Drona Parva: Chapter 152

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೨

ಘಟೋತ್ಕಚನನ್ನು ಸಂಹರಿಸು ಎಂದು ಅಲಾಯುಧನಿಗೆ ದುರ್ಯೋಧನನು ಹೇಳಿದುದು (೧-೧೩). ಅಲಾಯುಧ-ಭೀಮಸೇನರ ಯುದ್ಧ (೧೪-೪೭).

07152001 ಸಂಜಯ ಉವಾಚ|

07152001a ತಮಾಗತಮಭಿಪ್ರೇಕ್ಷ್ಯ ಭೀಮಕರ್ಮಾಣಮಾಹವೇ|

07152001c ಹರ್ಷಮಾಹಾರಯಾಂ ಚಕ್ರುಃ ಕುರವಃ ಸರ್ವ ಏವ ತೇ||

ಸಂಜಯನು ಹೇಳಿದನು: “ಯುದ್ಧದಲ್ಲಿ ಭೀಮಕರ್ಮಿಯಾದ ಅವನು ಬಂದುದನ್ನು ನೋಡಿ ನಿನ್ನವರಾದ ಕುರುಗಳೆಲ್ಲರಲ್ಲಿ ಮಹಾ ಹರ್ಷವುಂಟಾಯಿತು.

07152002a ತಥೈವ ತವ ಪುತ್ರಾಸ್ತೇ ದುರ್ಯೋಧನಪುರೋಗಮಾಃ|

07152002c ಅಪ್ಲವಾಃ ಪ್ಲವಮಾಸಾದ್ಯ ತರ್ತುಕಾಮಾ ಇವಾರ್ಣವಂ||

ಸಾಗರವನ್ನು ದಾಟಲು ಬಯಸಿದ ದೋಣಿಯಿಲ್ಲದವರಿಗೆ ದೋಣಿಯು ಸಿಕ್ಕಿದರೆ ಹೇಗೋ ಹಾಗೆ ದುರ್ಯೋಧನನೇ ಮೊದಲಾದ ನಿನ್ನ ಮಕ್ಕಳಿಗೆ ಪರಮ ಸಂತಸವಾಯಿತು.

07152003a ಪುನರ್ಜಾತಮಿವಾತ್ಮಾನಂ ಮನ್ವಾನಾಃ ಪಾರ್ಥಿವಾಸ್ತದಾ|

07152003c ಅಲಾಯುಧಂ ರಾಕ್ಷಸೇಂದ್ರಂ ಚ್ಸ್ವಾಗತೇನಾಭ್ಯಪೂಜಯನ್||

ತಮಗೆ ಪುನರ್ಜನ್ಮವು ಬಂದಿತೆಂದು ತಿಳಿದು ಪಾರ್ಥಿವರು ರಾಕ್ಷಸೇಂದ್ರ ಅಲಾಯುಧನನ್ನು ಸ್ವಾಗತಿಸಿ ಗೌರವಿಸಿದರು.

07152004a ತಸ್ಮಿಂಸ್ಥ್ವಮಾನುಷೇ ಯುದ್ಧೇ ವರ್ತಮಾನೇ ಭಯಾವಹೇ|

07152004c ಕರ್ಣರಾಕ್ಷಸಯೋರ್ನಕ್ತಂ ದಾರುಣಪ್ರತಿದರ್ಶನೇ||

07152005a ಉಪಪ್ರೈಕ್ಷಂತ ಪಾಂಚಾಲಾಃ ಸ್ಮಯಮಾನಾಃ ಸರಾಜಕಾಃ|

ಕರ್ಣ-ರಾಕ್ಷಸರ ನಡುವೆ ನಡೆಯುತ್ತಿದ್ದ ಆ ಅಮಾನುಷ, ಭಯಂಕರ, ನೋಡಲು ದಾರುಣವಾಗಿದ್ದ ಯುದ್ಧವನ್ನು ರಾಜರೊಂದಿಗೆ ಪಾಂಚಾಲರು ವಿಸ್ಮಯದಿಂದ ನೋಡುತ್ತಿದ್ದರು.

07152005c ತಥೈವ ತಾವಕಾ ರಾಜನ್ಘೂರ್ಣಮಾನಾಸ್ತತಸ್ತತಃ||

07152006a ಚುಕ್ರುಶುರ್ನೇದಮಸ್ತೀತಿ ದ್ರೋಣದ್ರೌಣಿಕೃಪಾದಯಃ|

ರಾಜನ್! ಹಾಗೆಯೇ ನಿನ್ನವರೂ ಕೂಡ, ದ್ರೋಣ-ದ್ರೌಣಿ-ಕೃಪಾದಿಗಳು ಅಲ್ಲಲ್ಲಿಯೇ ಗಾಬರಿಯಿಂದ “ಅವನು ಇನ್ನಿಲ್ಲ!” ಎಂದು ಕೂಗಿಕೊಳ್ಳುತ್ತಿದ್ದರು.

07152006c ತತ್ಕರ್ಮ ದೃಷ್ಟ್ವಾ ಸಂಭ್ರಾಂತಾ ಹೈಡಿಂಬಸ್ಯ ರಣಾಜಿರೇ||

07152007a ಸರ್ವಮಾವಿಗ್ನಮಭವದ್ಧಾಹಾಭೂತಮಚೇತನಂ|

ರಣಾಂಗಣದಲ್ಲಿ ಹೈಡಿಂಬನ ಆ ಕರ್ಮವನ್ನು ನೋಡಿ ಸಂಭ್ರಾಂತರಾದ ಅವರೆಲ್ಲರೂ ನಿರಾಶೆಯಿಂದ ಉದ್ವಿಗ್ನರಾಗಿದ್ದರು.

07152007c ತವ ಸೈನ್ಯಂ ಮಹಾರಾಜ ನಿರಾಶಂ ಕರ್ಣಜೀವಿತೇ||

07152008a ದುರ್ಯೋಧನಸ್ತು ಸಂಪ್ರೇಕ್ಷ್ಯ ಕರ್ಣಮಾರ್ತಿಂ ಪರಾಂ ಗತಂ|

07152008c ಅಲಾಯುಧಂ ರಾಕ್ಷಸೇಂದ್ರಮಾಹೂಯೇದಮಥಾಬ್ರವೀತ್||

ಮಹಾರಾಜ! ಕರ್ಣನು ಜೀವಿತವಾಗಿರುವನೋ ಇಲ್ಲವೋ ಎಂದು ನಿನ್ನ ಸೇನೆಯು ನಿರಾಶೆಗೊಳ್ಳಲು, ಕರ್ಣನು ಪರಮ ಆರ್ತಸ್ಥಿತಿಯಲ್ಲಿದ್ದುದನ್ನು ಕಂಡು  ದುರ್ಯೋಧನನು ರಾಕ್ಷಸೇಂದ್ರ ಅಲಾಯುಧನನ್ನು ಕರೆದು ಹೇಳಿದನು:

07152009a ಏಷ ವೈಕರ್ತನಃ ಕರ್ಣೋ ಹೈಡಿಂಬೇನ ಸಮಾಗತಃ|

07152009c ಕುರುತೇ ಕರ್ಮ ಸುಮಹದ್ಯದಸ್ಯೌಪಯಿಕಂ ಮೃಧೇ||

“ಹೈಡಿಂಬಿಯೊಡನೆ ಯುದ್ಧಮಾಡುತ್ತಿರುವ ಈ ವೈಕರ್ತನ ಕರ್ಣನು ಯುದ್ಧದಲ್ಲಿ ಮಾಡಬೇಕಾಗಿರುವ ಎಲ್ಲ ಮಹಾಕಾರ್ಯಗಳನ್ನೂ ಮಾಡುತ್ತಿದ್ದಾನೆ.

07152010a ಪಶ್ಯೈತಾನ್ಪಾರ್ಥಿವಾಂ ಶೂರಾನ್ನಿಹತಾನ್ಭೈಮಸೇನಿನಾ|

07152010c ನಾನಾಶಸ್ತ್ರೈರಭಿಹತಾನ್ಪಾದಪಾನಿವ ದಂತಿನಾ||

ಆದರೆ ಆನೆಯು ಮರಗಳನ್ನು ಕಿತ್ತು ಬಿಸಾಡುವಂತೆ ಭೈಮಸೇನಿಯ ನಾನಾಶಸ್ತ್ರಗಳಿಂದ ಹತರಾಗುತ್ತಿರುವ ಶೂರ ಪಾರ್ಥಿವರನ್ನು ನೋಡು!

07152011a ತವೈಷ ಭಾಗಃ ಸಮರೇ ರಾಜಮಧ್ಯೇ ಮಯಾ ಕೃತಃ|

07152011c ತವೈವಾನುಮತೇ ವೀರ ತಂ ವಿಕ್ರಮ್ಯ ನಿಬರ್ಹಯ||

07152012a ಪುರಾ ವೈಕರ್ತನಂ ಕರ್ಣಮೇಷ ಪಾಪೋ ಘಟೋತ್ಕಚಃ|

07152012c ಮಾಯಾಬಲಮುಪಾಶ್ರಿತ್ಯ ಕರ್ಶಯತ್ಯರಿಕರ್ಶನಃ||

ಆದುದರಿಂದಲೇ ಈ ರಾಜರ ಮಧ್ಯದಲ್ಲಿ ಸಮರದಲ್ಲಿ ಅವನನ್ನು ನಿನ್ನ ಪಾಲಿಗೆ ನಾನು ಮಾಡಿದ್ದೇನೆ. ನನ್ನ ಅನುಮತಿಯಂತೆ ವೀರ! ಈ ಪಾಪಿ ಅರಿಕರ್ಶನ ಘಟೋತ್ಕಚನು ಮಾಯಬಲವನ್ನು ಆಶ್ರಯಿಸಿ ವೈಕರ್ತನ ಕರ್ಣನನ್ನು ಸಂಹರಿಸುವ ಮೊದಲೇ, ವಿಕ್ರಮದಿಂದ ಅವನನ್ನು ಸಂಹರಿಸು!”

07152013a ಏವಮುಕ್ತಃ ಸ ರಾಜ್ಞಾ ತು ರಾಕ್ಷಸಸ್ತೀವ್ರವಿಕ್ರಮಃ|

07152013c ತಥೇತ್ಯುಕ್ತ್ವಾ ಮಹಾಬಾಹುರ್ಘಟೋತ್ಕಚಮುಪಾದ್ರವತ್||

ರಾಜನು ಹೀಗೆ ಹೇಳಲು, ಹಾಗೆಯೇ ಆಗಲೆಂದು ಹೇಳಿ ಆ ತೀವ್ರವಿಕ್ರಮಿ ಮಹಾಬಾಹುವು ಘಟೋತ್ಕಚನ ಮೇಲೆರಗಿದನು.

07152014a ತತಃ ಕರ್ಣಂ ಸಮುತ್ಸೃಜ್ಯ ಭೈಮಸೇನಿರಪಿ ಪ್ರಭೋ|

07152014c ಪ್ರತ್ಯಮಿತ್ರಮುಪಾಯಾಂತಂ ಮರ್ದಯಾಮಾಸ ಮಾರ್ಗಣೈಃ||

ಆಗ ಪ್ರಭೋ! ಭೈಮಸೇನಿಯೂ ಕೂಡ ಕರ್ಣನನ್ನು ಬಿಟ್ಟು ಬರುತ್ತಿದ್ದ ಶತ್ರುವನ್ನು ಎದುರಿಸಿ ಮಾರ್ಗಣಗಳಿಂದ ಮರ್ದಿಸತೊಡಗಿದನು.

07152015a ತಯೋಃ ಸಮಭವದ್ಯುದ್ಧಂ ಕ್ರುದ್ಧಯೋ ರಾಕ್ಷಸೇಂದ್ರಯೋಃ|

07152015c ಮತ್ತಯೋರ್ವಾಶಿತಾಹೇತೋರ್ದ್ವಿಪಯೋರಿವ ಕಾನನೇ||

ಆ ಇಬ್ಬರು ಕ್ರುದ್ಧ ರಾಕ್ಷಸೇಂದ್ರರ ನಡುವೆ ಕಾನನದಲ್ಲಿ ಹೆಣ್ಣಾನೆಯ ಸಲುವಾಗಿ ಮದಿಸಿದ ಸಲಗಗಳ ಮಧ್ಯೆ ನಡೆಯುವಂತೆ ಯುದ್ಧವು ನಡೆಯಿತು.

07152016a ರಕ್ಷಸಾ ವಿಪ್ರಮುಕ್ತಸ್ತು ಕರ್ಣೋಽಪಿ ರಥಿನಾಂ ವರಃ|

07152016c ಅಭ್ಯದ್ರವದ್ಭೀಮಸೇನಂ ರಥೇನಾದಿತ್ಯವರ್ಚಸಾ||

ರಾಕ್ಷಸನಿಂದ ವಿಮುಕ್ತನಾದ ರಥಿಗಳಲ್ಲಿ ಶ್ರೇಷ್ಠ ಕರ್ಣನಾದರೋ ಆದಿತ್ಯವರ್ಚಸ ರಥದಿಂದ ಭೀಮಸೇನನನ್ನು ಆಕ್ರಮಣಿಸಿದನು.

07152017a ತಮಾಯಾಂತಮನಾದೃತ್ಯ ದೃಷ್ಟ್ವಾ ಗ್ರಸ್ತಂ ಘಟೋತ್ಕಚಂ|

07152017c ಅಲಾಯುಧೇನ ಸಮರೇ ಸಿಂಹೇನೇವ ಗವಾಂ ಪತಿಂ||

07152018a ರಥೇನಾದಿತ್ಯವಪುಷಾ ಭೀಮಃ ಪ್ರಹರತಾಂ ವರಃ|

07152018c ಕಿರಂ ಶರೌಘಾನ್ಪ್ರಯಯಾವಲಾಯುಧರಥಂ ಪ್ರತಿ||

ಅವನು ಬರುತ್ತಿರುವುದನ್ನು ಅನಾದರಿಸಿ, ಹೋರಿಯನ್ನು ಸಿಂಹವು ಹೇಗೋ ಹಾಗೆ ಸಮರದಲ್ಲಿ ಘಟೋತ್ಕಚನು ಅಲಾಯುಧನಿಂದ ಮುತ್ತಿಗೆಹಾಕಲ್ಪಟ್ಟದುದನ್ನು ನೋಡಿ ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ಅಲಾಯುಧನ ರಥದ ಕಡೆಗೆ ಶರೌಘಗಳ ರಾಶಿಯನ್ನು ಸುರಿಸಿದನು.

07152019a ತಮಾಯಾಂತಮಭಿಪ್ರೇಕ್ಷ್ಯ ಸ ತದಾಲಾಯುಧಃ ಪ್ರಭೋ|

07152019c ಘಟೋತ್ಕಚಂ ಸಮುತ್ಸೃಜ್ಯ ಭೀಮಸೇನಂ ಸಮಾಹ್ವಯತ್||

ಪ್ರಭೋ! ಅವನು ತನ್ನ ಕಡೆ ಬರುತ್ತಿರುವುದನ್ನು ನೋಡಿ ಅಲಾಯುಧನು ಘಟೋತ್ಕಚನನ್ನು ಬಿಟ್ಟು ಭೀಮಸೇನನನ್ನು ಆಹ್ವಾನಿಸಿದನು.

07152020a ತಂ ಭೀಮಃ ಸಹಸಾಭ್ಯೇತ್ಯ ರಾಕ್ಷಸಾಂತಕರಃ ಪ್ರಭೋ|

07152020c ಸಗಣಂ ರಾಕ್ಷಸೇಂದ್ರಂ ತಂ ಶರವರ್ಷೈರವಾಕಿರತ್||

ಪ್ರಭೋ! ಆ ರಾಕ್ಷಸಾಂತಕನು ಅವನ ಬಳಿಸಾರಿ ಗಣಗಳೊಂದಿಗೆ ಆ ರಾಕ್ಷಸೇಂದ್ರನನ್ನು ಶರವರ್ಷಗಳಿಂದ ಮುಚ್ಚಿದನು.

07152021a ತಥೈವಾಲಾಯುಧೋ ರಾಜನ್  ಶಿಲಾಧೌತೈರಜಿಹ್ಮಗೈಃ|

07152021c ಅಭ್ಯವರ್ಷತ ಕೌಂತೇಯಂ ಪುನಃ ಪುನರರಿಂದಮಃ||

ರಾಜನ್! ಹಾಗೆಯೇ ಅರಿಂದಮ ಅಲಾಯುಧನೂ ಕೂಡ ಶಿಲಾಧೌತ ಜಿಹ್ಮಗಗಳನ್ನು ಕೌಂತೇಯನ ಮೇಲೆ ಪುನಃ ಪುನಃ ಸುರಿಸಿದನು.

07152022a ತಥಾ ತೇ ರಾಕ್ಷಸಾಃ ಸರ್ವೇ ಭೀಮಸೇನಮುಪಾದ್ರವನ್|

07152022c ನಾನಾಪ್ರಹರಣಾ ಭೀಮಾಸ್ತ್ವತ್ಸುತಾನಾಂ ಜಯೈಷಿಣಃ||

ಹಾಗೆಯೇ ಜಯೈಷಿ ರಾಕ್ಷಸರೆಲ್ಲರೂ ಭೀಮಸೇನನನ್ನು ಆಕ್ರಮಣಿಸಿ ನಾನಾ ಪ್ರಹಾರಗಳಿಂದ ಭೀಮನನ್ನು ಎದುರಿಸಿ ಯುದ್ಧ ಮಾಡಿದರು.

07152023a ಸ ತಾಡ್ಯಮಾನೋ ಬಲಿಭಿರ್ಭೀಮಸೇನೋ ಮಹಾಬಲಃ|

07152023c ಪಂಚಭಿಃ ಪಂಚಭಿಃ ಸರ್ವಾಂಸ್ತಾನವಿಧ್ಯಚ್ಚಿತೈಃ ಶರೈಃ||

ಪ್ರಹರಿಸಲ್ಪಡುತ್ತಿದ್ದ ಬಲಿ ಮಹಾಬಲಿ ಭೀಮಸೇನನು ಅವರೆಲ್ಲರನ್ನೂ ಐದೈದು ಶಿತ ಶರಗಳಿಂದ ಹೊಡೆದನು.

07152024a ತೇ ವಧ್ಯಮಾನಾ ಭೀಮೇನ ರಾಕ್ಷಸಾಃ ಖರಯೋನಯಃ|

07152024c ವಿನೇದುಸ್ತುಮುಲಾನ್ನಾದಾನ್ದುದ್ರುವುಶ್ಚ ದಿಶೋ ದಶ||

ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಆ ಖರಯೋನಿಯ ರಾಕ್ಷಸರು ತುಮುಲ ಕೂಗನ್ನು ಕೂಗುತ್ತಾ ಹತ್ತು ದಿಕ್ಕುಗಳಲ್ಲಿ ಓಡಿ ಹೋದರು.

07152025a ತಾಂಸ್ತ್ರಾಸ್ಯಮಾನಾನ್ಭೀಮೇನ ದೃಷ್ಟ್ವಾ ರಕ್ಷೋ ಮಹಾಬಲಂ|

07152025c ಅಭಿದುದ್ರಾವ ವೇಗೇನ ಶರೈಶ್ಚೈನಮವಾಕಿರತ್||

ಅವರನ್ನು ಪೀಡಿಸುತ್ತಿರುವ ಮಹಾಬಲ ಭೀಮನನ್ನು ನೋಡಿ ರಾಕ್ಷಸ ಅಲಾಯುಧನು ವೇಗದಿಂದ ಶರಗಳನ್ನು ಸುರಿಸುತ್ತಾ ಆಕ್ರಮಣಿಸಿದನು.

07152026a ತಂ ಭೀಮಸೇನಃ ಸಮರೇ ತೀಕ್ಷ್ಣಾಗ್ರೈರಕ್ಷಿಣೋಚ್ಚರೈಃ|

07152026c ಅಲಾಯುಧಸ್ತು ತಾನಸ್ತಾನ್ಭೀಮೇನ ವಿಶಿಖಾನ್ರಣೇ|

07152026e ಚಿಚ್ಚೇದ ಕಾಂಶ್ಚಿತ್ಸಮರೇ ತ್ವರಯಾ ಕಾಂಶ್ಚಿದಗ್ರಹೀತ್||

ಸಮರದಲ್ಲಿ ಭೀಮಸೇನನು ಅವನನ್ನು ತೀಕ್ಷ್ಣ ಅಗ್ರಭಾಗಗಳುಳ್ಳ ಬಾಣಗಳಿಂದ ಹೊಡೆದನು. ಅಲಾಯುಧನಾದರೋ ರಣದಲ್ಲಿ ಭೀಮನ ಆ ವಿಶಿಖ ಬಾಣಗಳಲ್ಲಿ ಕೆಲವನ್ನು ತುಂಡರಿಸಿದನು. ಇನ್ನು ಕೆಲವನ್ನು ಶೀಘ್ರವಾಗಿ ಕೈಯಿಂದಲೇ ಹಿಡಿದನು.

07152027a ಸ ತಂ ದೃಷ್ಟ್ವಾ ರಾಕ್ಷಸೇಂದ್ರಂ ಭೀಮೋ ಭೀಮಪರಾಕ್ರಮಃ|

07152027c ಗದಾಂ ಚಿಕ್ಷೇಪ ವೇಗೇನ ವಜ್ರಪಾತೋಪಮಾಂ ತದಾ||

ಆ ರಾಕ್ಷಸೇಂದ್ರನನ್ನು ನೋಡಿ ಭೀಮಪರಾಕ್ರಮಿ ಭೀಮನು ವಜ್ರಪಾತದಂತೆ ವೇಗದಿಂದ ಗದೆಯನ್ನು ಅವನ ಮೇಲೆ ಎಸೆದನು.

07152028a ತಾಮಾಪತಂತೀಂ ವೇಗೇನ ಗದಾಂ ಜ್ವಾಲಾಕುಲಾಂ ತತಃ|

07152028c ಗದಯಾ ತಾಡಯಾಮಾಸ ಸಾ ಗದಾ ಭೀಮಮಾವ್ರಜತ್||

ಜ್ವಾಲೆಗಳಿಂದ ಸುತ್ತುವರೆದು ವೇಗದಿಂದ ಮೇಲೆ ಬೀಳುತ್ತಿರುವ ಗದೆಯನ್ನು ತನ್ನ ಗದೆಯಿಂದ ಹೊಡೆಯಲು ಅದು ಪುನಃ ಭೀಮನ ಕಡೆಯೇ ರಭಸದಿಂದ ಹೊರಟುಹೋಯಿತು.

07152029a ಸ ರಾಕ್ಷಸೇಂದ್ರಂ ಕೌಂತೇಯಃ ಶರವರ್ಷೈರವಾಕಿರತ್|

07152029c ತಾನಪ್ಯಸ್ಯಾಕರೋನ್ಮೋಘಾನ್ರಾಕ್ಷಸೋ ನಿಶಿತೈಃ ಶರೈಃ||

ಅನಂತರ ರಾಕ್ಷಸೇಂದ್ರನನ್ನು ಕೌಂತೇಯನು ಶರವರ್ಷಗಳಿಂದ ಮುಚ್ಚಿದನು. ಅವುಗಳನ್ನು ಕೂಡ ರಾಕ್ಷಸನು ನಿಶಿತ ಶರಗಳಿಂದ ನಿರರ್ಥಕಗೊಳಿಸಿದನು.

07152030a ತೇ ಚಾಪಿ ರಾಕ್ಷಸಾಃ ಸರ್ವೇ ಸೈನಿಕಾ ಭೀಮರೂಪಿಣಃ|

07152030c ಶಾಸನಾದ್ರಾಕ್ಷಸೇಂದ್ರಸ್ಯ ನಿಜಘ್ನೂ ರಥಕುಂಜರಾನ್||

ಭೀಮರೂಪಿ ಆ ರಾಕ್ಷಸ ಸೈನಿಕರೆಲ್ಲರು ಕೂಡ ರಾಕ್ಷಸೇಂದ್ರನ ಶಾಸನದಂತೆ ರಥಕುಂಜರಗಳನ್ನು ಸದೆಬಡಿದರು.

07152031a ಪಾಂಚಾಲಾಃ ಸೃಂಜಯಾಶ್ಚೈವ ವಾಜಿನಃ ಪರಮದ್ವಿಪಾಃ|

07152031c ನ ಶಾಂತಿಂ ಲೇಭಿರೇ ತತ್ರ ರಕ್ಷಸೈರ್ಭೃಶಪೀಡಿತಾಃ||

ರಾಕ್ಷಸರಿಂದ ಪೀಡಿತ ಪಾಂಚಾಲರು, ಸೃಂಜಯರು, ಕುದುರೆಗಳು ಮತ್ತು ಮಹಾ ಆನೆಗಳಿಗೆ ಅಲ್ಲಿ ಶಾಂತಿಯೆನ್ನುವುದೇ ಇರಲಿಲ್ಲ.

07152032a ತಂ ತು ದೃಷ್ಟ್ವಾ ಮಹಾಘೋರಂ ವರ್ತಮಾನಂ ಮಹಾಹವೇ|

07152032c ಅಬ್ರವೀತ್ಪುರುಷಶ್ರೇಷ್ಠೋ ಧನಂಜಯಮಿದಂ ವಚಃ||

ಮಹಾಹವದಲ್ಲಿ ನಡೆಯುತ್ತಿರುವ ಆ ಮಹಾಘೋರ ಯುದ್ಧವನ್ನು ನೋಡಿ ಪುರುಷಶ್ರೇಷ್ಠ ಕೃಷ್ಣನು ಧನಂಜಯನಿಗೆ ಈ ಮಾತನ್ನಾಡಿದನು.

07152033a ಪಶ್ಯ ಭೀಮಂ ಮಹಾಬಾಹೋ ರಾಕ್ಷಸೇಂದ್ರವಶಂ ಗತಂ|

07152033c ಪದವೀಮಸ್ಯ ಗಚ್ಚ ತ್ವಂ ಮಾ ವಿಚಾರಯ ಪಾಂಡವ||

“ಮಹಾಬಾಹೋ! ಭೀಮನು ರಾಕ್ಷಸೇಂದ್ರನ ವಶನಾಗಿರುವುದನ್ನು ನೋಡು. ಪಾಂಡವ! ಅವನಿರುವಲ್ಲಿಗೆ ನೀನು ಹೋಗು. ವಿಚಾರಮಾಡಬೇಡ!

07152034a ಧೃಷ್ಟದ್ಯುಮ್ನಃ ಶಿಖಂಡೀ ಚ ಯುಧಾಮನ್ಯೂತ್ತಮೌಜಸೌ|

07152034c ಸಹಿತಾ ದ್ರೌಪದೇಯಾಶ್ಚ ಕರ್ಣಂ ಯಾಂತು ಮಹಾರಥಾಃ||

ಧೃಷ್ಟದ್ಯುಮ್ನ, ಶಿಖಂಡೀ, ಯುಧಾಮನ್ಯು, ಉತ್ತಮೌಜಸರು ಮಹಾರಥ ದ್ರೌಪದೇಯರೊಂದಿಗೆ ಕರ್ಣನನ್ನು ಎದುರಿಸಿ ಹೋಗಲಿ.

07152035a ನಕುಲಃ ಸಹದೇವಶ್ಚ ಯುಯುಧಾನಶ್ಚ ವೀರ್ಯವಾನ್|

07152035c ಇತರಾನ್ರಾಕ್ಷಸಾನ್ಘ್ನಂತು ಶಾಸನಾತ್ತವ ಪಾಂಡವ||

ಪಾಂಡವ! ನಕುಲ, ಸಹದೇವ, ಮತ್ತು ವೀರ್ಯವಾನ್ ಯುಯುಧಾನರು ನಿನ್ನ ಶಾಸನದಂತೆ ಇತರ ರಾಕ್ಷಸರನ್ನು ಸಂಹರಿಸಲಿ!

07152036a ತ್ವಮಪೀಮಾಂ ಮಹಾಬಾಹೋ ಚಮೂಂ ದ್ರೋಣಪುರಸ್ಕೃತಾಂ|

07152036c ವಾರಯಸ್ವ ನರವ್ಯಾಘ್ರ ಮಹದ್ಧಿ ಭಯಮಾಗತಂ||

ಮಹಾಬಾಹೋ! ನರವ್ಯಾಘ್ರ! ಮಹಾ ಭಯವುಂಟಾಗಿರುವ ಈ ಸಮಯದಲ್ಲಿ ನೀನು ದ್ರೋಣನ ನಾಯಕತ್ವದಲ್ಲಿರುವ ಈ ಸೇನೆಯನ್ನು ತಡೆದು ನಿಲ್ಲಿಸು!”

07152037a ಏವಮುಕ್ತೇ ತು ಕೃಷ್ಣೇನ ಯಥೋದ್ದಿಷ್ಟಾ ಮಹಾರಥಾಃ|

07152037c ಜಗ್ಮುರ್ವೈಕರ್ತನಂ ಕರ್ಣಂ ರಾಕ್ಷಸಾಂಶ್ಚೇತರಾನ್ರಣೇ||

ಕೃಷ್ಣನು ಹೀಗೆ ಹೇಳಲು ಅವನ ಆದೇಶದಂತೆ ಮಹಾರಥರು ರಣದಲ್ಲಿ ವೈಕರ್ತನ ಕರ್ಣನ ಬಳಿ ಮತ್ತು ಇತರರು ರಾಕ್ಷಸರ ಕಡೆ ಹೋದರು.

07152038a ಅಥ ಪೂರ್ಣಾಯತೋತ್ಸೃಷ್ಟೈಃ ಶರೈರಾಶೀವಿಷೋಪಮೈಃ|

07152038c ಧನುಶ್ಚಿಚ್ಚೇದ ಭೀಮಸ್ಯ ರಾಕ್ಷಸೇಂದ್ರಃ ಪ್ರತಾಪವಾನ್||

ಆಗ ಪ್ರತಾಪವಾನ್ ರಾಕ್ಷಸೇಂದ್ರನು ಪೂರ್ಣವಾಗಿ ಸೆಳೆದು ಬಿಟ್ಟ ಸರ್ಪಗಳ ವಿಷಕ್ಕೆ ಸಮಾನ ಶರಗಳಿಂದ ಭೀಮನ ಧನುಸ್ಸನ್ನು ಕತ್ತರಿಸಿದನು.

07152039a ಹಯಾಂಶ್ಚಾಸ್ಯ ಶಿತೈರ್ಬಾಣೈಃ ಸಾರಥಿಂ ಚ ಮಹಾಬಲಃ|

07152039c ಜಘಾನ ಮಿಷತಃ ಸಂಖ್ಯೇ ಭೀಮಸೇನಸ್ಯ ಭಾರತ||

ಭಾರತ! ಕಣ್ಣು ಮುಚ್ಚಿ ಬಿಡುವಷ್ಟರಲ್ಲಿಯೇ ಆ ಮಹಾಬಲನು ಹರಿತ ಬಾಣಗಳಿಂದ ರಣದಲ್ಲಿ ಭೀಮಸೇನನ ಕುದುರೆಗಳನ್ನೂ, ಸಾರಥಿಯನ್ನೂ ಸಂಹರಿಸಿದನು.

07152040a ಸೋಽವತೀರ್ಯ ರಥೋಪಸ್ಥಾದ್ಧತಾಶ್ವೋ ಹತಸಾರಥಿಃ|

07152040c ತಸ್ಮೈ ಗುರ್ವೀಂ ಗದಾಂ ಘೋರಾಂ ಸ ವಿನದ್ಯೋತ್ಸಸರ್ಜ ಹ||

ಹತಾಶ್ವನೂ ಹತಸಾರಥಿಯೂ ಆದ ಭೀಮನು ರಥದಿಂದ ಇಳಿದು ಭಾರ ಘೋರ ಗದೆಯನ್ನು ಅವನ ಮೇಲೆ ಎಸೆದು ಗರ್ಜಿಸಿದನು.

07152041a ತತಸ್ತಾಂ ಭೀಮನಿರ್ಘೋಷಾಮಾಪತಂತೀಂ ಮಹಾಗದಾಂ|

07152041c ಗದಯಾ ರಾಕ್ಷಸೋ ಘೋರೋ ನಿಜಘಾನ ನನಾದ ಚ||

ನಿರ್ಘೋಷದೊಂದಿಗೆ ತನ್ನ ಮೇಲೆ ಬೀಳುತ್ತಿದ್ದ ಆ ಮಹಾಗದೆಯನ್ನು ರಾಕ್ಷಸನು ಘೋರ ಗದೆಯಿಂದ ಹೊಡೆದು ಗರ್ಜಿಸಿದನು.

07152042a ತದ್ದೃಷ್ಟ್ವಾ ರಾಕ್ಷಸೇಂದ್ರಸ್ಯ ಘೋರಂ ಕರ್ಮ ಭಯಾವಹಂ|

07152042c ಭೀಮಸೇನಃ ಪ್ರಹೃಷ್ಟಾತ್ಮಾ ಗದಾಮಾಶು ಪರಾಮೃಶತ್||

ಭಯವನ್ನುಂಟುಮಾಡುವ ರಾಕ್ಷಸೇಂದ್ರನ ಆ ಘೋರ ಕರ್ಮವನ್ನು ನೋಡಿ ಸಂತೋಷಗೊಂಡ ಭೀಮಸೇನನು ಹಿಂದಿರುಗಿದ ತನ್ನ ಗದೆಯನ್ನು ಗ್ರಹಣಮಾಡಿದನು.

07152043a ತಯೋಃ ಸಮಭವದ್ಯುದ್ಧಂ ತುಮುಲಂ ನರರಕ್ಷಸೋಃ|

07152043c ಗದಾನಿಪಾತಸಂಹ್ರಾದೈರ್ಭುವಂ ಕಂಪಯತೋರ್ಭೃಶಂ||

ಗದೆಗಳ ಪ್ರಹಾರ ಮತ್ತು ಪ್ರತಿಪ್ರಹಾರಗಳಿಂಧ ಭುವನವನ್ನೇ ಕಂಪಿಸುವಂತಿದ್ದ ಆ ನರ-ರಾಕ್ಷಸರ ತುಮುಲಯುದ್ಧವು ಜೋರಾಗಿ ನಡೆಯಿತು.

07152044a ಗದಾವಿಮುಕ್ತೌ ತೌ ಭೂಯಃ ಸಮಾಸಾದ್ಯೇತರೇತರಂ|

07152044c ಮುಷ್ಟಿಭಿರ್ವಜ್ರಸಂಹ್ರಾದೈರನ್ಯೋನ್ಯಮಭಿಜಘ್ನತುಃ||

ಅವರಿಬ್ಬರೂ ಗದೆಗಳನ್ನು ತೊರೆದು ಮತ್ತೆ ಅನ್ಯೋನ್ಯರನ್ನು ಸಂಹರಿಸುವ ಸಲುವಾಗಿ ಒಬ್ಬರು ಇನ್ನೊಬ್ಬರನ್ನು ಮುಷ್ಟಿಗಳಿಂದ ಗುದ್ದಿ ಯುದ್ಧಮಾಡತೊಡಗಿದರು.

07152045a ರಥಚಕ್ರೈರ್ಯುಗೈರಕ್ಷೈರಧಿಷ್ಠಾನೈರುಪಸ್ಕರೈಃ|

07152045c ಯಥಾಸನ್ನಮುಪಾದಾಯ ನಿಜಘ್ನತುರಮರ್ಷಣೌ||

ಅನಂತರ ಆ ಅಮರ್ಷಣರು ರಥಚಕ್ರಗಳಿಂದಲೂ, ನೊಗಗಳಿಂದಲೂ, ಅಚ್ಚುಮರಗಳಿಂದಲೂ, ಪೀಠಗಳಿಂದಲೂ, ಯುದ್ಧೋಪಯೋಗೀ ಸಾಮಗ್ರಿಗಳಿಂದಲೂ ಮತ್ತು ಸಿಕ್ಕಿದ ವಸ್ತುಗಳಿಂದ ಪರಸ್ಪರರನ್ನು ಪ್ರಹರಿಸತೊಡಗಿದರು.

07152046a ತೌ ವಿಕ್ಷರಂತೌ ರುಧಿರಂ ಸಮಾಸಾದ್ಯೇತರೇತರಂ|

07152046c ಮತ್ತಾವಿವ ಮಹಾನಾಗಾವಕೃಷ್ಯೇತಾಂ ಪುನಃ ಪುನಃ||

ಅವರಿಬ್ಬರೂ ರಕ್ತವನ್ನು ಸುರಿಸುತ್ತಾ ಪರಸ್ಪರರನ್ನು ಪುನಃ ಪುನಃ ಸೆಳೆದಾಡುತ್ತಾ ಮದಿಸಿದ ಸಲಗಗಳಂತೆ ಹೋರಾಡಿದರು.

07152047a ತಮಪಶ್ಯದ್ಧೃಷೀಕೇಶಃ ಪಾಂಡವಾನಾಂ ಹಿತೇ ರತಃ|

07152047c ಸ ಭೀಮಸೇನರಕ್ಷಾರ್ಥಂ ಹೈಡಿಂಬಂ ಪ್ರತ್ಯಚೋದಯತ್||

ಅದನ್ನು ನೋಡಿದ ಪಾಂಡವರ ಹಿತನಿರತ ಹೃಷೀಕೇಶನು ಭೀಮಸೇನನನ್ನು ರಕ್ಷಿಸುವುದಕ್ಕಾಗಿ ಹೈಡಿಂಬನನ್ನು ಪ್ರಚೋದಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ಘಟೋತ್ಕಚವಧಪರ್ವಣಿ ರಾತ್ರಿಯುದ್ಧೇ ಅಲಾಯುಧಯುದ್ಧೇ ದ್ವಿಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ಘಟೋತ್ಕಚವಧಪರ್ವದಲ್ಲಿ ರಾತ್ರಿಯುದ್ಧೇ ಅಲಾಯುಧಯುದ್ಧ ಎನ್ನುವ ನೂರಾಐವತ್ತೆರಡನೇ ಅಧ್ಯಾಯವು.

Related image

Comments are closed.