Drona Parva: Chapter 53

ದ್ರೋಣ ಪರ್ವ: ಪ್ರತಿಜ್ಞಾ ಪರ್ವ

೫೩

ಕೌರವ ಶಿಬಿರದಲ್ಲಿ ನಡೆದುದನ್ನು ವರದಿ ಮಾಡುತ್ತಾ ಕೃಷ್ಣನು “ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ” ಎಂದು ಅರ್ಜುನನಿಗೆ ಹೇಳಿದುದು (೧-೩೦). ಅರ್ಜುನನ ಧೈರ್ಯಯುಕ್ತ ಮಾತುಗಳು (೩೧-೫೩).

07053001 ಸಂಜಯ ಉವಾಚ|

07053001a ಪ್ರತಿಜ್ಞಾತೇ ತು ಪಾರ್ಥೇನ ಸಿಂಧುರಾಜವಧೇ ತದಾ|

07053001c ವಾಸುದೇವೋ ಮಹಾಬಾಹುರ್ಧನಂಜಯಮಭಾಷತ||

ಸಂಜಯನು ಹೇಳಿದನು: “ಪಾರ್ಥನು ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಲು ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು:

07053002a ಭ್ರಾತೄಣಾಂ ಮತಮಾಜ್ಞಾಯ ತ್ವಯಾ ವಾಚಾ ಪ್ರತಿಶ್ರುತಂ|

07053002c ಸೈಂಧವಂ ಶ್ವೋಽಸ್ಮಿ ಹಂತೇತಿ ತತ್ಸಾಹಸತಮಂ ಕೃತಂ||

“ಸಹೋದರರ ಅಭಿಪ್ರಾಯಗಳನ್ನು ತಿಳಿಯದೆಯೇ ನೀನು “ನಾಳೆ ಸೈಂಧವನನ್ನು ಕೊಲ್ಲುತ್ತೇನೆ!” ಎಂದು ಅತಿಸಾಹಸ ಕಾರ್ಯವನ್ನು ಮಾತಿನ ಮೂಲಕ ಕೇಳಿಸಿಬಿಟ್ಟೇ!

07053003a ಅಸಮ್ಮಂತ್ರ್ಯ ಮಯಾ ಸಾರ್ಧಮತಿಭಾರೋಽಯಮುದ್ಯತಃ|

07053003c ಕಥಂ ನು ಸರ್ವಲೋಕಸ್ಯ ನಾವಹಾಸ್ಯಾ ಭವೇಮಹಿ||

ನನ್ನೊಡನೆ ಕೂಡ ವಿಚಾರಿಸದೇ ನೀನು ಅತಿಭಾರವಾದ ಈ ಕಾರ್ಯವನ್ನು ವಹಿಸಿಕೊಂಡಿರುವೆ. ಈಗ ನಾವು ಸರ್ವಲೋಕದ ಅಪಹಾಸ್ಯಕ್ಕೆ ಒಳಗಾಗದಂತೆ ಹೇಗೆ ಮುಂದುವರೆಯಬೇಕು?

07053004a ಧಾರ್ತರಾಷ್ಟ್ರಸ್ಯ ಶಿಬಿರೇ ಮಯಾ ಪ್ರಣಿಹಿತಾಶ್ಚರಾಃ|

07053004c ತ ಇಮೇ ಶೀಘ್ರಮಾಗಮ್ಯ ಪ್ರವೃತ್ತಿಂ ವೇದಯಂತಿ ನಃ||

ಧಾರ್ತರಾಷ್ಟ್ರನ ಶಿಬಿರಕ್ಕೆ ನಾನು ಕಳುಹಿಸಿದ ಚರರು ಶೀಘ್ರವಾಗಿ ಬಂದು ಅಲ್ಲಿ ನಡೆದುದನ್ನು ನನಗೆ ತಿಳಿಸಿದ್ದಾರೆ.

07053005a ತ್ವಯಾ ವೈ ಸಂಪ್ರತಿಜ್ಞಾತೇ ಸಿಂಧುರಾಜವಧೇ ತದಾ|

07053005c ಸಿಂಹನಾದಃ ಸವಾದಿತ್ರಃ ಸುಮಹಾನಿಹ ತೈಃ ಶ್ರುತಃ||

ನೀನು ಸಿಂಧುರಾಜವಧೆಯ ಪ್ರತಿಜ್ಞೆ ಮಾಡಿದಾಗ ಇಲ್ಲಿ ಆದ ಮಹಾ ಸಿಂಹನಾದವನ್ನು ಅವರು ಕೇಳಿದರು.

07053006a ತೇನ ಶಬ್ದೇನ ವಿತ್ರಸ್ತಾ ಧಾರ್ತರಾಷ್ಟ್ರಾಃ ಸಸೈಂಧವಾಃ|

07053006c ನಾಕಸ್ಮಾತ್ಸಿಂಹನಾದೋಽಯಮಿತಿ ಮತ್ವಾ ವ್ಯವಸ್ಥಿತಾಃ||

ಆ ಶಬ್ಧದಿಂದ ಭಯಗೊಂಡ ಸೈಂಧವನೊಂದಿಗೆ ಧಾರ್ತರಾಷ್ಟ್ರರು ಇದು ಅಕಸ್ಮಾತ್ತಾಗಿ ಕೇಳಿಬಂದ ಸಿಂಹನಾದವಲ್ಲವೆಂದು ಅಭಿಪ್ರಾಯಪಟ್ಟು ಒಟ್ಟು ಗೂಡಿದರು.

07053007a ಸುಮಹಾಂ ಶಬ್ದಸಂಪಾತಃ ಕೌರವಾಣಾಂ ಮಹಾಭುಜ|

07053007c ಆಸೀನ್ನಾಗಾಶ್ವಪತ್ತೀನಾಂ ರಥಘೋಷಶ್ಚ ಭೈರವಃ||

ಮಹಾಭುಜ! ಕೌರವರ ಸೇನೆಗಳಲ್ಲಿಯೂ ಆನೆ-ಕುದುರೆ-ಪದಾತಿಗಳ ಮತ್ತು ರಥಘೋಷದ ಭೈರವ ಶಬ್ಧವು ಕೇಳಿಬಂದಿತು.

07053008a ಅಭಿಮನ್ಯುವಧಂ ಶ್ರುತ್ವಾ ಧ್ರುವಮಾರ್ತೋ ಧನಂಜಯಃ|

07053008c ರಾತ್ರೌ ನಿರ್ಯಾಸ್ಯತಿ ಕ್ರೋಧಾದಿತಿ ಮತ್ವಾ ವ್ಯವಸ್ಥಿತಾಃ||

ಅಭಿಮನ್ಯುವಿನ ವಧೆಯನ್ನು ಕೇಳಿ ಆರ್ತನಾದ ಧನಂಜಯನು ನಿಶ್ಚಯವಾಗಿ ಕ್ರೋಧದಿಂದ ರಾತ್ರಿಯೇ ಯುದ್ಧಕ್ಕೆ ಹೊರಡುತ್ತಾನೆ ಎಂದು ಯೋಚಿಸಿ ಅವರು ಸನ್ನದ್ಧರಾಗಿದ್ದರು.

07053009a ತೈರ್ಯತದ್ಭಿರಿಯಂ ಸತ್ಯಾ ಶ್ರುತಾ ಸತ್ಯವತಸ್ತವ|

07053009c ಪ್ರತಿಜ್ಞಾ ಸಿಂಧುರಾಜಸ್ಯ ವಧೇ ರಾಜೀವಲೋಚನ||

ರಾಜೀವಲೋಚನ! ಆಗ ಅವರು ಸತ್ಯವತನಾದ ನೀನು ಸಿಂಧುರಾಜನ ವಧೆಯ ಕುರಿತು ಮಾಡಿದ ಪ್ರತಿಜ್ಞೆಯ ಸತ್ಯವನ್ನು ಕೇಳಿ ತಿಳಿದುಕೊಂಡರು.

07053010a ತತೋ ವಿಮನಸಃ ಸರ್ವೇ ತ್ರಸ್ತಾಃ ಕ್ಷುದ್ರಮೃಗಾ ಇವ|

07053010c ಆಸನ್ಸುಯೋಧನಾಮಾತ್ಯಾಃ ಸ ಚ ರಾಜಾ ಜಯದ್ರಥಃ||

07053011a ಅಥೋತ್ಥಾಯ ಸಹಾಮಾತ್ಯೈರ್ದೀನಃ ಶಿಬಿರಮಾತ್ಮನಃ|

07053011c ಆಯಾತ್ಸೌವೀರಸಿಂಧೂನಾಮೀಶ್ವರೋ ಭೃಶದುಃಖಿತಃ||

ಆಗ ಸುಯೋಧನ ಮತ್ತು ಅವನ ಅಮಾತ್ಯರು ಕ್ಷುದ್ರಮೃಗಗಳಂತೆ ಭಯಗೊಂಡು ವಿಮನಸ್ಕರಾಗಿ ಕುಳಿತುಕೊಂಡರು. ಆಗ ದೀನ ಸೌವೀರ ಸಿಂಧುಗಳ ಒಡೆಯ ರಾಜಾ ಜಯದ್ರಥನು ತುಂಬಾ ದುಃಖಿತನಾಗಿ ಎದ್ದು ಅಮಾತ್ಯರೊಡಗೂಡಿ ತನ್ನ ಶಿಬಿರಕ್ಕೆ ತೆರಳಿದನು.

07053012a ಸ ಮಂತ್ರಕಾಲೇ ಸಮ್ಮಂತ್ರ್ಯ ಸರ್ವಾ ನೈಃಶ್ರೇಯಸೀಃ ಕ್ರಿಯಾಃ|

07053012c ಸುಯೋಧನಮಿದಂ ವಾಕ್ಯಮಬ್ರವೀದ್ರಾಜಸಂಸದಿ||

ಅವನು ಯೋಚಿಸಬೇಕಾದ ಸಮಯದಲ್ಲಿ ಶ್ರೇಯಸ್ಸುಂಟುಮಾಡುವ ಎಲ್ಲ ಕ್ರಿಯೆಗಳ ಕುರಿತು ಮಂತ್ರಾಲೋಚನೆ ಮಾಡಿ ರಾಜಸಂಸದಿಗೆ ಬಂದು ಸುಯೋಧನನಿಗೆ ಈ ಮಾತನ್ನಾಡಿದನು:

07053013a ಮಾಮಸೌ ಪುತ್ರಹಂತೇತಿ ಶ್ವೋಽಭಿಯಾತಾ ಧನಂಜಯಃ|

07053013c ಪ್ರತಿಜ್ಞಾತೋ ಹಿ ಸೇನಾಯಾ ಮಧ್ಯೇ ತೇನ ವಧೋ ಮಮ||

“ತನ್ನ ಮಗನನ್ನು ಕೊಂದವನು ನಾನು ಎಂದು ತಿಳಿದು ಧನಂಜಯನು ನಾಳೆ ಯುದ್ಧದಲ್ಲಿ ನನ್ನನ್ನು ಎದುರಿಸುವನಿದ್ದಾನೆ. ಅವನ ಸೇನೆಯ ಮಧ್ಯೆ ನನ್ನನ್ನು ವಧಿಸುವ ಪ್ರತಿಜ್ಞೆಯನ್ನೂ ಮಾಡಿದ್ದಾನೆ.

07053014a ತಾಂ ನ ದೇವಾ ನ ಗಂಧರ್ವಾ ನಾಸುರೋರಗರಾಕ್ಷಸಾಃ|

07053014c ಉತ್ಸಹಂತೇಽನ್ಯಥಾ ಕರ್ತುಂ ಪ್ರತಿಜ್ಞಾಂ ಸವ್ಯಸಾಚಿನಃ||

ಸವ್ಯಸಾಚಿಯ ಪ್ರತಿಜ್ಞೆಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಸುಳ್ಳುಮಾಡಲು ಉತ್ಸುಕರಾಗಿಲ್ಲ.

07053015a ತೇ ಮಾಂ ರಕ್ಷತ ಸಂಗ್ರಾಮೇ ಮಾ ವೋ ಮೂರ್ಧ್ನಿ ಧನಂಜಯಃ|

07053015c ಪದಂ ಕೃತ್ವಾಪ್ನುಯಾಲ್ಲಕ್ಷ್ಯಂ ತಸ್ಮಾದತ್ರ ವಿಧೀಯತಾಂ||

ಆದುದರಿಂದ ನೀವೆಲ್ಲರೂ ಸಂಗ್ರಾಮದಲ್ಲಿ ನನ್ನನ್ನು ರಕ್ಷಿಸಬೇಕು. ನಿಮ್ಮ ನೆತ್ತಿಯ ಮೇಲೆ ಕಾಲಿಟ್ಟು ಧನಂಜಯನು ತನ್ನ ಗುರಿಯನ್ನು ಹೊಡೆಯಲು ಬಿಡಬೇಡಿ!

07053016a ಅಥ ರಕ್ಷಾ ನ ಮೇ ಸಂಖ್ಯೇ ಕ್ರಿಯತೇ ಕುರುನಂದನ|

07053016c ಅನುಜಾನೀಹಿ ಮಾಂ ರಾಜನ್ಗಮಿಷ್ಯಾಮಿ ಗೃಹಾನ್ಪ್ರತಿ||

ಕುರುನಂದನ! ಯುದ್ಧದಲ್ಲಿ ನೀನು ನನ್ನನ್ನು ರಕ್ಷಿಸಲಾರೆ ಎಂದಾದರೆ ರಾಜನ್! ನನಗೆ ಅನುಜ್ಞೆಯನ್ನು ನೀಡು. ನಾನು ನನ್ನ ಮನೆಗೆ ಹೋಗುತ್ತೇನೆ.”

07053017a ಏವಮುಕ್ತಸ್ತ್ವವಾಕ್ಶೀರ್ಷೋ ವಿಮನಾಃ ಸ ಸುಯೋಧನಃ|

07053017c ಶ್ರುತ್ವಾಭಿಶಪ್ತವಂತಂ ತ್ವಾಂ ಧ್ಯಾನಂ ಏವಾನ್ವಪದ್ಯತ||

ಹೀಗೆ ಹೇಳಲು ಸುಯೋಧನನು ವಿಮನಸ್ಕನಾಗಿ ತಲೆತಗ್ಗಿಸಿ ಯೋಚಿಸಿದನು. ಅವನು ಹೀಗೆ ಶಪಿತನಾದುದನ್ನು ಕೇಳಿ ಸುಮ್ಮನಾಗಿ ಯೋಚಿಸತೊಡಗಿದನು.

07053018a ತಮಾರ್ತಮಭಿಸಂಪ್ರೇಕ್ಷ್ಯ ರಾಜಾ ಕಿಲ ಸ ಸೈಂಧವಃ|

07053018c ಮೃದು ಚಾತ್ಮಹಿತಂ ಚೈವ ಸಾಪೇಕ್ಷಮಿದಮುಕ್ತವಾನ್||

ರಾಜನು ದುಃಖಿತನಾಗಿರುವುದನ್ನು ನೋಡಿ ಸೈಂಧವನು ತನಗೆ ಒಳ್ಳೆಯದಾಗುವ ರೀತಿಯಲ್ಲಿ ಮೃದುವಾಗಿ ಹೀಗೆ ಹೇಳಿದನು:

07053019a ನಾಹಂ ಪಶ್ಯಾಮಿ ಭವತಾಂ ತಥಾವೀರ್ಯಂ ಧನುರ್ಧರಂ|

07053019c ಯೋಽರ್ಜುನಸ್ಯಾಸ್ತ್ರಮಸ್ತ್ರೇಣ ಪ್ರತಿಹನ್ಯಾನ್ಮಹಾಹವೇ||

“ಮಹಾಹವದಲ್ಲಿ ಅರ್ಜುನನ ಅಸ್ತ್ರಗಳನ್ನು ಅಸ್ತ್ರಗಳಿಂದ ಪ್ರತಿಯಾಗಿ ಹೊಡೆಯಬಲ್ಲ, ಅವನಷ್ಟು ವೀರ್ಯವಂತನಾದ ಧನುರ್ಧರನನ್ನು ನಿನ್ನ ಕಡೆಯವರಲ್ಲಿ ಯಾರನ್ನೂ ನಾನು ಕಾಣುತ್ತಿಲ್ಲ.

07053020a ವಾಸುದೇವಸಹಾಯಸ್ಯ ಗಾಂಡೀವಂ ಧುನ್ವತೋ ಧನುಃ|

07053020c ಕೋಽರ್ಜುನಸ್ಯಾಗ್ರತಸ್ತಿಷ್ಠೇತ್ಸಾಕ್ಷಾದಪಿ ಶತಕ್ರತುಃ||

ವಾಸುದೇವನನ್ನು ಸಹಾಯಕನಾಗಿ ಪಡೆದಿರುವ, ಗಾಂಡೀವ ಧನುಸ್ಸನ್ನು ಟೇಂಕರಿಸುವ ಅರ್ಜುನನ ಎದುರು ಸಾಕ್ಷಾತ್ ಶತಕ್ರತುವೇ ನಿಲ್ಲದಿರುವಾಗ ಬೇರೆ ಯಾರಿಗೆ ತಾನೇ ಇದು ಸಾಧ್ಯ?

07053021a ಮಹೇಶ್ವರೋಽಪಿ ಪಾರ್ಥೇನ ಶ್ರೂಯತೇ ಯೋಧಿತಃ ಪುರಾ|

07053021c ಪದಾತಿನಾ ಮಹಾತೇಜಾ ಗಿರೌ ಹಿಮವತಿ ಪ್ರಭುಃ||

ಹಿಂದೆ ಹಿಮಾಲಯ ಗಿರಿಯಲ್ಲಿ ಮಹಾತೇಜಸ್ವಿ ಪ್ರಭೂ ಮಹೇಶ್ವರನೂ ಕೂಡ ಪಾರ್ಥನೊಂದಿಗೆ ನಿಂತೇ ಯುದ್ಧಮಾಡಿದನೆಂದು ಕೇಳಿದ್ದೇವೆ.

07053022a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ|

07053022c ಜಘಾನೇಕರಥೇನೈವ ದೇವರಾಜಪ್ರಚೋದಿತಃ||

ದೇವರಾಜನಿಂದ ಉತ್ತೇಜಿತನಾದ ಅವನು ಒಬ್ಬನೇ ರಥದಲ್ಲಿ ಹಿರಣ್ಯಪುರವಾಸಿನೀ ಸಹಸ್ರಾರು ದಾನವರನ್ನು ಸಂಹರಿಸಿದನು.

07053023a ಸಮಾಯುಕ್ತೋ ಹಿ ಕೌಂತೇಯೋ ವಾಸುದೇವೇನ ಧೀಮತಾ|

07053023c ಸಾಮರಾನಪಿ ಲೋಕಾಂಸ್ತ್ರೀನ್ನಿಹನ್ಯಾದಿತಿ ಮೇ ಮತಿಃ||

ಧೀಮತ ವಾಸುದೇವನಿಂದೊಡಗೂಡಿ ಕೌಂತೇಯನು ಅಮರರೊಂದಿಗೆ ಈ ಮೂರು ಲೋಕಗಳನ್ನೂ ನಾಶಗೊಳಿಸಬಲ್ಲ ಎಂದು ನನಗನ್ನಿಸುತ್ತದೆ.

07053024a ಸೋಽಹಮಿಚ್ಚಾಮ್ಯನುಜ್ಞಾತುಂ ರಕ್ಷಿತುಂ ವಾ ಮಹಾತ್ಮನಾ|

07053024c ದ್ರೋಣೇನ ಸಹಪುತ್ರೇಣ ವೀರೇಣ ಯದಿ ಮನ್ಯಸೇ||

ಆದುದರಿಂದ ನೀನು ತಿಳಿದಂತೆ ನನಗೆ ಹೋಗಲು ಅನುಜ್ಞೆಯನ್ನು ನೀಡು ಅಥವಾ ವೀರ ಪುತ್ರನೊಂದಿಗೆ ಮಹಾತ್ಮ ದ್ರೋಣನು ನನ್ನನ್ನು ರಕ್ಷಿಸಲಿ.”

07053025a ಸ ರಾಜ್ಞಾ ಸ್ವಯಮಾಚಾರ್ಯೋ ಭೃಶಮಾಕ್ರಂದಿತೋಽರ್ಜುನ|

07053025c ಸಂವಿಧಾನಂ ಚ ವಿಹಿತಂ ರಥಾಶ್ಚ ಕಿಲ ಸಜ್ಜಿತಾಃ||

ಅರ್ಜುನ! ಆಗ ಸ್ವಯಂ ರಾಜನು ತುಂಬಾ ಕಳವಳಗೊಂಡು ಆಚಾರ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ರಥಗಳನ್ನು ಸಜ್ಜುಗೊಳಿಸಲು ಆದೇಶವಿತ್ತಿದ್ದಾನೆ.

07053026a ಕರ್ಣೋ ಭೂರಿಶ್ರವಾ ದ್ರೌಣಿರ್ವೃಷಸೇನಶ್ಚ ದುರ್ಜಯಃ|

07053026c ಕೃಪಶ್ಚ ಮದ್ರರಾಜಶ್ಚ ಷಡೇತೇಽಸ್ಯ ಪುರೋಗಮಾಃ||

ಕರ್ಣ, ಭೂರಿಶ್ರವ, ದ್ರೌಣಿ, ವೃಷಸೇನ, ದುರ್ಜಯ ಮತ್ತು ಮದ್ರರಾಜ ಈ ಆರು ಮಂದಿ ಎದುರಿರುತ್ತಾರೆ.

07053027a ಶಕಟಃ ಪದ್ಮಪಶ್ಚಾರ್ಧೋ ವ್ಯೂಹೋ ದ್ರೋಣೇನ ಕಲ್ಪಿತಃ|

07053027c ಪದ್ಮಕರ್ಣಿಕಮಧ್ಯಸ್ಥಃ ಸೂಚೀಪಾಶೇ ಜಯದ್ರಥಃ|

07053027e ಸ್ಥಾಸ್ಯತೇ ರಕ್ಷಿತೋ ವೀರೈಃ ಸಿಂಧುರಾಡ್ಯುದ್ಧದುರ್ಮದೈಃ||

ಅರ್ಧ ಶಕಟ ಮತ್ತೊಂದು ಅರ್ಧ ಪದ್ಮಾಕಾರದ ವ್ಯೋಹವನ್ನು ದ್ರೋಣನು ಕಲ್ಪಿಸಿದ್ದಾನೆ. ಪದ್ಮಕರ್ಣಿಕದ ಮಧ್ಯದಲ್ಲಿ ಸೂಜಿಭಾಗದಲ್ಲಿ ಜಯದ್ರಥನಿರುತ್ತಾನೆ. ಹೀಗೆ ಸಿಂಧುರಾಜನು ಯುದ್ಧದುರ್ಮದ ವೀರರಿಂದ ರಕ್ಷಿಸಲ್ಪಟ್ಟಿದ್ದಾನೆ.

07053028a ಧನುಷ್ಯಸ್ತ್ರೇ ಚ ವೀರ್ಯೇ ಚ ಪ್ರಾಣೇ ಚೈವ ತಥೋರಸಿ|

07053028c ಅವಿಷಹ್ಯತಮಾ ಹ್ಯೇತೇ ನಿಶ್ಚಿತಾಃ ಪಾರ್ಥ ಷಡ್ರಥಾಃ|

07053028e ಏತಾನಜಿತ್ವಾ ಸಗಣಾನ್ನೈವ ಪ್ರಾಪ್ಯೋ ಜಯದ್ರಥಃ||

ಪಾರ್ಥ! ಧನುಸ್ಸು, ಅಸ್ತ್ರ, ವೀರ್ಯ, ಪ್ರಾಣ ಮತ್ತು ಹುಟ್ಟಿನಲ್ಲಿ ಹೆಚ್ಚಿನವರಾದ ಈ ಷಡ್ರಥರನ್ನು ಸುಲಭವಾಗಿ ಗೆಲ್ಲಲಾರೆವು ಎನ್ನುವುದು ಖಂಡಿತ. ಸೇನೆಗಳೊಂದಿಗೆ ಇವರನ್ನು ಗೆಲ್ಲದೇ ಜಯದ್ರಥನನ್ನು ನಾವು ತಲುಪಲಾರೆವು.

07053029a ತೇಷಾಂ ಏಕೈಕಶೋ ವೀರ್ಯಂ ಷಣ್ಣಾಂ ತ್ವಮನುಚಿಂತಯ|

07053029c ಸಹಿತಾ ಹಿ ನರವ್ಯಾಘ್ರಾ ನ ಶಕ್ಯಾ ಜೇತುಮಂಜಸಾ||

ಆ ಆರರಲ್ಲಿ ಒಬ್ಬೊಬ್ಬರ ವೀರ್ಯದ ಕುರಿತೂ ಯೋಚಿಸು. ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ.

07053030a ಭೂಯಶ್ಚ ಚಿಂತಯಿಷ್ಯಾಮಿ ನೀತಿಮಾತ್ಮಹಿತಾಯ ವೈ|

07053030c ಮಂತ್ರಜ್ಞೈಃ ಸಚಿವೈಃ ಸಾರ್ಧಂ ಸುಹೃದ್ಭಿಃ ಕಾರ್ಯಸಿದ್ಧಯೇ||

ಇನ್ನೊಮ್ಮೆ ನಾವು ಕಾರ್ಯಸಿದ್ಧಿಗಾಗಿ ಮತ್ತು ನಮ್ಮ ಹಿತದ ನೀತಿಯ ಕುರಿತು ಸಚಿವರೊಂದಿಗೆ ಮತ್ತು ಸುಹೃದಯರೊಂದಿಗೆ ಮಂತ್ರಾಲೋಚನೆ ಮಾಡಬೇಕೆಂದು ಯೋಚಿಸುತ್ತಿದ್ದೇನೆ.”

07053031 ಅರ್ಜುನ ಉವಾಚ|

07053031a ಷಡ್ರಥಾನ್ಧಾರ್ತರಾಷ್ಟ್ರಸ್ಯ ಮನ್ಯಸೇ ಯಾನ್ಬಲಾಧಿಕಾನ್|

07053031c ತೇಷಾಂ ವೀರ್ಯಂ ಮಮಾರ್ಧೇನ ನ ತುಲ್ಯಮಿತಿ ಲಕ್ಷಯೇ||

ಅರ್ಜುನನು ಹೇಳಿದನು: “ಯಾರ ಬಲವು ಅಧಿಕವೆಂದು ನೀನು ಅಭಿಪ್ರಾಯಪಡುತ್ತಿದ್ದೀಯೋ ಧಾರ್ತರಾಷ್ಟ್ರನ ಆ ಷಡ್ರಥರ ವೀರ್ಯವು ನನ್ನ ಅರ್ಧಕ್ಕೂ ಸಮನಿಲ್ಲ ಎಂದು ನನಗನ್ನಿಸುತ್ತದೆ.

07053032a ಅಸ್ತ್ರಮಸ್ತ್ರೇಣ ಸರ್ವೇಷಾಮೇತೇಷಾಂ ಮಧುಸೂದನ|

07053032c ಮಯಾ ದ್ರಕ್ಷ್ಯಸಿ ನಿರ್ಭಿನ್ನಂ ಜಯದ್ರಥವಧೈಷಿಣಾ||

ಮಧುಸೂದನ! ಜಯದ್ರಥನನ್ನು ವಧಿಸಲು ಬಯಸಿದ ನಾನು ಅವರೆಲ್ಲರ ಅಸ್ತ್ರಗಳನ್ನೂ ಅಸ್ತ್ರಗಳಿಂದ ತುಂಡುಮಾಡುವುದನ್ನು ನೀನು ನೋಡುವೆಯಂತೆ!

07053033a ದ್ರೋಣಸ್ಯ ಮಿಷತಃ ಸೋಽಹಂ ಸಗಣಸ್ಯ ವಿಲಪ್ಯತಃ|

07053033c ಮೂರ್ಧಾನಂ ಸಿಂಧುರಾಜಸ್ಯ ಪಾತಯಿಷ್ಯಾಮಿ ಭೂತಲೇ||

ಸೇನೆಗಳೊಂದಿಗೆ ದ್ರೋಣನು ನೋಡುತ್ತಾ ವಿಲಪಿಸಲು ನಾನು ಸಿಂಧುರಾಜನ ರುಂಡವನ್ನು ನೆಲಕ್ಕುರುಳಿಸುತ್ತೇನೆ!

07053034a ಯದಿ ಸಾಧ್ಯಾಶ್ಚ ರುದ್ರಾಶ್ಚ ವಸವಶ್ಚ ಸಹಾಶ್ವಿನಃ|

07053034c ಮರುತಶ್ಚ ಸಹೇಂದ್ರೇಣ ವಿಶ್ವೇದೇವಾಸ್ತಥಾಸುರಾಃ||

07053035a ಪಿತರಃ ಸಹಗಂಧರ್ವಾಃ ಸುಪರ್ಣಾಃ ಸಾಗರಾದ್ರಯಃ|

07053035c ದ್ಯೌರ್ವಿಯತ್ಪೃಥಿವೀ ಚೇಯಂ ದಿಶಶ್ಚ ಸದಿಗೀಶ್ವರಾಃ||

07053036a ಗ್ರಾಮ್ಯಾರಣ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|

07053036c ತ್ರಾತಾರಃ ಸಿಂಧುರಾಜಸ್ಯ ಭವಂತಿ ಮಧುಸೂದನ||

07053037a ತಥಾಪಿ ಬಾಣೈರ್ನಿಹತಂ ಶ್ವೋ ದ್ರಷ್ಟಾಸಿ ರಣೇ ಮಯಾ|

ಒಂದುವೇಳೆ ಸಾಧ್ಯರೂ, ರುದ್ರರೂ, ಅಶ್ವಿನಿಗಳೊಡನೆ ವಸುಗಳೂ, ಇಂದ್ರನೊಂದಿಗೆ ಮರುತರೂ, ವಿಶ್ವೇದೇವರೂ, ಹಾಗೆಯೇ ಅಸುರರೂ, ಗಂಧರ್ವರೊಡನೆ ಪಿತೃಗಳೂ, ಸುಪರ್ಣರೂ, ಸಾಗರ-ಪರ್ವತಗಳೂ, ಆಕಾಶ, ಭೂಮಿ, ದಿಕ್ಪಾಲಕರೊಂದಿಗೆ ದಿಕ್ಕುಗಳೂ, ಗ್ರಾಮ-ಅರಣ್ಯಗಳೂ, ಸ್ಥಾವರ-ಚರ ಭೂತಗಳೂ ಸಿಂಧುರಾಜನನ್ನು ರಕ್ಷಿಸಲು ಬಂದರೂ, ಮಧುಸೂದನ, ನಾಳೆ ರಣದಲ್ಲಿ ನನ್ನ ಬಾಣಗಳಿಂದ ಅವನು ಹತನಾಗುವುದನ್ನು ನೀನು ನೋಡುತ್ತೀಯೆ!

07053037c ಸತ್ಯೇನ ತೇ ಶಪೇ ಕೃಷ್ಣ ತಥೈವಾಯುಧಮಾಲಭೇ||

07053038a ಯಶ್ಚ ಗೋಪ್ತಾ ಮಹೇಷ್ವಾಸಸ್ತಸ್ಯ ಪಾಪಸ್ಯ ದುರ್ಮತೇಃ|

07053038c ತಮೇವ ಪ್ರಥಮಂ ದ್ರೋಣಮಭಿಯಾಸ್ಯಾಮಿ ಕೇಶವ||

ಕೃಷ್ಣ! ನನ್ನ ಆಯುಧವನ್ನು ಮುಟ್ಟಿಕೊಂಡು ಸತ್ಯವಾಗಿ ನಾನು ಈ ಶಪಥವನ್ನು ಮಾಡುತ್ತಿದ್ದೇನೆ. ಕೇಶವ! ಆ ಪಾಪಿ ದುರ್ಮತಿ ಮಹೇಷ್ವಾಸನ ರಕ್ಷಕನಾಗಿರುವ ದ್ರೋಣನನ್ನೇ ಮೊಟ್ಟಮೊದಲಿಗೆ ಎದುರಿಸುತ್ತೇನೆ.

07053039a ತಸ್ಮಿನ್ದ್ಯೂತಮಿದಂ ಬದ್ಧಂ ಮನ್ಯತೇ ಸ್ಮ ಸುಯೋಧನಃ|

07053039c ತಸ್ಮಾತ್ತಸ್ಯೈವ ಸೇನಾಗ್ರಂ ಭಿತ್ತ್ವಾ ಯಾಸ್ಯಾಮಿ ಸೈಂಧವಂ||

ಇವನೇ ದ್ಯೂತದ ಪಣವೆಂದು ಸುಯೋಧನನು ತಿಳಿದಿದ್ದಾನೆ. ಆದುದರಿಂದ ಅವನ ಸೇನೆಯ ಅಗ್ರಭಾಗವನ್ನು ಭೇದಿಸಿಯೇ ನಾನು ಸೈಂಧವನನ್ನು ಕೊಲ್ಲುತ್ತೇನೆ.

07053040a ದ್ರಷ್ಟಾಸಿ ಶ್ವೋ ಮಹೇಷ್ವಾಸಾನ್ನಾರಾಚೈಸ್ತಿಗ್ಮತೇಜನೈಃ|

07053040c ಶೃಂಗಾಣೀವ ಗಿರೇರ್ವಜ್ರೈರ್ದಾರ್ಯಮಾಣಾನ್ಮಯಾ ಯುಧಿ||

ವಜ್ರದಿಂದ ಗಿರಿಶೃಂಗಗಳನ್ನು ಸೀಳುವಂತೆ ಆ ಮಹೇಷ್ವಾಸರನ್ನು ನಾಳೆ ಯುದ್ಧದಲ್ಲಿ ನನ್ನ ತಿಗ್ಮತೇಜಸ್ವೀ ನಾರಾಚಗಳಿಂದ ಸೀಳುವುದನ್ನು ನೀನು ನೋಡುವೆ!

07053041a ನರನಾಗಾಶ್ವದೇಹೇಭ್ಯೋ ವಿಸ್ರವಿಷ್ಯತಿ ಶೋಣಿತಂ|

07053041c ಪತದ್ಭ್ಯಃ ಪತಿತೇಭ್ಯಶ್ಚ ವಿಭಿನ್ನೇಭ್ಯಃ ಶಿತೈಃ ಶರೈಃ||

ನಿಶಿತ ಶರಗಳಿಂದ ಒಡೆದು ಕೆಳಗೆ ಬೀಳುವ ಮತ್ತು ಬಿದ್ದ ಆನೆ, ಕುದುರೆ ಮತ್ತು ನರರ ಶರೀರಗಳಿಂದ ರಕ್ತವು ಹರಿಯುತ್ತದೆ.

07053042a ಗಾಂಡೀವಪ್ರೇಷಿತಾ ಬಾಣಾ ಮನೋನಿಲಸಮಾ ಜವೇ|

07053042c ನೃನಾಗಾಶ್ವಾನ್ವಿದೇಹಾಸೂನ್ಕರ್ತಾರಶ್ಚ ಸಹಸ್ರಶಃ||

ಗಾಂಡೀವದಿಂದ ಪ್ರಯೋಗಿಸಲ್ಪಟ್ಟ, ಮನಸ್ಸು ಮತ್ತು ವಾಯುವೇಗಗಳನ್ನುಳ್ಳ ಬಾಣಗಳು ಸಹಸ್ರಾರು ನರ-ಆನೆ-ಕುದುರೆಗಳ ದೇಹಗಳನ್ನು ಕತ್ತರಿಸಲಿವೆ.

07053043a ಯಮಾತ್ಕುಬೇರಾದ್ವರುಣಾದ್ರುದ್ರಾದಿಂದ್ರಾಚ್ಚ ಯನ್ಮಯಾ|

07053043c ಉಪಾತ್ತಮಸ್ತ್ರಂ ಘೋರಂ ವೈ ತದ್ದ್ರಷ್ಟಾರೋ ನರಾ ಯುಧಿ||

ಯಮ, ಕುಬೇರ, ವರುಣ, ರುದ್ರ ಮತ್ತು ಇಂದ್ರರಿಂದ ನಾನು ಯಾವ ಅಸ್ತ್ರಗಳನ್ನು ಪಡೆದಿದ್ದೆನೋ ಆ ಘೋರ ಅಸ್ತ್ರಗಳನ್ನು ನರರು ನಾಳೆ ಯುದ್ಧದಲ್ಲಿ ನೋಡಲಿದ್ದಾರೆ.

07053044a ಬ್ರಾಹ್ಮೇಣಾಸ್ತ್ರೇಣ ಚಾಸ್ತ್ರಾಣಿ ಹನ್ಯಮಾನಾನಿ ಸಂಯುಗೇ|

07053044c ಮಯಾ ದ್ರಷ್ಟಾಸಿ ಸರ್ವೇಷಾಂ ಸೈಂಧವಸ್ಯಾಭಿರಕ್ಷಿಣಾಂ||

ಸೈಂಧವನನ್ನು ರಕ್ಷಿಸುವವರೆಲ್ಲರೂ ಸಂಯುಗದಲ್ಲಿ ಅಸ್ತ್ರಗಳು ನನ್ನ ಬ್ರಹ್ಮಾಸ್ತ್ರದಿಂದ ನಾಶವಾಗುವುದನ್ನು ನೋಡಲಿದ್ದಾರೆ.

07053045a ಶರವೇಗಸಮುತ್ಕೃತ್ತೈ ರಾಜ್ಞಾಂ ಕೇಶವ ಮೂರ್ಧಭಿಃ|

07053045c ಆಸ್ತೀರ್ಯಮಾಣಾಂ ಪೃಥಿವೀಂ ದ್ರಷ್ಟಾಸಿ ಶ್ವೋ ಮಯಾ ಯುಧಿ||

ಕೇಶವ! ನಾಳೆ ಯುದ್ಧದಲ್ಲಿ ನನ್ನ ಶರವೇಗದಿಂದ ರಾಜರ ರುಂಡಗಳು ತುಂಡಾಗಿ ಭೂಮಿಯ ಮೇಲೆ ಚೆಲ್ಲಿ ಬೀಳುವುದನ್ನು ನೀನು ನೋಡಲಿರುವೆ.

07053046a ಕ್ರವ್ಯಾದಾಂಸ್ತರ್ಪಯಿಷ್ಯಾಮಿ ದ್ರಾವಯಿಷ್ಯಾಮಿ ಶಾತ್ರವಾನ್|

07053046c ಸುಹೃದೋ ನಂದಯಿಷ್ಯಾಮಿ ಪಾತಯಿಷ್ಯಾಮಿ ಸೈಂಧವಂ||

ಕ್ರವ್ಯಾದಗಳನ್ನು ತೃಪ್ತಿಪಡಿಸುತ್ತೇನೆ. ಶತ್ರುಗಳನ್ನು ಓಡಿಸುತ್ತೇನೆ. ಸ್ನೇಹಿತರನ್ನು ಸಂತೋಷಗೊಳಿಸುತ್ತೇನೆ. ಸೈಂಧವನನ್ನು ಉರುಳಿಸುತ್ತೇನೆ.

07053047a ಬಹ್ವಾಗಸ್ಕೃತ್ಕುಸಂಬಂಧೀ ಪಾಪದೇಶಸಮುದ್ಭವಃ|

07053047c ಮಯಾ ಸೈಂಧವಕೋ ರಾಜಾ ಹತಃ ಸ್ವಾಂ ಶೋಚಯಿಷ್ಯತಿ||

ಬಹಳಷ್ಟು ಕೆಟ್ಟದ್ದನ್ನು ಮಾಡಿರುವ, ಕೆಟ್ಟ ಸಂಬಂಧೀ, ಪಾಪದೇಶದಲ್ಲಿ ಹುಟ್ಟಿದ ರಾಜ ಸೈಂಧವನು ನನ್ನಿಂದ ಹತನಾಗಿ ತಾನೇ ಶೋಕಿಸುವವನಿದ್ದಾನೆ.

07053048a ಸರ್ವಕ್ಷೀರಾನ್ನಭೋಕ್ತಾರಃ ಪಾಪಾಚಾರಾ ರಣಾಜಿರೇ|

07053048c ಮಯಾ ಸರಾಜಕಾ ಬಾಣೈರ್ನುನ್ನಾ ನಂಕ್ಷ್ಯಂತಿ ಸೈಂಧವಾಃ||

ಸದಾ ಕ್ಷೀರಾನ್ನವನ್ನೇ ಉಣ್ಣುತ್ತಾ ಬಂದ ಆ ಪಾಪಾಚಾರೀ ಸೈಂಧವನು ರಾಜರೊಂದಿಗೆ ರಣದಲ್ಲಿ ನನ್ನ ಬಾಣಗಳಿಂದ ಸಾಯುತ್ತಾನೆ.

07053049a ತಥಾ ಪ್ರಭಾತೇ ಕರ್ತಾಸ್ಮಿ ಯಥಾ ಕೃಷ್ಣ ಸುಯೋಧನಃ|

07053049c ನಾನ್ಯಂ ಧನುರ್ಧರಂ ಲೋಕೇ ಮಂಸ್ಯತೇ ಮತ್ಸಮಂ ಯುಧಿ||

ಕೃಷ್ಣ! ನಾಳೆ ಬೆಳಿಗ್ಗೆ ಯುದ್ಧದಲ್ಲಿ ನನ್ನ ಸರಿಸಮನಾದ ಧನುರ್ಧರನು ಬೇರೆ ಯಾರೂ ಇಲ್ಲ ಎಂದು ಸುಯೋಧನನು ಯೋಚಿಸುವಂತೆ ಮಾಡುತ್ತೇನೆ.

07053050a ಗಾಂಡೀವಂ ಚ ಧನುರ್ದಿವ್ಯಂ ಯೋದ್ಧಾ ಚಾಹಂ ನರರ್ಷಭ|

07053050c ತ್ವಂ ಚ ಯಂತಾ ಹೃಷೀಕೇಶ ಕಿಂ ನು ಸ್ಯಾದಜಿತಂ ಮಯಾ||

ನರರ್ಷಭ! ಹೃಷೀಕೇಶ! ದಿವ್ಯ ಗಾಂಡೀವ ಧನುಸ್ಸಿನೊಡನೆ ಯುದ್ಧಮಾಡುವ ಮತ್ತು ನೀನೇ ಸಾರಥಿಯಾಗಿರುವ ನನ್ನನ್ನು ಯಾರುತಾನೇ ಗೆದ್ದಾರು?

07053051a ಯಥಾ ಹಿ ಲಕ್ಷ್ಮ ಚಂದ್ರೇ ವೈ ಸಮುದ್ರೇ ಚ ಯಥಾ ಜಲಂ|

07053051c ಏವಮೇತಾಂ ಪ್ರತಿಜ್ಞಾಂ ಮೇ ಸತ್ಯಾಂ ವಿದ್ಧಿ ಜನಾರ್ದನ||

ಜನಾರ್ದನ! ಚಂದ್ರನಲ್ಲಿ ಲಕ್ಷ್ಮಿಯಿರುವಂತೆ ಮತ್ತು ಸಮುದ್ರದಲ್ಲಿ ನೀರಿರುವಂತೆ ನನ್ನ ಪ್ರತಿಜ್ಞೆಯಲ್ಲಿಯೂ ಸತ್ಯವಿದೆಯೆಂದು ತಿಳಿ.

07053052a ಮಾವಮಂಸ್ಥಾ ಮಮಾಸ್ತ್ರಾಣಿ ಮಾವಮಂಸ್ಥಾ ಧನುರ್ದೃಢಂ|

07053052c ಮಾವಮಂಸ್ಥಾ ಬಲಂ ಬಾಹ್ವೋರ್ಮಾವಮಂಸ್ಥಾ ಧನಂಜಯಂ||

ನನ್ನ ಅಸ್ತ್ರಗಳನ್ನು ಅವಮಾನಿಸಬೇಡ! ನನ್ನ ದೃಢ ಧನುಸ್ಸನ್ನು ಅವಮಾನಿಸಬೇಡ! ನನ್ನ ಬಾಹುಗಳ ಬಲವನ್ನು ಅವಮಾನಿಸಬೇಡ! ಈ ಧನಂಜಯನನ್ನು ಅವಮಾನಿಸಬೇಡ!

07053053a ಯಥಾ ಹಿ ಯಾತ್ವಾ ಸಂಗ್ರಾಮೇ ನ ಜೀಯೇ ವಿಜಯಾಮಿ ಚ|

07053053c ತೇನ ಸತ್ಯೇನ ಸಂಗ್ರಾಮೇ ಹತಂ ವಿದ್ಧಿ ಜಯದ್ರಥಂ||

ಸೋಲನ್ನಪ್ಪದೇ ವಿಜಯಿಯಾಗುವ ಹಾಗೆ ನಾನು ಸಂಗ್ರಾಮವನ್ನು ಪ್ರವೇಶಿಸುತ್ತೇನೆ. ಅದೇ ಸತ್ಯದಿಂದ ಸಂಗ್ರಾಮದಲ್ಲಿ ಜಯದ್ರಥನನ್ನು ಕೊಲ್ಲುತ್ತೇನೆ ಎಂದು ತಿಳಿ.

07053054a ಧ್ರುವಂ ವೈ ಬ್ರಾಹ್ಮಣೇ ಸತ್ಯಂ ಧ್ರುವಾ ಸಾಧುಷು ಸನ್ನತಿಃ|

07053054c ಶ್ರೀರ್ಧ್ರುವಾ ಚಾಪಿ ದಕ್ಷೇಷು ಧ್ರುವೋ ನಾರಾಯಣೇ ಜಯಃ||

ಬ್ರಾಹ್ಮಣರಲ್ಲಿ ಸತ್ಯವು ನಿಶ್ಚಿತವಾದುದು. ಸಾಧುಗಳಲ್ಲಿ ಸನ್ನತಿಯು ನಿಶ್ಚಿತವಾದುದು. ದಕ್ಷರಲ್ಲಿ ಸಂಪತ್ತು ನಿಶ್ಚಿತವಾದುದು. ಮತ್ತು ನಾರಾಯಣನಲ್ಲಿ ಜಯವು ನಿಶ್ಚಿತವಾದುದು.””

07053055 ಸಂಜಯ ಉವಾಚ|

07053055a ಏವಮುಕ್ತ್ವಾ ಹೃಷೀಕೇಶಂ ಸ್ವಯಮಾತ್ಮಾನಮಾತ್ಮನಾ|

07053055c ಸಂದಿದೇಶಾರ್ಜುನೋ ನರ್ದನ್ವಾಸವಿಃ ಕೇಶವಂ ಪ್ರಭುಂ||

ಸಂಜಯನು ಹೇಳಿದನು: “ಹೀಗೆ ಹೃಷೀಕೇಶನಿಗೆ ಮತ್ತು ಸ್ವಯಂ ತಾನೇ ತನಗೆ ಹೇಳಿಕೊಂಡು ವಾಸವಿ ಅರ್ಜುನನು ಗಾಢ ಧ್ವನಿಯಲ್ಲಿ ಮತ್ತೊಮ್ಮೆ ಪ್ರಭು ಕೇಶವನಿಗೆ ಹೇಳಿದನು:

07053056a ಯಥಾ ಪ್ರಭಾತಾಂ ರಜನೀಂ ಕಲ್ಪಿತಃ ಸ್ಯಾದ್ರಥೋ ಮಮ|

07053056c ತಥಾ ಕಾರ್ಯಂ ತ್ವಯಾ ಕೃಷ್ಣ ಕಾರ್ಯಂ ಹಿ ಮಹದುದ್ಯತಂ||

“ಕೃಷ್ಣ! ರಾತ್ರಿಯು ಕಳೆದು ಪ್ರಭಾತದಲ್ಲಿಯೇ ನನ್ನ ರಥವನ್ನು ಸಿದ್ಧಗೊಳಿಸಬೇಕು. ನಾವು ವಹಿಸಿಕೊಂಡಿರುವ ಕಾರ್ಯವು ಮಹತ್ತರವಾದುದು!””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಅರ್ಜುನವಾಕ್ಯೇ ತ್ರಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಐವತ್ಮೂರನೇ ಅಧ್ಯಾಯವು.

Image result for night against white background

Comments are closed.