Drona Parva: Chapter 124

ದ್ರೋಣ ಪರ್ವ: ಜಯದ್ರಥವಧ ಪರ್ವ

೧೨೪

ಜಯದ್ರಥನ ವಧೆಯಿಂದ ಹರ್ಷಿತನಾದ ಯುಧಿಷ್ಠಿರನು ಕೃಷ್ಣನನ್ನು ಪ್ರಶಂಸಿದುದು (೧-೧೮). ಕೃಷ್ಣನ ಪ್ರತಿಮಾತು (೧೯-೨೬). ಯುಧಿಷ್ಠಿರನು ಭೀಮಸೇನ-ಸಾತ್ಯಕಿಯರನ್ನೂ ಅಭಿನಂದಿಸಿದುದು (೨೭-೩೩).

07124001 ಸಂಜಯ ಉವಾಚ|

07124001a ತತೋ ಯುಧಿಷ್ಠಿರೋ ರಾಜಾ ರಥಾದಾಪ್ಲುತ್ಯ ಭಾರತ|

07124001c ಪರ್ಯಷ್ವಜತ್ತದಾ ಕೃಷ್ಣಾವಾನಂದಾಶ್ರುಪರಿಪ್ಲುತಃ||

ಸಂಜಯನು ಹೇಳಿದನು: “ಭಾರತ! ಆಗ ರಾಜಾ ಯುಧಿಷ್ಠಿರನು ರಥದಿಂದ ಹಾರಿ ಇಳಿದು ಆನಂದಾಶ್ರುಗಳಿಂದ ತುಂಬಿದವನಾಗಿ ಕೃಷ್ಣರನ್ನು ಅಪ್ಪಿಕೊಂಡನು.

07124002a ಪ್ರಮೃಜ್ಯ ವದನಂ ಶುಭ್ರಂ ಪುಂಡರೀಕಸಮಪ್ರಭಂ|

07124002c ಅಬ್ರವೀದ್ವಾಸುದೇವಂ ಚ ಪಾಂಡವಂ ಚ ಧನಂಜಯಂ||

ಕಮಲಕ್ಕೆ ಸಮಾನ ಪ್ರಭೆಯುಳ್ಳ ಶುಭ್ರ ಮುಖವನ್ನು ಒರೆಸಿಕೊಂಡು ವಾಸುದೇವ ಮತ್ತು ಪಾಂಡವ ಧನಂಜಯನಿಗೆ ಹೇಳಿದನು:

07124003a ದಿಷ್ಟ್ಯಾ ಪಶ್ಯಾಮಿ ಸಂಗ್ರಾಮೇ ತೀರ್ಣಭಾರೌ ಮಹಾರಥೌ|

07124003c ದಿಷ್ಟ್ಯಾ ಚ ನಿಹತಃ ಪಾಪಃ ಸೈಂಧವಃ ಪುರುಷಾಧಮಃ||

“ಅದೃಷ್ಟವಶಾತ್ ಸಂಗ್ರಾಮದಲ್ಲಿ ಇಬ್ಬರು ಮಹಾರಥರೂ ಪ್ರತಿಜ್ಞೆಯ ಭಾರದಿಂದ ಮುಕ್ತರಾಗಿರುವುದನ್ನು ನೋಡುತ್ತಿದ್ದೇನೆ! ಒಳ್ಳೆಯದಾಯಿತು - ಪುರುಷಾಧಮ ಪಾಪಿ ಸೈಂಧವನು ಹತನಾದನು.

07124004a ಕೃಷ್ಣ ದಿಷ್ಟ್ಯಾ ಮಮ ಪ್ರೀತಿರ್ಮಹತೀ ಪ್ರತಿಪಾದಿತಾ|

07124004c ದಿಷ್ಟ್ಯಾ ಶತ್ರುಗಣಾಶ್ಚೈವ ನಿಮಗ್ನಾಃ ಶೋಕಸಾಗರೇ||

ಕೃಷ್ಣ! ಸೌಭಾಗ್ಯವಶಾತ್ ನನ್ನ ಸಂತೋಷವು ತುಂಬಾ ಹೆಚ್ಚಾಗಿದೆ. ಒಳ್ಳೆಯದಾಯಿತು - ಶತ್ರುಗಣಗಳು ಶೋಕಸಾಗರದಲ್ಲಿ ಮುಳುಗಿವೆ.

07124005a ನ ತೇಷಾಂ ದುಷ್ಕರಂ ಕಿಂ ಚಿತ್ತ್ರಿಷು ಲೋಕೇಷು ವಿದ್ಯತೇ|

07124005c ಸರ್ವಲೋಕಗುರುರ್ಯೇಷಾಂ ತ್ವಂ ನಾಥೋ ಮಧುಸೂದನ||

ಮಧುಸೂದನ! ಸರ್ವಲೋಕಗಳಿಗೆ ಗುರುವಾಗಿರುವ ನೀನು ಯಾರ ನಾಥನೋ ಅವರಿಗೆ ಈ ಮೂರು ಲೋಕಗಳಲ್ಲಿಯು ದುಷ್ಕರ ಕಾರ್ಯವೆನ್ನುವುದು ಯಾವುದೂ ಇಲ್ಲ.

07124006a ತವ ಪ್ರಸಾದಾದ್ಗೋವಿಂದ ವಯಂ ಜೇಷ್ಯಾಮಹೇ ರಿಪೂನ್|

07124006c ಯಥಾ ಪೂರ್ವಂ ಪ್ರಸಾದಾತ್ತೇ ದಾನವಾನ್ಪಾಕಶಾಸನಃ||

ಹಿಂದೆ ನಿನ್ನ ಪ್ರಸಾದದಿಂದ ಪಾಕಶಾಸನನು ದಾನವರನ್ನು ಹೇಗೋ ಹಾಗೆ ಗೋವಿಂದ! ನಿನ್ನ ಪ್ರಸಾದದಿಂದ ನಾವು ಶತ್ರುಗಳನ್ನು ಗೆಲ್ಲುತ್ತೇವೆ.

07124007a ಪೃಥಿವೀವಿಜಯೋ ವಾಪಿ ತ್ರೈಲೋಕ್ಯವಿಜಯೋಽಪಿ ವಾ|

07124007c ಧ್ರುವೋ ಹಿ ತೇಷಾಂ ವಾರ್ಷ್ಣೇಯ ಯೇಷಾಂ ತುಷ್ಟೋಽಸಿ ಮಾಧವ||

ವಾರ್ಷ್ಣೇಯ! ಮಾಧವ! ಯಾರಿಂದ ನೀನು ತೃಪ್ತನಾಗಿದ್ದೀಯೋ ಅವರಿಗೆ ಪೃಥ್ವೀ ವಿಜಯ ಅಥವಾ ತ್ರೈಲೋಕ್ಯಗಳ ವಿಜಯವೂ ನಿಶ್ಚಯವಾದುದೇ!

07124008a ನ ತೇಷಾಂ ವಿದ್ಯತೇ ಪಾಪಂ ಸಂಗ್ರಾಮೇ ವಾ ಪರಾಜಯಃ|

07124008c ತ್ರಿದಶೇಶ್ವರನಾಥಸ್ತ್ವಂ ಯೇಷಾಂ ತುಷ್ಟೋಽಸಿ ಮಾಧವ||

ಮಾಧವ! ತ್ರಿದಶೇಶ್ವರನ ನಾಥನಾದ ನೀನು ಯಾರಮೇಲೆ ತುಷ್ಟನಾಗಿರುವೆಯೋ ಅವರಿಗೆ ಸಂಗ್ರಾಮದಲ್ಲಿ ಪಾಪವೆನ್ನುವುದಾಗಲೀ ಪರಾಜಯವಾಗಲೀ ಇರುವುದಿಲ್ಲ.

07124009a ತ್ವತ್ಪ್ರಸಾದಾದ್ಧೃಷೀಕೇಶ ಶಕ್ರಃ ಸುರಗಣೇಶ್ವರಃ|

07124009c ತ್ರೈಲೋಕ್ಯವಿಜಯಂ ಶ್ರೀಮಾನ್ಪ್ರಾಪ್ತವಾನ್ರಣಮೂರ್ಧನಿ||

ಹೃಷೀಕೇಶ! ನಿನ್ನ ಪ್ರಸಾದದಿಂದ ಶ್ರೀಮಾನ್ ಸುರಗಣೇಶ್ವರ ಶಕ್ರನು ರಣಮೂರ್ಧನಿಯಲ್ಲಿ ತ್ರೈಲೋಕ್ಯವಿಜಯವನ್ನು ಪಡೆದನು.

07124010a ತವ ಚೈವ ಪ್ರಸಾದೇನ ತ್ರಿದಶಾಸ್ತ್ರಿದಶೇಶ್ವರ|

07124010c ಅಮರತ್ವಂ ಗತಾಃ ಕೃಷ್ಣ ಲೋಕಾಂಶ್ಚಾಶ್ನುವತೇಽಕ್ಷಯಾನ್||

ಕೃಷ್ಣ! ತ್ರಿದಶೇಶ್ವರ! ನಿನ್ನ ಪ್ರಸಾದದಿಂದಲೇ ತ್ರಿದಶರು ಅಮರತ್ವವನ್ನು ಪಡೆದರು ಮತ್ತು ಅಕ್ಷಯ ಲೋಕಗಳನ್ನು ಹೊಂದಿದರು.

07124011a ತ್ವತ್ಪ್ರಸಾದಸಮುತ್ಥೇನ ವಿಕ್ರಮೇಣಾರಿಸೂದನ|

07124011c ಸುರೇಶತ್ವಂ ಗತಃ ಶಕ್ರೋ ಹತ್ವಾ ದೈತ್ಯಾನ್ಸಹಸ್ರಶಃ||

ಅರಿಸೂದನ! ನಿನ್ನ ಪ್ರಸಾದದಿಂದ ಮೇಲೆದ್ದ ವಿಕ್ರಮದಿಂದ ಶಕ್ರನು ಸಹಸ್ರಾರು ದೈತ್ಯರನ್ನು ಸಂಹರಿಸಿ ಸುರೇಶತ್ವವನ್ನು ಹೊಂದಿದನು.

07124012a ತ್ವತ್ಪ್ರಸಾದಾದ್ಧೃಷೀಕೇಶ ಜಗತ್ ಸ್ಥಾವರಜಂಗಮಂ|

07124012c ಸ್ವವರ್ತ್ಮನಿ ಸ್ಥಿತಂ ವೀರ ಜಪಹೋಮೇಷು ವರ್ತತೇ||

ಹೃಷೀಕೇಶ! ನಿನ್ನ ಪ್ರಸಾದದಿಂದ ಸ್ಥಾವರಜಂಗಮಗಳ ಈ ಜಗತ್ತು ತನ್ನ ಮಾರ್ಗದಲ್ಲಿ ಸ್ಥಿರವಾಗಿ ನಿಂತಿದೆ; ಜಪ-ಹೋಮಗಳಲ್ಲಿ ತೊಡಗಿದೆ.

07124013a ಏಕಾರ್ಣವಮಿದಂ ಪೂರ್ವಂ ಸರ್ವಮಾಸೀತ್ತಮೋಮಯಂ|

07124013c ತ್ವತ್ಪ್ರಸಾದಾತ್ಪ್ರಕಾಶತ್ವಂ ಜಗತ್ಪ್ರಾಪ್ತಂ ನರೋತ್ತಮ||

ಹಿಂದೆ ಇದು ಒಂದೇ ಸಾಗರವಾಗಿದ್ದು ಎಲ್ಲಕಡೆ ಅತ್ಯಂತ ಕತ್ತಲೆಯು ಆವರಿಸಿತ್ತು. ನರೋತ್ತಮ! ಆಗ ನಿನ್ನ ಪ್ರಸಾದದಿಂದ ಜಗತ್ತು ಪ್ರಕಾಶತ್ವವನ್ನು ಪಡೆಯಿತು.

07124014a ಸ್ರಷ್ಟಾರಂ ಸರ್ವಲೋಕಾನಾಂ ಪರಮಾತ್ಮಾನಮಚ್ಯುತಂ|

07124014c ಯೇ ಪ್ರಪನ್ನಾ ಹೃಷೀಕೇಶಂ ನ ತೇ ಮುಹ್ಯಂತಿ ಕರ್ಹಿ ಚಿತ್||

ಸರ್ವಲೋಕಗಳ ಸೃಷ್ಟಾರ, ಪರಮಾತ್ಮ, ಅಚ್ಯುತ, ಹೃಷೀಕೇಶನನ್ನು ಯಾರು ಮೊರೆಹೊಗುತ್ತಾರೋ ಅವರು ಎಂದೂ ಮೋಹಗೊಳ್ಳುವುದಿಲ್ಲ.

07124015a ಅನಾದಿನಿಧನಂ ದೇವಂ ಲೋಕಕರ್ತಾರಮವ್ಯಯಂ|

07124015c ತ್ವಾಂ ಭಕ್ತಾ ಯೇ ಹೃಷೀಕೇಶ ದುರ್ಗಾಣ್ಯತಿತರಂತಿ ತೇ||

ಹೃಷೀಕೇಶ! ಅನಾದಿನಿಧನ, ದೇವ, ಲೋಕಕರ್ತಾರ, ಅವ್ಯಯನಾಗಿರುವ ನಿನ್ನ ಭಕ್ತರು ಕಷ್ಟಗಳನ್ನು ದಾಟುತ್ತಾರೆ.

07124016a ಪರಂ ಪುರಾಣಂ ಪುರುಷಂ ಪುರಾಣಾನಾಂ ಪರಂ ಚ ಯತ್|

07124016c ಪ್ರಪದ್ಯತಸ್ತಂ ಪರಮಂ ಪರಾ ಭೂತಿರ್ವಿಧೀಯತೇ||

ಪರಮ, ಪುರಾಣ, ಪುರಾಣಗಳ ಪುರುಷ, ಪರಮ ಪದವನ್ನು ಯಾರು ಮೊರೆಹೋಗುತ್ತಾರೋ ಅವರು ಪರಮ ಪದವಿಯನ್ನು ಪಡೆಯುತ್ತಾರೆ.

07124017a ಯೋಽಗಾತ ಚತುರೋ ವೇದಾನ್ಯಶ್ಚ ವೇದೇಷು ಗೀಯತೇ|

07124017c ತಂ ಪ್ರಪದ್ಯ ಮಹಾತ್ಮಾನಂ ಭೂತಿಮಾಪ್ನೋತ್ಯನುತ್ತಮಾಂ||

ಯಾರನ್ನು ನಾಲ್ಕು ವೇದಗಳೂ ಹಾಡುವವೋ, ಯಾರು ವೇದಗಳಲ್ಲಿ ಹಾಡಲ್ಪಟ್ಟಿರುವನೋ ಆ ಮಹಾತ್ಮನನ್ನು ಶರಣುಹೊಕ್ಕು ಅನುತ್ತಮ ಗತಿಯನ್ನು ಪಡೆಯುವರು.

07124018a ಧನಂಜಯಸಖಾ ಯಶ್ಚ ಧನಂಜಯಹಿತಶ್ಚ ಯಃ|

07124018c ತಂ ಧನಂಜಯಗೋಪ್ತಾರಂ ಪ್ರಪದ್ಯ ಸುಖಮೇಧತೇ||

ಯಾರು ಧನಂಜಯನ ಸಖನಾಗಿರುವನೋ, ಯಾರು ಧನಂಜಯನ ಹಿತೈಷಿಯೋ ಆ ಧನಂಜಯರಕ್ಷಕನನ್ನು ಮೊರೆಹೊಕ್ಕರೆ ಸುಖವು ದೊರೆಯುತ್ತದೆ.”

07124019a ಇತ್ಯುಕ್ತೌ ತೌ ಮಹಾತ್ಮಾನಾವುಭೌ ಕೇಶವಪಾಂಡವೌ|

07124019c ತಾವಬ್ರೂತಾಂ ತದಾ ಹೃಷ್ಟೌ ರಾಜಾನಂ ಪೃಥಿವೀಪತಿಂ||

ಹೀಗೆ ಅವನು ಆ ಮಹಾತ್ಮ ಕೇಶವ-ಪಾಂಡವರಿಗೆ ಹೇಳಲು ಅವರಿಬ್ಬರೂ ಹೃಷ್ಟರಾಗಿ ರಾಜಾ ಪೃಥಿವೀಪತಿಗೆ ಹೇಳಿದರು:

07124020a ತವ ಕೋಪಾಗ್ನಿನಾ ದಗ್ಧಃ ಪಾಪೋ ರಾಜಾ ಜಯದ್ರಥಃ|

07124020c ಉದೀರ್ಣಂ ಚಾಪಿ ಸುಮಹದ್ಧಾರ್ತರಾಷ್ಟ್ರಬಲಂ ರಣೇ||

“ರಾಜಾ! ನಿನ್ನ ಕೋಪಾಗ್ನಿಯಿಂದ ಪಾಪಿ ಜಯದ್ರಥನು ಸುಟ್ಟುಹೋದನು ಮತ್ತು ರಣದಲ್ಲಿ ಧಾರ್ತರಾಷ್ಟ್ರನ ಅತಿದೊಡ್ಡ ಬಲವು ಪುಡಿಪುಡಿಯಾಯಿತು.

07124021a ಹನ್ಯತೇ ನಿಹತಂ ಚೈವ ವಿನಂಕ್ಷ್ಯತಿ ಚ ಭಾರತ|

07124021c ತವ ಕ್ರೋಧಹತಾ ಹ್ಯೇತೇ ಕೌರವಾಃ ಶತ್ರುಸೂದನ||

ಭಾರತ! ಶತ್ರುಸೂದನ! ನಿನ್ನ ಕೋಪಾಗ್ನಿಯಿಂದ ಹತರಾದವರು ಹತರಾದರು. ಇನ್ನೂ ಹತರಾಗಲಿದ್ದಾರೆ.

07124022a ತ್ವಾಂ ಹಿ ಚಕ್ಷುರ್ಹಣಂ ವೀರಂ ಕೋಪಯಿತ್ವಾ ಸುಯೋಧನಃ|

07124022c ಸಮಿತ್ರಬಂಧುಃ ಸಮರೇ ಪ್ರಾಣಾಂಸ್ತ್ಯಕ್ಷ್ಯತಿ ದುರ್ಮತಿಃ||

ದೃಷ್ಟಿಹಾಯಿಸುವುದರಿಂದ ಮಾತ್ರ ನಾಶಪಡಿಸಬಲ್ಲ ವೀರ ನಿನ್ನನ್ನು ಕೋಪಗೊಳಿಸಿ ದುರ್ಮತಿ ಸುಯೋಧನನು ಸಮರದಲ್ಲಿ ಮಿತ್ರ-ಬಂಧುಗಳೊಡನೆ ಪ್ರಾಣಗಳನ್ನು ಕಳೆದುಕೊಳ್ಳುತ್ತಾನೆ.

07124023a ತವ ಕ್ರೋಧಹತಃ ಪೂರ್ವಂ ದೇವೈರಪಿ ಸುದುರ್ಜಯಃ|

07124023c ಶರತಲ್ಪಗತಃ ಶೇತೇ ಭೀಷ್ಮಃ ಕುರುಪಿತಾಮಹಃ||

ಈ ಹಿಂದೆಯೇ ನಿನ್ನ ಕ್ರೋಧದಿಂದ ಹತನಾಗಿ ದೇವತೆಗಳಿಗೂ ಸುದುರ್ಜಯನಾದ ಕುರುಪಿತಾಮಹ ಭೀಷ್ಮನು ಶರತಲ್ಪಗತನಾಗಿದ್ದಾನೆ.

07124024a ದುರ್ಲಭೋ ಹಿ ಜಯಸ್ತೇಷಾಂ ಸಂಗ್ರಾಮೇ ರಿಪುಸೂದನ|

07124024c ಯಾತಾ ಮೃತ್ಯುವಶಂ ತೇ ವೈ ಯೇಷಾಂ ಕ್ರುದ್ಧೋಽಸಿ ಪಾಂಡವ||

ರಿಪುಸೂದನ! ಪಾಂಡವ! ಯಾರ ಮೇಲೆ ನೀನು ಕ್ರುದ್ಧನಾಗಿದ್ದೀಯೋ ಅವರಿಗೆ ಸಂಗ್ರಾಮದಲ್ಲಿ ಜಯವು ದುರ್ಲಭವೇ ಸರಿ. ಅವರು ಈಗಾಗಲೇ ಮೃತ್ಯುವಶರಾಗಿಬಿಟ್ಟಿದ್ದಾರೆ.

07124025a ರಾಜ್ಯಂ ಪ್ರಾಣಾಃ ಪ್ರಿಯಾಃ ಪುತ್ರಾಃ ಸೌಖ್ಯಾನಿ ವಿವಿಧಾನಿ ಚ|

07124025c ಅಚಿರಾತ್ತಸ್ಯ ನಶ್ಯಂತಿ ಯೇಷಾಂ ಕ್ರುದ್ಧೋಽಸಿ ಮಾನದ||

ಮಾನದ! ಯಾರ ಮೇಲೆ ನೀನು ಕ್ರುದ್ಧನಾಗಿದ್ದೀಯೋ ಅವರ ರಾಜ್ಯ, ಪ್ರಾಣಗಳು, ಪ್ರಿಯರು, ಪುತ್ರರು ಮತ್ತು ವಿವಿಧ ಸುಖಗಳು ಬೇಗನೇ ನಾಶವಾಗುತ್ತವೆ.

07124026a ವಿನಷ್ಟಾನ್ಕೌರವಾನ್ಮನ್ಯೇ ಸಪುತ್ರಪಶುಬಾಂಧವಾನ್|

07124026c ರಾಜಧರ್ಮಪರೇ ನಿತ್ಯಂ ತ್ವಯಿ ಕ್ರುದ್ಧೇ ಯುಧಿಷ್ಠಿರ||

ಯುಧಿಷ್ಠಿರ! ನಿತ್ಯವೂ ರಾಜಧರ್ಮದಲ್ಲಿ ನಿರತನಾಗಿರುವ ನೀನು ಕ್ರುದ್ಧನಾಗಿರಲು ಕೌರವರು ಪುತ್ರ-ಪಶು-ಬಾಂಧವರೊಂದಿಗೆ ವಿನಷ್ಟರಾದರೆಂದೇ ತಿಳಿದುಕೋ.”

07124027a ತತೋ ಭೀಮೋ ಮಹಾಬಾಹುಃ ಸಾತ್ಯಕಿಶ್ಚ ಮಹಾರಥಃ|

07124027c ಅಭಿವಾದ್ಯ ಗುರುಂ ಜ್ಯೇಷ್ಠಂ ಮಾರ್ಗಣೈಃ ಕ್ಷತವಿಕ್ಷತೌ|

07124027e ಸ್ಥಿತಾವಾಸ್ತಾಂ ಮಹೇಷ್ವಾಸೌ ಪಾಂಚಾಲ್ಯೈಃ ಪರಿವಾರಿತೌ||

ಆಗ ಮಾರ್ಗಣಗಳಿಂದ ಕ್ಷತ-ವಿಕ್ಷತರಾಗಿದ್ದ ಮಹಾಬಾಹು ಭೀಮ ಮತ್ತು ಮಹಾರಥ ಸಾತ್ಯಕಿಯರು ಹಿರಿಯ ಜ್ಯೇಷ್ಠನಿಗೆ ವಂದಿಸಿದರು. ಅವರಿಬ್ಬರು ಮಹೇಷ್ವಾಸರೂ ಪಾಂಚಾಲರಿಂದ ಪರಿವೃತರಾಗಿ ಅಲ್ಲಿ ನಿಂತುಕೊಂಡರು.

07124028a ತೌ ದೃಷ್ಟ್ವ ಮುದಿತೌ ವೀರೌ ಪ್ರಾಂಜಲೀ ಚಾಗ್ರತಃ ಸ್ಥಿತೌ|

07124028c ಅಭ್ಯನಂದತ ಕೌಂತೇಯಸ್ತಾವುಭೌ ಭೀಮಸಾತ್ಯಕೀ||

ಕೈಮುಗಿದು ಮುಂದೆ ನಿಂತುಕೊಂಡಿದ್ದ ಆ ಮುದಿತ ವೀರರಾದ ಭೀಮ-ಸಾತ್ಯಕಿಯರನ್ನು ನೋಡಿ ಕೌಂತೇಯನು ಅವರಿಬ್ಬರನ್ನೂ ಅಭಿನಂದಿಸಿದನು:

07124029a ದಿಷ್ಟ್ಯಾ ಪಶ್ಯಾಮಿ ವಾಂ ವೀರೌ ವಿಮುಕ್ತೌ ಸೈನ್ಯಸಾಗರಾತ್|

07124029c ದ್ರೋಣಗ್ರಾಹಾದ್ದುರಾಧರ್ಷಾದ್ಧಾರ್ದಿಕ್ಯಮಕರಾಲಯಾತ್|

“ಒಳ್ಳೆಯದಾಯಿತು! ದುರಧರ್ಷ ದ್ರೋಣನೆಂಬ ತಿಮಿಂಗಿಲ ಮತ್ತು ಹಾರ್ದಿಕ್ಯನೆಂಬ ಮೊಸಳೆಯಿದ್ದ ಸೈನ್ಯ ಸಾಗರದಿಂದ ಉತ್ತೀರ್ಣರಾಗಿ ಬಂದಿರುವ ನೀವಿಬ್ಬರು ವೀರರನ್ನೂ ಕಾಣುತ್ತಿದ್ದೇನೆ.

07124029e ದಿಷ್ಟ್ಯಾ ಚ ನಿರ್ಜಿತಾಃ ಸಂಖ್ಯೇ ಪೃಥಿವ್ಯಾಂ ಸರ್ವಪಾರ್ಥಿವಾಃ||

07124030a ಯುವಾಂ ವಿಜಯಿನೌ ಚಾಪಿ ದಿಷ್ಟ್ಯಾ ಪಶ್ಯಾಮಿ ಸಂಯುಗೇ|

07124030c ದಿಷ್ಟ್ಯಾ ದ್ರೋಣೋ ಜಿತಃ ಸಂಖ್ಯೇ ಹಾರ್ದಿಕ್ಯಶ್ಚ ಮಹಾಬಲಃ||

ಒಳ್ಳೆಯದಾಯಿತು! ರಣದಲ್ಲಿ ಪೃಥ್ವಿಯ ಸರ್ವಪಾರ್ಥಿವರೂ ಸೋತುಹೋದರು. ಒಳ್ಳೆಯದಾಯಿತು! ರಣದಲ್ಲಿ ವಿಜಯವನ್ನು ಗಳಿಸಿಬಂದ ನಿಮ್ಮೀರ್ವರನ್ನೂ ನೋಡುತ್ತಿದ್ದೇನೆ. ಒಳ್ಳೆಯದಾಯಿತು! ಯುದ್ಧದಲ್ಲಿ ದ್ರೋಣ ಮತ್ತು ಮಹಾಬಲ ಹಾರ್ದಿಕ್ಯರು ಗೆಲ್ಲಲ್ಪಟ್ಟರು.

07124031a ಸೈನ್ಯಾರ್ಣವಂ ಸಮುತ್ತೀರ್ಣೌ ದಿಷ್ಟ್ಯಾ ಪಶ್ಯಾಮಿ ಚಾನಘೌ|

07124031c ಸಮರಶ್ಲಾಘಿನೌ ವೀರೌ ಸಮರೇಷ್ವಪಲಾಯಿನೌ|

07124031e ಮಮ ಪ್ರಾಣಸಮೌ ಚೈವ ದಿಷ್ಟ್ಯಾ ಪಶ್ಯಾಮಿ ವಾಮಹಂ||

ಒಳ್ಳೆಯದಾಯಿತು! ಸೈನ್ಯಸಮುದ್ರವನ್ನು ಚೆನ್ನಾಗಿ ದಾಟಿಬಂದ, ಅನಘ, ಸಮರಶ್ಲಾಘೀ, ವೀರ, ಸಮರದಲ್ಲಿ ಪಲಾಯನ ಮಾಡದೇ ಇರುವ, ನನ್ನ ಪ್ರಾಣಸಮರಾದ ನಿಮ್ಮಿಬ್ಬರನ್ನು ನನ್ನ ಪಕ್ಕದಲ್ಲಿ ಕಾಣುತ್ತಿದ್ದೇನೆ!”

07124032a ಇತ್ಯುಕ್ತ್ವಾ ಪಾಂಡವೋ ರಾಜಾ ಯುಯುಧಾನವೃಕೋದರೌ|

07124032c ಸಸ್ವಜೇ ಪುರುಷವ್ಯಾಘ್ರೌ ಹರ್ಷಾದ್ಬಾಷ್ಪಂ ಮುಮೋಚ ಹ||

ಹೀಗೆ ಹೇಳಿ ರಾಜಾ ಪಾಂಡವನು ಪುರುಷವ್ಯಾಘ್ರ ಯುಯುಧಾನ-ವೃಕೋದರರನ್ನು ಬಿಗಿದಪ್ಪಿದನು ಮತ್ತು ಆನಂದಾಶ್ರುಗಳನ್ನು ಸುರಿಸಿದನು.

07124033a ತತಃ ಪ್ರಮುದಿತಂ ಸರ್ವಂ ಬಲಮಾಸೀದ್ವಿಶಾಂ ಪತೇ|

07124033c ಪಾಂಡವಾನಾಂ ಜಯಂ ದೃಷ್ಟ್ವಾ ಯುದ್ಧಾಯ ಚ ಮನೋ ದಧೇ||

ವಿಶಾಂಪತೇ! ಆಗ ಪಾಂಡವರ ಜಯವನ್ನು ನೋಡಿ ಎಲ್ಲ ಸೇನೆಗಳೂ ಮುದಿತರಾಗಿ ಯುದ್ಧದ ಮನಸ್ಸು ಮಾಡಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಯುಧಿಷ್ಠಿರಹರ್ಷೇ ಚತುರ್ವಿಂಶಾಧಿಕಶತತಮೋಽಧ್ಯಾಯಃ ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಯುಧಿಷ್ಠಿರಹರ್ಷ ಎನ್ನುವ ನೂರಾಇಪ್ಪತ್ನಾಲ್ಕನೇ ಅಧ್ಯಾಯವು.

Image result for lotus against white background

Comments are closed.