Drona Parva: Chapter 23

ದ್ರೋಣ ಪರ್ವ: ಸಂಶಪ್ತಕವಧ ಪರ್ವ

೨೩

ಧೃತರಾಷ್ಟ್ರನ ಶೋಕ (೧-೧೯).

07023001 ಧೃತರಾಷ್ಟ್ರ ಉವಾಚ|

07023001a ವ್ಯಥಯೇಯುರಿಮೇ ಸೇನಾಂ ದೇವಾನಾಮಪಿ ಸಂಯುಗೇ|

07023001c ಆಹವೇ ಯೇ ನ್ಯವರ್ತಂತ ವೃಕೋದರಮುಖಾ ರಥಾಃ||

ಧೃತರಾಷ್ಟ್ರನು ಹೇಳಿದನು: “ವೃಕೋದರನ ನಾಯಕತ್ವದಲ್ಲಿ ರಣರಂಗಕ್ಕೆ ಹಿಂದಿರುಗಿದ ಈ ಮಹಾರಥರು ಯುದ್ಧದಲ್ಲಿ ದೇವತೆಗಳ ಸೇನೆಯನ್ನೂ ಕೂಡ ವ್ಯಥೆಗೊಳಿಸಬಲ್ಲರು.

07023002a ಸಂಪ್ರಯುಕ್ತಃ ಕಿಲೈವಾಯಂ ದಿಷ್ಟೈರ್ಭವತಿ ಪೂರುಷಃ|

07023002c ತಸ್ಮಿನ್ನೇವ ತು ಸರ್ವಾರ್ಥಾ ದೃಶ್ಯಂತೇ ವೈ ಪೃಥಗ್ವಿಧಾಃ||

ಪುರುಷನು ಅದೃಷ್ಟದಿಂದಲೇ ವರ್ತಿಸುತ್ತಾನೆ. ನಾನಾವಿಧವಾದ ಸರ್ವಾರ್ಥಗಳೂ ಅದರಿಂದಲೇ ದೊರೆಯುತ್ತವೆಯೆಂದು ಕಾಣುತ್ತದೆ.

07023003a ದೀರ್ಘಂ ವಿಪ್ರೋಷಿತಃ ಕಾಲಮರಣ್ಯೇ ಜಟಿಲೋಽಜಿನೀ|

07023003c ಅಜ್ಞಾತಶ್ಚೈವ ಲೋಕಸ್ಯ ವಿಜಹಾರ ಯುಧಿಷ್ಠಿರಃ||

ಯುಧಿಷ್ಠಿರನು ಜಟೆ-ಮೃಗಚರ್ಮಗಳನ್ನು ಧರಿಸಿ ಅರಣ್ಯದಲ್ಲಿ ದೀರ್ಘಕಾಲ ಕಳೆದನು ಮತ್ತು ಲೋಕದಲ್ಲಿ ಅಜ್ಞಾತವಾಸವನ್ನೂ ನಡೆಸಿದನು.

07023004a ಸ ಏವ ಮಹತೀಂ ಸೇನಾಂ ಸಮಾವರ್ತಯದಾಹವೇ|

07023004c ಕಿಮನ್ಯದ್ದೈವಸಮ್ಯೋಗಾನ್ಮಮ ಪುತ್ರಸ್ಯ ಚಾಭವತ್||

ಅವನೇ ಇಂದು ಯುದ್ಧದ ಸಲುವಾಗಿ ಬೃಹತ್ತಾದ ಸೈನ್ಯವನ್ನು ಸಂಗ್ರಹಿಸಿದ್ದಾನೆ. ಇವೆಲ್ಲವು ನನ್ನ ಮಗನ ದೈವಸಂಯೋಗವಲ್ಲದೇ ಇನ್ನೇನು?

07023005a ಯುಕ್ತ ಏವ ಹಿ ಭಾಗ್ಯೇನ ಧ್ರುವಮುತ್ಪದ್ಯತೇ ನರ|

07023005c ಸ ತಥಾಕೃಷ್ಯತೇ ತೇನ ನ ಯಥಾ ಸ್ವಯಮಿಚ್ಚತಿ||

ಮನುಷ್ಯನು ತನ್ನ ಭಾಗ್ಯದೊಂದಿಗೇ ಹುಟ್ಟುತ್ತಾನೆ ಎನ್ನುವುದು ನಿಶ್ಚಿತ. ಆದರೆ ಅದು ನಾವು ಇಚ್ಛಿಸಿದಂತೆ ನಮ್ಮನ್ನು ಎಳೆದುಕೊಂಡು ಹೋಗುವುದಿಲ್ಲ.

07023006a ದ್ಯೂತವ್ಯಸನಮಾಸಾದ್ಯ ಕ್ಲೇಶಿತೋ ಹಿ ಯುಧಿಷ್ಠಿರಃ|

07023006c ಸ ಪುನರ್ಭಾಗಧೇಯೇನ ಸಹಾಯಾನುಪಲಬ್ಧವಾನ್||

ಏಕೆಂದರೆ ದ್ಯೂತದ ವ್ಯಸನಕ್ಕೆ ಸಿಲುಕಿ ಯುಧಿಷ್ಠಿರನು ಕಷ್ಟಗಳನ್ನು ಅನುಭವಿಸಿದನು. ಅವನೇ ಇಂದು ಭಾಗ್ಯದಿಂದಾಗಿ ಪುನಃ ಸಹಾಯಗಳನ್ನು ಪಡೆದಿದ್ದಾನೆ.

07023007a ಅರ್ಧಂ ಮೇ ಕೇಕಯಾ ಲಬ್ಧಾಃ ಕಾಶಿಕಾಃ ಕೋಸಲಾಶ್ಚ ಯೇ|

07023007c ಚೇದಯಶ್ಚಾಪರೇ ವಂಗಾ ಮಾಮೇವ ಸಮುಪಾಶ್ರಿತಾಃ||

07023008a ಪೃಥಿವೀ ಭೂಯಸೀ ತಾತ ಮಮ ಪಾರ್ಥಸ್ಯ ನೋ ತಥಾ|

07023008c ಇತಿ ಮಾಮಬ್ರವಿತ್ಸೂತ ಮಂದೋ ದುರ್ಯೋಧನಸ್ತದಾ||

ಸೂತ! “ಇಂದು ಕೇಕಯರು ನಮಗೆ ದೊರಕಿದರು. ಕಾಶಿಕರು ಕೋಸಲರು ಕೂಡ. ಚೇದಿಯವರು ಮತ್ತು ಇತರರು ವಂಗರು ನನ್ನನ್ನೇ ಆಶ್ರಯಿಸಿದ್ದಾರೆ. ಅಪ್ಪಾ! ಪಾರ್ಥನದ್ದು ಹೇಗೆ ಆಗಿತ್ತೋ ಹಾಗೆ ಇಡೀ ಭೂಮಿಯೇ ನನ್ನದಾಗಿದೆ!” ಎಂದು ಮೂರ್ಖ ದುರ್ಯೋಧನನು ಆಗ ನನಗೆ ಹೇಳುತ್ತಿದ್ದನು.

07023009a ತಸ್ಯ ಸೇನಾಸಮೂಹಸ್ಯ ಮಧ್ಯೇ ದ್ರೋಣಃ ಸುರಕ್ಷಿತಃ|

07023009c ನಿಹತಃ ಪಾರ್ಷತೇನಾಜೌ ಕಿಮನ್ಯದ್ಭಾಗಧೇಯತಃ||

ಅವನ ಸೇನಾ ಸಮೂಹಗಳ ಮಧ್ಯೆ ಸುರಕ್ಷಿತನಾದ ದ್ರೋಣನು ಇಂದು ಪಾರ್ಷತನಿಂದ ಹತನಾದನೆಂದರೆ ಇದು ಭಾಗ್ಯವಲ್ಲದೇ ಇನ್ನೇನು?

07023010a ಮಧ್ಯೇ ರಾಜ್ಞಾಂ ಮಹಾಬಾಹುಂ ಸದಾ ಯುದ್ಧಾಭಿನಂದಿನಂ|

07023010c ಸರ್ವಾಸ್ತ್ರಪಾರಗಂ ದ್ರೋಣಂ ಕಥಂ ಮೃತ್ಯುರುಪೇಯಿವಾನ್||

ರಾಜರ ಮಧ್ಯದಲ್ಲಿದ್ದ, ಮಹಾಬಾಹು, ಸದಾ ಯುದ್ಧಶ್ಲಾಘಿಯಾಗಿದ್ದ ಸರ್ವಾಸ್ತ್ರಪಾರಗ ದ್ರೋಣನು ಹೇಗೆ ಮೃತ್ಯುವಶನಾದನು?

07023011a ಸಮನುಪ್ರಾಪ್ತಕೃಚ್ಚ್ರೋಽಹಂ ಸಮ್ಮೋಹಂ ಪರಮಂ ಗತಃ|

07023011c ಭೀಷ್ಮದ್ರೋಣೌ ಹತೌ ಶ್ರುತ್ವಾ ನಾಹಂ ಜೀವಿತುಮುತ್ಸಹೇ||

ಈ ಕಷ್ಟಗಳನ್ನು ಪಡೆದ ನಾನು ಪರಮ ಸಂಹೋಹಗೊಂಡಿದ್ದೇನೆ. ಭೀಷ್ಮ-ದ್ರೋಣರಿಬ್ಬರೂ ಹತರಾದರೆಂದು ಕೇಳಿ ನಾನು ಜೀವಿಸಲು ಉತ್ಸಾಹಪಡುತ್ತಿಲ್ಲ.

07023012a ಯನ್ಮಾ ಕ್ಷತ್ತಾಬ್ರವೀತ್ತಾತ ಪ್ರಪಶ್ಯನ್ಪುತ್ರಗೃದ್ಧಿನಂ|

07023012c ದುರ್ಯೋಧನೇನ ತತ್ಸರ್ವಂ ಪ್ರಾಪ್ತಂ ಸೂತ ಮಯಾ ಸಹ||

ಸೂತ! ಅಂದು ಪುತ್ರವ್ಯಾಮೊಹಿತನಾಗಿದ್ದ ನನಗೆ ಕ್ಷತ್ತನು ಏನೆಲ್ಲ ಕಂಡು ಹೇಳಿದ್ದನೋ ಅವೆಲ್ಲವೂ ಇಂದು ದುರ್ಯೋಧನ ಮತ್ತು ನನಗೆ ಒಟ್ಟಿಗೇ ಪ್ರಾಪ್ತವಾಗಿವೆ.

07023013a ನೃಶಂಸಂ ತು ಪರಂ ತತ್ಸ್ಯಾತ್ತ್ಯಕ್ತ್ವಾ ದುರ್ಯೋಧನಂ ಯದಿ|

07023013c ಪುತ್ರಶೇಷಂ ಚಿಕೀರ್ಷೇಯಂ ಕೃಚ್ಚ್ರಂ ನ ಮರಣಂ ಭವೇತ್||

ಒಂದುವೇಳೆ ನಾನು ದುರ್ಯೋಧನನನ್ನು ತ್ಯಜಿಸಿ ಉಳಿದ ಮಕ್ಕಳನ್ನು ಬಯಸಿದ್ದರೆ ಅದು ಕ್ರೂರವಾದದ್ದೇನೋ ಆಗುತ್ತಿದ್ದು. ಆದರೆ ಉಳಿದರವರೆಲ್ಲರ ಮರಣವು ಆಗುತ್ತಿರಲಿಲ್ಲ.

07023014a ಯೋ ಹಿ ಧರ್ಮಂ ಪರಿತ್ಯಜ್ಯ ಭವತ್ಯರ್ಥಪರೋ ನರಃ|

07023014c ಸೋಽಸ್ಮಾಚ್ಚ ಹೀಯತೇ ಲೋಕಾತ್ ಕ್ಷುದ್ರಭಾವಂ ಚ ಗಚ್ಚತಿ||

ಯಾರು ಧರ್ಮವನ್ನು ಪರಿತ್ಯಜಿಸಿ ಕೇವಲ ಅರ್ಥಪರನಾಗುತ್ತಾನೋ ಅಂತಹ ನರನು ಈ ಲೋಕದಿಂದ ಭ್ರಷ್ಟನಾಗಿ ಕ್ಷುದ್ರಭಾವಕ್ಕೆ ಹೋಗುತ್ತಾನೆ.

07023015a ಅದ್ಯ ಚಾಪ್ಯಸ್ಯ ರಾಷ್ಟ್ರಸ್ಯ ಹತೋತ್ಸಾಹಸ್ಯ ಸಂಜಯ|

07023015c ಅವಶೇಷಂ ನ ಪಶ್ಯಾಮಿ ಕಕುದೇ ಮೃದಿತೇ ಸತಿ||

ಸಂಜಯ! ಇಂದು ಉತ್ಸಾಹವನ್ನು ಕಳೆದುಕೊಂಡ ರಾಷ್ಟ್ರದಲ್ಲಿ ಉಳಿಯುವವರನ್ನು ನಾನು ಕಾಣೆನು. ಎಲ್ಲರೂ ಸಾಯುತ್ತಾರೆ.

07023016a ಕಥಂ ಸ್ಯಾದವಶೇಷಂ ಹಿ ಧುರ್ಯಯೋರಭ್ಯತೀತಯೋಃ|

07023016c ಯೌ ನಿತ್ಯಮನುಜೀವಾಮಃ ಕ್ಷಮಿಣೌ ಪುರುಷರ್ಷಭೌ||

ಯಾವ ಇಬ್ಬರು ಕ್ಷಮಾವಂತ ಧುರಂಧರ ಪುರುಷರ್ಷಭರನ್ನು ಅವಲಂಬಿಸಿ ಜೀವಿಸಿಕೊಂಡಿದ್ದೆವೋ ಅವರೇ ಅತೀತರಾದ ಮೇಲೆ ಉಳಿಯುವುದಾದರೂ ಹೇಗೆ?

07023017a ವ್ಯಕ್ತಮೇವ ಚ ಮೇ ಶಂಸ ಯಥಾ ಯುದ್ಧಮವರ್ತತ|

07023017c ಕೇಽಯುಧ್ಯನ್ಕೇ ವ್ಯಪಾಕರ್ಷನ್ಕೇ ಕ್ಷುದ್ರಾಃ ಪ್ರಾದ್ರವನ್ಭಯಾತ್||

ಆದರೂ ಯುದ್ಧವು ಹೇಗೆ ನಡೆಯಿತು? ಯಾರ್ಯಾರು ಯುದ್ಧಮಾಡಿದರು? ಯಾರು ಯಾರನ್ನು ಸೋಲಿಸಿದರು? ಯಾರು ಭಯದಿಂದ ಓಡಿಹೋದರು? ಇವೆಲ್ಲವನ್ನೂ ನಡೆದಂತೆ ನನಗೆ ಹೇಳು.

07023018a ಧನಂಜಯಂ ಚ ಮೇ ಶಂಸ ಯದ್ಯಚ್ಚಕ್ರೇ ರಥರ್ಷಭಃ|

07023018c ತಸ್ಮಾದ್ಭಯಂ ನೋ ಭೂಯಿಷ್ಠಂ ಭ್ರಾತೃವ್ಯಾಚ್ಚ ವಿಶೇಷತಃ||

ಧನಂಜಯನ ಕುರಿತು ನನಗೆ ಹೇಳು. ಆ ರಥರ್ಷಭನು ಏನನ್ನು ನಡೆಸಿದನು? ನನಗೆ ಅವನಿಂದ ಮತ್ತು ಅವನ ಅಣ್ಣ ಭೀಮನಿಂದ ವಿಶೇಷವಾಗಿ ತುಂಬಾ ಭಯವಿದೆ.

07023019a ಯಥಾಸೀಚ್ಚ ನಿವೃತ್ತೇಷು ಪಾಂಡವೇಷು ಚ ಸಂಜಯ|

07023019c ಮಮ ಸೈನ್ಯಾವಶೇಷಸ್ಯ ಸನ್ನಿಪಾತಃ ಸುದಾರುಣಃ|

07023019e ಮಾಮಕಾನಾಂ ಚ ಯೇ ಶೂರಾಃ ಕಾಂಸ್ತತ್ರ ಸಮವಾರಯನ್||

ಸಂಜಯ! ಪಾಂಡವರು ಹಿಂದಿರುಗಿದ ನಂತರ ನನ್ನ ಸೇನೆಯಲ್ಲಿ ಉಳಿದವರೊಡನೆ ದಾರುಣ ಯದ್ಧವು ಹೇಗೆ ನಡೆಯಿತು? ನನ್ನವರ ಯಾವ ಶೂರರು ಅಲ್ಲಿ ಯಾರನ್ನು ಎದುರಿಸಿ ಯುದ್ಧಮಾಡಿದರು?”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಧೃತರಾಷ್ಟ್ರವಾಕ್ಯೇ ತ್ರಯೋವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.

Image result for indian motifs against white background

Comments are closed.