ಭೀಷ್ಮ ಪರ್ವ: ಭೀಷ್ಮವಧ ಪರ್ವ
Contents
Toggle೬೦
ಭೀಮಸೇನನು ಸೇನಾಪತಿ, ಸುಷೇಣ, ಜಲಸಂಧ, ಸುಲೋಚನ, ಉಗ್ರ, ಭೀಮರಥ, ಭೀಮ, ಭೀಮಬಾಹು – ಈ ಎಂಟು ಮಂದಿ ಧೃತರಾಷ್ಟ್ರನ ಮಕ್ಕಳನ್ನು ಸಂಹರಿಸಿದುದು (೧-೩೨). ಭಗದತ್ತ-ಘಟೋತ್ಕಚರ ಯುದ್ಧ (೩೩-೬೫). ನಾಲ್ಕನೆಯ ದಿವಸದ ಯುದ್ಧ ಸಮಾಪ್ತಿ (೬೬-೭೯).
06060001 ಸಂಜಯ ಉವಾಚ|
06060001a ತತೋ ಭೂರಿಶ್ರವಾ ರಾಜನ್ಸಾತ್ಯಕಿಂ ನವಭಿಃ ಶರೈಃ|
06060001c ಅವಿಧ್ಯದ್ಭೃಶಸಂಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ||
ಸಂಜಯನು ಹೇಳಿದನು: “ರಾಜನ್! ಆಗ ಭೂರಿಶ್ರವನು ಸಂಕ್ರುದ್ಧನಾಗಿ ಸಲಗವನ್ನು ಅಂಕುಶದಿಂದ ಬಾಧೆಗೊಳಿಸುವಂತೆ ಒಂಭತ್ತು ಬಾಣಗಳಿಂದ ಸಾತ್ಯಕಿಯನ್ನು ಹೊಡೆದನು.
06060002a ಕೌರವಂ ಸಾತ್ಯಕಿಶ್ಚೈವ ಶರೈಃ ಸಮ್ನತಪರ್ವಭಿಃ|
06060002c ಅವಾಕಿರದಮೇಯಾತ್ಮಾ ಸರ್ವಲೋಕಸ್ಯ ಪಶ್ಯತಃ||
ಅಮೇಯಾತ್ಮ ಸಾತ್ಯಕಿಯೂ ಕೂಡ ಸರ್ವಲೋಕವೂ ನೋಡುತ್ತಿರಲು ಕೌರವನನ್ನು ಸನ್ನತಪರ್ವ ಶರಗಳಿಂದ ಹೊಡೆದನು.
06060003a ತತೋ ದುರ್ಯೋಧನೋ ರಾಜಾ ಸೋದರ್ಯೈಃ ಪರಿವಾರಿತಃ|
06060003c ಸೌಮದತ್ತಿಂ ರಣೇ ಯತ್ತಃ ಸಮಂತಾತ್ಪರ್ಯವಾರಯತ್||
ಆಗ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ರಣದಲ್ಲಿ ಸೋಮದತ್ತಿಯನ್ನು ಎಲ್ಲ ಕಡೆಗಳಿಂದ ಸುತ್ತುವರೆದನು.
06060004a ತಥೈವ ಪಾಂಡವಾಃ ಸರ್ವೇ ಸಾತ್ಯಕಿಂ ರಭಸಂ ರಣೇ|
06060004c ಪರಿವಾರ್ಯ ಸ್ಥಿತಾಃ ಸಂಖ್ಯೇ ಸಮಂತಾತ್ಸುಮಹೌಜಸಃ||
ಹಾಗೆಯೇ ಪಾಂಡವರೆಲ್ಲರೂ ರಭಸದಿಂದ ರಣದಲ್ಲಿ ಸಾತ್ಯಕಿಯನ್ನು ಎಲ್ಲಕಡೆಗಳಿಂದ ಸುತ್ತುವರೆದು ಯುದ್ಧಕ್ಕೆ ನಿಂತರು.
06060005a ಭೀಮಸೇನಸ್ತು ಸಂಕ್ರುದ್ಧೋ ಗದಾಮುದ್ಯಮ್ಯ ಭಾರತ|
06060005c ದುರ್ಯೋಧನಮುಖಾನ್ಸರ್ವಾನ್ಪುತ್ರಾಂಸ್ತೇ ಪರ್ಯವಾರಯತ್||
ಭಾರತ! ಭೀಮಸೇನನಾದರೋ ಸಂಕ್ರುದ್ಧನಾಗಿ ಗದೆಯನ್ನು ಎತ್ತಿ ಹಿಡಿದು ದುರ್ಯೋಧನನ ನಾಯಕತ್ವದಲ್ಲಿದ್ದ ನಿನ್ನ ಪುತ್ರರೆಲ್ಲರನ್ನೂ ತಡೆದನು.
06060006a ರಥೈರನೇಕಸಾಹಸ್ರೈಃ ಕ್ರೋಧಾಮರ್ಷಸಮನ್ವಿತಃ|
06060006c ನಂದಕಸ್ತವ ಪುತ್ರಸ್ತು ಭೀಮಸೇನಂ ಮಹಾಬಲಂ|
06060006e ವಿವ್ಯಾಧ ನಿಶಿತೈಃ ಷಡ್ಭಿಃ ಕಂಕಪತ್ರೈಃ ಶಿಲಾಶಿತೈಃ||
ಅನೇಕ ಸಹಸ್ರ ರಥಗಳೊಂದಿಗಿದ್ದ, ಕ್ರೋಧಾಮರ್ಷಸಮನ್ವಿತನಾದ ನಿನ್ನ ಮಗ ನಂದಕನಾದರೋ ಮಹಾಬಲ ಭೀಮಸೇನನನ್ನು ಆರು ಶಿಲಾಶಿತ ನಿಶಿತ ಕಂಕಪತ್ರಗಳಿಂದ ಹೊಡೆದನು.
06060007a ದುರ್ಯೋಧನಸ್ತು ಸಮರೇ ಭೀಮಸೇನಂ ಮಹಾಬಲಂ|
06060007c ಆಜಘಾನೋರಸಿ ಕ್ರುದ್ಧೋ ಮಾರ್ಗಣೈರ್ನಿಶಿತೈಸ್ತ್ರಿಭಿಃ||
ಸಮರದಲ್ಲಿ ಕ್ರುದ್ಧನಾದ ದುರ್ಯೋಧನನಾದರೋ ಮಹಾಬಲ ಭೀಮಸೇನನನ್ನು ಉಕ್ಕಿನ ಮೂರು ನಿಶಿತ ಮಾರ್ಗಣಗಳಿಂದ ಹೊಡೆದನು.
06060008a ತತೋ ಭೀಮೋ ಮಹಾಬಾಹುಃ ಸ್ವರಥಂ ಸುಮಹಾಬಲಃ|
06060008c ಆರುರೋಹ ರಥಶ್ರೇಷ್ಠಂ ವಿಶೋಕಂ ಚೇದಮಬ್ರವೀತ್||
ಆಗ ಮಹಾಬಾಹು ಸುಮಹಾಬಲ ಭೀಮನು ತನ್ನ ರಥಶ್ರೇಷ್ಠ ರಥವನ್ನೇರಿ ವಿಶೋಕನಿಗೆ ಇದನ್ನು ಹೇಳಿದನು:
06060009a ಏತೇ ಮಹಾರಥಾಃ ಶೂರಾ ಧಾರ್ತರಾಷ್ಟ್ರಾ ಮಹಾಬಲಾಃ|
06060009c ಮಾಮೇವ ಭೃಶಸಂಕ್ರುದ್ಧಾ ಹಂತುಮಭ್ಯುದ್ಯತಾ ಯುಧಿ||
“ಈ ಮಹಾರಥ ಮಹಾಬಲಿ ಶೂರ ಧಾರ್ತರಾಷ್ಟ್ರರು ಯುದ್ಧದಲ್ಲಿ ನನ್ನನ್ನೇ ಕೊಲ್ಲಲು ಉದ್ಯುಕ್ತರಾಗಿದ್ದಾರೆ.
06060010a ಏತಾನದ್ಯ ಹನಿಷ್ಯಾಮಿ ಪಶ್ಯತಸ್ತೇ ನ ಸಂಶಯಃ|
06060010c ತಸ್ಮಾನ್ಮಮಾಶ್ವಾನ್ಸಂಗ್ರಾಮೇ ಯತ್ತಃ ಸಮ್ಯಚ್ಛ ಸಾರಥೇ||
ಸಾರಥೇ! ಇಂದು ಇವರನ್ನು ನೀನು ನೋಡುತ್ತಿರುವ ಹಾಗೆಯೇ ಸಂಹರಿಸುತ್ತೇನೆ. ಅದರಲ್ಲಿ ಸಂಶಯವಿಲ್ಲ. ಆದುದರಿಂದ ನನ್ನ ಕುದುರೆಗಳನ್ನು ವ್ಯವಸ್ಥಿತವಾಗಿ ನಡೆಸಲು ಪ್ರಯತ್ನಿಸು.”
06060011a ಏವಮುಕ್ತ್ವಾ ತತಃ ಪಾರ್ಥಃ ಪುತ್ರಂ ದುರ್ಯೋಧನಂ ತವ|
06060011c ವಿವ್ಯಾಧ ದಶಭಿಸ್ತೀಕ್ಷ್ಣೈಃ ಶರೈಃ ಕನಕಭೂಷಣೈಃ|
06060011e ನಂದಕಂ ಚ ತ್ರಿಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ||
ಹೀಗೆ ಹೇಳಿ ಪಾರ್ಥನು ನಿನ್ನ ಮಗ ದುರ್ಯೋಧನನನ್ನು ಹತ್ತು ಕನಕಭೂಷಣ ತೀಕ್ಷ್ಣ ಶರಗಳಿಂದ ಹೊಡೆದನು. ಮತ್ತು ಮೂರು ಬಾಣಗಳಿಂದ ನಂದಕನ ಎದೆಗೆ ಹೊಡೆದನು.
06060012a ತಂ ತು ದುರ್ಯೋಧನಃ ಷಷ್ಟ್ಯಾ ವಿದ್ಧ್ವಾ ಭೀಮಂ ಮಹಾಬಲಂ|
06060012c ತ್ರಿಭಿರನ್ಯೈಃ ಸುನಿಶಿತೈರ್ವಿಶೋಕಂ ಪ್ರತ್ಯವಿಧ್ಯತ||
06060013a ಭೀಮಸ್ಯ ಚ ರಣೇ ರಾಜನ್ಧನುಶ್ಚಿಚ್ಛೇದ ಭಾಸ್ವರಂ|
06060013c ಮುಷ್ಟಿದೇಶೇ ಶರೈಸ್ತೀಕ್ಷ್ಣೈಸ್ತ್ರಿಭೀ ರಾಜಾ ಹಸನ್ನಿವ||
ದುರ್ಯೋಧನನು ಮಹಾಬಲ ಭೀಮನನ್ನು ಅರವತ್ತು ಮತ್ತು ಅನ್ಯ ಮೂರು ನಿಶಿತ ಶರಗಳಿಂದ ವಿಶೋಕನನ್ನು ಹೊಡೆದನು. ರಾಜನ್! ಮತ್ತು ನಗುತ್ತಾ ಆ ರಾಜನು ಹೊಳೆಯುತ್ತಿದ್ದ ಭೀಮನ ಧನುಸ್ಸನ್ನು ಮುಷ್ಟಿದೇಶದಲ್ಲಿ ತೀಕ್ಷ್ಣವಾದ ಮೂರು ಶರಗಳಿಂದ ತುಂಡರಿಸಿದನು.
06060014a ಭೀಮಸ್ತು ಪ್ರೇಕ್ಷ್ಯ ಯಂತಾರಂ ವಿಶೋಕಂ ಸಮ್ಯುಗೇ ತದಾ|
06060014c ಪೀಡಿತಂ ವಿಶಿಖೈಸ್ತೀಕ್ಷ್ಣೈಸ್ತವ ಪುತ್ರೇಣ ಧನ್ವಿನಾ||
06060015a ಅಮೃಷ್ಯಮಾಣಃ ಸಂಕ್ರುದ್ಧೋ ಧನುರ್ದಿವ್ಯಂ ಪರಾಮೃಶತ್|
06060015c ಪುತ್ರಸ್ಯ ತೇ ಮಹಾರಾಜ ವಧಾರ್ಥಂ ಭರತರ್ಷಭ||
ಸಂಯುಗದಲ್ಲಿ ನಿನ್ನ ಮಗ ಧನ್ವಿಯ ತೀಕ್ಷ್ಣ ವಿಶಿಖಗಳಿಂದ ಪೀಡಿತನಾದ ಸಾರಥಿ ವಿಶೋಕನನ್ನು ನೋಡಿ ಅಸಹನೆಯಿಂದ ಕ್ರುದ್ಧನಾದ ಭೀಮನು ನಿನ್ನ ಮಗನ ವಧಾರ್ಥವಾಗಿ ಬೇಗನೇ ಇನ್ನೊಂದು ದಿವ್ಯ ಧನುಸ್ಸನ್ನು ಎತ್ತಿಕೊಂಡನು.
06060016a ಸಮಾದತ್ತ ಚ ಸಂರಬ್ಧಃ ಕ್ಷುರಪ್ರಂ ಲೋಮವಾಹಿನಂ|
06060016c ತೇನ ಚಿಚ್ಛೇದ ನೃಪತೇರ್ಭೀಮಃ ಕಾರ್ಮುಕಮುತ್ತಮಂ||
ಮತ್ತು ಲೋಮವಾಹಿನಿ ಕ್ಷುರಪ್ರವನ್ನು ತೆಗೆದುಕೊಂಡು ಭೀಮನು ನೃಪತಿಯ ಉತ್ತಮ ಕಾರ್ಮುಕವನ್ನು ತುಂಡರಿಸಿದನು.
06060017a ಸೋಽಪವಿಧ್ಯ ಧನುಶ್ಚಿನ್ನಂ ಕ್ರೋಧೇನ ಪ್ರಜ್ವಲನ್ನಿವ|
06060017c ಅನ್ಯತ್ಕಾರ್ಮುಕಮಾದತ್ತ ಸತ್ವರಂ ವೇಗವತ್ತರಂ||
06060018a ಸಂಧತ್ತ ವಿಶಿಖಂ ಘೋರಂ ಕಾಲಮೃತ್ಯುಸಮಪ್ರಭಂ|
06060018c ತೇನಾಜಘಾನ ಸಂಕ್ರುದ್ಧೋ ಭೀಮಸೇನಂ ಸ್ತನಾಂತರೇ||
ಕತ್ತರಿಸಲ್ಪಟ್ಟ ತನ್ನ ಧನುಸ್ಸನ್ನು ಬಿಸುಟು ಕ್ರೊಧದಿಂದ ಭುಗಿಲೆದ್ದು ಇನ್ನೂ ದೊಡ್ಡದಾದ ಮತ್ತು ವೇಗವತ್ತರವಾದ ಬೇರೆ ಕಾರ್ಮುಕವನ್ನು ತೆಗೆದುಕೊಂಡು ಕಾಲಮೃತ್ಯು ಸಮಪ್ರಭೆಯ ಘೋರ ವಿಶಿಖವನ್ನು ಹೂಡಿ ಅದರಿಂದ ಸಂಕ್ರುದ್ಧನಾಗಿ ಭೀಮಸೇನನ ಎದೆಗೆ ಹೊಡೆದನು.
06060019a ಸ ಗಾಢವಿದ್ಧೋ ವ್ಯಥಿತಃ ಸ್ಯಂದನೋಪಸ್ಥ ಆವಿಶತ್|
06060019c ಸ ನಿಷಣ್ಣೋ ರಥೋಪಸ್ಥೇ ಮೂರ್ಚಾಮಭಿಜಗಾಮ ಹ||
ಅತ್ಯಂತ ಗಾಢವಾಗಿ ಹೊಡೆತತಿಂದ ಅವನು ನೋವಿನಿಂದ ವ್ಯಥಿತನಾಗಿ ತಾನು ಕುಳಿತಿದ್ದಲ್ಲಿಯೇ ಸರಿದು ಕುಳಿತುಕೊಂಡನು. ನಿಷಣ್ಣನಾಗಿ ರಥದಲ್ಲಿ ಕುಳಿತಂತೆಯೇ ಒಂದು ಕ್ಷಣ ಮೂರ್ಛಿತನಾದನು.
06060020a ತಂ ದೃಷ್ಟ್ವಾ ವ್ಯಥಿತಂ ಭೀಮಮಭಿಮನ್ಯುಪುರೋಗಮಾಃ|
06060020c ನಾಮೃಷ್ಯಂತ ಮಹೇಷ್ವಾಸಾಃ ಪಾಂಡವಾನಾಂ ಮಹಾರಥಾಃ||
06060021a ತತಸ್ತು ತುಮುಲಾಂ ವೃಷ್ಟಿಂ ಶಸ್ತ್ರಾಣಾಂ ತಿಗ್ಮತೇಜಸಾಂ|
06060021c ಪಾತಯಾಮಾಸುರವ್ಯಗ್ರಾಃ ಪುತ್ರಸ್ಯ ತವ ಮೂರ್ಧನಿ||
ವ್ಯಥಿತನಾದ ಭೀಮನನ್ನು ಕಂಡು ಅಭಿಮನ್ಯುವೇ ಮೊದಲಾದ ಪಾಂಡವ ಮಹಾರಥ ಮಹೇಷ್ವಾಸರು ಸಹಿಸಲಾರದೇ ಅವ್ಯಗ್ರರಾಗಿ ನಿನ್ನ ಮಗನ ತಲೆಯ ಮೇಲೆ ತಿಗ್ಮತೇಸ್ಸಿನ ಶಸ್ತ್ರಗಳ ತುಮುಲ ವೃಷ್ಟಿಯನ್ನೇ ಸುರಿಸಿದರು.
06060022a ಪ್ರತಿಲಭ್ಯ ತತಃ ಸಂಜ್ಞಾಂ ಭೀಮಸೇನೋ ಮಹಾಬಲಃ|
06060022c ದುರ್ಯೋಧನಂ ತ್ರಿಭಿರ್ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ||
ಸ್ಮೃತಿಯನ್ನು ಪಡೆದುಕೊಂಡ ಮಹಾಬಲ ಭೀಮಸೇನನು ಆಗ ಮೂರು ಮತ್ತು ಪುನಃ ಐದು ಬಾಣಗಳಿಂದ ಹೊಡೆದನು.
06060023a ಶಲ್ಯಂ ಚ ಪಂಚವಿಂಶತ್ಯಾ ಶರೈರ್ವಿವ್ಯಾಧ ಪಾಂಡವಃ|
06060023c ರುಕ್ಮಪುಂಖೈರ್ಮಹೇಷ್ವಾಸಃ ಸ ವಿದ್ಧೋ ವ್ಯಪಯಾದ್ರಣಾತ್||
ಮತ್ತು ಆ ಮಹೇಷ್ವಾಸ ಪಾಂಡವನು ಶಲ್ಯನನ್ನು ಇಪ್ಪತ್ತೈದು ರುಕ್ಮಪುಂಖ ಶರಗಳಿದ ಹೊಡೆದನು. ಅವನು ನೋವಿನಿಂದ ಪೀಡಿತನಾಗಿ ಪಲಾಯನ ಮಾಡಿದನು.
06060024a ಪ್ರತ್ಯುದ್ಯಯುಸ್ತತೋ ಭೀಮಂ ತವ ಪುತ್ರಾಶ್ಚತುರ್ದಶ|
06060024c ಸೇನಾಪತಿಃ ಸುಷೇಣಶ್ಚ ಜಲಸಂಧಃ ಸುಲೋಚನಃ||
06060025a ಉಗ್ರೋ ಭೀಮರಥೋ ಭೀಮೋ ಭೀಮಬಾಹುರಲೋಲುಪಃ|
06060025c ದುರ್ಮುಖೋ ದುಷ್ಪ್ರಧರ್ಷಶ್ಚ ವಿವಿತ್ಸುರ್ವಿಕಟಃ ಸಮಃ||
ಆಗ ನಿನ್ನ ಹದಿನಾಲ್ಕು ಮಕ್ಕಳು - ಸೇನಾಪತಿ, ಸುಷೇಣ, ಜಲಸಂಧ, ಸುಲೋಚನ, ಉಗ್ರ, ಭೀಮರಥ, ಭೀಮ, ಭೀಮಬಾಹು, ಅಲೋಲುಪ, ದುಮುಖ, ದುಷ್ಪ್ರಧರ್ಷ, ವಿವಿತ್ಸು, ವಿಕಟ ಮತ್ತು ಸಮ - ಭೀಮನನ್ನು ಆಕ್ರಮಿಸಿದರು.
06060026a ವಿಸೃಜಂತೋ ಬಹೂನ್ಬಾಣಾನ್ಕ್ರೋಧಸಂರಕ್ತಲೋಚನಾಃ|
06060026c ಭೀಮಸೇನಮಭಿದ್ರುತ್ಯ ವಿವ್ಯಧುಃ ಸಹಿತಾ ಭೃಶಂ||
ಕ್ರೋಧಸಂರಕ್ತಲೋಚನರಾದ ಅವರು ಒಂದಾಗಿ ಅನೇಕ ಬಾಣಗಳನ್ನು ಪ್ರಯೋಗಿಸುತ್ತಾ ಭೀಮಸೇನನನ್ನು ಬಹಳವಾಗಿ ಬಾಧೆಪಡೆಸಿದರು.
06060027a ಪುತ್ರಾಂಸ್ತು ತವ ಸಂಪ್ರೇಕ್ಷ್ಯ ಭೀಮಸೇನೋ ಮಹಾಬಲಃ|
06060027c ಸೃಕ್ಕಿಣೀ ವಿಲಿಹನ್ವೀರಃ ಪಶುಮಧ್ಯೇ ವೃಕೋ ಯಥಾ|
06060027e ಸೇನಾಪತೇಃ ಕ್ಷುರಪ್ರೇಣ ಶಿರಶ್ಚಿಚ್ಛೇದ ಪಾಂಡವಃ||
ಮಹಾಬಲ ವೀರ ಪಾಂಡವ ಭೀಮಸೇನನು ನಿನ್ನ ಮಕ್ಕಳನ್ನು ನೋಡಿ ಕುರಿಗಳ ಮಧ್ಯೆಯಿರುವ ತೋಳದಂತೆ ಕಟವಾಯಿಯನ್ನು ನೆಕ್ಕುತ್ತಾ ಸೇನಾಪತಿಯ ಶಿರವನ್ನು ಕ್ಷುರಪ್ರದಿಂದ ಕತ್ತರಿಸಿದನು.
06060028a ಜಲಸಂಧಂ ವಿನಿರ್ಭಿದ್ಯ ಸೋಽನಯದ್ಯಮಸಾದನಂ|
06060028c ಸುಷೇಣಂ ಚ ತತೋ ಹತ್ವಾ ಪ್ರೇಷಯಾಮಾಸ ಮೃತ್ಯವೇ||
ಜಲಸಂಧನನ್ನು ಹೊಡೆದು ಅವನನ್ನು ಯಮಸಾದನಕ್ಕೆ ಕಳುಹಿಸಿದನು. ಹಾಗೆಯೇ ಸುಷೇಣನನ್ನೂ ಸಂಹರಿಸಿ ಮೃತ್ಯುವಲ್ಲಿಗೆ ಕಳುಹಿಸಿದನು.
06060029a ಉಗ್ರಸ್ಯ ಸಶಿರಸ್ತ್ರಾಣಂ ಶಿರಶ್ಚಂದ್ರೋಪಮಂ ಭುವಿ|
06060029c ಪಾತಯಾಮಾಸ ಭಲ್ಲೇನ ಕುಂಡಲಾಭ್ಯಾಂ ವಿಭೂಷಿತಂ||
ಕುಂಡಲಗಳಿಂದ ವಿಭೂಷಿತವಾಗಿದ್ದ, ಕಿರೀಟವನ್ನು ಧರಿಸಿದ್ದ, ಚಂದ್ರನಂತಿದ್ದ ಉಗ್ರನ ಶಿರವನ್ನು ಭಲ್ಲದಿಂದ ಭೂಮಿಗೆ ಉರುಳಿಸಿದನು.
06060030a ಭೀಮಬಾಹುಂ ಚ ಸಪ್ತತ್ಯಾ ಸಾಶ್ವಕೇತುಂ ಸಸಾರಥಿಂ|
06060030c ನಿನಾಯ ಸಮರೇ ಭೀಮಃ ಪರಲೋಕಾಯ ಮಾರಿಷ||
ಮಾರಿಷ! ಭೀಮನು ಸಮರದಲ್ಲಿ ಎಪ್ಪತ್ತು ಬಾಣಗಳಿಂದ ಭೀಮಬಾಹುವನ್ನು ಅವನ ಕುದುರೆ, ಧ್ವಜ ಮತ್ತು ಸಾರಥಿಯೊಂದಿಗೆ ಪರಲೋಕಕ್ಕೆ ಕಳುಹಿಸಿದನು.
06060031a ಭೀಮಂ ಭೀಮರಥಂ ಚೋಭೌ ಭೀಮಸೇನೋ ಹಸನ್ನಿವ|
06060031c ಭ್ರಾತರೌ ರಭಸೌ ರಾಜನ್ನನಯದ್ಯಮಸಾದನಂ||
ರಾಜನ್! ಭೀಮಸೇನನು ನಗುತ್ತಾ ರಭಸದಿಂದ ಬರುತ್ತಿದ್ದ ಭೀಮ ಮತ್ತು ಭೀಮರಥ ಸಹೋದರರನ್ನು ಯಮಸಾದನಕ್ಕೆ ಕಳುಹಿಸಿದನು.
06060032a ತತಃ ಸುಲೋಚನಂ ಭೀಮಃ ಕ್ಷುರಪ್ರೇಣ ಮಹಾಮೃಧೇ|
06060032c ಮಿಷತಾಂ ಸರ್ವಸೈನ್ಯಾನಾಮನಯದ್ಯಮಸಾದನಂ||
ಆಗ ಮಹಾಮೃಧದಲ್ಲಿ ಭೀಮನು ಕ್ಷುರಪ್ರದಿಂದ ಸುಲೋಚನನನ್ನು ಸರ್ವಸೈನ್ಯಗಳು ನೋಡುತ್ತಿದ್ದಂತೆ ಯಮಸಾದನಕ್ಕೆ ಕಳುಹಿಸಿದನು.
06060033a ಪುತ್ರಾಸ್ತು ತವ ತಂ ದೃಷ್ಟ್ವಾ ಭೀಮಸೇನಪರಾಕ್ರಮಂ|
06060033c ಶೇಷಾ ಯೇಽನ್ಯೇಽಭವಂಸ್ತತ್ರ ತೇ ಭೀಮಸ್ಯ ಭಯಾರ್ದಿತಾಃ|
06060033e ವಿಪ್ರದ್ರುತಾ ದಿಶೋ ರಾಜನ್ವಧ್ಯಮಾನಾ ಮಹಾತ್ಮನಾ||
ರಾಜನ್! ಭೀಮಸೇನನ ಆ ಪರಾಕ್ರಮವನ್ನು ನೋಡಿ ಮಹಾತ್ಮನಿಂದ ವಧಿಸಲ್ಪಡುತ್ತಿದ್ದ ಅಲ್ಲಿ ಉಳಿದಿದ್ದ ನಿನ್ನ ಪುತ್ರರಾದರೋ ಭೀಮನ ಭಯದಿಂದ ಪೀಡಿತರಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದರು.
06060034a ತತೋಽಬ್ರವೀಚ್ಚಾಂತನವಃ ಸರ್ವಾನೇವ ಮಹಾರಥಾನ್|
06060034c ಏಷ ಭೀಮೋ ರಣೇ ಕ್ರುದ್ಧೋ ಧಾರ್ತರಾಷ್ಟ್ರಾನ್ಮಹಾರಥಾನ್||
06060035a ಯಥಾಪ್ರಾಗ್ರ್ಯಾನ್ಯಥಾಜ್ಯೇಷ್ಠಾನ್ಯಥಾಶೂರಾಂಶ್ಚ ಸಂಗತಾನ್|
06060035c ನಿಪಾತಯತ್ಯುಗ್ರಧನ್ವಾ ತಂ ಪ್ರಮಥ್ನೀತ ಪಾರ್ಥಿವಾಃ||
ಆಗ ಶಾಂತನವನು ಎಲ್ಲ ಮಹಾರಥರಿಗೆ ಹೇಳಿದನು: “ಪಾರ್ಥಿವರೇ! ಈ ಭೀಮನು ರಣದಲ್ಲಿ ಕ್ರುದ್ಧನಾಗಿ ಮಹಾರಥರಾದ, ಶ್ರೇಷ್ಠ, ಜ್ಯೇಷ್ಠ, ಶೂರ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ. ನೀವೆಲ್ಲರೂ ಒಟ್ಟಾಗಿ ಆ ಉಗ್ರಧನ್ವಿಯನ್ನು ಬಂಧಿಸಿರಿ!”
06060036a ಏವಮುಕ್ತಾಸ್ತತಃ ಸರ್ವೇ ಧಾರ್ತರಾಷ್ಟ್ರಸ್ಯ ಸೈನಿಕಾಃ|
06060036c ಅಭ್ಯದ್ರವಂತ ಸಂಕ್ರುದ್ಧಾ ಭೀಮಸೇನಂ ಮಹಾಬಲಂ||
ಹೀಗೆ ಹೇಳಲು ಧಾರ್ತರಾಷ್ಟ್ರನ ಸೈನಿಕರೆಲ್ಲರೂ ಸಂಕ್ರುದ್ಧರಾಗಿ ಮಹಾಬಲ ಭೀಮಸೇನನ ಮೇಲೆ ಎರಗಿದರು.
06060037a ಭಗದತ್ತಃ ಪ್ರಭಿನ್ನೇನ ಕುಂಜರೇಣ ವಿಶಾಂ ಪತೇ|
06060037c ಅಪತತ್ಸಹಸಾ ತತ್ರ ಯತ್ರ ಭೀಮೋ ವ್ಯವಸ್ಥಿತಃ||
ವಿಶಾಂಪತೇ! ಮದೋದಕವನ್ನು ಸುರಿಸುತ್ತಿದ್ದ ಆನೆಯ ಮೇಲಿದ್ದ ಭಗದತ್ತನು ಒಡನೆಯೇ ಎಲ್ಲಿ ಭೀಮನಿದ್ದನೋ ಅಲ್ಲಿಗೆ ಧಾವಿಸಿ ಬಂದನು.
06060038a ಆಪತನ್ನೇವ ಚ ರಣೇ ಭೀಮಸೇನಂ ಶಿಲಾಶಿತೈಃ|
06060038c ಅದೃಶ್ಯಂ ಸಮರೇ ಚಕ್ರೇ ಜೀಮೂತ ಇವ ಭಾಸ್ಕರಂ||
ರಣದಲ್ಲಿ ಬರುತ್ತಲೇ ಅವನು ಭೀಮಸೇನನನ್ನು ಶಿಲಾಶಿತಗಳಿಂದ ಮೋಡಗಳು ಭಾಸ್ಕರನನ್ನು ಮುಚ್ಚಿಬಿಡುವಂತೆ ಅದೃಷ್ಯನನ್ನಾಗಿ ಮಾಡಿಬಿಟ್ಟನು.
06060039a ಅಭಿಮನ್ಯುಮುಖಾಸ್ತತ್ರ ನಾಮೃಷ್ಯಂತ ಮಹಾರಥಾಃ|
06060039c ಭೀಮಸ್ಯಾಚ್ಛಾದನಂ ಸಂಖ್ಯೇ ಸ್ವಬಾಹುಬಲಮಾಶ್ರಿತಾಃ||
06060040a ತ ಏನಂ ಶರವರ್ಷೇಣ ಸಮಂತಾತ್ಪರ್ಯವಾರಯನ್|
06060040c ಗಜಂ ಚ ಶರವೃಷ್ಟ್ಯಾ ತಂ ಬಿಭಿದುಸ್ತೇ ಸಮಂತತಃ||
ಯುದ್ಧದಲ್ಲಿ ಸ್ವಬಾಹುಬಲಗಳನ್ನು ಆಶ್ರಯಿಸಿದ್ದ ಅಭಿಮನ್ಯುವೇ ಮೊದಲಾದ ಮಹಾರಥರು ಭೀಮನನ್ನು ಹಾಗೆ ಮುಚ್ಚಿದುದನ್ನು ಸಹಿಸಲಾರದೇ ಆ ಅನೆಯನ್ನು ಎಲ್ಲಕಡೆಗಳಿಂದಲೂ ಸುತ್ತುವರೆದು ಅದನ್ನು ಎಲ್ಲ ಕಡೆಗಳಿಂದಲೂ ಬಾಣಗಳಿಂದ ಹೊಡೆದರು.
06060041a ಸ ಶಸ್ತ್ರವೃಷ್ಟ್ಯಾಭಿಹತಃ ಪ್ರಾದ್ರವದ್ದ್ವಿಗುಣಂ ಪದಂ|
06060041c ಪ್ರಾಗ್ಜ್ಯೋತಿಷಗಜೋ ರಾಜನ್ನಾನಾಲಿಂಗೈಃ ಸುತೇಜನೈಃ||
06060042a ಸಂಜಾತರುಧಿರೋತ್ಪೀಡಃ ಪ್ರೇಕ್ಷಣೀಯೋಽಭವದ್ರಣೇ|
06060042c ಗಭಸ್ತಿಭಿರಿವಾರ್ಕಸ್ಯ ಸಂಸ್ಯೂತೋ ಜಲದೋ ಮಹಾನ್||
ರಾಜನ್! ನಾನಾ ಚಿಹ್ನೆಗಳಿಂದ ಸುತೇಜಸರಾದ ಅವರ ಶಸ್ತ್ರವೃಷ್ಟಿಯಿಂದ ಗಾಯಗೊಂಡ ಆ ಪ್ರಾಗ್ಜೋತಿಷದ ಆನೆಯು ಶರೀರಾದ್ಯಂತ ರಕ್ತ ಸುರಿಸುತ್ತಾ ರಣದಲ್ಲಿ ಒಂದು ಪ್ರೇಕ್ಷಣೀಯವಾಯಿತು. ಬಾಲಸೂರ್ಯನ ನಸುಗೆಂಪಾದ ಕಿರಣಗಳಿಂದ ತೊಳೆಯಲ್ಪಟ್ಟ ದೊಡ್ಡದೊಂದು ಕಾರ್ಮುಗಿಲಿನಂತೆ ಕಾಣುತ್ತಿತ್ತು.
06060043a ಸ ಚೋದಿತೋ ಮದಸ್ರಾವೀ ಭಗದತ್ತೇನ ವಾರಣಃ|
06060043c ಅಭ್ಯಧಾವತ ತಾನ್ಸರ್ವಾನ್ಕಾಲೋತ್ಸೃಷ್ಟ ಇವಾಂತಕಃ|
06060043e ದ್ವಿಗುಣಂ ಜವಮಾಸ್ಥಾಯ ಕಂಪಯಂಶ್ಚರಣೈರ್ಮಹೀಂ||
ಆ ಮದಸ್ರಾವೀ ಆನೆಯು ಭಗದತ್ತನಿಂದ ಪ್ರಚೋದಿಸಲ್ಪಟ್ಟು ಕಾಲನು ಬಿಟ್ಟ ಅಂತಕನಂತೆ ತನ್ನ ಪದಾಘಾತದಿಂದ ಭೂಮಿಯನ್ನೇ ಕಂಪಿಸುತ್ತಾ ವೇಗವನ್ನು ದ್ವಿಗುಣವಾಗಿಸಿಕೊಂಡು ಅವರೆಲ್ಲರ ಮೇಲೆ ಎರಗಿತು.
06060044a ತಸ್ಯ ತತ್ಸುಮಹದ್ರೂಪಂ ದೃಷ್ಟ್ವಾ ಸರ್ವೇ ಮಹಾರಥಾಃ|
06060044c ಅಸಹ್ಯಂ ಮನ್ಯಮಾನಾಸ್ತೇ ನಾತಿಪ್ರಮನಸೋಽಭವನ್||
ಅದರ ಅಸಹ್ಯವಾದ ಆ ಮಹಾರೂಪವನ್ನು ನೋಡಿ ಮಹಾರಥರೆಲ್ಲರೂ ಅದನ್ನು ಸಹಿಸಿಕೊಳ್ಳಲಾರದೇ ಹತೋತ್ಸಾಹರಾದರು.
06060045a ತತಸ್ತು ನೃಪತಿಃ ಕ್ರುದ್ಧೋ ಭೀಮಸೇನಂ ಸ್ತನಾಂತರೇ|
06060045c ಆಜಘಾನ ನರವ್ಯಾಘ್ರ ಶರೇಣ ನತಪರ್ವಣಾ||
ನರವ್ಯಾಘ್ರ! ಆಗ ನೃಪತಿಯು ಕ್ರುದ್ಧನಾಗಿ ಭೀಮಸೇನನ ಎದೆಗೆ ನತಪರ್ವ ಶರದಿಂದ ಹೊಡೆದನು.
06060046a ಸೋಽತಿವಿದ್ಧೋ ಮಹೇಷ್ವಾಸಸ್ತೇನ ರಾಜ್ಞಾ ಮಹಾರಥಃ|
06060046c ಮೂರ್ಚಯಾಭಿಪರೀತಾಂಗೋ ಧ್ವಜಯಷ್ಟಿಂ ಉಪಾಶ್ರಿತಃ||
ಆ ಮಹೇಷ್ವಾಸ ರಾಜನಿಂದ ಹೊಡೆಯಲ್ಪಟ್ಟ ಮಹಾರಥನು ಅಂಗಾಂಗಗಳ ನೋವಿನಿಂದ ಬಳಲಿ ಮೂರ್ಛಿತನಾಗಿ ಧ್ವಜದ ದಂಡವನ್ನು ಹಿಡಿದು ಕುಳಿತುಕೊಂಡನು.
06060047a ತಾಂಸ್ತು ಭೀತಾನ್ಸಮಾಲಕ್ಷ್ಯ ಭೀಮಸೇನಂ ಚ ಮೂರ್ಚಿತಂ|
06060047c ನನಾದ ಬಲವನ್ನಾದಂ ಭಗದತ್ತಃ ಪ್ರತಾಪವಾನ್||
ಅವರು ಭೀತರಾದುದನ್ನೂ, ಭೀಮಸೇನನು ಮೂರ್ಛಿತನಾದುದನ್ನೂ ಕಂಡು ಪ್ರತಾಪವಾನ್ ಭಗದತ್ತನು ಗಟ್ಟಿಯಾಗಿ ಸಿಂಹನಾದಗೈದನು.
06060048a ತತೋ ಘಟೋತ್ಕಚೋ ರಾಜನ್ಪ್ರೇಕ್ಷ್ಯ ಭೀಮಂ ತಥಾಗತಂ|
06060048c ಸಂಕ್ರುದ್ಧೋ ರಾಕ್ಷಸೋ ಘೋರಸ್ತತ್ರೈವಾಂತರಧೀಯತ||
ರಾಜನ್! ಆಗ ಭೀಮನು ಹಾಗಾದುದನ್ನು ನೋಡಿ ಸಂಕ್ರುದ್ಧನಾದ ಘೋರ ರಾಕ್ಷಸ ಘಟೋತ್ಕಚನು ಅಲ್ಲಿಯೇ ಅಂತರ್ಧಾನನಾದನು.
06060049a ಸ ಕೃತ್ವಾ ದಾರುಣಾಂ ಮಾಯಾಂ ಭೀರೂಣಾಂ ಭಯವರ್ಧಿನೀಂ|
06060049c ಅದೃಶ್ಯತ ನಿಮೇಷಾರ್ಧಾದ್ಘೋರರೂಪಂ ಸಮಾಶ್ರಿತಃ||
ಅವನು ಭೀರುಗಳ ಭಯವರ್ಧಿಸುವ ದಾರುಣ ಮಾಯೆಯನ್ನು ಮಾಡಿ ಅದೃಶ್ಯನಾಗಿ ನಿಮಿಷಗಳಲ್ಲಿ ಘೋರರೂಪವನ್ನು ತಾಳಿದನು.
06060050a ಐರಾವತಂ ಸಮಾರುಹ್ಯ ಸ್ವಯಂ ಮಾಯಾಮಯಂ ಕೃತಂ|
06060050c ತಸ್ಯ ಚಾನ್ಯೇಽಪಿ ದಿಮ್ನಾಗಾ ಬಭೂವುರನುಯಾಯಿನಃ||
ತನ್ನದೇ ಮಾಯೆಯಿಂದ ಮಾಡಲ್ಪಟ್ಟ ಐರಾವತವನ್ನೇರಿ ಬಂದನು. ಇತರ ದಿಗ್ಗಜಗಳೂ ಅನುಸರಿಸಿ ಬಂದವು.
06060051a ಅಂಜನೋ ವಾಮನಶ್ಚೈವ ಮಹಾಪದ್ಮಶ್ಚ ಸುಪ್ರಭಃ|
06060051c ತ್ರಯ ಏತೇ ಮಹಾನಾಗಾ ರಾಕ್ಷಸೈಃ ಸಮಧಿಷ್ಠಿತಾಃ||
ಅಂಜನ, ವಾಮನ, ಸುಪ್ರಭೆಯ ಮಹಾಪದ್ಮ ಇವು ಮೂರು ಮಹಾನಾಗಗಳೂ ರಾಕ್ಷಸರನ್ನು ಏರಿಸಿಕೊಂಡು ಬಂದವು.
06060052a ಮಹಾಕಾಯಾಸ್ತ್ರಿಧಾ ರಾಜನ್ಪ್ರಸ್ರವಂತೋ ಮದಂ ಬಹು|
06060052c ತೇಜೋವೀರ್ಯಬಲೋಪೇತಾ ಮಹಾಬಲಪರಾಕ್ರಮಾಃ||
ರಾಜನ್! ಆ ಮೂರು ಮಹಾಬಲ ಪರಾಕ್ರಮಿಗಳಾದ ತೇಜೋವೀರ್ಯಬಲೋಪೇತ ಮಹಾಕಾಯಗಳು ಬಹಳಷ್ಟು ಮದೋದಕವನ್ನು ಸುರಿಸುತ್ತಿದ್ದವು.
06060053a ಘಟೋತ್ಕಚಸ್ತು ಸ್ವಂ ನಾಗಂ ಚೋದಯಾಮಾಸ ತಂ ತತಃ|
06060053c ಸಗಜಂ ಭಗದತ್ತಂ ತು ಹಂತುಕಾಮಃ ಪರಂತಪಃ||
ಆಗ ಪರಂತಪ ಘಟೋತ್ಕಚನು ಆನೆಯೊಂದಿಗೆ ಭಗದತ್ತನನ್ನು ಕೊಲ್ಲಲು ಬಯಸಿ ತನ್ನ ಆನೆಯನ್ನು ಪ್ರಚೋದಿಸಿದನು.
06060054a ತೇ ಚಾನ್ಯೇ ಚೋದಿತಾ ನಾಗಾ ರಾಕ್ಷಸೈಸ್ತೈರ್ಮಹಾಬಲೈಃ|
06060054c ಪರಿಪೇತುಃ ಸುಸಂರಬ್ಧಾಶ್ಚತುರ್ದಂಷ್ಟ್ರಾಶ್ಚತುರ್ದಿಶಂ|
06060054e ಭಗದತ್ತಸ್ಯ ತಂ ನಾಗಂ ವಿಷಾಣೈಸ್ತೇಽಭ್ಯಪೀಡಯನ್||
ಮಹಾಬಲ ರಾಕ್ಷಸರಿಂದ ಪ್ರಚೋದಿತರಾದ ಅನ್ಯ ಗಜಗಳೂ ಕೂಡ ಸಂರಬ್ಧರಾಗಿ ಕೋರೆದಾಡೆಗಳೊಡನೆ ನಾಲ್ಕೂಕಡೆಗಳಿಂದ ಭಗದತ್ತನ ಆ ಅನೆಯ ಮೇಲೆ ಬಿದ್ದು ಬಹುವಾಗಿ ಪೀಡಿಸಿದವು.
06060055a ಸಂಪೀಡ್ಯಮಾನಸ್ತೈರ್ನಾಗೈರ್ವೇದನಾರ್ತಃ ಶರಾತುರಃ|
06060055c ಸೋಽನದತ್ ಸುಮಹಾನಾದಂ ಇಂದ್ರಾಶನಿಸಮಸ್ವನಂ||
ಆ ಆನೆಗಳಿಂದ ಪೀಡಿತಗೊಂಡು ಅದು ಶರಗಳ ವೇದನೆಯಿಂದ ಆರ್ತವಾಗಿ ಮೋಡಗಳ ಗುಡುಗಿಗೆ ಸಮನಾದ ಮಹಾನಾದದಿಂದ ಕೂಗಿತು.
06060056a ತಸ್ಯ ತಂ ನದತೋ ನಾದಂ ಸುಘೋರಂ ಭೀಮನಿಸ್ವನಂ|
06060056c ಶ್ರುತ್ವಾ ಭೀಷ್ಮೋಽಬ್ರವೀದ್ದ್ರೋಣಂ ರಾಜಾನಂ ಚ ಸುಯೋಧನಂ||
ಕೂಗುತ್ತಿದ್ದ ಆ ಭೀಮನಿಸ್ವನ ಘೋರ ನಾದವನ್ನು ಕೇಳಿದ ಭೀಷ್ಮನು ರಾಜಾ ಸುಯೋಧನ ಮತ್ತು ದ್ರೋಣರಿಗೆ ಹೇಳಿದನು:
06060057a ಏಷ ಯುಧ್ಯತಿ ಸಂಗ್ರಾಮೇ ಹೈಡಿಂಬೇನ ದುರಾತ್ಮನಾ|
06060057c ಭಗದತ್ತೋ ಮಹೇಷ್ವಾಸಃ ಕೃಚ್ಛ್ರೇಣ ಪರಿವರ್ತತೇ||
“ಈ ಮಹೇಷ್ವಾಸ ಭಗದತ್ತನು ಸಂಗ್ರಾಮದಲ್ಲಿ ದುರಾತ್ಮ ಹೈಡಿಂಬಿಯೊಂದಿಗೆ ಯುದ್ಧಮಾಡಿ ಕಷ್ಟಕ್ಕೊಳಗಾಗಿದ್ದಾನೆ.
06060058a ರಾಕ್ಷಸಶ್ಚ ಮಹಾಮಾಯಃ ಸ ಚ ರಾಜಾತಿಕೋಪನಃ|
06060058c ತೌ ಸಮೇತೌ ಮಹಾವೀರ್ಯೌ ಕಾಲಮೃತ್ಯುಸಮಾವುಭೌ||
ರಾಕ್ಷಸನು ಮಹಾಮಾಯನಾಗಿದ್ದಾನೆ. ರಾಜನು ಅತ್ಯಂತ ಕುಪಿತನಾಗಿದ್ದಾನೆ. ಅವರಿಬ್ಬರು ಮಹಾವೀರ್ಯವಂತರೂ ಕಾಲಮೃತ್ಯುವಂತೆ ಒಟ್ಟಾಗಿದ್ದಾರೆ.
06060059a ಶ್ರೂಯತೇ ಹ್ಯೇಷ ಹೃಷ್ಟಾನಾಂ ಪಾಂಡವಾನಾಂ ಮಹಾಸ್ವನಃ|
06060059c ಹಸ್ತಿನಶ್ಚೈವ ಸುಮಹಾನ್ಭೀತಸ್ಯ ರುವತೋ ಧ್ವನಿಃ||
ಹರ್ಷಿತ ಪಾಂಡವರ ಮಹಾಸ್ವನವೂ ಭೀತಿಗೊಂಡ ಆನೆಯ ಚೀರುವ ಮಹಾಧ್ವನಿಯೂ ಕೇಳಿಬರುತ್ತಿದೆ.
06060060a ತತ್ರ ಗಚ್ಛಾಮ ಭದ್ರಂ ವೋ ರಾಜಾನಂ ಪರಿರಕ್ಷಿತುಂ|
06060060c ಅರಕ್ಷ್ಯಮಾಣಃ ಸಮರೇ ಕ್ಷಿಪ್ರಂ ಪ್ರಾಣಾನ್ವಿಮೋಕ್ಷ್ಯತೇ||
ನಿಮಗೆ ಮಂಗಳವಾಗಲಿ! ರಾಜನನ್ನು ಪರಿರಕ್ಷಿಸಲು ಅಲ್ಲಿಗೆ ಹೋಗೋಣ. ರಕ್ಷಣೆಯಿಲ್ಲದವರು ಸಮರದಲ್ಲಿ ಬೇಗನೇ ಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ.
06060061a ತೇ ತ್ವರಧ್ವಂ ಮಹಾವೀರ್ಯಾಃ ಕಿಂ ಚಿರೇಣ ಪ್ರಯಾಮಹೇ|
06060061c ಮಹಾನ್ ಹಿ ವರ್ತತೇ ರೌದ್ರಃ ಸಂಗ್ರಾಮೋ ಲೋಮಹರ್ಷಣಃ||
ಮಹಾವೀರ್ಯರೇ! ತ್ವರೆಮಾಡಿ! ತಡಮಾಡುವುದರಿಂದ ಏನು ಪ್ರಯೋಜನ? ರೌದ್ರವೂ ಲೋಮಹರ್ಷಣವೂ ಆದ ಮಹಾಯುದ್ಧವು ನಡೆಯುತ್ತಿದೆ.
06060062a ಭಕ್ತಶ್ಚ ಕುಲಪುತ್ರಶ್ಚ ಶೂರಶ್ಚ ಪೃತನಾಪತಿಃ|
06060062c ಯುಕ್ತಂ ತಸ್ಯ ಪರಿತ್ರಾಣಂ ಕರ್ತುಮಸ್ಮಾಭಿರಚ್ಯುತಾಃ||
ಅಚ್ಯುತರೇ! ಭಕ್ತನೂ, ಕುಲಪುತ್ರನೂ, ಶೂರನೂ, ಪೃತನಾಪತಿಯೂ ಆದ ಅವನಿಗೆ ನಾವು ರಕ್ಷಣೆಯನ್ನು ಮಾಡುವುದು ಯುಕ್ತವಾಗಿದೆ.”
06060063a ಭೀಷ್ಮಸ್ಯ ತದ್ವಚಃ ಶ್ರುತ್ವಾ ಭಾರದ್ವಾಜಪುರೋಗಮಾಃ|
06060063c ಸಹಿತಾಃ ಸರ್ವರಾಜಾನೋ ಭಗದತ್ತಪರೀಪ್ಸಯಾ|
06060063e ಉತ್ತಮಂ ಜವಮಾಸ್ಥಾಯ ಪ್ರಯಯುರ್ಯತ್ರ ಸೋಽಭವತ್||
ಭೀಷ್ಮನ ಆ ಮಾತನ್ನು ಕೇಳಿ ಭಾರದ್ವಾಜನನ್ನು ಮುಂದಿರಿಸಿಕೊಂಡ ಎಲ್ಲ ರಾಜರೂ ಒಟ್ಟಿಗೇ ಭಗದತ್ತನನ್ನು ರಕ್ಷಿಸಲು ಬಯಸಿ ಶೀಘ್ರದಲ್ಲಿಯೇ ಅವನು ಎಲ್ಲಿದ್ದನೋ ಅಲ್ಲಿಗೆ ಬಂದರು,
06060064a ತಾನ್ಪ್ರಯಾತಾನ್ಸಮಾಲೋಕ್ಯ ಯುಧಿಷ್ಠಿರಪುರೋಗಮಾಃ|
06060064c ಪಾಂಚಾಲಾಃ ಪಾಂಡವೈಃ ಸಾರ್ಧಂ ಪೃಷ್ಠತೋಽನುಯಯುಃ ಪರಾನ್||
ಅವರು ಹೋಗುತ್ತಿರುವುದನ್ನು ನೋಡಿ ಯುಧಿಷ್ಠಿರನನ್ನು ಮುಂದಿರಿಸಿಕೊಂಡ ಪಾಂಚಾಲರು ಪಾಂಡವರೊಂದಿಗೆ ಶತ್ರುಗಳನ್ನು ಹಿಂಬಾಲಿಸಿ ಹೋದರು.
06060065a ತಾನ್ಯನೀಕಾನ್ಯಥಾಲೋಕ್ಯ ರಾಕ್ಷಸೇಂದ್ರಃ ಪ್ರತಾಪವಾನ್|
06060065c ನನಾದ ಸುಮಹಾನಾದಂ ವಿಸ್ಫೋಟಮಶನೇರಿವ||
ಆ ಸೇನೆಗಳನ್ನು ನೋಡಿದ ಪ್ರತಾಪವಾನ್ ರಾಕ್ಷಸೇಂದ್ರನು ಕಲ್ಲುಬಂಡೆಯು ಸ್ಫೋಟಗೊಂಡ ಹಾಗೆ ಗಟ್ಟಿಯಾಗಿ ಕೂಗಿದನು.
06060066a ತಸ್ಯ ತಂ ನಿನದಂ ಶ್ರುತ್ವಾ ದೃಷ್ಟ್ವಾ ನಾಗಾಂಶ್ಚ ಯುಧ್ಯತಃ|
06060066c ಭೀಷ್ಮಃ ಶಾಂತನವೋ ಭೂಯೋ ಭಾರದ್ವಾಜಮಭಾಷತ||
ಅವನ ಆ ಕೂಗನ್ನು ಕೇಳಿ ಮತ್ತು ಯುದ್ಧಮಾಡುತ್ತಿದ್ದ ಆನೆಯನ್ನೂ ನೋಡಿ ಶಾಂತನವ ಭೀಷ್ಮನು ಪುನಃ ಭಾರದ್ವಾಜನಿಗೆ ಹೇಳಿದನು:
06060067a ನ ರೋಚತೇ ಮೇ ಸಂಗ್ರಾಮೋ ಹೈಡಿಂಬೇನ ದುರಾತ್ಮನಾ|
06060067c ಬಲವೀರ್ಯಸಮಾವಿಷ್ಟಃ ಸಸಹಾಯಶ್ಚ ಸಾಂಪ್ರತಂ||
“ದುರಾತ್ಮ ಹೈಡಿಂಬಿಯೊಂದಿಗೆ ಯುದ್ಧಮಾಡಲು ನನಗೆ ಇಷ್ಟವಾಗುತ್ತಿಲ್ಲ. ಈಗ ಅವನು ಬಲ-ವೀರ್ಯಗಳಿಂದ ಸಂಪನ್ನನಾಗಿದ್ದಾನೆ ಮತ್ತು ಸಹಾಯಕರನ್ನೂ ಪಡೆದಿದ್ದಾನೆ.
06060068a ನೈಷ ಶಕ್ಯೋ ಯುಧಾ ಜೇತುಮಪಿ ವಜ್ರಭೃತಾ ಸ್ವಯಂ|
06060068c ಲಬ್ಧಲಕ್ಷ್ಯಃ ಪ್ರಹಾರೀ ಚ ವಯಂ ಚ ಶ್ರಾಂತವಾಹನಾಃ|
06060068e ಪಾಂಚಾಲೈಃ ಪಾಂಡವೇಯೈಶ್ಚ ದಿವಸಂ ಕ್ಷತವಿಕ್ಷತಾಃ||
ಯುದ್ಧದಲ್ಲಿ ಇವನನ್ನು ಜಯಿಸಲು ಸ್ವಯಂ ವಜ್ರಭೃತನಿಗೂ ಶಕ್ಯವಿಲ್ಲ. ಅವನು ಲಕ್ಷ್ಯಭೇದನದಲ್ಲಿ ಸಿದ್ಧಹಸ್ತನಾಗಿದ್ದಾನೆ. ನಾವೂ ಕೂಡ ಬಳಲಿದ್ದೇವೆ. ಪಾಂಚಾಲರು ಮತ್ತು ಪಾಂಡವರಿಂದ ನಾವು ದಿವಸವಿಡೀ ಗಾಯಗೊಂಡಿದ್ದೇವೆ.
06060069a ತನ್ನ ಮೇ ರೋಚತೇ ಯುದ್ಧಂ ಪಾಂಡವೈರ್ಜಿತಕಾಶಿಭಿಃ|
06060069c ಘುಷ್ಯತಾಮವಹಾರೋಽದ್ಯ ಶ್ವೋ ಯೋತ್ಸ್ಯಾಮಃ ಪರೈಃ ಸಹ||
ಆದುದರಿಂದ ವಿಜಯೋತ್ಸಾಹದಿಂದ ಉಬ್ಬಿರುವ ಪಾಂಡವರೊಂದಿಗೆ ಯುದ್ಧಮಾಡಲು ನನಗೆ ಮನಸ್ಸಾಗುತ್ತಿಲ್ಲ. ಇಂದು ಯುದ್ಧಕ್ಕೆ ವಿರಾಮವನ್ನು ಘೋಷಿಸಿ ನಾಳೆ ನಾವು ಒಟ್ಟಿಗೇ ಶತ್ರುಗಳೊಂದಿಗೆ ಹೋರಾಡೋಣ.”
06060070a ಪಿತಾಮಹವಚಃ ಶ್ರುತ್ವಾ ತಥಾ ಚಕ್ರುಃ ಸ್ಮ ಕೌರವಾಃ|
06060070c ಉಪಾಯೇನಾಪಯಾನಂ ತೇ ಘಟೋತ್ಕಚಭಯಾರ್ದಿತಾಃ||
ಘಟೋತ್ಕಚನ ಭಯದಿಂದ ಪೀಡಿತರಾಗಿ ಅದೇ ಉಪಾಯವನ್ನು ಹುಡುಕುತ್ತಿದ್ದ ಕೌರವರೂ ಕೂಡ ಪಿತಾಮಹನ ಮಾತನ್ನು ಕೇಳಿ ಅದರಂತೆಯೇ ಮಾಡಿದರು.
06060071a ಕೌರವೇಷು ನಿವೃತ್ತೇಷು ಪಾಂಡವಾ ಜಿತಕಾಶಿನಃ|
06060071c ಸಿಂಹನಾದಮಕುರ್ವಂತ ಶಂಖವೇಣುಸ್ವನೈಃ ಸಹ||
ಕೌರವರು ನಿವೃತ್ತರಾಗಲು ಗೆಲುವಿಂದ ಉಬ್ಬಿದ ಪಾಂಡವರು ಶಂಖ-ವೇಣು ನಿಸ್ವನಗಳೊಂದಿಗೆ ಸಿಂಹನಾದವನ್ನು ಮಾಡಿದರು.
06060072a ಏವಂ ತದಭವದ್ಯುದ್ಧಂ ದಿವಸಂ ಭರತರ್ಷಭ|
06060072c ಪಾಂಡವಾನಾಂ ಕುರೂಣಾಂ ಚ ಪುರಸ್ಕೃತ್ಯ ಘಟೋತ್ಕಚಂ||
ಭರತರ್ಷಭ! ಘಟೋತ್ಕಚನನ್ನು ಮುಂದಿರಿಸಿಕೊಂಡು ಪಾಂಡವ ಕೌರವರ ಆ ದಿನದ ಯುದ್ಧವು ಈ ರೀತಿ ನಡೆಯಿತು.
06060073a ಕೌರವಾಸ್ತು ತತೋ ರಾಜನ್ಪ್ರಯಯುಃ ಶಿಬಿರಂ ಸ್ವಕಂ|
06060073c ವ್ರೀಡಮಾನಾ ನಿಶಾಕಾಲೇ ಪಾಂಡವೇಯೈಃ ಪರಾಜಿತಾಃ||
ರಾಜನ್! ಆ ನಿಶಾಕಾಲದಲ್ಲಿ ಪಾಂಡವರಿಂದ ಪರಾಜಿತರಾದ ಕೌರವರು ನಾಚಿಕೆಗೊಂಡವರಾಗಿ ತಮ್ಮ ತಮ್ಮ ಶಿಬಿರಗಳಿಗೆ ನಡೆದರು.
06060074a ಶರವಿಕ್ಷತಗಾತ್ರಾಶ್ಚ ಪಾಂಡುಪುತ್ರಾ ಮಹಾರಥಾಃ|
06060074c ಯುದ್ಧೇ ಸುಮನಸೋ ಭೂತ್ವಾ ಶಿಬಿರಾಯೈವ ಜಗ್ಮಿರೇ||
ಬಾಣಗಳ ಹೊಡೆತಕ್ಕೆ ಗಾಯಗೊಂಡಿದ್ದ ಮಹಾರಥ ಪಾಂಡುಪುತ್ರರೂ ಕೂಡ ಯುದ್ಧದಿಂದ ಸಂತೋಷಗೊಂಡು ಶಿಬಿರಗಳಿಗೆ ತೆರಳಿದರು.
06060075a ಪುರಸ್ಕೃತ್ಯ ಮಹಾರಾಜ ಭೀಮಸೇನಘಟೋತ್ಕಚೌ|
06060075c ಪೂಜಯಂತಸ್ತದಾನ್ಯೋನ್ಯಂ ಮುದಾ ಪರಮಯಾ ಯುತಾಃ||
ಮಹಾರಾಜ! ಭೀಮಸೇನ-ಘಟೋತ್ಕಚರನ್ನು ಮುಂದಿಟ್ಟು ಪರಮ ಸಂತೋಷಯುಕ್ತರಾಗಿ ಅನ್ಯೋನ್ಯರನ್ನು ಗೌರವಿಸಿದರು.
06060076a ನದಂತೋ ವಿವಿಧಾನ್ನಾದಾಂಸ್ತೂರ್ಯಸ್ವನವಿಮಿಶ್ರಿತಾನ್|
06060076c ಸಿಂಹನಾದಾಂಶ್ಚ ಕುರ್ವಾಣಾ ವಿಮಿಶ್ರಾಂ ಶಂಖನಿಸ್ವನೈಃ||
ವಿವಿಧ ನಾದಗಳು ತೂರ್ಯಸ್ವನಗಳೊಡನೆ, ಸಿಂಹನಾದಮಾಡುವವರೊಂಡನೆ, ಶಂಖನಾದಗಳೊಂಡನೆ ಮಿಶ್ರಿತವಾಗಿ ಜೋರಾಗಿತ್ತು.
06060077a ವಿನದಂತೋ ಮಹಾತ್ಮಾನಃ ಕಂಪಯಂತಶ್ಚ ಮೇದಿನೀಂ|
06060077c ಘಟ್ಟಯಂತಶ್ಚ ಮರ್ಮಾಣಿ ತವ ಪುತ್ರಸ್ಯ ಮಾರಿಷ|
06060077e ಪ್ರಯಾತಾಃ ಶಿಬಿರಾಯೈವ ನಿಶಾಕಾಲೇ ಪರಂತಪಾಃ||
ಭೂಮಿಯನ್ನು ನಡುಗಿಸುತ್ತಾ ಸಂತೋಷದಲ್ಲಿ ಕುಣಿಯುತ್ತಾ ನಿನ್ನ ಮಗನ ಮರ್ಮಗಳನ್ನು ಚುಚ್ಚುತ್ತಾ ಆ ಮಹಾತ್ಮ ಪರಂತಪರು ನಿಶಾಕಾಲದಲ್ಲಿ ಶಿಬಿರಗಳಿಗೆ ತೆರಳಿದರು.
06060078a ದುರ್ಯೋಧನಸ್ತು ನೃಪತಿರ್ದೀನೋ ಭ್ರಾತೃವಧೇನ ಚ|
06060078c ಮುಹೂರ್ತಂ ಚಿಂತಯಾಮಾಸ ಬಾಷ್ಪಶೋಕಸಮಾಕುಲಃ||
ನೃಪತಿ ದುರ್ಯೋಧನನಾದರೋ ಭ್ರಾತೃವಧೆಯಿಂದ ಭಾಷ್ಪಶೋಕಸಮಾಕುಲನಾಗಿ ಒಂದು ಕ್ಷಣ ಚಿಂತೆಗೊಳಗಾದನು.
06060079a ತತಃ ಕೃತ್ವಾ ವಿಧಿಂ ಸರ್ವಂ ಶಿಬಿರಸ್ಯ ಯಥಾವಿಧಿ|
06060079c ಪ್ರದಧ್ಯೌ ಶೋಕಸಂತಪ್ತೋ ಭ್ರಾತೃವ್ಯಸನಕರ್ಶಿತಃ||
ಆಗ ಶಿಬಿರಗಳ ವಿಧಿಯನ್ನು ಯಥಾವಿಧಿಯಾಗಿ ಮಾಡಿ, ಭ್ರಾತೃವ್ಯಸನದಿಂದ ಎಳೆಯಲ್ಪಟ್ಟು ಶೋಕಸಂತಪ್ತನಾದನು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಚತುರ್ಥದಿವಸಾವಹಾರೇ ಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಚತುರ್ಥದಿವಸಾವಹಾರ ಎನ್ನುವ ಅರವತ್ತನೇ ಅಧ್ಯಾಯವು.
![]()