮ್ ||

ಪಿತೃಗಳ ಆದಿಸೃಷ್ಟಿಯು ಹೇಗಾಯಿತು? ಈ ಪಿತೃಗಳೆಂದು ಹೇಳುವವರು ಯಾರು? ಸ್ವರ್ಗಸ್ಥರಾದ ಪಿತೃಗಳು ದೇವರಿಗೂ ದೇವತೆಗಳೆಂದು ದ್ವಿಜಾತಿಯವರು ಹೇಳುತ್ತಿದ್ದುದ್ದನ್ನು ನಾವು ಕೇಳಿದ್ದೇವೆ. ವೇದವನ್ನು ತಿಳಿದವರೂ ಹೀಗೆಯೇ ಹೇಳುತ್ತಾರೆ. ಅದನ್ನು ತಿಳಿದುಕೊಳ್ಳಲು ಬಯಸುತ್ತೇನೆ.

19016004a ಯೇ ಚ ತೇಶಾಂ ಗಣಾಃ ಪ್ರೋಕ್ತಾ ಯಚ್ಚ ತೇಶಾಂ ಬಲಂ ಪರಮ್ |

19016004c ಯಥಾ ಚ ಕೃತಮಸ್ಮಾಭಿಃ ಶ್ರಾದ್ಧಂ ಪ್ರೀಣಾತಿ ವೈ ಪಿತೄನ್ ||

19016005a ಪ್ರೀತಾಶ್ಚ ಪಿತರೋ ಯೇ ಸ್ಮ ಶ್ರೇಯಸಾ ಯೋಜಯಂತಿ ಹಿ |

19016005c ಏವಂ ವೇದಿತುಮಿಚ್ಛಾಮಿ ಪಿತೄಣಾಂ ಸರ್ಗಮುತ್ತಮಮ್ ||

ಅವರದ್ದೇ ಗಣವೆಂದು ಹೇಳುವ ಅವರ ಪರಮ ಬಲವ್ಯಾವುದು? ನಾವು ಮಾಡಿದ ಶ್ರಾದ್ಧವು ಪಿತೃಗಳನ್ನು ಹೇಗೆ ಸಂತೋಷಗೊಳಿಸುತ್ತದೆ? ಪ್ರೀತರಾದ ಪಿತೃಗಳು ನಮ್ಮ ಮೇಲೆ ಯಾವರೀತಿ ಶ್ರೇಯಸ್ಸನ್ನುಂಟುಮಾಡುತ್ತಾರೆ? ಪಿತೃಗಳ ಸೃಷ್ಟಿಯೊಂದಿಗೆ ಇದನ್ನು ತಿಳಿಯಲು ಬಯಸುತ್ತೇನೆ.”

19016006 ವೈಶಂಪಾಯನ ಉವಾಚ|

19016006a ಹಂತ ತೇ ಕಥಯಿಶ್ಯಾಮಿ ಪಿತೄಣಾಂ ಸರ್ಗಮುತ್ತಮಮ್ |

19016006c ಯಥಾ ಚ ಕೃತಮಸ್ಮಾಭಿಃ ಶ್ರಾದ್ಧಂ ಪ್ರೀಣಾತಿ ವೈ ಪಿತೄನ್ |

19016006e ಪ್ರೀತಾಶ್ಚ ಪಿತರೋ ಯೇ ಸ್ಮ ಶ್ರೇಯಸಾ ಯೋಜಯಂತಿ ಹಿ ||

ವೈಶಂಪಾಯನನು ಹೇಳಿದನು: “ಪಿತೃಗಳ ಉತ್ತಮ ಸೃಷ್ಟಿಯ ಕುರಿತು, ನಾವು ಮಾಡಿದ ಶ್ರಾದ್ಧದಿಂದ ಪಿತೃಗಳು ಹೇಗೆ ಪ್ರೀತರಾಗುತ್ತಾರೆ ಮತ್ತು ಪ್ರೀತರಾದ ಪಿತೃಗಳು ನಮಗೆ ಶ್ರೇಯಸ್ಸನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಹೇಳುತ್ತೇನೆ. ಕೇಳು.

19016007a ಮಾರ್ಕಂಡೇಯೇನ ಕಥಿತಂ ಭೀಷ್ಮಾಯ ಪರಿಪೃಚ್ಛತೇ |

19016007c ಅಪೃಚ್ಛದ್ಧರ್ಮರಾಜೋ ಹಿ ಶರತಲ್ಪಗತಂ ಪುರಾ |

19016007e ಏವಮೇವ ಪುರಾ ಪ್ರಶ್ನಂ ಯನ್ಮಾಂ ತ್ವಂ ಪರಿಪೃಚ್ಛಸಿ ||

ಭೀಷ್ಮನು ಕೇಳಲು ಮಾರ್ಕಂಡೇಯನು ಇದನ್ನು ಹೇಳಿದ್ದನು. ಹಿಂದೆ ಶರತಲ್ಪನಾಗಿದ್ದ ಭೀಷ್ಮನನ್ನು ಧರ್ಮರಾಜನು ಇದನ್ನೇ ಕೇಳಿದ್ದನು. ಇದೇ ಪ್ರಶ್ನೆಯನ್ನು ನೀನೂ ಕೂಡ ನನ್ನನ್ನು ಕೇಳುತ್ತಿದ್ದೀಯೆ.

19016008a ತತ್ತೇಽನುಪೂರ್ವ್ಯಾ ವಕ್ಷ್ಯಾಮಿ ಭೀಷ್ಮೇಣೋದಾಹೃತಂ ಯಥಾ |

19016008c ಗೀತಂ ಸನತ್ಕುಮಾರೇಣ ಮಾರ್ಕಂಡೇಯಾಯ ಪೃಚ್ಛತೇ ||

ಹಿಂದೆ ಮಾರ್ಕಂಡೇಯನು ಕೇಳಲು ಸನತ್ಕುಮಾರನು ಹೇಳಿದ ಗೀತೆಯನ್ನು ಭೀಷ್ಮನು ಉದಾಹರಿಸಿದುದನ್ನು ಹೇಳುತ್ತೇನೆ.

19016009 ಯುಧಿಷ್ಠಿರ ಉವಾಚ|

19016009a ಪುಷ್ಟಿಕಾಮೇನ ಧರ್ಮಜ್ಞ ಕಥಂ ಪುಷ್ಟಿರವಾಪ್ಯತೇ |

19016009c ಏತದ್ವೈ ಶ್ರೋತುಮಿಚ್ಛಾಮಿ ಕಿಂ ಕುರ್ವಾಣೋ ನ ಶೋಚತಿ ||

ಯುಧಿಷ್ಠಿರನು ಹೇಳಿದನು: “ಧರ್ಮಜ್ಞ! ಪುಷ್ಟಿಯನ್ನು ಬಯಸುವವನಿಗೆ ಪುಷ್ಟಿಯು ಹೇಗೆ ದೊರೆಯುತ್ತದೆ? ಏನನ್ನು ಮಾಡಿದರೆ ಮನುಷ್ಯನು ಶೋಕಿಸುವುದಿಲ್ಲ? ಇದನ್ನು ಕೇಳಲು ಬಯಸುತ್ತೇನೆ.”

19016010 ಭೀಷ್ಮ ಉವಾಚ|

19016010a ಶ್ರಾದ್ಧೈಃ ಪ್ರೀಣಾತಿ ಹಿ ಪಿತೄನ್ಸರ್ವ ಕಾಮ ಫಲೈಸ್ತು ಯಃ |

19016010c ತತ್ಪರಃ ಪ್ರಯತಃ ಶ್ರಾದ್ಧೀ ಪ್ರೇತ್ಯ ಚೇಹ ಚ ಮೋದತೇ ||

ಭೀಷ್ಮನು ಹೇಳಿದನು: “ಸರ್ವಕಾಮಗಳ ಫಲವನ್ನೀಯುವ ಶ್ರಾದ್ಧಗಳಿಂದ ಯಾರು ಪಿತೃಗಳನ್ನು ತೃಪ್ತಿಪಡಿಸುವನೋ ಆ ಶ್ರಾದ್ಧಿಯು ಇಹದಲ್ಲಿಯೂ ಪರದಲ್ಲಿಯೂ ಆನಂದದ ಭಾಗಿಯಾಗುತ್ತಾನೆ.

19016011a ಪಿತರೋ ಧರ್ಮಕಾಮಸ್ಯ ಪ್ರಜಾಕಾಮಸ್ಯ ಚ ಪ್ರಜಾಮ್ |

19016011c ಪುಷ್ಟಿಕಾಮಸ್ಯ ಪುಷ್ಟಿಂ ಚ ಪ್ರಯಚ್ಛಂತಿ ಯುಧಿಷ್ಠಿರ ||

ಯುಧಿಷ್ಠಿರ! ಪಿತೃಗಳು ಧರ್ಮಕಾಮಿಗೆ ಧರ್ಮವನ್ನೂ, ಪ್ರಜಾಕಾಮಿಗೆ ಪ್ರಜೆಗಳನ್ನೂ, ಮತ್ತು ಪುಷ್ಟಕಾಮಿಗಳಿಗೆ ಪುಷ್ಟಿಯನ್ನೂ ಪ್ರದಾನಿಸುತ್ತಾರೆ.”

19016012  ಯುಧಿಷ್ಠಿರ ಉವಾಚ|

19016012a ವರ್ತಂತೇ ಪಿತರಃ ಸ್ವರ್ಗೇ ಕೇಷಾಂಚಿನ್ನರಕೇ ಪುನಃ |

19016012c ಪ್ರಾಣಿನಾಂ ನಿಯತಂ ವಾಪಿ ಕರ್ಮಜಂ ಫಲಮುಚ್ಯತೇ ||

ಯುಧಿಷ್ಠಿರನು ಹೇಳಿದನು: “ಪಿತೃಗಳಲ್ಲಿ ಕೆಲವರು ಸ್ವರ್ಗದಲ್ಲಿರುತ್ತಾರೆ ಮತ್ತು ಪುನಃ ಕೆಲವರು ನರಕದಲ್ಲಿ ವಾಸಿಸುತ್ತಾರೆ. ಪ್ರಾಣಿಗಳಿಗೆ ಕರ್ಮದಿಂದಾದ ಫಲವನ್ನು ನಿಯತವಾಗಿ ಭೋಗಿಸಬೇಕಾಗುತ್ತದೆ ಎಂದು ಹೇಳುತ್ತಾರೆ.

19016013a ಶ್ರಾದ್ಧಾನಿ ಚೈವ ಕುರ್ವಂತಿ ಫಲಕಾಮಾಃ ಸದಾ ನರಾಃ |

19016013c ಅಭಿಸಂಧಾಯ ಪಿತರಂ ಪಿತುಶ್ಚ ಪಿತರಂ ತಥಾ ||

ಫಲವನ್ನು ಬಯಸುವ ನರರು ಸದಾ ತಂದೆ, ಅಜ್ಜ, ಮತ್ತು ಮುತ್ತಜ್ಜರನ್ನು ಅಭಿಸಂಧಾನ ಮಾಡಿ ಶ್ರಾದ್ಧಗಳನ್ನು ಮಾಡುತ್ತಾರೆ.

19016014a ಪಿತುಃ ಪಿತಾಮಹಂ ಚೈವ ತ್ರಿಷು ಪಿಂಡೇಷು ನಿತ್ಯಶಃ |

19016014c ತಾನಿ ಶ್ರಾದ್ಧಾನಿ ದತ್ತಾನಿ ಕಥಂ ಗಚ್ಛಂತಿ ವೈ ಪಿತೄನ್ ||

ಪಿತ, ಪಿತಾಮಹ ಮತ್ತು ಪ್ರಪಿತಾಮಹರಿಗೆಂದು ನಿತ್ಯವೂ ಮೂರು ಪಿಂಡಗಳನ್ನಿತ್ತು ಶ್ರಾದ್ಧಗಳನ್ನು ಮಾಡುತ್ತಾರೆ. ಹಾಗೆ ನೀಡಿದ ಪಿಂಡಗಳು ಪಿತೃಗಳಿಗೆ ಹೇಗೆ ಹೋಗುತ್ತವೆ?

19016015a ಕಥಂ ಚ ಸಕ್ತಾಸ್ತೇ ದಾತುಂ ನರಕಸ್ಥಾಃ  ಫಲಂ ಪುನಃ |

19016015c ಕೇ ವಾ ತೇ ಪಿತರೋಽನ್ಯೇ ಸ್ಮ ಕಾನ್ಯಜಾಮೋ ವಯಂ ಪುನಃ||

ನರಕದಲ್ಲಿದ್ದ ಪಿತೃಗಳೂ ಅದರ ಫಲವನ್ನು ಹೇಗೆ ನೀಡಬಲ್ಲರು? ಅಥವಾ ಈ ಪಿತೃಗಳು ಬೇರೆಯವರೇ ಆಗಿದ್ದರೆ ಅವರ ಪರಿಚಯವೇನು? ಯಾರನ್ನು ನಾವು ಪೂಜಿಸಬೇಕು?

19016016a ದೇವಾ ಅಪಿ ಪಿತೄನ್ಸ್ವರ್ಗೇ ಯಜಂತೀತಿ ಚ ನಃ ಶ್ರುತಮ್ |

19016016c ಏತದಿಚ್ಛಾಮ್ಯಹಂ ಶ್ರೋತುಂ ವಿಸ್ತರೇಣ ಮಹಾದ್ಯುತೇ ||

ಮಹಾದ್ಯುತೇ! ಸ್ವರ್ಗದಲ್ಲಿ ದೇವತೆಗಳೂ ಕೂಡ ಪಿತೃಗಳನ್ನು ಪೂಜಿಸುತ್ತಾರೆ ಎಂದು ನಾವು ಕೇಳಿದ್ದೇವೆ. ಇದನ್ನು ವಿಸ್ತಾರವಾಗಿ ಕೇಳಬೇಕೆಂದು ಬಯಸುತ್ತೇನೆ.

19016017a ಸ ಭವಾನ್ಕಥಯತ್ವೇತಾಂ ಕಥಾಮಮಿತಬುದ್ಧಿಮಾನ್ |

19016017c ಯಥಾ ದತ್ತಂ ಪಿತೄಣಾಂ ವೈ ತಾರಣಾಯೇಹ ಕಲ್ಪತೇ ||

ಅಮಿತಬುದ್ಧಿಮಾನ್! ಪಿತೃಗಳಿಗೆ ನೀಡಿದ ಶ್ರಾದ್ಧವು ಹೇಗೆ ಉದ್ಧರಿಸುತ್ತದೆ ಎನ್ನುವುದನ್ನು ಹೇಳಬೇಕು.”

19016018 ಭೀಷ್ಮ ಉವಾಚ|

19016018a ಅತ್ರ ತೇ ಕೀರ್ತಯಿಷ್ಯಾಮಿ ಯಥಾಶ್ರುತಮರಿಂದಮ |

19016018c ಯೇ ಚ ತೇ ಪಿತರೋಽನ್ಯೇ ಸ್ಮ ಯಾನ್ಯಜಾಮೋ ವಯಂ ಪುನಃ |

19016018e ಪಿತ್ರಾ ಮಮ ಪುರಾ ಗೀತಂ ಲೋಕಾಂತರಗತೇನ ವೈ ||

ಭೀಷ್ಮನು ಹೇಳಿದನು: “ಅರಿಂದಮ! ನಾವು ಪೂಜಿಸುವ ಪಿತೃಗಳ ಮತ್ತು ಅನ್ಯ ಪಿತೃಗಳ ಕುರಿತು ನಾನು ಹೇಗೆ ಕೇಳಿದ್ದೆನೋ ಹಾಗೆ ನಿನಗೆ ಹೇಳುತ್ತೇನೆ. ಲೋಕಾಂತರಗತನಾಗಿರುವ ನನ್ನ ತಂದೆಯು ಹಿಂದೆ ಈ ಗೀತೆಯನ್ನು ಹೇಳಿದ್ದನು.

19016019a ಶ್ರಾದ್ಧಕಾಲೇ ಮಮ ಪಿತುರ್ಮಯಾ ಪಿಂಡಃ ಸಮುದ್ಯತಃ |

19016019c ತಂ ಪಿತಾ ಮಮ ಹಸ್ತೇನ ಭಿತ್ತ್ವಾ ಭೂಮಿಮಯಾಚತ ||

ಶ್ರಾದ್ಧಕಾಲದಲ್ಲಿ ನಾನು ನನ್ನ ತಂದೆಗೆ ಪಿಂಡವನ್ನಿಡುವಾಗ ಅವನ ಕೈಯು ಭೂಮಿಯನ್ನು ಭೇದಿಸಿ ಮೇಲೆದ್ದಿತು ಮತ್ತು ನನ್ನ ತಂದೆಯು ತನ್ನ ಕೈಯಿಂದಲೇ ಪಿಂಡವನ್ನು ಕೇಳಿದ್ದನು.

19016020a ಹಸ್ತಾಭರಣಪೂರ್ಣೇನ ಕೇಯೂರಾಭರಣೇನ ಚ |

19016020c ರಕ್ತಾಂಗುಲಿತಲೇನಾಥ ಯಹಾ ದೃಷ್ಟಃ ಪುರಾ ಮಯಾ ||

ಹಸ್ತಾಭರಣ ಮತ್ತು ಕೇಯೂರಾಭರಣಗಳಿಂದ ತುಂಬಿದ್ದ ಅವನ ಕೆಂಪು ಬೆರಳು-ಅಂಗೈಗಳು ನಾನು ಮೊದಲು ಅವನು ಜೀವಂತವಿರುವಾಗ ನೋಡಿದ್ದಂತೆಯೇ ಇದ್ದವು.

19016021a ನೈಷ ಕಲ್ಪೇ ವಿಧಿರ್ದೃಷ್ಟ ಇತಿ ಸಂಚಿಂತ್ಯ ಚಾಪ್ಯಹಮ್ |

19016021c ಕುಶೇಷ್ವೇವ ತಪಃ ಪಿಂಡಂ ದತ್ತವಾನವಿಚಾರಯನ್ ||

ಶ್ರಾದ್ಧಕಲ್ಪದಲ್ಲಿ ಈ ವಿಧಿಯನ್ನು ಹೇಳಿಲ್ಲವೆಂದು ಚಿಂತಿಸಿ ನಾನಾದರೂ ವಿಚಾರಮಾಡದೇ ಕುಶಗಳ ಮೇಲೆಯೇ ಪಿಂಡವನ್ನು ನೀಡಿದ್ದೆನು.

19016022a ತತಃ ಪಿತಾ ಮೇ ಸುಪ್ರೀತೋ ವಾಚಾ ಮಧುರಯಾ ತದಾ |

19016022c ಉವಾಚ ಭರತಶ್ರೇಷ್ಠ ಪ್ರೀಯಮಾಣೋ ಮಯಾನಘ ||

ಭರತಶ್ರೇಷ್ಠ! ಅನಘ! ಆಗ ತಂದೆಯು ನನ್ನ ಮೇಲೆ ಪ್ರೀತನಾಗಿ ಪ್ರೀತಿತುಂಬಿದ ಈ ಮಧುರ ಮಾತುಗಳನ್ನು ಹೇಳಿದ್ದನು:

19016023a ತ್ವಯಾ ದಾಯಾದವಾನಸ್ಮಿ ಕೃತಾರ್ಥೋಽಮುತ್ರ ಚೇಹ ಚ |

19016023c ಸತ್ಪುತ್ರೇಣ ತ್ವಯಾ ಪುತ್ರ ಧರ್ಮಜ್ಞೇನ ವಿಪಶ್ಚಿತಾ ||

“ಪುತ್ರ! ನೀನು ಧರ್ಮಜ್ಞ ಮತ್ತು ವಿದ್ವಾಂಸನು. ನಿನ್ನಂತಹ ಸತ್ಪುತ್ರನಿಂದ ನಾನು ಪುತ್ರವಂತನೆಂದೆನಿಸಿಕೊಂಡೆನು. ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಕೃತಾರ್ಥನಾದೆನು.

19016024a ಮಯಾ ತು ತವ ಜಿಜ್ಞಾಸಾ ಪ್ರಯುಕ್ತೈಷಾ ದೃಢವ್ರತ |

19016024c ವ್ಯವಸ್ಥಾನಂ ತು ಧರ್ಮೇಷು ಕರ್ತುಂ ಲೋಕಸ್ಯ ಚಾನಘ ||

ಅನಘ! ದೃಢವ್ರತ! ಲೋಕದಲ್ಲಿ ಧರ್ಮದಲ್ಲಿ ಶ್ರದ್ಧೆಯನ್ನು ಸ್ಥಾಪಿಸಲೇ ನಾನು ಹೀಗೆ ನಿನ್ನನ್ನು ಪರೀಕ್ಷಿಸಿದೆ.

19016025a ಯಥಾ ಚತುರ್ಥಂ ಧರ್ಮಸ್ಯ ರಕ್ಷಿತಾ ಲಭತೇ ಫಲಮ್ |

19016025c ಪಾಪಸ್ಯ ಹಿ ತಥಾ ಮೂಢಃ ಫಲಂ ಪ್ರಾಪ್ನೋತ್ಯರಕ್ಷಿತಾ ||

ಧರ್ಮವನ್ನು ರಕ್ಷಿಸುವವನಿಗೆ ಧರ್ಮದ ನಾಲ್ಕನೆಯ ಒಂದು ಭಾಗವು ದೊರೆಯುವಂತೆ ಪಾಪವನ್ನು ರಕ್ಷಿಸುವ ಮೂಢನಿಗೆ ಪಾಪದ ನಾಲ್ಕನೆಯ ಒಂದು ಭಾಗವು ದೊರೆಯುತ್ತದೆ.

19016026a ಪ್ರಮಾಣಂ ಯದ್ಧಿ ಕುರುತೇ ಧರ್ಮಾಚಾರೇಷು ಪಾರ್ಥಿವಃ |

19016026c ಪ್ರಜಾಸ್ತದನುವರ್ತಂತೇ ಪ್ರಮಾಣಾಚರಿತಂ ಸದಾ ||

ಧರ್ಮಾಚಾರಗಳಲ್ಲಿ ರಾಜನು ಏನನ್ನು ಪ್ರಮಾಣಪೂರ್ವಕವಾಗಿ ಮಾಡುತ್ತಾನೋ ಪ್ರಜೆಗಳೂ ಅದೇ ಪ್ರಮಾಣವನ್ನು ಸದಾ ಅನುಸರಿಸುತ್ತಾರೆ.

19016027a ತ್ವಯಾ ಚ ಭರತಶ್ರೇಷ್ಠ ವೇದಧರ್ಮಾಶ್ಚ ಶಾಶ್ವತಾಃ |

19016027c ಕೃತಾಃ ಪ್ರಮಾಣಂ ಪ್ರೀತಿಶ್ಚ ಮಮ ನಿರ್ವರ್ತಿತಾತುಲಾ ||

ಭರತಶ್ರೇಷ್ಠ! ನೀನು ಶಾಶ್ವತ ವೇದಧರ್ಮಗಳನ್ನೇ ಪ್ರಮಾಣವೆಂದು ಪರಿಗಣಿಸಿರುವೆ. ಆದುದರಿಂದ ನಿನ್ನ ಮೇಲೆ ಅತುಲ ಪ್ರೀತಿಯುಂಟಾಗಿದೆ.

19016028a ತಸ್ಮಾತ್ತವಾಹಂ ಸುಪ್ರೀತಃ ಪ್ರೀತ್ಯಾ ಚ ವರಮುತ್ತಮಮ್ |

19016028c ದದಾಮಿ ತಂ ಪ್ರತೀಚ್ಛ ತ್ವಂ ತ್ರಿಷು ಲೋಕೇಷು ದುರ್ಲಭಮ್||

ಆದುದರಿಂದ ಸುಪ್ರೀತನಾದ ನಾನು ನಿನಗೆ ಪ್ರೀತಿಯಿಂದ ಉತ್ತಮ ವರವನ್ನು ನೀಡುತ್ತೇನೆ. ಮೂರು ಲೋಕಗಳಲ್ಲಿಯೂ ದುರ್ಲಭವಾದ ವರವನ್ನು ಪಡೆದುಕೋ!

19016029a ನ ತೇ ಪ್ರಭವಿತಾ ಮೃತುರ್ಯಾವಜ್ಜೀವಿತುಮಿಚ್ಛಸಿ |

19016029c ತ್ವತ್ತೋಽಭ್ಯನುಜ್ಞಾಂ ಸಂಪ್ರಾಪಯ ಮೃತ್ಯುಃ ಪ್ರಭವಿತಾ ತವ||

ಎಲ್ಲಿಯವರೆಗೆ ನೀನು ಜೀವಿತವಿರಲು ಬಯಸುವೆಯೋ ಅಲ್ಲಿಯವರೆಗೆ ನಿನ್ನ ಮೇಲೆ ಮೃತ್ಯುವಿನ ಪ್ರಭಾವವಿರುವುದಿಲ್ಲ. ನಿನ್ನ ಅನುಜ್ಞೆಯನ್ನು ಪಡೆದೇ ಮೃತ್ಯುವು ನಿನ್ನ ಮೇಲೆ ಪ್ರಭಾವಿತಗೊಳ್ಳುತ್ತದೆ.

19016030a ಕಿಂ ವಾ ತೇ ಪ್ರಾರ್ಥಿತಂ ಭೂಯೋ ದದಾಮಿ ವರಮುತ್ತಮಮ್ |

19016030c ತದ್ಬ್ರೂಹಿ ಭರತಶ್ರೇಷ್ಠ ಯತ್ತೇ ಮನಸಿ ವರ್ತತೇ ||

ಅಥವಾ ನೀನು ಕೇಳಿದ ಇನ್ನೂ ಹೆಚ್ಚಿನ ಉತ್ತಮ ವರವನ್ನು ನೀಡುತ್ತೇನೆ. ಭರತಶ್ರೇಷ್ಠ! ನಿನ್ನ ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳು.”

19016031a ಇತ್ಯುಕ್ತವಂತಂ ತಮಹಮಭಿವಾದ್ಯ ಕೃತಾಂಜಲಿಃ |

19016031c ಅಬ್ರುವಂ ಕೃತಕೃತ್ಯೋಽಹಂ ಪ್ರಸನ್ನೇ ತ್ವಯಿ ಸತ್ತಮ ||

ಹೀಗೆ ಹೇಳುತ್ತಿದ್ದ ಅವನನ್ನು ಕೈಮುಗಿದು ಅಭಿವಂದಿಸಿ ನಾನು ಹೇಳಿದೆನು: “ಸತ್ತಮ! ನಿನ್ನ ಪ್ರಸನ್ನತೆಯಿಂದ ನಾನು ಕೃತಕೃತ್ಯನಾಗಿದ್ದೇನೆ.

19016032a ಯದಿ ತ್ವನುಗ್ರಹಂ ಭೂಯಸ್ತ್ವತ್ತೋಽರ್ಹಾಮಿ ಮಹಾದ್ಯುತೇ |

19016032c ಪ್ರಶ್ನಮಿಚ್ಛಾಮಿ ವೈ ಕಿಂಚಿದ್ವ್ಯಾಹೃತಂ ಭವತಾ ಸ್ವಯಮ್ ||

ಮಹಾದ್ಯುತೇ! ನಿನಗೆ ನನ್ನ ಮೇಲೆ ಇನ್ನೂ ಹೆಚ್ಚಿನ ಅನುಗ್ರಹವಿದ್ದರೆ ಸ್ವಯಂ ನಿನ್ನ ಮುಖದಿಂದ ಈ ಪ್ರಶ್ನೆಗೆ ಉತ್ತರವನ್ನು ಕೇಳಬಯಸುತ್ತೇನೆ.”

19016033a ಸ ಮಾಮುವಾಚ ಧರ್ಮಾತ್ಮಾ ಬ್ರೂಹಿ ಭೀಷ್ಮ ಯದಿಚ್ಛಸಿ |

19016033c ಛೇತ್ತಾಸ್ಮಿ ಸಂಶಯಂ ಸರ್ವಂ ಯನ್ಮಾಂ ಪೃಚ್ಛಸಿ ಭಾರತ ||

ಆ ಧರ್ಮಾತ್ಮನು ನನಗೆ ಹೇಳಿದನು: “ಭೀಷ್ಮ! ಭಾರತ! ನಿನಗಿರುವ ಸಂಶಯವೆಲ್ಲವನ್ನೂ ನನ್ನಲ್ಲಿ ಕೇಳು. ಅವೆಲ್ಲ ಸಂದೇಹಗಳನ್ನೂ ದೂರಮಾಡುತ್ತೇನೆ.

19016034a ಅಪೃಚ್ಛಂ ತಮಹಂ ತಾತಂ ತತ್ರಾಂತರ್ಹಿತಮೇವ ಚ |

19016034c ಗತಂ ಸುಕೃತಿನಾಂ ಲೋಕಂ ಕೌತೂಹಲಸಮನ್ವಿತಃ ||

ಆಗ ಅಲ್ಲಿ ಅಂತರ್ಹಿತನಾಗಿ ನಿಂತಿದ್ದ ಸುಕೃತರ ಲೋಕಕ್ಕೆ ಹೋಗಿದ್ದ ನನ್ನ ತಂದೆಯನ್ನು ಕುತೂಹಲಸಮನ್ವಿತನಾಗಿ ಕೇಳಿದೆನು.”

19016035  ಭೀಷ್ಮ ಉವಾಚ|

19016035a ಶ್ರೂಯಂತೇ ಪಿತರೋ ದೇವಾ ದೇವಾನಾಮಪಿ ದೇವತಾಃ |

19016035c ದೇವಾಶ್ಚ ಪಿತರೋಽನ್ಯೇ ಚ ಕಾನ್ಯಜಾಮೋ ವಯಂ ಪುನಃ ||

ಭೀಷ್ಮನು ಹೇಳಿದನು: “ಪಿತೃಗಳು ದೇವತೆಗಳಿಗೂ ದೇವತೆಗಳೆಂದು ಕೇಳಿದ್ದೇವೆ. ದೇವತೆಗಳು ಮತ್ತು ಪಿತೃಗಳು ಅನ್ಯ-ಅನ್ಯರೋ ಅಥವಾ ಒಂದೇ ಗಣವೋ? ನಾವು ಯಾರನ್ನು ಪೂಜಿಸಬೇಕು?

19016036a ಕಥಂ ಚ ದತ್ತಮಸ್ಮಾಭಿಃ ಶ್ರಾದ್ಧಂ ಪ್ರೀಣಾತ್ಯಥೋ ಪಿತೄನ್ |

19016036c ಲೋಕಾಂತರಗತಂಸ್ತಾತ ಕಿನ್ನು ಶ್ರಾದ್ಧಸ್ಯ ವಾ ಫಲಮ್ ||

ತಂದೇ! ನಾವು ನೀಡುವ ಶ್ರಾದ್ಧವು ಬೇರೆ ಲೋಕಗಳಿಗೆ ಹೋಗಿರುವ ಪಿತೃಗಳಿಗೆ ಹೇಗೆ ತೃಪ್ತಿಯನ್ನು ನೀಡುತ್ತದೆ? ಶ್ರಾದ್ಧದ ಫಲವೇನು?

19016037a ಕಾನ್ಯಜಂತಿ ಸ್ಮ ಲೋಕಾ ವೈ ಸದೇವನರದಾನವಾಃ |

19016037c ಸಯಕ್ಷೋರಗಗಂಧರ್ವಾಃ ಸಕಿನ್ನರಮಹೋರಗಾಃ ||

ಲೋಕದಲ್ಲಿ ದೇವತೆಗಳು, ನರರು, ದಾನವರು, ಯಕ್ಷರು, ಉರಗರು, ಗಂಧರ್ವರು, ಕಿನ್ನರರು ಮತ್ತು ಮಹೋರಗರು ಯಾರನ್ನು ಪೂಜಿಸುತ್ತಾರೆ?

19016038a ಅತ್ರ ಮೇ ಸಂಶಯಸ್ತೀವ್ರಃ ಕೌತೂಹಲಮತೀವ ಚ |

19016038c ತದ್ಬ್ರೂಹಿ ಮಮ ಧರ್ಮಜ್ಞ ಸರ್ವಜ್ಞೋ ಹ್ಯಸಿ ಮೇ ಮತಃ |

19016038e ಏತಚ್ಛ್ರುತ್ವಾ ವಚಸ್ತಸ್ಯ ಭೀಷ್ಮಸ್ಯೋವಾಚ ವೈ ಪಿತಾ ||

ಇದರ ಕುರಿತು ನನ್ನಲ್ಲಿ ತೀವ್ರ ಸಂಶಯವಿದೆ ಮತ್ತು ಅತೀವ ಕುತೂಹಲವೂ ಇದೆ. ಧರ್ಮಜ್ಞ! ಇದರ ಕುರಿತು ನನಗೆ ಹೇಳು. ನೀನು ಸರ್ವಜ್ಞನೆಂದು ನನ್ನ ಮತ.” ಭೀಷ್ಮನ ಈ ಮಾತನ್ನು ಕೇಳಿ ಅವನ ತಂದೆಯು ಅವನಿಗೆ ಹೇಳಿದನು.

19016039  ಶಂತನುರುವಾಚ|

19016039a ಸಂಕ್ಷೇಪೇಣೈವ ತೇ ವಕ್ಷ್ಯೇ ಯನ್ಮಾಂ ಪೃಚ್ಛಸಿ ಭಾರತ |

19016039c ಪಿತರಶ್ಚ ಯಥೋದ್ಭೂತಾಃ ಫಲಂ ದತ್ತಸ್ಯ ಚಾನಘ ||

19016040a ಪಿತೄಣಾಂ ಕಾರಣಂ ಶ್ರಾದ್ಧೇ ಶೃಣು ಸರ್ವಂ ಸಮಾಹಿತಃ |

19016040c ಆದಿದೇವಸುತಾಸ್ತಾತ ಪಿತರೋ ದಿವಿ ದೇವತಾಃ||

ಶಂತನುವು ಹೇಳಿದನು: “ಭಾರತ! ನನ್ನನ್ನು ನೀನು ಏನು ಕೇಳುತ್ತಿದ್ದೀಯೋ ಅದನ್ನು ಸಂಕ್ಷೇಪವಾಗಿಯೇ ಹೇಳುತ್ತೇನೆ. ಅನಘ! ಪಿತೃಗಳು ಹೇಗೆ ಉತ್ಪನ್ನರಾದರು, ಪಿತೃಗಳಿಗೆ ಶ್ರಾದ್ಧವನ್ನು ನೀಡುವುದರಿಂದ ಅವರು ಯಾವ ಫಲವನ್ನು ನೀಡುತ್ತಾರೆ ಎನ್ನುವುದೆಲ್ಲವನ್ನೂ ಸಮಾಹಿತನಾಗಿ ಕೇಳು. ತಾತ! ದಿವಿಯಲ್ಲಿರುವ ಪಿತೃದೇವತೆಗಳು ಆದಿದೇವನ ಮಕ್ಕಳು.

19016041a ತಾನ್ಯಜಂತಿ ಸ್ಮ ವೈ ಲೋಕಾಃ ಸದೇವಾಸುರಮಾನುಷಾಃ |

19016041c ಸಯಕ್ಷೋರಗಗಂಧರ್ವಾಃ ಸಕಿನ್ನರಮಹೋರಗಾಃ ||

ದೇವ-ಅಸುರ-ಮನುಷ್ಯ-ಯಕ್ಷ-ಉರಗ-ಗಂಧರ್ವ-ಕಿನ್ನರ-ಮಹೋರಗಗಳೊಂದಿಗೆ ಲೋಕವು ಅವರನ್ನೇ ಪೂಜಿಸುತ್ತದೆ.

19016042a ಆಪ್ಯಾಯಿತಾಶ್ಚ ತೇ ಶ್ರಾದ್ಧೇ ಪುನರಾಪ್ಯಾಯಯಂತಿ ಚ |

19016042c ಜಗತ್ಸದೇವಗಂಧರ್ವಮಿತಿ ಬ್ರಹ್ಮಾನುಶಾಸನಮ್ ||

ಅವರನ್ನು ಶ್ರಾದ್ಧದಿಂದ ತೃಪ್ತಿಗೊಳಿಸಿದರೆ ಪುನಃ ಅವರು ದೇವ-ಗಂಧರ್ವರ ಸಹಿತ ಜಗತ್ತನ್ನು ತೃಪ್ತಿಗೊಳಿಸುತ್ತಾರೆ ಎಂದು ಬ್ರಹ್ಮನ ಅನುಶಾಸನವಾಗಿದೆ.

19016043a ತಾನ್ಯಜಸ್ವ ಮಹಾಭಾಗ ಶ್ರಾದ್ಧೈರಗ್ರ್ಯೈರತಂದ್ರಿತಃ |

19016043c ತೇ ತೇ ಶ್ರೇಯೋ ವಿಧಾಸ್ಯಂತಿ ಸರ್ವಕಾಮಫಲಪ್ರದಾಃ ||

ಮಹಾಭಾಗ! ಆಲಸ್ಯವಿಲ್ಲದೇ ಶ್ರೇಷ್ಠ ಶ್ರಾದ್ಧಗಳಿಂದ ಅವರನ್ನು ಪೂಜಿಸು. ಸರ್ವಕಾಮಫಲಗಳನ್ನು ನೀಡುವ ಅವರು ನಿನಗೆ ಶ್ರೇಯಸ್ಸನ್ನು ಕಲ್ಪಿಸುತ್ತಾರೆ.

19016044a ತ್ವಯಾ ಚಾರಾಧ್ಯಮಾನಾಸ್ತೇ ನಾಮಗೋತ್ರಾದಿಕೀರ್ತನೈಃ |

19016044c ಅಸ್ಮಾನಾಪ್ಯಾಯಯಿಷ್ಯಂತಿ ಸ್ವರ್ಗಸ್ಥಾನಪಿ ಭಾರತ ||

ಭಾರತ! ನಾಮ-ಗೋತ್ರಾದಿಗಳ ಕೀರ್ತನೆಯೊಂದಿಗೆ ಅವರನ್ನು ನೀನು ಆರಾಧಿಸಿದರೆ ಅವರು ಸ್ವರ್ಗಸ್ಥರಾಗಿದ್ದರೂ ನಮ್ಮವರನ್ನು ತೃಪ್ತಿಗೊಳಿಸುತ್ತಾರೆ.

19016045a ಮಾರ್ಕಂಡೇಯಸ್ತು ತೇ ಶೇಷಮೇತತ್ಸರ್ವಂ ಪ್ರವಕ್ಷ್ಯತಿ |

19016045c ಏಷ ವೈ ಪಿತೃಭಕ್ತಶ್ಚ ವಿದಿತಾತ್ಮಾ ಚ ಭಾರತ ||

ಭಾರತ! ಉಳಿದುದೆಲ್ಲವನ್ನೂ ಮಾರ್ಕಂಡೇಯನು ನಿನಗೆ ಹೇಳುತ್ತಾನೆ. ಅವನು ಪಿತೃಭಕ್ತ ಮತ್ತು ಆತ್ಮನನ್ನು ತಿಳಿದುಕೊಂಡಿದ್ದಾನೆ.

19016046a ಉಪಸ್ಥಿತಶ್ಚ ಶ್ರಾದ್ಧೇಽದ್ಯ ಮಮೈವಾನುಗ್ರಹಾಯ ವೈ |

19016046c ಏನಂ ಪೃಚ್ಛ ಮಹಾಭಾಗಮಿತ್ಯುಕ್ತ್ವಾಂತರಧೀಯತ ||

ನನಗೆ ಅನುಗ್ರಹಿಸಲೆಂದೇ ಅವನು ಇಂದಿನ ಈ ಶ್ರಾದ್ಧದಲ್ಲಿ ಉಪಸ್ಥಿತನಾಗಿದ್ದಾನೆ. ಮಹಾಭಾಗ! ಅವನನ್ನು ಕೇಳು!” ಹೀಗೆ ಹೇಳಿ ಶಂತನವು ಅಂತರ್ಧಾನನಾದನು.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಶ್ರಾದ್ಧಕಲ್ಪಪ್ರಸಂಗೋ ನಾಮ ಷೋಡಶೋಽಧ್ಯಾಯಃ|

Related image

Comments are closed.