Drona Parva: Chapter 10

ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ

೧೦

ಕೃಷ್ಣನ ಮಹಿಮೆಯನ್ನು ಹೇಳಿಕೊಳ್ಳುತ್ತಾ ಧೃತರಾಷ್ಟ್ರನು ಶೋಕಿಸಿದುದು (೧-೩೧).

Image result for dhritarashtra embraces bhima

07010001 ಧೃತರಾಷ್ಟ್ರ ಉವಾಚ|

07010001a ಶೃಣು ದಿವ್ಯಾನಿ ಕರ್ಮಾಣಿ ವಾಸುದೇವಸ್ಯ ಸಂಜಯ|

07010001c ಕೃತವಾನ್ಯಾನಿ ಗೋವಿಂದೋ ಯಥಾ ನಾನ್ಯಃ ಪುಮಾನ್ಕ್ವ ಚಿತ್||

ಧೃತರಾಷ್ಟ್ರನು ಹೇಳಿದನು: “ಸಂಜಯ! ವಾಸುದೇವನ ದಿವ್ಯ ಕರ್ಮಗಳನ್ನು ಕೇಳು. ಬೇರೆ ಯಾವ ಪುರುಷನೂ ಮಾಡಿರದ ಕೃತ್ಯಗಳನ್ನು ಗೋವಿಂದನು ಮಾಡಿರುವನು.

07010002a ಸಂವರ್ಧತಾ ಗೋಪಕುಲೇ ಬಾಲೇನೈವ ಮಹಾತ್ಮನಾ|

07010002c ವಿಖ್ಯಾಪಿತಂ ಬಲಂ ಬಾಹ್ವೋಸ್ತ್ರಿಷು ಲೋಕೇಷು ಸಂಜಯ||

ಸಂಜಯ! ಗೋಪಕುಲದಲ್ಲಿ ಬಾಲಕನಾಗಿ ಬೆಳೆಯುತ್ತಿರುವಾಗಲೇ ಆ ಮಹಾತ್ಮನು ತನ್ನ ಬಾಹುಬಲವನ್ನು ಮೂರು ಲೋಕಗಳಲ್ಲಿಯೂ ಪ್ರಸಿದ್ಧ ಪಡಿಸಿದನು.

07010003a ಉಚ್ಚೈಃಶ್ರವಸ್ತುಲ್ಯಬಲಂ ವಾಯುವೇಗಸಮಂ ಜವೇ|

07010003c ಜಘಾನ ಹಯರಾಜಂ ಯೋ ಯಮುನಾವನವಾಸಿನಂ||

ಉಚ್ಛೈಶ್ರವಕ್ಕೆ ಸಮನಾದ ಬಲವುಳ್ಳ, ವಾಯುವೇಗಕ್ಕೆ ಸಮಾನ ವೇಗವುಳ್ಳ, ಯಮುನಾವನದಲ್ಲಿ ವಾಸಿಸುತ್ತಿದ್ದ (ಕೇಶೀ ಎಂಬ) ಹಯರಾಜನನ್ನು ಇವನು ಸಂಹರಿಸಿದನು.

07010004a ದಾನವಂ ಘೋರಕರ್ಮಾಣಂ ಗವಾಂ ಮೃತ್ಯುಮಿವೋತ್ಥಿತಂ|

07010004c ವೃಷರೂಪಧರಂ ಬಾಲ್ಯೇ ಭುಜಾಭ್ಯಾಂ ನಿಜಘಾನ ಹ||

ಗೋವುಗಳಿಗೆ ಮೃತ್ಯುರೂಪನಾಗಿ ಉದ್ಭವಿಸಿದ್ದ ವೃಷಭದ ರೂಪವನ್ನು ಧರಿಸಿದ್ದ ಘೋರಕರ್ಮಿ ದಾನವನನ್ನು ಬಾಲ್ಯದಲ್ಲಿಯೇ ಭುಜಗಳೆರಡರಿಂದ ಕೊಂದಿದ್ದನು.

07010005a ಪ್ರಲಂಬಂ ನರಕಂ ಜಂಭಂ ಪೀಠಂ ಚಾಪಿ ಮಹಾಸುರಂ|

07010005c ಮುರುಂ ಚಾಚಲಸಂಕಾಶಮವಧೀತ್ಪುಷ್ಕರೇಕ್ಷಣಃ||

ಈ ಪುಷ್ಕರೇಕ್ಷಣನು ಪ್ರಲಂಬ, ನರಕ, ಮಹಾಸುರ ಜಂಭ, ಮತ್ತು ಪರ್ವತೋಪಮ ಮುರುವನ್ನು ಸಂಹರಿಸಿದನು.

07010006a ತಥಾ ಕಂಸೋ ಮಹಾತೇಜಾ ಜರಾಸಂಧೇನ ಪಾಲಿತಃ|

07010006c ವಿಕ್ರಮೇಣೈವ ಕೃಷ್ಣೇನ ಸಗಣಃ ಶಾತಿತೋ ರಣೇ||

ಹಾಗೆಯೇ ಕೃಷ್ಣನು ರಣದಲ್ಲಿ ಮಹಾತೇಜಸ್ವೀ ಜರಾಸಂಧನಿಂದ ಪಾಲಿತನಾಗಿದ್ದ ಕಂಸನನ್ನು ಅವನ ಗಣಗಳೊಂದಿಗೆ ಸಂಹರಿಸಿದನು.

07010007a ಸುನಾಮಾ ನಾಮ ವಿಕ್ರಾಂತಃ ಸಮಗ್ರಾಕ್ಷೌಹಿಣೀಪತಿಃ|

07010007c ಭೋಜರಾಜಸ್ಯ ಮಧ್ಯಸ್ಥೋ ಭ್ರಾತಾ ಕಂಸಸ್ಯ ವೀರ್ಯವಾನ್||

07010008a ಬಲದೇವದ್ವಿತೀಯೇನ ಕೃಷ್ಣೇನಾಮಿತ್ರಘಾತಿನಾ|

07010008c ತರಸ್ವೀ ಸಮರೇ ದಗ್ಧಃ ಸಸೈನ್ಯಃ ಶೂರಸೇನರಾಟ್||

ಬಲದೇವನ ಸಹಾಯದಿಂದ ಅಮಿತ್ರಘಾತಿ ಕೃಷ್ಣನು ಸಮರದಲ್ಲಿ ಸುನಾಮ ಎಂಬ ಹೆಸರಿನ ವಿಕ್ರಾಂತ ಸಮಗ್ರ ಅಕ್ಷೌಹಿಣೀ ಸೇನಾನಾಯಕ, ಭೋಜರಾಜನ ಮಧ್ಯಸ್ಥ, ಕಂಸನ ವೀರ್ಯವಾನ ಸಹೋದರ ಶೂರಸೇನ ರಾಜನ ಸೈನ್ಯದೊಂದಿಗೆ ಸುಟ್ಟುಬಿಟ್ಟನು.

07010009a ದುರ್ವಾಸಾ ನಾಮ ವಿಪ್ರರ್ಷಿಸ್ತಥಾ ಪರಮಕೋಪನಃ|

07010009c ಆರಾಧಿತಃ ಸದಾರೇಣ ಸ ಚಾಸ್ಮೈ ಪ್ರದದೌ ವರಾನ್||

ಪರಮಕೋಪನನಾದ ದುರ್ವಾಸ ಎಂಬ ಹೆಸರಿನ ವಿಪ್ರರ್ಷಿಯನ್ನು ಪತ್ನಿಯರೊಂದಿಗೆ ಆರಾಧಿಸಿ ಅವನಿಂದ ವರಗಳನ್ನು ಪಡೆದನು.

07010010a ತಥಾ ಗಾಂಧಾರರಾಜಸ್ಯ ಸುತಾಂ ವೀರಃ ಸ್ವಯಂವರೇ|

07010010c ನಿರ್ಜಿತ್ಯ ಪೃಥಿವೀಪಾಲಾನವಹತ್ಪುಷ್ಕರೇಕ್ಷಣಃ||

ಹಾಗೆಯೇ ಈ ವೀರ ಪುಷ್ಕರೇಕ್ಷಣನು ಸ್ವಯಂವರದಲ್ಲಿ ಪೃಥಿವೀಪಾಲರನ್ನು ಯುದ್ಧಲ್ಲಿ ಸೋಲಿಸಿ ಗಾಂಧಾರರಾಜನ ಮಗಳನ್ನು ಅಪಹರಿಸಿದನು.

07010011a ಅಮೃಷ್ಯಮಾಣಾ ರಾಜಾನೋ ಯಸ್ಯ ಜಾತ್ಯಾ ಹಯಾ ಇವ|

07010011c ರಥೇ ವೈವಾಹಿಕೇ ಯುಕ್ತಾಃ ಪ್ರತೋದೇನ ಕೃತವ್ರಣಾಃ||

ಆಗ ಕ್ರೋಧಿತರಾದ ರಾಜರನ್ನು ಹುಟ್ಟಿನಿಂದಲೇ ಕುದುರೆಗಳೋ ಎಂಬಂತೆ ವಿವಾಹದ ರಥಕ್ಕೆ ಕಟ್ಟಿ ಬಾರಿಕೋಲಿನಿಂದ ಹೊಡೆಯಲಾಗಿತ್ತು.

07010012a ಜರಾಸಂಧಂ ಮಹಾಬಾಹುಮುಪಾಯೇನ ಜನಾರ್ದನಃ|

07010012c ಪರೇಣ ಘಾತಯಾಮಾಸ ಪೃಥಗಕ್ಷೌಹಿಣೀಪತಿಂ||

ಮಹಾಬಾಹು ಜನಾರ್ದನನು ಉಪಾಯದಿಂದ ಇತರರಿಂದ ಅನೇಕ ಅಕ್ಷೌಹಿಣಿಗಳ ನಾಯಕನಾಗಿದ್ದ ಜರಾಸಂಧನನ್ನು ಸಂಹರಿಸಿದನು.

07010013a ಚೇದಿರಾಜಂ ಚ ವಿಕ್ರಾಂತಂ ರಾಜಸೇನಾಪತಿಂ ಬಲೀ|

07010013c ಅರ್ಘೇ ವಿವದಮಾನಂ ಚ ಜಘಾನ ಪಶುವತ್ತದಾ||

ಅರ್ಘ್ಯದ ಸಮಯದಲ್ಲಿ ವಾದಮಾಡುತ್ತಿದ್ದ ರಾಜಸೇನಾಪತಿ, ಬಲಶಾಲೀ, ವಿಕ್ರಾಂತ ಚೇದಿರಾಜನನ್ನು ಪಶುವಿನಂತೆ ಕೊಂದನು.

07010014a ಸೌಭಂ ದೈತ್ಯಪುರಂ ಸ್ವಸ್ಥಂ ಶಾಲ್ವಗುಪ್ತಂ ದುರಾಸದಂ|

07010014c ಸಮುದ್ರಕುಕ್ಷೌ ವಿಕ್ರಮ್ಯ ಪಾತಯಾಮಾಸ ಮಾಧವಃ||

ಮಾಧವನು ಸಮುದ್ರದ ಆಳಕ್ಕೆ ಹೋಗಿ ವಿಕ್ರಮದಿಂದ ದುರಾಸದವಾಗಿದ್ದ, ಶಾಲ್ವನಿಂದ ರಕ್ಷಿಸಲ್ಪಟ್ಟಿದ್ದ, ಸ್ವಸ್ಥವಾಗಿದ್ದ ದೈತ್ಯಪುರ ಸೌಭವನ್ನು ಉರುಳಿಸಿದನು.

07010015a ಅಂಗಾನ್ವಂಗಾನ್ಕಲಿಂಗಾಂಶ್ಚ ಮಾಗಧಾನ್ಕಾಶಿಕೋಸಲಾನ್|

07010015c ವತ್ಸಗರ್ಗಕರೂಷಾಂಶ್ಚ ಪುಂಡ್ರಾಂಶ್ಚಾಪ್ಯಜಯದ್ರಣೇ||

07010016a ಆವಂತ್ಯಾನ್ದಾಕ್ಷಿಣಾತ್ಯಾಂಶ್ಚ ಪಾರ್ವತೀಯಾನ್ದಶೇರಕಾನ್|

07010016c ಕಾಶ್ಮೀರಕಾನೌರಸಕಾನ್ಪಿಶಾಚಾಂಶ್ಚ ಸಮಂದರಾನ್||

07010017a ಕಾಂಬೋಜಾನ್ವಾಟಧಾನಾಂಶ್ಚ ಚೋಲಾನ್ಪಾಂಡ್ಯಾಂಶ್ಚ ಸಂಜಯ|

07010017c ತ್ರಿಗರ್ತಾನ್ಮಾಲವಾಂಶ್ಚೈವ ದರದಾಂಶ್ಚ ಸುದುರ್ಜಯಾನ್||

07010018a ನಾನಾದಿಗ್ಭ್ಯಶ್ಚ ಸಂಪ್ರಾಪ್ತಾನ್ವ್ರಾತಾನಶ್ವಶಕಾನ್ಪ್ರತಿ|

07010018c ಜಿತವಾನ್ಪುಂಡರೀಕಾಕ್ಷೋ ಯವನಾಂಶ್ಚ ಸಹಾನುಗಾನ್||

ಪುಂಡರೀಕ್ಷಾಕ್ಷನು ಅಂಗ, ವಂಗ, ಕಲಿಂಗ, ಮಾಗಧ, ಕಾಶೀ, ಕೋಸಲ, ವತ್ಸ, ಗರ್ಗ, ಕರೂಷ, ಮತ್ತು ಪುಂಡ್ರರನ್ನು ರಣದಲ್ಲಿ ಜಯಿಸಿದನು. ಸಂಜಯ! ಹಾಗೆಯೇ ಅವಂತಿಯವರನ್ನು, ದಕ್ಷಿಣದವರನ್ನು, ಪರ್ವತೇಯರನ್ನು, ದಶೇರಕರನ್ನು, ಕಾಶ್ಮೀರರನ್ನು, ಔರಸಕರನ್ನು, ಪಿಶಾಚರನ್ನು, ಮಂದರರನ್ನು, ಕಾಂಬೋಜರನ್ನು, ವಾಟಧಾನರನ್ನು, ಚೋಲರನ್ನು, ಪಾಂಡ್ಯರನ್ನು, ತ್ರಿಗರ್ತರನ್ನು, ಮಾಲವರನ್ನು, ದುರ್ಜಯರಾದ ದರದರನ್ನು, ನಾನಾದಿಕ್ಕುಗಳಿಗೆ ಹೋಗಿ ವ್ರಾತರನ್ನೂ, ಶಕರನ್ನೂ ಮತ್ತು ಅನುಯಾಯಿಗಳೊಂದಿಗೆ ಯವನರನ್ನೂ ಅವನು ಗೆದ್ದಿದ್ದಾನೆ.

07010019a ಪ್ರವಿಶ್ಯ ಮಕರಾವಾಸಂ ಯಾದೋಭಿರಭಿಸಂವೃತಂ|

07010019c ಜಿಗಾಯ ವರುಣಂ ಯುದ್ಧೇ ಸಲಿಲಾಂತರ್ಗತಂ ಪುರಾ||

ಹಿಂದೆ ಮಕರಾವಾಸ ಸಮುದ್ರವನ್ನು ಪ್ರವೇಶಿಸಿ ನೀರಿನ ಒಳಹೊಕ್ಕು ನೀರಿನ ಪ್ರಾಣಿಗಳಿಂದ ಆವೃತನಾಗಿದ್ದ ವರುಣನನ್ನು ಯುದ್ಧದಲ್ಲಿ ಗೆದ್ದನು.

07010020a ಯುಧಿ ಪಂಚಜನಂ ಹತ್ವಾ ಪಾತಾಲತಲವಾಸಿನಂ|

07010020c ಪಾಂಚಜನ್ಯಂ ಹೃಷೀಕೇಶೋ ದಿವ್ಯಂ ಶಂಖಮವಾಪ್ತವಾನ್||

ಯುದ್ಧದಲ್ಲಿ ಪಾತಾಲವಾಸಿ ಪಂಚಜನನನ್ನು ಸಂಹರಿಸಿ ಹೃಷೀಕೇಶನು ದಿವ್ಯ ಪಾಂಚಜನ್ಯ ಶಂಖವನ್ನು ಪಡೆದನು.

07010021a ಖಾಂಡವೇ ಪಾರ್ಥಸಹಿತಸ್ತೋಷಯಿತ್ವಾ ಹುತಾಶನಂ|

07010021c ಆಗ್ನೇಯಮಸ್ತ್ರಂ ದುರ್ಧರ್ಷಂ ಚಕ್ರಂ ಲೇಭೇ ಮಹಾಬಲಃ||

ಈ ಮಹಾಬಲನು ಪಾರ್ಥನೊಂದಿಗೆ ಖಾಂಡವದಲ್ಲಿ ಹುತಾಶನನನ್ನು ತೃಪ್ತಿಪಡಿಸಿ ದುರ್ಧರ್ಷ ಆಗ್ನೇಯಾಸ್ತ್ರವನ್ನೂ ಚಕ್ರವನ್ನೂ ಪಡೆದನು.

07010022a ವೈನತೇಯಂ ಸಮಾರುಹ್ಯ ತ್ರಾಸಯಿತ್ವಾಮರಾವತೀಂ|

07010022c ಮಹೇಂದ್ರಭವನಾದ್ವೀರಃ ಪಾರಿಜಾತಮುಪಾನಯತ್||

ವೈನತೇಯನನ್ನೇರಿ ಅಮರಾವತಿಯನ್ನು ಪೀಡಿಸಿ ಮಹೇಂದ್ರಭವನದಿಂದ ಆ ವೀರನು ಪಾರಿಜಾತವನ್ನು ತಂದನು.

07010023a ತಚ್ಚ ಮರ್ಷಿತವಾಂ ಶಕ್ರೋ ಜಾನಂಸ್ತಸ್ಯ ಪರಾಕ್ರಮಂ|

07010023c ರಾಜ್ಞಾಂ ಚಾಪ್ಯಜಿತಂ ಕಂ ಚಿತ್ಕೃಷ್ಣೇನೇಹ ನ ಶುಶ್ರುಮ||

ಅವನ ಪರಾಕ್ರಮವನ್ನು ತಿಳಿದು ಶಕ್ರನು ಅದನ್ನು ಸಹಿಸಿಕೊಂಡನು. ಕೃಷ್ಣನಿಂದ ಸೋಲದ ಯಾವ ರಾಜನ ಕುರಿತೂ ನಾವು ಕೇಳಿಲ್ಲ.

07010024a ಯಚ್ಚ ತನ್ಮಹದಾಶ್ಚರ್ಯಂ ಸಭಾಯಾಂ ಮಮ ಸಂಜಯ|

07010024c ಕೃತವಾನ್ಪುಂಡರೀಕಾಕ್ಷಃ ಕಸ್ತದನ್ಯ ಇಹಾರ್ಹತಿ||

ಸಂಜಯ! ನನ್ನ ಸಭೆಯಲ್ಲಿ ಪುಂಡರೀಕಾಕ್ಷನು ಮಾಡಿ ತೋರಿಸಿದ ಆ ಮಹದಾಶ್ಚರ್ಯವನ್ನು ಬೇರೆ ಯಾರು ತಾನೇ ಮಾಡಲು ಅರ್ಹರು?

07010025a ಯಚ್ಚ ಭಕ್ತ್ಯಾ ಪ್ರಪನ್ನೋಽಹಮದ್ರಾಕ್ಷಂ ಕೃಷ್ಣಮೀಶ್ವರಂ|

07010025c ತನ್ಮೇ ಸುವಿದಿತಂ ಸರ್ವಂ ಪ್ರತ್ಯಕ್ಷಮಿವ ಚಾಗಮತ್||

ಭಕ್ತಿಯಿಂದ ಪ್ರಪ್ರನ್ನನಾಗಿ ಆ ಕೃಷ್ಣನ ಈಶ್ವರತ್ವವನ್ನು ಕಂಡಾಗಿನಿಂದ ನನಗೆ ಎಲ್ಲವೂ ಪ್ರತ್ಯಕ್ಷವಾಗಿ ಬಂದು ಕಾಣಿಸಿಕೊಂಡಷ್ಟು ಅರ್ಥವಾಗಿದೆ.

07010026a ನಾಂತೋ ವಿಕ್ರಮಯುಕ್ತಸ್ಯ ಬುದ್ಧ್ಯಾ ಯುಕ್ತಸ್ಯ ವಾ ಪುನಃ|

07010026c ಕರ್ಮಣಃ ಶಕ್ಯತೇ ಗಂತುಂ ಹೃಷೀಕೇಶಸ್ಯ ಸಂಜಯ||

ಸಂಜಯ! ಅವನ ವಿಕ್ರಮಕ್ಕೆ ಅಂತವಿಲ್ಲ. ಅವನ ಬುದ್ಧಿಗೂ ಕೊನೆಯೆಂಬುದಿಲ್ಲ. ಹೃಷೀಕೇಶನ ಕರ್ಮಗಳಿಗೆ ಕೊನೆಯೆಂಬುದೇ ಇಲ್ಲ.

07010027a ತಥಾ ಗದಶ್ಚ ಸಾಂಬಶ್ಚ ಪ್ರದ್ಯುಮ್ನೋಽಥ ವಿದೂರಥಃ|

07010027c ಆಗಾವಹೋಽನಿರುದ್ಧಶ್ಚ ಚಾರುದೇಷ್ಣಶ್ಚ ಸಾರಣಃ||

07010028a ಉಲ್ಮುಕೋ ನಿಶಠಶ್ಚೈವ ಝಲ್ಲೀ ಬಭ್ರುಶ್ಚ ವೀರ್ಯವಾನ್|

07010028c ಪೃಥುಶ್ಚ ವಿಪೃಥುಶ್ಚೈವ ಸಮೀಕೋಽಥಾರಿಮೇಜಯಃ||

07010029a ಏತೇ ವೈ ಬಲವಂತಶ್ಚ ವೃಷ್ಣಿವೀರಾಃ ಪ್ರಹಾರಿಣಃ|

07010029c ಕಥಂ ಚಿತ್ಪಾಂಡವಾನೀಕಂ ಶ್ರಯೇಯುಃ ಸಮರೇ ಸ್ಥಿತಾಃ||

07010030a ಆಹೂತಾ ವೃಷ್ಣಿವೀರೇಣ ಕೇಶವೇನ ಮಹಾತ್ಮನಾ|

07010030c ತತಃ ಸಂಶಯಿತಂ ಸರ್ವಂ ಭವೇದಿತಿ ಮತಿರ್ಮಮ||

ಹಾಗೆಯೇ ಗದ, ಸಾಂಬ, ಪ್ರದ್ಯುಮ್ನ, ವಿದೂರಥ, ಆಗಾವಹ, ಅನಿರುದ್ಧ, ಚಾರುದೇಷ್ಣ, ಸಾರಣ, ಉಲ್ಮುಕ, ನಿಶಠ, ಝಲ್ಲೀ, ವೀರ್ಯವಾನ್ ಬಭ್ರು, ಪೃಥು, ವಿಪೃಥು, ಸಮೀಕ, ಅರಿಮೇಜಯ ಇವರೆಲ್ಲ ಬಲವಂತ ವೃಷ್ಣಿವೀರ ಪ್ರಹಾರಿಗಳು ವೃಷ್ಣಿವೀರ ಮಹಾತ್ಮ ಕೇಶವನು ಕರೆದರೆ ಸಮರದಲ್ಲಿ ಪಾಂಡವರ ಕಡೆ ಬಂದು ನಿಲ್ಲುವುದಿಲ್ಲವೇ? ಆಗ ಎಲ್ಲವೂ ಸಂಶಯಾಸ್ಪದವಾಗುತ್ತದೆ ಎಂದು ನನಗನ್ನಿಸುತ್ತದೆ.

07010031a ನಾಗಾಯುತಬಲೋ ವೀರಃ ಕೈಲಾಸಶಿಖರೋಪಮಃ|

07010031c ವನಮಾಲೀ ಹಲೀ ರಾಮಸ್ತತ್ರ ಯತ್ರ ಜನಾರ್ದನಃ||

ಹತ್ತುಸಾವಿರ ಆನೆಗಳ ಬಲವುಳ್ಳ ಕೈಲಾಸ ಶಿಖರದಂತಿರುವ ವೀರ ವನಮಾಲೀ ಹಲಾಯುಧ ರಾಮನು ಜನಾರ್ದನನೆಲ್ಲಿರುವನೋ ಅಲ್ಲಿರುವವನು.

07010032a ಯಮಾಹುಃ ಸರ್ವಪಿತರಂ ವಾಸುದೇವಂ ದ್ವಿಜಾತಯಃ|

07010032c ಅಪಿ ವಾ ಹ್ಯೇಷ ಪಾಂಡೂನಾಂ ಯೋತ್ಸ್ಯತೇಽರ್ಥಾಯ ಸಂಜಯ||

ಸಂಜಯ! ಯಾರನ್ನು ದ್ವಿಜಾತಿಯವರು ಸರ್ವಪಿತನೆಂದು ಕರೆಯುತ್ತಾರೋ ಆ ವಾಸುದೇವನು ಪಾಂಡವರಿಗೋಸ್ಕರ ಯುದ್ಧ ಮಾಡಿದನೇ?

07010033a ಸ ಯದಾ ತಾತ ಸಂನಹ್ಯೇತ್ಪಾಂಡವಾರ್ಥಾಯ ಕೇಶವಃ|

07010033c ನ ತದಾ ಪ್ರತ್ಯನೀಕೇಷು ಭವಿತಾ ತಸ್ಯ ಕಶ್ಚನ||

ಅಯ್ಯಾ! ಒಂದುವೇಳೆ ಕೇಶವನು ಪಾಂಡವರಿಗಾಗಿ ಕವಚ ಧರಿಸಿ ಯುದ್ಧಕ್ಕೆ ಬಂದರೆ ನಮ್ಮ ಸೇನೆಗಳಲ್ಲಿ ಅವನನ್ನು ಎದುರಿಸುವವರು ಯಾರೂ ಇಲ್ಲ.

07010034a ಯದಿ ಸ್ಮ ಕುರವಃ ಸರ್ವೇ ಜಯೇಯುಃ ಸರ್ವಪಾಂಡವಾನ್|

07010034c ವಾರ್ಷ್ಣೇಯೋಽರ್ಥಾಯ ತೇಷಾಂ ವೈ ಗೃಹ್ಣೀಯಾಚ್ಚಸ್ತ್ರಮುತ್ತಮಂ||

ಒಂದುವೇಳೆ ಕುರುಗಳೆಲ್ಲರೂ ಸರ್ವ ಪಾಂಡವರನ್ನು ಜಯಿಸಿದರೆಂದಾದರೆ ಅವರಿಗೋಸ್ಕರವಾಗಿ ವಾರ್ಷ್ಣೇಯನು ತನ್ನ ಉತ್ತಮ ಅಸ್ತ್ರವನ್ನು ಹಿಡಿಯುತ್ತಾನೆ.

07010035a ತತಃ ಸರ್ವಾನ್ನರವ್ಯಾಘ್ರೋ ಹತ್ವಾ ನರಪತೀನ್ರಣೇ|

07010035c ಕೌರವಾಂಶ್ಚ ಮಹಾಬಾಹುಃ ಕುಂತ್ಯೈ ದದ್ಯಾತ್ಸ ಮೇದಿನೀಂ||

ಆಗ ಆ ನರವ್ಯಾಘ್ರ ಮಹಾಬಾಹುವು ರಣದಲ್ಲಿ ಎಲ್ಲ ನರಪತಿಗಳನ್ನೂ ಕೌರವರನ್ನೂ ಸಂಹರಿಸಿ ಮೇದಿನಿಯನ್ನು ಕುಂತಿಗೆ ಕೊಡುತ್ತಾನೆ.

07010036a ಯಸ್ಯ ಯಂತಾ ಹೃಷೀಕೇಶೋ ಯೋದ್ಧಾ ಯಸ್ಯ ಧನಂಜಯಃ|

07010036c ರಥಸ್ಯ ತಸ್ಯ ಕಃ ಸಂಖ್ಯೇ ಪ್ರತ್ಯನೀಕೋ ಭವೇದ್ರಥಃ||

ಯಾವುದರ ಸಾರಥಿಯು ಹೃಷೀಕೇಶನೋ ಯಾವುದರ ಯೋಧನು ಧನಂಜಯನೋ ಆ ರಥವನ್ನು ಯುದ್ಧದಲ್ಲಿ ಎದುರಿಸಬಲ್ಲ ಯಾವ ರಥವು ಸೇನೆಗಳಲ್ಲಿರಬಹುದು?

07010037a ನ ಕೇನ ಚಿದುಪಾಯೇನ ಕುರೂಣಾಂ ದೃಶ್ಯತೇ ಜಯಃ|

07010037c ತಸ್ಮಾನ್ಮೇ ಸರ್ವಮಾಚಕ್ಷ್ವ ಯಥಾ ಯುದ್ಧಮವರ್ತತ||

ಯಾವ ಉಪಾಯದಿಂದಲೂ ಕುರುಗಳ ಜಯವು ನನಗೆ ಕಾಣುತ್ತಿಲ್ಲ. ಆದುದರಿಂದ ಯುದ್ಧವು ಹೇಗೆ ನಡೆಯಿತೆನ್ನುವುದನ್ನು ಎಲ್ಲವನ್ನೂ ನನಗೆ ಹೇಳು.

07010038a ಅರ್ಜುನಃ ಕೇಶವಸ್ಯಾತ್ಮಾ ಕೃಷ್ಣೋಽಪ್ಯಾತ್ಮಾ ಕಿರೀಟಿನಃ|

07010038c ಅರ್ಜುನೇ ವಿಜಯೋ ನಿತ್ಯಂ ಕೃಷ್ಣೇ ಕೀರ್ತಿಶ್ಚ ಶಾಶ್ವತೀ||

ಅರ್ಜುನನು ಕೇಶವನ ಆತ್ಮ. ಕೃಷ್ಣನೂ ಕೂಡ ಕಿರೀಟಿಯ ಆತ್ಮ. ಅರ್ಜುನನಿಗೆ ವಿಜಯವು ನಿತ್ಯ. ಕೃಷ್ಣನದ್ದು ಶಾಶ್ವತ ಕೀರ್ತಿ.

07010039a ಪ್ರಾಧಾನ್ಯೇನ ಹಿ ಭೂಯಿಷ್ಠಮಮೇಯಾಃ ಕೇಶವೇ ಗುಣಾಃ|

07010039c ಮೋಹಾದ್ದುರ್ಯೋಧನಃ ಕೃಷ್ಣಂ ಯನ್ನ ವೇತ್ತೀಹ ಮಾಧವಂ||

ಅಮೇಯ ಗುಣಗಳು ಕೇಶವನಲ್ಲಿ ಪ್ರಧಾನವಾಗಿ ನೆಲೆಸಿವೆ. ಮೋಹದಿಂದ ದುರ್ಯೋಧನನು ಕೃಷ್ಣ ಮಾಧವನು ಯಾರೆಂದು ಅರ್ಥಮಾಡಿಕೊಳ್ಳುತ್ತಿಲ್ಲ.

07010040a ಮೋಹಿತೋ ದೈವಯೋಗೇನ ಮೃತ್ಯುಪಾಶಪುರಸ್ಕೃತಃ|

07010040c ನ ವೇದ ಕೃಷ್ಣಂ ದಾಶಾರ್ಹಮರ್ಜುನಂ ಚೈವ ಪಾಂಡವಂ||

ದೈವಯೋಗದಿಂದ ಮೋಹಿತನಾಗಿ ಮೃತ್ಯುಪಾಶದಿಂದ ಎಳೆದೊಯ್ಯಲ್ಪಡುತ್ತಿರುವ ಅವನು ದಾಶಾರ್ಹ ಕೃಷ್ಣನನ್ನೂ ಪಾಂಡವ ಅರ್ಜುನನನ್ನೂ ತಿಳಿದಿಲ್ಲ.

07010041a ಪೂರ್ವದೇವೌ ಮಹಾತ್ಮಾನೌ ನರನಾರಾಯಣಾವುಭೌ|

07010041c ಏಕಾತ್ಮಾನೌ ದ್ವಿಧಾಭೂತೌ ದೃಶ್ಯೇತೇ ಮಾನವೈರ್ಭುವಿ||

ಅವರಿಬ್ಬರು ಮಹಾತ್ಮರೂ ಹಿಂದೆ ನರ-ನಾರಾಯಣ ದೇವರಾಗಿದ್ದರು. ಈಗ ಭೂಮಿಯಲ್ಲಿ ಮಾನವರಿಗೆ ಇಬ್ಬರಾಗಿ ಕಂಡರೂ ಅವರ ಆತ್ಮಗಳು ಒಂದು.

07010042a ಮನಸಾಪಿ ಹಿ ದುರ್ಧರ್ಷೌ ಸೇನಾಂ ಏತಾಂ ಯಶಸ್ವಿನೌ|

07010042c ನಾಶಯೇತಾಮಿಹೇಚ್ಚಂತೌ ಮಾನುಷತ್ವಾತ್ತು ನೇಚ್ಚತಃ||

ಈ ದುರ್ಧರ್ಷರು ಯಶಸ್ವಿಗಳು ಮನಸ್ಸಿನಿಂದ ಇಚ್ಛಿಸಿದರೂ ಈ ಸೇನೆಗಳನ್ನು ನಾಶಪಡಿಸಬಲ್ಲರು. ಮಾನುಷತ್ವದಿಂದಾಗಿ ಹಾಗೆ ಬಯಸುತ್ತಿಲ್ಲ.

07010043a ಯುಗಸ್ಯೇವ ವಿಪರ್ಯಾಸೋ ಲೋಕಾನಾಮಿವ ಮೋಹನಂ|

07010043c ಭೀಷ್ಮಸ್ಯ ಚ ವಧಸ್ತಾತ ದ್ರೋಣಸ್ಯ ಚ ಮಹಾತ್ಮನಃ||

ಅಯ್ಯಾ! ಯುಗಗಳ ವಿಪರ್ಯಾಸವು ಲೋಕಗಳನ್ನು ಮೋಹಗೊಳಿಸುವಂತೆ ಭೀಷ್ಮ ಮತ್ತು ದ್ರೋಣರ ವಧೆಗಳು ಮೋಹಗೊಳಿಸುತ್ತಿವೆ.

07010044a ನ ಹ್ಯೇವ ಬ್ರಹ್ಮಚರ್ಯೇಣ ನ ವೇದಾಧ್ಯಯನೇನ ಚ|

07010044c ನ ಕ್ರಿಯಾಭಿರ್ನ ಶಸ್ತ್ರೇಣ ಮೃತ್ಯೋಃ ಕಶ್ಚಿದ್ವಿಮುಚ್ಯತೇ||

ಬ್ರಹ್ಮಚರ್ಯದಿಂದಾಗಲೀ, ವೇದಾಧ್ಯಯನದಿಂದಾಗಲೀ, ಕ್ರಿಯೆಗಳಿಂದಾಗಲೀ ಅಥವಾ ಶಸ್ತ್ರಗಳಿಂದಾಗಲೀ ಯಾರೂ ಮೃತ್ಯುವಿನಿಂದ ಬಿಡುಗಡೆಹೊಂದಲಾರರು.

07010045a ಲೋಕಸಂಭಾವಿತೌ ವೀರೌ ಕೃತಾಸ್ತ್ರೌ ಯುದ್ಧದುರ್ಮದೌ|

07010045c ಭೀಷ್ಮದ್ರೋಣೌ ಹತೌ ಶ್ರುತ್ವಾ ಕಿಂ ನು ಜೀವಾಮಿ ಸಂಜಯ||

ಸಂಜಯ! ಲೋಕಸಂಭಾವಿತರಾದ, ವೀರರಾದ, ಕೃತಾಸ್ತ್ರರಾದ, ಯುದ್ಧದುರ್ಮದರಾದ ಭೀಷ್ಮ-ದ್ರೋಣರು ಹತರಾದುದನ್ನು ಕೇಳಿ ಇನ್ನೂ ಏಕೆ ನಾನು ಜೀವಿಸುತ್ತಿದ್ದೇನೆ?

07010046a ಯಾಂ ತಾಂ ಶ್ರಿಯಮಸೂಯಾಮಃ ಪುರಾ ಯಾತಾಂ ಯುಧಿಷ್ಠಿರೇ|

07010046c ಅದ್ಯ ತಾಮನುಜಾನೀಮೋ ಭೀಷ್ಮದ್ರೋಣವಧೇನ ಚ||

ಭೀಷ್ಮದ್ರೋಣರ ವಧೆಯಾದ ನಂತರ ನಾವು ಹಿಂದೆ ಯಾವ ಸಂಪತ್ತನ್ನು ನೋಡಿ ಅಸೂಯೆ ಪಡುತ್ತಿದ್ದೆವೋ ಯುಧಿಷ್ಠಿರನ ಅದೇ ಸಂಪತ್ತನ್ನು ಅವಲಂಬಿಸಿ ಜೀವಿಸಬೇಕಾಗಬಹುದು.

07010047a ತಥಾ ಚ ಮತ್ಕೃತೇ ಪ್ರಾಪ್ತಃ ಕುರೂಣಾಂ ಏಷ ಸಂಕ್ಷಯಃ|

07010047c ಪಕ್ವಾನಾಂ ಹಿ ವಧೇ ಸೂತ ವಜ್ರಾಯಂತೇ ತೃಣಾನ್ಯಪಿ||

ಕುರುಗಳ ಈ ನಾಶವು ನಾನು ಮಾಡಿದುದರಿಂದಲೇ ಬಂದೊದಗಿದೆ. ಸೂತ! ವಧಿಸಲು ಪಕ್ವವಾಗಿರುವಾಗ ಹುಲ್ಲುಗಳೂ ವಜ್ರಗಳಂತಾಗುತ್ತವೆ.

07010048a ಅನನ್ಯಮಿದಮೈಶ್ವರ್ಯಂ ಲೋಕೇ ಪ್ರಾಪ್ತೋ ಯುಧಿಷ್ಠಿರಃ|

07010048c ಯಸ್ಯ ಕೋಪಾನ್ಮಹೇಷ್ವಾಸೌ ಭೀಷ್ಮದ್ರೋಣೌ ನಿಪಾತಿತೌ||

ಯಾರ ಕೋಪದಿಂದ ಮಹೇಷ್ವಾಸ ಭೀಷ್ಮ-ದ್ರೋಣರು ಬಿದ್ದಿರುವರೋ ಆ ಯುದಿಷ್ಠಿರನು ಪಡೆಯಲಿರುವ ಈ ಐಶ್ವರ್ಯವು ಲೋಕದಲ್ಲಿಯೇ ಅನನ್ಯವಾದುದು.

07010049a ಪ್ರಾಪ್ತಃ ಪ್ರಕೃತಿತೋ ಧರ್ಮೋ ನಾಧರ್ಮೋ ಮಾನವಾನ್ಪ್ರತಿ|

07010049c ಕ್ರೂರಃ ಸರ್ವವಿನಾಶಾಯ ಕಾಲಃ ಸಮತಿವರ್ತತೇ||

ಪ್ರಾಕೃತಿಕವಾಗಿಯೇ ಧರ್ಮವು ಅವನ ಕಡೆಗಿದೆ ಮತ್ತು ಅಧರ್ಮವು ನಮ್ಮ ಕಡೆಗಿದೆ. ಸರ್ವ ವಿನಾಶಕ್ಕಾಗಿಯೇ ಕ್ರೂರ ಕಾಲವು ಉರುಳುತ್ತಿದೆ.

07010050a ಅನ್ಯಥಾ ಚಿಂತಿತಾ ಹ್ಯರ್ಥಾ ನರೈಸ್ತಾತ ಮನಸ್ವಿಭಿಃ|

07010050c ಅನ್ಯಥೈವ ಹಿ ಗಚ್ಚಂತಿ ದೈವಾದಿತಿ ಮತಿರ್ಮಮ||

ಅಯ್ಯಾ! ಬುದ್ಧಿವಂತ ನರರೂ ಒಂದು ರೀತಿ ಆಲೋಚಿಸಿದರೆ ದೈವವು ಅದನ್ನು ಬೇರೆಯಾಗಿಯೇ ನಡೆಸುತ್ತದೆ ಎಂದು ನನ್ನ ಅಭಿಪ್ರಾಯ.

07010051a ತಸ್ಮಾದಪರಿಹಾರ್ಯೇಽರ್ಥೇ ಸಂಪ್ರಾಪ್ತೇ ಕೃಚ್ಚ್ರ ಉತ್ತಮೇ|

07010051c ಅಪಾರಣೀಯೇ ದುಶ್ಚಿಂತ್ಯೇ ಯಥಾಭೂತಂ ಪ್ರಚಕ್ಷ್ವ ಮೇ||

ಆದುದರಿಂದ ಈ ಅತ್ಯಂತ ಕಷ್ಟಪರಿಸ್ಥಿತಿಯು ಹೇಗೆ ಬಂದಿತು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಹೇಗೆ ಆಗಲಿಲ್ಲ ಎನ್ನುವುದನ್ನು ನಡೆದ ಹಾಗೆ ನನಗೆ ಹೇಳು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಧೃತರಾಷ್ಟ್ರವಿಲಾಪೇ ದಶಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಧೃತರಾಷ್ಟ್ರವಿಲಾಪ ಎನ್ನುವ ಹತ್ತನೇ ಅಧ್ಯಾಯವು.

Image result for indian motifs against white background

Comments are closed.