Drona Parva: Chapter 126

ದ್ರೋಣ ಪರ್ವ: ಜಯದ್ರಥವಧ ಪರ್ವ

೧೨೬

ದ್ರೋಣನ ಮಾತು (೧-೩೯).

07126001 ಧೃತರಾಷ್ಟ್ರ ಉವಾಚ|

07126001a ಸಿಂಧುರಾಜೇ ಹತೇ ತಾತ ಸಮರೇ ಸವ್ಯಸಾಚಿನಾ|

07126001c ತಥೈವ ಭೂರಿಶ್ರವಸಿ ಕಿಮಾಸೀದ್ವೋ ಮನಸ್ತದಾ||

ಧೃತರಾಷ್ಟ್ರನು ಹೇಳಿದನು: “ಅಯ್ಯಾ! ಸಮರದಲ್ಲಿ ಸವ್ಯಸಾಚಿಯಿಂದ ಸಿಂಧುರಾಜ ಮತ್ತು ಹಾಗೆಯೇ ಭೂರಿಶ್ರವರು ಹತರಾಗಲು ನಿನ್ನ ಮನಸ್ಸು ಹೇಗಿದ್ದಿತು?

07126002a ದುರ್ಯೋಧನೇನ ಚ ದ್ರೋಣಸ್ತಥೋಕ್ತಃ ಕುರುಸಂಸದಿ|

07126002c ಕಿಮುಕ್ತವಾನ್ಪರಂ ತಸ್ಮಾತ್ತನ್ಮಮಾಚಕ್ಷ್ವ ಸಂಜಯ||

ಸಂಜಯ! ಕುರುಸಂಸದಿಯಲ್ಲಿದ್ದ ದ್ರೋಣನಿಗೆ ದುರ್ಯೋಧನನು ಹೀಗೆ ಹೇಳಲು ಅವನು ಅವನಿಗೆ ಉತ್ತರವಾಗಿ ಏನು ಹೇಳಿದನೆನ್ನುವುದನ್ನು ನನಗೆ ಹೇಳು.”

07126003 ಸಂಜಯ ಉವಾಚ|

07126003a ನಿಷ್ಟಾನಕೋ ಮಹಾನಾಸೀತ್ಸೈನ್ಯಾನಾಂ ತವ ಭಾರತ|

07126003c ಸೈಂಧವಂ ನಿಹತಂ ದೃಷ್ಟ್ವಾ ಭೂರಿಶ್ರವಸಮೇವ ಚ||

ಸಂಜಯನು ಹೇಳಿದನು: “ಭಾರತ! ಸೈಂಧವನೂ ಭೂರಿಶ್ರವನೂ ಹತರಾದುದನ್ನು ಕಂಡು ನಿನ್ನ ಸೇನೆಗಳಲ್ಲಿ ಮಹಾ ಶೋಕವುಂಟಾಯಿತು.

07126004a ಮಂತ್ರಿತಂ ತವ ಪುತ್ರಸ್ಯ ತೇ ಸರ್ವಮವಮೇನಿರೇ|

07126004c ಯೇನ ಮಂತ್ರೇಣ ನಿಹತಾಃ ಶತಶಃ ಕ್ಷತ್ರಿಯರ್ಷಭಾಃ||

ಯಾರ ಸಲಹೆಯಿಂದ ನೂರಾರು ಕ್ಷತ್ರಿಯರ್ಷಭರು ಹತರಾದರೋ ಆ ನಿನ್ನ ಮಗನ ಸಲಹೆಯನ್ನು ಎಲ್ಲರೂ ಅನಾದರಿಸಿದರು.

07126005a ದ್ರೋಣಸ್ತು ತದ್ವಚಃ ಶ್ರುತ್ವಾ ಪುತ್ರಸ್ಯ ತವ ದುರ್ಮನಾಃ|

07126005c ಮುಹೂರ್ತಮಿವ ತು ಧ್ಯಾತ್ವಾ ಭೃಶಮಾರ್ತೋಽಭ್ಯಭಾಷತ||

ದ್ರೋಣನಾದರೋ ನಿನ್ನ ಮಗನ ಆ ಮಾತನ್ನು ಕೇಳಿ ದುಃಖಿತ ಮನವುಳ್ಳವನಾಗಿ, ಒಂದು ಮುಹೂರ್ತಕಾಲ ಯೋಚಿಸಿ, ತುಂಬಾ ಆರ್ತನಾಗಿ ಹೇಳಿದನು:

07126006a ದುರ್ಯೋಧನ ಕಿಮೇವಂ ಮಾಂ ವಾಕ್ಶರೈರಭಿಕೃಂತಸಿ|

07126006c ಅಜಯ್ಯಂ ಸಮರೇ ನಿತ್ಯಂ ಬ್ರುವಾಣಂ ಸವ್ಯಸಾಚಿನಂ||

“ದುರ್ಯೋಧನ! ಮಾತಿನ ಶರಗಳಿಂದ ನನ್ನನ್ನೇಕೆ ತುಂಡು ತುಂಡು ಮಾಡುತ್ತಿರುವೆ? ಸಮರದಲ್ಲಿ ಸವ್ಯಸಾಚಿಯು ಅಜೇಯನೆಂದು ಯಾವಾಗಲೂ ಹೇಳಿಕೊಂಡು ಬಂದಿದ್ದೇನೆ.

07126007a ಏತೇನೈವಾರ್ಜುನಂ ಜ್ಞಾತುಮಲಂ ಕೌರವ ಸಂಯುಗೇ|

07126007c ಯಚ್ಚಿಖಂಡ್ಯವಧೀದ್ಭೀಷ್ಮಂ ಪಾಲ್ಯಮಾನಃ ಕಿರೀಟಿನಾ||

ಕೌರವ! ಸಂಯುಗದಲ್ಲಿ ಅರ್ಜುನನ ಅತುಲ ಪರಾಕ್ರಮವನ್ನು ತಿಳಿದುಕೊಳ್ಳಲು ಕಿರೀಟಿಯಿಂದ ರಕ್ಷಿಸಲ್ಪಟ್ಟ ಶಿಖಂಡಿಯು ಭೀಷ್ಮನನ್ನು ವಧಿಸಿದುದೊಂದೇ ಸಾಕು.

07126008a ಅವಧ್ಯಂ ನಿಹತಂ ದೃಷ್ಟ್ವಾ ಸಂಯುಗೇ ದೇವಮಾನುಷೈಃ|

07126008c ತದೈವಾಜ್ಞಾಸಿಷಮಹಂ ನೇಯಮಸ್ತೀತಿ ಭಾರತೀ||

ಸಂಯುಗದಲ್ಲಿ ದೇವಮಾನುಷರಿಂದಲೂ ಅವಧ್ಯನಾಗಿದ್ದ ಅವನು ಹತನಾದುದನ್ನು ನೋಡಿದಾಗಲೇ ಭಾರತೀ ಸೇನೆಯು ಉಳಿಯುವುದಿಲ್ಲವೆಂದು ತಿಳಿದುಕೊಂಡಿದ್ದೆ.

07126009a ಯಂ ಪುಂಸಾಂ ತ್ರಿಷು ಲೋಕೇಷು ಸರ್ವಶೂರಮಮಂಸ್ಮಹಿ|

07126009c ತಸ್ಮಿನ್ವಿನಿಹತೇ ಶೂರೇ ಕಿಂ ಶೇಷಂ ಪರ್ಯುಪಾಸ್ಮಹೇ||

ಮೂರುಲೋಕಗಳಲ್ಲಿರುವ ಎಲ್ಲ ಪುರುಷರಲ್ಲಿ ಯಾರನ್ನು ಶೂರನೆಂದು ನಾವು ಪರಿಗಣಿಸಿದ್ದೆವೋ ಆ ಶೂರನೇ ಹತನಾದ ಮೇಲೆ ಬೇರೆ ಯಾರನ್ನು ಶರಣುಹೋಗಬಲ್ಲೆವು?

07126010a ಯಾನ್ಸ್ಮ ತಾನ್ಗ್ಲಹತೇ ತಾತಃ ಶಕುನಿಃ ಕುರುಸಂಸದಿ|

07126010c ಅಕ್ಷಾನ್ನ ತೇಽಕ್ಷಾ ನಿಶಿತಾ ಬಾಣಾಸ್ತೇ ಶತ್ರುತಾಪನಾಃ||

07126011a ತ ಏತೇ ಘ್ನಂತಿ ನಸ್ತಾತ ವಿಶಿಖಾ ಜಯಚೋದಿತಾಃ|

07126011c ಯಾಂಸ್ತದಾ ಖ್ಯಾಪ್ಯಮಾನಾಂಸ್ತ್ವಂ ವಿದುರೇಣ ನ ಬುಧ್ಯಸೇ||

ಮಗೂ! “ಕುರುಸಂಸದಿಯಲ್ಲಿ ಶಕುನಿಯು ಯಾವ ಪಗಡೆಕಾಯಿಗಳನ್ನು ನಡೆಸುತ್ತಿದ್ದನೋ ಅವು ನಿಜವಾದ ಪಗಡೆಕಾಯಿಗಳಲ್ಲ, ಶತ್ರುಗಳನ್ನು ಸುಡುವಂತಹ ಬಾಣಗಳು, ಅಯ್ಯಾ! ಜಯಚೋದಿತರಾದ ಇವು ವಿಶಿಖೆಗಳಾಗಿ ಕೊಲ್ಲುವುದಿಲ್ಲ!” ಎಂದು ಹೇಳಿದ ವಿದುರನನ್ನು ನೀನು ಅಂದು ಅರ್ಥಮಾಡಿಕೊಳ್ಳಲಿಲ್ಲ.

07126012a ತಾಸ್ತಾ ವಿಲಪತಶ್ಚಾಪಿ ವಿದುರಸ್ಯ ಮಹಾತ್ಮನಃ|

07126012c ಧೀರಸ್ಯ ವಾಚೋ ನಾಶ್ರೌಷೀಃ ಕ್ಷೇಮಾಯ ವದತಃ ಶಿವಾಃ||

ನಿನ್ನ ಕ್ಷೇಮಕ್ಕಾಗಿ ಮಹಾತ್ಮ ವಿದುರನು ವಿಲಪಿಸುತ್ತಿದ್ದರೂ, ಮಂಗಳ ಮಾತನ್ನು ಆಡುತ್ತಿದ್ದರೂ ನೀನು ಅವನ ಮಾತನ್ನು ಕೇಳಲಿಲ್ಲ.

07126013a ತದಿದಂ ವರ್ತತೇ ಘೋರಮಾಗತಂ ವೈಶಸಂ ಮಹತ್|

07126013c ತಸ್ಯಾವಮಾನಾದ್ವಾಕ್ಯಸ್ಯ ದುರ್ಯೋಧನ ಕೃತೇ ತವ||

ದುರ್ಯೋಧನ! ಅವನ ಆ ಮಾತುಗಳನ್ನು ಅನಾದರಿಸಿದುದರಿಂದ ಬಂದಿರುವ ಮತ್ತು ನಡೆಯುತ್ತಿರುವ ಈ ಘೋರ ಮಹಾ ನಾಶವು ನೀನೇ ಮಾಡಿದ ಕೆಲಸದಿಂದಾಗಿ!

07126014a ಯಚ್ಚ ನಃ ಪ್ರೇಕ್ಷಮಾಣಾನಾಂ ಕೃಷ್ಣಾಮಾನಾಯಯಃ ಸಭಾಂ|

07126014c ಅನರ್ಹತೀಂ ಕುಲೇ ಜಾತಾಂ ಸರ್ವಧರ್ಮಾನುಚಾರಿಣೀಂ||

ನಾವೆಲ್ಲರೂ ನೋಡುತ್ತಿದ್ದಂತೆಯೇ ಅನರ್ಹಳಾದ, ಉತ್ತಮ ಕುಲದಲ್ಲಿ ಹುಟ್ಟಿದ, ಸರ್ವಧರ್ಮಾನುಚಾರಿಣಿ ಕೃಷ್ಣೆಯನ್ನು ಸಭೆಗೆ ಸೆಳೆದು ತರಿಸಿ ಅಪಮಾನಿಸಿದೆ.

07126015a ತಸ್ಯಾಧರ್ಮಸ್ಯ ಗಾಂಧಾರೇ ಫಲಂ ಪ್ರಾಪ್ತಮಿದಂ ತ್ವಯಾ|

07126015c ನೋ ಚೇತ್ಪಾಪಂ ಪರೇ ಲೋಕೇ ತ್ವಮರ್ಚ್ಚೇಥಾಸ್ತತೋಽಧಿಕಂ||

ಗಾಂಧಾರೇ! ಆ ಅಧರ್ಮದ ಫಲವನ್ನು ನೀನು ಪಡೆಯುತ್ತಿದ್ದೀಯೆ. ಇಲ್ಲವಾದರೆ ನೀನು ಪರಲೋಕದಲ್ಲಿ ಇದಕ್ಕೂ ಅಧಿಕ ಫಲವನ್ನು ಅನುಭವಿಸಬೇಕಾಗಿದ್ದಿತು.

07126016a ಯಚ್ಚ ತಾನ್ಪಾಂಡವಾನ್ದ್ಯೂತೇ ವಿಷಮೇಣ ವಿಜಿತ್ಯ ಹ|

07126016c ಪ್ರಾವ್ರಾಜಯಸ್ತದಾರಣ್ಯೇ ರೌರವಾಜಿನವಾಸಸಃ||

ಆ ಪಾಂಡವರನ್ನು ದ್ಯೂತದಲ್ಲಿ ಮೋಸದಿಂದ ಗೆದ್ದು ಮೃಗಚರ್ಮಧರರನ್ನಾಗಿ ಮಾಡಿ ಅರಣ್ಯಕ್ಕೆ ಕಳುಹಿಸಿದೆ.

07126017a ಪುತ್ರಾಣಾಮಿವ ಚೈತೇಷಾಂ ಧರ್ಮಮಾಚರತಾಂ ಸದಾ|

07126017c ದ್ರುಃಶೇತ್ಕೋ ನು ನರೋ ಲೋಕೇ ಮದನ್ಯೋ ಬ್ರಾಹ್ಮಣಬ್ರುವಃ||

ನನಗೆ ಪುತ್ರರಂತಿದ್ದ, ಸದಾ ಧರ್ಮಾಚರಣೆಯಲ್ಲಿದ್ದ ಅವರಿಗೆ ನಾನು ದ್ರೋಹವೆಸಗುತ್ತಿದ್ದೇನೆ. ಲೋಕದ ಮನುಷ್ಯರು ನನ್ನಂತಹ ಬೇರೆ ಯಾರನ್ನು ತಾನೇ ಬ್ರಾಹ್ಮಣನೆಂದು ಕರೆಯುತ್ತಾರೆ?

07126018a ಪಾಂಡವಾನಾಮಯಂ ಕೋಪಸ್ತ್ವಯಾ ಶಕುನಿನಾ ಸಹ|

07126018c ಆಹೃತೋ ಧೃತರಾಷ್ಟ್ರಸ್ಯ ಸಮ್ಮತೇ ಕುರುಸಂಸದಿ||

ಕುರುಸಂಸದಿಯಲ್ಲಿ ಧೃತರಾಷ್ಟ್ರನ ಸಮ್ಮತಿಯಲ್ಲಿ ಶಕುನಿಯೊಂದಿಗೆ ನೀನೇ ಪಾಂಡವರ ಈ ಕೋಪವನ್ನು ಬರಮಾಡಿಕೊಂಡೆ.

07126019a ದುಃಶಾಸನೇನ ಸಂಯುಕ್ತಃ ಕರ್ಣೇನ ಪರಿವರ್ಧಿತಃ|

07126019c ಕ್ಷತ್ತುರ್ವಾಕ್ಯಮನಾದೃತ್ಯ ತ್ವಯಾಭ್ಯಸ್ತಃ ಪುನಃ ಪುನಃ||

ದುಃಶಾಸನ-ಕರ್ಣರ ಸಹಾಯದಿಂದ ಅದನ್ನು ಹೆಚ್ಚಿಸಿದೆ. ಕ್ಷತ್ತನ ವಾಕ್ಯಗಳನ್ನು ಪುನಃ ಪುನಃ ಅನಾದರಿಸಿ ನೀನು ಇದನ್ನು ವೃದ್ಧಿಸಿದೆ.

07126020a ಯತ್ತತ್ಸರ್ವೇ ಪರಾಭೂಯ ಪರ್ಯವಾರಯತಾರ್ಜುನಿಂ|

07126020c ಸಿಂಧುರಾಜಾನಮಾಶ್ರಿತ್ಯ ಸ ವೋ ಮಧ್ಯೇ ಕಥಂ ಹತಃ||

ನೀವೆಲ್ಲರೂ ಒಟ್ಟಾಗಿ, ಸಿಂಧುರಾಜನನ್ನು ಆಶ್ರಯಿಸಿ ಆರ್ಜುನಿಯನ್ನು ಸುತ್ತುವರೆದು ಮಧ್ಯದಲ್ಲಿದ್ದ ಅವನನ್ನು ಹೇಗೆ ಕೊಂದಿರಿ?

07126021a ಕಥಂ ತ್ವಯಿ ಚ ಕರ್ಣೇ ಚ ಕೃಪೇ ಶಲ್ಯೇ ಚ ಜೀವತಿ|

07126021c ಅಶ್ವತ್ಥಾಮ್ನಿ ಚ ಕೌರವ್ಯ ನಿಧನಂ ಸೈಂಧವೋಽಗಮತ್||

ಕೌರವ್ಯ! ನೀನು, ಕರ್ಣ, ಕೃಪ, ಶಲ್ಯ ಮತ್ತು ಅಶ್ವತ್ಥಾಮರು ಜೀವಿತರಾಗಿರುವಾಗ ಸೈಂಧವನು ಹೇಗೆ ನಿಧನವನ್ನು ಹೊಂದಿದನು?

07126022a ಯದ್ವಸ್ತತ್ಸರ್ವರಾಜಾನಸ್ತೇಜಸ್ತಿಗ್ಮಮುಪಾಸತೇ|

07126022c ಸಿಂಧುರಾಜಂ ಪರಿತ್ರಾತುಂ ಸ ವೋ ಮಧ್ಯೇ ಕಥಂ ಹತಃ||

ಯಾವಾಗ ಎಲ್ಲ ರಾಜರೂ ತಿಗ್ಮ ತೇಜಸ್ಸನ್ನು ಬಳಸಿ ಸಿಂಧುರಾಜನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಮಧ್ಯದಲ್ಲಿದ್ದ ಅವನು ಹೇಗೆ ಹತನಾದನು?

07126023a ಮಯ್ಯೇವ ಹಿ ವಿಶೇಷೇಣ ತಥಾ ದುರ್ಯೋಧನ ತ್ವಯಿ|

07126023c ಆಶಂಸತ ಪರಿತ್ರಾಣಮರ್ಜುನಾತ್ಸ ಮಹೀಪತಿಃ||

ದುರ್ಯೋಧನ! ಆ ಮಹೀಪತಿಯು ಅರ್ಜುನನಿಂದ ರಕ್ಷಣೆಯನ್ನು ವಿಶೇಷವಾಗಿ ನನ್ನಿಂದ ಮತ್ತು ನಿನ್ನಿಂದ ಆಶಿಸಿದ್ದನು.

07126024a ತತಸ್ತಸ್ಮಿನ್ಪರಿತ್ರಾಣಮಲಬ್ಧವತಿ ಫಲ್ಗುನಾತ್|

07126024c ನ ಕಿಂ ಚಿದನುಪಶ್ಯಾಮಿ ಜೀವಿತತ್ರಾಣಮಾತ್ಮನಃ||

ಫಲ್ಗುನನಿಂದ ಅವನಿಗೆ ರಕ್ಷಣೆಯನ್ನು ಒದಗಿಸದೇ ಇದ್ದ ನಾನು ನನ್ನ ಜೀವನದ ರಕ್ಷಣೆಯನ್ನೂ ಹೇಗೆ ಮಾಡಿಕೊಳ್ಳುವೆನೋ!

07126025a ಮಜ್ಜಂತಮಿವ ಚಾತ್ಮಾನಂ ಧೃಷ್ಟದ್ಯುಮ್ನಸ್ಯ ಕಿಲ್ಬಿಷೇ|

07126025c ಪಶ್ಯಾಮ್ಯಹತ್ವಾ ಪಾಂಚಾಲಾನ್ಸಹ ತೇನ ಶಿಖಂಡಿನಾ||

ಆ ಶಿಖಂಡಿಯೊಡನೆ ಪಾಂಚಾಲರನ್ನು ಸಂಹರಿಸದೇ ನನ್ನನ್ನು ನಾನು ಧೃಷ್ಟದ್ಯುಮ್ನನೆಂಬ ಕಿಲ್ಬಿಷದಲ್ಲಿ ಮುಳುಗಿ ಹೋಗಿರುವೆನೋ ಎಂದು ನನಗೆ ತೋರುತ್ತಿದೆ.

07126026a ತನ್ಮಾ ಕಿಮಭಿತಪ್ಯಂತಂ ವಾಕ್ಶರೈರಭಿಕೃಂತಸಿ|

07126026c ಅಶಕ್ತಃ ಸಿಂಧುರಾಜಸ್ಯ ಭೂತ್ವಾ ತ್ರಾಣಾಯ ಭಾರತ||

ಭಾರತ! ಸಿಂಧುರಾಜನಿಗೆ ರಕ್ಷಣೆಯನ್ನು ನೀಡಲು ಅಶಕ್ತನಾದ ನೀನು ಏನು ಮಾಡಬೇಕೆಂದು ಪರಿತಪಿಸುತ್ತಿರುವ ನನ್ನನ್ನು ಏಕೆ ಮಾತಿನ ಶರಗಳಿಂದ ಚುಚ್ಚುತ್ತಿರುವೆ?

07126027a ಸೌವರ್ಣಂ ಸತ್ಯಸಂಧಸ್ಯ ಧ್ವಜಮಕ್ಲಿಷ್ಟಕರ್ಮಣಃ|

07126027c ಅಪಶ್ಯನ್ಯುಧಿ ಭೀಷ್ಮಸ್ಯ ಕಥಮಾಶಂಸಸೇ ಜಯಂ||

ಯುದ್ಧದಲ್ಲಿ ಸತ್ಯಸಂಧ ಅಕ್ಲಿಷ್ಟಕರ್ಮಿ ಭೀಷ್ಮನ ಸುವರ್ಣಧ್ವಜವನ್ನು ಕಾಣದೇ ನಾವು ಹೇಗೆ ಜಯವನ್ನು ಆಶಿಸಬಲ್ಲೆವು?

07126028a ಮಧ್ಯೇ ಮಹಾರಥಾನಾಂ ಚ ಯತ್ರಾಹನ್ಯತ ಸೈಂಧವಃ|

07126028c ಹತೋ ಭೂರಿಶ್ರವಾಶ್ಚೈವ ಕಿಂ ಶೇಷಂ ತತ್ರ ಮನ್ಯಸೇ||

ಮಹಾರಥರ ಮಧ್ಯದಲ್ಲಿದ್ದ ಸೈಂಧವನು ಹತನಾಗಲು, ಭೂರಿಶ್ರವನೂ ಕೂಡ ಹತನಾಗಲು ಯೋಚಿಸಲು ಇನ್ನೇನು ಉಳಿದಿದೆ?

07126029a ಕೃಪ ಏವ ಚ ದುರ್ಧರ್ಷೋ ಯದಿ ಜೀವತಿ ಪಾರ್ಥಿವ|

07126029c ಯೋ ನಾಗಾತ್ಸಿಂಧುರಾಜಸ್ಯ ವರ್ತ್ಮ ತಂ ಪೂಜಯಾಮ್ಯಹಂ||

ಪಾರ್ಥಿವ! ಸಿಂಧುರಾಜನ ಗತಿಯಲ್ಲಿಯೇ ಹೋಗದೇ ಜೀವಿಸಿರುವ ಕೃಪನೇ ದುರ್ಧರ್ಷನೆಂದು ನಾನು ಗೌರವಿಸುತ್ತೇನೆ.

07126030a ಯಚ್ಚಾಪಶ್ಯಂ ಹತಂ ಭೀಷ್ಮಂ ಪಶ್ಯತಸ್ತೇಽನುಜಸ್ಯ ವೈ|

07126030c ದುಃಶಾಸನಸ್ಯ ಕೌರವ್ಯ ಕುರ್ವಾಣಂ ಕರ್ಮ ದುಷ್ಕರಂ||

07126030e ಅವಧ್ಯಕಲ್ಪಂ ಸಂಗ್ರಾಮೇ ದೇವೈರಪಿ ಸವಾಸವೈಃ|

07126031a ನ ತೇ ವಸುಂಧರಾಸ್ತೀತಿ ತದಹಂ ಚಿಂತಯೇ ನೃಪ||

ಕೌರವ್ಯ! ನೃಪ! ಸಂಗ್ರಾಮದಲ್ಲಿ ವಾಸವನೊಂದಿಗೆ ದೇವತೆಗಳಿಗೂ ಅವಧ್ಯನೆಂದೆನಿಸಿಕೊಂಡಿರುವ, ದುಷ್ಕರ ಕರ್ಮಗಳನ್ನೆಸಗುವ ಭೀಷ್ಮನು ನಿನ್ನ ಅನುಜ ದುಃಶಾಸನನು ನೋಡುತ್ತಿರುವಂತೆಯೇ ಹತನಾದುದನ್ನು ಕಂಡಾಗಲೇ ನಾನು ಈ ವಸುಂಧರೆಯು ನಿನ್ನದಾಗುವುದಿಲ್ಲವೆಂದು ಯೋಚಿಸಿದ್ದೆ.

07126031c ಇಮಾನಿ ಪಾಂಡವಾನಾಂ ಚ ಸೃಂಜಯಾನಾಂ ಚ ಭಾರತ|

07126031e ಅನೀಕಾನ್ಯಾದ್ರವಂತೇ ಮಾಂ ಸಹಿತಾನ್ಯದ್ಯ ಮಾರಿಷ||

ಮಾರಿಷ! ಭಾರತ! ಈ ಪಾಂಡವರು ಮತ್ತು ಸೃಂಜಯರ ಸೇನೆಗಳು ಒಟ್ಟಾಗಿ ಇಂದು ನನ್ನ ಮೇಲೆ ಬಂದು ಬೀಳಲಿ.

07126032a ನಾಹತ್ವಾ ಸರ್ವಪಾಂಚಾಲಾನ್ಕವಚಸ್ಯ ವಿಮೋಕ್ಷಣಂ|

07126032c ಕರ್ತಾಸ್ಮಿ ಸಮರೇ ಕರ್ಮ ಧಾರ್ತರಾಷ್ಟ್ರ ಹಿತಂ ತವ||

ಧಾರ್ತರಾಷ್ಟ್ರ! ಸರ್ವಪಾಂಚಾಲರನ್ನು ಸಂಹರಿಸದೆಯೇ ನಾನು ಈ ಕವಚವನ್ನು ಬಿಚ್ಚುವುದಿಲ್ಲ. ಸಮರದಲ್ಲಿ ನಿನಗೆ ಹಿತವಾದ ಈ ಕಾರ್ಯವನ್ನು ಮಾಡುತ್ತೇನೆ.

07126033a ರಾಜನ್ಬ್ರೂಯಾಃ ಸುತಂ ಮೇ ತ್ವಮಶ್ವತ್ಥಾಮಾನಮಾಹವೇ|

07126033c ನ ಸೋಮಕಾಃ ಪ್ರಮೋಕ್ತವ್ಯಾ ಜೀವಿತಂ ಪರಿರಕ್ಷತಾ||

ರಾಜನ್! ಆಹವದಲ್ಲಿ ನನ್ನ ಮಗ ಅಶ್ವತ್ಥಾಮನಿಗೆ ನೀನು ಇದನ್ನು ಹೇಳಬೇಕು: “ಜೀವವನ್ನು ರಕ್ಷಿಸಿಕೊಳ್ಳುವ ಆಸೆಯಿಂದ ಸೋಮಕರನ್ನು ವಧಿಸದೇ ಬಿಟ್ಟುಬಿಡಬಾರದು!

07126034a ಯಚ್ಚ ಪಿತ್ರಾನುಶಿಷ್ಟೋಽಸಿ ತದ್ವಚಃ ಪರಿಪಾಲಯ|

07126034c ಆನೃಶಂಸ್ಯೇ ದಮೇ ಸತ್ಯೇ ಆರ್ಜವೇ ಚ ಸ್ಥಿರೋ ಭವ||

ಹೀಗೆ ತಂದೆಯಿಂದ ಅನುಶಾಸಿತನಾಗಿರುವೆ. ಆ ವಚನವನ್ನು ಪರಿಪಾಲಿಸು. ದಯೆ, ದಮ, ಸತ್ಯ ಮತ್ತು ಆರ್ಜವಗಳಲ್ಲಿ ನೀನು ಸ್ಠಿರನಾಗಿರು.

07126035a ಧರ್ಮಾರ್ಥಕಾಮಕುಶಲೋ ಧರ್ಮಾರ್ಥಾವಪ್ಯಪೀಡಯನ್|

07126035c ಧರ್ಮಪ್ರಧಾನಃ ಕಾರ್ಯಾಣಿ ಕುರ್ಯಾಶ್ಚೇತಿ ಪುನಃ ಪುನಃ||

ಧರ್ಮಾರ್ಥಕುಶಲನಾಗಿದ್ದೀಯೆ! ಧರ್ಮಾರ್ಥಗಳನ್ನು ಪೀಡಿಸಬೇಡ! ಧರ್ಮಪ್ರಧಾನ ಕಾರ್ಯಗಳನ್ನೇ ಪುನಃ ಪುನಃ ಮಾಡುತ್ತಿರು!” ಎಂದು.

07126036a ಚಕ್ಷುರ್ಮನೋಭ್ಯಾಂ ಸಂತೋಷ್ಯಾ ವಿಪ್ರಾಃ ಸೇವ್ಯಾಶ್ಚ ಶಕ್ತಿತಃ|

07126036c ನ ಚೈಷಾಂ ವಿಪ್ರಿಯಂ ಕಾರ್ಯಂ ತೇ ಹಿ ವಹ್ನಿಶಿಖೋಪಮಾಃ||

ನೋಟ ಮತ್ತು ಮನಸ್ಸುಗಳಿಂದ ಶಕ್ತಿಯಿದ್ದಷ್ಟು ವಿಪ್ರರ ಸೇವೆಮಾಡಿ ಸಂತೋಷಗೊಳಿಸಬೇಕು. ಬೆಂಕಿಯ ಜ್ವಾಲೆಗಳಂತಿರುವ ಅವರಿಗೆ ವಿಪ್ರಿಯವಾದ ಕೆಲಸಗಳನ್ನು ಮಾಡಬಾರದು.

07126037a ಏಷ ತ್ವಹಮನೀಕಾನಿ ಪ್ರವಿಶಾಮ್ಯರಿಸೂದನ|

07126037c ರಣಾಯ ಮಹತೇ ರಾಜಂಸ್ತ್ವಯಾ ವಾಕ್ಶಲ್ಯಪೀಡಿತಃ||

ಅರಿಸೂದನ! ರಾಜನ್! ಇದೋ! ನಿನ್ನ ಈ ಮಾತಿನ ಈಟಿಯಿಂದ ತುಂಬಾ ಪೀಡಿತನಾಗಿ ನಾನು ರಣದಲ್ಲಿ ಸೇನೆಗಳನ್ನು ಸೇರುತ್ತಿದ್ದೇನೆ.

07126038a ತ್ವಂ ಚ ದುರ್ಯೋಧನ ಬಲಂ ಯದಿ ಶಕ್ನೋಷಿ ಧಾರಯ|

07126038c ರಾತ್ರಾವಪಿ ಹಿ ಯೋತ್ಸ್ಯಂತೇ ಸಂರಬ್ಧಾಃ ಕುರುಸೃಂಜಯಾಃ||

ದುರ್ಯೋಧನ! ಸಾಧ್ಯವಾದರೆ ನೀನೂ ಕೂಡ ಸೇನೆಯನ್ನು ರಕ್ಷಿಸು. ರಾತ್ರಿಯಾದರೂ ಕೂಡ ಸಂರಬ್ಧ ಕುರು-ಸೃಂಜಯರು ಯುದ್ಧಮಾಡುತ್ತಾರೆ.”

07126039a ಏವಮುಕ್ತ್ವಾ ತತಃ ಪ್ರಾಯಾದ್ದ್ರೋಣಃ ಪಾಂಡವಸೃಂಜಯಾನ್|

07126039c ಮುಷ್ಣನ್ ಕ್ಷತ್ರಿಯತೇಜಾಂಸಿ ನಕ್ಷತ್ರಾಣಾಮಿವಾಂಶುಮಾನ್||

ಹೀಗೆ ಹೇಳಿ ದ್ರೋಣನು ಸೂರ್ಯನು ನಕ್ಷತ್ರಗಳಿಂದ ಹೇಗೋ ಹಾಗೆ ಕ್ಷತ್ರಿಯರ ತೇಜಸ್ಸನ್ನು ಅಪಹರಿಸುತ್ತಾ ಪಾಂಡವ-ಸೃಂಜಯರ ಕಡೆ ತೆರಳಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣವಾಕ್ಯೇ ಷಟ್ವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣವಾಕ್ಯ ಎನ್ನುವ ನೂರಾಇಪ್ಪತ್ತಾರನೇ ಅಧ್ಯಾಯವು.

Image result for lotus against white background

Comments are closed.