Bhishma Parva: Chapter 66

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೬

ಮಿಶ್ರ ಯುದ್ಧ (೧-೨೨).

06066001 ಸಂಜಯ ಉವಾಚ|

06066001a ಅಕರೋತ್ತುಮುಲಂ ಯುದ್ಧಂ ಭೀಷ್ಮಃ ಶಾಂತನವಸ್ತದಾ|

06066001c ಭೀಮಸೇನಭಯಾದಿಚ್ಛನ್ಪುತ್ರಾಂಸ್ತಾರಯಿತುಂ ತವ||

ಸಂಜಯನು ಹೇಳಿದನು: “ನಿನ್ನ ಪುತ್ರರನ್ನು ಭೀಮಸೇನನ ಭಯದಿಂದ ಪಾರುಗೊಳಿಸಲು ಬಯಸಿ ಭೀಷ್ಮ ಶಾಂತನವನು ತುಮುಲ ಯುದ್ಧವನ್ನು ಮಾಡಿದನು.

06066002a ಪೂರ್ವಾಹ್ಣೇ ತನ್ಮಹಾರೌದ್ರಂ ರಾಜ್ಞಾಂ ಯುದ್ಧಮವರ್ತತ|

06066002c ಕುರೂಣಾಂ ಪಾಂಡವಾನಾಂ ಚ ಮುಖ್ಯಶೂರವಿನಾಶನಂ||

ಆ ಪೂರ್ವಾಹ್ಣದಲ್ಲಿ ಶೂರಮುಖ್ಯರ ವಿನಾಶಕಾರಕ ಮಹಾರೌದ್ರ ಯುದ್ಧವು ಕುರು ಮತ್ತು ಪಾಂಡವ ರಾಜರ ನಡುವೆ ನಡೆಯಿತು.

06066003a ತಸ್ಮಿನ್ನಾಕುಲಸಂಗ್ರಾಮೇ ವರ್ತಮಾನೇ ಮಹಾಭಯೇ|

06066003c ಅಭವತ್ತುಮುಲಃ ಶಬ್ದಃ ಸಂಸ್ಪೃಶನ್ಗಗನಂ ಮಹತ್||

ಆ ಮಹಾಭಯಂಕರ ಮಿಶ್ರ ಸಂಗ್ರಾಮವು ನಡೆಯುತ್ತಿರಲು ಗಗನವನ್ನು ಮುಟ್ಟುವ ಮಹಾ ತುಮುಲ ಶಬ್ಧವು ಉಂಟಾಯಿತು.

06066004a ನದದ್ಭಿಶ್ಚ ಮಹಾನಾಗೈರ್ಹೇಷಮಾಣೈಶ್ಚ ವಾಜಿಭಿಃ|

06066004c ಭೇರೀಶಂಖನಿನಾದೈಶ್ಚ ತುಮುಲಃ ಸಮಪದ್ಯತ||

ಮಹಾ ಆನೆಗಳ ಘೀಳು, ಕುದುರೆಗಳ ಹೇಷಾವರ, ಭೇರಿ-ಶಂಖಗಳ ನಾದದ ತುಮುಲ ಶಬ್ಧವು ಉಂಟಾಯಿತು.

06066005a ಯುಯುತ್ಸವಸ್ತೇ ವಿಕ್ರಾಂತಾ ವಿಜಯಾಯ ಮಹಾಬಲಾಃ|

06066005c ಅನ್ಯೋನ್ಯಮಭಿಗರ್ಜಂತೋ ಗೋಷ್ಠೇಷ್ವಿವ ಮಹರ್ಷಭಾಃ||

ವಿಜಯಕ್ಕಾಗಿ ವಿಕ್ರಾಂತರಾಗಿ ಯುದ್ಧಮಾಡುತ್ತಿದ್ದ ಮಹಾಬಲ ಮಹರ್ಷಭರು ಕೊಟ್ಟಿಗೆಯಲ್ಲಿ ಗೂಳಿಗಳಂತೆ ಅನ್ಯೋನ್ಯರ ಮೇಲೆ ಗರ್ಜಿಸುತ್ತಿದ್ದರು.

06066006a ಶಿರಸಾಂ ಪಾತ್ಯಮಾನಾನಾಂ ಸಮರೇ ನಿಶಿತೈಃ ಶರೈಃ|

06066006c ಅಶ್ಮವೃಷ್ಟಿರಿವಾಕಾಶೇ ಬಭೂವ ಭರತರ್ಷಭ||

ಭರತರ್ಷಭ! ಸಮರದಲ್ಲಿ ತಲೆಯ ಮೇಲೆ ಬೀಳುತ್ತಿದ್ದ ನಿಶಿತ ಬಾಣಗಳು ಆಕಾಶದಿಂದ ಬೀಳುವ ಕಲ್ಲಿನ ಮಳೆಗಳಂತಿದ್ದವು.

06066007a ಕುಂಡಲೋಷ್ಣೀಷಧಾರೀಣಿ ಜಾತರೂಪೋಜ್ಜ್ವಲಾನಿ ಚ|

06066007c ಪತಿತಾನಿ ಸ್ಮ ದೃಶ್ಯಂತೇ ಶಿರಾಂಸಿ ಭರತರ್ಷಭ||

ಭರತರ್ಷಭ! ಹೊಳೆಯುವ ಬಂಗಾರದ ಕುಂಡಲ-ಕಿರೀಟಗಳನ್ನು ಧರಿಸಿದ್ದ ಶಿರಗಳು ಬೀಳುತ್ತಿರುವುದು ಕಾಣುತ್ತಿತ್ತು.

06066008a ವಿಶಿಖೋನ್ಮಥಿತೈರ್ಗಾತ್ರೈರ್ಬಾಹುಭಿಶ್ಚ ಸಕಾರ್ಮುಕೈಃ|

06066008c ಸಹಸ್ತಾಭರಣೈಶ್ಚಾನ್ಯೈರಭವಚ್ಚಾದಿತಾ ಮಹೀ||

ವಿಶಿಖಗಳಿಂದ ಕತ್ತರಿಸಲ್ಪಟ್ಟ ದೇಹಗಳು, ಬಾಹುಗಳು, ಕಾರ್ಮುಕಗಳು, ಆಭರಣಗಳೊಂದಿಗೆ ಕೈಗಳು ಇವುಗಳಿಂದ ಭೂಮಿಯು ಮುಚ್ಚಿ ಹೋಯಿತು.

06066009a ಕವಚೋಪಹಿತೈರ್ಗಾತ್ರೈರ್ಹಸ್ತೈಶ್ಚ ಸಮಲಂಕೃತೈಃ|

06066009c ಮುಖೈಶ್ಚ ಚಂದ್ರಸಂಕಾಶೈ ರಕ್ತಾಂತನಯನೈಃ ಶುಭೈಃ||

06066010a ಗಜವಾಜಿಮನುಷ್ಯಾಣಾಂ ಸರ್ವಗಾತ್ರೈಶ್ಚ ಭೂಪತೇ|

06066010c ಆಸೀತ್ಸರ್ವಾ ಸಮಾಕೀರ್ಣಾ ಮುಹೂರ್ತೇನ ವಸುಂಧರಾ||

ಭೂಪತೇ! ಮುಹೂರ್ತದಲ್ಲಿ ವಸುಂಧರೆಯ ಮೇಲೆ ಕವಚಗಳು ಅಪ್ಪಿರುವ ದೇಹಗಳು, ಸಮಲಂಕೃತ ಕೈಗಳು, ಚಂದ್ರಸಂಕಾಶ ಮುಖಗಳು, ರಕ್ತಾಂತ ಶುಭ ನಯನಗಳು, ಗಜ-ವಾಜಿ-ಮನುಷ್ಯರೆಲ್ಲರ ದೇಹಗಳು ಎಲ್ಲ ಕಡೆ ಹರಡಿ ಹೋಗಿತ್ತು.

06066011a ರಜೋಮೇಘೈಶ್ಚ ತುಮುಲೈಃ ಶಸ್ತ್ರವಿದ್ಯುತ್ಪ್ರಕಾಶಿತೈಃ|

06066011c ಆಯುಧಾನಾಂ ಚ ನಿರ್ಘೋಷಃ ಸ್ತನಯಿತ್ನುಸಮೋಽಭವತ್||

ಧೂಳು ಮೋಡಗಳಂತೆಯೂ ತುಮುಲ ಶಸ್ತ್ರಗಳು ಮಿಂಚಿನಂತೆಯೂ ಪ್ರಕಾಶಿಸಿದವು. ಆಯುಧಗಳ ನಿರ್ಘೋಷವು ಗುಡುಗಿನಂತೆ ಕೇಳಿದವು.

06066012a ಸ ಸಂಪ್ರಹಾರಸ್ತುಮುಲಃ ಕಟುಕಃ ಶೋಣಿತೋದಕಃ|

06066012c ಪ್ರಾವರ್ತತ ಕುರೂಣಾಂ ಚ ಪಾಂಡವಾನಾಂ ಚ ಭಾರತ||

ಭಾರತ! ಕುರುಗಳ ಮತ್ತು ಪಾಂಡವರ ಆ ಕಟುಕ ಸಂಪ್ರಹಾರ ತುಮುಲವು ರಕ್ತವೇ ನೀರಾಗಿರುವ ನದಿಯನ್ನೇ ಹರಿಸಿತು.

06066013a ತಸ್ಮಿನ್ಮಹಾಭಯೇ ಘೋರೇ ತುಮುಲೇ ಲೋಮಹರ್ಷಣ|

06066013c ವವರ್ಷುಃ ಶರವರ್ಷಾಣಿ ಕ್ಷತ್ರಿಯಾ ಯುದ್ಧದುರ್ಮದಾಃ||

ಆ ಮಹಾಭಯಂಕರ ಲೋಮಹರ್ಷಣ ಘೋರ ತುಮುಲದಲ್ಲಿ ಯುದ್ಧದುರ್ಮದ ಕ್ಷತ್ರಿಯರು ಶರಗಳ ಮಳೆಯನ್ನೇ ಸುರಿಸಿದರು.

06066014a ಕ್ರೋಶಂತಿ ಕುಂಜರಾಸ್ತತ್ರ ಶರವರ್ಷಪ್ರತಾಪಿತಾಃ|

06066014c ತಾವಕಾನಾಂ ಪರೇಷಾಂ ಚ ಸಂಯುಗೇ ಭರತೋತ್ತಮ|

ಭರತೋತ್ತಮ! ಸಂಯುಗದಲ್ಲಿ ಶರವರ್ಷದಿಂದ ಪೀಡಿತರಾದ ನಿನ್ನ ಮತ್ತು ಅವರ ಕಡೆಯ ಆನೆಗಳು ಚೀರಿಕೊಳ್ಳುತ್ತಿದ್ದವು.

06066014e ಅಶ್ವಾಶ್ಚ ಪರ್ಯಧಾವಂತ ಹತಾರೋಹಾ ದಿಶೋ ದಶ||

06066015a ಉತ್ಪತ್ಯ ನಿಪತಂತ್ಯನ್ಯೇ ಶರಘಾತಪ್ರಪೀಡಿತಾಃ|

ಆರೋಹಿಗಳನ್ನು ಕಳೆದುಕೊಂಡ ಶರಘಾತ ಪೀಡಿತ ಕುದುರೆಗಳು ಹತ್ತೂ ದಿಕ್ಕುಗಳಲ್ಲಿ ಓಡಿ, ಹಾರಿ, ಇನ್ನು ಕೆಲವು ಬೀಳುತ್ತಿದ್ದವು.

06066015c ತಾವಕಾನಾಂ ಪರೇಷಾಂ ಚ ಯೋಧಾನಾಂ ಭರತರ್ಷಭ||

06066016a ಅಶ್ವಾನಾಂ ಕುಂಜರಾಣಾಂ ಚ ರಥಾನಾಂ ಚಾತಿವರ್ತತಾಂ|

06066016c ಸಂಘಾತಾಃ ಸ್ಮ ಪ್ರದೃಶ್ಯಂತೇ ತತ್ರ ತತ್ರ ವಿಶಾಂ ಪತೇ||

ಭರತರ್ಷಭ! ವಿಶಾಂಪತೇ! ಅಲ್ಲಲ್ಲಿ ಪಲಾಯನ ಮಾಡುತ್ತಿದ್ದ ಅಥವಾ ಹೊಡೆದು ಬಿದ್ದಿದ್ದ ನಿನ್ನ ಮತ್ತು ಅವರ ಕಡೆಯ ಯೋಧರು, ಕುದುರೆಗಳು, ಆನೆಗಳು, ರಥಗಳು ಕಂಡುಬಂದವು.

06066017a ಗದಾಭಿರಸಿಭಿಃ ಪ್ರಾಸೈರ್ಬಾಣೈಶ್ಚ ನತಪರ್ವಭಿಃ|

06066017c ಜಘ್ನುಃ ಪರಸ್ಪರಂ ತತ್ರ ಕ್ಷತ್ರಿಯಾಃ ಕಾಲಚೋದಿತಾಃ||

ಕಾಲಚೋದಿತ ಕ್ಷತ್ರಿಯರು ಅಲ್ಲಿ ಗದೆ, ಖಡ್ಗ, ಪ್ರಾಸ, ನತಪರ್ವ ಬಾಣಗಳಿಂದ ಪರಸ್ಪರರನ್ನು ಕೊಂದರು.

06066018a ಅಪರೇ ಬಾಹುಭಿರ್ವೀರಾ ನಿಯುದ್ಧಕುಶಲಾ ಯುಧಿ|

06066018c ಬಹುಧಾ ಸಮಸಜ್ಜಂತ ಆಯಸೈಃ ಪರಿಘೈರಿವ||

ಇನ್ನು ಕೆಲವು ಯುದ್ಧ ಕುಶಲ ವೀರರು ಯುದ್ಧದಲ್ಲಿ ಉಕ್ಕಿನ ಪರಿಘಗಳಂತಿರುವ ಬಾಹುಗಳಿಂದಲೇ ಹಲವರನ್ನು ಜಜ್ಜಿ ಹಾಕಿದರು.

06066019a ಮುಷ್ಟಿಭಿರ್ಜಾನುಭಿಶ್ಚೈವ ತಲೈಶ್ಚೈವ ವಿಶಾಂ ಪತೇ|

06066019c ಅನ್ಯೋನ್ಯಂ ಜಘ್ನಿರೇ ವೀರಾಸ್ತಾವಕಾಃ ಪಾಂಡವೈಃ ಸಹ||

ವಿಶಾಂಪತೇ! ನಿನ್ನವರ ಮತ್ತು ಪಾಂಡವರ ವೀರರು ಮುಷ್ಟಿಗಳಿಂದ, ಒದೆಗಳಿಂದ, ಹೊಡೆತದಿಂದ ಅನ್ಯೋನ್ಯರನ್ನು ಸಂಹರಿಸಿದರು.

06066020a ವಿರಥಾ ರಥಿನಶ್ಚಾತ್ರ ನಿಸ್ತ್ರಿಂಶವರಧಾರಿಣಃ|

06066020c ಅನ್ಯೋನ್ಯಮಭಿಧಾವಂತ ಪರಸ್ಪರವಧೈಷಿಣಃ||

ಅಲ್ಲಿ ವಿರಥರೂ ಮತ್ತು ರಥಿಗಳೂ ಶ್ರೇಷ್ಠ ಖಡ್ಗಗಳನ್ನು ಹಿಡಿದು ಪರಸ್ಪರರನ್ನು ದ್ವೇಷಿಸಿ ಅನ್ಯೋನ್ಯರನ್ನು ಹೊಡೆಯತ್ತಿದ್ದರು.

06066021a ತತೋ ದುರ್ಯೋಧನೋ ರಾಜಾ ಕಲಿಂಗೈರ್ಬಹುಭಿರ್ವೃತಃ|

06066021c ಪುರಸ್ಕೃತ್ಯ ರಣೇ ಭೀಷ್ಮಂ ಪಾಂಡವಾನಭ್ಯವರ್ತತ||

ಆಗ ರಾಜಾ ದುರ್ಯೋಧನನು ಅನೇಕ ಕಲಿಂಗರಿಂದ ಆವೃತನಾಗಿ ರಣದಲ್ಲಿ ಭೀಷ್ಮನನ್ನು ಮುಂದಿರಿಸಿಕೊಂಡು ಪಾಂಡವರ ಮೇಲೆ ಎರಗಿದನು.

06066022a ತಥೈವ ಪಾಂಡವಾಃ ಸರ್ವೇ ಪರಿವಾರ್ಯ ವೃಕೋದರಂ|

06066022c ಭೀಷ್ಮಮಭ್ಯದ್ರವನ್ಕ್ರುದ್ಧಾ ರಣೇ ರಭಸವಾಹನಾಃ||

ಹಾಗೆಯೇ ಪಾಂಡವರೆಲ್ಲರೂ ವೃಕೋದರನನ್ನು ಸುತ್ತುವರೆದು ರಭಸ ವಾಹನರಾಗಿ ಕ್ರುದ್ಧರಾಗಿ ಭೀಷ್ಮನನ್ನು ಎದುರಿಸಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಷಟ್ಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಅರವತ್ತಾರನೇ ಅಧ್ಯಾಯವು.

Image result for flowers against white background

Comments are closed.