Drona Parva: Chapter 43

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೩

ಅಭಿಮನ್ಯುವಿನ ಯುದ್ಧ (೧-೨೧).

07043001 ಸಂಜಯ ಉವಾಚ|

07043001a ಸೈಂಧವೇನ ನಿರುದ್ಧೇಷು ಜಯಗೃದ್ಧಿಷು ಪಾಂಡುಷು|

07043001c ಸುಘೋರಮಭವದ್ಯುದ್ಧಂ ತ್ವದೀಯಾನಾಂ ಪರೈಃ ಸಹ||

ಸಂಜಯನು ಹೇಳಿದನು: “ವಿಜಯೇಚ್ಛಿಗಳಾದ ಪಾಂಡವರು ಸೈಂಧವನಿಂದ ತಡೆಯಲ್ಪಡಲು ನಿನ್ನವರ ಮತ್ತು ಶತ್ರುಗಳ ನಡುವೆ ಅತಿ ಘೋರ ಯುದ್ಧವು ನಡೆಯಿತು.

07043002a ಪ್ರವಿಶ್ಯ ತ್ವಾರ್ಜುನಿಃ ಸೇನಾಂ ಸತ್ಯಸಂಧೋ ದುರಾಸದಾಂ|

07043002c ವ್ಯಕ್ಷೋಭಯತ ತೇಜಸ್ವೀ ಮಕರಃ ಸಾಗರಂ ಯಥಾ||

ಅಷ್ಟರಲ್ಲಿ ಸತ್ಯಸಂಧ ತೇಜಸ್ವಿ ಆರ್ಜುನಿಯು ನಿನ್ನ ದುರಾಸದ ಸೇನೆಯನ್ನು ಪ್ರವೇಶಿಸಿ ಮೊಸಳೆಯು ಸಮುದ್ರವನ್ನು ಹೇಗೋ ಹಾಗೆ ಅಲ್ಲೋಲಕಲ್ಲೋಲಗೊಳಿಸಿದನು.

07043003a ತಂ ತಥಾ ಶರವರ್ಷೇಣ ಕ್ಷೋಭಯಂತಮರಿಂದಮಂ|

07043003c ಯಥಾಪ್ರಧಾನಾಃ ಸೌಭದ್ರಮಭ್ಯಯುಃ ಕುರುಸತ್ತಮಾಃ||

ಶರವರ್ಷದಿಂದ ಕ್ಷೋಭೆಗೊಳಿಸುತ್ತಿದ್ದ ಅರಿಂದಮ ಸೌಭದ್ರನನ್ನು ಕುರುಸತ್ತಮ ಪ್ರಧಾನರು ಒಟ್ಟಾಗಿ ಆಕ್ರಮಿಸಿದರು.

07043004a ತೇಷಾಂ ತಸ್ಯ ಚ ಸಮ್ಮರ್ದೋ ದಾರುಣಃ ಸಮಪದ್ಯತ|

07043004c ಸೃಜತಾಂ ಶರವರ್ಷಾಣಿ ಪ್ರಸಕ್ತಮಮಿತೌಜಸಾಂ||

ಒಟ್ಟಾಗಿ ಸೇರಿ ಶರವರ್ಷಗಳನ್ನು ಸೃಷ್ಟಿಸುತ್ತಿದ್ದ ಅಮಿತೌಜಸರಾದ ನಿನ್ನವರ ಮತ್ತು ಅವನ ನಡುವೆ ದಾರುಣ ಯುದ್ಧವು ನಡೆಯಿತು.

07043005a ರಥವ್ರಜೇನ ಸಂರುದ್ಧಸ್ತೈರಮಿತ್ರೈರಥಾರ್ಜುನಿಃ|

07043005c ವೃಷಸೇನಸ್ಯ ಯಂತಾರಂ ಹತ್ವಾ ಚಿಚ್ಚೇದ ಕಾರ್ಮುಕಂ||

ಶತ್ರುಪಕ್ಷದ ರಥಸಮೂಹಗಳಿಂದ ಸುತ್ತುವರೆಯಲ್ಪಟ್ಟ ಆರ್ಜುನಿಯು ರಥಿ ವೃಷಸೇನನ ಸಾರಥಿಯನ್ನೂ ಧನುಸ್ಸನ್ನೂ ಕತ್ತರಿಸಿದನು.

07043006a ತಸ್ಯ ವಿವ್ಯಾಧ ಬಲವಾನ್ ಶರೈರಶ್ವಾನಜಿಹ್ಮಗೈಃ|

07043006c ವಾತಾಯಮಾನೈರಥ ತೈರಶ್ವೈರಪಹೃತೋ ರಣಾತ್||

ಬಲವಾನನು ಜಿಹ್ಮಗ ಶರಗಳಿಂದ ಅವನ ಕುದುರೆಗಳನ್ನೂ ಹೊಡೆಯಲು ವಾಯುವೇಗಸಮನಾದ ಕುದುರೆಗಳು ಅವನ ರಥವನ್ನು ರಣದಿಂದ ಕೊಂಡೊಯ್ದವು.

07043007a ತೇನಾಂತರೇಣಾಭಿಮನ್ಯೋರ್ಯಂತಾಪಾಸಾರಯದ್ರಥಂ|

07043007c ರಥವ್ರಜಾಸ್ತತೋ ಹೃಷ್ಟಾಃ ಸಾಧು ಸಾಧ್ವಿತಿ ಚುಕ್ರುಶುಃ||

ಅದರ ಮಧ್ಯದಲ್ಲಿ ಅಭಿಮನ್ಯುವಿನ ಸಾರಥಿಯು ರಥವನ್ನು ಮಹಾರಥರ ಮಧ್ಯದಿಂದ ಬೇರೊಂದು ಕಡೆ ಕೊಂಡೊಯ್ಯಲು ಅದನ್ನು ನೋಡಿದ ರಥಸಮೂಹಗಳು ಹೃಷ್ಟರಾಗಿ “ಸಾಧು! ಸಾಧು!” ಎಂದು ಕೂಗಿದರು.

07043008a ತಂ ಸಿಂಹಮಿವ ಸಂಕ್ರುದ್ಧಂ ಪ್ರಮಥ್ನಂತಂ ಶರೈರರೀನ್|

07043008c ಆರಾದಾಯಾಂತಮಭ್ಯೇತ್ಯ ವಸಾತೀಯೋಽಭ್ಯಯಾದ್ದ್ರುತಂ||

ಸಿಂಹದಂತೆ ಸಂಕ್ರುದ್ಧನಾಗಿ ಶರಗಳಿಂದ ಅರಿಗಳನ್ನು ಸಂಹರಿಸುತ್ತಿದ್ದ ಅವನನ್ನು ದೂರದಿಂದಲೇ ನೋಡಿದ ವಸಾತೀಯನು ಬೇಗನೆ ಮುಂದೆ ಬಂದು ಎದುರಿಸಿದನು.

07043009a ಸೋಽಭಿಮನ್ಯುಂ ಶರೈಃ ಷಷ್ಟ್ಯಾ ರುಕ್ಮಪುಂಖೈರವಾಕಿರತ್|

07043009c ಅಬ್ರವೀಚ್ಚ ನ ಮೇ ಜೀವಂ ಜೀವತೋ ಯುಧಿ ಮೋಕ್ಷ್ಯಸೇ||

ಅವನು ಅಭಿಮನ್ಯುವನ್ನು ಅರವತ್ತು ರುಕ್ಮಪುಂಖಗಳಿಂದ ಮುಚ್ಚಿ “ನಾನು ಜೀವಿಸಿರುವಾಗ ನೀನು ಜೀವಸಹಿತವಾಗಿ ಹೋಗಲಾರೆ!” ಎಂದು ಹೇಳಿದನು.

07043010a ತಮಯಸ್ಮಯವರ್ಮಾಣಮಿಷುಣಾ ಆಶುಪಾತಿನಾ|

07043010c ವಿವ್ಯಾಧ ಹೃದಿ ಸೌಭದ್ರಃ ಸ ಪಪಾತ ವ್ಯಸುಃ ಕ್ಷಿತೌ||

ಆಗ ಸೌಭದ್ರನು ಉಕ್ಕಿನ ಕವಚವನ್ನು ಧರಿಸಿದ್ದ ಅವನ ಹೃದಯಕ್ಕೆ ಗುರಿಯಿಟ್ಟು ದೂರಲಕ್ಷ್ಯವಿರುವ ಬಾಣದಿಂದ ಹೊಡೆಯಲು ಅವನು ಅಸುನೀಗಿ ಭೂಮಿಯ ಮೇಲೆ ಬಿದ್ದನು.

07043011a ವಸಾತ್ಯಂ ನಿಹತಂ ದೃಷ್ಟ್ವಾ ಕ್ರುದ್ಧಾಃ ಕ್ಷತ್ರಿಯಪುಂಗವಾಃ|

07043011c ಪರಿವವ್ರುಸ್ತದಾ ರಾಜಂಸ್ತವ ಪೌತ್ರಂ ಜಿಘಾಂಸವಃ||

ರಾಜನ್! ವಸಾತಿಯು ಹತನಾದುದನ್ನು ನೋಡಿ ಕ್ರುದ್ಧ ಕ್ಷತ್ರಿಯಪುಂಗವರು ನಿನ್ನ ಮೊಮ್ಮಗನನ್ನು ಸಂಹರಿಸಲು ಸುತ್ತುವರೆದರು.

07043012a ವಿಸ್ಫಾರಯಂತಶ್ಚಾಪಾನಿ ನಾನಾರೂಪಾಣ್ಯನೇಕಶಃ|

07043012c ತದ್ಯುದ್ಧಮಭವದ್ರೌದ್ರಂ ಸೌಭದ್ರಸ್ಯಾರಿಭಿಃ ಸಹ||

ನಾನಾ ರೂಪದ ಅನೇಕ ಚಾಪಗಳನ್ನು ಠೇಂಕರಿಸುತ್ತಿದ್ದ ಅರಿಗಳೊಡನೆ ಸೌಭದ್ರನ ರೌದ್ರ ಯುದ್ಧವು ನಡೆಯಿತು.

07043013a ತೇಷಾಂ ಶರಾನ್ಸೇಷ್ವಸನಾಂ ಶರೀರಾಣಿ ಶಿರಾಂಸಿ ಚ|

07043013c ಸಕುಂಡಲಾನಿ ಸ್ರಗ್ವೀಣಿ ಕ್ರುದ್ಧಶ್ಚಿಚ್ಚೇದ ಫಾಲ್ಗುನಿಃ||

ಕ್ರುದ್ಧನಾದ ಫಾಲ್ಗುನಿಯು ಅವರ ಶರಗಳನ್ನೂ, ಧನುಸ್ಸುಗಳನ್ನೂ, ಶರೀರಗಳನ್ನೂ, ಕರ್ಣಕುಂಡಲ-ಹಾರಗಳೊಂದಿಗೆ ಶಿರಗಳನ್ನೂ ಕತ್ತರಿಸಿದನು.

07043014a ಸಖಡ್ಗಾಃ ಸಾಂಗುಲಿತ್ರಾಣಾಃ ಸಪಟ್ಟಿಶಪರಶ್ವಧಾಃ|

07043014c ಅದೃಶ್ಯಂತ ಭುಜಾಶ್ಚಿನ್ನಾ ಹೇಮಾಭರಣಭೂಷಿತಾಃ||

ಖಡ್ಗಗಳೊಂದಿಗೆ, ಅಂಗುಲಿತ್ರಾಣಗಳೊಂದಿಗೆ, ಪಟ್ಟಿಶ-ಪರಶಾಯುಧಗಳೊಂದಿಗೆ ಹೇಮಾಭರಣ ಭೂಷಿತ ಭುಜಗಳು ಅದೃಶ್ಯವಾಗುತ್ತಿದ್ದವು.

07043015a ಸ್ರಗ್ಭಿರಾಭರಣೈರ್ವಸ್ತ್ರೈಃ ಪತಿತೈಶ್ಚ ಮಹಾಧ್ವಜೈಃ|

07043015c ವರ್ಮಭಿಶ್ಚರ್ಮಭಿರ್ಹಾರೈರ್ಮುಕುಟೈಶ್ಚತ್ರಚಾಮರೈಃ||

07043016a ಅಪಸ್ಕರೈರಧಿಷ್ಠಾನೈರೀಷಾದಂಡಕಬಂಧುರೈಃ|

07043016c ಅಕ್ಷೈರ್ವಿಮಥಿತೈಶ್ಚಕ್ರೈರ್ಭಗ್ನೈಶ್ಚ ಬಹುಧಾ ಯುಗೈಃ||

07043017a ಅನುಕರ್ಷೈಃ ಪತಾಕಾಭಿಸ್ತಥಾ ಸಾರಥಿವಾಜಿಭಿಃ|

07043017c ರಥೈಶ್ಚ ಭಗ್ನೈರ್ನಾಗೈಶ್ಚ ಹತೈಃ ಕೀರ್ಣಾಭವನ್ಮಹೀ||

ಮಹಿಯ ಮೇಲೆ ಮಾಲೆಗಳು, ಆಭರಣಗಳು, ವಸ್ತ್ರಗಳು, ಕೆಳಗೆ ಬಿದ್ದಿದ್ದ ಮಹಾಧ್ವಜಗಳು, ಕವಚಗಳು, ಗುರಾಣಿಗಳು, ಹಾರಗಳು, ಮುಕುಟಗಳು, ಚತ್ರ-ಚಾಮರಗಳು, ಯುದ್ಧ ಸಾಮಗ್ರಿಗಳು, ಆಸನಗಳು, ಈಷಾದಂಡಗಳು, ಮೂಕಿಕಂಬಗಳು, ಅಚ್ಚುಮರಗಳು, ಮುರಿದುಹೋದ ಚಕ್ರಗಳು, ಭಗ್ನವಾದ ಅನೇಕ ನೊಗಗಳು, ಹರಿದುಹೋದ ಪತಾಕೆಗಳು, ಅಸುನೀಗಿ ಮಲಗಿದ್ದ ಸಾರಥಿ-ಕುದುರೆಗಳು, ಮುರಿದ ರಥಗಳು, ಮತ್ತು ಹತವಾದ ಆನೆಗಳು ಹರಡಿ ಬಿದ್ದಿದ್ದವು.

07043018a ನಿಹತೈಃ ಕ್ಷತ್ರಿಯೈಃ ಶೂರೈರ್ನಾನಾಜನಪದೇಶ್ವರೈಃ|

07043018c ಜಯಗೃದ್ಧೈರ್ವೃತಾ ಭೂಮಿರ್ದಾರುಣಾ ಸಮಪದ್ಯತ||

ಜಯವನ್ನು ಬಯಸಿದ್ದ ಶೂರ ನಾನಾಜನಪದೇಶ್ವರ ಕ್ಷತ್ರಿಯರು ಹತರಾಗಿ ಬಿದ್ದಿದ್ದ ಭೂಮಿಯು ದಾರುಣವಾಗಿ ಕಂಡಿತು.

07043019a ದಿಶೋ ವಿಚರತಸ್ತಸ್ಯ ಸರ್ವಾಶ್ಚ ಪ್ರದಿಶಸ್ತಥಾ|

07043019c ರಣೇಽಭಿಮನ್ಯೋಃ ಕ್ರುದ್ಧಸ್ಯ ರೂಪಮಂತರಧೀಯತ||

ರಣದಲ್ಲಿ ಕ್ರುದ್ಧನಾಗಿ ಎಲ್ಲ ದಿಕ್ಕು-ಉಪದಿಕ್ಕುಗಳಲ್ಲಿ ಸಂಚರಿಸುತ್ತಿದ್ದ ಅಭಿಮನ್ಯುವಿನ ರೂಪವು ಮಧ್ಯ-ಮಧ್ಯದಲ್ಲಿ ಕಾಣಿಸುತ್ತಲೇ ಇರಲಿಲ್ಲ.

07043020a ಕಾಂಚನಂ ಯದ್ಯದಸ್ಯಾಸೀದ್ವರ್ಮ ಚಾಭರಣಾನಿ ಚ|

07043020c ಧನುಷಶ್ಚ ಶರಾಣಾಂ ಚ ತದಪಶ್ಯಾಮ ಕೇವಲಂ||

ಕೇವಲ ಅವನ ಥಳಥಳಿಸುವ ಬಂಗಾರದ ಕವಚ, ಆಭರಣಗಳು, ಧನುಸ್ಸು ಮತ್ತು ಶರಗಳನ್ನು ನೋಡುತ್ತಿದ್ದೆವು.

07043021a ತಂ ತದಾ ನಾಶಕತ್ಕಶ್ಚಿಚ್ಚಕ್ಷುರ್ಭ್ಯಾಮಭಿವೀಕ್ಷಿತುಂ|

07043021c ಆದದಾನಂ ಶರೈರ್ಯೋಧಾನ್ಮಧ್ಯೇ ಸೂರ್ಯಮಿವ ಸ್ಥಿತಂ||

ಸೂರ್ಯನಂತೆ ರಣದ ಮಧ್ಯದಲ್ಲಿ ನಿಂತು ಬಾಣಗಳಿಂದ ಯೋಧರ ಪ್ರಾಣಗಳನ್ನು ಹೀರುತ್ತಿದ್ದ ಅವನನ್ನು ಆಗ ಕಣ್ಣುಗಳನ್ನು ತೆರೆದು ನೋಡಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಅಭಿಮನ್ಯುಪರಾಕ್ರಮೇ ತ್ರಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಅಭಿಮನ್ಯುಪರಾಕ್ರಮ ಎನ್ನುವ ನಲ್ವತ್ಮೂರನೇ ಅಧ್ಯಾಯವು.

Image result for trees against white background

Comments are closed.