ಹರಿವಂಶ: ಹರಿವಂಶ ಪರ್ವ

೧೫

ಆದಿತ್ಯಸ್ಯ ವಂಶಾನುಕೀರ್ತನಮ್

19015001 ಜನಮೇಜಯ ಉವಾಚ|

19015001a ಸಗರಸ್ಯಾತ್ಮಜಾ ವೀರಾಃ ಕಥಂ ಜಾತಾ ಮಹಾತ್ಮನಃ |

19015001c ವಿಕ್ರಾಂತಾಃ ಷಷ್ಟಿಸಾಹಸ್ರಾ ವಿಧಿನಾ ಕೇನ ವಾ ದ್ವಿಜ ||

ಜನಮೇಜಯನು ಹೇಳಿದನು: “ದ್ವಿಜ! ಸಗರನಿಗೆ ಹೇಗೆ ಅಥವಾ ಯಾವ ವಿಧಾನದಿಂದ ಮಹಾತ್ಮಾ ವಿಕ್ರಾಂತ ಅರವತ್ತು ಸಾವಿರ ಮಕ್ಕಳಾದರು?”

19015002 ವೈಶಂಪಾಯನ ಉವಾಚ|

19015002a ದ್ವೇ ಭಾರ್ಯೇ ಸಗರಸ್ಯಾಸ್ತಾಂ ತಪಸಾ ದಗ್ಧಕಿಲ್ಬಿಷೇ |

19015002c ಜ್ಯೇಷ್ಠಾ ವಿದರ್ಭದುಹಿತಾ ಕೇಶಿನೀ ನಾಮ ವಿಶ್ರುತಾ ||

ವೈಶಂಪಾಯನನು ಹೇಳಿದನು: “ಸಗರನಿಗೆ ತಪಸ್ಸಿನಿಂದ ಪಾಪಗಳನ್ನು ಸುಟ್ಟುಕೊಂಡಿದ್ದ ಇಬ್ಬರು ಭಾರ್ಯೆಯರಿದ್ದರು. ಹಿರಿಯವಳು ವಿದರ್ಭರಾಜನ ಮಗಳು ಕೇಶಿನೀ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಳು.

19015003a ಕನೀಯಸೀ ತು ಯಾ ತಸ್ಯ ಪತ್ನೀ ಪರಮಧರ್ಮಿಣೀ |

19015003c ಅರಿಷ್ಟನೇಮಿದುಹಿತಾ ರೂಪೇಣಾಪ್ರತಿಮಾ ಭುವಿ ||

ಅವನ ಕಿರಿಯ ಪತ್ನಿಯು ಅರಿಷ್ಟನೇಮಿಯ ಮಗಳು ಪರಮಧರ್ಮಿಣೀ ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾಗಿದ್ದಳು.

19015004a ಔರ್ವಸ್ತಾಭ್ಯಾಂ ವರಂ ಪ್ರಾದಾತ್ತಂ ನಿಬೋಧ ಜನಾಧಿಪ |

19015004c ಷಷ್ಠಿಂ ಪುತ್ರಸಹಸ್ರಾಣಿ ಗೃಹ್ಣಾತ್ವೇಕಾ ತಪಸ್ವಿನೀ ||

19015005a ಏಕಂ ವಂಶಧರಂ ತ್ವೇಕಾ ಯಥೇಷ್ಟಂ ವರಯತ್ವಿತಿ |

ಜನಾಧಿಪ! ಔರ್ವನು ಅವರಿಬ್ಬರಿಗೆ ನೀಡಿದ ವರವನ್ನು ಕೇಳು. “ತಪಸ್ವಿನಿ ಒಬ್ಬಳು ಅರವತ್ತು ಸಾವಿರ ಪುತ್ರರನ್ನು ಮತ್ತು ಇನ್ನೊಬ್ಬಳು ಒಬ್ಬನೇ ವಂಶಧರನನ್ನು ಸ್ವೀಕರಿಸಲಿ. ತಮಗಿಷ್ಟವಾದ ವರವನ್ನು ಕೇಳಲಿ” ಎಂದನು.

19015005c ತತ್ರೈಕಾ ಜಗೃಹೇ ಪುತ್ರಾನ್ ಲುಬ್ಧಾ ಶೂರಾನ್ಬಹೂಂಸ್ತಥಾ ||

19015006a ಏಕಂ ವಂಶಧರಂ ತ್ವೇಕಾ ತಥೇತ್ಯಾಹ ಚ ತಾಂ ಮುನಿಃ |

ಅವರಲ್ಲಿ ಲುಬ್ಧಳೋರ್ವಳು ಅನೇಕ ಶೂರಪುತ್ರರನ್ನೂ, ಒಬ್ಬಳು ವಂಶಧರನಾದ ಓರ್ವ ಪುತ್ರನನ್ನೂ ಕೇಳಿದರು. ಮುನಿಯು ಅವರಿಗೆ ಹಾಗೆಯ ಆಗಲಿ ಎಂದನು.

19015006c ಕೇಶಿನ್ಯಸೂತ ಸಗರಾದಸಮಂಜಸಮಾತ್ಮಜಮ್ ||

19015007a ರಾಜಾ ಪಂಚಜನೋ ನಾಮ ಬಭೂವ ಸುಮಹಾಬಲಃ |

19015007c ಇತರಾ ಸುಷುವೇ ತುಂಭೀಂ ಬೀಜಪೂರ್ಣಾಮಿತಿ ಶ್ರುತಿಃ ||

ಸಗರನಿಂದ ಕೇಶಿನಿಯು ಅಸಮಂಜಸನನ್ನು ಮಗನನ್ನಾಗಿ ಪಡೆದಳು. ಅವನು ಮಹಾಬಲ ಪಂಚಜನ ಎಂಬ ಹೆಸರಿನ ರಾಜನಾದನು. ಇನ್ನೊಬ್ಬಳು ಬೀಜಗಳಿಂದ ತುಂಬಿದ ಒಂದು ಕುಂಬಳಕಾಯಿಯನ್ನು ಹೆತ್ತಳೆಂದು ಪ್ರಸಿದ್ಧವಾಗಿದೆ.

19015008a ತತ್ರ ಷಷ್ಠಿಸಹಸ್ರಾಣಿ ಗರ್ಭಾಸ್ತೇ ತಿಲಸಮ್ಮಿತಾಃ |

19015008c ಸಂಬಭೂವುರ್ಯಥಾಕಾಲಂ ವವೃಧುಶ್ಚ ಯಥಾಕ್ರಮಮ್ ||

ಆ ಕುಂಬಳಕಾಯಿಯಲ್ಲಿ ಎಳ್ಳಿನ ಗಾತ್ರದ ಅರವತ್ತು ಸಾವಿರ ಗರ್ಭಗಳಿದ್ದವು. ಯಥಾಕಾಲದಲ್ಲಿ ಮತ್ತು ಯಥಾಕ್ರಮವಾಗಿ ಅವುಗಳು ಬೆಳೆದವು.

19015009a ಘೃತಪೂರ್ಣೇಷು ಕುಂಭೇಷು ತಾನ್ಗರ್ಭಾನ್ನಿದಧೇ ಪಿತಾ |

19015009c ಧಾತ್ರೀಶ್ಚೈಕೈಕಶಃ ಪ್ರಾದಾತ್ತಾವತೀರೇವ ಪೋಷಣೇ ||

ತಂದೆಯು ಆ ಗರ್ಭಗಳನ್ನು ತುಪ್ಪದಿಂದ ತುಂಬಿದ ಕೊಡಗಳಲ್ಲಿ ಇರಿಸಿದನು ಮತ್ತು ಒಂದೊಂದರ ಪೋಷಣೆಗೂ ಒಬ್ಬೊಬ್ಬಳು ಧಾತ್ರಿಯನ್ನು ಇರಿಸಿದನು.

19015010a ತತೋ ದಶಸು ಮಾಸೇಷು ಸಮುತ್ತಸ್ಥುರ್ಯಥಾಸುಖಮ್ |

19015010c ಕುಮಾರಾಸ್ತೇ ಯಥಾಕಾಲಂ ಸಗರಪ್ರೀತಿವರ್ಧನಾಃ ||

ಹತ್ತು ಮಾಸಗಳ ನಂತರ ಯಥಾಕಾಲದಲ್ಲಿ ಯಥಾಸುಖವಾಗಿ ಸಗರನ ಪ್ರೀತಿಯನ್ನು ವರ್ಧಿಸುವ ಮಕ್ಕಳು ಹುಟ್ಟಿದರು.

19015011a ಷಷ್ಟಿಃ ಪುತ್ರಸಹಸ್ರಾಣಿ ತಸ್ಯೈವಮಭವನ್ನೃಪ |

19015011c ಗರ್ಭಾದಲಾಬುಮಧ್ಯಾದ್ವೈ ಜಾತಾನಿ ಪೃಥಿವೀಪತೇ ||

ನೃಪ! ಪೃಥಿವೀಪತೇ! ಹೀಗೆ ಕುಂಬಳಕಾಯಿಯ ಒಳಗಿದ್ದ ಬೀಜಗಳಂತಿದ್ದ ಗರ್ಭದಿಂದ ಸಗರನಿಗೆ ಅರವತ್ತು ಸಾವಿರ ಪುತ್ರರಾದರು.

19015012a ತೇಷಾಂ ನಾರಾಯಣಂ ತೇಜಃ ಪ್ರವಿಷ್ಟಾನಾಂ ಮಹಾತ್ಮನಾಮ್|

19015012c ಏಕಃ ಪಂಚಜನೋ ನಾಮ ಪುತ್ರೋ ರಾಜಾ ಬಭೂವ ಹ ||

ಕಪಿಲ ರೂಪೀ ನಾರಾಯಣನ ತೇಜಸ್ಸಿನಿಂದ ಆ ಮಹಾತ್ಮರು ಭಸ್ಮೀಭೂತರಾದರು. ಪಂಚಜನ ಎಂಬ ಹೆಸರಿನ ಮಗನು ಓರ್ವನೇ ರಾಜನಾದನು.

19015013a ಸುತಃ ಪಂಚಜನಸ್ಯಾಸೀದಂಶುಮಾನ್ನಾಮ ವೀರ್ಯವಾನ್ |

19015013c ದಿಲೀಪಸ್ತನಯಸ್ತಸ್ಯ ಖಟ್ವಾಂಗ ಇತಿ ವಿಶ್ರುತಃ ||

ಪಂಚಜನನಿಗೆ ಅಂಶುಮಾನ್ ಎಂಬ ವೀರ್ಯವಾನ್ ಪುತ್ರನಿದ್ದನು. ಅವನ ಮಗನು ಖಟ್ವಾಂಗ ಎಂದು ವಿಶ್ರುತನಾದ ದಿಲೀಪ.

19015014a ಯೇನ ಸ್ವರ್ಗಾದಿಹಾಗತ್ಯ ಮುಹೂರ್ತಂ ಪ್ರಾಪ್ಯ ಜೀವಿತಮ್ |

19015014c ತ್ರಯೋಽನುಸಂಧಿತಾ ಲೋಕಾ ಬುದ್ಧ್ಯಾ ಸತ್ಯೇನ ಚಾನಘ ||

ಅನಘ! ದಿಲೀಪನು ಒಂದು ಮುಹೂರ್ತಕಾಲದ ಜೀವಿತವನ್ನು ಪಡೆದು ಸ್ವರ್ಗದಿಂದ ಇಲ್ಲಿಗೆ ಬಂದು ಬುದ್ಧಿ-ಸತ್ಯಗಳಿಂದ ಲೋಕಗಳನ್ನು ತತ್ತ್ವತಃ ತಿಳಿದುಕೊಂಡನು.

19015015a ದಿಲೀಪಸ್ಯ ತು ದಾಯಾದೋ ಮಹಾರಾಜೋ ಭಗೀರಥಃ |

19015015c ಯಃ ಸ ಗಂಗಾಂ ಸರಿಚ್ಛ್ರೇಷ್ಠಾಮವಾತಾರಯತ ಪ್ರಭುಃ ||

ದಿಲೀಪನ ಮಗನು ಮಹಾರಾಜ ಪ್ರಭು ಭಗೀರಥ. ಅವನು ಸರಿತಶ್ರೇಷ್ಠೆ ಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಇಳಿಸಿದನು.

19015016a ಕೀರ್ತಿಮಾನ್ಸ ಮಹಾಭಾಗಃ ಶಕ್ರತುಲ್ಯಪರಾಕ್ರಮಃ |

19015016c ಸಮುದ್ರಮಾನಯಚ್ಚೈನಾಂ ದುಹಿತೃತ್ವೇನ ಕಲ್ಪಯತ್ |

19015016e ತಸ್ಮಾದ್ಭಾಗೀರಥೀ ಗಂಗಾ ಕಥ್ಯತೇ ವಂಶಚಿಂತಕೈಃ ||

ಶಕ್ರನ ಸಮಾನ ಪರಾಕ್ರಮಿಯಾಗಿದ್ದ ಆ ಮಹಾಭಾಗ ಕೀರ್ತಿವಂತನು ಗಂಗೆಯನ್ನು ಸಮುದ್ರದವರೆಗೂ ಕೊಂಡೊಯ್ದು ಅವಳನ್ನು ತನ್ನ ಮಗಳನ್ನಾಗಿಸಿಕೊಂಡನು. ಆದುದರಿಂದ ವಂಶಕೀರ್ತನಕರು ಗಂಗೆಯನ್ನು ಭಾಗೀರಥೀ ಎಂದು ಕರೆಯುತ್ತಾರೆ.

19015017a ಭಗೀರಥಸುತೋ ರಾಜಾ ಶ್ರುತ ಇತ್ಯಭಿವಿಶ್ರುತಃ |

19015017c ನಾಭಾಗಸ್ತು ಶ್ರುತಸ್ಯಾಸೀತ್ಪುತ್ರಃ ಪರಮಧಾರ್ಮಿಕಃ ||

ರಾಜಾ ಶ್ರುತನು ಭಗೀರಥನ ಮಗನಾಗಿ ಪ್ರಸಿದ್ಧನಾದನು. ಪರಮಧಾರ್ಮಿಕ ನಾಭಾಗನು ಶ್ರುತನ ಮಗನಾಗಿದ್ದನು.

19015018a ಅಂಬರೀಷಸ್ತು ನಾಭಾಗಿಃ ಸಿಂಧುದ್ವೀಪಪಿತಾಭವತ್ |

19015018c ಅಯುತಾಜಿತ್ತು ದಾಯಾದಃ ಸಿಂಧುದ್ವೀಪಸ್ಯ ವೀರ್ಯವಾನ್ ||

ನಾಭಾಗನ ಪುತ್ರನು ಅಂಬರೀಷ. ಅವನು ಸಿಂಧುದ್ವೀಪದ ಪಿತನಾದನು. ಸಿಂಧುದ್ವೀಪನಿಗೆ ಅಯುತಾಜಿತ್ ಎಂಬ ವೀರ್ಯವಾನ್ ಪುತ್ರನಾದನು.

19015019a ಅಯುತಾಜಿತ್ಸುತಸ್ತ್ವಾಸೀದೃತಪರ್ಣೋ ಮಹಾಯಶಾಃ |

19015019c ದಿವ್ಯಾಕ್ಷಹೃದಯಜ್ಞೋ ವೈ ರಾಜಾ ನಲಸಖೋ ಬಲೀ ||

ಅಯುತಾಜಿತುವಿನ ಮಗನು ಮಹಾಯಶಸ್ವೀ, ದಿವ್ಯ ಅಕ್ಷಯಹೃದಯವನ್ನು ತಿಳಿದಿದ್ದ, ನಲ[1]ನ ಸಖ ಬಲಶಾಲೀ ರಾಜಾ ಋತುಪರ್ಣನಾಗಿದ್ದನು.

19015020a ಋತಪರ್ಣಸುತಸ್ತ್ವಾಸೀದಾರ್ತಪರ್ಣಿರ್ಮಹೀಪತಿಃ |

19015020c ಸುದಾಸಸ್ತಸ್ಯ ತನಯೋ ರಾಜಾ ತ್ವಿಂದ್ರಸಖೋಽಭವತ್ ||

ಋತುಪರ್ಣನ ಪುತ್ರ ಮಹೀಪತಿ ಆರ್ತಪರ್ಣಿಯು. ಅವನ ತನಯನು ರಾಜಾ ಸುದಾಸನು. ಅವನು ಇಂದ್ರನ ಸಖನಾದನು.

19015021a ಸುದಾಸಸ್ಯ ಸುತಸ್ತ್ವಾಸೀತ್ಸೌದಾಸೋ ನಾಮ ಪಾರ್ಥಿವಃ |

19015021c ಖ್ಯಾತಃ ಕಲ್ಮಾಷಪಾದೋ ವೈ ನಾಮ್ನಾ ಮಿತ್ರಸಹಸ್ತಥಾ ||

ಸುದಾಸನ ಮಗ ಸೌದಾಸನೆಂಬ ರಾಜನು ಕಲ್ಮಾಷಪಾದ ಮತ್ತು ಮಿತ್ರಸಹ ಎಂಬ ಹೆಸರುಗಳಿಂದಲೂ ಖ್ಯಾತನಾದನು.

19015022a ಕಲ್ಮಾಷಪಾದಸ್ಯ ಸುತಃ ಸರ್ವಕರ್ಮೇತಿ ವಿಶ್ರುತಃ |

19015022c ಅನರಣ್ಯಸ್ತು ಪುತ್ರೋಽಭೂದ್ವಿಶ್ರುತಃ ಸರ್ವಕರ್ಮಣಃ ||

ಕಲ್ಮಾಷಪಾದನ ಮಗನು ಸರ್ವಕರ್ಮ ಎಂದು ವಿಶ್ರುತನಾದನು. ಸರ್ವಕರ್ಮನ ಮಗನು ಅನರಣ್ಯ ಎಂದು ವಿಶ್ರುತನಾದನು.

19015023a ಅನರಣ್ಯಸುತೋ ನಿಘ್ನೋ ನಿಘ್ನಪುತ್ರೌ ಬಭೂವತುಃ |

19015023c ಅನಮಿತ್ರೋ ರಘುಶ್ಚೈವ ಪಾರ್ಥಿವರ್ಷಭ ಸತ್ತಮೌ ||

ಅನರಣ್ಯನ ಮಗನು ನಿಘ್ನ. ನಿಘ್ನನಿಗೆ ಇಬ್ಬರು ಪಾರ್ಥಿವರ್ಷಭ ಸತ್ತಮ ಪುತ್ರರಾದರು: ಅನಮಿತ್ರ ಮತ್ತು ರಘು.

19015024a ಅನಮಿತ್ರಸ್ಯ ಧರ್ಮಾತ್ಮಾ ವಿದ್ವಾಂದುಲಿದುಹೋಽಭವತ್ |

19015024c ದಿಲೀಪಸ್ತನಯಸ್ತಸ್ಯ ರಾಮಪ್ರಪ್ರಪಿತಾಮಹಃ ||

ಧರ್ಮಾತ್ಮಾ ಅನಮಿತ್ರನಿಗೆ ವಿದ್ವಾನ್ ದುಲಿದುಹನು ಪುತ್ರನಾದನು. ಅವನ ತನಯ ದಿಲೀಪನು ರಾಮನ ವೃದ್ಧ ಪ್ರಪಿತಾಮಹನಾಗಿದ್ದನು.

19015025a ದೀರ್ಘಬಾಹುರ್ದಿಲೀಪಸ್ಯ ರಘುರ್ನಾಮ್ನಾಭವತ್ಸುತಃ |

19015025c ಅಯೋಧ್ಯಾಯಾಂ ಮಹಾರಾಜೋ ರಘುಶ್ಚಾಸೀನ್ಮಹಾಬಲಃ||

ದೀರ್ಘಬಾಹು ದಿಲೀಪನಿಗೆ ರಘು ಎಂಬ ಹೆಸರಿನ ಪುತ್ರನಾದನು. ಮಹಾಬಲಿ ರಘುವು ಅಯೋಧ್ಯೆಯ ಮಹಾರಾಜನಾಗಿದ್ದನು.

19015026a ಅಜಸ್ತು ರಘುತೋ ಜಜ್ಞೇ ಅಜಾದ್ದಶರಥೋಽಭವತ್ |

19015026c ರಾಮೋ ದಶರತಾಜ್ಜಜ್ಞೇ ಧರ್ಮಾತ್ಮಾ ಸುಮಹಾಯಶಾಃ ||

ರಘುವಿನಲ್ಲಿ ಅಜನು ಹುಟ್ಟಿದನು ಮತ್ತು ಅಜನಿಂದ ದಶರಥನು ಹುಟ್ಟಿದನು. ಧರ್ಮಾತ್ಮಾ ಸುಮಹಾಯಶಸ್ವೀ ರಾಮನು ದಶರಥನಿಂದ ಹುಟ್ಟಿದನು

19015027a ರಾಮಸ್ಯ ತನಯೋ ಜಜ್ಞೇ ಕುಶ ಇತ್ಯಭಿವಿಶ್ರುತಃ |

19015027c ಅತಿಥಿಸ್ತು ಕುಶಾಜ್ಜಜ್ಞೇ ನಿಷಧಸ್ತಸ್ಯ ಚಾತ್ಮಜಃ ||

ರಾಮನ ತನಯನಾಗಿ ಕುಶನೆಂದು ವಿಶ್ರುತನಾದವನು ಹುಟ್ಟಿದನು. ಕುಶನಿಂದ ಅತಿಥಿಯು ಹುಟ್ಟಿದನು. ನಿಷಧನು ಅವನ ಮಗನಾದನು.

19015028a ನಿಷಧಸ್ಯ ನಲಃ ಪುತ್ರೋ ನಭಃ ಪುತ್ರೋ ನಲಸ್ಯ ತು |

19015028c ನಭಸ್ಯ ಪುಂಡರೀಕಸ್ತು ಕ್ಷೇಮಧನ್ವಾ ತತಃ ಸ್ಮೃತಃ ||

ನಿಷಧನ ಪುತ್ರನು ನಲ. ನಭನು ನಲನ ಪುತ್ರ. ಪುಂಡರೀಕನು ನಭನ ಮಗ. ಮತ್ತು ಕ್ಷೇಮಧನ್ವನು ನಭನ ಮಗನಾದನು.

19015029a ಕ್ಷೇಮಧನ್ವಸುತಸ್ತ್ವಾಸೀದ್ದೇವಾನೀಕಃ ಪ್ರತಾಪವಾನ್ |

19015029c ಆಸೀದಹೀನಗುರ್ನಾಮ ದೇವಾನೀಕಸುತಃ ಪ್ರಭುಃ ||

ಪ್ರತಾಪವಾನ್ ದೇವಾನೀಕನು ಕ್ಷೇಮಧನ್ವನ ಮಗನಾದನು. ಪ್ರಭು ಅಹೀನಗು ಎಂಬ ಹೆಸರಿನ ಪ್ರಭುವು ದೇವಾನೀಕನ ಮಗನಾದನು.

19015030a ಅಹೀನಗೋಸ್ತು ದಾಯಾದಃ ಸುಧನ್ವಾ ನಾಮ ಪಾರ್ಥಿವಃ |

19015030c ಸುಧನ್ವನಃ ಸುತಶ್ಚೈವ ತತೋ ಜಜ್ಞೇಽನಲೋ ನೃಪಃ ||

ಸುಧನ್ವಾ ಎಂಬ ಹೆಸರಿನ ಪಾರ್ಥಿವನು ಅಹೀನಗುವಿನ ಮಗ. ನೃಪ ಅನಲನು ಸುಧನ್ವನ ಮಗನಾಗಿ ಜನಿಸಿದನು.

19015031a ಉಕ್ಥೋ ನಾಮ ಸ ಧರ್ಮಾತ್ಮಾನಲಪುತ್ರೋ ಬಭೂವ ಹ |

19015031c ವಜ್ರನಾಭಃ ಸುತಸ್ತಸ್ಯ ಉಕ್ಥಸ್ಯ ಚ ಮಹಾತ್ಮನಃ ||

ಉಕ್ಥ ಎಂಬ ಹೆಸರಿನ ಧರ್ಮಾತ್ಮನು ಅನಲನ ಮಗನಾದನು. ಮಹಾತ್ಮ ವಜ್ರನಾಭನು ಉಕ್ಥನ ಮಗ.

19015032a ಶಂಖಸ್ತಸ್ಯ ಸುತೋ ವಿದ್ವಾನ್ವ್ಯುಷಿತಾಶ್ವ ಇತಿ ಶ್ರುತಃ |

19015032c ಪುಷ್ಪಸ್ತಸ್ಯ ಸುತೋ ವಿದ್ವಾನರ್ಥಸಿದ್ಧಿಸ್ತು ತತ್ಸುತಃ ||

ವಜ್ರನಾಭನಿಗೆ ಶಂಖನೆಂಬ ಮಗನಾದನು. ಅವನು ವ್ಯುಷಿತಾಶ್ವ ಎಂಬ ಹೆಸರಿನಿಂದಲೂ ಪ್ರಸಿದ್ಧನಾದನು. ಅವನ ಮಗನು ವಿದ್ವಾನ್ ಪುಷ್ಪ. ಅರ್ಥಸಿದ್ಧಿಯು ಅವನ ಮಗ.

19015033a ಸುದರ್ಶನಃ ಸುತಸ್ತಸ್ಯ ಅಗ್ನಿವರ್ಣಃ ಸುದರ್ಶನಾತ್ |

19015033c ಅಗ್ನಿವರ್ಣಸ್ಯ ಶೀಘ್ರಸ್ತು ಶೀಘ್ರಸ್ಯ ತು ಮರುಃ ಸುತಃ ||

ಅರ್ಥಸಿದ್ಧಿಯ ಮಗ ಸುದರ್ಶನ. ಅಗ್ನಿವರ್ಣನು ಸುದರ್ಶನನ ಮಗ. ಅಗ್ನಿವರ್ಣನ ಮಗ ಶೀಘ್ರ. ಶೀಘ್ರನ ಮಗ ಮರು.

19015034a ಮರುಸ್ತು ಯೋಗಮಾಸ್ಥಾಯ ಕಲಾಪದ್ವೀಪಮಾಸ್ಥಿತಃ |

19015034c ತಸ್ಯಾಸೀದ್ವಿಶ್ರುತವತಃ ಪುತ್ರೋ ರಾಜ ಬೃಹದ್ಬಲಃ ||

ಮರುವು ಯೋಗವನ್ನಾಶ್ರಯಿಸಿ ಕಲಾಪದ್ವೀಪದಲ್ಲಿ ಇರತೊಡಗಿದನು. ಅವನಿಗೆ ವಿಶ್ರುತನಾದ ರಾಜ ಬೃಹದ್ಬಲನು ಪುತ್ರನಾದನು.

19015035a ನಲೌ ದ್ವಾವೇವ ವಿಖ್ಯಾತೌ ಪುರಾಣೇ ಭರತರ್ಷಭ |

19015035c ವೀರಸೇನಾತ್ಮಜಶ್ಚೈವ ಯಶ್ಚೇಕ್ಷ್ವಾಕುಕುಲೋದ್ವಹಃ ||

ಭರತರ್ಷಭ! ಪುರಾಣಗಳಲ್ಲಿ ಇಬ್ಬರು ನಲರು ವಿಖ್ಯಾತರಾಗಿದ್ದರು: ವೀರಸೇನನ ಮಗ ನಲ ಮತ್ತು ಇಕ್ಷ್ವಾಕುಕುಲದಲ್ಲಿ ಹುಟ್ಟಿದ ನಿಷಧನ ಮಗ ನಲ.

19015036a ಇಕ್ಷ್ವಾಕುವಂಶಪ್ರಭವಾಃ ಪ್ರಾಧಾಣ್ಯೇನೇಹ ಕೀರ್ತಿತಾಃ |

19015036c ಏತೇ ವಿವಸ್ವತೋ ವಂಶೇ ರಾಜಾನೋ ಭೂರಿತೇಜಸಃ ||

ಇಕ್ಷ್ವಾಕುವಂಶದಲ್ಲಿ ಹುಟ್ಟಿದ ಪ್ರಧಾನರನ್ನು ಇಲ್ಲಿ ವರ್ಣಿಸಿದ್ದೇನೆ. ಈ ಭೂರಿತೇಜಸ ರಾಜರು ವಿವಸ್ವತನ ವಂಶದಲ್ಲಿಯೇ ಹುಟ್ಟಿದವರು.

19015037a ಪಠನ್ಸಮ್ಯಗಿಮಾಂ ಸೃಷ್ಟಿಮಾದಿತ್ಯಸ್ಯ ವಿವಸ್ವತಃ |

19015037c ಶ್ರಾದ್ಧದೇವಸ್ಯ ದೇವಸ್ಯ ಪ್ರಜಾನಾಂ ಪುಷ್ಟಿದಸ್ಯ ಚ ||

19015038a ಪ್ರಜಾವಾನೇತಿ ಸಾಯುಜ್ಯಮಾದಿತ್ಯಸ್ಯ ವಿವಸ್ವತಃ |

19015038c ವಿಪಾಪ್ಮಾ ವಿರಜಾಶ್ಚೈವ ಆಯುಷ್ಮಾಂಶ್ಚ ಭವತ್ಯುತ ||

ಆದಿತ್ಯ ವಿವಸ್ವತನ ಸೃಷ್ಟಿ, ಪ್ರಜೆಗಳಿಗೆ ಪುಷ್ಟಿಯನ್ನೀಯುವ ಶ್ರಾದ್ಧದೇವ ದೇವನ ಸೃಷ್ಟಿ ಇವುಗಳನ್ನು ಪಠಣಮಾಡುವವನು ಸಂತಾನಯುಕ್ತನಾಗುತ್ತಾನೆ ಮತ್ತು ಆದಿತ್ಯನ ಸಾಯುಜ್ಯವನ್ನು ಪಡೆಯುತ್ತಾನೆ. ಅವನು ಪಾಪಗಳನ್ನು ಕಳೆದುಕೊಳ್ಳುತ್ತಾನೆ. ರಜೋಗುಣರಹಿತನಾಗಿ ಆಯುಷ್ಮಂತನೂ ಆಗುತ್ತಾನೆ.”

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಆದಿತ್ಯಸ್ಯ ವಂಶಾನುಕೀರ್ತನಂ ನಾಮ ಪಂಚದಶೋಽಧ್ಯಾಯಃ|

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಆದಿತ್ಯವಂಶಾನುಕೀರ್ತನ ಎನ್ನುವ ಹದಿನೈದನೆಯ ಅಧ್ಯಾಯವು.Related image

[1] ವೀರಸೇನನ ಮಗ ನಲ.

Comments are closed.