Drona Parva: Chapter 136

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೩೬

ಅರ್ಜುನನು ಕೌರವ ಸೇನೆಯನ್ನು ಪಲಾಯನಗೊಳಿಸಿದುದು (೧-೧೯).

07136001 ಸಂಜಯ ಉವಾಚ|

07136001a ತತೋ ಯುಧಿಷ್ಠಿರಶ್ಚೈವ ಭೀಮಸೇನಶ್ಚ ಪಾಂಡವಃ|

07136001c ದ್ರೋಣಪುತ್ರಂ ಮಹಾರಾಜ ಸಮಂತಾತ್ಪರ್ಯವಾರಯನ್||

ಸಂಜಯನು ಹೇಳಿದನು: “ಮಹಾರಾಜ! ಆಗ ಯುಧಿಷ್ಠಿರನೂ ಪಾಂಡವ ಭೀಮಸೇನನೂ ದ್ರೋಣಪುತ್ರನನ್ನು ಎಲ್ಲಕಡೆಗಳಿಂದ ಮುತ್ತಿಗೆ ಹಾಕಿದರು.

07136002a ತತೋ ದುರ್ಯೋಧನೋ ರಾಜಾ ಭಾರದ್ವಾಜೇನ ಸಂವೃತಃ|

07136002c ಅಭ್ಯಯಾತ್ಪಾಂಡವಾನ್ಸಂಖ್ಯೇ ತತೋ ಯುದ್ಧಮವರ್ತತ|

07136002e ಘೋರರೂಪಂ ಮಹಾರಾಜ ಭೀರೂಣಾಂ ಭಯವರ್ಧನಂ||

ಆಗ ರಾಜಾ ದುರ್ಯೋಧನನು ಭಾರದ್ವಾಜನಿಂದ ಸುತ್ತುವರೆಯಲ್ಪಟ್ಟು ಪಾಂಡವರನ್ನು ಆಕ್ರಮಣಿಸಿದನು. ಮಹಾರಾಜ! ಆಗ ರಣದಲ್ಲಿ ಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪದ ಯುದ್ಧವು ನಡೆಯಿತು.

07136003a ಅಂಬಷ್ಠಾನ್ಮಾಲವಾನ್ವಂಗಾಂ ಶಿಬೀಂಸ್ತ್ರೈಗರ್ತಕಾನಪಿ|

07136003c ಪ್ರಾಹಿಣೋನ್ಮೃತ್ಯುಲೋಕಾಯ ಗಣಾನ್ಕ್ರುದ್ಧೋ ಯುಧಿಷ್ಠಿರಃ||

ಕ್ರುದ್ಧ ಯುಧಿಷ್ಠಿರನು ಅಂಬಷ್ಠರನ್ನೂ, ಮಾಲವರನ್ನೂ, ವಂಗರನ್ನೂ, ಶಿಬಿಗಳನ್ನೂ, ತೈಗರ್ತರ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

07136004a ಅಭೀಷಾಹಾಂ ಶೂರಸೇನಾನ್ ಕ್ಷತ್ರಿಯಾನ್ಯುದ್ಧದುರ್ಮದಾನ್|

07136004c ನಿಕೃತ್ಯ ಪೃಥಿವೀಂ ಚಕ್ರೇ ಭೀಮಃ ಶೋಣಿತಕರ್ದಮಾಂ||

ಭೀಮನು ಅಭೀಷಾಹರನ್ನೂ, ಶೂರಸೇನರನ್ನೂ, ಯುದ್ಧದುರ್ಮದ ಕ್ಷತ್ರಿಯರನ್ನೂ ಸಂಹರಿಸಿ ಪೃಥ್ವಿಯನ್ನು ರಕ್ತ ಮಾಂಸಗಳಿಂದ ತೋಯಿಸಿದನು.

07136005a ಯೌಧೇಯಾರಟ್ಟರಾಜನ್ಯಾನ್ಮದ್ರಕಾಂಶ್ಚ ಗಣಾನ್ಯುಧಿ|

07136005c ಪ್ರಾಹಿಣೋನ್ಮೃತ್ಯುಲೋಕಾಯ ಕಿರೀಟೀ ನಿಶಿತೈಃ ಶರೈಃ||

ಕಿರೀಟಿಯು ಯುದ್ಧದಲ್ಲಿ ನಿಶಿತ ಶರಗಳಿಂದ ಯೌಧೇಯರನ್ನೂ, ಅಟ್ಟರಾಜರನ್ನೂ, ಮತ್ತು ಮದ್ರಕ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.

07136006a ಪ್ರಗಾಢಮಂಜೋಗತಿಭಿರ್ನಾರಾಚೈರಭಿಪೀಡಿತಾಃ|

07136006c ನಿಪೇತುರ್ದ್ವಿರದಾ ಭೂಮೌ ದ್ವಿಶೃಂಗಾ ಇವ ಪರ್ವತಾಃ||

ವೇಗವಾಗಿ ಹೋಗುತ್ತಿರುವ ನಾರಾಚಗಳಿಂದ ಗಾಡವಾಗಿ ಪೀಡಿತ ಆನೆಗಳು ಎರಡು ಶೃಂಗಗಳುಳ್ಳ ಪರ್ವತಗಳಂತೆ ಭೂಮಿಯ ಮೇಲೆ ಬಿದ್ದವು.

07136007a ನಿಕೃತ್ತೈರ್ಹಸ್ತಿಹಸ್ತೈಶ್ಚ ಲುಠಮಾನೈಸ್ತತಸ್ತತಃ|

07136007c ರರಾಜ ವಸುಧಾ ಕೀರ್ಣಾ ವಿಸರ್ಪದ್ಭಿರಿವೋರಗೈಃ||

ಕತ್ತರಿಸಲ್ಪಟ್ಟು ಅಲ್ಲಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಆನೆಗಳ ಸೊಂಡಿಲುಗಳಿಂದ ತುಂಬಿದ ರಣಭೂಮಿಯು ಹರಿದುಹೋಗುತ್ತಿದ್ದ ಸರ್ಪಗಳಿಂದ ತುಂಬಿಕೊಂಡಿದೆಯೋ ಎಂಬಂತೆ ಕಾಣುತ್ತಿತ್ತು.

07136008a ಕ್ಷಿಪ್ತೈಃ ಕನಕಚಿತ್ರೈಶ್ಚ ನೃಪಚ್ಚತ್ರೈಃ ಕ್ಷಿತಿರ್ಬಭೌ|

07136008c ದ್ಯೌರಿವಾದಿತ್ಯಚಂದ್ರಾದ್ಯೈರ್ಗ್ರಹೈಃ ಕೀರ್ಣಾ ಯುಗಕ್ಷಯೇ||

ತುಂಡಾಗಿ ಕೆಳಗೆ ಬಿದ್ದಿದ್ದ ಕನಕ ಚಿತ್ರಗಳಿಂದ ಅಲಂಕೃತಗೊಂಡಿದ್ದ ರಾಜರ ಚತ್ರಗಳಿಂದ ಭೂಮಿಯು ಯುಗಾಂತದಲ್ಲಿ ಸೂರ್ಯ ಚಂದ್ರ ಮತ್ತು ಇತರ ಗ್ರಹಗಳು ಚೆಲ್ಲಿದ ಆಕಾಶದಂತೆ ತೋರುತ್ತಿತ್ತು.

07136009a ಹತ ಪ್ರಹರತಾಭೀತಾ ವಿಧ್ಯತ ವ್ಯವಕೃಂತತ|

07136009c ಇತ್ಯಾಸೀತ್ತುಮುಲಃ ಶಬ್ದಃ ಶೋಣಾಶ್ವಸ್ಯ ರಥಂ ಪ್ರತಿ||

ಶೋಣಿತಾಶ್ವ ದ್ರೋಣನ ರಥದ ಬಳಿ “ಭಯವಿಲ್ಲದೇ ಸಂಹರಿಸಿ! ಹೊಡೆಯಿರಿ! ಬಾಣಗಳಿಂದ ಕತ್ತರಿಸಿರಿ!” ಎಂಬ ತುಮುಲ ಕೂಗುಗಳು ಕೇಳಿಬಂದವು.

07136010a ದ್ರೋಣಸ್ತು ಪರಮಕ್ರುದ್ಧೋ ವಾಯವ್ಯಾಸ್ತ್ರೇಣ ಸಮ್ಯುಗೇ|

07136010c ವ್ಯಧಮತ್ತಾನ್ಯಥಾ ವಾಯುರ್ಮೇಘಾನಿವ ದುರತ್ಯಯಃ||

ದ್ರೋಣನಾದರೋ ಸಂಯುಗದಲ್ಲಿ ಪರಮ ಕ್ರುದ್ಧನಾಗಿ ವಾಯವ್ಯಾಸ್ತ್ರದಿಂದ ಅಸಾಧ್ಯ ಚಂಡಮಾರುತವು ಮೇಘಗಳನ್ನು ಚದುರಿಸುವಂತೆ ಶತ್ರುಸೇನೆಯನ್ನು ಧ್ವಂಸಗೊಳಿಸಿದನು.

07136011a ತೇ ಹನ್ಯಮಾನಾ ದ್ರೋಣೇನ ಪಾಂಚಾಲಾಃ ಪ್ರಾದ್ರವನ್ಭಯಾತ್|

07136011c ಪಶ್ಯತೋ ಭೀಮಸೇನಸ್ಯ ಪಾರ್ಥಸ್ಯ ಚ ಮಹಾತ್ಮನಃ||

ಭೀಮಸೇನ ಮತ್ತು ಮಹಾತ್ಮ ಪಾರ್ಥರು ನೋಡುತ್ತಿದ್ದಂತೆಯೇ ದ್ರೋಣನಿಂದ ಸಂಹರಿಸಲ್ಪಡುತ್ತಿದ್ದ ಪಾಂಚಾಲರು ಭಯದಿಂದ ಪಲಾಯನಗೈದರು.

07136012a ತತಃ ಕಿರೀಟೀ ಭೀಮಶ್ಚ ಸಹಸಾ ಸಮ್ನ್ಯವರ್ತತಾಂ|

07136012c ಮಹತಾ ರಥವಂಶೇನ ಪರಿಗೃಹ್ಯ ಬಲಂ ತವ||

ಆಗ ತಕ್ಷಣವೇ ಕಿರೀಟೀ ಮತ್ತು ಭೀಮರು ದೊಡ್ಡ ರಥಸೈನ್ಯದೊಂದಿಗೆ ನಿನ್ನ ಸೇನೆಯನ್ನು ಹಿಡಿದು ಆಕ್ರಮಣಿಸಿದರು.

07136013a ಬೀಭತ್ಸುರ್ದಕ್ಷಿಣಂ ಪಾರ್ಶ್ವಮುತ್ತರಂ ತು ವೃಕೋದರಃ|

07136013c ಭಾರದ್ವಾಜಂ ಶರೌಘಾಭ್ಯಾಂ ಮಹದ್ಭ್ಯಾಮಭ್ಯವರ್ಷತಾಂ||

ಎಡಗಡೆಯಿಂದ ಬೀಭತ್ಸುವೂ ಬಲಗಡೆಯಿಂದ ವೃಕೋದರನೂ ಮಹಾ ಶರಸಮೂಹಗಳನ್ನು ಭಾರದ್ವಾಜನ ಮೇಲೆ ಸುರಿಸಿದರು.

07136014a ತೌ ತದಾ ಸೃಂಜಯಾಶ್ಚೈವ ಪಾಂಚಾಲಾಶ್ಚ ಮಹಾರಥಾಃ|

07136014c ಅನ್ವಗಚ್ಚನ್ಮಹಾರಾಜ ಮತ್ಸ್ಯಾಶ್ಚ ಸಹ ಸೋಮಕೈಃ||

ಮಹಾರಾಜ! ಆಗ ಅವರಿಬ್ಬರನ್ನೂ ಸೃಂಜಯರು, ಮಹಾರಥ ಪಾಂಚಾಲರು, ಸೋಮಕರೊಂದಿಗೆ ಮತ್ಸ್ಯರು ಅನುಸರಿಸಿ ಹೋದರು.

07136015a ತಥೈವ ತವ ಪುತ್ರಸ್ಯ ರಥೋದಾರಾಃ ಪ್ರಹಾರಿಣಃ|

07136015c ಮಹತ್ಯಾ ಸೇನಯಾ ಸಾರ್ಧಂ ಜಗ್ಮುರ್ದ್ರೋಣರಥಂ ಪ್ರತಿ||

ಹಾಗೆಯೇ ರಥೋದಾರ ಪ್ರಹಾರಿ ನಿನ್ನ ಪುತ್ರರೂ ಕೂಡ ಮಹಾ ಸೇನೆಯೊಂದಿಗೆ ದ್ರೋಣನ ರಥದ ಕಡೆ ಬಂದರು.

07136016a ತತಃ ಸಾ ಭರತೀ ಸೇನಾ ವಧ್ಯಮಾನಾ ಕಿರೀಟಿನಾ|

07136016c ತಮಸಾ ನಿದ್ರಯಾ ಚೈವ ಪುನರೇವ ವ್ಯದೀರ್ಯತ||

ಆಗ ಕಿರೀಟಿಯಿಂದ ಸಂಹರಿಸಲ್ಪಡುತ್ತಿದ್ದ ಆ ಭಾರತೀ ಸೇನೆಯು ನಿದ್ರೆ ಮತ್ತು ಕತ್ತಲೆಗಳಿಂದಾಗಿ ಪುನಃ ಭಗ್ನವಾಗಿ ಹೋಯಿತು.

07136017a ದ್ರೋಣೇನ ವಾರ್ಯಮಾಣಾಸ್ತೇ ಸ್ವಯಂ ತವ ಸುತೇನ ಚ|

07136017c ನ ಶಕ್ಯಂತೇ ಮಹಾರಾಜ ಯೋಧಾ ವಾರಯಿತುಂ ತದಾ||

ಮಹಾರಾಜ! ಓಡಿಹೋಗುತ್ತಿದ್ದವರನ್ನು ದ್ರೋಣ ಮತ್ತು ಸ್ವಯಂ ನಿನ್ನ ಮಗನು ತಡೆಯಲು ಪ್ರಯತ್ನಿಸಿದರೂ ಆ ಯೋಧರನ್ನು ತಡೆಯಲು ಅವರು ಶಕ್ಯರಾಗಲಿಲ್ಲ.

07136018a ಸಾ ಪಾಂಡುಪುತ್ರಸ್ಯ ಶರೈರ್ದಾರ್ಯಮಾಣಾ ಮಹಾಚಮೂಃ|

07136018c ತಮಸಾ ಸಂವೃತೇ ಲೋಕೇ ವ್ಯದ್ರವತ್ಸರ್ವತೋಮುಖೀ||

ಪಾಂಡುಪುತ್ರನ ಶರಗಳಿಂದ ಇರಿಯಲ್ಪಡುತ್ತಿದ್ದ ಆ ಮಹಾಸೇನೆಯು ಕತ್ತಲೆಯಿಂದ ಆವರಿಸಲ್ಪಟ್ಟಿದ್ದ ಆ ಲೋಕದಲ್ಲಿ ಸರ್ವತೋಮುಖಿಯಾಗಿ ಓಡಿಹೋಯಿತು.

07136019a ಉತ್ಸೃಜ್ಯ ಶತಶೋ ವಾಹಾಂಸ್ತತ್ರ ಕೇ ಚಿನ್ನರಾಧಿಪಾಃ|

07136019c ಪ್ರಾದ್ರವಂತ ಮಹಾರಾಜ ಭಯಾವಿಷ್ಟಾಃ ಸಮಂತತಃ||

ಮಹಾರಾಜ! ಕೆಲವು ನರಾಧಿಪರು ನೂರಾರು ವಾಹನಗಳನ್ನು ಅಲ್ಲಿಯೇ ಬಿಟ್ಟು ಭಯಾವಿಷ್ಟರಾಗಿ ಎಲ್ಲಕಡೆ ಓಡಿಹೋದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಷಟ್ತ್ರಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾಮೂವತ್ತಾರನೇ ಅಧ್ಯಾಯವು.

Related image

Comments are closed.