Bhishma Parva: Chapter 69

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೯

ಅರ್ಜುನ-ಅಶ್ವತ್ಥಾಮರ ದ್ವಂದ್ವಯುದ್ಧ (೧-೧೫). ಭೀಮಸೇನ-ದುರ್ಯೋಧನರ ದ್ವಂದ್ವಯುದ್ಧ (೧೬-೨೨). ಅಭಿಮನ್ಯು-ಲಕ್ಷ್ಮಣರ ದ್ವಂದ್ವಯುದ್ಧ (೨೩-೪೧).

06069001 ಸಂಜಯ ಉವಾಚ|

06069001a ವಿರಾಟೋಽಥ ತ್ರಿಭಿರ್ಬಾಣೈರ್ಭೀಷ್ಮಮಾರ್ಚನ್ಮಹಾರಥಂ|

06069001c ವಿವ್ಯಾಧ ತುರಗಾಂಶ್ಚಾಸ್ಯ ತ್ರಿಭಿರ್ಬಾಣೈರ್ಮಹಾರಥಃ||

ಸಂಜಯನು ಹೇಳಿದನು: “ಮಹಾರಥ ವಿರಾಟನು ಮಹಾರಥ ಭೀಷ್ಮನನ್ನು ಮೂರು ಬಾಣಗಳಿಂದ ಹೊಡೆದು ಅವನ ಕುದುರೆಗಳನ್ನೂ ಮೂರು ಬಾಣಗಳಿಂದ ಗಾಯಗೊಳಿಸಿದನು.

06069002a ತಂ ಪ್ರತ್ಯವಿಧ್ಯದ್ದಶಭಿರ್ಭೀಷ್ಮಃ ಶಾಂತನವಃ ಶರೈಃ|

06069002c ರುಕ್ಮಪುಂಖೈರ್ಮಹೇಷ್ವಾಸಃ ಕೃತಹಸ್ತೋ ಮಹಾಬಲಃ||

ಆಗ ಮಹೇಷ್ವಾಸ, ಸಿದ್ಧಹಸ್ತ ಮಹಾಬಲ ಭೀಷ್ಮ ಶಾಂತನವನು ಅವನನ್ನು ರುಕ್ಮಪುಂಖ ಶರಗಳಿಂದ ತಿರುಗಿ ಹೊಡೆದನು.

06069003a ದ್ರೌಣಿರ್ಗಾಂಡೀವಧನ್ವಾನಂ ಭೀಮಧನ್ವಾ ಮಹಾರಥಃ|

06069003c ಅವಿಧ್ಯದಿಷುಭಿಃ ಷಡ್ಭಿರ್ದೃಢಹಸ್ತಃ ಸ್ತನಾಂತರೇ||

ಮಹಾರಥಿ ದೃಢಹಸ್ತ ದ್ರೌಣಿಯು ಭೀಮಧನ್ವಿ ಗಾಂಡೀವಧನ್ವಿಯ ಎದೆಗೆ ಆರು ಬಾಣಗಳಿಂದ ಹೊಡೆದನು.

06069004a ಕಾರ್ಮುಕಂ ತಸ್ಯ ಚಿಚ್ಛೇದ ಫಲ್ಗುನಃ ಪರವೀರಹಾ|

06069004c ಅವಿಧ್ಯಚ್ಚ ಭೃಶಂ ತೀಕ್ಷ್ಣೈಃ ಪತ್ರಿಭಿಃ ಶತ್ರುಕರ್ಶನಃ||

ಆಗ ಪರವೀರಹ ಶತ್ರುಕರ್ಶನ ಫಲ್ಗುನನು ತುಂಬಾ ತೀಕ್ಷ್ಣವಾದ ಪತ್ರಿಗಳಿಂದ ಅವನ ಕಾರ್ಮುಕವನ್ನು ತುಂಡರಿಸಿದನು.

06069005a ಸೋಽನ್ಯತ್ಕಾರ್ಮುಕಮಾದಾಯ ವೇಗವತ್ಕ್ರೋಧಮೂರ್ಚಿತಃ|

06069005c ಅಮೃಷ್ಯಮಾಣಃ ಪಾರ್ಥೇನ ಕಾರ್ಮುಕಚ್ಛೇದಮಾಹವೇ||

06069006a ಅವಿಧ್ಯತ್ಫಲ್ಗುನಂ ರಾಜನ್ನವತ್ಯಾ ನಿಶಿತೈಃ ಶರೈಃ|

06069006c ವಾಸುದೇವಂ ಚ ಸಪ್ತತ್ಯಾ ವಿವ್ಯಾಧ ಪರಮೇಷುಭಿಃ||

ರಾಜನ್! ಕ್ರೋಧಮೂರ್ಛಿತನಾದ ಅವನು ಆಹವದಲ್ಲಿ ಪಾರ್ಥನು ಕಾರ್ಮುಕವನ್ನು ಛೇದಿಸಿದುದನ್ನು ಸಹಿಸಿಕೊಳ್ಳಲಾರದೇ ವೇಗದಲ್ಲಿ ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡು ಫಲ್ಗುನನನ್ನು ಒಂಭತ್ತು ನಿಶಿತ ಶರಗಳಿಂದಲೂ ವಾಸುದೇವನನ್ನು ಏಳು ಶರಗಳಿಂದಲೂ ಹೊಡೆದನು.

06069007a ತತಃ ಕ್ರೋಧಾಭಿತಾಮ್ರಾಕ್ಷಃ ಸಹ ಕೃಷ್ಣೇನ ಫಲ್ಗುನಃ|

06069007c ದೀರ್ಘಮುಷ್ಣಂ ಚ ನಿಃಶ್ವಸ್ಯ ಚಿಂತಯಿತ್ವಾ ಮುಹುರ್ಮುಹುಃ||

06069008a ಧನುಃ ಪ್ರಪೀಡ್ಯ ವಾಮೇನ ಕರೇಣಾಮಿತ್ರಕರ್ಶನಃ|

06069008c ಗಾಂಡೀವಧನ್ವಾ ಸಂಕ್ರುದ್ಧಃ ಶಿತಾನ್ಸನ್ನತಪರ್ವಣಃ||

06069008e ಜೀವಿತಾಂತಕರಾನ್ಘೋರಾನ್ಸಮಾದತ್ತ ಶಿಲೀಮುಖಾನ್||

06069009a ತೈಸ್ತೂರ್ಣಂ ಸಮರೇಽವಿಧ್ಯದ್ದ್ರೌಣಿಂ ಬಲವತಾಂ ವರಂ|

06069009c ತಸ್ಯ ತೇ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ||

ಆಗ ಕೃಷ್ಣನೊಂದಿಗೆ ಅಮಿತ್ರಕರ್ಶಣ ಗಾಂಡೀವಧನ್ವಿ ಫಲ್ಗುನನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ದೀರ್ಘ ಬಿಸಿ ನಿಟ್ಟುಸಿರು ಬಿಡುತ್ತಾ, ಪುನಃ ಪುನಃ ಚಿಂತಿಸುತ್ತಾ ಎಡಗೈಯಿಂದ ಧನುಸ್ಸನ್ನು ಮೀಟಿ, ಸಂಕ್ರುದ್ಧನಾಗಿ ಜೀವವನ್ನೇ ಕೊನೆಗೊಳಿಸಬಲ್ಲ ಘೋರ ಶಿಲೀಮುಖ ಹರಿತ ಸನ್ನತಪರ್ವಗಳನ್ನು ತಕ್ಷಣವೇ ತೆಗೆದುಕೊಂಡು ಸಮರದಲ್ಲಿ ಬಲವಂತರಲ್ಲೇ ಶ್ರೇಷ್ಠನಾದ ದ್ರೌಣಿಗೆ ಹೊಡೆದನು. ಆಹವದಲ್ಲಿ ಅದು ಅವನ ಕವಚವನ್ನು ಸೀಳಿ ರಕ್ತವನ್ನು ಕುಡಿದವು.

06069010a ನ ವಿವ್ಯಥೇ ಚ ನಿರ್ಭಿನ್ನೋ ದ್ರೌಣಿರ್ಗಾಂಡೀವಧನ್ವನಾ|

06069010c ತಥೈವ ಶರವರ್ಷಾಣಿ ಪ್ರತಿಮುಂಚನ್ನವಿಹ್ವಲಃ|

06069010e ತಸ್ಥೌ ಸ ಸಮರೇ ರಾಜಂಸ್ತ್ರಾತುಮಿಚ್ಛನ್ಮಹಾವ್ರತಂ||

ಗಾಂಡೀವಧನ್ವಿಯಿಂದ ಅವನ ಶರೀರವು ನಿರ್ಭಿನ್ನವಾದರೂ ದ್ರೌಣಿಯು ವ್ಯಥೆಪಡಲ್ಲ. ವಿಹ್ವಲನಾಗದೇ ಹಾಗೆಯೇ ಶರವರ್ಷಗಳನ್ನು ಪ್ರಯೋಗಿಸಿದನು. ರಾಜನ್! ಅವನು ಮಹಾವ್ರತನನ್ನು ರಕ್ಷಿಸಲು ಬಯಸಿ ಸಮರದಲ್ಲಿ ನಿಂತುಕೊಂಡನು.

06069011a ತಸ್ಯ ತತ್ಸುಮಹತ್ಕರ್ಮ ಶಶಂಸುಃ ಪುರುಷರ್ಷಭಾಃ|

06069011c ಯತ್ಕೃಷ್ಣಾಭ್ಯಾಂ ಸಮೇತಾಭ್ಯಾಂ ನಾಪತ್ರಪತ ಸಂಯುಗೇ||

ಇಬ್ಬರು ಕೃಷ್ಣರನ್ನು ಒಟ್ಟಿಗೇ ಎದುರಿಸುತ್ತಿದ್ದ ಅವನ ಆ ಮಹಾಕಾರ್ಯವನ್ನು ಸಂಯುಗದಲ್ಲಿ ಪುರುಷರ್ಷಭರು ಪ್ರಶಂಸಿಸಿದರು.

06069012a ಸ ಹಿ ನಿತ್ಯಮನೀಕೇಷು ಯುಧ್ಯತೇಽಭಯಮಾಸ್ಥಿತಃ|

06069012c ಅಸ್ತ್ರಗ್ರಾಮಂ ಸಸಂಹಾರಂ ದ್ರೋಣಾತ್ಪ್ರಾಪ್ಯ ಸುದುರ್ಲಭಂ||

ದ್ರೋಣನಿಂದ ಉಪಸಂಹಾರಗಳೊಂದಿಗೆ ದುರ್ಲಭ ಅಸ್ತ್ರಗ್ರಾಮಗಳನ್ನು ಪಡೆದಿದ್ದ ಅವನು ನಿತ್ಯ ಅಭಯನಾಗಿ ಸೇನೆಗಳೊಡನೆ ಯುದ್ಧಮಾಡಿದನು.

06069013a ಮಮಾಯಮಾಚಾರ್ಯಸುತೋ ದ್ರೋಣಸ್ಯಾತಿಪ್ರಿಯಃ ಸುತಃ|

06069013c ಬ್ರಾಹ್ಮಣಶ್ಚ ವಿಶೇಷೇಣ ಮಾನನೀಯೋ ಮಮೇತಿ ಚ||

06069014a ಸಮಾಸ್ಥಾಯ ಮತಿಂ ವೀರೋ ಬೀಭತ್ಸುಃ ಶತ್ರುತಾಪನಃ|

06069014c ಕೃಪಾಂ ಚಕ್ರೇ ರಥಶ್ರೇಷ್ಠೋ ಭಾರದ್ವಾಜಸುತಂ ಪ್ರತಿ||

ಆದರೆ “ಇವನು ನನ್ನ ಆಚಾರ್ಯನ ಮಗ, ದ್ರೋಣನ ಅತಿಪ್ರಿಯನಾದ ಮಗ. ವಿಶೇಷವಾಗಿ ಬ್ರಾಹ್ಮಣನಾಗಿರುವುದರಿಂದ ನನಗೆ ಮಾನನೀಯ” ಎಂದು ಅಭಿಪ್ರಾಯವನ್ನು ತಳೆದು ವೀರ ಶತ್ರುತಾಪನ ಬೀಭತ್ಸುವು ರಥಶ್ರೇಷ್ಠ ಭಾರದ್ವಾಜಸುತನ ಮೇಲೆ ಕೃಪೆತೋರಿದನು.

06069015a ದ್ರೌಣಿಂ ತ್ಯಕ್ತ್ವಾ ತತೋ ಯುದ್ಧೇ ಕೌಂತೇಯಃ ಶತ್ರುತಾಪನಃ|

06069015c ಯುಯುಧೇ ತಾವಕಾನ್ನಿಘ್ನಂಸ್ತ್ವರಮಾಣಃ ಪರಾಕ್ರಮೀ||

ಆಗ ಯುದ್ಧದಲ್ಲಿ ಶತ್ರುತಾಪನ ಪರಾಕ್ರಮೀ ಕೌಂತೇಯನು ದ್ರೌಣಿಯುನ್ನು ಬಿಟ್ಟು ನಿನ್ನ ಕಡೆಯವರೊಂದಿಗೆ ತ್ವರೆಮಾಡಿ ಯದ್ಧದಲ್ಲಿ ತೊಡಗಿದನು.

06069016a ದುರ್ಯೋಧನಸ್ತು ದಶಭಿರ್ಗಾರ್ಧ್ರಪತ್ರೈಃ ಶಿಲಾಶಿತೈಃ|

06069016c ಭೀಮಸೇನಂ ಮಹೇಷ್ವಾಸಂ ರುಕ್ಮಪುಂಖೈಃ ಸಮರ್ಪಯತ್||

ದುರ್ಯೋಧನನಾದರೋ ಹತ್ತು ಗಾರ್ಧ್ರಪತ್ರ ಶಿಲಾಶಿತ ರುಕ್ಮಪುಂಖಗಳಿಂದ ಮಹೇಷ್ವಾಸ ಭೀಮಸೇನನನ್ನು ಹೊಡೆದನು.

06069017a ಭೀಮಸೇನಸ್ತು ಸಂಕ್ರುದ್ಧಃ ಪರಾಸುಕರಣಂ ದೃಢಂ|

06069017c ಚಿತ್ರಂ ಕಾರ್ಮುಕಮಾದತ್ತ ಶರಾಂಶ್ಚ ನಿಶಿತಾನ್ದಶ||

06069018a ಆಕರ್ಣಪ್ರಹಿತೈಸ್ತೀಕ್ಷ್ಣೈರ್ವೇಗಿತೈಸ್ತಿಗ್ಮತೇಜನೈಃ|

06069018c ಅವಿಧ್ಯತ್ತೂರ್ಣಮವ್ಯಗ್ರಃ ಕುರುರಾಜಂ ಮಹೋರಸಿ||

ಅವ್ಯಗ್ರ ಭೀಮಸೇನನಾದರೋ ಸಂಕ್ರುದ್ಧನಾಗಿ ಶತ್ರುಗಳ ಪ್ರಾಣವನ್ನು ಅಪಹರಿಸಬಲ್ಲ ದೃಢವಾದ, ಚಿತ್ರ ಕಾರ್ಮುಕವನ್ನೂ ಹತ್ತು ನಿಶಿತ ಶರಗಳನ್ನೂ ತೆಗೆದುಕೊಂಡು ತೀಕ್ಷ್ಣವಾಗಿಯೂ ಅತಿ ವೇಗದಲ್ಲಿಯೂ ಆಕರ್ಣಪರ್ಯಂತವಾಗಿ ಎಳೆದು ಬೇಗನೇ ಕುರುರಾಜನನ್ನು ವಿಶಾಲ ಎದೆಯ ಮೇಲೆ ಹೊಡೆದನು.

06069019a ತಸ್ಯ ಕಾಂಚನಸೂತ್ರಸ್ತು ಶರೈಃ ಪರಿವೃತೋ ಮಣಿಃ|

06069019c ರರಾಜೋರಸಿ ವೈ ಸೂರ್ಯೋ ಗ್ರಹೈರಿವ ಸಮಾವೃತಃ||

ಶರಗಳಿಂದ ಚುಚ್ಚಲ್ಪಟ್ಟ ಅವನ ಚಿನ್ನದ ಸರದಲ್ಲಿದ್ದ ಮಣಿಯು ಗ್ರಹಗಳಿಂದ ಸಮಾವೃತವಾದ ಸೂರ್ಯನಂತೆ ರಾರಾಜಿಸಿತು.

06069020a ಪುತ್ರಸ್ತು ತವ ತೇಜಸ್ವೀ ಭೀಮಸೇನೇನ ತಾಡಿತಃ|

06069020c ನಾಮೃಷ್ಯತ ಯಥಾ ನಾಗಸ್ತಲಶಬ್ದಂ ಸಮೀರಿತಂ||

ನಿನ್ನ ತೇಜಸ್ವೀ ಪುತ್ರನಾದರೋ ಚಪ್ಪಾಳೆಯ ಶಬ್ಧವನ್ನು ಮದಿಸಿದ ಆನೆಯು ಹೇಗೋ ಹಾಗೆ ಭೀಮಸೇನನಿಂದ ತಾಗಿಸಿಕೊಂಡಿದುದನ್ನು ಸಹಿಸಿಕೊಳ್ಳಲಿಲ್ಲ.

06069021a ತತಃ ಶರೈರ್ಮಹಾರಾಜ ರುಕ್ಮಪುಂಖೈಃ ಶಿಲಾಶಿತೈಃ|

06069021c ಭೀಮಂ ವಿವ್ಯಾಧ ಸಂಕ್ರುದ್ಧಸ್ತ್ರಾಸಯಾನೋ ವರೂಥಿನೀಂ||

ಆಗ ಮಹಾರಾಜ! ಅವನು ಸಂಕ್ರುದ್ಧನಾಗಿ ಸೇನೆಯನ್ನು ಹೆದರಿಸಿ ಭೀಮನನ್ನು ಶಿಲಾಶಿತ ರುಕ್ಮಪುಂಖಗಳಿಂದ ಹೊಡೆದನು.

06069022a ತೌ ಯುಧ್ಯಮಾನೌ ಸಮರೇ ಭೃಶಮನ್ಯೋನ್ಯವಿಕ್ಷತೌ|

06069022c ಪುತ್ರೌ ತೇ ದೇವಸಂಕಾಶೌ ವ್ಯರೋಚೇತಾಂ ಮಹಾಬಲೌ||

ಸಮರದಲ್ಲಿ ಅನ್ಯೋನ್ಯರನ್ನು ಲಕ್ಷಿಸದೇ ಯುದ್ಧಮಾಡುತ್ತಿದ್ದ ನಿನ್ನ ಮಹಾಬಲ ಪುತ್ರರಿಬ್ಬರೂ ದೇವತೆಗಳಂತೆ ಮಿಂಚಿದರು.

06069023a ಚಿತ್ರಸೇನಂ ನರವ್ಯಾಘ್ರಂ ಸೌಭದ್ರಃ ಪರವೀರಹಾ|

06069023c ಅವಿಧ್ಯದ್ದಶಭಿರ್ಬಾಣೈಃ ಪುರುಮಿತ್ರಂ ಚ ಸಪ್ತಭಿಃ||

06069024a ಸತ್ಯವ್ರತಂ ಚ ಸಪ್ತತ್ಯಾ ವಿದ್ಧ್ವಾ ಶಕ್ರಸಮೋ ಯುಧಿ|

06069024c ನೃತ್ಯನ್ನಿವ ರಣೇ ವೀರ ಆರ್ತಿಂ ನಃ ಸಮಜೀಜನತ್||

ಪರವೀರಹ ವೀರ ಸೌಭದ್ರನು ನರವ್ಯಾಘ್ರ ಚಿತ್ರಸೇನನನ್ನು ಹತ್ತು ಬಾಣಗಳಿಂದಲೂ, ಪುರುಮಿತ್ರನನ್ನು ಏಳರಿಂದಲೂ, ಸತ್ಯವ್ರತನನ್ನು ಏಳರಿಂದಲೂ ಹೊಡೆದು ಯುದ್ಧದಲ್ಲಿ ಶಕ್ರನಂತೆ ರಣದಲ್ಲಿ ನೃತ್ಯಮಾಡುತ್ತಿರುವನೋ ಎನ್ನುವಂತೆ ಎದುರಿಸಿದವರೆಲ್ಲರನ್ನೂ ಹೊಡೆಯುತ್ತಾ ನಮ್ಮವರನ್ನು ಆರ್ತರನ್ನಾಗಿಸಿದನು.

06069025a ತಂ ಪ್ರತ್ಯವಿದ್ಯದ್ದಶಭಿಶ್ಚಿತ್ರಸೇನಃ ಶಿಲೀಮುಖೈಃ|

06069025c ಸತ್ಯವ್ರತಶ್ಚ ನವಭಿಃ ಪುರುಮಿತ್ರಶ್ಚ ಸಪ್ತಭಿಃ||

ಅವನನ್ನು ತಿರುಗಿ ಚಿತ್ರಸೇನನು ಹತ್ತು ಶಿಲೀಮುಖಗಳಿಂದಲೂ ಸತ್ಯವ್ರತನು ಒಂಭತ್ತರಿಂದಲೂ ಪುರುಮಿತ್ರನು ಏಳರಿಂದಲೂ ಹೊಡೆದರು.

06069026a ಸ ವಿದ್ಧೋ ವಿಕ್ಷರನ್ರಕ್ತಂ ಶತ್ರುಸಂವಾರಣಂ ಮಹತ್|

06069026c ಚಿಚ್ಛೇದ ಚಿತ್ರಸೇನಸ್ಯ ಚಿತ್ರಂ ಕಾರ್ಮುಕಮಾರ್ಜುನಿಃ|

06069026e ಭಿತ್ತ್ವಾ ಚಾಸ್ಯ ತನುತ್ರಾಣಂ ಶರೇಣೋರಸ್ಯತಾಡಯತ್||

ಪೆಟ್ಟು ತಿಂದು ರಕ್ತವನ್ನು ಸುರಿಸುತ್ತಿದ್ದ ಆರ್ಜುನಿಯು ಚಿತ್ರಸೇನನ ಶತ್ರುಸಂವಾರಣ ಮಹಾ ಚಿತ್ರ ಕಾರ್ಮುಕವನ್ನು ತುಂಡರಿಸಿದನು. ಶರದಿಂದ ಅವನ ಕವಚವನ್ನು ಸೀಳಿ ಎದೆಗೆ ತಾಗಿಸಿ ಹೊಡೆದನು.

06069027a ತತಸ್ತೇ ತಾವಕಾ ವೀರಾ ರಾಜಪುತ್ರಾ ಮಹಾರಥಾಃ|

06069027c ಸಮೇತ್ಯ ಯುಧಿ ಸಂರಬ್ಧಾ ವಿವ್ಯಧುರ್ನಿಶಿತೈಃ ಶರೈಃ|

ಆಗ ನಿನ್ನ ವೀರ ರಾಜಪುತ್ರ ಮಹಾರಥರು ಕೋಪದಿಂದ ಒಟ್ಟಾಗಿ ಯುದ್ಧದಲ್ಲಿ ಅವನನ್ನು ನಿಶಿತ ಶರಗಳಿಂದ ಹೊಡೆದರು.

06069027e ತಾಂಶ್ಚ ಸರ್ವಾನ್ ಶರೈಸ್ತೀಕ್ಷ್ಣೈರ್ಜಘಾನ ಪರಮಾಸ್ತ್ರವಿತ್||

06069028a ತಸ್ಯ ದೃಷ್ಟ್ವಾ ತು ತತ್ಕರ್ಮ ಪರಿವವ್ರುಃ ಸುತಾಸ್ತವ|

06069028c ದಹಂತಂ ಸಮರೇ ಸೈನ್ಯಂ ತವ ಕಕ್ಷಂ ಯಥೋಲ್ಬಣಂ||

ಅವರೆಲ್ಲರನ್ನೂ ಆ ಪರಮಾಸ್ತ್ರವಿದುವು ತೀಕ್ಷ್ಣ ಶರಗಳಿಂದ ಹೊಡೆದನು. ಅರಣ್ಯದ ದಾವಾಗ್ನಿಯು ಒಣಹುಲ್ಲುಗಳನ್ನು ನಿರಾಯಾಸವಾಗಿ ದಹಿಸುವಂತಿದ್ದ ಅವನ ಆ ಕೃತ್ಯವನ್ನು ನೋಡಿ ನಿನ್ನ ಪುತ್ರರು ಅವನನ್ನು ಸುತ್ತುವರೆದರು.

06069029a ಅಪೇತಶಿಶಿರೇ ಕಾಲೇ ಸಮಿದ್ಧಮಿವ ಪಾವಕಃ|

06069029c ಅತ್ಯರೋಚತ ಸೌಭದ್ರಸ್ತವ ಸೈನ್ಯಾನಿ ಶಾತಯನ್||

ನಿನ್ನ ಸೇನೆಗಳನ್ನು ವಿನಾಶಗೊಳಿಸುತ್ತಾ ಸೌಭದ್ರಿಯು ಛಳಿಗಾಲದ ಅಂತ್ಯದಲ್ಲಿ ಧಗಧಗಿಸಿ ಉರಿಯುವ ಪಾವಕನಂತೆ ವಿರಾಜಿಸಿದನು.

06069030a ತತ್ತಸ್ಯ ಚರಿತಂ ದೃಷ್ಟ್ವಾ ಪೌತ್ರಸ್ತವ ವಿಶಾಂ ಪತೇ|

06069030c ಲಕ್ಷ್ಮಣೋಽಭ್ಯಪತತ್ತೂರ್ಣಂ ಸಾತ್ವತೀಪುತ್ರಮಾಹವೇ||

ವಿಶಾಂಪತೇ! ಅವನ ಆ ಚರಿತವನ್ನು ನೋಡಿ ನಿನ್ನ ಮೊಮ್ಮಗ ಲಕ್ಷ್ಮಣನು ಆಹವದಲ್ಲಿ ಬೇಗನೇ ಸಾತ್ವತೀಪುತ್ರನನ್ನು ಎದುರಿಸಿದನು.

06069031a ಅಭಿಮನ್ಯುಸ್ತು ಸಂಕ್ರುದ್ಧೋ ಲಕ್ಷ್ಮಣಂ ಶುಭಲಕ್ಷಣಂ|

06069031c ವಿವ್ಯಾಧ ವಿಶಿಖೈಃ ಷಡ್ಭಿಃ ಸಾರಥಿಂ ಚ ತ್ರಿಭಿಃ ಶರೈಃ||

ಸಂಕ್ರುದ್ಧನಾದ ಅಭಿಮನ್ಯುವಾದರೋ ಶುಭಲಕ್ಷಣ ಲಕ್ಷ್ಮಣನನ್ನು ಆರು ವಿಶಿಖಗಳಿಂದ ಹೊಡೆದು ಮೂರು ಶರಗಳಿಂದ ಸಾರಥಿಯನ್ನೂ ಹೊಡೆದನು.

06069032a ತಥೈವ ಲಕ್ಷ್ಮಣೋ ರಾಜನ್ಸೌಭದ್ರಂ ನಿಶಿತೈಃ ಶರೈಃ|

06069032c ಅವಿಧ್ಯತ ಮಹಾರಾಜ ತದದ್ಭುತಮಿವಾಭವತ್||

ರಾಜನ್! ಮಹಾರಾಜ! ಹಾಗೆಯೇ ಲಕ್ಷ್ಮಣನೂ ಕೂಡ ಸೌಭದ್ರನನ್ನು ನಿಶಿತ ಶರಗಳಿಂದ ಹೊಡೆಯಲು ಅಲ್ಲಿ ಅದ್ಭುತವೊಂದು ನಡೆಯಿತು.

06069033a ತಸ್ಯಾಶ್ವಾಂಶ್ಚತುರೋ ಹತ್ವಾ ಸಾರಥಿಂ ಚ ಮಹಾಬಲಃ|

06069033c ಅಭ್ಯದ್ರವತ ಸೌಭದ್ರೋ ಲಕ್ಷ್ಮಣಂ ನಿಶಿತೈಃ ಶರೈಃ||

ಆಗ ಮಹಾಬಲ ಸೌಭದ್ರನು ಅವನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನು ಕೊಂದು ಲಕ್ಷ್ಮಣನನ್ನು ನಿಶಿತ ಶರಗಳಿಂದ ಪ್ರಹರಿಸಿದನು.

06069034a ಹತಾಶ್ವೇ ತು ರಥೇ ತುಷ್ಠಽಲ್ಲಕ್ಷ್ಮಣಃ ಪರವೀರಹಾ|

06069034c ಶಕ್ತಿಂ ಚಿಕ್ಷೇಪ ಸಂಕ್ರುದ್ಧಃ ಸೌಭದ್ರಸ್ಯ ರಥಂ ಪ್ರತಿ||

ಪರವೀರಹ ಲಕ್ಷ್ಮಣನು ರಥದ ಕುದುರೆಗಳು ಸತ್ತರೂ ಧೃತಿಗೆಡದೇ ಸಂಕ್ರುದ್ಧನಾಗಿ ಸೌಭದ್ರನ ರಥದ ಮೇಲೆ ಶಕ್ತಿಯನ್ನು ಎಸೆದನು.

06069035a ತಾಮಾಪತಂತೀಂ ಸಹಸಾ ಘೋರರೂಪಾಂ ದುರಾಸದಾಂ|

06069035c ಅಭಿಮನ್ಯುಃ ಶರೈಸ್ತೀಕ್ಷ್ಣೈಶ್ಚಿಚ್ಛೇದ ಭುಜಗೋಪಮಾಂ||

ಒಮ್ಮೆಲೇ ಬೀಳುತ್ತಿದ್ದ ಆ ಘೋರರೂಪೀ, ದುರಾಸದ ಭುಜಗೋಪಮ ಶಕ್ತಿಯನ್ನು ಅಭಿಮನ್ಯುವು ತೀಕ್ಷ್ಣ ಶರಗಳಿಂದ ತುಂಡರಿಸಿದನು.

06069036a ತತಃ ಸ್ವರಥಮಾರೋಪ್ಯ ಲಕ್ಷ್ಮಣಂ ಗೌತಮಸ್ತದಾ|

06069036c ಅಪೋವಾಹ ರಥೇನಾಜೌ ಸರ್ವಸೈನ್ಯಸ್ಯ ಪಶ್ಯತಃ||

ಆಗ ಗೌತಮನು ಲಕ್ಷ್ಮಣನನ್ನು ತನ್ನ ರಥದಲ್ಲೇರಿಸಿಕೊಂಡು ಎಲ್ಲ ಸೈನಿಕರೂ ನೋಡುತ್ತಿದ್ದಂತೆಯೇ ಇನ್ನೊಂದೆಡೆ ರಥವನ್ನು ವೇಗವಾಗಿ ಓಡಿಸಿ ಹೊರಟು ಹೋದನು.

06069037a ತತಃ ಸಮಾಕುಲೇ ತಸ್ಮಿನ್ವರ್ತಮಾನೇ ಮಹಾಭಯೇ|

06069037c ಅಭ್ಯದ್ರವಂ ಜಿಘಾಂಸಂತಃ ಪರಸ್ಪರವಧೈಷಿಣಃ||

ಆಗ ಆ ಸಮಾಕುಲದಲ್ಲಿ ಮಹಾಭಯುಂಕರ ಯುದ್ಧವು ಮುಂದುವರೆಯಿತು. ಪರಸ್ಪರರನ್ನು ವಧಿಸಲು ಇಚ್ಛಿಸಿ ಆಕ್ರಮಣ ಮಾಡಿ ಕೊಲ್ಲುತ್ತಿದ್ದರು.

06069038a ತಾವಕಾಶ್ಚ ಮಹೇಷ್ವಾಸಾಃ ಪಾಂಡವಾಶ್ಚ ಮಹಾರಥಾಃ|

06069038c ಜುಹ್ವಂತಃ ಸಮರೇ ಪ್ರಾಣಾನ್ನಿಜಘ್ನುರಿತರೇತರಂ||

ನಿನ್ನ ಕಡೆಯ ಮಹೇಷ್ವಾಸರೂ ಪಾಂಡವರ ಮಹಾರಥರೂ ಸಮರದಲ್ಲಿ ಆಹುತಿಯಾಗಲು ಸಿದ್ಧರಾಗಿ ಪರಸ್ಪರರ ಪ್ರಾಣಗಳನ್ನು ತೆಗೆದರು.

06069039a ಮುಕ್ತಕೇಶಾ ವಿಕವಚಾ ವಿರಥಾಶ್ಚಿನ್ನಕಾರ್ಮುಕಾಃ|

06069039c ಬಾಹುಭಿಃ ಸಮಯುಧ್ಯಂತ ಸೃಂಜಯಾಃ ಕುರುಭಿಃ ಸಹ||

ತಲೆಕೂದಲು ಬಿಚ್ಚಿಹೋಗಿ, ಕವಚಗಳಿಲ್ಲದೇ, ವಿರಥರಾಗಿ, ಕಾರ್ಮುಕಗಳು ತುಂಡಾಗಿ ಬಾಹುಗಳಿಂದ ಸೃಂಜಯರು ಕುರುಗಳೊಡನೆ ಯುದ್ಧಮಾಡಿದರು.

06069040a ತತೋ ಭೀಷ್ಮೋ ಮಹಾಬಾಹುಃ ಪಾಂಡವಾನಾಂ ಮಹಾತ್ಮನಾಂ|

06069040c ಸೇನಾಂ ಜಘಾನ ಸಂಕ್ರುದ್ಧೋ ದಿವ್ಯೈರಸ್ತ್ರೈರ್ಮಹಾಬಲಃ||

ಆಗ ಮಹಾಬಾಹು ಮಹಾಬಲ ಭೀಷ್ಮನು ಸಂಕ್ರುದ್ಧನಾಗಿ ದಿವ್ಯಾಸ್ತ್ರಗಳಿಂದ ಮಹಾತ್ಮ ಪಾಂಡವರ ಸೇನೆಗಳನ್ನು ಸಂಹರಿಸಿದನು.

06069041a ಹತೇಶ್ವರೈರ್ಗಜೈಸ್ತತ್ರ ನರೈರಶ್ವೈಶ್ಚ ಪಾತಿತೈಃ|

06069041c ರಥಿಭಿಃ ಸಾದಿಭಿಶ್ಚೈವ ಸಮಾಸ್ತೀರ್ಯತ ಮೇದಿನೀ||

ಸತ್ತು ಬಿದ್ದಿದ್ದ ಆನೆಗಳಿಂದ, ಮಾವುತರಿಂದ, ಕೆಳಗುರುಳಿದ್ದ ಪದಾತಿಗಳು, ಅಶ್ವಗಳು, ರಥಗಳು ಮತ್ತು ಕುದುರೆ ಸವಾರರಿಂದ ರಣಭೂಮಿಯು ಮುಚ್ಚಿಹೋಗಿತ್ತು.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೀಷ್ಮವಧಪರ್ವಣಿ ದ್ವಂದ್ವಯುದ್ಧೇ ಏಕೋನಸಪ್ತತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೀಷ್ಮವಧಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.

Image result for flowers against white background

Comments are closed.