Bhishma Parva: Chapter 71

ಭೀಷ್ಮ ಪರ್ವ: ಭೀಷ್ಮವಧ ಪರ್ವ

೭೧

ಆರನೆಯ ದಿವಸದ ಯುದ್ಧ

ಪಾಂಡವ ಸೇನೆಯ ಮಕರವ್ಯೂಹ ರಚನೆ (೧-೧೨). ಕೌರವ ಸೇನೆಯ ಕ್ರೌಂಚವ್ಯೂಹ ರಚನೆ (೧೩-೨೨). ಯುದ್ಧಾರಂಭ (೨೩-೩೬).

06071001 ಸಂಜಯ ಉವಾಚ|

06071001a ವಿಹೃತ್ಯ ಚ ತತೋ ರಾಜನ್ಸಹಿತಾಃ ಕುರುಪಾಂಡವಾಃ|

06071001c ವ್ಯತೀತಾಯಾಂ ತು ಶರ್ವರ್ಯಾಂ ಪುನರ್ಯುದ್ಧಾಯ ನಿರ್ಯಯುಃ||

ಸಂಜಯನು ಹೇಳಿದನು: “ರಾಜನ್! ಸ್ವಲ್ಪ ಹೊತ್ತು ವಿಶ್ರಮಿಸಿ ರಾತ್ರಿಯು ಕಳೆದ ನಂತರ ಕುರುಪಾಂಡವರು ಒಟ್ಟಿಗೇ ಪುನಃ ಯುದ್ಧಮಾಡಲು ಹೊರಟರು.

06071002a ತತ್ರ ಶಬ್ದೋ ಮಹಾನಾಸೀತ್ತವ ತೇಷಾಂ ಚ ಭಾರತ|

06071002c ಯುಜ್ಯತಾಂ ರಥಮುಖ್ಯಾನಾಂ ಕಲ್ಪ್ಯತಾಂ ಚೈವ ದಂತಿನಾಂ||

06071003a ಸಮ್ನಹ್ಯತಾಂ ಪದಾತೀನಾಂ ಹಯಾನಾಂ ಚೈವ ಭಾರತ|

06071003c ಶಂಖದುಂದುಭಿನಾದಶ್ಚ ತುಮುಲಃ ಸರ್ವತೋಽಭವತ್||

ಭಾರತ! ಅಲ್ಲಿ ನಿನ್ನವರಲ್ಲಿ ಮತ್ತು ಅವರಲ್ಲಿ ರಥಮುಖ್ಯರು ರಥಗಳನ್ನು ಕಟ್ಟುವುದು, ಆನೆಗಳನ್ನು ಸಜ್ಜುಗೊಳಿಸಿದುದು, ಪದಾತಿ-ಕುದುರೆಗಳು ಅಣಿಯಾಗುವುದು ಇವೇ ಮೊದಲಾದ ಮಹಾಶಬ್ಧವುಂಟಾಯಿತು. ಎಲ್ಲಕಡೆ ಶಂಖ-ದುಂದುಭಿಗಳ ನಾದಗಳ ತುಮುಲವೂ ಉಂಟಾಯಿತು.

06071004a ತತೋ ಯುಧಿಷ್ಠಿರೋ ರಾಜಾ ಧೃಷ್ಟದ್ಯುಮ್ನಮಭಾಷತ|

06071004c ವ್ಯೂಹಂ ವ್ಯೂಹ ಮಹಾಬಾಹೋ ಮಕರಂ ಶತ್ರುತಾಪನಂ||

ಆಗ ರಾಜಾ ಯುಧಿಷ್ಠಿರನು ಧೃಷ್ಟದ್ಯುಮ್ನನಿಗೆ ಹೇಳಿದನು: “ಮಹಾಬಾಹೋ! ಶತ್ರುತಾಪನ ಮಕರ ವ್ಯೂಹವನ್ನು ರಚಿಸು!”

06071005a ಏವಮುಕ್ತಸ್ತು ಪಾರ್ಥೇನ ಧೃಷ್ಟದ್ಯುಮ್ನೋ ಮಹಾರಥಃ|

06071005c ವ್ಯಾದಿದೇಶ ಮಹಾರಾಜ ರಥಿನೋ ರಥಿನಾಂ ವರಃ||

ಮಹಾರಾಜ! ಪಾರ್ಥನು ಹೀಗೆ ಹೇಳಲು ಮಹಾರಥ ರಥಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ರಥಿಗಳಿಗೆ ಆದೇಶವನ್ನಿತ್ತನು.

06071006a ಶಿರೋಽಭೂದ್ದ್ರುಪದಸ್ತಸ್ಯ ಪಾಂಡವಶ್ಚ ಧನಂಜಯಃ|

06071006c ಚಕ್ಷುಷೀ ಸಹದೇವಶ್ಚ ನಕುಲಶ್ಚ ಮಹಾರಥಃ|

06071006e ತುಂಡಮಾಸೀನ್ಮಹಾರಾಜ ಭೀಮಸೇನೋ ಮಹಾಬಲಃ||

ಮಹಾರಾಜ! ಅದರ ಶಿರದಲ್ಲಿ ದೃಪದನೂ ಪಾಂಡವ ಧನಂಜಯರೂ ಇದ್ದರು. ಮಹಾರಥ ನಕುಲ-ಸಹದೇವರು ಕಣ್ಣುಗಳಾಗಿದ್ದರು. ಮಹಾಬಲ ಭೀಮಸೇನನು ಅದರ ಕೊಕ್ಕಾಗಿದ್ದನು.

06071007a ಸೌಭದ್ರೋ ದ್ರೌಪದೇಯಾಶ್ಚ ರಾಕ್ಷಸಶ್ಚ ಘಟೋತ್ಕಚಃ|

06071007c ಸಾತ್ಯಕಿರ್ಧರ್ಮರಾಜಶ್ಚ ವ್ಯೂಹಗ್ರೀವಾಂ ಸಮಾಸ್ಥಿತಾಃ||

ಸೌಭದ್ರ, ದ್ರೌಪದೇಯರು, ರಾಕ್ಷಸ ಘಟೋತ್ಕಚ, ಸಾತ್ಯಕಿ ಮತ್ತು ಧರ್ಮರಾಜರು ವ್ಯೂಹದ ಕುತ್ತಿಗೆಯ ಭಾಗದಲ್ಲಿದ್ದರು.

06071008a ಪೃಷ್ಠಮಾಸೀನ್ಮಹಾರಾಜ ವಿರಾಟೋ ವಾಹಿನೀಪತಿಃ|

06071008c ಧೃಷ್ಟದ್ಯುಮ್ನೇನ ಸಹಿತೋ ಮಹತ್ಯಾ ಸೇನಯಾ ವೃತಃ||

ಮಹಾರಾಜ! ಅದರ ಪೃಷ್ಠಭಾಗದಲ್ಲಿ ವಾಹಿನೀಪತಿ ವಿರಾಟನು ಮಹಾ ಸೇನೆಯಿಂದ ಆವೃತನಾಗಿ ಧೃಷ್ಟದ್ಯುಮ್ನನೊಂದಿಗೆ ಇದ್ದನು.

06071009a ಕೇಕಯಾ ಭ್ರಾತರಃ ಪಂಚ ವಾಮಂ ಪಾರ್ಶ್ವಂ ಸಮಾಶ್ರಿತಾಃ|

06071009c ಧೃಷ್ಟಕೇತುರ್ನರವ್ಯಾಘ್ರಃ ಕರಕರ್ಷಶ್ಚ ವೀರ್ಯವಾನ್|

06071009e ದಕ್ಷಿಣಂ ಪಕ್ಷಮಾಶ್ರಿತ್ಯ ಸ್ಥಿತಾ ವ್ಯೂಹಸ್ಯ ರಕ್ಷಣೇ||

ಐವರು ಕೇಕಯರು ಬಲಭಾಗದಲ್ಲಿದ್ದರು. ನರವ್ಯಾಘ್ರ ಧೃಷ್ಟಕೇತು ಮತ್ತು ವೀರ್ಯವಾನ್ ಕರಕರ್ಷರು ಎಡಭಾಗದಲ್ಲಿ ವ್ಯೂಹದ ರಕ್ಷಣೆಗೆ ನಿಂತಿದ್ದರು.

06071010a ಪಾದಯೋಸ್ತು ಮಹಾರಾಜ ಸ್ಥಿತಃ ಶ್ರೀಮಾನ್ಮಹಾರಥಃ|

06071010c ಕುಂತಿಭೋಜಃ ಶತಾನೀಕೋ ಮಹತ್ಯಾ ಸೇನಯಾ ವೃತಃ||

ಮಹಾರಾಜ! ಅದರ ಪಾದಗಳಲ್ಲಿ ಶ್ರೀಮಾನ್ ಮಹಾರಥ ಕುಂತಿಭೋಜ-ಶತಾನೀಕನು ಮಹಾ ಸೇನೆಯಿಂದ ಆವೃತನಾಗಿ ನಿಂತಿದ್ದನು.

06071011a ಶಿಖಂಡೀ ತು ಮಹೇಷ್ವಾಸಃ ಸೋಮಕೈಃ ಸಂವೃತೋ ಬಲೀ|

06071011c ಇರಾವಾಂಶ್ಚ ತತಃ ಪುಚ್ಛೇ ಮಕರಸ್ಯ ವ್ಯವಸ್ಥಿತೌ||

ಮಕರದ ಬಾಲವಾಗಿ ಇರಾವಾನ ಮತ್ತು ಮಹೇಷ್ವಾಸ ಬಲೀ ಶಿಖಂಡಿಯು ಸೋಮಕರಿಂದ ಸಂವೃತನಾಗಿ ವ್ಯವಸ್ಥಿತರಾಗಿದ್ದರು.

06071012a ಏವಮೇತನ್ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ|

06071012c ಸೂರ್ಯೋದಯೇ ಮಹಾರಾಜ ಪುನರ್ಯುದ್ಧಾಯ ದಂಶಿತಾಃ||

ಭಾರತ! ಮಹಾರಾಜ! ಹೀಗೆ ಮಹಾವ್ಯೂಹವನ್ನು ರಚಿಸಿ ಕವಚಗಳನ್ನು ಧರಿಸಿ ಪಾಂಡವರು ಸೂರ್ಯೋದಯದಲ್ಲಿ ಪುನಃ ಯುದ್ಧಕ್ಕೆ ಹೊರಟರು.

06071013a ಕೌರವಾನಭ್ಯಯುಸ್ತೂರ್ಣಂ ಹಸ್ತ್ಯಶ್ವರಥಪತ್ತಿಭಿಃ|

06071013c ಸಮುಚ್ಛ್ರಿತೈರ್ಧ್ವ್ವಜೈಶ್ಚಿತ್ರೈಃ ಶಸ್ತ್ರೈಶ್ಚ ವಿಮಲೈಃ ಶಿತೈಃ||

ಕೌರವರೂ ಕೂಡ ತಕ್ಷಣವೇ ಆನೆ-ಕುದುರೆ-ರಥ-ಪದಾತಿಗಳೊಂದಿಗೆ ಚಿತ್ರವಾದ ಧ್ವಜಗಳಿಂದ ಹೊದಿಕೆಗಳಿಂದ ಮತ್ತು ಹೊಳೆಯುವ ಹರಿತ ಶಸ್ತ್ರಗಳೊಂದಿಗೆ ಹೊರಟರು.

06071014a ವ್ಯೂಹಂ ದೃಷ್ಟ್ವಾ ತು ತತ್ಸೈನ್ಯಂ ಪಿತಾ ದೇವವ್ರತಸ್ತವ|

06071014c ಕ್ರೌಂಚೇನ ಮಹತಾ ರಾಜನ್ಪ್ರತ್ಯವ್ಯೂಹತ ವಾಹಿನೀಂ||

ರಾಜನ್! ಆ ಸೈನ್ಯವನ್ನು ನೋಡಿ ನಿನ್ನ ಪಿತ ದೇವವ್ರತನು ಸೇನೆಯನ್ನು ಮಹಾ ಕ್ರೌಂಚ ವ್ಯೂಹವಾಗಿ ರಚಿಸಿದನು.

06071015a ತಸ್ಯ ತುಂಡೇ ಮಹೇಷ್ವಾಸೋ ಭಾರದ್ವಾಜೋ ವ್ಯರೋಚತ|

06071015c ಅಶ್ವತ್ಥಾಮಾ ಕೃಪಶ್ಚೈವ ಚಕ್ಷುರಾಸ್ತಾಂ ನರೇಶ್ವರ||

ನರೇಶ್ವರ! ಅದರ ಕೊಕ್ಕಿನಲ್ಲಿ ಮಹೇಷ್ವಾಸ ಭಾರದ್ವಾಜನು ವಿರಾಜಿಸಿದನು. ಅಶ್ವತ್ಥಾಮ ಮತ್ತು ಕೃಪರು ಅದರ ಕಣ್ಣುಗಳಾದರು.

06071016a ಕೃತವರ್ಮಾ ತು ಸಹಿತಃ ಕಾಂಬೋಜಾರಟ್ಟಬಾಹ್ಲಿಕೈಃ|

06071016c ಶಿರಸ್ಯಾಸೀನ್ನರಶ್ರೇಷ್ಠಃ ಶ್ರೇಷ್ಠಃ ಸರ್ವಧನುಷ್ಮತಾಂ||

ಕಾಂಬೋಜ, ಆರಟ್ಟ ಮತ್ತು ಬಾಹ್ಲೀಕರೊಂದಿಗೆ ನರಶ್ರೇಷ್ಠ, ಸರ್ವ ಧನುಷ್ಮತರಲ್ಲಿ ಶ್ರೇಷ್ಠ ಕೃತವರ್ಮನು ಅದರ ಶಿರೋಭಾಗದಲ್ಲಿದ್ದನು.

06071017a ಗ್ರೀವಾಯಾಂ ಶೂರಸೇನಸ್ತು ತವ ಪುತ್ರಶ್ಚ ಮಾರಿಷ|

06071017c ದುರ್ಯೋಧನೋ ಮಹಾರಾಜ ರಾಜಭಿರ್ಬಹುಭಿರ್ವೃತಃ||

ಮಾರಿಷ! ಅದರ ಕಂಠದಲ್ಲಿ ನಿನ್ನ ಪುತ್ರ ಶೂರಸೇನ, ಮಹಾರಾಜ ದುರ್ಯೋಧನನು ಅನೇಕ ರಾಜರಿಂದ ಆವೃತನಾಗಿದ್ದನು.

06071018a ಪ್ರಾಗ್ಜ್ಯೋತಿಷಸ್ತು ಸಹಿತಃ ಮದ್ರಸೌವೀರಕೇಕಯೈಃ|

06071018c ಉರಸ್ಯಭೂನ್ನರಶ್ರೇಷ್ಠ ಮಹತ್ಯಾ ಸೇನಯಾ ವೃತಃ||

ನರಶ್ರೇಷ್ಠ! ಪ್ರಾಗ್ಜ್ಯೋತಿಷದವನೊಡನೆ ಮದ್ರ-ಸೌವೀರ-ಕೇಕಯರು ಮಹಾ ಸೇನೆಗಳಿಂದ ಆವೃತರಾಗಿ ಅದರ ತೊಡೆಗಳಾದರು.

06071019a ಸ್ವಸೇನಯಾ ಚ ಸಹಿತಃ ಸುಶರ್ಮಾ ಪ್ರಸ್ಥಲಾಧಿಪಃ|

06071019c ವಾಮಂ ಪಕ್ಷಂ ಸಮಾಶ್ರಿತ್ಯ ದಂಶಿತಃ ಸಮವಸ್ಥಿತಃ||

ಪ್ರಸ್ಥಲಾಧಿಪ ಸುಶರ್ಮನು ತನ್ನ ಸೇನೆಯ ಸಹಿತ ಕವಚಗಳನ್ನು ಧರಿಸಿ ವ್ಯೂಹದ ಬಲಭಾಗವನ್ನು ರಕ್ಷಿಸುತ್ತಿದ್ದನು.

06071020a ತುಷಾರಾ ಯವನಾಶ್ಚೈವ ಶಕಾಶ್ಚ ಸಹ ಚೂಚುಪೈಃ|

06071020c ದಕ್ಷಿಣಂ ಪಕ್ಷಮಾಶ್ರಿತ್ಯ ಸ್ಥಿತಾ ವ್ಯೂಹಸ್ಯ ಭಾರತ||

ಭಾರತ! ತುಷಾರರು, ಯವನರು ಮತ್ತು ಶಕರು ಚೂಚುಪರೊಂದಿಗೆ ವ್ಯೂಹದ ಎಡಭಾಗವನ್ನು ಆಶ್ರಯಿಸಿ ನಿಂತಿದ್ದರು.

06071021a ಶ್ರುತಾಯುಶ್ಚ ಶತಾಯುಶ್ಚ ಸೌಮದತ್ತಿಶ್ಚ ಮಾರಿಷ|

06071021c ವ್ಯೂಹಸ್ಯ ಜಘನೇ ತಸ್ಥೂ ರಕ್ಷಮಾಣಾಃ ಪರಸ್ಪರಂ||

ಮಾರಿಷ! ಶ್ರುತಾಯು, ಶತಾಯು ಮತ್ತು ಸೌಮದತ್ತಿಯರು ವ್ಯೂಹದ ಜಘನ ಪ್ರದೇಶದಲ್ಲಿ ಪರಸ್ಪರರನ್ನು ರಕ್ಷಿಸಲು ನಿಂತರು.

06071022a ತತೋ ಯುದ್ಧಾಯ ಸಂಜಗ್ಮುಃ ಪಾಂಡವಾಃ ಕೌರವೈಃ ಸಹ|

06071022c ಸೂರ್ಯೋದಯೇ ಮಹಾರಾಜ ತತೋ ಯುದ್ಧಮಭೂನ್ಮಹತ್||

ಆಗ ಮಹಾರಾಜ! ಪಾಂಡವರು ಕೌರವರು ಒಟ್ಟಿಗೆ ಯುದ್ಧಕ್ಕಾಗಿ ಬಂದು ಸೇರಿದರು. ಸೂರ್ಯೋದಯದಲ್ಲಿ ಮಹಾ ಯುದ್ಧವು ನಡೆಯಿತು.

06071023a ಪ್ರತೀಯೂ ರಥಿನೋ ನಾಗಾನ್ನಾಗಾಶ್ಚ ರಥಿನೋ ಯಯುಃ|

06071023c ಹಯಾರೋಹಾ ಹಯಾರೋಹಾನ್ರಥಿನಶ್ಚಾಪಿ ಸಾದಿನಃ||

ರಥಿಗಳು ಆನೆಗಳ ಮೇಲೂ, ಆನೆಗಳು ರಥಿಗಳ ಮೇಲೂ ಎರಗಿದವು. ಅಶ್ವಾರೋಹಿಗಳು ಅಶ್ವಾರೋಹಿಗಳನ್ನೂ ರಥಿಗಳು ಅಶ್ವಾರೋಹಿಗಳನ್ನೂ ಎದುರಿಸಿದರು.

06071024a ಸಾರಥಿಂ ಚ ರಥೀ ರಾಜನ್ಕುಂಜರಾಂಶ್ಚ ಮಹಾರಣೇ|

06071024c ಹಸ್ತ್ಯಾರೋಹಾ ರಥಾರೋಹಾನ್ರಥಿನಶ್ಚಾಪಿ ಸಾದಿನಃ||

06071025a ರಥಿನಃ ಪತ್ತಿಭಿಃ ಸಾರ್ಧಂ ಸಾದಿನಶ್ಚಾಪಿ ಪತ್ತಿಭಿಃ|

06071025c ಅನ್ಯೋನ್ಯಂ ಸಮರೇ ರಾಜನ್ಪ್ರತ್ಯಧಾವನ್ನಮರ್ಷಿತಾಃ||

ರಾಜನ್! ಮಹಾರಣದಲ್ಲಿ ರಥಿಗಳು ಸಾರಥಿ ಮತ್ತು ಆನೆಗಳನ್ನೂ, ಆನೆಗಳ ಸವಾರರು ರಥಾರೋಹರನ್ನೂ, ರಥಿಗಳು ಅಶ್ವಾರೋಹಿಗಳನ್ನೂ, ರಥಿಗಳು ಪದಾತಿಗಳನ್ನು, ಹಾಗೆಯೇ ಅಶ್ವಾರೋಹಿಗಳು ಪದಾತಿಗಳನ್ನೂ, ಅನ್ಯೋನ್ಯರನ್ನು ಸಮರದಲ್ಲಿ ಕೋಪದಿಂದ ಮುನ್ನುಗ್ಗಿ ಆಕ್ರಮಣಿಸಿದರು.

06071026a ಭೀಮಸೇನಾರ್ಜುನಯಮೈರ್ಗುಪ್ತಾ ಚಾನ್ಯೈರ್ಮಹಾರಥೈಃ|

06071026c ಶುಶುಭೇ ಪಾಂಡವೀ ಸೇನಾ ನಕ್ಷತ್ರೈರಿವ ಶರ್ವರೀ||

ಭೀಮಸೇನ, ಅರ್ಜುನ, ಯಮಳರು ಮತ್ತು ಅನ್ಯ ಮಹಾರಥರಿಂದ ರಕ್ಷಿಸಲ್ಪಟ್ಟ ಪಾಂಡವೀ ಸೇನೆಯು ರಾತ್ರಿಯಲ್ಲಿನ ನಕ್ಷತ್ರಗಳಂತೆ ಶೋಭಿಸಿತು.

06071027a ತಥಾ ಭೀಷ್ಮಕೃಪದ್ರೋಣಶಲ್ಯದುರ್ಯೋಧನಾದಿಭಿಃ|

06071027c ತವಾಪಿ ವಿಬಭೌ ಸೇನಾ ಗ್ರಹೈರ್ದ್ಯೌರಿವ ಸಂವೃತಾ||

ಹಾಗೆಯೇ ಭೀಷ್ಮ, ಕೃಪ, ದ್ರೋಣ, ಶಲ್ಯ, ದುರ್ಯೋಧನಾದಿಗಳಿಂದ ರಕ್ಷಿತವಾದ ನಿನ್ನ ಸೇನೆಯೂ ಕೂಡ ಆಕಾಶದಲ್ಲಿ ಸೇರಿರುವ ಗ್ರಹಗಳಂತೆ ಹೊಳೆಯಿತು.

06071028a ಭೀಮಸೇನಸ್ತು ಕೌಂತೇಯೋ ದ್ರೋಣಂ ದೃಷ್ಟ್ವಾ ಪರಾಕ್ರಮೀ|

06071028c ಅಭ್ಯಯಾಜ್ಜವನೈರಶ್ವೈರ್ಭಾರದ್ವಾಜಸ್ಯ ವಾಹಿನೀಂ||

ಪರಾಕ್ರಮೀ ಕೌಂತೇಯ ಭೀಮಸೇನನಾದರೋ ದ್ರೋಣನನ್ನು ನೋಡಿ ವೇಗದ ಅಶ್ವಗಳಿಂದ ಭಾರದ್ವಾಜನ ಸೇನೆಯನ್ನು ಎದುರಿಸಿದನು.

06071029a ದ್ರೋಣಸ್ತು ಸಮರೇ ಕ್ರುದ್ಧೋ ಭೀಮಂ ನವಭಿರಾಯಸೈಃ|

06071029c ವಿವ್ಯಾಧ ಸಮರೇ ರಾಜನ್ಮರ್ಮಾಣ್ಯುದ್ದಿಶ್ಯ ವೀರ್ಯವಾನ್||

ರಾಜನ್! ಸಮರದಲ್ಲಿ ಕ್ರುದ್ಧನಾದ ವೀರ್ಯವಾನ್ ದ್ರೋಣನಾದರೋ ಭೀಮನನ್ನು ಒಂಭತ್ತು ಆಯಸಗಳಿಂದ ಮರ್ಮಗಳಿಗೆ ಗುರಿಯಿಟ್ಟು ಹೊಡೆದನು.

06071030a ದೃಢಾಹತಸ್ತತೋ ಭೀಮೋ ಭಾರದ್ವಾಜಸ್ಯ ಸಂಯುಗೇ|

06071030c ಸಾರಥಿಂ ಪ್ರೇಷಯಾಮಾಸ ಯಮಸ್ಯ ಸದನಂ ಪ್ರತಿ||

ಆ ಸಂಯುಗದಲ್ಲಿ ದೃಢವಾಗಿ ಹೊಡೆಯಲ್ಪಟ್ಟ ಭೀಮನು ಭಾರದ್ವಾಜನ ಸಾರಥಿಯನ್ನು ಯಮನ ಸದನಕ್ಕೆ ಕಳುಹಿಸಿದನು.

06071031a ಸ ಸಂಗೃಹ್ಯ ಸ್ವಯಂ ವಾಹಾನ್ಭಾರದ್ವಾಜಃ ಪ್ರತಾಪವಾನ್|

06071031c ವ್ಯಧಮತ್ಪಾಂಡವೀಂ ಸೇನಾಂ ತೂಲರಾಶಿಮಿವಾನಲಃ||

ಆಗ ಪ್ರತಾಪವಾನ್ ಭರದ್ವಾಜನು ಕುದುರೆಗಳನ್ನು ಸ್ವಯಂ ತಾನೇ ನಿಯಂತ್ರಿಸುತ್ತಾ ಪಾಂಡವೀ ಸೇನೆಯನ್ನು ಅಗ್ನಿಯು ಹತ್ತಿಯ ರಾಶಿಯಂತೆ ನಾಶಪಡಿಸಿದನು.

06071032a ತೇ ವಧ್ಯಮಾನಾ ದ್ರೋಣೇನ ಭೀಷ್ಮೇಣ ಚ ನರೋತ್ತಮ|

06071032c ಸೃಂಜಯಾಃ ಕೇಕಯೈಃ ಸಾರ್ಧಂ ಪಲಾಯನಪರಾಭವನ್||

ನರೋತ್ತಮ! ದ್ರೋಣ ಮತ್ತು ಭೀಷ್ಮರಿಂದ ವಧಿಸಲ್ಪಟ್ಟ ಸೃಂಜಯರು ಮತ್ತು ಕೇಕಯುರು ಒಟ್ಟಿಗೇ ಪರಾಭವಗೊಂಡು ಪಲಾಯನಗೈದರು.

06071033a ತಥೈವ ತಾವಕಂ ಸೈನ್ಯಂ ಭೀಮಾರ್ಜುನಪರಿಕ್ಷತಂ|

06071033c ಮುಹ್ಯತೇ ತತ್ರ ತತ್ರೈವ ಸಮದೇವ ವರಾಂಗನಾ||

ಹಾಗೆಯೇ ನಿನ್ನವರ ಸೈನ್ಯವೂ ಭೀಮಾರ್ಜುನರಿಂದ ಪೀಡಿತವಾಗಿ ವರಾಂಗನೆಯು ಸೊಕ್ಕಿನಿಂದ ನಿಂತುಕೊಳ್ಳುವಂತೆ ಅಲ್ಲಿಯೇ ಗರಬಡಿದಂತೆ ನಿಂತುಬಿಟ್ಟಿತು.

06071034a ಅಭಿದ್ಯೇತಾಂ ತತೋ ವ್ಯೂಹೌ ತಸ್ಮಿನ್ವೀರವರಕ್ಷಯೇ|

06071034c ಆಸೀದ್ವ್ಯತಿಕರೋ ಘೋರಸ್ತವ ತೇಷಾಂ ಚ ಭಾರತ||

ಭಾರತ! ಆ ವೀರವರಕ್ಷಯದ ವ್ಯೂಹಗಳಲ್ಲಿ ನಿನ್ನವರ ಮತ್ತು ಅವರ ಘೋರ ನಷ್ಟಗಳಾದವು.

06071035a ತದದ್ಭುತಮಪಶ್ಯಾಮ ತಾವಕಾನಾಂ ಪರೈಃ ಸಹ|

06071035c ಏಕಾಯನಗತಾಃ ಸರ್ವೇ ಯದಯುಧ್ಯಂತ ಭಾರತ||

ಭಾರತ! ನಿನ್ನವರು ಶತ್ರುಗಳೊಂದಿಗೆ ಜೀವವನ್ನೂ ತೊರೆದು ಎಲ್ಲರೂ ಹೋರಾಡುವ ಅದ್ಭುತವನ್ನು ನಾವು ನೋಡಿದೆವು.

06071036a ಪ್ರತಿಸಂವಾರ್ಯ ಚಾಸ್ತ್ರಾಣಿ ತೇಽನ್ಯೋನ್ಯಸ್ಯ ವಿಶಾಂ ಪತೇ|

06071036c ಯುಯುಧುಃ ಪಾಂಡವಾಶ್ಚೈವ ಕೌರವಾಶ್ಚ ಮಹಾರಥಾಃ||

ವಿಶಾಂಪತೇ! ಮಹಾರಥ ಪಾಂಡವರು ಮತ್ತು ಕೌರವರು ಅಸ್ತ್ರಗಳನ್ನು ತಿರುಗಿ ಪ್ರಯೋಗಿಸುತ್ತಾ ಅನ್ಯೋನ್ಯರೊಡನೆ ಯುದ್ಧಮಾಡಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಷಷ್ಠದಿವಸಯುದ್ಧಾರಂಭೇ ಏಕಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಷಷ್ಠದಿವಸಯುದ್ಧಾರಂಭ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.

Image result for flowers against white background

Comments are closed.