Drona Parva: Chapter 157

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೭

ಧೃತರಾಷ್ಟ್ರ-ಸಂಜಯರ ಸಂವಾದ (೧-೪೪).

07157001 ಧೃತರಾಷ್ಟ್ರ ಉವಾಚ|

07157001a ಏಕವೀರವಧೇ ಮೋಘಾ ಶಕ್ತಿಃ ಸೂತಾತ್ಮಜೇ ಯದಾ|

07157001c ಕಸ್ಮಾತ್ಸರ್ವಾನ್ಸಮುತ್ಸೃಜ್ಯ ಸ ತಾಂ ಪಾರ್ಥೇ ನ ಮುಕ್ತವಾನ್||

ಧೃತರಾಷ್ಟ್ರನು ಹೇಳಿದನು: “ಆ ಶಕ್ತಿಯು ಒಬ್ಬನೇ ವೀರನನ್ನು ವಧಿಸಿ ನಿರಸನವಾಗುತ್ತದೆ ಎಂದು ತಿಳಿದಿದ್ದರೂ ಸೂತಾತ್ಮಜನು ಏಕೆ ಎಲ್ಲರನ್ನೂ ಬಿಟ್ಟು ಪಾರ್ಥನ ಮೇಲೆ ಅದನ್ನು ಪ್ರಯೋಗಿಸಲಿಲ್ಲ?

07157002a ತಸ್ಮಿನ್ ಹತೇ ಹತಾ ಹಿ ಸ್ಯುಃ ಸರ್ವೇ ಪಾಂಡವಸೃಂಜಯಾಃ|

07157002c ಏಕವೀರವಧೇ ಕಸ್ಮಾನ್ನ ಯುದ್ಧೇ ಜಯಮಾದಧತ್||

ಅದರಿಂದ ಅವನು ಹತನಾಗಿದ್ದರೆ ಪಾಂಡವ-ಸೃಂಜಯರೆಲ್ಲರೂ ಹತರಾಗುತ್ತಿದ್ದರು. ಅವನೊಬ್ಬನೇ ವೀರನನ್ನು ಸಂಹರಿಸಿ ಯುದ್ಧದಲ್ಲಿ ಜಯವನ್ನು ಏಕೆ ಪಡೆಯಲಿಲ್ಲ?

07157003a ಆಹೂತೋ ನ ನಿವರ್ತೇಯಮಿತಿ ತಸ್ಯ ಮಹಾವ್ರತಂ|

07157003c ಸ್ವಯಮಾಹ್ವಯಿತವ್ಯಃ ಸ ಸೂತಪುತ್ರೇಣ ಫಲ್ಗುನಃ||

ಆಹ್ವಾನಿಸಿದರೆ ಹಿಂದಿರುಗುವುದಿಲ್ಲ ಎನ್ನುವುದು ಅರ್ಜುನನ ಮಹಾವ್ರತವಾಗಿರುವಾಗ, ಸೂತಪುತ್ರನು ಸ್ವಯಂ ಫಲ್ಗುನನನ್ನು ಯುದ್ಧಕ್ಕೆ ಆಹ್ವಾನಿಸಬಹುದಾಗಿತ್ತು!

07157004a ತತೋ ದ್ವೈರಥಮಾನೀಯ ಫಲ್ಗುನಂ ಶಕ್ರದತ್ತಯಾ|

07157004c ನ ಜಘಾನ ವೃಷಾ ಕಸ್ಮಾತ್ತನ್ಮಮಾಚಕ್ಷ್ವ ಸಂಜಯ||

ಹಾಗಿರುವಾಗ ದ್ವೈರಥಯುದ್ಧಕ್ಕೆ ಕರೆದು ವೃಷ ಕರ್ಣನು ಫಲ್ಗುನನನ್ನು ಶಕ್ರನು ನೀಡಿದ ಶಕ್ತಿಯಿಂದ ಏಕೆ ಕೊಲ್ಲಲಿಲ್ಲ ಎನ್ನುವುದನ್ನು ನನಗೆ ಹೇಳು ಸಂಜಯ!

07157005a ನೂನಂ ಬುದ್ಧಿವಿಹೀನಶ್ಚಾಪ್ಯಸಹಾಯಶ್ಚ ಮೇ ಸುತಃ|

07157005c ಶತ್ರುಭಿರ್ವ್ಯಂಸಿತೋಪಾಯಃ ಕಥಂ ನು ಸ ಜಯೇದರೀನ್||

ನನ್ನ ಮಗನು ಬುದ್ಧಿವಿಹೀನನೂ ಅಸಹಾಯಕನೂ ಅಲ್ಲವೇ? ಶತ್ರುಗಳಿಂದ ಅವನು ಸಂಪೂರ್ಣವಾಗಿ ವಂಚಿತನಾಗಿಬಿಟ್ಟನು. ಅವನು ಹೇಗೆ ತಾನೇ ಶತ್ರುಗಳನ್ನು ಜಯಿಸಿಯಾನು?

07157006a ಯಾ ಹ್ಯಸ್ಯ ಪರಮಾ ಶಕ್ತಿರ್ಜಯಸ್ಯ ಚ ಪರಾಯಣಂ|

07157006c ಸಾ ಶಕ್ತಿರ್ವಾಸುದೇವೇನ ವ್ಯಂಸಿತಾಸ್ಯ ಘಟೋತ್ಕಚೇ||

ಯಾವ ಪರಮ ಶಕ್ತಿಯು ಅವನ ವಿಜಯಕ್ಕೆ ಆಶ್ರಯಪ್ರಾಯವಾಗಿತ್ತೋ ಆ ಶಕ್ತಿಯನ್ನು ವಾಸುದೇವನೇ ಉಪಾಯದಿಂದ ಘಟೋತ್ಕಚನ ಮೇಲೆ ಪ್ರಯೋಗಿಸುವಂತೆ ಮಾಡಿದನು.

07157007a ಕುಣೇರ್ಯಥಾ ಹಸ್ತಗತಂ ಹ್ರಿಯೇದ್ಬಿಲ್ವಂ ಬಲೀಯಸಾ|

07157007c ತಥಾ ಶಕ್ತಿರಮೋಘಾ ಸಾ ಮೋಘೀಭೂತಾ ಘಟೋತ್ಕಚೇ||

ಹಸ್ತಸ್ವಾಧೀನವಿಲ್ಲದಿರುವವನ ಕೈಯಿಂದ ಹಣ್ಣನ್ನು ಬಲಶಾಲಿಯು ಕಸಿದುಕೊಳ್ಳುವಂತೆ ಆ ಅಮೋಘ ಶಕ್ತಿಯು ಘಟೋತ್ಕಚನ ಮೇಲೆ ಪ್ರಯೋಗಿಸಲ್ಪಟ್ಟು ವ್ಯರ್ಥವಾಗಿ ಹೋಯಿತು!

07157008a ಯಥಾ ವರಾಹಸ್ಯ ಶುನಶ್ಚ ಯುಧ್ಯತೋಸ್

         ತಯೋರಭಾವೇ ಶ್ವಪಚಸ್ಯ ಲಾಭಃ|

07157008c ಮನ್ಯೇ ವಿದ್ವನ್ವಾಸುದೇವಸ್ಯ ತದ್ವದ್

         ಯುದ್ಧೇ ಲಾಭಃ ಕರ್ಣಹೈಡಿಂಬಯೋರ್ವೈ||

ವಿದ್ವನ್! ಹಂದಿ ಮತ್ತು ನಾಯಿಗಳ ಯುದ್ಧದಲ್ಲಿ ಎರಡರಲ್ಲಿ ಯಾವುದೊಂದು ಸತ್ತುಹೋದರೂ ಅಥವಾ ಎರಡು ಸತ್ತು ಹೋದರೂ ಅದರ ಲಾಭವು ಶ್ವಪಚನಿಗೇ ಆಗುವಂತೆ ಕರ್ಣ-ಹೈಡಿಂಬಿಯರ ಯುದ್ಧದ ಲಾಭವು ಕೇವಲ ವಾಸುದೇವನಿಗಾಯಿತು!

07157009a ಘಟೋತ್ಕಚೋ ಯದಿ ಹನ್ಯಾದ್ಧಿ ಕರ್ಣಂ

         ಪರೋ ಲಾಭಃ ಸ ಭವೇತ್ಪಾಂಡವಾನಾಂ|

07157009c ವೈಕರ್ತನೋ ವಾ ಯದಿ ತಂ ನಿಹನ್ಯಾತ್

         ತಥಾಪಿ ಕೃತ್ಯಂ ಶಕ್ತಿನಾಶಾತ್ಕೃತಂ ಸ್ಯಾತ್||

ಒಂದುವೇಳೆ ಘಟೋತ್ಕಚನೇ ಕರ್ಣನನ್ನು ಸಂಹರಿಸಿದ್ದರೆ ಪಾಂಡವರಿಗೆ ಪರಮ ಲಾಭವಾಗುತ್ತಿತ್ತು. ಅಥವಾ ವೈಕರ್ತನನೇ ಒಂದು ವೇಳೆ ಅವನನ್ನು ಸಂಹರಿಸಿದ್ದರೆ ಆಗ ಕೂಡ ಆ ಶಕ್ತಿಯು ನಾಶವಾದುದರಿಂದ ಅವರಿಗೆ ಲಾಭವಾಗುತ್ತಿತ್ತು.

07157010a ಇತಿ ಪ್ರಾಜ್ಞಃ ಪ್ರಜ್ಞಯೈತದ್ವಿಚಾರ್ಯ

         ಘಟೋತ್ಕಚಂ ಸೂತಪುತ್ರೇಣ ಯುದ್ಧೇ|

07157010c ಅಯೋಧಯದ್ವಾಸುದೇವೋ ನೃಸಿಂಹಃ

         ಪ್ರಿಯಂ ಕುರ್ವನ್ಪಾಂಡವಾನಾಂ ಹಿತಂ ಚ||

ಇದನ್ನು ತಿಳಿದೇ ಪ್ರಾಜ್ಞ ಮನುಷ್ಯಶ್ರೇಷ್ಠ ವಾಸುದೇವನು, ಪಾಂಡವರಿಗೆ ಪ್ರಿಯವಾದುದನ್ನೂ ಹಿತವಾದುದನ್ನೂ ಮಾಡಲು, ರಣದಲ್ಲಿ ಘಟೋತ್ಕಚ-ಸೂತಪುತ್ರರ ಯುದ್ಧವನ್ನು ನಿಯೋಜಿಸಿದನು!”

07157011 ಸಂಜಯ ಉವಾಚ|

07157011a ಏತಚ್ಚಿಕೀರ್ಷಿತಂ ಜ್ಞಾತ್ವಾ ಕರ್ಣೇ ಮಧುನಿಹಾ ನೃಪ|

07157011c ನಿಯೋಜಯಾಮಾಸ ತದಾ ದ್ವೈರಥೇ ರಾಕ್ಷಸೇಶ್ವರಂ||

07157012a ಘಟೋತ್ಕಚಂ ಮಹಾವೀರ್ಯಂ ಮಹಾಬುದ್ಧಿರ್ಜನಾರ್ದನಃ|

07157012c ಅಮೋಘಾಯಾ ವಿಘಾತಾರ್ಥಂ ರಾಜನ್ದುರ್ಮಂತ್ರಿತೇ ತವ||

ಸಂಜಯನು ಹೇಳಿದನು: “ನೃಪ! ಇದನ್ನು ತಿಳಿದೇ, ಆ ಅಮೋಘ ಶಕ್ತಿಯನ್ನು ಹಾಗೆ ನಿರಸನಗೊಳಿಸಬೇಕೆಂದೇ ಮಧುನಿಹ ಮಹಾಬುದ್ಧಿ ಜನಾರ್ದನನು ಮಹಾವೀರ್ಯ ರಾಕ್ಷಸೇಶ್ವರ ಘಟೋತ್ಕಚ ಮತ್ತು ಕರ್ಣರ ನಡುವೆ ದ್ವೈರಥವನ್ನು ನಿಯೋಜಿಸಿದನು. ರಾಜನ್! ಇದು ನಿನ್ನ ದುರಾಲೋಚನೆಯ ಫಲ!

07157013a ತದೈವ ಕೃತಕಾರ್ಯಾ ಹಿ ವಯಂ ಸ್ಯಾಮ ಕುರೂದ್ವಹ|

07157013c ನ ರಕ್ಷೇದ್ಯದಿ ಕೃಷ್ಣಸ್ತಂ ಪಾರ್ಥಂ ಕರ್ಣಾನ್ಮಹಾರಥಾತ್||

ಕುರೂದ್ವಹ! ಮಹಾರಥ ಕರ್ಣನಿಂದ ಕೃಷ್ಣನು ಪಾರ್ಥನನ್ನು ರಕ್ಷಿಸದೇ ಇದ್ದಿದ್ದರೆ ಈಗಾಗಲೇ ನಾವು ಯಶಸ್ವಿಗಳಾಗಿಬಿಡುತ್ತಿದ್ದೆವು!

07157014a ಸಾಶ್ವಧ್ವಜರಥಃ ಸಂಖ್ಯೇ ಧೃತರಾಷ್ಟ್ರ ಪತೇದ್ಭುವಿ|

07157014c ವಿನಾ ಜನಾರ್ದನಂ ಪಾರ್ಥೋ ಯೋಗಾನಾಮೀಶ್ವರಂ ಪ್ರಭುಂ||

ಧೃತರಾಷ್ಟ್ರ! ಯೋಗಗಳ ಈಶ್ವರ ಪ್ರಭು ಜನಾರ್ದನನಿಲ್ಲದಿದ್ದರೆ ಪಾರ್ಥನು ಈಗಾಗಲೇ ಅಶ್ವ-ಧ್ವಜ-ರಥ ಸಮೇತ ರಣಭೂಮಿಯಲ್ಲಿ ಹತನಾಗಿ ಬಿದ್ದುಹೋಗುತ್ತಿದ್ದನು!

07157015a ತೈಸ್ತೈರುಪಾಯೈರ್ಬಹುಭೀ ರಕ್ಷ್ಯಮಾಣಃ ಸ ಪಾರ್ಥಿವ|

07157015c ಜಯತ್ಯಭಿಮುಖಃ ಶತ್ರೂನ್ಪಾರ್ಥಃ ಕೃಷ್ಣೇನ ಪಾಲಿತಃ||

ಪಾರ್ಥಿವ! ಅವನ ಅನೇಕ ಉಪಾಯಗಳಿಂದಲೇ ಅವನು ರಕ್ಷಿಸಲ್ಪಟ್ಟಿದಾನೆ. ಕೃಷ್ಣನಿಂದ ಪಾಲಿತ ಪಾರ್ಥನು ಶತ್ರುಗಳನ್ನು ಎದುರಿಸಿ ಜಯಿಸುತ್ತಿದ್ದಾನೆ.

07157016a ಸವಿಶೇಷಂ ತ್ವಮೋಘಾಯಾಃ ಕೃಷ್ಣೋಽರಕ್ಷತ ಪಾಂಡವಂ|

07157016c ಹನ್ಯಾತ್ ಕ್ಷಿಪ್ತಾ ಹಿ ಕೌಂತೇಯಂ ಶಕ್ತಿರ್ವೃಕ್ಷಮಿವಾಶನಿಃ||

ವಿಶೇಷ ಪ್ರಯತ್ನದಿಂದಲೇ ಕೃಷ್ಣನು ಆ ಅಮೋಘ ಶಕ್ತಿಯಿಂದ ಪಾಂಡವನನ್ನು ರಕ್ಷಿಸಿದನು. ಇಲ್ಲದಿದ್ದರೆ ಆ ಶಕ್ತಿಯು ಸಿಡಿಲು ಮರವನ್ನು ಧ್ವಂಸಮಾಡುವಂತೆ ಕೌಂತೇಯನನ್ನು ಸಂಹರಿಸುತ್ತಿತ್ತು.”

07157017 ಧೃತರಾಷ್ಟ್ರ ಉವಾಚ|

07157017a ವಿರೋಧೀ ಚ ಕುಮಂತ್ರೀ ಚ ಪ್ರಾಜ್ಞಮಾನೀ ಮಮಾತ್ಮಜಃ|

07157017c ಯಸ್ಯೈಷ ಸಮತಿಕ್ರಾಂತೋ ವಧೋಪಾಯೋ ಜಯಂ ಪ್ರತಿ||

ಧೃತರಾಷ್ಟ್ರನು ಹೇಳಿದನು: “ಪಾಂಡವರಿಗೆ ಅತ್ಯಂತ ವಿರೋಧಿಯಾಗಿದ್ದ ನನ್ನ ಮಗನು ಕುಮಂತ್ರಿಯು ಮತ್ತು ತನಗೆ ಎಲ್ಲ ತಿಳಿದಿದೆ ಎಂಬ ದುರಭಿಮಾನಿಯು. ಆದರೂ ಕೂಡ ವಿಜಯದ ವಿಷಯವಾಗಿ ಅರ್ಜುನನ ವಧೋಪಾಯವು ಅವನಿಗೆ ದೊರಕದಂತಾಯಿತೇ?

07157018a ತವಾಪಿ ಸಮತಿಕ್ರಾಂತಂ ಏತದ್ಗಾವಲ್ಗಣೇ ಕಥಂ|

07157018c ಏತಮರ್ಥಂ ಮಹಾಬುದ್ಧೇ ಯತ್ತ್ವಯಾ ನಾವಬೋಧಿತಃ||

ಗಾವಲ್ಗಣೇ! ನಿನಗೂ ಕೂಡ ಇದು ಹೇಗೆ ಹೊಳೆಯದೇ ಹೋಯಿತು? ಮಹಾಬುದ್ಧೇ! ಇದು ನಿನಗೆ ಕೂಡ ಹೇಗೆ ತಿಳಿಯದೇ ಹೋಯಿತು?”

07157019 ಸಂಜಯ ಉವಾಚ|

07157019a ದುರ್ಯೋಧನಸ್ಯ ಶಕುನೇರ್ಮಮ ದುಃಶಾಸನಸ್ಯ ಚ|

07157019c ರಾತ್ರೌ ರಾತ್ರೌ ಭವತ್ಯೇಷಾ ನಿತ್ಯಮೇವ ಸಮರ್ಥನಾ||

ಸಂಜಯನು ಹೇಳಿದನು: “ರಾತ್ರಿ ರಾತ್ರಿಯೂ ನಿತ್ಯವೂ ಇದನ್ನೇ ಸಮರ್ಥಿಸುವುದು ನನ್ನ, ದುರ್ಯೋಧನ, ಶಕುನಿ ಮತ್ತು ದುಃಶಾಸನರ ಕೆಲಸವಾಗಿತ್ತು.

07157020a ಶ್ವಃ ಸರ್ವಸೈನ್ಯಾನುತ್ಸೃಜ್ಯ ಜಹಿ ಕರ್ಣ ಧನಂಜಯಂ|

07157020c ಪ್ರೇಷ್ಯವತ್ಪಾಂಡುಪಾಂಚಾಲಾನುಪಭೋಕ್ಷ್ಯಾಮಹೇ ತತಃ||

“ಕರ್ಣ! ನಾಳೆ ಎಲ್ಲ ಸೈನಿಕರನ್ನೂ ಬಿಟ್ಟು ಧನಂಜಯನನ್ನು ಸಂಹರಿಸು! ಅನಂತರ ನಾವು ಪಾಂಡು-ಪಾಂಚಾಲರನ್ನು ಸೇವಕರಂತೆ ಉಪಭೋಗಿಸುತ್ತೇವೆ!

07157021a ಅಥ ವಾ ನಿಹತೇ ಪಾರ್ಥೇ ಪಾಂಡುಷ್ವನ್ಯತಮಂ ತತಃ|

07157021c ಸ್ಥಾಪಯೇದ್ಯುಧಿ ವಾರ್ಷ್ಣೇಯಸ್ತಸ್ಮಾತ್ಕೃಷ್ಣೋ ನಿಪಾತ್ಯತಾಂ||

ಅಥವಾ ಪಾರ್ಥನು ಹತನಾದರೂ ಕೃಷ್ಣ ವಾರ್ಷ್ಣೇಯನು ಪಾಂಡವರಲ್ಲಿ ಮತ್ತೊಬ್ಬನನ್ನು ಇಟ್ಟುಕೊಂಡು ಯುದ್ಧವನ್ನು ಮುಂದುವರಿಸುತ್ತಾನೆಂದಾದರೆ ಕೃಷ್ಣನನ್ನೇ ಸಂಹರಿಸು!

07157022a ಕೃಷ್ಣೋ ಹಿ ಮೂಲಂ ಪಾಂಡೂನಾಂ ಪಾರ್ಥಃ ಸ್ಕಂಧ ಇವೋದ್ಗತಃ|

07157022c ಶಾಖಾ ಇವೇತರೇ ಪಾರ್ಥಾಃ ಪಾಂಚಾಲಾಃ ಪತ್ರಸಂಜ್ಞಿತಾಃ||

ಕೃಷ್ಣನೇ ಪಾಂಡವರ ಮೂಲ. ಪಾರ್ಥನು ಕಾಂಡ. ಇತರ ಪಾರ್ಥರು ರೆಂಬೆಗಳು. ಪಾಂಚಾಲರು ಎಲೆಗಳ ರೂಪದಲ್ಲಿದ್ದಾರೆ.

07157023a ಕೃಷ್ಣಾಶ್ರಯಾಃ ಕೃಷ್ಣಬಲಾಃ ಕೃಷ್ಣನಾಥಾಶ್ಚ ಪಾಂಡವಾಃ|

07157023c ಕೃಷ್ಣಃ ಪರಾಯಣಂ ಚೈಷಾಂ ಜ್ಯೋತಿಷಾಮಿವ ಚಂದ್ರಮಾಃ||

ಪಾಂಡವರು ಕೃಷ್ಣನ ಆಶ್ರಯದಲ್ಲಿದ್ದಾರೆ. ಕೃಷ್ಣನನ್ನೇ ಬಲವನ್ನಾಗಿ ಪಡೆದಿದ್ದಾರೆ. ಕೃಷ್ಣನನ್ನು ಸ್ವಾಮಿಯೆಂದೇ ದೃಢವಾಗಿ ನಂಬಿದ್ದಾರೆ. ನಕ್ಷತ್ರಗಳಿಗೆ ಚಂದ್ರಮನು ಹೇಗೋ ಹಾಗೆ ಪಾಂಡವರಿಗೆ ಶ್ರೀಕೃಷ್ಣ.

07157024a ತಸ್ಮಾತ್ಪರ್ಣಾನಿ ಶಾಖಾಶ್ಚ ಸ್ಕಂಧಂ ಚೋತ್ಸೃಜ್ಯ ಸೂತಜ|

07157024c ಕೃಷ್ಣಂ ನಿಕೃಂಧಿ ಪಾಂಡೂನಾಂ ಮೂಲಂ ಸರ್ವತ್ರ ಸರ್ವದಾ||

ಆದುದರಿಂದ ಸೂತಜ! ಎಲೆಗಳು, ರೆಂಬೆಗಳು ಮತ್ತು ಕಾಂಡವನ್ನು ಬಿಟ್ಟು ಇವೆಲ್ಲವಕ್ಕೂ ಬೇರಿನಂತಿರುವ ಕೃಷ್ಣನನ್ನೇ ಕತ್ತರಿಸಿಹಾಕಿಬಿಡು!”

07157025a ಹನ್ಯಾದ್ಯದಿ ಹಿ ದಾಶಾರ್ಹಂ ಕರ್ಣೋ ಯಾದವನಂದನಂ|

07157025c ಕೃತ್ಸ್ನಾ ವಸುಮತೀ ರಾಜನ್ವಶೇ ತೇ ಸ್ಯಾನ್ನ ಸಂಶಯಃ||

ರಾಜನ್! ಒಂದುವೇಳೆ ಕರ್ಣನು ದಾಶಾರ್ಹ ಯಾದವನಂದನನನ್ನು ಸಂಹರಿಸಿದ್ದರೆ ಈ ಇಡೀ ವಸುಮತಿಯು ನಿನ್ನ ವಶವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ.

07157026a ಯದಿ ಹಿ ಸ ನಿಹತಃ ಶಯೀತ ಭೂಮೌ

         ಯದುಕುಲಪಾಂಡವನಂದನೋ ಮಹಾತ್ಮಾ|

07157026c ನನು ತವ ವಸುಧಾ ನರೇಂದ್ರ ಸರ್ವಾ

         ಸಗಿರಿಸಮುದ್ರವನಾ ವಶಂ ವ್ರಜೇತ||

ಯದುಕುಲ-ಪಾಂಡವನಂದನ ಮಹಾತ್ಮ ಕೃಷ್ಣನು ಹತನಾಗಿ ಭೂಮಿಯ ಮೇಲೆ ಮಲಗಿದ್ದರೆ ನರೇಂದ್ರ! ಗಿರಿ-ಸಮುದ್ರ-ವನ ಸಮೇತ ವಸುಧೆಯು ಇಡೀ ನಿನ್ನ ವಶವಾಗುತ್ತಿತ್ತಲ್ಲವೇ?

07157027a ಸಾ ತು ಬುದ್ಧಿಃ ಕೃತಾಪ್ಯೇವಂ ಜಾಗ್ರತಿ ತ್ರಿದಶೇಶ್ವರೇ|

07157027c ಅಪ್ರಮೇಯೇ ಹೃಷೀಕೇಶೇ ಯುದ್ಧಕಾಲೇ ವ್ಯಮುಹ್ಯತ||

ಅವನೂ ಕೂಡ ಹಾಗೆ ಮಾಡುತ್ತೇನೆಂದು ಯೋಚಿಸಿದ್ದರೂ ಬೆಳಗಾಗುತ್ತಲೇ ಯುದ್ಧಕಾಲದಲ್ಲಿ ತ್ರಿದಶೇಶ್ವರ ಅಪ್ರಮೇಯ ಹೃಷೀಕೇಶನು ಅವನನ್ನು ಮೋಹಗೊಳಿಸುತ್ತಿದನು.

07157028a ಅರ್ಜುನಂ ಚಾಪಿ ಕೌಂತೇಯಂ ಸದಾ ರಕ್ಷತಿ ಕೇಶವಃ|

07157028c ನ ಹ್ಯೇನಮೈಚ್ಚತ್ಪ್ರಮುಖೇ ಸೌತೇಃ ಸ್ಥಾಪಯಿತುಂ ರಣೇ||

ಕೇಶವನಾದರೋ ಕೌಂತೇಯ ಅರ್ಜುನನನ್ನು ಸದಾ ರಕ್ಷಿಸುತ್ತಾನೆ. ಆದುದರಿಂದಲೇ ಅವನು ರಣದಲ್ಲಿ ಅರ್ಜುನನನ್ನು ಸೌತಿಯ ಎದಿರು ನಿಲ್ಲಿಸುತ್ತಿರಲಿಲ್ಲ.

07157029a ಅನ್ಯಾಂಶ್ಚಾಸ್ಮೈ ರಥೋದಾರಾನುಪಸ್ಥಾಪಯದಚ್ಯುತಃ|

07157029c ಅಮೋಘಾಂ ತಾಂ ಕಥಂ ಶಕ್ತಿಂ ಮೋಘಾಂ ಕುರ್ಯಾಮಿತಿ ಪ್ರಭೋ||

ಪ್ರಭು ಅಚ್ಯುತನು ಆ ಅಮೋಘ ಶಕ್ತಿಯನ್ನು ನಿರಸನಗೊಳಿಸಬೇಕೆಂದು ಬೇರೆ ಯಾರಾದರೂ ರಥೋದಾರರನ್ನು ಅವನ ಎದುರು ನಿಲ್ಲಿಸುತ್ತಿದ್ದನು.

07157030a ತತಃ ಕೃಷ್ಣಂ ಮಹಾಬಾಹುಃ ಸಾತ್ಯಕಿಃ ಸತ್ಯವಿಕ್ರಮಃ|

07157030c ಪಪ್ರಚ್ಚ ರಥಶಾರ್ದೂಲ ಕರ್ಣಂ ಪ್ರತಿ ಮಹಾರಥಂ||

07157031a ಅಯಂ ಚ ಪ್ರತ್ಯಯಃ ಕರ್ಣೇ ಶಕ್ತ್ಯಾ ಚಾಮಿತವಿಕ್ರಮ|

07157031c ಕಿಮರ್ಥಂ ಸೂತಪುತ್ರೇಣ ನ ಮುಕ್ತಾ ಫಲ್ಗುನೇ ತು ಸಾ||

ಒಮ್ಮೆ ಮಹಾಬಾಹು ಸತ್ಯವಿಕ್ರಮ ಸಾತ್ಯಕಿಯು ಮಹಾರಥ ರಥಶಾರ್ದೂಲ ಕರ್ಣನ ವಿಷಯದಲ್ಲಿ ಕೃಷ್ಣನಲ್ಲಿ ಪ್ರಶ್ನಿಸಿದ್ದನು: “ಈ ಶಕ್ತ್ಯಾಯುಧವು ಇತ್ತಾದರೂ ಅಮಿತವಿಕ್ರಮಿ ಕರ್ಣ ಸೂತಪುತ್ರನು ಏಕೆ ಅದನ್ನು ಫಲ್ಗುನನ ಮೇಲೆ ಪ್ರಯೋಗಿಸಲಿಲ್ಲ?”

07157032 ವಾಸುದೇವ ಉವಾಚ|

07157032a ದುಃಶಾಸನಶ್ಚ ಕರ್ಣಶ್ಚ ಶಕುನಿಶ್ಚ ಸಸೈಂಧವಃ|

07157032c ಸತತಂ ಮಂತ್ರಯಂತಿ ಸ್ಮ ದುರ್ಯೋಧನಪುರೋಗಮಾಃ||

ವಾಸುದೇವನು ಹೇಳಿದನು: “ದುರ್ಯೋಧನನೇ ಮೊದಲಾಗಿ ದುಃಶಾಸನ, ಕರ್ಣ, ಶಕುನಿ, ಮತ್ತು ಸೈಂಧವರು ಸತತವೂ ಮಂತ್ರಾಲೋಚನೆಯನ್ನೇ ಮಾಡುತ್ತಿದ್ದರು:

07157033a ಕರ್ಣ ಕರ್ಣ ಮಹೇಷ್ವಾಸ ರಣೇಽಮಿತಪರಾಕ್ರಮ|

07157033c ನಾನ್ಯಸ್ಯ ಶಕ್ತಿರೇಷಾ ತೇ ಮೋಕ್ತವ್ಯಾ ಜಯತಾಂ ವರ||

07157034a ಋತೇ ಮಹಾರಥಾತ್ಪಾರ್ಥಾತ್ಕುಂತೀಪುತ್ರಾದ್ಧನಂಜಯಾತ್|

“ಕರ್ಣ! ಕರ್ಣ! ಮಹೇಷ್ವಾಸ! ರಣದಲ್ಲಿ ಅಮಿತ ಪರಾಕ್ರಮವುಳ್ಳವನೇ! ವಿಜಯಿಗಳಲ್ಲಿ ಶ್ರೇಷ್ಠನೇ! ಕುಂತೀಪುತ್ರ ಧನಂಜಯ ಮಹಾರಥ ಪಾರ್ಥನ ಹೊರತಾಗಿ ಬೇರೆ ಯಾರಮೇಲೂ ಈ ಶಕ್ತಿಯನ್ನು ಪ್ರಯೋಗಿಸಬೇಡ!

07157034c ಸ ಹಿ ತೇಷಾಮತಿಯಶಾ ದೇವಾನಾಮಿವ ವಾಸವಃ||

07157035a ತಸ್ಮಿನ್ವಿನಿಹತೇ ಸರ್ವೇ ಪಾಂಡವಾಃ ಸೃಂಜಯೈಃ ಸಹ|

07157035c ಭವಿಷ್ಯಂತಿ ಗತಾತ್ಮಾನಃ ಸುರಾ ಇವ ನಿರಗ್ನಯಃ||

ವಾಸವನು ದೇವತೆಗಳಲ್ಲಿ ಹೇಗೋ ಹಾಗೆ ಅವನು ಪಾಂಡವರಲ್ಲಿ ಅತಿ ಯಶೋವಂತನು. ಅವನು ಹತನಾದರೆ ಅಗ್ನಿಯಿಲ್ಲದೇ ಸುರರು ಹೇಗೋ ಹಾಗೆ ಪಾಂಡವರೆಲ್ಲರೂ ಸೃಂಜಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ!”

07157036a ತಥೇತಿ ಚ ಪ್ರತಿಜ್ಞಾತಂ ಕರ್ಣೇನ ಶಿನಿಪುಂಗವ|

07157036c ಹೃದಿ ನಿತ್ಯಂ ತು ಕರ್ಣಸ್ಯ ವಧೋ ಗಾಂಡೀವಧನ್ವನಃ||

ಶಿನಿಪುಂಗವ! ಹಾಗೇಯೇ ಆಗಬೇಕೆಂದು ಒಪ್ಪಿಕೊಂಡ ಕರ್ಣನ ಹೃದಯದಲ್ಲಿ ನಿತ್ಯವೂ ಗಾಂಡೀವಧನ್ವಿಯನ್ನು ವಧಿಸುವ ಸಂಕಲ್ಪವಿರುತ್ತಿತ್ತು.

07157037a ಅಹಮೇವ ತು ರಾಧೇಯಂ ಮೋಹಯಾಮಿ ಯುಧಾಂ ವರ|

07157037c ಯತೋ ನಾವಸೃಜಚ್ಚಕ್ತಿಂ ಪಾಂಡವೇ ಶ್ವೇತವಾಹನೇ||

ಯೋಧರಲ್ಲಿ ಶ್ರೇಷ್ಠನೇ! ಆ ಶಕ್ತಿಯನ್ನು ಪಾಂಡವ ಶ್ವೇತವಾಹನನ ಮೇಲೆ ಪ್ರಯೋಗಿಸಬಾರದೆಂದು ನಾನೇ ರಾಧೇಯನನ್ನು ಮೋಹಗೊಳಿಸುತ್ತಿದ್ದೆ.

07157038a ಫಲ್ಗುನಸ್ಯ ಹಿ ತಾಂ ಮೃತ್ಯುಮವಗಮ್ಯ ಯುಯುತ್ಸತಃ|

07157038c ನ ನಿದ್ರಾ ನ ಚ ಮೇ ಹರ್ಷೋ ಮನಸೋಽಸ್ತಿ ಯುಧಾಂ ವರ||

ಯೋಧರಲ್ಲಿ ಶ್ರೇಷ್ಠನೇ! ಆ ಶಕ್ತಿಯೇ ಫಲ್ಗುನನ ಮೃತ್ಯು ಎಂದು ತಿಳಿದಿದ್ದ ನನಗೆ ನಿದ್ರೆಯಿರಲಿಲ್ಲ. ಮನಸ್ಸಿಗೆ ಹರ್ಷವಿರಲಿಲ್ಲ!

07157039a ಘಟೋತ್ಕಚೇ ವ್ಯಂಸಿತಾಂ ತು ದೃಷ್ಟ್ವಾ ತಾಂ ಶಿನಿಪುಂಗವ|

07157039c ಮೃತ್ಯೋರಾಸ್ಯಾಂತರಾನ್ಮುಕ್ತಂ ಪಶ್ಯಾಮ್ಯದ್ಯ ಧನಂಜಯಂ||

ಶಿನಿಪುಂಗವ! ಆ ಶಕ್ತಿಯನ್ನು ಘಟೋತ್ಕಚನ ಮೇಲೆ ವ್ಯರ್ಥವಾದುದನ್ನು ನೋಡಿ ಧನಂಜಯನು ಮೃತ್ಯುವಿನ ತೆರೆದ ಬಾಯಿಂದ ಮುಕ್ತನಾದುದನ್ನು ಕಾಣುತ್ತಿದ್ದೇನೆ.

07157040a ನ ಪಿತಾ ನ ಚ ಮೇ ಮಾತಾ ನ ಯೂಯಂ ಭ್ರಾತರಸ್ತಥಾ|

07157040c ನ ಚ ಪ್ರಾಣಾಸ್ತಥಾ ರಕ್ಷ್ಯಾ ಯಥಾ ಬೀಭತ್ಸುರಾಹವೇ||

ಯುದ್ಧದಲ್ಲಿ ಬೀಭತ್ಸುವನ್ನು ರಕ್ಷಿಸುವುದನ್ನು ಹೋಲಿಸಿದರೆ ನನಗೆ ನನ್ನ ತಂದೆಯಾಗಲೀ ತಾಯಿಯಾಗಲೀ ನೀನಾಗಲೀ ಸಹೋದರರಾಗಲೀ ನನ್ನ ಪ್ರಾಣವಾಗಲೀ ಹೆಚ್ಚೆನಿಸುವುದಿಲ್ಲ.

07157041a ತ್ರೈಲೋಕ್ಯರಾಜ್ಯಾದ್ಯತ್ಕಿಂ ಚಿದ್ಭವೇದನ್ಯತ್ಸುದುರ್ಲಭಂ|

07157041c ನೇಚ್ಚೇಯಂ ಸಾತ್ವತಾಹಂ ತದ್ವಿನಾ ಪಾರ್ಥಂ ಧನಂಜಯಂ||

ಸಾತ್ವತ! ತ್ರೈಲೋಕ್ಯದ ಆಡಳಿತ ಅಥವಾ ಅದಕ್ಕಿಂತಲು ದುರ್ಲಭ ಇನ್ನೇನಾದರೂ ನನಗೆ ದೊರಕಿದರೆ ಕೂಡ ಪಾರ್ಥ ಧನಂಜಯನಿಲ್ಲದೇ ನಾನು ಅದನ್ನು ಬಯಸುವುದಿಲ್ಲ.

07157042a ಅತಃ ಪ್ರಹರ್ಷಃ ಸುಮಹಾನ್ಯುಯುಧಾನಾದ್ಯ ಮೇಽಭವತ್|

07157042c ಮೃತಂ ಪ್ರತ್ಯಾಗತಮಿವ ದೃಷ್ಟ್ವಾ ಪಾರ್ಥಂ ಧನಂಜಯಂ||

ಆದುದರಿಂದ ಯುಯುಧಾನ! ಪಾರ್ಥ ಧನಂಜಯನು ಮೃತ್ಯುವಿನಿಂದ ಹೊರಬಂದುದನ್ನು ನೋಡಿ ಇಂದು ನನಗೆ ಅತ್ಯಂತ ಹರ್ಷವಾಗುತ್ತಿದೆ.

07157043a ಅತಶ್ಚ ಪ್ರಹಿತೋ ಯುದ್ಧೇ ಮಯಾ ಕರ್ಣಾಯ ರಾಕ್ಷಸಃ|

07157043c ನ ಹ್ಯನ್ಯಃ ಸಮರೇ ರಾತ್ರೌ ಶಕ್ತಃ ಕರ್ಣಂ ಪ್ರಬಾಧಿತುಂ||

ಈ ಕಾರಣದಿಂದಲೇ ನಾನು ಕರ್ಣನೊಡನೆ ಯುದ್ಧಮಾಡಲು ರಾಕ್ಷಸನನ್ನು ಕಳುಹಿಸಿದ್ದೆ. ಈ ರಾತ್ರಿಯಲ್ಲಿ ಕರ್ಣನೊಡನೆ ಯುದ್ಧಮಾಡಲು ಬೇರೆ ಯಾರಿಗೂ ಕಷ್ಟವಾಗುತ್ತಿತ್ತು!””

07157044 ಸಂಜಯ ಉವಾಚ|

07157044a ಇತಿ ಸಾತ್ಯಕಯೇ ಪ್ರಾಹ ತದಾ ದೇವಕಿನಂದನಃ|

07157044c ಧನಂಜಯಹಿತೇ ಯುಕ್ತಸ್ತತ್ಪ್ರಿಯೇ ಸತತಂ ರತಃ||

ಸಂಜಯನು ಹೇಳಿದನು: “ಹೀಗೆ ಸತತವೂ ಧನಂಜಯನ ಹಿತದಲ್ಲಿ ಮತ್ತು ಅವನಿಗೆ ಪ್ರಿಯವಾದುದನ್ನು ಮಾಡಲು ನಿರತನಾಗಿದ್ದ ದೇವಕಿನಂದನನು ಆಗ ಸಾತ್ಯಕಿಗೆ ಹೇಳಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಕೃಷ್ಣವಾಕ್ಯೇ ಸಪ್ತಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಕೃಷ್ಣವಾಕ್ಯ ಎನ್ನುವ ನೂರಾಐವತ್ತೇಳನೇ ಅಧ್ಯಾಯವು.

Related image

Comments are closed.