Drona Parva: Chapter 41

ದ್ರೋಣ ಪರ್ವ: ಅಭಿಮನ್ಯುವಧ ಪರ್ವ

೪೧

ಜಯದ್ರಥನು ಅಭಿಮನ್ಯುವನ್ನು ಹಿಂಬಾಲಿಸಿ ಹೋಗುತ್ತಿದ್ದ ಪಾಂಡವ ಸೇನೆಯನ್ನು ತಡೆದು ಯುದ್ಧಮಾಡಿದುದು (೧-೨೦).

07041001 ಧೃತರಾಷ್ಟ್ರ ಉವಾಚ|

07041001a ಬಾಲಮತ್ಯಂತಸುಖಿನಮವಾರ್ಯಬಲದರ್ಪಿತಂ|

07041001c ಯುದ್ಧೇಷು ಕುಶಲಂ ವೀರಂ ಕುಲಪುತ್ರಂ ತನುತ್ಯಜಂ||

07041002a ಗಾಹಮಾನಮನೀಕಾನಿ ಸದಶ್ವೈಸ್ತಂ ತ್ರಿಹಾಯನೈಃ|

07041002c ಅಪಿ ಯೌಧಿಷ್ಠಿರಾತ್ಸೈನ್ಯಾತ್ಕಶ್ಚಿದನ್ವಪತದ್ರಥೀ||

ಧೃತರಾಷ್ಟ್ರನು ಹೇಳಿದನು: “ಬಾಲಕನಾಗಿದ್ದ, ಅತ್ಯಂತ ಸುಖದಲ್ಲಿ ಬೆಳೆದಿದ್ದ, ಸ್ವಬಾಹು ಬಲದಿಂದ ದರ್ಪಿತನಾಗಿದ್ದ, ಯುದ್ಧದಲ್ಲಿ ಕುಶಲ ವೀರ, ಕುಲಪುತ್ರ, ತನುವನ್ನೂ ತ್ಯಜಿಸಿ ಹೋರಾಡುತ್ತಿದ್ದ ಅವನು ಮೂರೇ ವರ್ಷದ ಕುದುರೆಗಳ ಸಹಾಯದಿಂದ ಸೇನೆಗಳನ್ನು ಹೊಕ್ಕು ಯುದ್ಧಮಾಡುತ್ತಿರಲು ಯುಧಿಷ್ಠಿರನ ಕಡೆಯ ಸೇನೆಯಿಂದ ಬೇರೆ ಯಾರೂ ಆ ರಥಿಯನ್ನು ಹಿಂಬಾಲಿಸಿ ಹೋಗಲಿಲ್ಲವೇ?”

07041003 ಸಂಜಯ ಉವಾಚ|

07041003a ಯುಧಿಷ್ಠಿರೋ ಭೀಮಸೇನಃ ಶಿಖಂಡೀ ಸಾತ್ಯಕಿರ್ಯಮೌ|

07041003c ಧೃಷ್ಟದ್ಯುಮ್ನೋ ವಿರಾಟಶ್ಚ ದ್ರುಪದಶ್ಚ ಸಕೇಕಯಃ|

07041003e ಧೃಷ್ಟಕೇತುಶ್ಚ ಸಂರಬ್ಧೋ ಮತ್ಸ್ಯಾಶ್ಚಾನ್ವಪತನ್ರಣೇ||

ಸಂಜಯನು ಹೇಳಿದನು: “ರಣದಲ್ಲಿ ಅವನನ್ನು ಯುಧಿಷ್ಠಿರ, ಭೀಮಸೇನ, ಶಿಖಂಡಿ, ಸಾತ್ಯಕಿ, ಯಮಳರು, ಧೃಷ್ಟದ್ಯುಮ್ನ, ವಿರಾಟ, ದ್ರುಪದ, ಕೇಕಯರೊಂದಿಗೆ ಧೃಷ್ಟಕೇತುವೂ ಮತ್ಸ್ಯರೂ ಸಂರಬ್ಧರಾಗಿ ಅನುಸರಿಸಿ ಹೋಗುತ್ತಿದ್ದರು.

07041004a ಅಭ್ಯದ್ರವನ್ಪರೀಪ್ಸಂತೋ ವ್ಯೂಢಾನೀಕಾಃ ಪ್ರಹಾರಿಣಃ|

07041004c ತಾನ್ದೃಷ್ಟ್ವಾ ದ್ರವತಃ ಶೂರಾಂಸ್ತ್ವದೀಯಾ ವಿಮುಖಾಭವನ್||

ವ್ಯೂಹದಲ್ಲಿದ್ದ ಸೇನೆಗಳನ್ನು ಪ್ರಹರಿಸಿ ಆಕ್ರಮಣಿಸಿದುದನ್ನು ನೋಡಿ ನಿನ್ನ ಕಡೆಯ ಶೂರರು ಓಡುತ್ತಾ ವಿಮುಖರಾದರು.

07041005a ತತಸ್ತದ್ವಿಮುಖಂ ದೃಷ್ಟ್ವಾ ತವ ಸೂನೋರ್ಮಹದ್ಬಲಂ|

07041005c ಜಾಮಾತಾ ತವ ತೇಜಸ್ವೀ ವಿಷ್ಟಂಭಯಿಷುರಾದ್ರವತ್||

ನಿನ್ನ ಮಗನ ಮಹಾಬಲವು ಹಾಗೆ ವಿಮುಖವಾಗುತ್ತಿದ್ದುದನ್ನು ನೋಡಿದ ನಿನ್ನ ಅಳಿಯ ತೇಜಸ್ವಿಯು ಶತ್ರುಗಳನ್ನು ತಡೆಹಿಡಿಯಲು ಧಾವಿಸಿದನು.

07041006a ಸೈಂಧವಸ್ಯ ಮಹಾರಾಜ ಪುತ್ರೋ ರಾಜಾ ಜಯದ್ರಥಃ|

07041006c ಸ ಪುತ್ರಗೃದ್ಧಿನಃ ಪಾರ್ಥಾನ್ಸಹಸೈನ್ಯಾನವಾರಯತ್||

ಮಹಾರಾಜ! ಸೈಂಧವನ ಮಗ ರಾಜಾ ಜಯದ್ರಥನು ಮಗನನ್ನು ಹಿಂಬಾಲಿಸಿ ಹೋಗುತ್ತಿದ್ದ ಪಾರ್ಥರನ್ನು ಅವರ ಸೇನೆಗಳೊಂದಿಗೆ ತಡೆದನು.

07041007a ಉಗ್ರಧನ್ವಾ ಮಹೇಷ್ವಾಸೋ ದಿವ್ಯಮಸ್ತ್ರಮುದೀರಯನ್|

07041007c ವಾರ್ಧಕ್ಷತ್ರಿರುಪಾಸೇಧತ್ಪ್ರವಣಾದಿವ ಕುಂಜರಾನ್||

ಓಡಿಬಂದು ಆನೆಗಳನ್ನು ಎದುರಿಸುವ ಸಲಗದಂತೆ ಉಗ್ರಧನ್ವಿ, ಮಹೇಷ್ವಾಸ ವಾರ್ಧಕ್ಷತ್ರಿಯು ದಿವಾಸ್ತ್ರಗಳನ್ನು ಪ್ರಯೋಗಿಸುತ್ತಾ ಆಕ್ರಮಣಿಸಿದನು.”

07041008 ಧೃತರಾಷ್ಟ್ರ ಉವಾಚ|

07041008a ಅತಿಭಾರಮಹಂ ಮನ್ಯೇ ಸೈಂಧವೇ ಸಂಜಯಾಹಿತಂ|

07041008c ಯದೇಕಃ ಪಾಂಡವಾನ್ಕ್ರುದ್ಧಾನ್ಪುತ್ರಗೃದ್ಧೀನವಾರಯತ್||

ಧೃತರಾಷ್ಟ್ರನು ಹೇಳಿದನು: “ಸಂಜಯ! ಸೈಂಧವನ ಮೇಲೆ ಗುರುತರ ಭಾರವು ಹೊರಿಸಲ್ಪಟ್ಟಿತೆಂದು ನನಗನ್ನಿಸುತ್ತದೆ. ಕ್ರುದ್ಧರಾಗಿ ಮಗನನ್ನು ರಕ್ಷಿಸುತ್ತಿರುವ ಪಾಂಡವರನ್ನು ಅವನೊಬ್ಬನೇ ತಡೆದನೇ?

07041009a ಅತ್ಯದ್ಭುತಮಿದಂ ಮನ್ಯೇ ಬಲಂ ಶೌರ್ಯಂ ಚ ಸೈಂಧವೇ|

07041009c ತದಸ್ಯ ಬ್ರೂಹಿ ಮೇ ವೀರ್ಯಂ ಕರ್ಮ ಚಾಗ್ರ್ಯಂ ಮಹಾತ್ಮನಃ||

ಸೈಂಧವನ ಈ ಬಲ-ಶೌರ್ಯಗಳು ಅತಿ ಅದ್ಭುತವಾದುದೆಂದು ತಿಳಿಯುತ್ತೇನೆ. ಈ ಮಹಾತ್ಮನ ವೀರ್ಯ ಮತ್ತು ಮುಖ್ಯ ಕರ್ಮಗಳ ಕುರಿತು ನನಗೆ ಹೇಳು.

07041010a ಕಿಂ ದತ್ತಂ ಹುತಮಿಷ್ಟಂ ವಾ ಸುತಪ್ತಮಥ ವಾ ತಪಃ|

07041010c ಸಿಂಧುರಾಜೇನ ಯೇನೈಕಃ ಕ್ರುದ್ಧಾನ್ಪಾರ್ಥಾನವಾರಯತ್||

ಒಬ್ಬನೇ ಕ್ರೋಧಿತ ಪಾಂಡವರನ್ನು ತಡೆದನೆಂದರೆ ಸಿಂಧುರಾಜನು ಯಾವ ವರವನ್ನು ಪಡೆದಿದ್ದನು? ಅಥವಾ ಯಾವ ಯಜ್ಞವನ್ನು ನಡೆಸಿದ್ದನು? ಅಥವಾ ಯಾರನ್ನು ಕುರಿತು ತಪಸ್ಸನ್ನು ತಪಿಸಿದ್ದನು?”

07041011 ಸಂಜಯ ಉವಾಚ|

07041011a ದ್ರೌಪದೀಹರಣೇ ಯತ್ತದ್ಭೀಮಸೇನೇನ ನಿರ್ಜಿತಃ|

07041011c ಮಾನಾತ್ಸ ತಪ್ತವಾನ್ರಾಜಾ ವರಾರ್ಥೀ ಸುಮಹತ್ತಪಃ||

ಸಂಜಯನು ಹೇಳಿದನು: “ದ್ರೌಪದೀಹರಣದ ಸಮಯದಲ್ಲಿ ಭೀಮಸೇನನಿಂದ ಪರಾಜಯಗೊಂಡ ಈ ರಾಜನು ಮಾನ್ಯತೆಯಿಂದ ವರವನ್ನು ಅರಸಿ ಮಹಾ ತಪಸ್ಸನ್ನಾಚರಿಸಿದ್ದನು.

07041012a ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ಪ್ರಿಯೇಭ್ಯಃ ಸನ್ನಿವರ್ತ್ಯ ಸಃ|

07041012c ಕ್ಷುತ್ಪಿಪಾಸಾತಪಸಹಃ ಕೃಶೋ ಧಮನಿಸಂತತಃ|

07041012e ದೇವಮಾರಾಧಯಚ್ಚರ್ವಂ ಗೃಣನ್ಬ್ರಹ್ಮ ಸನಾತನಂ||

ಇಂದ್ರಿಯಗಳನ್ನು ಇಂದ್ರಿಯಾರ್ಥಗಳಿಂದ ಹಿಂದಿರುಗಿಸಿ, ಪ್ರಿಯವಾದವುಗಳೆಲ್ಲವನ್ನೂ ಹತ್ತಿರಕ್ಕೆ ತೆಗೆದುಕೊಳ್ಳದೇ, ಹಸಿವು-ಬಾಯಾರಿಕೆ-ಬಿಸಿಲನ್ನು ಸಹಿಸಿಕೊಂಡು ತಪಸ್ಸನ್ನಾಚರಿಸಿದ ಅವನು ಕೃಶನಾಗಿ, ಧಮನಿಗಳು ಮಾತ್ರವೇ ಕಾಣಿಸಿಕೊಳ್ಳುತ್ತಿರುವ ಹಾಗೆ ಬ್ರಹ್ಮ, ಸನಾತನ, ದೇವ ಶರ್ವನನ್ನು ಆರಾಧಿಸಿದ್ದನು.

07041013a ಭಕ್ತಾನುಕಂಪೀ ಭಗವಾಂಸ್ತಸ್ಯ ಚಕ್ರೇ ತತೋ ದಯಾಂ|

07041013c ಸ್ವಪ್ನಾಂತೇಽಪ್ಯಥ ಚೈವಾಹ ಹರಃ ಸಿಂಧುಪತೇಃ ಸುತಂ|

07041013e ವರಂ ವೃಣೀಷ್ವ ಪ್ರೀತೋಽಸ್ಮಿ ಜಯದ್ರಥ ಕಿಮಿಚ್ಚಸಿ||

ಭಕ್ತಾನುಕಂಪಿಯಾದ ಭಗವಾನನು ಅವನ ಮೇಲೆ ದಯೆ ತೋರಿಸಿದನು. ಒಮ್ಮೆ ಸ್ವಪ್ನದ ಕೊನೆಯಲ್ಲಿ ಹರನು ಸಿಂಧುಪತಿಯ ಸುತನಿಗೆ ಕಾಣಿಸಿಕೊಂಡು “ಜಯದ್ರಥ! ನಿನ್ನ ಕುರಿತು ಪ್ರೀತನಾಗಿದ್ದೇನೆ. ವರವನ್ನು ಕೇಳು. ಏನನ್ನು ಇಚ್ಛಿಸುತ್ತೀಯೆ?” ಎಂದು ಕೇಳಿದ್ದನು.

07041014a ಏವಮುಕ್ತಸ್ತು ಶರ್ವೇಣ ಸಿಂಧುರಾಜೋ ಜಯದ್ರಥಃ|

07041014c ಉವಾಚ ಪ್ರಣತೋ ರುದ್ರಂ ಪ್ರಾಂಜಲಿರ್ನಿಯತಾತ್ಮವಾನ್||

ಶರ್ವನು ಹೀಗೆ ಹೇಳಲು ಸಿಂಧುರಾಜ ಆತ್ಮವಾನ್ ಜಯದ್ರಥನು ರುದ್ರನಿಗೆ ಅಂಜಲೀಬದ್ಧನಾಗಿ ನಮಸ್ಕರಿಸಿ ಹೇಳಿದನು:

07041015a ಪಾಂಡವೇಯಾನಹಂ ಸಂಖ್ಯೇ ಭೀಮವೀರ್ಯಪರಾಕ್ರಮಾನ್|

07041015c ಏಕೋ ರಣೇ ಧಾರಯೇಯಂ ಸಮಸ್ತಾನಿತಿ ಭಾರತ||

ಭಾರತ! “ನಾನು ರಣದಲ್ಲಿ ಭೀಮವೀರ್ಯಪರಾಕ್ರಮಿಗಳಾದ ಪಾಂಡವ ಸಮಸ್ತರನ್ನು ಒಬ್ಬನೇ ಯುದ್ಧದಲ್ಲಿ ಎದುರಿಸಬಲ್ಲವನಾಗಬೇಕು” ಎಂದು.

07041016a ಏವಮುಕ್ತಸ್ತು ದೇವೇಶೋ ಜಯದ್ರಥಮಥಾಬ್ರವೀತ್|

07041016c ದದಾಮಿ ತೇ ವರಂ ಸೌಮ್ಯ ವಿನಾ ಪಾರ್ಥಂ ಧನಂಜಯಂ||

07041017a ಧಾರಯಿಷ್ಯಸಿ ಸಂಗ್ರಾಮೇ ಚತುರಃ ಪಾಂಡುನಂದನಾನ್|

07041017c ಏವಮಸ್ತ್ವಿತಿ ದೇವೇಶಮುಕ್ತ್ವಾಬುಧ್ಯತ ಪಾರ್ಥಿವಃ||

ಹೀಗೇ ಹೇಳಲು ದೇವೇಶನು ಜಯದ್ರಥನಿಗೆ ಹೇಳಿದನು: “ಸೌಮ್ಯ! ನಿನಗೆ ವರವನ್ನು ಕೊಡುತ್ತೇನೆ. ಪಾರ್ಥ ಧನಂಜಯನ ಹೊರತಾಗಿ ನಾಲ್ವರು ಪಾಂಡುನಂದನರನ್ನು ನೀನು ಸಂಗ್ರಾಮದಲ್ಲಿ ಎದುರಿಸಬಲ್ಲೆ!” ಹೀಗೆ ಹೇಳಿ ದೇವೇಶನು ರಾಜನನ್ನು ಎಚ್ಚರಿಸಿದನು.

07041018a ಸ ತೇನ ವರದಾನೇನ ದಿವ್ಯೇನಾಸ್ತ್ರಬಲೇನ ಚ|

07041018c ಏಕಃ ಸಂಧಾರಯಾಮಾಸ ಪಾಂಡವಾನಾಮನೀಕಿನೀಂ||

ಅವನು ಆ ವರದಾನದಿಂದ ಮತ್ತು ದಿವ್ಯಾಸ್ತ್ರಗಳ ಬಲದಿಂದ ಒಬ್ಬನೇ ಪಾಂಡವರ ಸೇನೆಯನ್ನು ಎದುರಿಸತೊಡಗಿದನು.

07041019a ತಸ್ಯ ಜ್ಯಾತಲಘೋಷೇಣ ಕ್ಷತ್ರಿಯಾನ್ಭಯಮಾವಿಶತ್|

07041019c ಪರಾಂಸ್ತು ತವ ಸೈನ್ಯಸ್ಯ ಹರ್ಷಃ ಪರಮಕೋಽಭವತ್||

ಅವನ ಧನುಸ್ಸು ಮತ್ತು ಚಪ್ಪಾಳೆಯ ಘೋಷದಿಂದ ಶತ್ರುಪಕ್ಷದ ಕ್ಷತ್ರಿಯರಲ್ಲಿ ಭಯವು ಆವೇಶಗೊಂಡಿತು ಮತ್ತು ನಿನ್ನ ಸೇನೆಯಲ್ಲಿ ಪರಮ ಹರ್ಷವುಂಟಾಯಿತು.

07041020a ದೃಷ್ಟ್ವಾ ತು ಕ್ಷತ್ರಿಯಾ ಭಾರಂ ಸೈಂಧವೇ ಸರ್ವಮರ್ಪಿತಂ|

07041020c ಉತ್ಕ್ರುಶ್ಯಾಭ್ಯದ್ರವನ್ರಾಜನ್ಯೇನ ಯೌಧಿಷ್ಠಿರಂ ಬಲಂ||

ಭಾರವೆಲ್ಲವೂ ಸೈಂಧವನ ಪಾಲಿಗೆ ಬಂದುದನ್ನು ನೋಡಿ ನಿನ್ನ ಕಡೆಯ ಕ್ಷತ್ರಿಯರು ಜೋರಾಗಿ ಗರ್ಜಿಸುತ್ತಾ ಯುಧಿಷ್ಠಿರನ ಸೇನೆಯನ್ನು ಆಕ್ರಮಿಸಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಅಭಿಮನ್ಯುವಧ ಪರ್ವಣಿ ಜಯದ್ರಥಯುದ್ಧೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಅಭಿಮನ್ಯುವಧ ಪರ್ವದಲ್ಲಿ ಜಯದ್ರಥಯುದ್ಧ ಎನ್ನುವ ನಲ್ವತ್ತೊಂದನೇ ಅಧ್ಯಾಯವು.

Image result for trees against white background

Comments are closed.