Drona Parva: Chapter 46

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೬

ಷಡ್ರಥರೊಡನೆ ಏಕಾಂಗಿಯಾಗಿ ಯುದ್ಧಮಾಡುತ್ತಾ ಅಭಿಮನ್ಯುವು ಕೋಸಲಾಧಿಪ ಬೃಹದ್ಬಲನನ್ನು ವಧಿಸಿದುದು (೧-೨೪).

07046001 ಧೃತರಾಷ್ಟ್ರ ಉವಾಚ|

07046001a ತಥಾ ಪ್ರವಿಷ್ಟಂ ತರುಣಂ ಸೌಭದ್ರಮಪರಾಜಿತಂ|

07046001c ಕುಲಾನುರೂಪಂ ಕುರ್ವಾಣಂ ಸಂಗ್ರಾಮೇಷ್ವಪಲಾಯಿನಂ||

07046002a ಆಜಾನೇಯೈಃ ಸುಬಲಿಭಿರ್ಯುಕ್ತಮಶ್ವೈಸ್ತ್ರಿಹಾಯನೈಃ|

07046002c ಪ್ಲವಮಾನಮಿವಾಕಾಶೇ ಕೇ ಶೂರಾಃ ಸಮವಾರಯನ್||

ಧೃತರಾಷ್ಟ್ರನು ಹೇಳಿದನು: “ಹಾಗೆ ಪ್ರವೇಶಿಸಿದ ತರುಣ, ಅಪರಾಜಿತ, ಕುಲಾನುರೂಪ ಕರ್ಮಗಳನ್ನೆಸಗುತ್ತಿದ್ದ, ಸಂಗ್ರಾಮದಿಂದ ಪಲಾಯನ ಮಾಡದಿದ್ದ, ಕೇವಲ ಮೂರು ವರ್ಷದ ಬಲಶಾಲೀ ಅಶ್ವಗಳಿಂದ ಒಯ್ಯಲ್ಪಡುತ್ತಿದ್ದ, ಆಕಾಶದಲ್ಲಿ ಹಾರಿಕೊಂಡು ಯುದ್ಧಮಾಡುವವನಂತಿದ್ದ ಸೌಭದ್ರನನ್ನು ಯಾವ ಶೂರರು ತಡೆದರು?”

07046003 ಸಂಜಯ ಉವಾಚ|

07046003a ಅಭಿಮನ್ಯುಃ ಪ್ರವಿಶ್ಯೈವ ತಾವಕಾನ್ನಿಶಿತೈಃ ಶರೈಃ|

07046003c ಅಕರೋದ್ವಿಮುಖಾನ್ಸರ್ವಾನ್ಪಾರ್ಥಿವಾನ್ಪಾಂಡುನಂದನಃ||

ಸಂಜಯನು ಹೇಳಿದನು: “ಪಾಂಡುನಂದನ ಅಭಿಮನ್ಯುವು ಪ್ರವೇಶಿಸುತ್ತಲೇ ನಿನ್ನವರ ಸರ್ವ ಪಾರ್ಥಿವರನ್ನೂ ನಿಶಿತ ಶರಗಳನ್ನು ವಿಮುಖರನ್ನಾಗಿ ಮಾಡಿದನು.

07046004a ತಂ ತು ದ್ರೋಣಃ ಕೃಪಃ ಕರ್ಣೋ ದ್ರೌಣಿಶ್ಚ ಸಬೃಹದ್ಬಲಃ|

07046004c ಕೃತವರ್ಮಾ ಚ ಹಾರ್ದಿಕ್ಯಃ ಷಡ್ರಥಾಃ ಪರ್ಯವಾರಯನ್||

ಅವನನ್ನಾದರೋ ದ್ರೋಣ, ಕೃಪ, ಕರ್ಣ, ದ್ರೌಣಿ, ಬೃಹದ್ಬಲ ಮತ್ತು ಕೃತವರ್ಮ ಈ ಷಡ್ರಥರು ಸುತ್ತುವರೆದರು.

07046005a ದೃಷ್ಟ್ವಾ ತು ಸೈಂಧವೇ ಭಾರಮತಿಮಾತ್ರಂ ಸಮಾಹಿತಂ|

07046005c ಸೈನ್ಯಂ ತವ ಮಹಾರಾಜ ಯುಧಿಷ್ಠಿರಮುಪಾದ್ರವತ್||

ಮಹಾರಾಜ! ಸೈಂಧವನ ಮೇಲೆ ಗುರುತರ ಭಾರವಿದ್ದುದನ್ನು ನೋಡಿ ನಿನ್ನ ಸೈನ್ಯವು ಯುಧಿಷ್ಠಿರನನ್ನು ಆಕ್ರಮಣಿಸಿತು.

07046006a ಸೌಭದ್ರಮಿತರೇ ವೀರಮಭ್ಯವರ್ಷಂ ಶರಾಂಬುಭಿಃ|

07046006c ತಾಲಮಾತ್ರಾಣಿ ಚಾಪಾನಿ ವಿಕರ್ಷಂತೋ ಮಹಾರಥಾಃ||

ಇತರ ವೀರರು ತಾಲಮಾತ್ರದ ಚಾಪಗಳನ್ನು ಟೇಂಕರಿಸುತ್ತಾ ಸೌಭದ್ರನ ಮೇಲೆ ಶರಾಂಬುಗಳನ್ನು ಸುರಿಸಿದರು.

07046007a ತಾಂಸ್ತು ಸರ್ವಾನ್ಮಹೇಷ್ವಾಸಾನ್ಸರ್ವವಿದ್ಯಾಸು ನಿಷ್ಠಿತಾನ್|

07046007c ವ್ಯಷ್ಟಂಭಯದ್ರಣೇ ಬಾಣೈಃ ಸೌಭದ್ರಃ ಪರವೀರಹಾ||

ಪರವೀರಹ ಸೌಭದ್ರನು ಆ ಎಲ್ಲ ಮಹೇಷ್ವಾಸರನ್ನೂ  ಸರ್ವವಿದ್ಯೆಗಳಲ್ಲಿಯೂ ಪರಿಣಿತರಾಗಿದ್ದವರನ್ನು ಬಾಣಗಳಿಂದ ತಡೆಗಟ್ಟಿದನು.

07046008a ದ್ರೋಣಂ ಪಂಚಾಶತಾ ವಿದ್ಧ್ವಾ ವಿಂಶತ್ಯಾ ಚ ಬೃಹದ್ಬಲಂ|

07046008c ಅಶೀತ್ಯಾ ಕೃತವರ್ಮಾಣಂ ಕೃಪಂ ಷಷ್ಟ್ಯಾ ಶಿಲೀಮುಖೈಃ||

07046009a ರುಕ್ಮಪುಂಖೈರ್ಮಹಾವೇಗೈರಾಕರ್ಣಸಮಚೋದಿತೈಃ|

07046009c ಅವಿಧ್ಯದ್ದಶಭಿರ್ಬಾಣೈರಶ್ವತ್ಥಾಮಾನಮಾರ್ಜುನಿಃ||

ದ್ರೋಣನನ್ನು ಐವತ್ತರಿಂದ ಮತ್ತು ಬೃಹದ್ಬಲನನ್ನು ಇಪ್ಪತ್ತರಿಂದ ಹೊಡೆದು, ಕೃತವರ್ಮನನ್ನು ಎಂಭತ್ತು ಮತ್ತು ಕೃಪನನ್ನು ಅರವತ್ತು ಶಿಲೀಮುಖಗಳಿಂದ ಹೊಡೆದು, ಆರ್ಜುನಿಯು ಅಶ್ವತ್ಥಾಮನನ್ನು ರುಕ್ಮಪುಂಖಗಳ ಮಹಾವೇಗದ ಹತ್ತು ಬಾಣಗಳನ್ನು ಕಿವಿಯವರೆಗೆ ಎಳೆದು ಹೊಡೆದನು.

07046010a ಸ ಕರ್ಣಂ ಕರ್ಣಿನಾ ಕರ್ಣೇ ಪೀತೇನ ನಿಶಿತೇನ ಚ|

07046010c ಫಾಲ್ಗುನಿರ್ದ್ವಿಷತಾಂ ಮಧ್ಯೇ ವಿವ್ಯಾಧ ಪರಮೇಷುಣಾ||

ಫಾಲ್ಗುನಿಯು ಶತ್ರುಗಳ ಮಧ್ಯದಲ್ಲಿದ್ದ ಕರ್ಣನ ಕಿವಿಗೆ ಡೊಂಕಾಗಿದ್ದ ಪೀತ ನಿಶಿತ ಪರಮ ಬಾಣದಿಂದ ಹೊಡೆದನು.

07046011a ಪಾತಯಿತ್ವಾ ಕೃಪಸ್ಯಾಶ್ವಾಂಸ್ತಥೋಭೌ ಪಾರ್ಷ್ಣಿಸಾರಥೀ|

07046011c ಅಥೈನಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ||

ಕೃಪನ ಎರಡೂ ಅಶ್ವಗಳನ್ನೂ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಹೊಡೆದುರುಳಿಸಿ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು.

07046012a ತತೋ ವೃಂದಾರಕಂ ವೀರಂ ಕುರೂಣಾಂ ಕೀರ್ತಿವರ್ಧನಂ|

07046012c ಪುತ್ರಾಣಾಂ ತವ ವೀರಾಣಾಂ ಪಶ್ಯತಾಮವಧೀದ್ಬಲೀ||

ಆಗ ನಿನ್ನ ಪುತ್ರರು ಮತ್ತು ವೀರರು ನೋಡುತ್ತಿದ್ದಂತೆಯೇ ಆ ಬಲಶಾಲಿಯು ಕುರುಗಳ ಕೀರ್ತಿವರ್ಧನ ವೀರ ವೃಂದಾರಕನನ್ನು ಸಂಹರಿಸಿದನು.

07046013a ತಂ ದ್ರೌಣಿಃ ಪಂಚವಿಂಶತ್ಯಾ ಕ್ಷುದ್ರಕಾಣಾಂ ಸಮರ್ಪಯತ್|

07046013c ವರಂ ವರಮಮಿತ್ರಾಣಾಮಾರುಜಂತಮಭೀತವತ್||

ಶ್ರೇಷ್ಠ ಅಮಿತ್ರರೊಂದಿಗೆ ಭಯಗೊಳ್ಳದೇ ಯುದ್ಧಮಾಡುತ್ತಿದ್ದ ಆ ಶ್ರೇಷ್ಠನನ್ನು ದ್ರೌಣಿಯು ಇಪ್ಪತ್ತೈದು ಕ್ಷುದ್ರಕಗಳಿಂದ ಹೊಡೆದನು.

07046014a ಸ ತು ಬಾಣೈಃ ಶಿತೈಸ್ತೂರ್ಣಂ ಪ್ರತ್ಯವಿಧ್ಯತ ಮಾರಿಷ|

07046014c ಪಶ್ಯತಾಂ ಧಾರ್ತರಾಷ್ಟ್ರಾಣಾಮಶ್ವತ್ಥಾಮಾನಮಾರ್ಜುನಿಃ||

ಮಾರಿಷ! ಆರ್ಜುನಿಯಾದರೋ ಕೂಡಲೇ ಧಾರ್ತರಾಷ್ಟ್ರರು ನೋಡುತ್ತಿದ್ದಂತೆಯೇ ಅಶ್ವತ್ಥಾಮನನ್ನು ನಿಶಿತ ಬಾಣಗಳಿಂದ ತಿರುಗಿ ಹೊಡೆದನು.

07046015a ಷಷ್ಟ್ಯಾ ಶರಾಣಾಂ ತಂ ದ್ರೌಣಿಸ್ತಿಗ್ಮಧಾರೈಃ ಸುತೇಜನೈಃ|

07046015c ಉಗ್ರೈರ್ನಾಕಂಪಯದ್ವಿದ್ಧ್ವಾ ಮೈನಾಕಮಿವ ಪರ್ವತಂ||

ಅವನನ್ನು ದ್ರೌಣಿಯು ಅರವತ್ತು ತಿಗ್ಮಧಾರೆ, ತೇಜಸ್ವಿ ಉಗ್ರ ಬಾಣಗಳಿಂದ ಹೊಡೆಯಲು ಅವನು ಮೈನಾಕ ಪರ್ವತದಂತೆ ನಡುಗದೇ ನಿಂತಿದ್ದನು.

07046016a ಸ ತು ದ್ರೌಣಿಂ ತ್ರಿಸಪ್ತತ್ಯಾ ಹೇಮಪುಂಖೈರಜಿಹ್ಮಗೈಃ|

07046016c ಪ್ರತ್ಯವಿಧ್ಯನ್ಮಹಾತೇಜಾ ಬಲವಾನಪಕಾರಿಣಂ||

ಆ ಮಹಾತೇಜಸ್ವಿ ಬಲವಾನನು ಅಪಕಾರಿ ದ್ರೌಣಿಯನ್ನು ತಿರುಗಿ ಎಪ್ಪತ್ಮೂರು ಹೇಮಪುಂಖ ಜಿಹ್ಮಗಗಳಿಂದ ಹೊಡೆದನು.

07046017a ತಸ್ಮಿನ್ದ್ರೋಣೋ ಬಾಣಶತಂ ಪುತ್ರಗೃದ್ಧೀ ನ್ಯಪಾತಯತ್|

07046017c ಅಶ್ವತ್ಥಾಮಾ ತಥಾಷ್ಟೌ ಚ ಪರೀಪ್ಸನ್ಪಿತರಂ ರಣೇ||

07046018a ಕರ್ಣೋ ದ್ವಾವಿಂಶತಿಂ ಭಲ್ಲಾನ್ಕೃತವರ್ಮಾ ಚತುರ್ದಶ|

07046018c ಬೃಹದ್ಬಲಸ್ತು ಪಂಚಾಶತ್ಕೃಪಃ ಶಾರದ್ವತೋ ದಶ||

ಪುತ್ರನ ಮೇಲಿನ ಪ್ರೀತಿಯಿಂದ ದ್ರೋಣನು ಅವನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿದನು. ಮತ್ತು ರಣದಲ್ಲಿ ತಂದೆಯನ್ನು ರಕ್ಷಿಸುವ ಸಲುವಾಗಿ ಅಶ್ವತ್ಥಾಮನು ಎಂಟು ಬಾಣಗಳನ್ನೂ, ಕರ್ಣನು ಇಪ್ಪತ್ತೆರಡು ಭಲ್ಲಗಳನ್ನು, ಕೃತವರ್ಮನು ಹದಿನಾಲ್ಕು, ಬೃಹದ್ಬಲನು ಐವತ್ತನ್ನೂ, ಕೃಪ ಶಾರದ್ವತನು ಹತ್ತನ್ನು ಪ್ರಹರಿಸಿದರು.

07046019a ತಾಂಸ್ತು ಪ್ರತ್ಯವಧೀತ್ಸರ್ವಾನ್ದಶಭಿರ್ದಶಭಿಃ ಶರೈಃ|

07046019c ತೈರರ್ದ್ಯಮಾನಃ ಸೌಭದ್ರಃ ಸರ್ವತೋ ನಿಶಿತೈಃ ಶರೈಃ||

ಅವರೆಲ್ಲರನ್ನೂ ತಿರುಗಿ ಹತ್ತು ಹತ್ತು ಬಾಣಗಳಿಂದ ಹೊಡೆದು ಸೌಭದ್ರನು ಎಲ್ಲೆಡೆಗಳಿಂದ ನಿಶಿತ ಶರಗಳಿಂದ ಅವರನ್ನು ಗಾಯಗೊಳಿಸಿದನು.

07046020a ತಂ ಕೋಸಲಾನಾಮಧಿಪಃ ಕರ್ಣಿನಾತಾಡಯದ್ಧೃದಿ|

07046020c ಸ ತಸ್ಯಾಶ್ವಾನ್ಧ್ವಜಂ ಚಾಪಂ ಸೂತಂ ಚಾಪಾತಯತ್ ಕ್ಷಿತೌ||

ಅವನ ಎದೆಗೆ ಗುರಿಯಿಟ್ಟು ಕೋಸಲಾಧಿಪ ಬೃಹದ್ಬಲನು ಕರ್ಣಿಯನ್ನು ಪ್ರಯೋಗಿಸಿದನು. ಆಗ ಅಭಿಮನ್ಯುವು ಅವನ ಕುದುರೆಗಳನ್ನೂ, ಧ್ವಜವನ್ನೂ, ಚಾಪವನ್ನೂ, ಸೂತನನ್ನೂ ನೆಲಕ್ಕುರುಳಿಸಿದನು.

07046021a ಅಥ ಕೋಸಲರಾಜಸ್ತು ವಿರಥಃ ಖಡ್ಗಚರ್ಮಧೃತ್|

07046021c ಇಯೇಷ ಫಾಲ್ಗುನೇಃ ಕಾಯಾಚ್ಚಿರೋ ಹರ್ತುಂ ಸಕುಂಡಲಂ||

ಆಗ ವಿರಥನಾದ ಕೋಸಲರಾಜನು ಖಡ್ಗ-ಗುರಾಣಿಗಳನ್ನು ಹಿಡಿದು ಫಾಲ್ಗುನಿಯ ಶರೀರದಿಂದ ಕುಂಡಲ ಸಹಿತ ಶಿರಸ್ಸನ್ನು ಅಪಹರಿಸಲು ಮುಂದಾದನು.

07046022a ಸ ಕೋಸಲಾನಾಂ ಭರ್ತಾರಂ ರಾಜಪುತ್ರಂ ಬೃಹದ್ಬಲಂ|

07046022c ಹೃದಿ ವಿವ್ಯಾಧ ಬಾಣೇನ ಸ ಭಿನ್ನಹೃದಯೋಽಪತತ್||

ಅವನು ಕೋಸಲರ ಒಡೆಯ ರಾಜಪುತ್ರ ಬೃಹದ್ಬಲನ ಎದೆಯನ್ನು ಬಾಣದಿಂದ ಹೊಡೆಯಲು ಅವನು ಹೃದಯವೊಡೆದು ಬಿದ್ದನು.

07046023a ಬಭಂಜ ಚ ಸಹಸ್ರಾಣಿ ದಶ ರಾಜನ್ಮಹಾತ್ಮನಾಂ|

07046023c ಸೃಜತಾಮಶಿವಾ ವಾಚಃ ಖಡ್ಗಕಾರ್ಮುಕಧಾರಿಣಾಂ||

ರಾಜನ್! ಅಶಿವ ಮಾತುಗಳನ್ನಾಡುತ್ತಾ ಖಡ್ಗ-ಕಾರ್ಮುಕಗಳನ್ನು ಹಿಡಿದು ಬರುತ್ತಿದ್ದ ಹತ್ತು ಸಾವಿರ ಮಹಾತ್ಮರನ್ನು ಸದೆಬಡಿದನು.

07046024a ತಥಾ ಬೃಹದ್ಬಲಂ ಹತ್ವಾ ಸೌಭದ್ರೋ ವ್ಯಚರದ್ರಣೇ|

07046024c ವಿಷ್ಟಂಭಯನ್ಮಹೇಷ್ವಾಸಾನ್ಯೋಧಾಂಸ್ತವ ಶರಾಂಬುಭಿಃ||

ಹಾಗೆ ಬೃಹದ್ಬಲನನ್ನು ಸಂಹರಿಸಿ ಸೌಭದ್ರನು ರಣದಲ್ಲಿ ನಿನ್ನ ಮುಹೇಷ್ವಾಸ ಯೋಧರನ್ನು ಶರಾಂಬುಗಳಿಂದ ಮುಚ್ಚಿ ಭಯಪಡಿಸುತ್ತಾ ಸಂಚರಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಅಭಿಮನ್ಯುವಧಪರ್ವಣಿ ಬೃಹದ್ಬಲವಧೇ ಷಟ್ಚಂತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಅಭಿಮನ್ಯುವಧಪರ್ವದಲ್ಲಿ ಬೃಹದ್ಬಲವಧ ಎನ್ನುವ ನಲ್ವತ್ತಾರನೇ ಅಧ್ಯಾಯವು.

Image result for trees against white background

Comments are closed.