Drona Parva: Chapter 26

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೬

ಸಂಶಪ್ತಕ ವಧೆ (೧-೨೯).

07026001 ಸಂಜಯ ಉವಾಚ|

07026001a ಯನ್ಮಾಂ ಪಾರ್ಥಸ್ಯ ಸಂಗ್ರಾಮೇ ಕರ್ಮಾಣಿ ಪರಿಪೃಚ್ಚಸಿ|

07026001c ತಚ್ಚೃಣುಷ್ವ ಮಹಾರಾಜ ಪಾರ್ಥೋ ಯದಕರೋನ್ಮೃಧೇ||

ಸಂಜಯನು ಹೇಳಿದನು: “ಸಂಗ್ರಾಮದಲ್ಲಿ ಪಾರ್ಥನ ಕೃತ್ಯಗಳ ಕುರಿತು ನೀನು ನನ್ನನ್ನು ಕೇಳಿದೆಯಲ್ಲ! ಮಹಾರಾಜ! ರಣದಲ್ಲಿ ಪಾರ್ಥನು ಏನು ಮಾಡಿದನು ಎನ್ನುವುದನ್ನು ಕೇಳು.

07026002a ರಜೋ ದೃಷ್ಟ್ವಾ ಸಮುದ್ಭೂತಂ ಶ್ರುತ್ವಾ ಚ ಗಜನಿಸ್ವನಂ|

07026002c ಭಜ್ಯತಾಂ ಭಗದತ್ತೇನ ಕೌಂತೇಯಃ ಕೃಷ್ಣಮಬ್ರವೀತ್||

ಮೇಲೆದ್ದ ಧೂಳನ್ನು ನೋಡಿ ಮತ್ತು ಭಗದತ್ತನಿಂದ ನಿಯಂತ್ರಿಸಲ್ಪಟ್ಟ ಆನೆಯು ಘೀಳಿಡುವುದನ್ನು ಕೇಳಿದ ಕೌಂತೇಯನು ಕೃಷ್ಣನಿಗೆ ಹೇಳಿದನು.

07026003a ಯಥಾ ಪ್ರಾಗ್ಜ್ಯೋತಿಷೋ ರಾಜಾ ಗಜೇನ ಮಧುಸೂದನ|

07026003c ತ್ವರಮಾಣೋಽಭ್ಯತಿಕ್ರಾಂತೋ ಧ್ರುವಂ ತಸ್ಯೈಷ ನಿಸ್ವನಃ||

“ಮಧುಸೂದನ! ಪ್ರಾಗ್ಜ್ಯೋತಿಷದ ರಾಜನು ಆನೆಯೊಂದಿಗೆ ತ್ವರೆಮಾಡಿ ಆಕ್ರಮಣಿಸುತ್ತಿದ್ದಾನೆ. ನಿಶ್ಚಯವಾಗಿಯೂ ಇದು ಅವನದೇ ಕೂಗು!

07026004a ಇಂದ್ರಾದನವರಃ ಸಂಖ್ಯೇ ಗಜಯಾನವಿಶಾರದಃ|

07026004c ಪ್ರಥಮೋ ವಾ ದ್ವಿತೀಯೋ ವಾ ಪೃಥಿವ್ಯಾಮಿತಿ ಮೇ ಮತಿಃ||

ಗಜಯಾನದಲ್ಲಿ ವಿಶಾರದನಾಗಿರುವ ಇವನು ಯುದ್ಧದಲ್ಲಿ ಇಂದ್ರನಿಗೂ ಕಡಿಮೆಯಲ್ಲ. ಇವನು ಪೃಥ್ವಿಯಲ್ಲಿಯೇ ಮೊದಲನೆಯವನು ಅಥವಾ ಎರಡನೆಯವನು ಎಂದು ನನ್ನ ಅಭಿಪ್ರಾಯ.

07026005a ಸ ಚಾಪಿ ದ್ವಿರದಶ್ರೇಷ್ಠಃ ಸದಾಪ್ರತಿಗಜೋ ಯುಧಿ|

07026005c ಸರ್ವಶಬ್ದಾತಿಗಃ ಸಂಖ್ಯೇ ಕೃತಕರ್ಮಾ ಜಿತಕ್ಲಮಃ||

ಆ ಆನೆಯೂ ಕೂಡ ಶ್ರೇಷ್ಠವಾದುದು. ಯುದ್ಧದಲ್ಲಿ ಸರಿಸಾಟಿಯಾದ ಆನೆಯು ಇಲ್ಲ. ಎಲ್ಲ ಶಬ್ಧಗಳನ್ನೂ ಮೀರಿಸುವಂತವನು. ಯುದ್ಧದಲ್ಲಿ ಯಶಸ್ವಿಯು. ಆಯಾಸವೇ ಇಲ್ಲದವನು.

07026006a ಸಹಃ ಶಸ್ತ್ರನಿಪಾತಾನಾಮಗ್ನಿಸ್ಪರ್ಶಸ್ಯ ಚಾನಘ|

07026006c ಸ ಪಾಂಡವಬಲಂ ವ್ಯಕ್ತಮದ್ಯೈಕೋ ನಾಶಯಿಷ್ಯತಿ||

ಅನಘ! ಮೇಲೆ ಬೀಳುತ್ತಿರುವ ಶಸ್ತ್ರಗಳನ್ನೂ, ಅಗ್ನಿಯನ್ನೂ ಸಹಿಸಿಕೊಳ್ಳಬಹುದಾದ ಇದು ಒಂದೇ ಪಾಂಡವ ಬಲವನ್ನು ನಾಶಪಡಿಸುತ್ತದೆ ಎನ್ನುವುದು ವ್ಯಕ್ತವಾಗುತ್ತಿದೆ.

07026007a ನ ಚಾವಾಭ್ಯಾಂ ಋತೇಽನ್ಯೋಽಸ್ತಿ ಶಕ್ತಸ್ತಂ ಪ್ರತಿಬಾಧಿತುಂ|

07026007c ತ್ವರಮಾಣಸ್ತತೋ ಯಾಹಿ ಯತಃ ಪ್ರಾಗ್ಜ್ಯೋತಿಷಾಧಿಪಃ||

ಅವರ ಈ ಉಪಟಳವನ್ನು ಸಹಿಸುವವರು ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ಶಕ್ಯವಿಲ್ಲ. ತ್ವರೆಮಾಡಿ ಪ್ರಾಗ್ಜ್ಯೋತಿಷಾಧಿಪನು ಎಲ್ಲಿದ್ದಾನೋ ಅಲ್ಲಿಗೆ ಕರೆದೊಯ್ಯಿ.

07026008a ಶಕ್ರಸಖ್ಯಾದ್ದ್ವಿಪಬಲೈರ್ವಯಸಾ ಚಾಪಿ ವಿಸ್ಮಿತಂ|

07026008c ಅದ್ಯೈನಂ ಪ್ರೇಷಯಿಷ್ಯಾಮಿ ಬಲಹಂತುಃ ಪ್ರಿಯಾತಿಥಿಂ||

ಶಕ್ರನೊಂದಿಗಿನ ಸಖ್ಯದಿಂದ, ಆನೆಯ ಬಲದಿಂದ ಮತ್ತು ವಯಸ್ಸಿನಲ್ಲಿ ವಿಸ್ಮಿತನಾಗಿರುವ ಅವನನ್ನು ಇಂದು ನಾನು ಬಲಹಂತುವಿನ ಪ್ರಿಯ ಅತಿಥಿಯಾಗಿ ಕಳುಹಿಸುತ್ತೇನೆ.”

07026009a ವಚನಾದಥ ಕೃಷ್ಣಸ್ತು ಪ್ರಯಯೌ ಸವ್ಯಸಾಚಿನಃ|

07026009c ದಾರ್ಯತೇ ಭಗದತ್ತೇನ ಯತ್ರ ಪಾಂಡವವಾಹಿನೀ||

ಸವ್ಯಸಾಚಿಯ ಮಾತಿನಂತೆ ಕೃಷ್ಣನು ಎಲ್ಲಿ ಪಾಂಡವವಾಹಿನಿಯನ್ನು ಸೀಳುತ್ತಿದ್ದನೋ ಅಲ್ಲಿಗೆ ಕರೆದೊಯ್ದನು.

07026010a ತಂ ಪ್ರಯಾಂತಂ ತತಃ ಪಶ್ಚಾದಾಹ್ವಯಂತೋ ಮಹಾರಥಾಃ|

07026010c ಸಂಶಪ್ತಕಾಃ ಸಮಾರೋಹನ್ಸಹಸ್ರಾಣಿ ಚತುರ್ದಶ||

ಅವನು ಬೇರೆಕಡೆ ಯುದ್ಧ ಮಾಡಲು ಹೋಗುವಾಗ ಅವನ ಹಿಂದಿನಿಂದ ಹದಿನಾಲ್ಕು ಸಾವಿರ ಸಂಶಪ್ತಕರು ಎರಗಿದರು.

07026011a ದಶೈವ ತು ಸಹಸ್ರಾಣಿ ತ್ರಿಗರ್ತಾನಾಂ ನರಾಧಿಪ|

07026011c ಚತ್ವಾರಿ ತು ಸಹಸ್ರಾಣಿ ವಾಸುದೇವಸ್ಯ ಯೇಽನುಗಾಃ||

ನರಾಧಿಪ! ಅದರಲ್ಲಿ ಹತ್ತು ಸಾವಿರ ತ್ರಿಗರ್ತರಿದ್ದರು. ಮತ್ತು ನಾಲ್ಕು ಸಾವಿರ ವಾಸುದೇವನ ಅನುಯಾಯಿಗಳಿದ್ದರು.

07026012a ದಾರ್ಯಮಾಣಾಂ ಚಮೂಂ ದೃಷ್ಟ್ವಾ ಭಗದತ್ತೇನ ಮಾರಿಷ|

07026012c ಆಹೂಯಮಾನಸ್ಯ ಚ ತೈರಭವದ್ಧೃದಯಂ ದ್ವಿಧಾ||

ಮಾರಿಷ! ಭಗದತ್ತನಿಂದ ನಾಶವಾಗುತ್ತಿರುವ ಸೇನೆಯನ್ನು ನೋಡಿ ಮತ್ತು ಆಹ್ವಾನಿಸುತ್ತಿದ್ದ ಅವರ ನಡುವೆ ಅವನ ಹೃದಯವು ಎರಡಾಯಿತು.

07026013a ಕಿಂ ನು ಶ್ರೇಯಸ್ಕರಂ ಕರ್ಮ ಭವೇದಿತಿ ವಿಚಿಂತಯನ್|

07026013c ಇತೋ ವಾ ವಿನಿವರ್ತೇಯಂ ಗಚ್ಚೇಯಂ ವಾ ಯುಧಿಷ್ಠಿರಂ||

“ಏನನ್ನು ಮಾಡಿದರೆ ಶ್ರೇಯಸ್ಕರವಾದುದು? ಇವರ ಬಳಿ ಹಿಂದಿರುಗಲೇ ಅಥವಾ ಯುಧಿಷ್ಠಿರನ ಬಳಿ ಹೋಗಲೇ?” ಎಂದು ಚಿಂತಿಸಿದನು.

07026014a ತಸ್ಯ ಬುದ್ಧ್ಯಾ ವಿಚಾರ್ಯೈತದರ್ಜುನಸ್ಯ ಕುರೂದ್ವಹ|

07026014c ಅಭವದ್ಭೂಯಸೀ ಬುದ್ಧಿಃ ಸಂಶಪ್ತಕವಧೇ ಸ್ಥಿರಾ||

ಕುರೂದ್ವಹ! ಸಂಶಪ್ತಕರನ್ನು ವಧಿಸುವುದೇ ಯಶಸ್ಕರವಾದುದು ಎಂದು ಅರ್ಜುನನ ಬುದ್ಧಿಯು ವಿಚಾರಿಸಲು ಅವನು ಅಲ್ಲಿಯೇ ನಿಂತನು.

07026015a ಸ ಸನ್ನಿವೃತ್ತಃ ಸಹಸಾ ಕಪಿಪ್ರವರಕೇತನಃ|

07026015c ಏಕೋ ರಥಸಹಸ್ರಾಣಿ ನಿಹಂತುಂ ವಾಸವೀ ರಣೇ||

ತಕ್ಷಣವೇ ಆ ಕಪಿಪ್ರವರಕೇತನ ವಾಸವಿಯು ಒಬ್ಬನೇ ಸಹಸ್ರಾರು ರಥರನ್ನು ಸಂಹರಿಸಲು ಹಿಂದಿರುಗಿದನು.

07026016a ಸಾ ಹಿ ದುರ್ಯೋಧನಸ್ಯಾಸೀನ್ಮತಿಃ ಕರ್ಣಸ್ಯ ಚೋಭಯೋಃ|

07026016c ಅರ್ಜುನಸ್ಯ ವಧೋಪಾಯೇ ತೇನ ದ್ವೈಧಮಕಲ್ಪಯತ್||

ಇದು ಅರ್ಜುನನ ವಧೆಗೆಂದು ದುರ್ಯೋಧನ-ಕರ್ಣರಿಬ್ಬರ ಉಪಾಯವಾಗಿದ್ದಿತು. ಅವರಿಂದಾಗಿ ರಣರಂಗವು ಎರಡು ಭಾಗವಾಗಿತ್ತು.

07026017a ಸ ತು ಸಂವರ್ತಯಾಮಾಸ ದ್ವೈಧೀಭಾವೇನ ಪಾಂಡವಃ|

07026017c ರಥೇನ ತು ರಥಾಗ್ರ್ಯಾಣಾಮಕರೋತ್ತಾಂ ಮೃಷಾ ತದಾ||

ಡೋಲಾಯಮಾನನಾದ ಪಾಂಡವನು ರಥದಿಂದ ರಥಾಗ್ರಣ್ಯರನ್ನು ಸಂಹರಿಸಲು ಹಿಂದಿರುಗಿ ಬಂದನು.

07026018a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಂ|

07026018c ವ್ಯಸೃಜನ್ನರ್ಜುನೇ ರಾಜನ್ಸಂಶಪ್ತಕಮಹಾರಥಾಃ||

ಆಗ ಸಂಶಪ್ತಕ ಮಹಾರಥರು ಒಂದು ಲಕ್ಷ ನತಪರ್ವಣ ಶರಗಳನ್ನು ಅರ್ಜುನನ ಮೇಲೆ ಪ್ರಯೋಗಿಸಿದರು.

07026019a ನೈವ ಕುಂತೀಸುತಃ ಪಾರ್ಥೋ ನೈವ ಕೃಷ್ಣೋ ಜನಾರ್ದನಃ|

07026019c ನ ಹಯಾ ನ ರಥೋ ರಾಜನ್ದೃಶ್ಯಂತೇ ಸ್ಮ ಶರೈಶ್ಚಿತಾಃ||

ರಾಜನ್! ಆ ಶರಗಳಿಂದ ಮುಚ್ಚಿಹೋಗಲು ಕುಂತೀಸುತ ಪಾರ್ಥನಾಗಲೀ ಕೃಷ್ಣ ಜನಾರ್ದನನಾಗಲೀ, ರಥವಾಗಲೀ ಕುದುರೆಗಳಾಗಲೀ ಕಾಣಲಿಲ್ಲ.

07026020a ಯದಾ ಮೋಹಮನುಪ್ರಾಪ್ತಃ ಸಸ್ವೇದಶ್ಚ ಜನಾರ್ದನಃ|

07026020c ತತಸ್ತಾನ್ಪ್ರಾಯಶಃ ಪಾರ್ಥೋ ವಜ್ರಾಸ್ತ್ರೇಣ ನಿಜಘ್ನಿವಾನ್||

ಆಗ ಮೋಹಿತನಾಗಿ ಜನಾರ್ದನನು ಬೆವತುಹೋಗಲು ಪಾರ್ಥನು ವಜ್ರಾಸ್ತ್ರದಿಂದ ಹೆಚ್ಚುಭಾಗ ಅವರನ್ನು ಸಂಹರಿಸಿದನು.

07026021a ಶತಶಃ ಪಾಣಯಶ್ಚಿನ್ನಾಃ ಸೇಷುಜ್ಯಾತಲಕಾರ್ಮುಕಾಃ|

07026021c ಕೇತವೋ ವಾಜಿನಃ ಸೂತಾ ರಥಿನಶ್ಚಾಪತನ್ ಕ್ಷಿತೌ||

ಬಾಣ-ಶಿಂಜಿನಿ-ಧನುಸ್ಸುಗಳನ್ನು ಹಿಡಿದಿದ್ದ ನೂರಾರು ಕೈಗಳು ತುಂಡಾಗಿ, ಧ್ವಜಗಳು, ಕುದುರೆಗಳು, ಸೂತರು ಮತ್ತು ರಥಿಗಳು ಭೂಮಿಯ ಮೇಲೆ ಬಿದ್ದವು.

07026022a ದ್ರುಮಾಚಲಾಗ್ರಾಂಬುಧರೈಃ ಸಮರೂಪಾಃ ಸುಕಲ್ಪಿತಾಃ|

07026022c ಹತಾರೋಹಾಃ ಕ್ಷಿತೌ ಪೇತುರ್ದ್ವಿಪಾಃ ಪಾರ್ಥಶರಾಹತಾಃ||

ವೃಕ್ಷ, ಪರ್ವತ ಮತ್ತು ಮೋಡಗಳಂತಿದ್ದ, ಸುಕಲ್ಪಿತಗೊಂಡಿದ್ದ ಆನೆಗಳು ಪಾರ್ಥನ ಶರಗಳಿಂದ ಹತಗೊಂಡು, ಮಾವುತರನ್ನೂ ಕಳೆದುಕೊಂಡು ಭೂಮಿಯ ಮೇಲೆ ಬಿದ್ದವು.

07026023a ವಿಪ್ರವಿದ್ಧಕುಥಾವಲ್ಗಾಶ್ಚಿನ್ನಭಾಂಡಾಃ ಪರಾಸವಃ|

07026023c ಸಾರೋಹಾಸ್ತುರಗಾಃ ಪೇತುರ್ಮಥಿತಾಃ ಪಾರ್ಥಮಾರ್ಗಣೈಃ||

ಅವುಗಳ ಬೆನ್ನಮೇಲಿದ್ದ ಚಿತ್ರಗಂಬಳಿಗಳೂ ಆಭರಣಗಳೂ ಚೆಲ್ಲಪಿಲ್ಲಿಯಾಗಿ ಬಿದ್ದವು. ಪಾರ್ಥನ ಮಾರ್ಗಣಗಳಿಂದ ಮಥಿತವಾದ ಕುದುರೆಗಳು ಆರೋಹಿಗಳೊಂದಿಗೆ ಉರುಳಿ ಬಿದ್ದವು.

07026024a ಸರ್ಷ್ಟಿಚರ್ಮಾಸಿನಖರಾಃ ಸಮುದ್ಗರಪರಶ್ವಧಾಃ|

07026024c ಸಂಚಿನ್ನಾ ಬಾಹವಃ ಪೇತುರ್ನೃಣಾಂ ಭಲ್ಲೈಃ ಕಿರೀಟಿನಾ||

ಕಿರೀಟಿಯ ಭಲ್ಲಗಳಿಂದ ಋಷ್ಟಿ, ಪ್ರಾಸ, ಖಡ್ಗ, ನಖರ, ಮುದ್ಗರ ಮತ್ತು ಪರಶುಗಳನ್ನು ಹಿಡಿದ ಮನುಷ್ಯರ ಬಾಹುಗಳು ಕತ್ತರಿಸಿ ಬಿದ್ದವು.

07026025a ಬಾಲಾದಿತ್ಯಾಂಬುಜೇಂದೂನಾಂ ತುಲ್ಯರೂಪಾಣಿ ಮಾರಿಷ|

07026025c ಸಂಚಿನ್ನಾನ್ಯರ್ಜುನಶರೈಃ ಶಿರಾಂಸ್ಯುರ್ವೀಂ ಪ್ರಪೇದಿರೇ||

ಮಾರಿಷ! ಬಾಲಾದಿತ್ಯ, ಕಮಲ ಮತ್ತು ಚಂದ್ರರ ರೂಪದಂತಿರುವ ಶಿರಗಳು ಅರ್ಜುನನ ಶರಗಳಿಂದ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದವು.

07026026a ಜಜ್ವಾಲಾಲಂಕೃತೈಃ ಸೇನಾ ಪತ್ರಿಭಿಃ ಪ್ರಾಣಭೋಜನೈಃ|

07026026c ನಾನಾಲಿಂಗೈಸ್ತದಾಮಿತ್ರಾನ್ಕ್ರುದ್ಧೇ ನಿಘ್ನತಿ ಫಲ್ಗುನೇ||

ನಾನಾ ವಿಧದ ಪ್ರಾಣವನ್ನೇ ಭೋಜನವಾಗುಳ್ಳ ಪತ್ರಿಗಳಿಂದ ಕ್ರುದ್ಧನಾದ ಫಲ್ಗುನನು ಅಲಂಕೃತ ಸೇನೆಯನ್ನು ಸುಟ್ಟು ಸಂಹರಿಸಿದನು.

07026027a ಕ್ಷೋಭಯಂತಂ ತದಾ ಸೇನಾಂ ದ್ವಿರದಂ ನಲಿನೀಮಿವ|

07026027c ಧನಂಜಯಂ ಭೂತಗಣಾಃ ಸಾಧು ಸಾಧ್ವಿತ್ಯಪೂಜಯನ್||

ಆನೆಯು ಸರೋವರವನ್ನು ಕ್ಷೋಭೆಗೊಳಿಸುವಂತೆ ಸೇನೆಯನ್ನು ಕ್ಷೋಭೆಗೊಳಿಸಿದ ಧನಂಜಯನನ್ನು ಭೂತಗಣಗಳು “ಸಾಧು! ಸಾಧು!” ಎಂದು ಗೌರವಿಸಿತು.

07026028a ದೃಷ್ಟ್ವಾ ತತ್ಕರ್ಮ ಪಾರ್ಥಸ್ಯ ವಾಸವಸ್ಯೇವ ಮಾಧವಃ|

07026028c ವಿಸ್ಮಯಂ ಪರಮಂ ಗತ್ವಾ ತಲಮಾಹತ್ಯ ಪೂಜಯತ್||

ವಾಸವನ ಪರಾಕ್ರಮದ ಪಾರ್ಥನ ಆ ಕರ್ಮವನ್ನು ನೋಡಿ ಮಾಧವನು ಪರಮ ವಿಸ್ಮಯಗೊಂಡು ಕೈಜೋಡಿಸಿ ಗೌರವಿಸಿದನು.

07026029a ತತಃ ಸಂಶಪ್ತಕಾನ್ ಹತ್ವಾ ಭೂಯಿಷ್ಠಂ ಯೇ ವ್ಯವಸ್ಥಿತಾಃ|

07026029c ಭಗದತ್ತಾಯ ಯಾಹೀತಿ ಪಾರ್ಥಃ ಕೃಷ್ಣಮಚೋದಯತ್||

ಆಗ ಸಂಶಪ್ತಕರನ್ನು ಸಂಹರಿಸಿ ಪುನಃ ವ್ಯವಸ್ಥಿತನಾಗಿ ಪಾರ್ಥನು “ಭಗದತ್ತನ ಬಳಿ ಹೋಗು!” ಎಂದು ಕೃಷ್ಣನನ್ನು ಪ್ರಚೋದಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಸಂಶಪ್ತಕವಧೇ ಷಡ್ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಸಂಶಪ್ತಕವಧ ಎನ್ನುವ ಇಪ್ಪತ್ತಾರನೇ ಅಧ್ಯಾಯವು.

Image result for indian motifs against white background

Comments are closed.