Drona Parva: Chapter 72

ದ್ರೋಣ ಪರ್ವ: ಜಯದ್ರಥವಧ ಪರ್ವ

೭೨

ಯುದ್ಧ ವರ್ಣನೆ (೧-೨೦). ದ್ರೋಣ-ಧೃಷ್ಟದ್ಯುಮ್ನರ ಯುದ್ಧ (೨೧-೩೫).

07072001 ಸಂಜಯ ಉವಾಚ|

07072001a ತಥಾ ತಸ್ಮಿನ್ಪ್ರವೃತ್ತೇ ತು ಸಂಗ್ರಾಮೇ ಲೋಮಹರ್ಷಣ|

07072001c ಕೌರವೇಯಾಂಸ್ತ್ರಿಧಾಭೂತಾನ್ಪಾಂಡವಾಃ ಸಮುಪಾದ್ರವನ್||

ಸಂಜಯನು ಹೇಳಿದನು: “ಆಗ ಆ ಲೋಮಹರ್ಷಣ ಸಂಗ್ರಾಮವು ಪ್ರಾರಂಭವಾಗಲು ಪಾಂಡವರು ಮೂರು ಭಾಗಗಳಾಗಿ ಒಡೆದಿದ್ದ ಕೌರವೇಯರ ಸೇನೆಯೊಂದಿಗೆ ಹೋರಾಡಿದರು.

07072002a ಜಲಸಂಧಂ ಮಹಾಬಾಹುರ್ಭೀಮಸೇನೋ ನ್ಯವಾರಯತ್|

07072002c ಯುಧಿಷ್ಠಿರಃ ಸಹಾನೀಕಃ ಕೃತವರ್ಮಾಣಮಾಹವೇ||

ಮಹಾಬಾಹು ಭೀಮಸೇನನು ಜಲಸಂಧನನ್ನು ಎದುರಿಸಿದನು. ಯಧಿಷ್ಠಿರನು ಸೇನೆಯೊಂದಿಗೆ ಯುದ್ಧದಲ್ಲಿ ಕೃತವರ್ಮನನ್ನು ಎದುರಿಸಿದನು.

07072003a ಕಿರಂತಂ ಶರವರ್ಷಾಣಿ ರೋಚಮಾನ ಇವಾಂಶುಮಾನ್|

07072003c ಧೃಷ್ಟದ್ಯುಮ್ನೋ ಮಹಾರಾಜ ದ್ರೋಣಮಭ್ಯದ್ರವದ್ರಣೇ||

ಮಹಾರಾಜ! ಸೂರ್ಯನು ಕಿರಣಗಳನ್ನು ಪಸರಿಸುವಂತೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು.

07072004a ತತಃ ಪ್ರವವೃತೇ ಯುದ್ಧಂ ತ್ವರತಾಂ ಸರ್ವಧನ್ವಿನಾಂ|

07072004c ಕುರೂಣಾಂ ಸೋಮಕಾನಾಂ ಚ ಸಂಕ್ರುದ್ಧಾನಾಂ ಪರಸ್ಪರಂ||

ಆಗ ತ್ವರೆಯಲ್ಲಿದ್ದ ಪರಸ್ಪರ ಸಂಕ್ರುದ್ಧರಾಗಿದ್ದ ಕುರುಗಳ ಮತ್ತು ಸೋಮಕರ ಸರ್ವಧನ್ವಿಗಳ ನಡುವೆ ಯುದ್ಧವು ನಡೆಯಿತು.

07072005a ಸಂಕ್ಷಯೇ ತು ತಥಾ ಭೂತೇ ವರ್ತಮಾನೇ ಮಹಾಭಯೇ|

07072005c ದ್ವಂದ್ವೀಭೂತೇಷು ಸೈನ್ಯೇಷು ಯುಧ್ಯಮಾನೇಷ್ವಭೀತವತ್||

ಹಾಗೆ ಮಹಾಭಯದ ವಿನಾಶವು ನಡೆಯುತ್ತಿರಲು ಎರಡೂ ಸೇನೆಗಳಲ್ಲಿ ಭಯಗೊಳ್ಳದೇ ಯುದ್ಧಮಾಡುತ್ತಿದ್ದರು.

07072006a ದ್ರೋಣಃ ಪಾಂಚಾಲಪುತ್ರೇಣ ಬಲೀ ಬಲವತಾ ಸಹ|

07072006c ವಿಚಿಕ್ಷೇಪ ಪೃಷತ್ಕೌಘಾಂಸ್ತದದ್ಭುತಮಿವಾಭವತ್||

ಬಲೀ ದ್ರೋಣನು ಬಲವಂತನಾದ ಪಾಂಚಾಲಪುತ್ರನೊಂದಿಗೆ ಯುದ್ಧಮಾಡಿದನು. ಅವನು ಕಳುಹಿಸಿದ ಬಾಣಗಳ ಸಮೂಹಗಳು ಎಲ್ಲಕಡೆ ತುಂಬಿಕೊಳ್ಳಲು ಅದೊಂದು ಅದ್ಭುತವಾಯಿತು.

07072007a ಪುಂಡರೀಕವನಾನೀವ ವಿಧ್ವಸ್ತಾನಿ ಸಮಂತತಃ|

07072007c ಚಕ್ರಾತೇ ದ್ರೋಣಪಾಂಚಾಲ್ಯೌ ನೃಣಾಂ ಶೀರ್ಷಾಣ್ಯನೇಕಶಃ||

ಕಮಲಗಳ ವನವನ್ನು ಎಲ್ಲಕಡೆಗಳಿಂದ ಧ್ವಂಸಗೊಳಿಸುವಂತೆ ದ್ರೋಣ ಮತ್ತು ಪಾಂಚಾಲ್ಯರು ಅನೇಕ ನರರ ಶಿರಗಳನ್ನು ಉರುಳಿಸಿದರು.

07072008a ವಿನಿಕೀರ್ಣಾನಿ ವೀರಾಣಾಮನೀಕೇಷು ಸಮಂತತಃ|

07072008c ವಸ್ತ್ರಾಭರಣಶಸ್ತ್ರಾಣಿ ಧ್ವಜವರ್ಮಾಯುಧಾನಿ ಚ||

ಸೇನೆಗಳಲ್ಲಿ ಎಲ್ಲ ಕಡೆಗಳಲ್ಲಿ ವೀರರ ವಸ್ತ್ರಾಭರಣ ಶಸ್ತ್ರಗಳು, ಧ್ವಜ-ಕವಚ-ಆಯುಧಗಳು ಹರಡಿ ಬಿದ್ದಿದ್ದವು.

07072009a ತಪನೀಯವಿಚಿತ್ರಾಂಗಾಃ ಸಂಸಿಕ್ತಾ ರುಧಿರೇಣ ಚ|

07072009c ಸಂಸಕ್ತಾ ಇವ ದೃಶ್ಯಂತೇ ಮೇಘಸಂಘಾಃ ಸವಿದ್ಯುತಃ||

ಬಂಗಾರದ ಕವಚಗಳು ರಕ್ತದಿಂದ ತೋಯ್ದು ಹೋಗಿ ಮಿಂಚಿನಿಂದ ಕೂಡಿದ ಮೇಘಗಳ ರಾಶಿಗಳಂತೆ ಕಾಣುತ್ತಿದ್ದವು.

07072010a ಕುಂಜರಾಶ್ವನರಾನ್ಸಂಖ್ಯೇ ಪಾತಯಂತಃ ಪತತ್ರಿಭಿಃ|

07072010c ತಾಲಮಾತ್ರಾಣಿ ಚಾಪಾನಿ ವಿಕರ್ಷಂತೋ ಮಹಾರಥಾಃ||

ಮಹಾರಥರು ತಾಲಮಾತ್ರದ ಚಾಪಗಳನ್ನು ಸೆಳೆಯುತ್ತಾ ಪತತ್ರಿಗಳಿಂದ ಯುದ್ಧದಲ್ಲಿ ಆನೆ-ಕುದುರೆ-ನರರನ್ನು ಬೀಳಿಸುತ್ತಿದ್ದರು.

07072011a ಅಸಿಚರ್ಮಾಣಿ ಚಾಪಾನಿ ಶಿರಾಂಸಿ ಕವಚಾನಿ ಚ|

07072011c ವಿಪ್ರಕೀರ್ಯಂತ ಶೂರಾಣಾಂ ಸಂಪ್ರಹಾರೇ ಮಹಾತ್ಮನಾಂ||

ಮಹಾತ್ಮ ಶೂರರು ಪ್ರಹರಿಸುತ್ತಿದ್ದ ಖಡ್ಗ, ಗುರಾಣಿ, ಬಿಲ್ಲುಗಳು, ಶಿರಗಳು, ಕವಚಗಳು ಹರಡಿ ಬಿದ್ದಿದ್ದವು.

07072012a ಉತ್ಥಿತಾನ್ಯಗಣೇಯಾನಿ ಕಬಂಧಾನಿ ಸಮಂತತಃ|

07072012c ಅದೃಶ್ಯಂತ ಮಹಾರಾಜ ತಸ್ಮಿನ್ಪರಮಸಂಕುಲೇ||

ಮಹಾರಾಜ! ಆ ಪರಮ ಸಂಕುಲಯುದ್ಧದಲ್ಲಿ ಎಲ್ಲ ಕಡೆಗಳಲ್ಲಿ ಮೇಲೆ ಏಳುತ್ತಿದ್ದ ಅನೇಕ ಕಬಂಧಗಳು ಕಾಣುತ್ತಿದ್ದವು.

07072013a ಗೃಧ್ರಾಃ ಕಂಕಾ ವಡಾಃ ಶ್ಯೇನಾ ವಾಯಸಾ ಜಂಬುಕಾಸ್ತಥಾ|

07072013c ಬಹವಃ ಪಿಶಿತಾಶಾಶ್ಚ ತತ್ರಾದೃಶ್ಯಂತ ಮಾರಿಷ||

07072014a ಭಕ್ಷಯಂತಃ ಸ್ಮ ಮಾಂಸಾನಿ ಪಿಬಂತಶ್ಚಾಪಿ ಶೋಣಿತಂ|

07072014c ವಿಲುಂಪಂತಃ ಸ್ಮ ಕೇಶಾಂಶ್ಚ ಮಜ್ಜಾಶ್ಚ ಬಹುಧಾ ನೃಪ||

07072015a ಆಕರ್ಷಂತಃ ಶರೀರಾಣಿ ಶರೀರಾವಯವಾಂಸ್ತಥಾ|

07072015c ನರಾಶ್ವಗಜಸಂಘಾನಾಂ ಶಿರಾಂಸಿ ಚ ತತಸ್ತತಃ||

ಮಾರಿಷ! ಹದ್ದುಗಳು, ಕಂಕಗಳು, ತೋಳಗಳು, ನರಿಗಳು, ಕಾಗೆಗಳು, ಜಂಬುಕಗಳು ಮತ್ತು ಇನ್ನೂ ಅನೇಕ ಮಾಂಸಾಹಾರಿಗಳು ಮಾಂಸಗಳನ್ನು ಭಕ್ಷಿಸುತ್ತಿರುವುದು, ರಕ್ತವನ್ನು ಕುಡಿಯುತ್ತಿರುವುದು, ಕೇಶಗಳನ್ನೂ, ಎಲುಬುಗಳನ್ನು ನೆಕ್ಕುತ್ತಿರುವುದು, ಅನೇಕ ಶರೀರಗಳಿಂದ ಶರೀರದ ಅವಯವಗಳನ್ನು ಕಿತ್ತು ಎಳೆಯುತ್ತಿರುವುದು, ನರರು-ಅಶ್ವ-ಗಜ ಸಮೂಹಗಳ ಶಿರಗಳನ್ನೂ ಎಳೆಯುತ್ತಿರುವುದು ಅಲ್ಲಲ್ಲಿ ಕಂಡಿತು.

07072016a ಕೃತಾಸ್ತ್ರಾ ರಣದೀಕ್ಷಾಭಿರ್ದೀಕ್ಷಿತಾಃ ಶರಧಾರಿಣಃ|

07072016c ರಣೇ ಜಯಂ ಪ್ರಾರ್ಥಯಂತೋ ಭೃಶಂ ಯುಯುಧಿರೇ ತದಾ||

ಅಸ್ತ್ರವಿದರಾದ, ರಣದೀಕ್ಷೆಯ ದೀಕ್ಷಿತರಾದ, ರಣದಲ್ಲಿ ಜಯವನ್ನು ಬಯಸುವ ಶರಧಾರಿಗಳು ಜೋರಾಗಿ ಯುದ್ಧ ಮಾಡಿದರು.

07072017a ಅಸಿಮಾರ್ಗಾನ್ಬಹುವಿಧಾನ್ವಿಚೇರುಸ್ತಾವಕಾ ರಣೇ|

07072017c ಋಷ್ಟಿಭಿಃ ಶಕ್ತಿಭಿಃ ಪ್ರಾಸೈಃ ಶೂಲತೋಮರಪಟ್ಟಿಶೈಃ||

07072018a ಗದಾಭಿಃ ಪರಿಘೈಶ್ಚಾನ್ಯೇ ವ್ಯಾಯುಧಾಶ್ಚ ಭುಜೈರಪಿ|

07072018c ಅನ್ಯೋನ್ಯಂ ಜಘ್ನಿರೇ ಕ್ರುದ್ಧಾ ಯುದ್ಧರಂಗಗತಾ ನರಾಃ||

ಯುದ್ಧರಂಗದಲ್ಲಿ ಇಳಿದಿದ್ದ ನರರು ರಣದಲ್ಲಿ ನಿನ್ನವರು ಬಹುವಿಧದ ವರಸೆಗಳಲ್ಲಿ ಖಡ್ಗಗಳನ್ನು ತಿರುಗಿಸುತ್ತಾ, ಋಷ್ಟಿ-ಶಕ್ತಿ-ಪ್ರಾಸ-ಶೂಲ-ತೋಮರ-ಪಟ್ಟಿಶ-ಗದೆ-ಪರಿಘ ಮತ್ತು ಇನ್ನೂ ಇತರ ಆಯುಧಗಳಿಂದ ಮತ್ತು ಭುಜಗಳಿಂದಲೂ ಅನ್ಯೋನ್ಯರನ್ನು ಕ್ರುದ್ಧರಾಗಿ ಸಂಹರಿಸಿದರು.

07072019a ರಥಿನೋ ರಥಿಭಿಃ ಸಾರ್ಧಮಶ್ವಾರೋಹಾಶ್ಚ ಸಾದಿಭಿಃ|

07072019c ಮಾತಂಗಾ ವರಮಾತಂಗೈಃ ಪದಾತಾಶ್ಚ ಪದಾತಿಭಿಃ||

07072020a ಕ್ಷೀಬಾ ಇವಾನ್ಯೇ ಚೋನ್ಮತ್ತಾ ರಂಗೇಷ್ವಿವ ಚ ಚಾರಣಾಃ|

07072020c ಉಚ್ಚುಕ್ರುಶುಸ್ತಥಾನ್ಯೋನ್ಯಂ ಜಘ್ನುರನ್ಯೋನ್ಯಮಾಹವೇ||

ರಥಿಗಳು ರಥಿಗಳೊಡನೆ, ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ, ಮಾತಂಗರು ಶ್ರೇಷ್ಠ ಮಾತಂಗರೊಂಡನೆ, ಪದಾತಿಗಳು ಪದಾತಿಗಳೊಡನೆ, ಮತ್ತು ಇತರರು ಉನ್ಮತ್ತರಾದವರಂತೆ ಕ್ರೀಡಾಂಗಣದಲ್ಲಿ ಸಂಚರಿಸುತ್ತಿರೋ ಎನ್ನುವವರಂತೆ ಅನ್ಯೋನ್ಯರನ್ನು ಕಿರುಚಾಡಿ ಕರೆದರು ಮತ್ತು ಅನ್ಯೋನ್ಯರನ್ನು ಸಂಹರಿಸಿದರು.

07072021a ವರ್ತಮಾನೇ ತಥಾ ಯುದ್ಧೇ ನಿರ್ಮರ್ಯಾದೇ ವಿಶಾಂ ಪತೇ|

07072021c ಧೃಷ್ಟದ್ಯುಮ್ನೋ ಹಯಾನಶ್ವೈರ್ದ್ರೋಣಸ್ಯ ವ್ಯತ್ಯಮಿಶ್ರಯತ್||

ವಿಶಾಂಪತೇ! ಮರ್ಯಾದೆಗಳಿಲ್ಲದೇ ನಡೆಯುತ್ತಿರುವ ಆ ಯುದ್ಧದಲ್ಲಿ ಧೃಷ್ಟದ್ಯುಮ್ನನು ತನ್ನ ಕುದುರೆಗಳು ದ್ರೋಣನ ಕುದುರೆಗಳೊಡನೆ ಬೆರೆಯಿಸಿದನು.

07072022a ತೇ ಹಯಾ ಸಾಧ್ವಶೋಭಂತ ವಿಮಿಶ್ರಾ ವಾತರಂಹಸಃ|

07072022c ಪಾರಾವತಸವರ್ಣಾಶ್ಚ ರಕ್ತಶೋಣಾಶ್ಚ ಸಂಯುಗೇ|

07072022e ಹಯಾಃ ಶುಶುಭಿರೇ ರಾಜನ್ಮೇಘಾ ಇವ ಸವಿದ್ಯುತಃ||

ರಾಜನ್! ಗಾಳಿಯ ವೇಗದಲ್ಲಿ ಹೋಗಬಲ್ಲ ಆ ಪಾರಿವಾಳದ ಬಣ್ಣದ ಕುದುರೆಗಳು ಕೆಂಪುಬಣ್ಣದ ಕುದುರೆಗಳೊಡನೆ ಸೇರಿ ರಣರಂಗದಲ್ಲಿ ಅವು ಮಿಂಚಿನಿಂದೊಡಗೂಡಿದ ಮೋಡಗಳಂತೆ ಚೆನ್ನಾಗಿ ಶೋಭಿಸಿದವು.

07072023a ಧೃಷ್ಟದ್ಯುಮ್ನಶ್ಚ ಸಂಪ್ರೇಕ್ಷ್ಯ ದ್ರೋಣಮಭ್ಯಾಶಮಾಗತಂ|

07072023c ಅಸಿಚರ್ಮಾದದೇ ವೀರೋ ಧನುರುತ್ಸೃಜ್ಯ ಭಾರತ||

ಭಾರತ! ದ್ರೋಣನು ತುಂಬಾ ಹತ್ತಿರ ಬಂದುದನ್ನು ನೋಡಿದ ವೀರ ಧೃಷ್ಟದ್ಯುಮ್ನನು ಧನುಸ್ಸನ್ನು ಬಿಸುಟು ಖಡ್ಗ-ಗುರಾಣಿಗಳನ್ನು ತೆಗೆದುಕೊಂಡನು.

07072024a ಚಿಕೀರ್ಷುರ್ದುಷ್ಕರಂ ಕರ್ಮ ಪಾರ್ಷತಃ ಪರವೀರಹಾ|

07072024c ಈಷಯಾ ಸಮತಿಕ್ರಮ್ಯ ದ್ರೋಣಸ್ಯ ರಥಮಾವಿಶತ್||

ಆಗ ಪರವೀರಹ ಪಾರ್ಷತನು ಈಶಾದಂಡವನ್ನು ಹಿಡಿದು ಹಾರಿ ದ್ರೋಣನ ರಥವನ್ನು ಪ್ರವೇಶಿಸಿ, ದುಷ್ಕರವಾದ ಕರ್ಮವನ್ನೇ ಮಾಡಿದನು.

07072025a ಅತಿಷ್ಠದ್ಯುಗಮಧ್ಯೇ ಸ ಯುಗಸನ್ನಹನೇಷು ಚ|

07072025c ಜಘಾನಾರ್ಧೇಷು ಚಾಶ್ವಾನಾಂ ತತ್ಸೈನ್ಯಾನ್ಯಭ್ಯಪೂಜಯನ್||

ನೊಗದ ಮೇಲೆ, ಸ್ವಲ್ಪ ಸಮಯ ನೊಗದ ಜೋಡಿನ ಮೇಲೆ ಮತ್ತು ಕುದುರೆಗಳ ಮೇಲೆ ನಿಂತುಕೊಂಡು ಸಂಚರಿಸುತ್ತಿದ್ದನು.

07072026a ಖಡ್ಗೇನ ಚರತಸ್ತಸ್ಯ ಶೋಣಾಶ್ವಾನಧಿತಿಷ್ಠತಃ|

07072026c ನ ದದರ್ಶಾಂತರಂ ದ್ರೋಣಸ್ತದದ್ಭುತಮಿವಾಭವತ್||

ಕೆಂಪುಕುದುರೆಗಳ ಮೇಲೆ ನಿಂತು ಖಡ್ಗವನ್ನು ತಿರುಗಿಸುತ್ತಿದ್ದ ಅವನನ್ನು ಹೊಡೆಯಲು ದ್ರೋಣನಿಗೆ ಅವಕಾಶವೇ ಸಿಗಲಿಲ್ಲ. ಅದೊಂದು ಅದ್ಭುತವಾಗಿತ್ತು.

07072027a ಯಥಾ ಶ್ಯೇನಸ್ಯ ಪತನಂ ವನೇಷ್ವಾಮಿಷಗೃದ್ಧಿನಃ|

07072027c ತಥೈವಾಸೀದಭೀಸಾರಸ್ತಸ್ಯ ದ್ರೋಣಂ ಜಿಘಾಂಸತಃ||

ವನದಲ್ಲಿ ಮಾಂಸದ ಆಸೆಯಿಂದ ಗಿಡುಗವು ಹಾರಿ ಎರಗುವಂತೆ ದ್ರೋಣನನ್ನು ಕೊಲ್ಲಲು ಬಯಸಿದ ಅವನ ವರ್ತನೆಯಾಗಿತ್ತು.

07072028a ತತಃ ಶರಶತೇನಾಸ್ಯ ಶತಚಂದ್ರಂ ಸಮಾಕ್ಷಿಪತ್|

07072028c ದ್ರೋಣೋ ದ್ರುಪದಪುತ್ರಸ್ಯ ಖಡ್ಗಂ ಚ ದಶಭಿಃ ಶರೈಃ||

07072029a ಹಯಾಂಶ್ಚೈವ ಚತುಃಷಷ್ಟ್ಯಾ ಶರಾಣಾಂ ಜಘ್ನಿವಾನ್ಬಲೀ|

07072029c ಧ್ವಜಂ ಚತ್ರಂ ಚ ಭಲ್ಲಾಭ್ಯಾಂ ತಥೋಭೌ ಪಾರ್ಷ್ಣಿಸಾರಥೀ||

ಆಗ ಬಲೀ ದ್ರೋಣನು ನೂರು ಶರಗಳಿಂದ ದ್ರುಪದಪುತ್ರನ ನೂರುಚಂದ್ರರಿದ್ದ ಗುರಾಣಿಯನ್ನೂ, ಹತ್ತು ಶರಗಳಿಂದ ಖಡ್ಗವನ್ನೂ, ಅರವತ್ನಾಲ್ಕು ಬಾಣಗಳಿಂದ ಕುದುರೆಗಳನ್ನೂ, ಭಲ್ಲಗಳೆರಡರಿಂದ ಧ್ವಜ-ಚತ್ರಗಳನ್ನು ಮತ್ತು ಇನ್ನೆರಡರಿಂದ ಅವನ ಪಾರ್ಷ್ಣಿಸಾರಥಿಗಳನ್ನೂ ಹೊಡೆದನು.

07072030a ಅಥಾಸ್ಮೈ ತ್ವರಿತೋ ಬಾಣಮಪರಂ ಜೀವಿತಾಂತಕಂ|

07072030c ಆಕರ್ಣಪೂರ್ಣಂ ಚಿಕ್ಷೇಪ ವಜ್ರಂ ವಜ್ರಧರೋ ಯಥಾ||

ಆಗ ತ್ವರೆಮಾಡಿ ಇನ್ನೊಂದು ಜೀವಿತವನ್ನು ಅಂತ್ಯಗೊಳಿಸಬಲ್ಲ ಬಾಣವನ್ನು ವಜ್ರಧರನು ವಜ್ರವನ್ನು ಹೇಗೋ ಹಾಗೆ ಆಕರ್ಣಪೂರ್ಣಾಂತವಾಗಿ ಎಳೆದು ಪ್ರಯೋಗಿಸಿದನು.

07072031a ತಂ ಚತುರ್ದಶಭಿರ್ಬಾಣೈರ್ಬಾಣಂ ಚಿಚ್ಚೇದ ಸಾತ್ಯಕಿಃ|

07072031c ಗ್ರಸ್ತಮಾಚಾರ್ಯಮುಖ್ಯೇನ ಧೃಷ್ಟದ್ಯುಮ್ನಮಮೋಚಯತ್||

ಆ ಬಾಣವನ್ನು ಹದಿನಾಲ್ಕು ಬಾಣಗಳಿಂದ ತುಂಡರಿಸಿ ಸಾತ್ಯಕಿಯು ಆಚಾರ್ಯಮುಖ್ಯನ ಹಿಡಿತದಿಂದ ಧೃಷ್ಟದ್ಯುಮ್ನನನ್ನು ಬಿಡುಗಡೆಗೊಳಿಸಿದನು.

07072032a ಸಿಂಹೇನೇವ ಮೃಗಂ ಗ್ರಸ್ತಂ ನರಸಿಂಹೇನ ಮಾರಿಷ|

07072032c ದ್ರೋಣೇನ ಮೋಚಯಾಮಾಸ ಪಾಂಚಾಲ್ಯಂ ಶಿನಿಪುಂಗವಃ||

ಮಾರಿಷ! ಸಿಂಹದಿಂದ ಹಿಡಿಯಲ್ಪಟ್ಟಿದ್ದ ಜಿಂಕೆಯನ್ನು ಹೇಗೋ ಹಾಗಿ ಆ ನರಸಿಂಹ ಶಿನಿಪುಂಗವನು ಪಾಂಚಾಲ್ಯನನ್ನು ದ್ರೋಣನಿಂದ ಬಿಡುಗಡೆಗೊಳಿಸಿದನು.

07072033a ಸಾತ್ಯಕಿಂ ಪ್ರೇಕ್ಷ್ಯ ಗೋಪ್ತಾರಂ ಪಾಂಚಾಲ್ಯಸ್ಯ ಮಹಾಹವೇ|

07072033c ಶರಾಣಾಂ ತ್ವರಿತೋ ದ್ರೋಣಃ ಷಡ್ವಿಂಶತ್ಯಾ ಸಮರ್ಪಯತ್||

ಮಹಾಹವದಲ್ಲಿ ಪಾಂಚಾಲ್ಯನನ್ನು ಸಾತ್ಯಕಿಯು ರಕ್ಷಿಸಿದುದನ್ನು ನೋಡಿ ದ್ರೋಣನು ತ್ವರೆಮಾಡಿ ಇಪ್ಪತ್ತಾರು ಬಾಣಗಳಿಂದ ಅವನನ್ನು ಹೊಡೆದನು.

07072034a ತತೋ ದ್ರೋಣಂ ಶಿನೇಃ ಪೌತ್ರೋ ಗ್ರಸಂತಮಿವ ಸೃಂಜಯಾನ್|

07072034c ಪ್ರತ್ಯವಿಧ್ಯಚ್ಚಿತೈರ್ಬಾಣೈಃ ಷಡ್ವಿಂಶತ್ಯಾ ಸ್ತನಾಂತರೇ||

ಆಗ ಶಿನಿಯ ಪೌತ್ರನು ಸೃಂಜಯರನ್ನು ನುಂಗುವಂತಿದ್ದ ದ್ರೋಣನ ಎದೆಗೆ ಗುರಿಯಿಟ್ಟು ನಿಶಿತವಾದ ಇಪ್ಪತ್ತಾರು ಬಾಣಗಳಿಂದ ತಿರುಗಿ ಹೊಡೆದನು.

07072035a ತತಃ ಸರ್ವೇ ರಥಾಸ್ತೂರ್ಣಂ ಪಾಂಚಾಲಾ ಜಯಗೃದ್ಧಿನಃ|

07072035c ಸಾತ್ವತಾಭಿಸೃತೇ ದ್ರೋಣೇ ಧೃಷ್ಟದ್ಯುಮ್ನಮಮೋಚಯನ್||

ದ್ರೋಣನು ಸಾತ್ವತನೊಡನೆ ಯುದ್ಧದಲ್ಲಿ ತೊಡಗಲು ವಿಜಯೇಚ್ಛಿಗಳಾದ ಪಾಂಚಾಲ ರಥರು ಧೃಷ್ಟದ್ಯುಮ್ನನನ್ನು ಬೇಗನೆ ಬಿಡಿಸಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣಧೃಷ್ಟದ್ಯುಮ್ನಯುದ್ಧೇ ದ್ವಿಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣಧೃಷ್ಟದ್ಯುಮ್ನಯುದ್ಧ ಎನ್ನುವ ಎಪ್ಪತ್ತೆರಡನೇ ಅಧ್ಯಾಯವು.

Related image

Comments are closed.