Bhishma Parva: Chapter 64

ಭೀಷ್ಮ ಪರ್ವ: ಭೀಷ್ಮವಧ ಪರ್ವ

೬೪

ಬ್ರಹ್ಮಭೂತಸ್ತವ (೧-೧೦). “ದೇವರಾದ ನರ-ನಾರಾಯಣರನ್ನು ಅಪಮಾನಿಸಿ ನಾಶವಾಗುತ್ತೀಯೆ” ಎಂದು ಹೇಳಿ ಭೀಷ್ಮನು ದುರ್ಯೋಧನನನ್ನು ಕಳುಹಿಸಿದುದು (೧೧-೧೮).

06064001 ಭೀಷ್ಮ ಉವಾಚ|

06064001a ಶೃಣು ಚೇದಂ ಮಹಾರಾಜ ಬ್ರಹ್ಮಭೂತಸ್ತವಂ ಮಮ|

06064001c ಬ್ರಹ್ಮರ್ಷಿಭಿಶ್ಚ ದೇವೈಶ್ಚ ಯಃ ಪುರಾ ಕಥಿತೋ ಭುವಿ||

ಭೀಷ್ಮನು ಹೇಳಿದನು: “ಮಹಾರಾಜ! ಹಿಂದೆ ಭುವಿಯಲ್ಲಿ ಬ್ರಹ್ಮರ್ಷಿ-ದೇವತೆಗಳು ಹೇಳಿದ ಈ ಬ್ರಹ್ಮಭೂತಸ್ತವವನ್ನು ಕೇಳು.

06064002a ಸಾಧ್ಯಾನಾಮಪಿ ದೇವಾನಾಂ ದೇವದೇವೇಶ್ವರಃ ಪ್ರಭುಃ|

06064002c ಲೋಕಭಾವನಭಾವಜ್ಞ ಇತಿ ತ್ವಾಂ ನಾರದೋಽಬ್ರವೀತ್|

06064002e ಭೂತಂ ಭವ್ಯಂ ಭವಿಷ್ಯಂ ಚ ಮಾರ್ಕಂಡೇಯೋಽಭ್ಯುವಾಚ ಹ||

“ನೀನು ಸಾಧ್ಯರ, ದೇವತೆಗಳ ದೇವದೇವೇಶ್ವರ ಪ್ರಭು ಮತ್ತು ಲೋಕಭಾವನ ಭಾವಜ್ಞನೆಂದು ನಾರದನು ಹೇಳಿದನು. ಭೂತ, ಭವ್ಯ, ಭವಿಷ್ಯವೆಂದು ಮಾರ್ಕಂಡೇಯನು ಹೇಳಿದನು.

06064003a ಯಜ್ಞಾನಾಂ ಚೈವ ಯಜ್ಞಂ ತ್ವಾಂ ತಪಶ್ಚ ತಪಸಾಮಪಿ|

06064003c ದೇವಾನಾಮಪಿ ದೇವಂ ಚ ತ್ವಾಮಾಹ ಭಗವಾನ್ಭೃಗುಃ||

ನೀನು ಯಜ್ಞಗಳ ಯಜ್ಞ, ತಾಪಸರ ತಪಸ್ಸು, ಮತ್ತು ದೇವತೆಗಳಿಗೂ ದೇವನೆಂದು ಭಗವಾನ್ ಭೃಗುವು ಹೇಳಿದನು.

06064003e ಪುರಾಣೇ ಭೈರವಂ ರೂಪಂ ವಿಷ್ಣೋ ಭೂತಪತೇತಿ ವೈ||

06064004a ವಾಸುದೇವೋ ವಸೂನಾಂ ತ್ವಂ ಶಕ್ರಂ ಸ್ಥಾಪಯಿತಾ ತಥಾ|

06064004c ದೇವದೇವೋಽಸಿ ದೇವಾನಾಂ ಇತಿ ದ್ವೈಪಾಯನೋಽಬ್ರವೀತ್||

ಪುರಾಣದಲ್ಲಿ ಭೈರವ ರೂಪನೆಂದೂ, ವಿಷ್ಣು-ಭೂತಪತಿಯೆಂದೂ, ವಸುಗಳಲ್ಲಿ ವಾಸುದೇವನೆಂದೂ, ಶಕ್ರನ ಸ್ಥಾಪಕನೆಂದೂ, ದೇವತೆಗಳ ದೇವರ ದೇವನೆಂದೂ ದ್ವೈಪಾಯನನು ಹೇಳಿದನು.

06064005a ಪೂರ್ವೇ ಪ್ರಜಾನಿಸರ್ಗೇಷು ದಕ್ಷಮಾಹುಃ ಪ್ರಜಾಪತಿಂ|

06064005c ಸ್ರಷ್ಟಾರಂ ಸರ್ವಭೂತಾನಾಮಂಗಿರಾಸ್ತ್ವಾಂ ತತೋಽಬ್ರವೀತ್||

ಹಿಂದೆ ಪ್ರಜಾಸೃಷ್ಟಿಯ ಕಾಲದಲ್ಲಿ ನೀನೇ ಪ್ರಜಾಪತಿ ದಕ್ಷನೆಂದೂ, ಸರ್ವಭೂತಗಳ ಸೃಷ್ಟಾರನೆಂದೂ ಅಂಗಿರಸನು ಹೇಳಿದನು.

06064006a ಅವ್ಯಕ್ತಂ ತೇ ಶರೀರೋತ್ಥಂ ವ್ಯಕ್ತಂ ತೇ ಮನಸಿ ಸ್ಥಿತಂ|

06064006c ದೇವಾ ವಾಕ್ಸಂಭವಾಶ್ಚೇತಿ ದೇವಲಸ್ತ್ವಸಿತೋಽಬ್ರವೀತ್||

ಅವ್ಯಕ್ತವಾದುದು ನಿನ್ನ ಶರೀರದಿಂದ ಮೇಲೆದ್ದು ಬಂತೆಂದೂ ವ್ಯಕ್ತವಾದುದು ನಿನ್ನ ಮನಸ್ಸಿನಲ್ಲಿಯೇ ನೆಲೆಸಿರುವುದೆಂದೂ, ನಿನ್ನ ಮಾತಿನಿಂದ ದೇವತೆಗಳು ಸಂಭವಿಸಿದರೆಂದೂ ದೇವಲನು ಹೇಳಿದನು.

06064007a ಶಿರಸಾ ತೇ ದಿವಂ ವ್ಯಾಪ್ತಂ ಬಾಹುಭ್ಯಾಂ ಪೃಥಿವೀ ಧೃತಾ|

06064007c ಜಠರಂ ತೇ ತ್ರಯೋ ಲೋಕಾಃ ಪುರುಷೋಽಸಿ ಸನಾತನಃ||

ನಿನ್ನ ಶಿರವು ದಿವವನ್ನು ವ್ಯಾಪಿಸಿದೆ. ಎರಡೂ ಬಾಹುಗಳು ಪೃಥ್ವಿಯನ್ನು ಧರಿಸಿವೆ. ನಿನ್ನ ಜಠರದಲ್ಲಿ ಮೂರೂ ಲೋಕಗಳಿವೆ. ಸನಾತನ ಪುರುಷನು ನೀನೆ.

06064008a ಏವಂ ತ್ವಾಮಭಿಜಾನಂತಿ ತಪಸಾ ಭಾವಿತಾ ನರಾಃ|

06064008c ಆತ್ಮದರ್ಶನತೃಪ್ತಾನಾಂ ಋಷೀಣಾಂ ಚಾಪಿ ಸತ್ತಮಃ||

ಹೀಗೆ ತಪಸ್ಸಿನಿಂದ ಭಾವಿತರಾದ ನರರು, ಆತ್ಮದರ್ಶನತೃಪ್ತರಾದ ಋಷಿಗಳೂ ಸತ್ತಮರೂ ತಿಳಿದುಕೊಂಡಿದ್ದಾರೆ.

06064009a ರಾಜರ್ಷೀಣಾಮುದಾರಾಣಾಮಾಹವೇಷ್ವನಿವರ್ತಿನಾಂ|

06064009c ಸರ್ವಧರ್ಮಪ್ರಧಾನಾನಾಂ ತ್ವಂ ಗತಿರ್ಮಧುಸೂದನ||

ಮಧುಸೂದನ! ಉದಾರರಾದ, ಯುದ್ಧದಿಂದ ಪಲಾಯನ ಮಾಡದಿರುವ, ಸರ್ವಧರ್ಮ ಪ್ರಧಾನರಾದ ರಾಜರ್ಷಿಗಳ ಗತಿಯು ನೀನು.”

06064010a ಏಷ ತೇ ವಿಸ್ತರಸ್ತಾತ ಸಂಕ್ಷೇಪಶ್ಚ ಪ್ರಕೀರ್ತಿತಃ|

06064010c ಕೇಶವಸ್ಯ ಯಥಾತತ್ತ್ವಂ ಸುಪ್ರೀತೋ ಭವ ಕೇಶವೇ||

ಮಗೂ! ಈ ರೀತಿ ವಿಸ್ತಾರವಾದ ಕೇಶವನ ಯಥಾತತ್ತ್ವವನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಕೇಶವನೊಡನೆ ಸುಪ್ರೀತನಾಗು.””

06064011 ಸಂಜಯ ಉವಾಚ|

06064011a ಪುಣ್ಯಂ ಶ್ರುತ್ವೈತದಾಖ್ಯಾನಂ ಮಹಾರಾಜ ಸುತಸ್ತವ|

06064011c ಕೇಶವಂ ಬಹು ಮೇನೇ ಸ ಪಾಂಡವಾಂಶ್ಚ ಮಹಾರಥಾನ್||

ಸಂಜಯನು ಹೇಳಿದನು: “ಮಹಾರಾಜ! ಈ ಪುಣ್ಯ ಆಖ್ಯಾನವನ್ನು ಕೇಳಿ ನಿನ್ನ ಮಗನು ಕೇಶವನನ್ನೂ ಮಹಾರಥ ಪಾಂಡವರನ್ನೂ ಮಹಾತ್ಮರೆಂದು ಅಭಿಪ್ರಾಯಪಟ್ಟನು.

06064012a ತಮಬ್ರವೀನ್ಮಹಾರಾಜ ಭೀಷ್ಮಃ ಶಾಂತನವಃ ಪುನಃ|

06064012c ಮಾಹಾತ್ಮ್ಯಂ ತೇ ಶ್ರುತಂ ರಾಜನ್ಕೇಶವಸ್ಯ ಮಹಾತ್ಮನಃ||

06064013a ನರಸ್ಯ ಚ ಯಥಾತತ್ತ್ವಂ ಯನ್ಮಾಂ ತ್ವಂ ಪರಿಪೃಚ್ಛಸಿ|

06064013c ಯದರ್ಥಂ ನೃಷು ಸಂಭೂತೌ ನರನಾರಾಯಣಾವುಭೌ||

06064014a ಅವಧ್ಯೌ ಚ ಯಥಾ ವೀರೌ ಸಂಯುಗೇಷ್ವಪರಾಜಿತೌ|

06064014c ಯಥಾ ಚ ಪಾಂಡವಾ ರಾಜನ್ನಗಮ್ಯಾ ಯುಧಿ ಕಸ್ಯ ಚಿತ್||

ಮಹಾರಾಜ! ಭೀಷ್ಮ ಶಾಂತನವನು ಪುನಃ ಅವನಿಗೆ ಹೇಳಿದನು: “ರಾಜನ್! ನೀನು ನನ್ನನ್ನು ಕೇಳಿದುದಕ್ಕೆ ಮಹಾತ್ಮ ಕೇಶವನ ಮತ್ತು ನರನ ಯಥಾತತ್ತ್ವ ಮಹಾತ್ಮೆಯನ್ನು ಮತ್ತು ಯಾವ ಕಾರಣಕ್ಕಾಗಿ ಆ ನರ-ನಾರಾಯಣರಿಬ್ಬರೂ ನರರಲ್ಲಿ ಅವತರಿಸಿದ್ದಾರೆ, ಹೇಗೆ ಆ ವೀರರಿಬ್ಬರೂ ಯುದ್ಧದಲ್ಲಿ ಅಪರಾಜಿತರಾಗಿದ್ದರೂ ಅವಧ್ಯರೂ ಆಗಿದ್ದಾರೆ, ಮತ್ತು ಹೇಗೆ ಪಾಂಡವರು ಯುದ್ಧದಲ್ಲಿ ಯಾರಿಂದಲೂ ಅಗಮ್ಯರು ಎನ್ನುವುದನ್ನು ನೀನು ಕೇಳಿದೆ.

06064015a ಪ್ರೀತಿಮಾನ್ ಹಿ ದೃಢಂ ಕೃಷ್ಣಃ ಪಾಂಡವೇಷು ಯಶಸ್ವಿಷು|

06064015c ತಸ್ಮಾದ್ಬ್ರವೀಮಿ ರಾಜೇಂದ್ರ ಶಮೋ ಭವತು ಪಾಂಡವೈಃ||

ಯಶಸ್ವಿಗಳಾದ ಪಾಂಡವರಲ್ಲಿ ಕೃಷ್ಣನು ದೃಢ ಪ್ರೀತಿಯನ್ನಿಟ್ಟಿದ್ದಾನೆ. ಆದುದರಿಂದ ರಾಜೇಂದ್ರ! ನಿನಗೆ ಹೇಳುತ್ತಿದ್ದೇನೆ. ಪಾಂಡವರೊಂದಿಗೆ ಶಾಂತಿಯಿರಲಿ.

06064016a ಪೃಥಿವೀಂ ಭುಂಕ್ಷ್ವ ಸಹಿತೋ ಭ್ರಾತೃಭಿರ್ಬಲಿಭಿರ್ವಶೀ|

06064016c ನರನಾರಾಯಣೌ ದೇವಾವವಜ್ಞಾಯ ನಶಿಷ್ಯಸಿ||

ಬಲಶಾಲಿಗಳಾದ, ವಶಿಗಳಾದ ಸಹೋದರರೊಂದಿಗೆ ಪೃಥ್ವಿಯನ್ನು ಭೋಗಿಸು. ದೇವರಾದ ನರ-ನಾರಾಯಣರನ್ನು ಅಪಮಾನಿಸಿ ನಾಶವಾಗುತ್ತೀಯೆ.”

06064017a ಏವಮುಕ್ತ್ವಾ ತವ ಪಿತಾ ತೂಷ್ಣೀಮಾಸೀದ್ವಿಶಾಂ ಪತೇ|

06064017c ವ್ಯಸರ್ಜಯಚ್ಚ ರಾಜಾನಂ ಶಯನಂ ಚ ವಿವೇಶ ಹ||

ವಿಶಾಂಪತೇ! ಹೀಗೆ ಹೇಳಿ ನಿನ್ನ ತಂದೆ ಪಿತಾಮಹನು ಸುಮ್ಮನಾದನು. ರಾಜನನ್ನು ಕಳುಹಿಸಿ, ಶಯನವನ್ನು ಪ್ರವೇಶಿಸಿದನು.

06064018a ರಾಜಾಪಿ ಶಿಬಿರಂ ಪ್ರಾಯಾತ್ಪ್ರಣಿಪತ್ಯ ಮಹಾತ್ಮನೇ|

06064018c ಶಿಶ್ಯೇ ಚ ಶಯನೇ ಶುಭ್ರೇ ತಾಂ ರಾತ್ರಿಂ ಭರತರ್ಷಭ||

ಭರತರ್ಷಭ! ರಾಜನೂ ಕೂಡ ಮಹಾತ್ಮನಿಗೆ ನಮಸ್ಕರಿಸಿ ಶಿಬಿರಕ್ಕೆ ಹೋದನು. ಶುಭ್ರ ಹಾಸಿಗೆಯಲ್ಲಿ ರಾತ್ರಿಯನ್ನು ಕಳೆದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಿಶ್ವೋಪಾಖ್ಯಾನೇ ಚತುಃಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಿಶ್ವೋಪಾಖ್ಯಾನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.

Image result for flowers against white background

Comments are closed.