Bhishma Parva: Chapter 94

ಭೀಷ್ಮ ಪರ್ವ: ಭೀಷ್ಮವಧ ಪರ್ವ

೯೪

ಅರ್ಜುನನ ಪರಾಕ್ರಮಗಳನ್ನು ನೆನಪಿಸಿಕೊಡುತ್ತಾ “ಯುದ್ಧದಲ್ಲಿ ಅವರಿಂದಲಾದರೂ ಹತನಾಗಿ ಯಮಸಾದನಕ್ಕೆ ಹೋಗುತ್ತೇನೆ. ಅಥವಾ ಅವರನ್ನು ಸಂಗ್ರಾಮದಲ್ಲಿ ಸಂಹರಿಸಿ ನಿನಗೆ ಪ್ರೀತಿಯಾದುದನ್ನು ಕೊಡುತ್ತೇನೆ.” ಎಂದು ಭೀಷ್ಮನು ದುರ್ಯೋಧನನನ್ನು ಕಳುಹಿಸಿದುದು (೧-೨೦).

06094001 ಸಂಜಯ ಉವಾಚ|

06094001a ವಾಕ್ಶಲ್ಯೈಸ್ತವ ಪುತ್ರೇಣ ಸೋಽತಿವಿದ್ಧಃ ಪಿತಾಮಹಃ|

06094001c ದುಃಖೇನ ಮಹತಾವಿಷ್ಟೋ ನೋವಾಚಾಪ್ರಿಯಮಣ್ವಪಿ||

ಸಂಜಯನು ಹೇಳಿದನು: “ನಿನ್ನ ಮಗನ ಮಾತೆಂಬ ಮುಳ್ಳುಗಳಿಂದ ಬಹಳ ಆಳದವರೆಗೂ ಚುಚ್ಚಲ್ಪಟ್ಟ ಪಿತಾಮಹನು ಮಹಾ ದುಃಖದಿಂದ ಆವಿಷ್ಟನಾದರೂ ಅಪ್ರಿಯವಾದುದೇನನ್ನೂ ಹೇಳಲಿಲ್ಲ.

06094002a ಸ ಧ್ಯಾತ್ವಾ ಸುಚಿರಂ ಕಾಲಂ ದುಃಖರೋಷಸಮನ್ವಿತಃ|

06094002c ಶ್ವಸಮಾನೋ ಯಥಾ ನಾಗಃ ಪ್ರಣುನ್ನೋ ವೈ ಶಲಾಕಯಾ||

06094003a ಉದ್ವೃತ್ಯ ಚಕ್ಷುಷೀ ಕೋಪಾನ್ನಿರ್ದಹನ್ನಿವ ಭಾರತ|

06094003c ಸದೇವಾಸುರಗಂಧರ್ವಂ ಲೋಕಂ ಲೋಕವಿದಾಂ ವರಃ|

06094003e ಅಬ್ರವೀತ್ತವ ಪುತ್ರಂ ತು ಸಾಮಪೂರ್ವಮಿದಂ ವಚಃ||

ದುಃಖರೋಷಸಮನ್ವಿತನಾದ ಲೋಕವಿದರಲ್ಲಿ ಶ್ರೇಷ್ಠನು ಅಂಕುಶದಿಂದ ನೋಯಿಸಲ್ಪಟ್ಟ ಆನೆಯಂತೆ ನಿಟ್ಟುಸಿರು ಬಿಡುತ್ತಾ, ಕೋಪದಿಂದ ದೇವಾಸುರಗಂಧರ್ವರೊಡನೆ ಲೋಕಗಳನ್ನು ಸುಟ್ಟುಬಿಡುವನೋ ಎನ್ನುವಂತೆ ಕಣ್ಣುಗಳನ್ನು ಮೇಲೆತ್ತಿ ಬಹಳ ಹೊತ್ತು ಆಲೋಚಿಸಿ ನಿನ್ನ ಮಗನಿಗೆ ಸಾಮದಿಂದ ಕೂಡಿದ ಈ ಮಾತನ್ನಾಡಿದನು:

06094004a ಕಿಂ ನು ದುರ್ಯೋಧನೈವಂ ಮಾಂ ವಾಕ್ಶಲ್ಯೈರುಪವಿಧ್ಯಸಿ|

06094004c ಘಟಮಾನಂ ಯಥಾಶಕ್ತಿ ಕುರ್ವಾಣಂ ಚ ತವ ಪ್ರಿಯಂ|

06094004e ಜುಹ್ವಾನಂ ಸಮರೇ ಪ್ರಾಣಾಂಸ್ತವೈವ ಹಿತಕಾಮ್ಯಯಾ||

“ದುರ್ಯೋಧನ! ಏಕೆ ಹೀಗೆ ನನ್ನನ್ನು ಮಾತೆಂಬ ಶಲ್ಯಗಳಿಂದ ನೋಯಿಸುತ್ತಿರುವೆ? ನಿನಗೆ ಪ್ರಿಯವಾದುದನ್ನು ಮಾಡಲು ಯಥಶಕ್ತಿಯಾಗಿ ಪ್ರಯತ್ನಿಸುತ್ತಿದ್ದೇನೆ. ನಿನ್ನ ಹಿತವನ್ನೇ ಬಯಸಿ ಸಮರಾಗ್ನಿಯಲ್ಲಿ ಪ್ರಾಣಗಳನ್ನು ಅರ್ಪಿಸುತ್ತಿದ್ದೇನೆ.

06094005a ಯದಾ ತು ಪಾಂಡವಃ ಶೂರಃ ಖಾಂಡವೇಽಗ್ನಿಮತರ್ಪಯತ್|

06094005c ಪರಾಜಿತ್ಯ ರಣೇ ಶಕ್ರಂ ಪರ್ಯಾಪ್ತಂ ತನ್ನಿದರ್ಶನಂ||

ಶೂರ ಪಾಂಡವನು ರಣದಲ್ಲಿ ಶಕ್ರನನ್ನು ಪರಾಜಯಗೊಳಿಸಿ ಖಾಂಡವವನ್ನಿತ್ತು ಅಗ್ನಿಯನ್ನು ಎಂದು ತೃಪ್ತಿಪಡಿಸಿದನೋ ಅದೇ ಪರ್ಯಾಪ್ತವಾದ ನಿದರ್ಶನವಾಗಿತ್ತು.

06094006a ಯದಾ ಚ ತ್ವಾಂ ಮಹಾಬಾಹೋ ಗಂಧರ್ವೈರ್ಹೃತಮೋಜಸಾ|

06094006c ಅಮೋಚಯತ್ಪಾಂಡುಸುತಃ ಪರ್ಯಾಪ್ತಂ ತನ್ನಿದರ್ಶನಂ||

ಮಹಾಬಾಹೋ! ಎಂದು ಅಪಹರಿಸಲ್ಪಟ್ಟ ನಿನ್ನನ್ನು ಗಂಧರ್ವರಿಂದ ಪಾಂಡವನು ಬಿಡುಗಡೆ ಮಾಡಿದನೋ ಅದೇ ಪರ್ಯಾಪ್ತ ನಿದರ್ಶನವು.

06094007a ದ್ರವಮಾಣೇಷು ಶೂರೇಷು ಸೋದರೇಷು ತಥಾಭಿಭೋ|

06094007c ಸೂತಪುತ್ರೇ ಚ ರಾಧೇಯೇ ಪರ್ಯಾಪ್ತಂ ತನ್ನಿದರ್ಶನಂ||

ವಿಭೋ! ನಿನ್ನ ಶೂರ ಸೋದರರು ಮತ್ತು ಸೂತಪುತ್ರ ರಾಧೇಯನು ಓಡಿಹೋದದ್ದೇ ಪರ್ಯಾಪ್ತ ನಿದರ್ಶನವು.

06094008a ಯಚ್ಚ ನಃ ಸಹಿತಾನ್ಸರ್ವಾನ್ವಿರಾಟನಗರೇ ತದಾ|

06094008c ಏಕ ಏವ ಸಮುದ್ಯಾತಃ ಪರ್ಯಾಪ್ತಂ ತನ್ನಿದರ್ಶನಂ||

ನಾವೆಲ್ಲರೂ ವಿರಾಟನಗರದಲ್ಲಿ ಒಟ್ಟಿಗೇ ಇದ್ದಾಗ ಅವನು ಒಬ್ಬನೇ ನಮ್ಮೊಡನೆ ಯುದ್ಧಮಾಡಿ ಜಯಿಸಿದುದೇ ಪರ್ಯಾಪ್ತ ನಿದರ್ಶನವು.

06094009a ದ್ರೋಣಂ ಚ ಯುಧಿ ಸಂರಬ್ಧಂ ಮಾಂ ಚ ನಿರ್ಜಿತ್ಯ ಸಂಯುಗೇ|

06094009c ಕರ್ಣಂ ಚ ತ್ವಾಂ ಚ ದ್ರೌಣಿಂ ಚ ಕೃಪಂ ಚ ಸುಮಹಾರಥಂ|

06094009e ವಾಸಾಂಸಿ ಸ ಸಮಾದತ್ತ ಪರ್ಯಾಪ್ತಂ ತನ್ನಿದರ್ಶನಂ||

ಯುದ್ಧದಲ್ಲಿ ದ್ರೋಣನನ್ನೂ ದಿಗ್ಭ್ರಮೆಗೊಳಿಸಿ, ನನ್ನನ್ನೂ, ಕರ್ಣನನ್ನೂ, ದ್ರೌಣಿಯನ್ನೂ, ಸುಮಹಾರಥ ಕೃಪನನ್ನೂ ಸಂಯುಗದಲ್ಲಿ ಸೋಲಿಸಿ, ವಸ್ತ್ರಗಳನ್ನು ತೆಗೆದುಕೊಂಡು ಹೋದ ಅದೇ ಪರ್ಯಾಪ್ತ ನಿದರ್ಶನವು.

06094010a ನಿವಾತಕವಚಾನ್ಯುದ್ಧೇ ವಾಸವೇನಾಪಿ ದುರ್ಜಯಾನ್|

06094010c ಜಿತವಾನ್ಸಮರೇ ಪಾರ್ಥಃ ಪರ್ಯಾಪ್ತಂ ತನ್ನಿದರ್ಶನಂ||

ಯುದ್ಧದಲ್ಲಿ ವಾಸವನಿಗೂ ಜಯಿಸಲಸಾದ್ಯರಾದ ನಿವಾತಕವಚರನ್ನು ಸಮರದಲ್ಲಿ ಗೆದ್ದ ಪಾರ್ಥನೇ ಪರ್ಯಾಪ್ತ ನಿದರ್ಶನವು.

06094011a ಕೋ ಹಿ ಶಕ್ತೋ ರಣೇ ಜೇತುಂ ಪಾಂಡವಂ ರಭಸಂ ರಣೇ|

06094011c ತ್ವಂ ತು ಮೋಹಾನ್ನ ಜಾನೀಷೇ ವಾಚ್ಯಾವಾಚ್ಯಂ ಸುಯೋಧನ||

ರಣದಲ್ಲಿ ರಭಸನಾಗಿರುವ ಪಾಂಡವನನ್ನು ರಣದಲ್ಲಿ ಗೆಲ್ಲಲು ಯಾರುತಾನೇ ಶಕ್ತರು? ಮೋಹದಿಂದ ನೀನು ಏನನ್ನು ಹೇಳಬೇಕು ಏನನ್ನು ಹೇಳಬಾರದು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ.

06094012a ಮುಮೂರ್ಷುರ್ಹಿ ನರಃ ಸರ್ವಾನ್ವೃಕ್ಷಾನ್ಪಶ್ಯತಿ ಕಾಂಚನಾನ್|

06094012c ತಥಾ ತ್ವಮಪಿ ಗಾಂಧಾರೇ ವಿಪರೀತಾನಿ ಪಶ್ಯಸಿ||

ಗಾಂಧಾರೇ! ಮರಣವು ಸನ್ನಿಹಿತವಾದಾಗ ಮನುಷ್ಯನು ಎಲ್ಲ ವೃಕ್ಷಗಳನ್ನೂ ಕಾಂಚನದವುಗಳೆಂದೇ ಕಾಣುತ್ತಾನೆ. ಹಾಗೆ ನೀನೂ ಕೂಡ ವಿಪರೀತಗಳನ್ನು ಕಾಣುತ್ತಿದ್ದೀಯೆ.

06094013a ಸ್ವಯಂ ವೈರಂ ಮಹತ್ಕೃತ್ವಾ ಪಾಂಡವೈಃ ಸಹಸೃಂಜಯೈಃ|

06094013c ಯುಧ್ಯಸ್ವ ತಾನದ್ಯ ರಣೇ ಪಶ್ಯಾಮಃ ಪುರುಷೋ ಭವ||

ಸ್ವಯಂ ನೀನೇ ಸೃಂಜಯರು ಮತ್ತು ಪಾಂಡವರೊಂದಿಗೆ ಮಹಾ ವೈರವನ್ನು ಕಟ್ಟಿಕೊಂಡಿರುವೆ. ಇಂದು ನೀನೇ ರಣದಲ್ಲಿ ಯುದ್ಧಮಾಡು. ಪುರುಷನಾಗು. ನೋಡುತ್ತೇವೆ.

06094014a ಅಹಂ ತು ಸೋಮಕಾನ್ಸರ್ವಾನ್ಸಪಾಂಚಾಲಾನ್ಸಮಾಗತಾನ್|

06094014c ನಿಹನಿಷ್ಯೇ ನರವ್ಯಾಘ್ರ ವರ್ಜಯಿತ್ವಾ ಶಿಖಂಡಿನಂ||

ನರವ್ಯಾಘ್ರ! ನಾನಾದರೋ ಶಿಖಂಡಿಯನ್ನು ಬಿಟ್ಟು ಸೇರಿರುವ ಸರ್ವ ಸೋಮಕರನ್ನೂ ಪಾಂಚಾಲರನ್ನೂ ಸಂಹರಿಸುತ್ತೇನೆ.

06094015a ತೈರ್ವಾಹಂ ನಿಹತಃ ಸಂಖ್ಯೇ ಗಮಿಷ್ಯೇ ಯಮಸಾದನಂ|

06094015c ತಾನ್ವಾ ನಿಹತ್ಯ ಸಂಗ್ರಾಮೇ ಪ್ರೀತಿಂ ದಾಸ್ಯಾಮಿ ವೈ ತವ||

ಯುದ್ಧದಲ್ಲಿ ಅವರಿಂದಲಾದರೂ ಹತನಾಗಿ ಯಮಸಾದನಕ್ಕೆ ಹೋಗುತ್ತೇನೆ. ಅಥವಾ ಅವರನ್ನು ಸಂಗ್ರಾಮದಲ್ಲಿ ಸಂಹರಿಸಿ ನಿನಗೆ ಪ್ರೀತಿಯಾದುದನ್ನು ಕೊಡುತ್ತೇನೆ.

06094016a ಪೂರ್ವಂ ಹಿ ಸ್ತ್ರೀ ಸಮುತ್ಪನ್ನಾ ಶಿಖಂಡೀ ರಾಜವೇಶ್ಮನಿ|

06094016c ವರದಾನಾತ್ಪುಮಾಂ ಜಾತಃ ಸೈಷಾ ವೈ ಸ್ತ್ರೀ ಶಿಖಂಡಿನೀ||

ಶಿಖಂಡಿಯು ಹಿಂದೆ ರಾಜಮನೆಯಲ್ಲಿ ಸ್ತ್ರೀಯಾಗಿಯೇ ಹುಟ್ಟಿದ್ದನು. ಸ್ತ್ರೀಯಾಗಿದ್ದ ಶಿಖಂಡಿನಿಯು ವರದಾನದಿಂದ ಪುರುಷನಾದನು.

06094017a ತಾಮಹಂ ನ ಹನಿಷ್ಯಾಮಿ ಪ್ರಾಣತ್ಯಾಗೇಽಪಿ ಭಾರತ|

06094017c ಯಾಸೌ ಪ್ರಾಮ್ನಿರ್ಮಿತಾ ಧಾತ್ರಾ ಸೈಷಾ ವೈ ಸ್ತ್ರೀ ಶಿಖಂಡಿನೀ||

ಭಾರತ! ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ನಾನು ಅವನನ್ನು ಸಂಹರಿಸುವುದಿಲ್ಲ. ಧಾತ್ರನಿಂದ ನಿರ್ಮಿತಳಾಗಿದ್ದ ಶಿಖಂಡಿನಿಯು ಈಗಲೂ ಸ್ತ್ರೀಯೆಂದೇ ಮನ್ನಿಸುತ್ತೇನೆ.

06094018a ಸುಖಂ ಸ್ವಪಿಹಿ ಗಾಂಧಾರೇ ಶ್ವೋಽಸ್ಮಿ ಕರ್ತಾ ಮಹಾರಣಂ|

06094018c ಯಜ್ಜನಾಃ ಕಥಯಿಷ್ಯಂತಿ ಯಾವತ್ಸ್ಥಾಸ್ಯತಿ ಮೇದಿನೀ||

ಗಾಂಧಾರೇ! ಸುಖವಾಗಿ ನಿದ್ದೆಮಾಡು. ಎಲ್ಲಿಯವರೆಗೆ ಮೇದಿನಿಯಿರುವಳೋ ಅಲ್ಲಿಯವರೆಗೆ ಜನರು ಮಾತನಾಡಿಕೊಳ್ಳುವಂಥಹ ಮಹಾರಣವನ್ನು ನಾನು ನಾಳೆ ನಿರ್ಮಿಸುತ್ತೇನೆ.”

06094019a ಏವಮುಕ್ತಸ್ತವ ಸುತೋ ನಿರ್ಜಗಾಮ ಜನೇಶ್ವರ|

06094019c ಅಭಿವಾದ್ಯ ಗುರುಂ ಮೂರ್ಧ್ನಾ ಪ್ರಯಯೌ ಸ್ವಂ ನಿವೇಶನಂ||

ಜನೇಶ್ವರ! ಹೀಗೆ ಹೇಳಲು ನಿನ್ನ ಮಗನು ಗುರುವಿಗೆ ತಲೆಬಾಗಿ ನಮಸ್ಕರಿಸಿ ತನ್ನ ಬಿಡಾರಕ್ಕೆ ತೆರಳಿದನು.

06094020a ಆಗಮ್ಯ ತು ತತೋ ರಾಜಾ ವಿಸೃಜ್ಯ ಚ ಮಹಾಜನಂ|

06094020c ಪ್ರವಿವೇಶ ತತಸ್ತೂರ್ಣಂ ಕ್ಷಯಂ ಶತ್ರುಕ್ಷಯಂಕರಃ|

06094020e ಪ್ರವಿಷ್ಟಃ ಸ ನಿಶಾಂ ತಾಂ ಚ ಗಮಯಾಮಾಸ ಪಾರ್ಥಿವಃ||

ಆಗಮಿಸಿ ರಾಜನು ಮಹಾಜನರನ್ನು ಕಳುಹಿಸಿದನು. ಆ ಶತ್ರುಕ್ಷಯಂಕರ ಪಾರ್ಥಿವನು ತಕ್ಷಣವೇ ಡೇರೆಯನ್ನು ಪ್ರವೇಶಿಸಿ ರಾತ್ರಿಯನ್ನು ಕಳೆದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮದುರ್ಯೋಧನಸಂವಾದೇ ಚತುನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮದುರ್ಯೋಧನಸಂವಾದ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.

Image result for indian motifs against white background

Comments are closed.