Drona Parva: Chapter 49

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೯

ಯುಧಿಷ್ಠಿರ ವಿಲಾಪ (೧-೨೧).

07049001 ಸಂಜಯ ಉವಾಚ|

07049001a ತಸ್ಮಿಂಸ್ತು ನಿಹತೇ ವೀರೇ ಸೌಭದ್ರೇ ರಥಯೂಥಪೇ|

07049001c ವಿಮುಕ್ತರಥಸನ್ನಾಹಾಃ ಸರ್ವೇ ನಿಕ್ಷಿಪ್ತಕಾರ್ಮುಕಾಃ||

07049002a ಉಪೋಪವಿಷ್ಟಾ ರಾಜಾನಂ ಪರಿವಾರ್ಯ ಯುಧಿಷ್ಠಿರಂ|

07049002c ತದೇವ ದುಃಖಂ ಧ್ಯಾಯಂತಃ ಸೌಭದ್ರಗತಮಾನಸಾಃ||

ಸಂಜಯನು ಹೇಳಿದನು: “ಆ ರಥಯೂಥಪ ವೀರ ಸೌಭದ್ರನು ಹತನಾಗಲು ಎಲ್ಲರೂ ರಥದಿಂದ ಕೆಳಗಿಳಿದು, ಧನುಸ್ಸುಗಳನ್ನು ಕೆಳಗಿಟ್ಟು, ರಾಜಾ ಯುಧಿಷ್ಠಿರನನ್ನು ಸುತ್ತುವರೆದು ಕುಳಿತುಕೊಂಡರು. ಸೌಭದ್ರನ ಕುರಿತೇ ಚಿಂತಿಸುತ್ತಾ ಅವರು ಮನಸ್ಸುಗಳನ್ನು ಕಳೆದುಕೊಂಡಿದ್ದರು.

07049003a ತತೋ ಯುಧಿಷ್ಠಿರೋ ರಾಜಾ ವಿಲಲಾಪ ಸುದುಃಖಿತಃ|

07049003c ಅಭಿಮನ್ಯೌ ಹತೇ ವೀರೇ ಭ್ರಾತುಃ ಪುತ್ರೇ ಮಹಾರಥೇ||

ಆಗ ರಾಜಾ ಯುಧಿಷ್ಠಿರನು ತಮ್ಮನ ಮಗ ಮಹಾರಥ ವೀರ ಅಭಿಮನ್ಯುವು ಹತನಾದುದಕ್ಕೆ ತುಂಬಾ ದುಃಖಿತನಾಗಿ ವಿಲಪಿಸಿದನು:

07049004a ದ್ರೋಣಾನೀಕಮಸಂಬಾಧಂ ಮಮ ಪ್ರಿಯಚಿಕೀರ್ಷಯಾ|

07049004c ಭಿತ್ತ್ವಾ ವ್ಯೂಹಂ ಪ್ರವಿಷ್ಟೋಽಸೌ ಗೋಮಧ್ಯಮಿವ ಕೇಸರೀ||

“ನನಗೆ ಪ್ರಿಯವಾದುದನ್ನು ಮಾಡಲು ಬಯಸಿ ಒಡೆಯಲು ಅಸಾಧ್ಯವಾದ ದ್ರೋಣನ ಸೇನೆಗಳ ವ್ಯೂಹವನ್ನು ಭೇದಿಸಿ ಇವನು ಗೋವುಗಳ ಮಧ್ಯೆ ಸಿಂಹದಂತೆ ಪ್ರವೇಶಿಸಿದನು.

07049005a ಯಸ್ಯ ಶೂರಾ ಮಹೇಷ್ವಾಸಾಃ ಪ್ರತ್ಯನೀಕಗತಾ ರಣೇ|

07049005c ಪ್ರಭಗ್ನಾ ವಿನಿವರ್ತಂತೇ ಕೃತಾಸ್ತ್ರಾ ಯುದ್ಧದುರ್ಮದಾಃ||

ಈ ಶೂರನು ರಣದಲ್ಲಿ ಎದುರಾಗಿ ಬಂದ ಮಹೇಷ್ವಾಸ ಕೃತಾಸ್ತ್ರ ಯುದ್ಧ ದುರ್ಮದರನ್ನು ಪ್ರಭಗ್ನರನ್ನಾಗಿಸಿ ಹಿಮ್ಮೆಟ್ಟುವಂತೆ ಮಾಡಿದನು.

07049006a ಅತ್ಯಂತಶತ್ರುರಸ್ಮಾಕಂ ಯೇನ ದುಃಶಾಸನಃ ಶರೈಃ|

07049006c ಕ್ಷಿಪ್ರಂ ಹ್ಯಭಿಮುಖಃ ಸಂಕ್ಯೇ ವಿಸಂಜ್ಞೋ ವಿಮುಖೀಕೃತಃ||

ನಮ್ಮ ಅತ್ಯಂತ ಶತ್ರುವಾದ ದುಃಶಾಸನನು ಯುದ್ಧದಲ್ಲಿ ಎದುರಾಗಲು ಅವನನ್ನು ಕ್ಷಿಪ್ರವಾಗಿ ಶರಗಳಿಂದ ಮೂರ್ಛಿತನನ್ನಾಗಿ ಮಾಡಿ ವಿಮುಖನನ್ನಾಗಿ ಮಾಡಿದನು.

07049007a ಸ ತೀರ್ತ್ವಾ ದುಸ್ತರಂ ವೀರೋ ದ್ರೋಣಾನೀಕಮಹಾರ್ಣವಂ|

07049007c ಪ್ರಾಪ್ಯ ದೌಃಶಾಸನಿಂ ಕಾರ್ಷ್ಣಿರ್ಯಾತೋ ವೈವಸ್ವತಕ್ಷಯಂ||

ಆ ವೀರ ಕಾರ್ಷ್ಣಿಯು ದ್ರೋಣನ ಸೇನೆಯೆಂಬ ದುಸ್ತರ ಮಹಾಸಾಗರವನ್ನು ದಾಟಿ ದೌಃಶಾಸನಿಯಿಂದ ವೈವಸ್ವತ ಪುರಕ್ಕೆ ಕಳುಹಿಸಲ್ಪಟ್ಟನು.

07049008a ಕಥಂ ದ್ರಕ್ಷ್ಯಾಮಿ ಕೌಂತೇಯಂ ಸೌಭದ್ರೇ ನಿಹತೇಽರ್ಜುನಂ|

07049008c ಸುಭದ್ರಾಂ ವಾ ಮಹಾಭಾಗಾಂ ಪ್ರಿಯಂ ಪುತ್ರಮಪಶ್ಯತೀಂ||

ಸೌಭದ್ರನು ನಿಹತನಾದ ವಿಷಯವನ್ನು ಕೌಂತೇಯ ಅರ್ಜುನನಿಗೆ ಅಥವಾ ಪ್ರಿಯ ಪುತ್ರನನ್ನು ಕಾಣದ ಮಹಾಭಾಗೆ ಸುಭದ್ರೆಗೆ ಹೇಗೆ ತಾನೇ ಹೇಳಲಿ?

07049009a ಕಿಂ ಸ್ವಿದ್ವಯಮಪೇತಾರ್ಥಮಶ್ಲಿಷ್ಟಮಸಮಂಜಸಂ|

07049009c ತಾವುಭೌ ಪ್ರತಿವಕ್ಷ್ಯಾಮೋ ಹೃಷೀಕೇಶಧನಂಜಯೌ||

ಇಂದು ನಾವು ಹೃಷೀಕೇಶ-ಧನಂಜಯರಿಗೆ ಯಾವ ಅಶ್ಲಿಷ್ಟ ಅಸಮಂಜಸ, ಅಪ್ರಿಯ ಮಾತುಗಳನ್ನು ಹೇಳಬಲ್ಲೆವು?

07049010a ಅಹಮೇವ ಸುಭದ್ರಾಯಾಃ ಕೇಶವಾರ್ಜುನಯೋರಪಿ|

07049010c ಪ್ರಿಯಕಾಮೋ ಜಯಾಕಾಂಕ್ಷೀ ಕೃತವಾನಿದಮಪ್ರಿಯಂ||

ನನಗಿಷ್ಟವಾದ ಜಯವನ್ನು ಬಯಸಿ ನಾನೇ ಸುಭದ್ರೆಗೂ, ಕೇಶವಾರ್ಜುನರಿಗೂ ಅಪ್ರಿಯವಾದ ಈ ಕೃತ್ಯವನ್ನೆಸಗಿದ್ದೇನೆ!

07049011a ನ ಲುಬ್ಧೋ ಬುಧ್ಯತೇ ದೋಷಾನ್ಮೋಹಾಲ್ಲೋಭಃ ಪ್ರವರ್ತತೇ|

07049011c ಮಧು ಲಿಪ್ಸುರ್ಹಿ ನಾಪಶ್ಯಂ ಪ್ರಪಾತಮಿದಮೀದೃಶಂ||

ಲುಬ್ಧನಾದವನಿಗೆ ಅವನ ದೋಷಗಳು ಕಾಣುವುದಿಲ್ಲ. ಮೋಹದಿಂದ ಲೋಭವು ಉಂಟಾಗುತ್ತದೆ. ಮಧುವನ್ನು ಅರಸುವವರು ಅವರ ಮುಂದಿರುವ ಪ್ರಪಾತವನ್ನು ಕಾಣುವುದಿಲ್ಲ. ನಾನೂ ಅವರಂತೆಯೇ!

07049012a ಯೋ ಹಿ ಭೋಜ್ಯೇ ಪುರಸ್ಕಾರ್ಯೋ ಯಾನೇಷು ಶಯನೇಷು ಚ|

07049012c ಭೂಷಣೇಷು ಚ ಸೋಽಸ್ಮಾಭಿರ್ಬಾಲೋ ಯುಧಿ ಪುರಸ್ಕೃತಃ||

ಯಾರಿಗೆ ಭೋಜನ, ವಾಹನ, ಹಾಸಿಗೆಗಳನ್ನೂ ಭೂಷಣಗಳನ್ನೂ ಇತ್ತು ಪುರಸ್ಕರಿಸಬೇಕಾಗಿತ್ತೋ ಆ ನಮ್ಮ ಬಾಲಕನನ್ನು ಯುದ್ಧದಲ್ಲಿ ಮುಂದೆ ಕಳುಹಿಸಿದೆನಲ್ಲ!

07049013a ಕಥಂ ಹಿ ಬಾಲಸ್ತರುಣೋ ಯುದ್ಧಾನಾಮವಿಶಾರದಃ|

07049013c ಸದಶ್ವ ಇವ ಸಂಬಾಧೇ ವಿಷಮೇ ಕ್ಷೇಮಮರ್ಹತಿ||

ಹೇಗೆ ತಾನೇ ಅಂತಹ ವಿಷಮ ಪರಿಸ್ಥಿತಿಯಲ್ಲಿ ಅಂತಹ ಬಾಲಕ, ತರುಣ, ಯುದ್ಧದಲ್ಲಿ ಪಳಗಿಲ್ಲದ ಅವನು ಕ್ಷೇಮದಿಂದ ಇದ್ದಾನು? ಒಳ್ಳೆಯ ಕುದುರೆಯಂತೆ ತನ್ನ ಮೇಲೇರಿರುವವನಿಗೆ ಆಪತ್ತಾಗುವ ಮೊದಲೇ ತನ್ನನ್ನು ತಾನೇ ಬಲಿಯಾಗಿತ್ತನು!

07049014a ನೋ ಚೇದ್ಧಿ ವಯಮಪ್ಯೇನಂ ಮಹೀಮನುಶಯೀಮಹಿ|

07049014c ಬೀಭತ್ಸೋಃ ಕೋಪದೀಪ್ತಸ್ಯ ದಗ್ಧಾಃ ಕೃಪಣಚಕ್ಷುಷಾ||

ಅಯ್ಯೋ! ಇಂದು ನಾವು ಕೋಪದಿಂದ ಉರಿಯುತ್ತಿರುವ ಬೀಭತ್ಸುವಿನ ಶೋಕದ ದೃಷ್ಟಿಯಿಂದ ಸುಟ್ಟು ನೆಲದಮೇಲೆ ಮಲಗುವವರಿದ್ದೇವೆ!

07049015a ಅಲುಬ್ಧೋ ಮತಿಮಾನ್ ಹ್ರೀಮಾನ್ ಕ್ಷಮಾವಾನ್ರೂಪವಾನ್ಬಲೀ|

07049015c ವಪುಷ್ಮಾನ್ಮಾನಕೃದ್ವೀರಃ ಪ್ರಿಯಃ ಸತ್ಯಪರಾಯಣಃ||

07049016a ಯಸ್ಯ ಶ್ಲಾಘಂತಿ ವಿಬುಧಾಃ ಕರ್ಮಾಣ್ಯೂರ್ಜಿತಕರ್ಮಣಃ|

07049016c ನಿವಾತಕವಚಾಂ ಜಘ್ನೇ ಕಾಲಕೇಯಾಂಶ್ಚ ವೀರ್ಯವಾನ್||

07049017a ಮಹೇಂದ್ರಶತ್ರವೋ ಯೇನ ಹಿರಣ್ಯಪುರವಾಸಿನಃ|

07049017c ಅಕ್ಷ್ಣೋರ್ನಿಮೇಷಮಾತ್ರೇಣ ಪೌಲೋಮಾಃ ಸಗಣಾ ಹತಾಃ||

07049018a ಪರೇಭ್ಯೋಽಪ್ಯಭಯಾರ್ಥಿಭ್ಯೋ ಯೋ ದದಾತ್ಯಭಯಂ ವಿಭುಃ|

07049018c ತಸ್ಯಾಸ್ಮಾಭಿರ್ನ ಶಕಿತಸ್ತ್ರಾತುಮದ್ಯಾತ್ಮಜೋ ಭಯಾತ್||

ಅಲುಬ್ಧನಾದ, ಮತಿವಂತನಾದ, ಲಜ್ಜಾವಂತನಾದ, ಕ್ಷಮಾವಂತನಾದ, ರೂಪವಾನ್, ಬಲಶಾಲೀ, ಸುಂದರ, ಮನ್ನಿಸುವ, ಧೀರ, ಪ್ರಿಯ, ಸತ್ಯಪರಾಯಣ, ಯಾವ ಮಹತ್ತರ ಕರ್ಮಿಯ ಕರ್ಮಗಳನ್ನು ದೇವತೆಗಳೂ ಶ್ಲಾಘಿಸುತ್ತಾರೋ, ನಿವಾತಕವಚರನ್ನು ಮತ್ತು ಕಾಲಕೇಯರನ್ನು ಸಂಹರಿಸಿದ, ಮಹೇಂದ್ರನ ಶತ್ರುಗಳಾದ ಹಿರಣ್ಯಪುರವಾಸಿಗಳನ್ನು ಮತ್ತು ಪೌಲೋಮರನ್ನು ಗಣಗಳೊಂದಿಗೆ ನಿಮಿಷಮಾತ್ರದಲ್ಲಿ ಸಂಹರಿಸಿದ, ಭಯಾರ್ಥಿಗಳಾದ ಶತ್ರುಗಳಿಗೂ ಅಭಯವನ್ನೀಡುವ ಪ್ರಭು, ವೀರ್ಯವಾನ್ ಮದ್ಯಾತ್ಮಜನ ಭಯವನ್ನು ನಾವು ಸಹಿಸಿಕೊಳ್ಳಲಾರೆವು!

07049019a ಭಯಂ ತು ಸುಮಹತ್ಪ್ರಾಪ್ತಂ ಧಾರ್ತರಾಷ್ಟ್ರಂ ಮಹದ್ಬಲಂ|

07049019c ಪಾರ್ಥಃ ಪುತ್ರವಧಾತ್ ಕ್ರುದ್ಧಃ ಕೌರವಾನ್ ಶೋಷಯಿಷ್ಯತಿ||

ಧಾರ್ತರಾಷ್ಟ್ರನ ಮಹಾಸೇನೆಗೆ ಮಹಾ ಭಯವು ಬಂದೊದಗಿದೆ. ಪುತ್ರವಧೆಯಿಂದ ಕ್ರುದ್ಧನಾದ ಪಾರ್ಥನು ಕೌರವರನ್ನು ಸದೆಬಡಿಯುತ್ತಾನೆ.

07049020a ಕ್ಷುದ್ರಃ ಕ್ಷುದ್ರಸಹಾಯಶ್ಚ ಸ್ವಪಕ್ಷಕ್ಷಯಮಾತುರಃ|

07049020c ವ್ಯಕ್ತಂ ದುರ್ಯೋಧನೋ ದೃಷ್ಟ್ವಾ ಶೋಚನ್ ಹಾಸ್ಯತಿ ಜೀವಿತಂ||

ಕ್ಷುದ್ರರ ಸಹಾಯವನ್ನು ಹೊಂದಿರುವ ಆ ಕ್ಷುದ್ರ ದುರ್ಯೋಧನನು ತನ್ನ ಪಕ್ಷವು ಆಪತ್ತಿನಲ್ಲಿರುವುದನ್ನು ನೋಡಿ ಶೋಕದಿಂದ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಎನ್ನುವುದು ವ್ಯಕ್ತವಾಗುತ್ತಿದೆ.

07049021a ನ ಮೇ ಜಯಃ ಪ್ರೀತಿಕರೋ ನ ರಾಜ್ಯಂ

         ನ ಚಾಮರತ್ವಂ ನ ಸುರೈಃ ಸಲೋಕತಾ|

07049021c ಇಮಂ ಸಮೀಕ್ಷ್ಯಾಪ್ರತಿವೀರ್ಯಪೌರುಷಂ

         ನಿಪಾತಿತಂ ದೇವವರಾತ್ಮಜಾತ್ಮಜಂ||

ಈ ಅಪ್ರತಿಮ ವೀರ ಪೌರುಷವಿದ್ದಿದ್ದ ದೇವವರನ ಮಗನ ಮಗನು ಬಿದ್ದಿರುವುದನ್ನು ನೋಡಿದರೆ ನನಗೆ ಜಯವೂ, ರಾಜ್ಯವೂ, ಚಾಮರತ್ವವೂ, ಸುರರ ಲೋಕವೂ ಸಂತೋಷವನ್ನುಂಟುಮಾಡುವುದಿಲ್ಲ!”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಯುಧಿಷ್ಠಿರಪ್ರಲಾಪೇ ಏಕೋನಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಯುಧಿಷ್ಠಿರಪ್ರಲಾಪ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.

Image result for trees against white background

Comments are closed.