Harivamsha: Chapter 30

ಹರಿವಂಶ: ಹರಿವಂಶ ಪರ್ವ

ತ್ರಿಂಶೋಽಧ್ಯಾಯಃ

ಯಯಾತಿಚರಿತ್ರಕಥನಮ್

ನಹುಷ ಮತ್ತು ಯಯಾತಿಯರ ವಂಶವರ್ಣನೆ ಮತ್ತು ಯಯಾತಿಯ ಚರಿತ್ರೆ.

19030001 ವೈಶಂಪಾಯನ ಉವಾಚ |

19030001a ಉತ್ಪನ್ನಾಃ ಪಿತೃಕನ್ಯಾಯಾಂ ವಿರಜಾಯಾಂ ಮಹೌಜಸಃ |

19030001c ನಹುಷಸ್ಯ ತು ದಾಯಾದಾಃ ಷಡಿಂದ್ರೋಪಮತೇಜಸಃ ||

ವೈಶಂಪಾಯನನು ಹೇಳಿದನು: “ನಹುಷನಿಗೆ ಪಿತೃಕನ್ಯೆ ವಿರಜೆಯಲ್ಲಿ ಮಹೌಜಸರಾದ ಇಂದ್ರೋಪಮ ತೇಜಸ್ವೀ ಆರು ಪುತ್ರರು ಜನಿಸಿದರು.

19030002a ಯತಿರ್ಯಯಾತಿಃ ಸಂಯಾತಿರಾಯತಿಃ ಪಾಂಚಿಕೋ ಭವಃ |

19030002c ಸುಯಾತಿಃ ಷಷ್ಠಸ್ತೇಷಾಂ ವೈ ಯಯಾತಿಃ ಪಾರ್ಥಿವೋಽಭವತ್ |

19030002e ಯತಿರ್ಜ್ಯೇಷ್ಠಸ್ತು ತೇಷಾಂ ವೈ ಯಯಾತಿಸ್ತು ತತಃ ಪರಮ್ ||

ಯತಿ, ಯಯಾತಿ, ಸಂಯಾತಿ, ಆಯತಿ, ಐದನೆಯವನು ಭವ ಮತ್ತು ಆರನೆಯವನು ಸುಯಾತಿ. ಅವರಲ್ಲಿ ಯಯಾತಿಯು ಪಾರ್ಥಿವನಾದನು.

19030003a ಕಾಕುತ್ಸ್ಥಕನ್ಯಾಂ ಗಾಂ ನಾಮ ಲೇಭೇ ಪರಮಧಾರ್ಮಿಕಃ |

19030003c ಯತಿಸ್ತು ಮೋಕ್ಷಮಾಸ್ಥಾಯ ಬ್ರಹ್ಮಭೂತೋಽಭವನ್ಮುನಿಃ ||

ಪರಮಧಾರ್ಮಿಕ ಯತಿಯಾದರೋ ಕಾಕುತ್ಸ್ಥ್ಯನ ಕನ್ಯೆ ಗೋ ಎಂಬ ಹೆಸರಿನವಳನ್ನು ಪತ್ನಿಯನ್ನಾಗಿ ಪಡೆದನು. ಆದರೆ ಅವನು ಮೋಕ್ಷಮಾರ್ಗವನ್ನು ಅನುಸರಿಸಿ ಬ್ರಹ್ಮಭೂತ ಮುನಿಯಾದನು.

19030004a ತೇಷಾಂ ಯಯಾತಿಃ ಪಂಚಾನಾಂ ವಿಜಿತ್ಯ ವಸುಧಾಮಿಮಾಮ್ |

19030004c ದೇವಯಾನೀಮುಶನಸಃ ಸುತಾಂ ಭಾರ್ಯಾಮವಾಪ ಸಃ  |

19030004e ಶರ್ಮಿಷ್ಠಾಮಾಸುರೀಂ ಚೈವ ತನಯಾಂ ವೃಷಪರ್ವಣಃ ||

ಉಳಿದ ಐವರಲ್ಲಿ ಯಯಾತಿಯು ಈ ವಸುಧೆಯನ್ನು ಗೆದ್ದು ಉಶನಸನ ಸುತೆ ದೇವಯಾನಿ ಮತ್ತು ಅಸುರ ವೃಷಪರ್ವಣನ ಮಗಳು ಶರ್ಮಿಷ್ಠೆಯನ್ನು ಪತ್ನಿಯರನ್ನಾಗಿ ಪಡೆದುಕೊಂಡನು.

19030005a ಯದುಂ ಚ ತುರ್ವಸುಂ ಚೈವ ದೇವಯಾನೀ ವ್ಯಜಾಯತ |

19030005c ದ್ರುಹ್ಯುಂ ಚಾನುಂ ಚ ಪೂರುಂ ಚ ಶರ್ಮಿಷ್ಠಾ ವಾರ್ಷಪರ್ವಣೀ ||

ಯದು ಮತ್ತು ತುರ್ವಸು ಇವರಿಬ್ಬರೂ ದೇವಯಾನಿಯಲ್ಲಿ ಹುಟ್ಟಿದರು. ದ್ರುಹ್ಯು, ಅನು, ಮತ್ತು ಪೂರು ಇವರು ವಾರ್ಷಪರ್ವಣಿ ಶರ್ಮಿಷ್ಠೆಯಲ್ಲಿ ಹುಟ್ಟಿದರು.

19030006a ತಸ್ಮೈ ಶಕ್ರೋ ದದೌ ಪ್ರೀತೋ ರಥಂ ಪರಮಭಾಸ್ವರಮ್ |

19030006c ಅಸಂಗಂ ಕಾಂಚನಂ ದಿವ್ಯಂ ದಿವ್ಯೈಃ ಪರಮವಾಜಿಭಿಃ ||

19030007a ಯುಕ್ತಂ ಮನೋಜವೈಃ ಶುಭ್ರೈರ್ಯೇನ ಭಾರ್ಯಾಮುವಾಹ ಸಃ |

19030007c ಸ ತೇನ ರಥಮುಖ್ಯೇನ ಷಡ್ರಾತ್ರೇನಾಜಯನ್ಮಹೀಮ್ |

19030007e ಯಯಾತಿರ್ಯುಧಿ ದುರ್ಧರ್ಷಸ್ತಥಾ ದೇವಾನ್ಸವಾಸವಾನ್ ||

ಯಯಾತಿಯ ಮೇಲೆ ಪ್ರೀತನಾಗಿ ಶಕ್ರನು ಅವನಿಗೆ ಪರಮಕಾಂತಿಯಿದ್ದ ರಥವನ್ನು ನೀಡಿದನು. ಅದಕ್ಕೆ ಮನಸಮಾನ ವೇಗಶಾಲೀ ದಿವ್ಯ ಶ್ವೇತವರ್ಣದ ಉತ್ತಮ ಅಶ್ವಗಳನ್ನು ಕಟ್ಟಲಾಗಿತ್ತು. ಆ ದಿವ್ಯರಥವು ಸುವರ್ಣದಿಂದ ಮಾಡಲ್ಪಟ್ಟಿತ್ತು. ಅದರ ಚಲನೆಯನ್ನು ಎಲ್ಲಿಯೂ ತಡೆಯಲಾಗುತ್ತಿರಲಿಲ್ಲ. ಅದೇ ರಥದಿಂದ ಅವನು ತನ್ನ ಪತ್ನಿಯನ್ನು ಏರಿಸಿಕೊಂಡು ಬಂದಿದ್ದನು. ಆ ಶ್ರೇಷ್ಠರಥದಿಂದ ದುರ್ಧರ್ಷ ರಾಜ ಯಾಯಾತಿಯು ಆರು ರಾತ್ರಿಗಳಲ್ಲಿಯೇ ಸಂಪೂರ್ಣ ಪೃಥ್ವೀ, ದೇವತೆಗಳು ಮತ್ತು ದಾನವರನ್ನು ಗೆದ್ದಿದ್ದನು.

19030008a ಸ ರಥಃ ಪೌರವಾಣಾಂ ತು ಸರ್ವೇಷಾಮಭವತ್ತದಾ |

19030008c ಯಾವತ್ತು ವಸುನಾಮ್ನೋ ವೈ ಕೌರವಾಜ್ಜನಮೇಜಯ ||

ಜನಮೇಜಯ! ಕುರುವಂಶೀ ರಾಜಾ ವಸುವಿನವರೆಗೆ ಎಲ್ಲ ಪೌರವ ನರೇಶರಲ್ಲಿಯೂ ಆ ರಥವು ಪರಂಪರಾಗತವಾಗಿತ್ತು ಎಂದು ವಿದ್ಯಮಾನವಿದೆ.

19030009a ಕುರೋಃ ಪುತ್ರಸ್ಯ ರಾಜೇಂದ್ರ ರಾಜ್ಞಃ ಪಾರೀಕ್ಷಿತಸ್ಯ ಹ |

19030009c ಜಗಾಮ ಸ ರಥೋ ನಾಶಂ ಶಾಪಾದ್ಗಾರ್ಗ್ಯಸ್ಯ ಧೀಮತಃ ||

ರಾಜೇಂದ್ರ! ಕುರುವಿನ ಪುತ್ರ ರಾಜಾ ಪರಿಕ್ಷಿತನ ಕುಮಾರ ಇಂದ್ರೋತ ಜನಮೇಜಯನಿಗೆ ಬುದ್ಧಿಮಾನ್ ಗಾರ್ಗ್ಯನ ಶಾಪದಿಂದಾಗಿ ಆ ರಥವು ನಷ್ಟವಾಯಿತು.

19030010a ಗರ್ಗ್ಯಸ್ಯ ಹಿ ಸುತಂ ಬಾಲಂ ಸ ರಾಜಾ ಜನಮೇಜಯಃ |

19030010c ವಾಕ್ಛೂರಂ ಹಿಂಸಯಾಮಾಸ ಬ್ರಹ್ಮಹತ್ಯಾಮವಾಪ ಸಃ ||

ಗರ್ಗ್ಯನ ಮಗ ವಾಕ್ ಶೂರ ಬಾಲಕನನ್ನು ರಾಜಾ ಇಂದ್ರೋತ ಜನಮೇಜಯನು ಕೊಂದುದರಿಂದ ಬ್ರಹ್ಮಹತ್ಯೆಯನ್ನು ಪಡೆದುಕೊಂಡನು.

19030011a ಸ ಲೋಹಗಂಧೀ ರಾಜರ್ಷಿಃ ಪರಿಧಾವನ್ನಿತಸ್ತತಃ |

19030011c ಪೌರಜಾನಪದೈಸ್ತ್ಯಕ್ತೋ ನ ಲೇಭೇ ಶರ್ಮ ಕರ್ಹಿಚಿತ್ ||

ಪೌರಜಾನಪದರಿಂದ ತ್ಯಕ್ತನಾದ ಲೋಹದ ವಾಸನೆಯನ್ನು ಹೊಂದಿದ್ದ ಆ ರಾಜರ್ಷಿಯು ಅಲ್ಲಿ-ಇಲ್ಲಿ ತಿರುಗುತ್ತಿದ್ದನು. ಎಲ್ಲಿಯೂ ಅವನಿಗೆ ಶಾಂತಿಯು ದೊರಕಲಿಲ್ಲ.

19030012a ತತಃ ಸ ದುಃಖಸಂತಪ್ತೋ ನಾಲಭತ್ಸಂವಿದಂ ಕ್ವಚಿತ್ |

19030012c ಇಂದ್ರೋತಃ ಶೌನಕಂ ರಾಜಾ ಶರಣಂ ಪ್ರತ್ಯಪದ್ಯತ ||

ಎಲ್ಲಿಯೂ ಶಾಂತಿಯು ಸಿಗದೇ ದುಃಖಸಂತಪ್ತನಾಗಿದ್ದ ರಾಜಾ ಇಂದ್ರೋತನು ಶೌನಕನ ಶರಣು ಹೊಕ್ಕನು.

19030013a ಯಾಜಯಾಮಾಸ ಚೇಂದ್ರೋತಃ ಶೌನಕೋ ಜನಮೇಜಯಮ್|

19030013c ಅಶ್ವಮೇಧೇನ ರಾಜಾನಂ ಪಾವನಾರ್ಥಂ ದ್ವಿಜೋತ್ತಮಃ ||

ಶೌನಕನು ಅವನನ್ನು ಪವಿತ್ರಗೊಳಿಸಲು ರಾಜಾ ಇಂದ್ರೋತ ಜನಮೇಜಯನಿಂದ ಅಶ್ವಮೇಧವನ್ನು ನಡೆಸಿದನು.

19030014a ಸ ಲೋಹಗಂಧೋ ವ್ಯನಶತ್ತಸ್ಯಾವಭೃಥಮೇತ್ಯ ಹ |

19030014c ಸ ಚ ದಿವ್ಯೋ ರಥೋ ರಾಜನ್ವಸೋಶ್ಚೇದಿಪತೇಸ್ತದಾ |

19030014e ದತ್ತಃ ಶಕ್ರೇಣ ತುಷ್ಟೇನ ಲೇಭೇ ತಸ್ಮಾದ್ಬೃಹದ್ರಥಃ ||

ಯಜ್ಞದ ಅವಭೃತಸ್ನಾನದಿಂದ ಇಂದ್ರೋತನು ತನ್ನ ಲೋಹದ ವಾಸನೆಯನ್ನು ಕಳೆದುಕೊಂಡನು. ರಾಜನ್! ಆ ದಿವ್ಯರಥವನ್ನು ಇಂದ್ರನು ಪ್ರೀತನಾಗಿ ಚೇದಿಪತಿ ವಸುವಿಗೆ ಕೊಟ್ಟನು. ಅವನಿಂದ ಆ ರಥವನ್ನು ಬೃಹದ್ರಥನು ಪಡೆದುಕೊಂಡನು.

19030015a ಬೃಹದ್ರಥಾತ್ಕ್ರಮೇಣೈವ ಗತೋ ಬಾರ್ಹದ್ರಥಮ್ ನೃಪಮ್ |

19030015c ತತೋ ಹತ್ವಾ ಜರಾಸಂಧಂ ಭೀಮಸ್ತಂ ರಥಮುತ್ತಮಮ್ ||

19030016a ಪ್ರದದೌ ವಾಸುದೇವಾಯ ಪ್ರೀತ್ಯಾ ಕೌರವನಂದನಃ |

ಕ್ರಮೇಣವಾಗಿ ಬೃಹದ್ರಥನಿಂದ ಆ ರಥವು ಅವನ ಮಗ ನೃಪ ಜರಾಸಂಧನಿಗೆ ದೊರೆಯಿತು. ಅನಂತರ ಕೌರವನಂದನ ಭೀಮನು ಜರಾಸಂಧನನ್ನು ಸಂಹರಿಸಿ ಆ ಉತ್ತಮ ರಥವನ್ನು ಪ್ರೀತಿಯಿಂದ ವಾಸುದೇವನಿಗೆ ನೀಡಿದನು.

19030016c ಸಪ್ತದ್ವೀಪಾಂ ಯಯಾತಿಸ್ತು ಜಿತ್ವಾ ಪೃಥ್ವೀಂ ಸಸಾಗರಾಮ್ ||

19030017a ವ್ಯಭಜತ್ಪಂಚಧಾ ರಾಜನ್ಪುತ್ರಾಣಾಂ ನಾಹುಷಸ್ತದಾ |

ನಾಹುಷ ಯಯಾತಿಯಾದರೋ ಸಾಗರಗಳೊಂದಿಗೆ ಪೃಥ್ವಿಯ ಸಪ್ತದ್ವೀಪಗಳನ್ನೂ ಗೆದ್ದು ಐವರು ರಾಜಪುತ್ರರಲ್ಲಿ ಅದನ್ನು ವಿಭಜಿಸಿದನು.

19030017c ದಿಶಿ ದಕ್ಷಿಣಪೂರ್ವಸ್ಯಾಂ ತುರ್ವಸುಂ ಮತಿಮಾನ್ನೃಪಃ ||

19030018a ಪ್ರತೀಚ್ಯಾಮುತ್ತರಸ್ಯಾಂ ಚ ದ್ರುಹ್ಯುಂ ಚಾನುಂ ಚ ನಾಹುಷಃ |

19030018c ದಿಶಿ ಪೂರ್ವೋತ್ತರಸ್ಯಾಂ ವೈ ಯದುಂ ಜ್ಯೇಷ್ಠಂ ನ್ಯಯೋಜಯತ್ ||

ಆ ಮತಿಮಾನ್ ನೃಪ ನಾಹುಷನು ದಕ್ಷಿಣ-ಪೂರ್ವಭಾಗದಲ್ಲಿ ತುರ್ವಸುವನ್ನು, ಪೂರ್ವದಲ್ಲಿ ದ್ರುಹ್ಯುವವನ್ನು, ಉತ್ತರದಲ್ಲಿ ಅನುವನ್ನು ಮತ್ತು ಪೂರ್ವೋತ್ತರ ದಿಕ್ಕಿನಲ್ಲಿ ಜ್ಯೇಷ್ಠ ಯದುವನ್ನು ನಿಯೋಜಿಸಿದನು.

19030019a ಮಧ್ಯೇ ಪೂರುಂ ಚ ರಾಜಾನಮಭ್ಯಷಿಂಚತ ನಾಹುಷಃ |

19030019c ತೈರಿಯಂ ಪೃಥಿವೀ ಸರ್ವಾ ಸಪ್ತದ್ವೀಪಾ ಸಪತ್ತನಾ ||

19030020a ಯಥಾಪ್ರದೇಶಮದ್ಯಾಪಿ ಧರ್ಮೇಣ ಪ್ರತಿಪಾಲ್ಯತೇ |

19030020c ಪ್ರಜಾಸ್ತೇಷಾಂ ಪುರಸ್ತಾತ್ತು ವಕ್ಷ್ಯಾಮಿ ನೃಪಸತ್ತಮ ||

ನಾಹುಷನು ಮಧ್ಯದಲ್ಲಿ ಪುರುವನ್ನು ರಾಜನನ್ನಾಗಿ ಅಭಿಷೇಕಿಸಿದನು. ಈಗಲೂ ಕೂಡ ಎಲ್ಲ ಸಪ್ತದ್ವೀಪಗಳು ಮತ್ತು ಪಟ್ಟಣಗಳೊಂದಿಗೆ ಅವರವರ ಪ್ರದೇಶಗಳನ್ನು ಅವರು ಮತ್ತು ಅವರ ವಂಶದವರು ಧರ್ಮದಿಂದ ಪ್ರತಿಪಾಲಿಸುತ್ತಿದ್ದಾರೆ. ನೃಪಸತ್ತಮ! ಈಗ ಅವರ ಮಕ್ಕಳ ಕುರಿತು ಹೇಳುತ್ತೇನೆ.

19030021a ಧನುರ್ನ್ಯಸ್ಯ ಪೃಷತ್ಕಾಂಶ್ಚ ಪಂಚಭಿಃ ಪುರುಷರ್ಷಭೈಃ |

19030021c ಜರಾವಾನಭವದ್ರಾಜಾ ಭಾರಮಾವೇಶ್ಯ ಬಂಧುಷು |

19030021e ನಿಃಕ್ಷಿಪ್ತಶಸ್ತ್ರಃ ಪೃಥಿವೀಂ ನಿರೀಕ್ಷ್ಯ ಪೃಥಿವೀಪತಿಃ ||

19030022a ಪ್ರೀತಿಮಾನಭವದ್ರಾಜಾ ಯಯಾತಿರಪರಾಜಿತಃ |

19030022c ಏವಂ ವಿಭಜ್ಯ ಪೃಥಿವೀಂ ಯಯಾತಿರ್ಯದುಮಬ್ರವೀತ್ ||

ಈ ಐವರು ಪುರುಷರ್ಷಭರಿಂದ ಕೃತಕೃತ್ಯನಾದ ರಾಜನು ರಾಜ್ಯಭಾರವನ್ನು ಬಂಧುಗಳಿಗೆ ವಹಿಸಿ, ಧನುಸ್ಸು-ಬಾಣಗಳನ್ನು ಕೆಳಗಿಟ್ಟು ಮುದುಕನಾದನು. ಅಪರಾಜಿತ ರಾಜಾ ಪೃಥಿವೀಪತಿ ಯಯಾತಿಯು ಶಸ್ತ್ರಗಳನ್ನು ಕೆಳಗಿಟ್ಟು ಪೃಥ್ವಿಯನ್ನು ನೋಡಿ ಸಂತುಷ್ಟನಾದನು. ಈ ರೀತಿ ಪೃಥ್ವಿಯನ್ನು ವಿಭಜಿಸಿ ಯಯಾತಿಯು ಯದುವಿಗೆ ಹೇಳಿದನು:

19030023a ಜರಾಂ ಮೇ ಪ್ರತಿಗೃಹ್ಣೀಷ್ವ ಪುತ್ರ ಕೃತ್ಯಾಂತರೇಣ ವೈ |

19030023c ತರುಣಸ್ತವ ರೂಪೇಣ ಚರೇಯಂ ಪೃಥಿವೀಮಿಮಾಮ್ |

19030023e ಜರಾಂ ತ್ವಯಿ ಸಮಾಧಾಯ ತಂ ಯದುಃ ಪ್ರತ್ಯುವಾಚ ಹ ||

“ಪುತ್ರ! ನನ್ನದೊಂದು ಕಾರ್ಯಕ್ಕಾಗಿ ನನ್ನ ಈ ಮುಪ್ಪನ್ನು ಸ್ವೀಕರಿಸು. ಮುಪ್ಪನ್ನು ನಿನ್ನಲ್ಲಿ ಇರಿಸಿ, ನಿನ್ನ ತರುಣ ರೂಪದಿಂದ ನಾನು ಈ ಪೃಥ್ವಿಯಲ್ಲಿ ಸಂಚರಿಸುತ್ತೇನೆ.” ಯದುವು ಅವನಿಗೆ ಉತ್ತರಿಸಿದನು:

19030024a ಅನಿರ್ದಿಷ್ಟಾ ಮಯಾ ಭಿಕ್ಷಾ ಬ್ರಾಹ್ಮಣಸ್ಯ ಪ್ರತಿಶ್ರುತಾ |

19030024c ಅನಪಾಕೃತ್ಯ ತಾಂ ರಾಜನ್ನ ಗೃಹೀಷ್ಯಾಮಿ ತೇ ಜರಾಮ್ ||

“ರಾಜನ್! ನಾನು ಓರ್ವ ಬ್ರಾಹ್ಮಣನಿಗೆ ಅವನು ಕೇಳಿದ ಭಿಕ್ಷೆಯನ್ನು ನೀಡುವ ಪ್ರತಿಜ್ಞೆಯನ್ನು ಮಾಡಿದ್ದೇನೆ. ಇದೂವರೆಗೆ ಅವನು ತನಗೆ ಇದು ಬೇಕು ಎನ್ನುವುದನ್ನು ಸ್ಪಷ್ಟವಾಗಿ ನನ್ನಲ್ಲಿ ಹೇಳಿಲ್ಲ. ಎಲ್ಲಿಯವರೆಗೆ ಅವನ ಭಿಕ್ಷೆಯ ಋಣವನ್ನು ತೀರಿಸುವುದಿಲ್ಲವೋ ಅಲ್ಲಿಯವರೆಗೆ ನಿನ್ನ ಮುಪ್ಪನ್ನು ನಾನು ಸ್ವೀಕರಿಸಲಾರೆ.

19030025a ಜರಾಯಾಂ ಬಹವೋ ದೋಷಾಃ ಪಾನಭೋಜನಕಾರಿತಾಃ |

19030025c ತಸ್ಮಾಜ್ಜರಾಂ ನ ತೇ ರಾಜನ್ಗ್ರಹೀತುಮಹಮುತ್ಸಹೇ ||

ರಾಜನ್! ಮುಪ್ಪಿನಲ್ಲಿ ಪಾನ-ಭೋಜನಸಂಬಂಧೀ ಅನೇಕ ದೋಷಗಳಿವೆ. ಆದುದರಿಂದ ನಾನು ನಿನ್ನ ಮುಪ್ಪನ್ನು ಸ್ವೀಕರಿಸಲು ಬಯಸುವುದಿಲ್ಲ.

19030026a ಸಂತಿ ತೇ ಬಹವಃ ಪುತ್ರಾಃ ಮತ್ತಃ ಪ್ರಿಯತರಾ ನೃಪ |

19030026c ಪ್ರತಿಗ್ರಹೀತುಂ ಧರ್ಮಜ್ಞ ಪುತ್ರಮನ್ಯಂ ವೃಣೀಷ್ವ ವೈ ||

ನೃಪ! ನಿನಗೆ ನನಗಿಂತಲೂ ಪ್ರಿಯತಮರಾದ ಅನೇಕ ಪುತ್ರರಿದ್ದಾರೆ. ಧರ್ಜಜ್ಞ! ನಿನ್ನ ಮುಪ್ಪನ್ನು ಸ್ವೀಕರಿಸುವ ಬೇರೆ ಯಾವ ಪುತ್ರನನ್ನಾದರೂ ಆರಿಸಿಕೋ!”

19030027a ಸ ಏವಮುಕ್ತೋ ಯದುನಾ ರಾಜಾ ಕೋಪಸಮನ್ವಿತಃ |

19030027c ಉವಾಚ ವದತಾಂ ಶ್ರೇಷ್ಠೋ ಯಯಾತಿರ್ಗರ್ಹಯನ್ಸುತಮ್||

ಯದುವು ಹಾಗೆ ಹೇಳಲು ಮಾತನಾಡುವವರಲ್ಲಿ ಶ್ರೇಷ್ಠ ರಾಜ ಯಯಾತಿಯು ಕೋಪಸಮನ್ವಿತನಾಗಿ ಮಗನನ್ನು ಬೆದರಿಸುತ್ತಾ ಹೀಗೆ ಹೇಳಿದನು:

19030028a ಕ ಆಶ್ರಯಸ್ತವಾನ್ಯೋಽಸ್ತಿ ಕೋ ವಾ ಧರ್ಮೋ ವಿಧೀಯತೇ |

19030028c ಮಾಮನಾದೃತ್ಯ ದುರ್ಬುದ್ಧೇ ಯದಹಂ ತವ ದೇಶಿಕಃ ||

“ದುರ್ಬುದ್ಧೇ! ನಿನ್ನ ಗುರುವಾದ ನನ್ನನ್ನು ಅನಾದರಿಸಿದ ನಿನಗೆ ಅನ್ಯ ಆಶ್ರಯವಾಗಿ ಯಾರಿದ್ದಾರೆ? ಅಥವಾ ನೀನು ಯಾವ ಧರ್ಮವನ್ನು ತಿಳಿದಿದ್ದೀಯೆ?”

19030029a ಏವಮುಕ್ತ್ವಾ ಯದುಂ ತಾತ ಶಶಾಪೈನಂ ಸ ಮನ್ಯುಮಾನ್ |

19030029c ಅರಾಜ್ಯಾ ತೇ ಪ್ರಜಾ ಮೂಢ ಭವಿತ್ರೀತಿ ನರಾಧಮ ||

ಹೀಗೆ ಹೇಳಿ ಕುಪಿತನಾದ ಅವನು ಯದುವಿಗೆ “ನರಾಧಮ! ಮೂಢ! ನಿನ್ನ ಮಕ್ಕಳು ಸದಾ ರಾಜ್ಯದಿಂದ ವಂಚಿತರಾಗಿರುತ್ತಾರೆ!” ಎಂದು ಶಾಪವನ್ನಿತ್ತನು.

19030030a ಸ ತುರ್ವಸುಂ ಚ ದ್ರುಹ್ಯುಂ ಚಾಪ್ಯನುಂ ಚ ಭರತರ್ಷಭ |

19030030c ಏವಮೇವಾಬ್ರವೀದ್ರಾಜಾ ಪ್ರತ್ಯಾಖ್ಯಾತಶ್ಚ ತೈರಪಿ ||

19030031a ಶಶಾಪ ತಾನತಿಕ್ರುದ್ಧೋ ಯಯಾತಿರಪರಾಜಿತಃ |

19030031c ಯಥಾ ತೇ ಕಥಿತಂ ಪೂರ್ವಂ ಮಯಾ ರಾಜರ್ಷಿಸತ್ತಮ ||

ಭರತರ್ಷಭ! ನಂತರ ರಾಜನು ತುರ್ವಸು, ದ್ರುಹ್ಯು ಮತು ಅನುವಿನಲ್ಲಿ ಕೂಡ ಇದನ್ನೇ ಕೇಳಿದ್ದನು ಮತ್ತು ಅವನಿಗೆ ಅವರು ಯದುವಿನ ಉತ್ತರವನ್ನೇ ಕೊಟ್ಟಿದ್ದರು. ಆಗ ಅತಿಕ್ರುದ್ಧನಾದ ಅಪರಾಜಿತ ಯಯಾತಿಯು ಶಪಿಸಿದ್ದನು. ರಾಜರ್ಷಿಸತ್ತಮ! ಇದರ ಕುರಿತು ನಾನು ನಿನಗೆ ಈ ಹಿಂದೆಯೇ ಹೇಳಿದ್ದೇನೆ.

19030032a ಏವಂ ಶಪ್ತ್ವಾ ಸುತಾನ್ಸರ್ವಾಂಶ್ಚತುರಃ ಪೂರುಪೂರ್ವಜಾನ್|

19030032c ತದೇವ ವಚನಂ ರಾಜಾ ಪೂರುಮಪ್ಯಾಹ ಭಾರತ ||

ಭಾರತ! ಹೀಗೆ ಪೂರುವಿನ ನಾಲ್ವರು ಪೂರ್ವಜ ಸುತರನ್ನು ಶಪಿಸಿ ರಾಜಾ ಯಯಾತಿಯು ಪೂರುವಿಗೂ ಅದೇ ಮಾತನ್ನು ಹೇಳಿದನು:

19030033a ತರುಣಸ್ತವ ರೂಪೇಣ ಚರೇಯಂ ಪೃಥಿವೀಮಿಮಾಮ್ |

19030033c ಜರಾಂ ತ್ವಯಿ ಸಮಾಧಾಯ ತ್ವಂ ಪೂರೋ ಯದಿ ಮನ್ಯಸೇ ||

“ಪೂರು! ನಿನ್ನ ಒಪ್ಪಿಗೆಯಿದ್ದರೆ ನನ್ನ ಮುಪ್ಪನ್ನು ನಿನ್ನಲ್ಲಿ ಇರಿಸಿ ನಿನ್ನ ತರುಣ ರೂಪದಿಂದ ಈ ಪೃಥ್ವಿಯನ್ನು ಸಂಚರಿಸಬಯಸುತ್ತೇನೆ.”

19030034a ಸ ಜರಾಂ ಪ್ರತಿಜಗ್ರಾಹ ಪಿತುಃ ಪೂರುಃ ಪ್ರತಾಪವಾನ್ |

19030034c ಯಯಾತಿರಪಿ ರೂಪೇಣ ಪೂರೋಃ ಪರ್ಯಚರನ್ಮಹೀಮ್ ||

ಪ್ರತಾಪವಾನ್ ಪೂರುವು ತಂದೆಯ ಮುಪ್ಪನ್ನು ಸ್ವೀಕರಿಸಿದನು. ಯಯಾತಿಯಾದರೋ ಪೂರುವಿನ ರೂಪದಿಂದ ಮಹಿಯಲ್ಲಿ ಸಂಚರಿಸಿದನು.

19030035a ಸ ಮಾರ್ಗಮಾಣಃ ಕಾಮಾನಾಮಂತಂ ಭರತಸತ್ತಮ |

19030035c ವಿಶ್ವಾಚ್ಯಾ ಸಹಿತೋ ರೇಮೇ ವನೇ ಚೈತ್ರರಥೇ ಪ್ರಭುಃ ||

ಭರತಸತ್ತಮ! ಕಾಮಗಳ ಅಂತ್ಯವನ್ನು ಹುಡುಕುತ್ತಿದ್ದ ಆ ಪ್ರಭು ಯಯಾತಿಯು ಅಪ್ಸರೆ ವಿಶ್ವಾಚಿಯ ಸಹಿತ ಚೈತ್ರರಥವನದಲ್ಲಿ ರಮಿಸಿದನು.

19030036a ಯದಾವಿತೃಷ್ಣಃ ಕಾಮಾನಾಂ ಭೋಗೇಷು ಸ ನರಾಧಿಪಃ |

19030036c ತದಾ ಪೂರೋಃ ಸಕಾಶಾದ್ವೈ ಸ್ವಾಂ ಜರಾಂ ಪ್ರತ್ಯಪದ್ಯತ ||

ಇಷ್ಟರಲ್ಲಿಯೂ ಕಾಮೋಪಭೋಗಗಳಿಂದ ಅವನಿಗೆ ತೃಪ್ತಿಯಾಗದೇ ಇದ್ದಾಗ ಆ ನರಾಧಿಪನು ಪೂರುವಿನ ಬಳಿಬಂದು ಅವನಿಂದ ತನ್ನ ವೃದ್ಧಾಪ್ಯವನ್ನು ಹಿಂತೆಗೆದುಕೊಂಡನು.

19030037a ತತ್ರ ಗಾಥಾ ಮಹಾರಾಜ ಶೃಣು ಗೀತಾ ಯಯಾತಿನಾ |

19030037c ಯಾಭಿಃ ಪ್ರತ್ಯಾಹರೇತ್ಕಾಮಾನ್ಸರ್ವತೋಽಂಗಾನಿ ಕೂರ್ಮವತ್ ||

ಮಹಾರಾಜ! ಆಗ ಯಯಾತಿಯು ಉದ್ಗಾರದಿಂದ ಹಾಡಿದ ಗೀತೆಯನ್ನು ಕೇಳು. ಇದನ್ನು ಕೇಳಿದವರು ಆಮೆಯು ತನ್ನ ಅಂಗಗಳನ್ನು ಹಿಂದೆ ಸೆಳೆದುಕೊಳ್ಳುವಂತೆ ಸರ್ವಕಾಮನೆಗಳಿಂದ ಇಂದ್ರಿಯಗಳನ್ನು ಒಳಸೆಳೆದುಕೊಳ್ಳಬಹುದು.

19030038a ನ ಜಾತು ಕಾಮಃ ಕಾಮಾನಾಮುಪಭೋಗೇನ  ಶಾಮ್ಯತಿ |

19030038c ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

“ಕಾಮನೆಗಳು ಅವುಗಳನ್ನು ಉಪಭೋಗಿಸುವುದರಿಂದ ಎಂದೂ ಶಾಂತಗೊಳ್ಳುವುದಿಲ್ಲ. ಹವಿಸ್ಸನ್ನು ಹಾಕುವುದರಿಂದ ಅಗ್ನಿಯು ಹೇಗೋ ಹಾಗೆ ಅದು ವರ್ಧಿಸುತ್ತಲೇ ಇರುತ್ತವೆ.

19030039a ಯತ್ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ |

19030039c ನಾಲಮೇಕಸ್ಯ ತತ್ಸರ್ವಮಿತಿ ಪಶ್ಯನ್ನ ಮುಹ್ಯತಿ ||

ಈ ಪೃಥ್ವಿಯಲ್ಲಿರುವ ಎಲ್ಲ ಧಾನ್ಯ, ಹಿರಣ್ಯ, ಪಶುಗಳು ಮತ್ತು ಸ್ತ್ರೀಯರಿಂದಲೂ ಒಬ್ಬ ಪುರುಷನ ಕಾಮನೆಗಳೆಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ. ಇದನ್ನು ಕಂಡುಕೊಂಡವನು ಮೋಹಿತನಾಗುವುದಿಲ್ಲ.

19030040a ಯದಾ ಭಾವಂ ನ ಕುರುತೇ ಸರ್ವಭೂತೇಷು ಪಾಪಕಮ್ |

19030040c ಕರ್ಮಣಾ ಮನಸಾ ವಾಚಾ  ಬ್ರಹ್ಮ ಸಂಪದ್ಯತೇ ತದಾ ||

ಯಾವಾಗ ಕರ್ಮ-ಮನಸ್ಸು-ಮಾತುಗಳ ಮೂಲಕ ಸರ್ವಭೂತಗಳಲ್ಲಿಯೂ ಪಾಪಭಾವವನ್ನು ತೋರಿಸುವುದಿಲ್ಲವೋ ಆಗ ಮನುಷ್ಯನಿಗೆ ಬ್ರಹ್ಮಭಾವವು ದೊರೆಯುತ್ತದೆ.

19030041a ಯದಾನ್ಯೇಭ್ಯೋ ನ ಬಿಭ್ಯೇತ ಯದಾ ಚಾಸ್ಮಾನ್ನ ಬಿಭ್ಯತಿ |

19030041c ಯದಾ ನೇಚ್ಛತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ ||

ಯಾವಾಗ ಇತರರಿಗೆ ಭಯಪಡುವುದಿಲ್ಲವೋ ಮತ್ತು ಇತರರನ್ನು ಭಯಪಡಿಸುವುದಿಲ್ಲವೋ, ಯಾವಾಗ ಏನನ್ನೂ ಬಯಸುವುದಿಲ್ಲವೋ ಮತ್ತು ದ್ವೇಷಿಸುವುದಿಲ್ಲವೋ ಆಗ ಬ್ರಹ್ಮಭಾವವುಂಟಾಗುತ್ತದೆ.

19030042a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ|

19030042c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್||

ದುರ್ಮತಿಗಳಿಗೆ ತ್ಯಜಿಸಲು ಯಾವುದು ಕಷ್ಟಕರವೋ, ಶರೀರವು ಜೀರ್ಣವಾದರೂ ಯಾವುದು ಜೀರ್ಣವಾಗುವುದಿಲ್ಲವೋ, ಯಾವುದು ಪ್ರಾಣಾಂತಿಕ ರೋಗದಂತಿರುವುದೋ ಆ ತೃಷ್ಣೆಯನ್ನು ತೊರೆದವನೇ ಸುಖವನ್ನು ಹೊಂದುವನು.

19030043a ಜೀರ್ಯಂತಿ ಜೀರ್ಯತಃ ಕೇಶಾ ದಂತಾ ಜೀರ್ಯಂತಿ ಜೀರ್ಯತಃ |

19030043c ಜೀವಿತಾಶಾ ಧನಾಶಾ ಚ ಜೀರ್ಯತೋಽಪಿ ನ ಜೀರ್ಯತಿ ||

ಮುಪ್ಪಾದಂತೆ ಕೂದಲು ಹಣ್ಣಾಗುತ್ತದೆ. ಹಲ್ಲುಗಳು ಬೀಳುತ್ತವೆ. ಆದರೆ ಜೀವಿತ ಆಶೆ ಮತ್ತು ಧನದ ಆಶೆಗಳು ಮುಪ್ಪಾದರೂ ಮುದಿಯಾಗುವುದಿಲ್ಲ.

19030044a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್ |

19030044c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್ ||

ಲೋಕದಲ್ಲಿ ಯಾವ ಕಾಮಸುಖ ಮತ್ತು ದಿವ್ಯ ಮಹಾಸುಖಗಳಿಯೋ ಅವುಗಳು ತೃಷ್ಣೆಯನ್ನು ಕ್ಷಯಮಾಡಿಕೊಂಡ ಸುಖದ ಹದಿನಾರನೆಯ ಒಂದು ಅಂಶಕ್ಕೂ ಸಮನಾಗಿರುವುದಿಲ್ಲ.”

19030045a ಏವಮುಕ್ತ್ವಾ ಸ ರಾಜರ್ಷಿಃ ಸದಾರಃ ಪ್ರಾವಿಶದ್ವನಮ್ |

19030045c ಕಾಲೇನ ಮಹತಾ ವಾಪಿ ಚಚಾರ ವಿಪುಲಂ ತಪಃ ||

ಹೀಗೆ ಹೇಳಿ ಆ ರಾಜರ್ಷಿಯು ಪತ್ನಿಯೊಂದಿಗೆ ವನವನ್ನು ಪ್ರವೇಶಿಸಿದನು. ದೀರ್ಘಕಾಲದವರೆಗೆ ವಿಪುಲ ತಪಸ್ಸನ್ನೂ ನಡೆಸಿದನು.

19030046a ಭೃಗುತುಂಗೇ ತಪಸ್ತಪ್ತ್ವಾ ತಪಸೋಽಂತೇ ಮಹಾತಪಾಃ |

19030046c ಅನಶ್ನಂದೇಹಮುತ್ಸೃಜ್ಯ ಸದಾರಃ ಸ್ವರ್ಗಮಾಪ್ತವಾನ್ ||

ಭೃಗುತುಂಗದಲ್ಲಿ ತಪಸ್ಸನ್ನು ತಪಿಸಿ ತಪಸ್ಸಿನ ಅಂತ್ಯದಲ್ಲಿ ಆ ಮಹಾತಪಸ್ವಿಯು ನಿರಾಹಾರಿಯಾಗಿದ್ದುಕೊಂಡು ಪತ್ನಿಯೊಡನೆ ದೇಹವನ್ನು ತೊರೆದು ಸ್ವರ್ಗವನ್ನು ಪಡೆದುಕೊಂಡನು.

19030047a ತಸ್ಯ ವಂಶೇ ಮಹಾರಾಜ ಪಂಚ ರಾಜರ್ಷಿಸತ್ತಮಾಃ |

19030047c ಯೈರ್ವ್ಯಾಪ್ತಾ ಪೃಥಿವೀ ಸರ್ವಾ ಸೂರ್ಯಸ್ಯೇವ ಗಭಸ್ತಿಭಿಃ ||

ಮಹಾರಾಜ! ಅವನ ವಂಶಜರಾದ ಐವರು ರಾಜರ್ಷಿಸತ್ತಮರು ಮತ್ತು ಅವರ ಸಂತಾನವು ಸೂರ್ಯನ ಕಿರಣಗಳಂತೆ ಪೃಥ್ವಿಸರ್ವವನ್ನೂ ವ್ಯಾಪಿಸಿತು.

19030048a ಯದೋಸ್ತು ಶೃಣು ರಾಜರ್ಷೇರ್ವಂಶಂ ರಾಜರ್ಷಿಸತ್ಕೃತಮ್|

19030048c ಯತ್ರ ನಾರಾಯಣೋ ಜಜ್ಞೇ ಹರಿರ್ವೃಷ್ಣಿಕುಲೋದ್ವಹಃ ||

ಎಲ್ಲಿ ಹರಿವೃಷ್ಣಿಕುಲೋದ್ವಹ ನಾರಾಯಣನು ಜನಿಸಿದನೋ ಆ ರಾಜರ್ಷಿಸತ್ಕೃತ ರಾಜರ್ಷಿ ಯದುವಿನ ವಂಶವನ್ನು ಕೇಳು.

19030049a ಧನ್ಯಃ ಪ್ರಜಾವಾನಾಯುಷ್ಮಾನ್ಕೀರ್ತಿಮಾಂಶ್ಚ ಭವೇನ್ನರಃ |

19030049c ಯಯಾತೇಶ್ಚರಿತಂ ಪುಣ್ಯಂ ಪಠಂಶೃಣ್ವನ್ನರಾಧಿಪ ||

ನರಾಧಿಪ! ಯಯಾತಿಯ ಪುಣ್ಯಚರಿತವನ್ನು ಹೇಳುವ ಮತ್ತು ಕೇಳುವ ನರರು ಧನ್ಯರೂ ಸಂತಾನವುಳ್ಳವರೂ, ಆಯುಷ್ಮಾನರೂ ಮತ್ತು ಕೀರ್ತಿಮಾನರೂ ಆಗುತ್ತಾರೆ.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಯಯಾತಿಚರಿತೇ ತ್ರಿಂಶೋಽಧ್ಯಾಯಃ|

Gallery - anette linnea rasmussen-close-up of primula flowers against white  background-25 - Graphic Pixelab

Comments are closed.