Bhishma Parva: Chapter 84

ಭೀಷ್ಮ ಪರ್ವ: ಭೀಷ್ಮವಧ ಪರ್ವ

೮೪

ಭೀಷ್ಮ-ಭೀಮಸೇನರ ಯುದ್ಧ (೧-೧೧). ಭೀಮಸೇನನಿಂದ ಧೃತರಾಷ್ಟ್ರನ ಎಂಟು ಮಕ್ಕಳು – ಸುನಾಭ, ಆದಿತ್ಯಕೇತು, ಬಹ್ವಾಶೀ, ಕುಂಡಧಾರ, ಮಹೋದರ, ಅಪರಾಜಿತ, ಪಂಡಿತಕ ಮತ್ತು ವಿಶಾಲಾಕ್ಷರ ವಧೆ (೧೨-೨೮). ದುರ್ಯೋಧನ-ಭೀಷ್ಮರ ಸಂವಾದ (೨೯-೪೩).

06084001 ಸಂಜಯ ಉವಾಚ|

06084001a ಭೀಷ್ಮಂ ತು ಸಮರೇ ಕ್ರುದ್ಧಂ ಪ್ರತಪಂತಂ ಸಮಂತತಃ|

06084001c ನ ಶೇಕುಃ ಪಾಂಡವಾ ದ್ರಷ್ಟುಂ ತಪಂತಂ ಇವ ಭಾಸ್ಕರಂ||

ಸಂಜಯನು ಹೇಳಿದನು: “ಸಮರದಲ್ಲಿ ಕ್ರುದ್ಧನಾಗಿ ಎಲ್ಲ ಕಡೆಗಳಲ್ಲಿ ದಹಿಸುತ್ತಿದ್ದ ಭೀಷ್ಮನನ್ನು ಸುಡುತ್ತಿರುವ ಭಾಸ್ಕರನನಂತೆ ಪಾಂಡವರು ನೋಡಲು ಅಶಕ್ಯರಾದರು.

06084002a ತತಃ ಸರ್ವಾಣಿ ಸೈನ್ಯಾನಿ ಧರ್ಮಪುತ್ರಸ್ಯ ಶಾಸನಾತ್|

06084002c ಅಭ್ಯದ್ರವಂತ ಗಾಂಗೇಯಂ ಮರ್ದಯಂತಂ ಶಿತೈಃ ಶರೈಃ||

ಆಗ ಧರ್ಮಪುತ್ರನ ಶಾಸನದಂತೆ ಸೈನ್ಯಗಳೆಲ್ಲವೂ ಗಾಂಗೇಯನನ್ನು ಆಕ್ರಮಿಸಿ ನಿಶಿತ ಶರಗಳಿಂದ ಗಾಯಗೊಳಿಸಿದವು.

06084003a ಸ ತು ಭೀಷ್ಮೋ ರಣಶ್ಲಾಘೀ ಸೋಮಕಾನ್ಸಹಸೃಂಜಯಾನ್|

06084003c ಪಾಂಚಾಲಾಂಶ್ಚ ಮಹೇಷ್ವಾಸಾನ್ಪಾತಯಾಮಾಸ ಸಾಯಕೈಃ||

ರಣಶ್ಲಾಘೀ ಭೀಷ್ಮನಾದರೋ ಸೃಂಜಯರೊಂದಿಗೆ ಸೋಮಕರನ್ನು ಮತ್ತು ಮಹೇಷ್ವಾಸ ಪಾಂಚಾಲರನ್ನು ಸಾಯಕಗಳಿಂದ ಉರುಳಿಸಿದನು.

06084004a ತೇ ವಧ್ಯಮಾನಾ ಭೀಷ್ಮೇಣ ಪಾಂಚಾಲಾಃ ಸೋಮಕೈಃ ಸಹ|

06084004c ಭೀಷ್ಮಮೇವಾಭ್ಯಯುಸ್ತೂರ್ಣಂ ತ್ಯಕ್ತ್ವಾ ಮೃತ್ಯುಕೃತಂ ಭಯಂ||

ಭೀಷ್ಮನಿಂದ ವಧಿಸಲ್ಪಡುತ್ತಿದ್ದ ಸೋಮಕರೊಡನೆ ಪಾಂಚಾಲರು ಸಾವಿನ ಭಯವನ್ನು ತೊರೆದು ಭೀಷ್ಮನನ್ನೇ ಪುನಃ ಆಕ್ರಮಣಿಸಿದರು.

06084005a ಸ ತೇಷಾಂ ರಥಿನಾಂ ವೀರೋ ಭೀಷ್ಮಃ ಶಾಂತನವೋ ಯುಧಿ|

06084005c ಚಿಚ್ಛೇದ ಸಹಸಾ ರಾಜನ್ಬಾಹೂನಥ ಶಿರಾಂಸಿ ಚ||

ಆದರೆ ರಾಜನ್! ಯುದ್ಧದಲ್ಲಿ ವೀರ ಭೀಷ್ಮ ಶಾಂತನವನು ಕೂಡಲೇ ಆ ರಥಿಗಳ ಬಾಹು-ಶಿರಸ್ಸುಗಳನ್ನು ತುಂಡರಿಸಿದನು.

06084006a ವಿರಥಾನ್ರಥಿನಶ್ಚಕ್ರೇ ಪಿತಾ ದೇವವ್ರತಸ್ತವ|

06084006c ಪತಿತಾನ್ಯುತ್ತಮಾಂಗಾನಿ ಹಯೇಭ್ಯೋ ಹಯಸಾದಿನಾಂ||

ನಿನ್ನ ತಂದೆ ದೇವವ್ರತನು ರಥಿಗಳನ್ನು ವಿರಥರನ್ನಾಗಿ ಮಾಡಿದನು. ಅಶ್ವಾರೋಹಿಗಳ ಮತ್ತು ಕುದುರೆಗಳ ಶಿರಗಳನ್ನು ಉರುಳಿಸಿದನು.

06084007a ನಿರ್ಮನುಷ್ಯಾಂಶ್ಚ ಮಾತಂಗಾಂ ಶಯಾನಾನ್ಪರ್ವತೋಪಮಾನ್|

06084007c ಅಪಶ್ಯಾಮ ಮಹಾರಾಜ ಭೀಷ್ಮಾಸ್ತ್ರೇಣ ಪ್ರಮೋಹಿತಾನ್||

ಮಹಾರಾಜ! ಭೀಷ್ಮನ ಅಸ್ತ್ರಗಳಿಂದ, ಮಾವುತರಿಲ್ಲದೇ ಪ್ರಮೋಹಿತಗೊಂಡು ಮಲಗಿದ್ದ ಪರ್ವತೋಪಮ ಆನೆಗಳನ್ನು ನೋಡಿದೆವು.

06084008a ನ ತತ್ರಾಸೀತ್ಪುಮಾನ್ಕಶ್ಚಿತ್ಪಾಂಡವಾನಾಂ ವಿಶಾಂ ಪತೇ|

06084008c ಅನ್ಯತ್ರ ರಥಿನಾಂ ಶ್ರೇಷ್ಠಾದ್ಭೀಮಸೇನಾನ್ಮಹಾಬಲಾತ್||

ವಿಶಾಂಪತೇ! ರಥಿಗಳಲ್ಲಿ ಶ್ರೇಷ್ಠ ಮಹಾಬಲ ಭೀಮಸೇನನಲ್ಲದೇ ಪಾಂಡವ ಸೇನೆಯಲ್ಲಿ ಬೇರೆ ಯಾವ ಪುರುಷನೂ ಇರಲಿಲ್ಲ.

06084009a ಸ ಹಿ ಭೀಷ್ಮಂ ಸಮಾಸಾದ್ಯ ತಾಡಯಾಮಾಸ ಸಂಯುಗೇ|

06084009c ತತೋ ನಿಷ್ಟಾನಕೋ ಘೋರೋ ಭೀಷ್ಮಭೀಮಸಮಾಗಮೇ||

ಅವನೇ ಸಂಯುಗದಲ್ಲಿ ಭೀಷ್ಮನನ್ನು ಎದುರಿಸಿ ಪ್ರಹರಿಸತೊಡಗಿದನು. ಆಗ ಭೀಷ್ಮ-ಭೀಮ ಸಮಾಗಮದ ಘೋರ ಯುದ್ಧವು ನಡೆಯಿತು.

06084010a ಬಭೂವ ಸರ್ವಸೈನ್ಯಾನಾಂ ಘೋರರೂಪೋ ಭಯಾನಕಃ|

06084010c ತಥೈವ ಪಾಂಡವಾ ಹೃಷ್ಟಾಃ ಸಿಂಹನಾದಮಥಾನದನ್||

ಅವನು ಎಲ್ಲ ಸೇನೆಗಳಿಗೂ ಘೋರರೂಪಿ ಭಯಾನಕನಾಗಿ ಕಂಡನು. ಆಗ ಪಾಂಡವರು ಹೃಷ್ಟರಾಗಿ ಸಿಂಹನಾದಗೈದರು.

06084011a ತತೋ ದುರ್ಯೋಧನೋ ರಾಜಾ ಸೋದರ್ಯೈಃ ಪರಿವಾರಿತಃ|

06084011c ಭೀಷ್ಮಂ ಜುಗೋಪ ಸಮರೇ ವರ್ತಮಾನೇ ಜನಕ್ಷಯೇ||

ಆಗ ರಾಜಾ ದುರ್ಯೋಧನನು ಸೋದರರಿಂದ ಸುತ್ತುವರೆಯಲ್ಪಟ್ಟು ಜನಕ್ಷಯವು ನಡೆಯುತ್ತಿರುವ ಸಮರದಲ್ಲಿ ಭೀಷ್ಮನನ್ನು ರಕ್ಷಿಸಿದನು.

06084012a ಭೀಮಸ್ತು ಸಾರಥಿಂ ಹತ್ವಾ ಭೀಷ್ಮಸ್ಯ ರಥಿನಾಂ ವರಃ|

06084012c ವಿದ್ರುತಾಶ್ವೇ ರಥೇ ತಸ್ಮಿನ್ದ್ರವಮಾಣೇ ಸಮಂತತಃ|

06084012e ಸುನಾಭಸ್ಯ ಶರೇಣಾಶು ಶಿರಶ್ಚಿಚ್ಛೇದ ಚಾರಿಹಾ||

ರಥಿಗಳಲ್ಲಿ ಶ್ರೇಷ್ಠ ಅರಿಹ ಭೀಮನಾದರೋ ಭೀಷ್ಮನ ಸಾರಥಿಯನ್ನು ಕೊಂದು, ನಿಯಂತ್ರಣವಿಲ್ಲದೇ ಅವನ ರಥದ ಕುದುರೆಗಳು ಎಲ್ಲ ಕಡೆ ಓಡಿಹೋಗುತ್ತಿರಲು ಶರದಿಂದ ಸುನಾಭನ ತಲೆಯನ್ನು ಕತ್ತರಿಸಿದನು.

06084013a ಕ್ಷುರಪ್ರೇಣ ಸುತೀಕ್ಷ್ಣೇನ ಸ ಹತೋ ನ್ಯಪತದ್ಭುವಿ|

06084013c ಹತೇ ತಸ್ಮಿನ್ಮಹಾರಾಜ ತವ ಪುತ್ರೇ ಮಹಾರಥೇ|

06084013e ನಾಮೃಷ್ಯಂತ ರಣೇ ಶೂರಾಃ ಸೋದರ್ಯಾಃ ಸಪ್ತ ಸಂಯುಗೇ||

ಸುತೀಕ್ಷ್ಣ ಕ್ಷುರಪ್ರದಿಂದ ಹತನಾಗಿ ಅವನು ಭೂಮಿಯ ಮೇಲೆ ಬಿದ್ದನು. ಮಹಾರಾಜ! ಅವನು ಹತನಾಗಲು ನಿನ್ನ ಪುತ್ರರು ಮಹಾರಥ ಶೂರರು ಏಳು ಮಂದಿ ಸೋದರರು ರಣದಲ್ಲಿ ಅದನ್ನು ಸಹಿಸಿಕೊಳ್ಳಲಿಲ್ಲ.

06084014a ಆದಿತ್ಯಕೇತುರ್ಬಹ್ವಾಶೀ ಕುಂಡಧಾರೋ ಮಹೋದರಃ|

06084014c ಅಪರಾಜಿತಃ ಪಂಡಿತಕೋ ವಿಶಾಲಾಕ್ಷಃ ಸುದುರ್ಜಯಃ||

06084015a ಪಾಂಡವಂ ಚಿತ್ರಸಮ್ನಾಹಾ ವಿಚಿತ್ರಕವಚಧ್ವಜಾಃ|

06084015c ಅಭ್ಯದ್ರವಂತ ಸಂಗ್ರಾಮೇ ಯೋದ್ಧುಕಾಮಾರಿಮರ್ದನಾಃ||

ಆದಿತ್ಯಕೇತು, ಬಹ್ವಾಶೀ, ಕುಂಡಧಾರ, ಮಹೋದರ, ಅಪರಾಜಿತ, ಪಂಡಿತಕ ಮತ್ತು ಸುದುರ್ಜಯ ವಿಶಾಲಾಕ್ಷ ಈ ಅರಿಮರ್ದನರು ವಿಚಿತ್ರವಾಗಿ ಸನ್ನದ್ಧರಾಗಿ, ವಿಚಿತ್ರ ಕವಚ-ಧ್ವಜಗಳೊಂದಿಗೆ ಯುದ್ಧಮಾಡಲು ಬಯಸಿ ಸಂಗ್ರಾಮದಲ್ಲಿ ಪಾಂಡವನನ್ನು ಆಕ್ರಮಣಿಸಿದರು.

06084016a ಮಹೋದರಸ್ತು ಸಮರೇ ಭೀಮಂ ವಿವ್ಯಾಧ ಪತ್ರಿಭಿಃ|

06084016c ನವಭಿರ್ವಜ್ರಸಂಕಾಶೈರ್ನಮುಚಿಂ ವೃತ್ರಹಾ ಯಥಾ||

ಮಹೋದರನಾದರೋ ಸಮರದಲ್ಲಿ ವೃತ್ರಹನು ನಮುಚಿಯನ್ನು ಹೇಗೋ ಹಾಗೆ ಒಂಭತ್ತು ವಜ್ರಸಂಕಾಶ ಪತ್ರಿಗಳಿಂದ ಭೀಮನನ್ನು ಹೊಡೆದನು.

06084017a ಆದಿತ್ಯಕೇತುಃ ಸಪ್ತತ್ಯಾ ಬಹ್ವಾಶೀ ಚಾಪಿ ಪಂಚಭಿಃ|

06084017c ನವತ್ಯಾ ಕುಂಡಧಾರಸ್ತು ವಿಶಾಲಾಕ್ಷಶ್ಚ ಸಪ್ತಭಿಃ||

06084018a ಅಪರಾಜಿತೋ ಮಹಾರಾಜ ಪರಾಜಿಷ್ಣುರ್ಮಹಾರಥಃ|

06084018c ಶರೈರ್ಬಹುಭಿರಾನರ್ಚದ್ಭೀಮಸೇನಂ ಮಹಾಬಲಂ||

ಮಹಾರಾಜ! ಶತ್ರುವನ್ನು ಗೆಲ್ಲಲು ಆದಿತ್ಯಕೇತುವು ಏಳರಿಂದ, ಬಹ್ವಾಶಿಯು ಐದರಿಂದ, ಕುಂಡಧಾರನು ಒಂಭತ್ತರಿಂದ, ವಿಶಾಲಾಕ್ಷನು ಏಳರಿಂದ, ಮತ್ತು ಮಹಾರಥ ಅಪರಾಜಿತನು ಅನೇಕ ಶರಗಳಿಂದ ಮಹಾಬಲ ಭೀಮಸೇನನನ್ನು ಹೊಡೆದರು.

06084019a ರಣೇ ಪಂಡಿತಕಶ್ಚೈನಂ ತ್ರಿಭಿರ್ಬಾಣೈಃ ಸಮರ್ದಯತ್|

06084019c ಸ ತನ್ನ ಮಮೃಷೇ ಭೀಮಃ ಶತ್ರುಭಿರ್ವಧಮಾಹವೇ||

ಪಂಡಿತಕನೂ ಕೂಡ ರಣದಲ್ಲಿ ಮೂರು ಬಾಣಗಳಿಂದ ಹೊಡೆದನು. ಆಹವದಲ್ಲಿ ಶತ್ರುಗಳ ಆ ಪ್ರಹಾರಗಳನ್ನು ಭೀಮನು ಸಹಿಸಿಕೊಳ್ಳಲಿಲ್ಲ.

06084020a ಧನುಃ ಪ್ರಪೀಡ್ಯ ವಾಮೇನ ಕರೇಣಾಮಿತ್ರಕರ್ಶನಃ|

06084020c ಶಿರಶ್ಚಿಚ್ಛೇದ ಸಮರೇ ಶರೇಣ ನತಪರ್ವಣಾ||

06084021a ಅಪರಾಜಿತಸ್ಯ ಸುನಸಂ ತವ ಪುತ್ರಸ್ಯ ಸಂಯುಗೇ|

06084021c ಪರಾಜಿತಸ್ಯ ಭೀಮೇನ ನಿಪಪಾತ ಶಿರೋ ಮಹೀಂ||

ಆ ಅಮಿತ್ರಕರ್ಶನನು ಧನುಸ್ಸನ್ನು ಎಡಗೈಯಿಂದ ಮೀಟಿ ನತಪರ್ವ ಶರದಿಂದ ಸಂಯುಗದಲ್ಲಿ ನಿನ್ನ ಮಗ ಅಪರಾಜಿತನ ಸುನಸ ಶಿರವನ್ನು ಕತ್ತರಿಸಿದನು. ಭೀಮನಿಂದ ಹೊಡೆಯಲ್ಪಟ್ಟ ಅಪರಾಜಿತನ ಶಿರವು ಭೂಮಿಯ ಮೇಲೆ ಬಿದ್ದಿತು.

06084022a ಅಥಾಪರೇಣ ಭಲ್ಲೇನ ಕುಂಡಧಾರಂ ಮಹಾರಥಂ|

06084022c ಪ್ರಾಹಿಣೋನ್ಮೃತ್ಯುಲೋಕಾಯ ಸರ್ವಲೋಕಸ್ಯ ಪಶ್ಯತಃ||

ಆಗ ಇನ್ನೊಂದು ಭಲ್ಲದಿಂದ, ಸರ್ವಲೋಕವೂ ನೋಡುತ್ತಿದ್ದಂತೆ ಮಹಾರಥ ಕುಂಡಧಾರನನ್ನು ಮೃತ್ಯುಲೋಕಕ್ಕೆ ಕಳುಹಿಸಿದನು.

06084023a ತತಃ ಪುನರಮೇಯಾತ್ಮಾ ಪ್ರಸಂಧಾಯ ಶಿಲೀಮುಖಂ|

06084023c ಪ್ರೇಷಯಾಮಾಸ ಸಮರೇ ಪಂಡಿತಂ ಪ್ರತಿ ಭಾರತ||

ಭಾರತ! ಆಗ ಪುನಃ ಆ ಅಮೇಯಾತ್ಮನು ಶಿಲೀಮುಖಿಯನ್ನು ಹೂಡಿ ಸಮರದಲ್ಲಿ ಪಂಡಿತಕನ ಮೇಲೆ ಪ್ರಯೋಗಿಸಿದನು.

06084024a ಸ ಶರಃ ಪಂಡಿತಂ ಹತ್ವಾ ವಿವೇಶ ಧರಣೀತಲಂ|

06084024c ಯಥಾ ನರಂ ನಿಹತ್ಯಾಶು ಭುಜಗಃ ಕಾಲಚೋದಿತಃ||

ಕಾಲಚೋದಿತ ಸರ್ಪವು ಮನುಷ್ಯನನ್ನು ಕಚ್ಚಿ ಬಿಲವನ್ನು ಸೇರಿಕೊಳ್ಳುವಂತೆ ಆ ಶರವು ಪಂಡಿತಕನನ್ನು ಸಂಹರಿಸಿ ಧರಣೀತಲವನ್ನು ಪ್ರವೇಶಿಸಿತು.

06084025a ವಿಶಾಲಾಕ್ಷಶಿರಶ್ಚಿತ್ತ್ವಾ ಪಾತಯಾಮಾಸ ಭೂತಲೇ|

06084025c ತ್ರಿಭಿಃ ಶರೈರದೀನಾತ್ಮಾ ಸ್ಮರನ್ ಕ್ಲೇಶಂ ಪುರಾತನಂ||

ಹಿಂದಿನ ಕ್ಲೇಶಗಳನ್ನು ಸ್ಮರಿಸಿಕೊಂಡು ಆ ಅದೀನಾತ್ಮನು ವಿಶಾಲಾಕ್ಷನ ಶಿರವನ್ನು ಕತ್ತರಿಸಿ ಭೂಮಿಯ ಮೇಲೆ ಬೀಳಿಸಿದನು.

06084026a ಮಹೋದರಂ ಮಹೇಷ್ವಾಸಂ ನಾರಾಚೇನ ಸ್ತನಾಂತರೇ|

06084026c ವಿವ್ಯಾಧ ಸಮರೇ ರಾಜನ್ಸ ಹತೋ ನ್ಯಪತದ್ಭುವಿ||

ರಾಜನ್! ಮಹೇಷ್ವಾಸ ಮಹೋದರನ ಎದೆಗೆ ನಾರಾಚದಿಂದ ಹೊಡೆಯಲು ಅವನು ಹತನಾಗಿ ಭೂಮಿಯ ಮೇಲೆ ಬಿದ್ದನು.

06084027a ಆದಿತ್ಯಕೇತೋಃ ಕೇತುಂ ಚ ಚಿತ್ತ್ವಾ ಬಾಣೇನ ಸಂಯುಗೇ|

06084027c ಭಲ್ಲೇನ ಭೃಶತೀಕ್ಷ್ಣೇನ ಶಿರಶ್ಚಿಚ್ಛೇದ ಚಾರಿಹಾ||

ಅರಿಹನು ಸಂಯುಗದಲ್ಲಿ ಬಾಣದಿಂದ ಆದಿತ್ಯಕೇತುವಿನ ಧ್ವಜವನ್ನು ಕತ್ತರಿಸಿ ಅತಿ ತೀಕ್ಷ್ಣ ಭಲ್ಲದಿಂದ ಅವನ ಶಿರಸ್ಸನ್ನು ತುಂಡರಿಸಿದನು.

06084028a ಬಹ್ವಾಶಿನಂ ತತೋ ಭೀಮಃ ಶರೇಣ ನತಪರ್ವಣಾ|

06084028c ಪ್ರೇಷಯಾಮಾಸ ಸಂಕ್ರುದ್ಧೋ ಯಮಸ್ಯ ಸದನಂ ಪ್ರತಿ||

ಆಗ ಭೀಮನು ಸಂಕ್ರುದ್ಧನಾಗಿ ನತಪರ್ವ ಶರದಿಂದ ಬಹ್ವಾಶಿಯನ್ನೂ ಯಮಸದನಕ್ಕೆ ಕಳುಹಿಸಿದನು.

06084029a ಪ್ರದುದ್ರುವುಸ್ತತಸ್ತೇಽನ್ಯೇ ಪುತ್ರಾಸ್ತವ ವಿಶಾಂ ಪತೇ|

06084029c ಮನ್ಯಮಾನಾ ಹಿ ತತ್ಸತ್ಯಂ ಸಭಾಯಾಂ ತಸ್ಯ ಭಾಷಿತಂ||

ವಿಶಾಂಪತೇ! ನಿನ್ನ ಇತರ ಮಕ್ಕಳು ಇವನು ಅಂದು ಸಭೆಯಲ್ಲಿ ಆಡಿದುದನ್ನು ಸತ್ಯವಾಗಿಸುತ್ತಾನೆ ಎಂದು ಅಂದುಕೊಂಡು ಅಲ್ಲಿಂದ ಪಲಾಯನಗೈದರು.

06084030a ತತೋ ದುರ್ಯೋಧನೋ ರಾಜಾ ಭ್ರಾತೃವ್ಯಸನಕರ್ಶಿತಃ|

06084030c ಅಬ್ರವೀತ್ತಾವಕಾನ್ಯೋಧಾನ್ಭೀಮೋಽಯಂ ಯುಧಿ ವಧ್ಯತಾಂ||

ಆಗ ರಾಜಾ ದುರ್ಯೋಧನನು ತನ್ನ ಸಹೋದರ ವಧೆಯಿಂದಾದ ವ್ಯಸನದಿಂದ ಸಂಕಟಪಟ್ಟು ನಿನ್ನವರ ಯೋಧರಿಗೆ “ಯುದ್ಧದಲ್ಲಿ ಈ ಭೀಮನನ್ನು ಕೊಲ್ಲಿ!” ಎಂದು ಆಜ್ಞಾಪಿಸಿದನು.

06084031a ಏವಮೇತೇ ಮಹೇಷ್ವಾಸಾಃ ಪುತ್ರಾಸ್ತವ ವಿಶಾಂ ಪತೇ|

06084031c ಭ್ರಾತೄನ್ಸಂದೃಶ್ಯ ನಿಹತಾನ್ಪ್ರಾಸ್ಮರಂಸ್ತೇ ಹಿ ತದ್ವಚಃ||

06084032a ಯದುಕ್ತವಾನ್ಮಹಾಪ್ರಾಜ್ಞಃ ಕ್ಷತ್ತಾ ಹಿತಮನಾಮಯಂ|

06084032c ತದಿದಂ ಸಮನುಪ್ರಾಪ್ತಂ ವಚನಂ ದಿವ್ಯದರ್ಶಿನಃ||

ವಿಶಾಂಪತೇ! ಈ ರೀತಿ ತಮ್ಮ ಸಹೋದರರು ಹತರಾದುದನ್ನು ನೋಡಿ ನಿನ್ನ ಮಹೇಷ್ವಾಸ ಮಕ್ಕಳು ಮಹಾಪ್ರಾಜ್ಞ ಕ್ಷತ್ತನು ಹೇಳಿದ್ದ ಹಿತವೂ ಆನಾಮಯವೂ ಆದ ಆ ವಚನಗಳನ್ನು ಸ್ಮರಿಸಿಕೊಂಡು ಆ ದಿವ್ಯದರ್ಶಿಯ ಮಾತುಗಳು ಇಂದು ಪ್ರತ್ಯಕ್ಷವಾಗಿ ಕಾರ್ಯರೂಪಕ್ಕೆ ಬಂದಿದೆ ಎಂದುಕೊಂಡರು.

06084033a ಲೋಭಮೋಹಸಮಾವಿಷ್ಟಃ ಪುತ್ರಪ್ರೀತ್ಯಾ ಜನಾಧಿಪ|

06084033c ನ ಬುಧ್ಯಸೇ ಪುರಾ ಯತ್ತತ್ತಥ್ಯಮುಕ್ತಂ ವಚೋ ಮಹತ್||

ಜನಾಧಿಪ! ನೀನಾದರೋ ಲೋಭಮೋಹಗಳಿಂದ ಕೂಡಿದವನಾಗಿ, ಪುತ್ರನ ಮೇಲಿನ ಪ್ರೀತಿಯಿಂದ ಹಿಂದೆ ಅವನು ನಿನ್ನ ಹಿತಕ್ಕಾಗಿ ಹೇಳಿದ ಸತ್ಯವೂ ಮಹತ್ವವುಳ್ಳದ್ದೂ ಆದ ಮಾತುಗಳನ್ನು ಅರ್ಥಮಾಡಿಕೊಳ್ಳಲಿಲ್ಲ.

06084034a ತಥೈವ ಹಿ ವಧಾರ್ಥಾಯ ಪುತ್ರಾಣಾಂ ಪಾಂಡವೋ ಬಲೀ|

06084034c ನೂನಂ ಜಾತೋ ಮಹಾಬಾಹುರ್ಯಥಾ ಹಂತಿ ಸ್ಮ ಕೌರವಾನ್||

ನಿನ್ನ ಪುತ್ರರ ವಧೆಗೋಸ್ಕರವಾಗಿಯೇ ಬಲಶಾಲೀ ಪಾಂಡವನು ಹುಟ್ಟಿದ್ದಾನೋ ಎನ್ನುವಂತೆ ಆ ಮಹಾಬಾಹುವು ಕೌರವರನ್ನು ಸಂಹರಿಸುತ್ತಿದ್ದಾನೆ.

06084035a ತತೋ ದುರ್ಯೋಧನೋ ರಾಜಾ ಭೀಷ್ಮಮಾಸಾದ್ಯ ಮಾರಿಷ|

06084035c ದುಃಖೇನ ಮಹತಾವಿಷ್ಟೋ ವಿಲಲಾಪಾತಿಕರ್ಶಿತಃ||

ಮಾರಿಷ! ಆಗ ರಾಜಾ ದುರ್ಯೋಧನನು ಭೀಷ್ಮನ ಬಳಿಸಾರಿ ಮಹಾ ದುಃಖದಿಂದ ಆವಿಷ್ಟನಾಗಿ ಸಂಕಟದಿಂದ ರೋದಿಸಿದನು.

06084036a ನಿಹತಾ ಭ್ರಾತರಃ ಶೂರಾ ಭೀಮಸೇನೇನ ಮೇ ಯುಧಿ|

06084036c ಯತಮಾನಾಸ್ತಥಾನ್ಯೇಽಪಿ ಹನ್ಯಂತೇ ಸರ್ವಸೈನಿಕಾಃ||

“ನನ್ನ ಶೂರ ಸಹೋದರರು ಯುದ್ಧದಲ್ಲಿ ಭೀಮಸೇನನಿಂದ ಹತರಾಗಿದ್ದಾರೆ. ಪ್ರಯತ್ನಪಟ್ಟರೂ ಕೂಡ ನನ್ನ ಸೈನಿಕರೆಲ್ಲರೂ ಹತರಾಗುತ್ತಿದ್ದಾರೆ.

06084037a ಭವಾಂಶ್ಚ ಮಧ್ಯಸ್ಥತಯಾ ನಿತ್ಯಮಸ್ಮಾನುಪೇಕ್ಷತೇ|

06084037c ಸೋಽಹಂ ಕಾಪಥಮಾರೂಢಃ ಪಶ್ಯ ದೈವಮಿದಂ ಮಮ||

ನೀನಾದರೋ ಮಧ್ಯಸ್ಥನಾಗಿದ್ದುಕೊಂಡು ನಿತ್ಯವೂ ನಮ್ಮನ್ನು ಉಪೇಕ್ಷಿಸುತ್ತಿರುವೆ. ನಾನಾದರೋ ವಿನಾಶದ ಮಾರ್ಗವನ್ನೇ ಹಿಡಿದುಬಿಟ್ಟಿದ್ದೇನೆ. ನನ್ನ ಈ ದೈವವನ್ನು ನೋಡು!”

06084038a ಏತಚ್ಚ್ರುತ್ವಾ ವಚಃ ಕ್ರೂರಂ ಪಿತಾ ದೇವವ್ರತಸ್ತವ|

06084038c ದುರ್ಯೋಧನಮಿದಂ ವಾಕ್ಯಮಬ್ರವೀತ್ಸಾಶ್ರುಲೋಚನಂ||

ಕ್ರೂರವಾದ ಈ ಮಾತನ್ನು ಕೇಳಿ ನಿನ್ನ ತಂದೆ ದೇವವ್ರತನು ಕಣ್ಣೀರು ತುಂಬಿದ ದುರ್ಯೋಧನನಿಗೆ ಈ ಮಾತನ್ನಾಡಿದನು:

06084039a ಉಕ್ತಮೇತನ್ಮಯಾ ಪೂರ್ವಂ ದ್ರೋಣೇನ ವಿದುರೇಣ ಚ|

06084039c ಗಾಂಧಾರ್ಯಾ ಚ ಯಶಸ್ವಿನ್ಯಾ ತತ್ತ್ವಂ ತಾತ ನ ಬುದ್ಧವಾನ್||

“ಹಿಂದೆಯೇ ನಾನು, ದ್ರೋಣ, ವಿದುರ, ಯಶಸ್ವಿನಿ ಗಾಂಧಾರಿಯರು ನಿನಗೆ ಇದನ್ನು ಹೇಳಿದ್ದೆವು. ಮಗೂ! ಆಗ ನೀನು ಅದರ ಅರ್ಥವನ್ನು ತಿಳಿದುಕೊಳ್ಳಲಿಲ್ಲ.

06084040a ಸಮಯಶ್ಚ ಮಯಾ ಪೂರ್ವಂ ಕೃತೋ ವಃ ಶತ್ರುಕರ್ಶನ|

06084040c ನಾಹಂ ಯುಧಿ ವಿಮೋಕ್ತವ್ಯೋ ನಾಪ್ಯಾಚಾರ್ಯಃ ಕಥಂ ಚನ||

ಶತ್ರುಕರ್ಶನ! ಹಿಂದೆಯೇ ನಾನು ನಿನಗೆ ಸಲಹೆಯನ್ನು ನೀಡಿದ್ದೆನು - ನಿಮ್ಮಿಬ್ಬರ ನಡುವಿನ ಯುದ್ಧದಲ್ಲಿ ನನ್ನನ್ನೂ ಆಚಾರ್ಯ ದ್ರೋಣನನ್ನೂ ಎಂದೂ ನಿಯೋಜಿಸಕೂಡದೆಂದು.

06084041a ಯಂ ಯಂ ಹಿ ಧಾರ್ತರಾಷ್ಟ್ರಾಣಾಂ ಭೀಮೋ ದ್ರಕ್ಷ್ಯತಿ ಸಂಯುಗೇ|

06084041c ಹನಿಷ್ಯತಿ ರಣೇ ತಂ ತಂ ಸತ್ಯಮೇತದ್ಬ್ರವೀಮಿ ತೇ||

ಸಂಯುಗದಲ್ಲಿ ಭೀಮನು ಯಾರ್ಯಾರು ಧಾರ್ತರಾಷ್ಟ್ರರನ್ನು ನೋಡುತ್ತಾನೋ ಅವರನ್ನೆಲ್ಲ ರಣದಲ್ಲಿ ಸಂಹರಿಸುತ್ತಾನೆ. ಸತ್ಯವನ್ನೇ ನಿನಗೆ ನಾನು ಹೇಳುತ್ತೇನೆ.

06084042a ಸ ತ್ವಂ ರಾಜನ್ಸ್ಥಿರೋ ಭೂತ್ವಾ ದೃಢಾಂ ಕೃತ್ವಾ ರಣೇ ಮತಿಂ|

06084042c ಯೋಧಯಸ್ವ ರಣೇ ಪಾರ್ಥಾನ್ಸ್ವರ್ಗಂ ಕೃತ್ವಾ ಪರಾಯಣಂ||

ಆದುದರಿಂದ ರಾಜನ್! ನೀನು ಸ್ಥಿರನಾಗಿದ್ದುಕೊಂಡು, ರಣದಲ್ಲಿ ಬುದ್ಧಿಯನ್ನು ದೃಢವಾಗಿರಿಸಿಕೊಂಡು, ಸ್ವರ್ಗವನ್ನೇ ಅಂತಿಮಾಶ್ರವನ್ನಾಗಿರಿಸಿಕೊಂಡು ರಣದಲ್ಲಿ ಪಾರ್ಥರೊಂದಿಗೆ ಯುದ್ಧಮಾಡು.

06084043a ನ ಶಕ್ಯಾಃ ಪಾಂಡವಾ ಜೇತುಂ ಸೇಂದ್ರೈರಪಿ ಸುರಾಸುರೈಃ|

06084043c ತಸ್ಮಾದ್ಯುದ್ಧೇ ಮತಿಂ ಕೃತ್ವಾ ಸ್ಥಿರಾಂ ಯುಧ್ಯಸ್ವ ಭಾರತ||

ಭಾರತ! ಇಂದ್ರನೊಂದಿಗೆ ಸುರಾಸುರರಿಗೂ ಪಾಂಡವರನ್ನು ಜಯಿಸಲು ಸಾಧ್ಯವಿಲ್ಲ. ಆದುದರಿಂದ ಯುದ್ಧದಲ್ಲಿ ಬುದ್ಧಿಯನ್ನು ಸ್ಥಿರವಾಗಿರಿಸಿಟ್ಟುಕೊಂಡು ಯುದ್ಧಮಾಡು!””

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸುನಾಭಾದಿಧೃತರಾಷ್ಟ್ರಪುತ್ರವಧೇ ಚತುರಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸುನಾಭಾದಿಧೃತರಾಷ್ಟ್ರಪುತ್ರವಧ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.