Drona Parva: Chapter 8

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

ಧೃತರಾಷ್ಟ್ರಶೋಕ (೧-೩೯).

07008001 ಧೃತರಾಷ್ಟ್ರ ಉವಾಚ|

07008001a ಕಿಂ ಕುರ್ವಾಣಂ ರಣೇ ದ್ರೋಣಂ ಜಘ್ನುಃ ಪಾಂಡವಸೃಂಜಯಾಃ|

07008001c ತಥಾ ನಿಪುಣಮಸ್ತ್ರೇಷು ಸರ್ವಶಸ್ತ್ರಭೃತಾಮಪಿ||

ಧೃತರಾಷ್ಟ್ರನು ಹೇಳಿದನು: “ಪಾಂಡವ-ಸೃಂಜಯರು ಕೊಲ್ಲುವಾಗ ರಣದಲ್ಲಿ ದ್ರೋಣನು ಏನು ಮಾಡುತ್ತಿದ್ದನು? ಅವನು ಎಲ್ಲ ಶಸ್ತ್ರಭೃತರಿಗಿಂತಲೂ ಅಸ್ತ್ರಗಳಲ್ಲಿ ನಿಪುಣನಾಗಿದ್ದನು.

07008002a ರಥಭಂಗೋ ಬಭೂವಾಸ್ಯ ಧನುರ್ವಾಶೀರ್ಯತಾಸ್ಯತಃ|

07008002c ಪ್ರಮತ್ತೋ ವಾಭವದ್ದ್ರೋಣಸ್ತತೋ ಮೃತ್ಯುಮುಪೇಯಿವಾನ್||

ಅವನ ರಥವು ಮುರಿದುಹೋಗಿದ್ದಿರಬಹುದು. ಧನುಸ್ಸಿಗೆ ಬಾಣಗಳನ್ನು ಹೂಡುವಾಗ ಅದು ಮುರಿದುಹೋಗಿದ್ದಿರಬಹುದು. ಅಥವಾ ಆಗ ದ್ರೋಣನು ಪ್ರಮತ್ತನಾಗಿ ಮೃತ್ಯುವನ್ನು ಹೊಂದಿದನೇ?

07008003a ಕಥಂ ನು ಪಾರ್ಷತಸ್ತಾತ ಶತ್ರುಭಿರ್ದುಷ್ಪ್ರಧರ್ಷಣಂ|

07008003c ಕಿರಂತಮಿಷುಸಂಘಾತಾನ್ರುಕ್ಮಪುಂಖಾನನೇಕಶಃ||

07008004a ಕ್ಷಿಪ್ರಹಸ್ತಂ ದ್ವಿಜಶ್ರೇಷ್ಠಂ ಕೃತಿನಂ ಚಿತ್ರಯೋಧಿನಂ|

07008004c ದೂರೇಷುಪಾತಿನಂ ದಾಂತಮಸ್ತ್ರಯುದ್ಧೇ ಚ ಪಾರಗಂ||

07008005a ಪಾಂಚಾಲಪುತ್ರೋ ನ್ಯವಧೀದ್ದಿಷ್ಟ್ಯಾ ಸ ವರಮಚ್ಯುತಂ|

07008005c ಕುರ್ವಾಣಂ ದಾರುಣಂ ಕರ್ಮ ರಣೇ ಯತ್ತಂ ಮಹಾರಥಂ||

ಶತ್ರುಗಳಿಂದ ಎದುರಿಸಲು ಅಸಾಧ್ಯನಾದ, ಕ್ಷಿಪ್ರಹಸ್ತ, ದ್ವಿಜಶ್ರೇಷ್ಠ, ಪಂಡಿತ, ಚಿತ್ರಯೋಧೀ, ಬಹಳದೂರದವರೆಗೂ ಪ್ರಹರಿಸಬಲ್ಲ, ಜಿತೇಂದ್ರಿಯ, ಅಸ್ತ್ರಯುದ್ಧದಲ್ಲಿ ಪಾರಂಗತನಾದ, ರಣದಲ್ಲಿ ಪ್ರಯತ್ನಮಾಡಿ ದಾರುಣ ಕರ್ಮಗಳನ್ನೆಸಗಿದ ಆ ಮಹಾರಥ, ಶ್ರೇಷ್ಠ, ಅಚ್ಯುತನನ್ನು ಪಾಂಚಾಲಪುತ್ರ ಪಾರ್ಷತನು ಹೇಗೆ ಅನೇಕ ರುಕ್ಮಪುಂಖ ಶರಗಳಿಂದ ಮುಸುಕಿ ಕೊಂದನು?

07008006a ವ್ಯಕ್ತಂ ದಿಷ್ಟಂ ಹಿ ಬಲವತ್ಪೌರುಷಾದಿತಿ ಮೇ ಮತಿಃ|

07008006c ಯದ್ದ್ರೋಣೋ ನಿಹತಃ ಶೂರಃ ಪಾರ್ಷತೇನ ಮಹಾತ್ಮನಾ||

ಮಹಾತ್ಮ ಶೂರ ಪಾರ್ಷತನಿಂದ ದ್ರೋಣನು ಹತನಾದನೆಂದರೆ ಪೌರುಷಕ್ಕಿಂತ ದೈವವೇ ಬಲವಾದುದು ಎನ್ನುವುದು ವ್ಯಕ್ತವಾಯಿತು ಎಂದು ನನಗನ್ನಿಸುತ್ತದೆ.

07008007a ಅಸ್ತ್ರಂ ಚತುರ್ವಿಧಂ ವೀರೇ ಯಸ್ಮಿನ್ನಾಸೀತ್ಪ್ರತಿಷ್ಠಿತಂ|

07008007c ತಮಿಷ್ವಸ್ತ್ರವರಾಚಾರ್ಯಂ ದ್ರೋಣಂ ಶಂಸಸಿ ಮೇ ಹತಂ||

ಯಾವ ವೀರನಲ್ಲಿ ನಾಲ್ಕೂ ವಿಧದ ಅಸ್ತ್ರಗಳು ನೆಲಸಿದ್ದವೋ ಆ ಧನುಷ್ಮಂತರಿಗೆಲ್ಲ ಆಚಾರ್ಯನಾಗಿದ್ದ ದ್ರೋಣನು ಸತ್ತನೆಂದು ನನಗೆ ನೀನು ಹೇಳುತ್ತಿರುವೆಯಲ್ಲ!

07008008a ಶ್ರುತ್ವಾ ಹತಂ ರುಕ್ಮರಥಂ ವೈಯಾಘ್ರಪರಿವಾರಣಂ|

07008008c ಜಾತರೂಪಪರಿಷ್ಕಾರಂ ನಾದ್ಯ ಶೋಕಮಪಾನುದೇ||

ವ್ಯಾಘ್ರದ ಚರ್ಮವನ್ನು ಹೊದಿಸಿದ್ದ ಬಂಗಾರದ ರಥದಲ್ಲಿ ಕುಳಿತಿದ್ದ ಅವನು ಹತನಾದನೆಂದು ಕೇಳಿ ನನಗಿಂದು ದುಃಖವಾಗುತ್ತಿದೆ.

07008009a ನ ನೂನಂ ಪರದುಃಖೇನ ಕಶ್ಚಿನ್ಮ್ರಿಯತಿ ಸಂಜಯ|

07008009c ಯತ್ರ ದ್ರೋಣಮಹಂ ಶ್ರುತ್ವಾ ಹತಂ ಜೀವಾಮಿ ನ ಮ್ರಿಯೇ||

ಸಂಜಯ! ಪರಮ ದುಃಖದಿಂದ ಯಾರೂ ಸಾಯುವುದಿಲ್ಲವಲ್ಲವೇ? ದ್ರೋಣನು ಹತನಾದನೆಂದು ಕೇಳಿಯೂ ನಾನು ಸಾಯದೇ ಜೀವಿಸಿರುವೆನಲ್ಲಾ!

07008010a ಅಶ್ಮಸಾರಮಯಂ ನೂನಂ ಹೃದಯಂ ಸುದೃಢಂ ಮಮ|

07008010c ಯಚ್ಚ್ರುತ್ವಾ ನಿಹತಂ ದ್ರೋಣಂ ಶತಧಾ ನ ವಿದೀರ್ಯತೇ||

ದ್ರೋಣನ ಸಾವಿನ ಕುರಿತು ಕೇಳಿಯೂ ನೂರು ಚೂರುಗಳಾಗಿ ಒಡೆಯುದೇ ಇರುವ ನನ್ನ ಈ ಹೃದಯವು ಸುದೃಢ ಕಲ್ಲಿನಿಂದ ಮಾಡಲ್ಪಟ್ಟಿರಬಹುದು.

07008011a ಬ್ರಾಹ್ಮೇ ವೇದೇ ತಥೇಷ್ವಸ್ತ್ರೇ ಯಮುಪಾಸನ್ಗುಣಾರ್ಥಿನಃ|

07008011c ಬ್ರಾಹ್ಮಣಾ ರಾಜಪುತ್ರಾಶ್ಚ ಸ ಕಥಂ ಮೃತ್ಯುನಾ ಹತಃ||

ಬ್ರಾಹ್ಮೀ ವೇದಗಳು ಮತ್ತು ಅಸ್ತ್ರಗಳನ್ನು ತಿಳಿದುಕೊಳ್ಳಲು ಗುಣಾರ್ಥಿಗಳಾದ ಬ್ರಾಹ್ಮಣರು ಮತ್ತು ರಾಜಪುತ್ರರು ಯಾರನ್ನು ಉಪಾಸಿಸುತ್ತಿದ್ದರೋ ಅವನೇ ಹೇಗೆ ಮೃತ್ಯುವಿನಿಂದ ಕೊಂಡೊಯ್ಯಲ್ಪಟ್ಟನು?

07008012a ಶೋಷಣಂ ಸಾಗರಸ್ಯೇವ ಮೇರೋರಿವ ವಿಸರ್ಪಣಂ|

07008012c ಪತನಂ ಭಾಸ್ಕರಸ್ಯೇವ ನ ಮೃಷ್ಯೇ ದ್ರೋಣಪಾತನಂ||

ಸಾಗರವನ್ನೇ ಒಣಗಿಸಬಹುದು. ಮೇರುಪರ್ವತವನ್ನೇ ಕಿತ್ತಿಡಬಹುದು. ಭಾಸ್ಕರನು ಬೀಳಬಹುದು. ಆದರೆ ದ್ರೋಣನ ಪತನವಾಯಿತೆಂದರೆ ನಂಬಲಸಾಧ್ಯ.

07008013a ದೃಪ್ತಾನಾಂ ಪ್ರತಿಷೇದ್ಧಾಸೀದ್ಧಾರ್ಮಿಕಾನಾಂ ಚ ರಕ್ಷಿತಾ|

07008013c ಯೋಽತ್ಯಾಕ್ಷೀತ್ಕೃಪಣಸ್ಯಾರ್ಥೇ ಪ್ರಾಣಾನಪಿ ಪರಂತಪಃ||

ಅವನು ದುಷ್ಟರನ್ನು ನಿಯಂತ್ರಿಸುತ್ತಿದ್ದನು. ಧಾರ್ಮಿಕರನ್ನು ರಕ್ಷಿಸುತ್ತಿದ್ದನು. ಅಂಥಹ ಪರಂತಪನು ಕೃಪಣನಾಗಿ ಪ್ರಾಣಗಳನ್ನೇ ಒತ್ತೆಯಿಟ್ಟಿದ್ದನು.

07008014a ಮಂದಾನಾಂ ಮಮ ಪುತ್ರಾಣಾಂ ಜಯಾಶಾ ಯಸ್ಯ ವಿಕ್ರಮೇ|

07008014c ಬೃಹಸ್ಪತ್ಯುಶನಸ್ತುಲ್ಯೋ ಬುದ್ಧ್ಯಾ ಸ ನಿಹತಃ ಕಥಂ||

ಅವನ ವಿಕ್ರಮದಿಂದ ನನ್ನ ಮಂದ ಮಕ್ಕಳು ಜಯವನ್ನು ಆಶಿಸಿದ್ದರು. ಬುದ್ಧಿಯಲ್ಲಿ ಬೃಹಸ್ಪತಿ-ಉಶಸನರ ಸಮನಾಗಿದ್ದ ಅವನು ಹೇಗೆ ಹತನಾದನು?

07008015a ತೇ ಚ ಶೋಣಾ ಬೃಹಂತೋಽಶ್ವಾಃ ಸೈಂಧವಾ ಹೇಮಮಾಲಿನಃ|

07008015c ರಥೇ ವಾತಜವಾ ಯುಕ್ತಾಃ ಸರ್ವಶಬ್ದಾತಿಗಾ ರಣೇ||

07008016a ಬಲಿನೋ ಘೋಷಿಣೋ ದಾಂತಾಃ ಸೈಂಧವಾಃ ಸಾಧುವಾಹಿನಃ|

07008016c ದೃಢಾಃ ಸಂಗ್ರಾಮಮಧ್ಯೇಷು ಕಚ್ಚಿದಾಸನ್ನ ವಿಹ್ವಲಾಃ||

ಅವನ ರಥಕ್ಕೆ ಕಟ್ಟಿದ್ದ ಕೆಂಪುಬಣ್ಣದ ಹೇಮಮಾಲಿನೀ ಗಾಳಿಯ ವೇಗವುಳ್ಳ, ರಣದಲ್ಲಿ ಎಲ್ಲ ಶಸ್ತ್ರಗಳಿಗೂ ಅತೀತವಾದ, ಜೋರಾಗಿ ಕೂಗುವ, ಸೈಂಧವರಿಂದ ತರಬೇತಿಹೊಂದಿದ ಸಾಧುವಾಹಿನಿಗಳಾದ ದೃಢವಾಗಿದ್ದ ಅತಿದೊಡ್ಡ ಸೈಂಧವ ಕುದುರೆಗಳು ಸಂಗ್ರಾಮದ ಮಧ್ಯದಲ್ಲಿ ಏನಾದರೂ ವಿಹ್ವಲಗೊಂಡವೇ?

07008017a ಕರಿಣಾಂ ಬೃಂಹತಾಂ ಯುದ್ಧೇ ಶಂಖದುಂದುಭಿನಿಸ್ವನಂ|

07008017c ಜ್ಯಾಕ್ಷೇಪಶರವರ್ಷಾಣಾಂ ಶಸ್ತ್ರಾಣಾಂ ಚ ಸಹಿಷ್ಣವಃ||

07008018a ಆಶಂಸಂತಃ ಪರಾಂ ಜೇತುಂ ಜಿತಶ್ವಾಸಾ ಜಿತವ್ಯಥಾಃ|

07008018c ಹಯಾಃ ಪ್ರಜವಿತಾಃ ಶೀಘ್ರಾ ಭಾರದ್ವಾಜರಥೋದ್ವಹಾಃ||

07008019a ತೇ ಸ್ಮ ರುಕ್ಮರಥೇ ಯುಕ್ತಾ ನರವೀರಸಮಾಹಿತಾಃ|

07008019c ಕಥಂ ನಾಭ್ಯತರಂಸ್ತಾತ ಪಾಂಡವಾನಾಮನೀಕಿನೀಂ||

ನರವೀರ ಭಾರದ್ವಾಜನನ್ನು ಹೊತ್ತಿದ್ದ ಆ ರುಕ್ಮರಥಕ್ಕೆ ಕಟ್ಟಿದ್ದ ಯುದ್ಧದಲ್ಲಿ ಶಂಖ-ದುಂದುಭಿ ನಿಸ್ವನಗಳನ್ನೂ, ಆನೆಗಳ ಘೀಳನ್ನೂ, ಬಿಲ್ಲಿನಿಂದ ಹೊರಟ ಶರವರ್ಷ-ಶಸ್ತ್ರಗಳನ್ನೂ ಸಹಿಸಿಕೊಳ್ಳಬಲ್ಲವಾಗಿದ್ದ, ಶತ್ರುಗಳನ್ನು ಗೆಲ್ಲಲು ಬಯಸಿ ಆಯಾಸವನ್ನು ಗೆದ್ದಿದ್ದ, ವ್ಯಥೆಯನ್ನು ಗೆದ್ದಿದ್ದ, ಅತಿ ಶೀಘ್ರವಾಗಿ ಚಲಿಸಬಲ್ಲವಾಗಿದ್ದ ಆ ಕುದುರೆಗಳು ಹೇಗೆ ತಾನೇ ಪಾಂಡವರ ಸೇನೆಗಳಿಂದ ಹಿಂದೆಸರಿದವು?

07008020a ಜಾತರೂಪಪರಿಷ್ಕಾರಮಾಸ್ಥಾಯ ರಥಮುತ್ತಮಂ|

07008020c ಭಾರದ್ವಾಜಃ ಕಿಮಕರೋಚ್ಚೂರಃ ಸಂಕ್ರಂದನೋ ಯುಧಿ||

ಬಂಗಾರದಿಂದ ಪರಿಷ್ಕೃತ ಉತ್ತಮ ರಥವನ್ನೇರಿ ಶೂರ ಭಾರದ್ವಾಜನು ಯುದ್ಧದಲ್ಲಿ ಪಾರಾಗಲು ಏನು ಮಾಡಿದನು?

07008021a ವಿದ್ಯಾಂ ಯಸ್ಯೋಪಜೀವಂತಿ ಸರ್ವಲೋಕಧನುರ್ಭೃತಃ|

07008021c ಸ ಸತ್ಯಸಂಧೋ ಬಲವಾನ್ದ್ರೋಣಃ ಕಿಮಕರೋದ್ಯುಧಿ||

ಲೋಕದ ಸರ್ವ ಧನುಭೃತರ ವಿದ್ಯೆಯು ಯಾರ ಉಪಜೀವನವೋ ಆ ಸತ್ಯಸಂಧ, ಬಲವಾನ ದ್ರೋಣನು ಯುದ್ಧದಲ್ಲಿ ಏನು ಮಾಡಿದನು?

07008022a ದಿವಿ ಶಕ್ರಮಿವ ಶ್ರೇಷ್ಠಂ ಮಹಾಮಾತ್ರಂ ಧನುರ್ಭೃತಾಂ|

07008022c ಕೇ ನು ತಂ ರೌದ್ರಕರ್ಮಾಣಂ ಯುದ್ಧೇ ಪ್ರತ್ಯುದ್ಯಯೂ ರಥಾಃ||

ದಿವಿಯಲ್ಲಿ ಶಕ್ರನಂತೆ ಧನುಭೃತ ಮಹಾಮಾತ್ರರಲ್ಲಿ ಶ್ರೇಷ್ಠನಾದ ಆ ರೌದ್ರಕರ್ಮಿಯನ್ನು ಯುದ್ಧದಲ್ಲಿ ಯಾವ್ಯಾವ ರಥರು ಎದುರಿಸಿ ಯುದ್ಧಮಾಡಿದರು?

07008023a ನನು ರುಕ್ಮರಥಂ ದೃಷ್ಟ್ವಾ ಪ್ರದ್ರವಂತಿ ಸ್ಮ ಪಾಂಡವಾಃ|

07008023c ದಿವ್ಯಮಸ್ತ್ರಂ ವಿಕುರ್ವಾಣಂ ಸೇನಾಂ ಕ್ಷಿಣ್ವಂತಮವ್ಯಯಂ||

ದಿವ್ಯಾಸ್ತ್ರಗಳನ್ನು ಎರಚುತ್ತಿದ್ದ ಆ ರುಕ್ಮರಥನನ್ನು ನೋಡಿ ಪಾಂಡವ ಸೇನೆಗಳು ಓಡಿಹೋಗಲಿಲ್ಲವೇ?

07008024a ಉತಾಹೋ ಸರ್ವಸೈನ್ಯೇನ ಧರ್ಮರಾಜಃ ಸಹಾನುಜಃ|

07008024c ಪಾಂಚಾಲ್ಯಪ್ರಗ್ರಹೋ ದ್ರೋಣಂ ಸರ್ವತಃ ಸಮವಾರಯತ್||

ಧರ್ಮರಾಜನು ಅನುಜರು ಮತ್ತು ಪಾಂಚಾಲ್ಯರೊಡಗೂಡಿ ದ್ರೋಣನನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಹಿಡಿದನೋ ಹೇಳು!

07008025a ನೂನಮಾವಾರಯತ್ಪಾರ್ಥೋ ರಥಿನೋಽನ್ಯಾನಜಿಹ್ಮಗೈಃ|

07008025c ತತೋ ದ್ರೋಣಂ ಸಮಾರೋಹತ್ಪಾರ್ಷತಃ ಪಾಪಕರ್ಮಕೃತ್||

ಪಾರ್ಥನು ತನ್ನ ಜಿಹ್ಮಗಗಳಿಂದ ಅನ್ಯ ರಥಿಗಳನ್ನು ತಡೆದಿರಬಹುದು. ಆಗ ಪಾರ್ಷತನು ದ್ರೋಣನನ್ನು ಆಕ್ರಮಣಿಸುವ ಪಾಪಕರ್ಮವನ್ನು ಮಾಡಿರಬಹುದು.

07008026a ನ ಹ್ಯನ್ಯಂ ಪರಿಪಶ್ಯಾಮಿ ವಧೇ ಕಂ ಚನ ಶುಷ್ಮಿಣಃ|

07008026c ಧೃಷ್ಟದ್ಯುಮ್ನಾದೃತೇ ರೌದ್ರಾತ್ಪಾಲ್ಯಮಾನಾತ್ಕಿರೀಟಿನಾ||

ಕಿರೀಟಿಯಿಂದ ರಕ್ಷಿಸಲ್ಪಟ್ಟ ಧೃಷ್ಟದ್ಯುಮ್ನನಲ್ಲದೇ ಬೇರೆ ಯಾವ ಯೋಧನೂ ಅವನನ್ನು ವಧಿಸುವವನೆಂದು ನನಗೆ ತೋಚುತ್ತಿಲ್ಲ.

07008027a ತೈರ್ವೃತಃ ಸರ್ವತಃ ಶೂರೈಃ ಪಾಂಚಾಲ್ಯಾಪಸದಸ್ತತಃ|

07008027c ಕೇಕಯೈಶ್ಚೇದಿಕಾರೂಷೈರ್ಮತ್ಸ್ಯೈರನ್ಯೈಶ್ಚ ಭೂಮಿಪೈಃ||

07008028a ವ್ಯಾಕುಲೀಕೃತಮಾಚಾರ್ಯಂ ಪಿಪೀಲೈರುರಗಂ ಯಥಾ|

07008028c ಕರ್ಮಣ್ಯಸುಕರೇ ಸಕ್ತಂ ಜಘಾನೇತಿ ಮತಿರ್ಮಮ||

ಬಹುಷಃ ಕೇಕಯ-ಚೇದಿ-ಕರೂಷ-ಮತ್ಸ್ಯ ಶೂರರು ಮತ್ತು ಅನ್ಯ ಭೂಮಿಪರು ಆಚಾರ್ಯನನ್ನು ಸುತ್ತವರೆದು ಇರುವೆಗಳು ಸರ್ಪವನ್ನು ಹೇಗೋ ಹಾಗೆ ವ್ಯಾಕುಲಪಡಿಸುತ್ತಿರುವಾಗ ಆ ಪಾಂಚಾಲ್ಯನು ಅವನನ್ನು ಕೊಲ್ಲುವ ಕೆಟ್ಟ ಕೆಲಸವನ್ನು ಮಾಡಿರಬಹುದೆಂದು ನನ್ನ ಅಭಿಪ್ರಾಯ.

07008029a ಯೋಽಧೀತ್ಯ ಚತುರೋ ವೇದಾನ್ಸರ್ವಾನಾಖ್ಯಾನಪಂಚಮಾನ್|

07008029c ಬ್ರಾಹ್ಮಣಾನಾಂ ಪ್ರತಿಷ್ಠಾಸೀತ್ಸ್ರೋತಸಾಮಿವ ಸಾಗರಃ|

07008029e ಸ ಕಥಂ ಬ್ರಾಹ್ಮಣೋ ವೃದ್ಧಃ ಶಸ್ತ್ರೇಣ ವಧಮಾಪ್ತವಾನ್||

ನಾಲ್ಕು ವೇದಗಳನ್ನೂ ಪಂಚಮವಾದ ಸರ್ವ ಆಖ್ಯಾನಗಳನ್ನೂ ಪಳಗಿಸಿಕೊಂಡಿದ್ದ, ನದಿಗಳಿಗೆ ಸಾಗರವು ಹೇಗೋ ಹಾಗೆ ಬ್ರಾಹ್ಮಣರಿಗೆ ಪ್ರತಿಷ್ಠನಾಗಿದ್ದ ಆ ಬ್ರಾಹ್ಮಣ ವೃದ್ಧನು ಹೇಗೆ ತಾನೇ ಶಸ್ತ್ರದಿಂದ ವಧಿಸಲ್ಪಟ್ಟನು?

07008030a ಅಮರ್ಷಣೋ ಮರ್ಷಿತವಾನ್ ಕ್ಲಿಶ್ಯಮಾನಃ ಸದಾ ಮಯಾ|

07008030c ಅನರ್ಹಮಾಣಃ ಕೌಂತೇಯಃ ಕರ್ಮಣಸ್ತಸ್ಯ ತತ್ಫಲಂ||

ಯಾವಾಗಲೂ ನನ್ನ ಕಾರಣದಿಂದಾಗಿ ಆ ಅಮರ್ಷಣನು ದುಃಖವನ್ನೂ ಕಷ್ಟಗಳನ್ನೂ ಅನುಭವಿಸಿ, ಕೊನೆಯಲ್ಲಿ ಅನರ್ಹನಾಗಿದ್ದರೂ ಕೌಂತೇಯನು ಅವನ ಕರ್ಮಗಳ ಫಲವನ್ನು ನೀಡಿದನು.

07008031a ಯಸ್ಯ ಕರ್ಮಾನುಜೀವಂತಿ ಲೋಕೇ ಸರ್ವಧನುರ್ಭೃತಃ|

07008031c ಸ ಸತ್ಯಸಂಧಃ ಸುಕೃತೀ ಶ್ರೀಕಾಮೈರ್ನಿಹತಃ ಕಥಂ||

ಯಾರ ಕರ್ಮಗಳನ್ನು ಆಧರಿಸಿ ಲೋಕಗಳು ಜೀವಿಸುತ್ತವೆಯೋ ಆ ಸರ್ವಧನುಭೃತ, ಸತ್ಯಸಂಧ, ಸುಕೃತೀ, ಶ್ರೀಕಾಮನು ಹೇಗೆ ತಾನೇ ಹತನಾದನು?

07008032a ದಿವಿ ಶಕ್ರ ಇವ ಶ್ರೇಷ್ಠೋ ಮಹಾಸತ್ತ್ವೋ ಮಹಾಬಲಃ|

07008032c ಸ ಕಥಂ ನಿಹತಃ ಪಾರ್ಥೈಃ ಕ್ಷುದ್ರಮತ್ಸ್ಯೈರ್ಯಥಾ ತಿಮಿಃ||

ದಿವಿಯಲ್ಲಿ ಶಕ್ರನಂತೆ ಶ್ರೇಷ್ಠನಾಗಿದ್ದ, ಮಹಾಸತ್ತ್ವ, ಮಹಾಬಲನು ಕ್ಷುದ್ರಮೀನುಗಳಿಂದ ತಿಮಿಂಗಿಲದಂತೆ ಹೇಗೆ ಪಾರ್ಥರಿಂದ ಹತನಾದನು?

07008033a ಕ್ಷಿಪ್ರಹಸ್ತಶ್ಚ ಬಲವಾನ್ದೃಢಧನ್ವಾರಿಮರ್ದನಃ|

07008033c ನ ಯಸ್ಯ ಜೀವಿತಾಕಾಂಕ್ಷೀ ವಿಷಯಂ ಪ್ರಾಪ್ಯ ಜೀವತಿ||

07008034a ಯಂ ದ್ವೌ ನ ಜಹತಃ ಶಬ್ದೌ ಜೀವಮಾನಂ ಕದಾ ಚನ|

07008034c ಬ್ರಾಹ್ಮಶ್ಚ ವೇದಕಾಮಾನಾಂ ಜ್ಯಾಘೋಷಶ್ಚ ಧನುರ್ಭೃತಾಂ||

07008035a ನಾಹಂ ಮೃಷ್ಯೇ ಹತಂ ದ್ರೋಣಂ ಸಿಂಹದ್ವಿರದವಿಕ್ರಮಂ|

07008035c ಕಥಂ ಸಂಜಯ ದುರ್ಧರ್ಷಮನಾಧೃಷ್ಯಯಶೋಬಲಂ||

ಸಂಜಯ! ಜೀವಿತಾಕಾಂಕ್ಷಿಯಾದವನು ಯಾರ ಹತ್ತಿರ ಹೋಗಿ ಜೀವಿತವಾಗಿರುವುದಿಲ್ಲವೋ, ಯಾರ ಜೀವಮಾನದಲ್ಲಿ ಎಂದೂ ಈ ಎರಡು ಶಬ್ಧಗಳು - ಬ್ರಾಹ್ಮಣರು ಇಷ್ಟಪಡುವ ವೇದಗಳು ಮತ್ತು ಧನುಭೃತರು ಇಷ್ಟಪಡುವ ಧನುಸ್ಸಿನ ಟೇಂಕಾರ- ಮಾತ್ರ ಕೇಳಿಬರುತ್ತಿದ್ದವೋ ಆ ಕ್ಷಿಪ್ರಹಸ್ತ, ಬಲವಾನ್, ದೃಢಧನ್ವಿ, ಅರಿಮರ್ದನ, ಸಿಂಹದ ವಿಕ್ರಮವುಳ್ಳ ಆ ದುರ್ಧರ್ಷ ಅನಾದೃಷ್ಯ ಯಶೋಬಲನು ಹೇಗೆ ಹತನಾದನೆಂದೇ ತಿಳಿಯದಾಗಿದೆ.

07008036a ಕೇಽರಕ್ಷನ್ದಕ್ಷಿಣಂ ಚಕ್ರಂ ಸವ್ಯಂ ಕೇ ಚ ಮಹಾತ್ಮನಃ|

07008036c ಪುರಸ್ತಾತ್ಕೇ ಚ ವೀರಸ್ಯ ಯುಧ್ಯಮಾನಸ್ಯ ಸಂಯುಗೇ||

ರಣರಂಗದಲ್ಲಿ ಯುದ್ಧಮಾಡುತ್ತಿರುವಾಗ ಆ ವೀರ ಮಹಾತ್ಮನ ಬಲ ಮತ್ತು ಎಡ ಚಕ್ರಗಳನ್ನು, ಎದುರಿನಿಂದ ಯಾರು ರಕ್ಷಿಸಿದರು?

07008037a ಕೇ ಚ ತತ್ರ ತನುಂ ತ್ಯಕ್ತ್ವಾ ಪ್ರತೀಪಂ ಮೃತ್ಯುಮಾವ್ರಜನ್|

07008037c ದ್ರೋಣಸ್ಯ ಸಮರೇ ವೀರಾಃ ಕೇಽಕುರ್ವಂತ ಪರಾಂ ಧೃತಿಂ||

ಅಲ್ಲಿ ಯಾರ್ಯಾರು ಎದಿರು ನಿಂತಿದ್ದ ಮೃತ್ಯುವನ್ನು ಅಪ್ಪಿಕೊಂಡು ತನುವನ್ನು ತ್ಯಜಿಸಿದರು? ಯಾವ ವೀರರು ಸಮರದಲ್ಲಿ ದ್ರೋಣನನ್ನು ಅವನ ಕೊನೆಯ ಪಯಣದಲ್ಲಿ ಅನುಸರಿಸಿದರು?

07008038a ಏತದಾರ್ಯೇಣ ಕರ್ತವ್ಯಂ ಕೃಚ್ಚ್ರಾಸ್ವಾಪತ್ಸು ಸಂಜಯ|

07008038c ಪರಾಕ್ರಮೇದ್ಯಥಾಶಕ್ತ್ಯಾ ತಚ್ಚ ತಸ್ಮಿನ್ಪ್ರತಿಷ್ಠಿತಂ||

ಸಂಜಯ! ಕಷ್ಟ ಆಪತ್ತುಗಳಲ್ಲಿಯೂ ಆರ್ಯ ಕರ್ತವ್ಯವನ್ನು ತಳ್ಳದಿದ್ದ ಅವನು ಪರಾಕ್ರಮದಿಂದ ಯಥಾಶಕ್ತಿ ಹೋರಾಡಿ ಅಲ್ಲಿ ನಿಂತಿದ್ದನು.

07008039a ಮುಹ್ಯತೇ ಮೇ ಮನಸ್ತಾತ ಕಥಾ ತಾವನ್ನಿವರ್ತ್ಯತಾಂ|

07008039c ಭೂಯಸ್ತು ಲಬ್ಧಸಂಜ್ಞಸ್ತ್ವಾ ಪರಿಪ್ರಕ್ಷ್ಯಾಮಿ ಸಂಜಯ||

ಸಂಜಯ! ಅಯ್ಯಾ! ನನ್ನ ಮನಸ್ಸು ಮೂರ್ಛೆ ಹೋಗುತ್ತಿದೆ. ಇದನ್ನು ಇಲ್ಲಿಯೇ ನಿಲ್ಲಿಸು. ಸಂಜ್ಞೆಗಳನ್ನು ಪಡೆದ ನಂತರ ಪುನಃ ಕೇಳುತ್ತೇನೆ.””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಧೃತರಾಷ್ಟ್ರಶೋಕೇ ಅಷ್ಟಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಧೃತರಾಷ್ಟ್ರಶೋಕ ಎನ್ನುವ ಎಂಟನೇ ಅಧ್ಯಾಯವು.

Image result for indian motifs against white background

Comments are closed.