Bhishma Parva: Chapter 57

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೭

ಧೃಷ್ಟದ್ಯುಮ್ನನಿಂದ ಸಾಮ್ಯಮನಿಪುತ್ರ ವಧೆ (೧-೩೬).

06057001 ಸಂಜಯ ಉವಾಚ|

06057001a ದ್ರೌಣಿರ್ಭೂರಿಶ್ರವಾಃ ಶಲ್ಯಶ್ಚಿತ್ರಸೇನಶ್ಚ ಮಾರಿಷ|

06057001c ಪುತ್ರಃ ಸಾಮ್ಯಮನೇಶ್ಚೈವ ಸೌಭದ್ರಂ ಸಮಯೋಧಯನ್||

ಸಂಜಯನು ಹೇಳಿದನು: “ಮಾರಿಷ! ದ್ರೌಣಿ, ಭೂರಿಶ್ರವ, ಶಲ್ಯ, ಚಿತ್ರಸೇನ, ಮತ್ತು ಸಾಮ್ಯಮನಿಯ ಮಗ ಇವರು ಸೌಭದ್ರನನ್ನು ಎದುರಿಸಿ ಯುದ್ಧಮಾಡಿದರು.

06057002a ಸಂಸಕ್ತಮತಿತೇಜೋಭಿಸ್ತಮೇಕಂ ದದೃಶುರ್ಜನಾಃ|

06057002c ಪಂಚಭಿರ್ಮನುಜವ್ಯಾಘ್ರೈರ್ಗಜೈಃ ಸಿಂಹಶಿಶುಂ ಯಥಾ||

ಆನೆಗಳಂತಿರುವ ಆ ಐದು ಮನುಜವ್ಯಾಘ್ರರ ಮಧ್ಯದಲ್ಲಿ ಒಂಟಿ ಸಿಂಹದ ಮರಿಯಂತೆ ಅವನು ಅತಿತೇಜಸ್ಸಿನಿಂದಿರುವುದನ್ನು ಜನರು ನೋಡಿದರು.

06057003a ನಾಭಿಲಕ್ಷ್ಯತಯಾ ಕಶ್ಚಿನ್ನ ಶೌರ್ಯೇ ನ ಪರಾಕ್ರಮೇ|

06057003c ಬಭೂವ ಸದೃಶಃ ಕಾರ್ಷ್ಣೇರ್ನಾಸ್ತ್ರೇ ನಾಪಿ ಚ ಲಾಘವೇ||

ಕಾರ್ಷ್ಣಿಯು ಶೌರ್ಯದಲ್ಲಿಯಾಗಲೀ ಪರಾಕ್ರಮದಲ್ಲಿಯಾಗಲೀ, ಅಸ್ತ್ರಗಳಲ್ಲಿಯೂ ಲಾಘವದಲ್ಲಿಯೂ ಯಾರೂ ಅಲಕ್ಷಿಸುವ ಹಾಗಿರಲಿಲ್ಲ.

06057004a ತಥಾ ತಮಾತ್ಮಜಂ ಯುದ್ಧೇ ವಿಕ್ರಮಂತಮರಿಂದಮಂ|

06057004c ದೃಷ್ಟ್ವಾ ಪಾರ್ಥೋ ರಣೇ ಯತ್ತಃ ಸಿಂಹನಾದಮಥೋಽನದತ್||

ಯುದ್ಧದಲ್ಲಿ ತನ್ನ ಮಗ ಅರಿಂದಮನ ವಿಕ್ರಮವನ್ನು ನೋಡಿ ರಣದಲ್ಲಿದ್ದ ಪಾರ್ಥನು ಸಿಂಹನಾದಗೈದನು.

06057005a ಪೀಡಯಾನಂ ಚ ತತ್ ಸೈನ್ಯಂ ಪೌತ್ರಂ ತವ ವಿಶಾಂ ಪತೇ|

06057005c ದೃಷ್ಟ್ವಾ ತ್ವದೀಯಾ ರಾಜೇಂದ್ರ ಸಮಂತಾತ್ಪರ್ಯವಾರಯನ್||

ವಿಶಾಂಪತೇ! ರಾಜೇಂದ್ರ! ಆ ಸೈನ್ಯವನ್ನು ಪೀಡಿಸುತ್ತಿದ್ದ ನಿನ್ನ ಮೊಮ್ಮಗನನ್ನು ನೋಡಿ ನಿನ್ನವರು ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು.

06057006a ಧ್ವಜಿನೀಂ ಧಾರ್ತರಾಷ್ಟ್ರಾಣಾಂ ದೀನಶತ್ರುರದೀನವತ್|

06057006c ಪ್ರತ್ಯುದ್ಯಯೌ ಸ ಸೌಭದ್ರಸ್ತೇಜಸಾ ಚ ಬಲೇನ ಚ||

ಆಗ ಸೌಭದ್ರನು ದೀನಶತ್ರುಗಳಾದ ಧ್ವಜವುಳ್ಳ ಧಾರ್ತರಾಷ್ಟ್ರರೊಡನೆ ದೀನನಾಗದೆ ತೇಜಸ್ಸು ಮತ್ತು ಬಲಗಳಿಂದ ಪ್ರತಿಯುದ್ಧಮಾಡಿದನು.

06057007a ತಸ್ಯ ಲಾಘವಮಾರ್ಗಸ್ಥಮಾದಿತ್ಯಸದೃಶಪ್ರಭಂ|

06057007c ವ್ಯದೃಶ್ಯತ ಮಹಚ್ಚಾಪಂ ಸಮರೇ ಯುಧ್ಯತಃ ಪರೈಃ||

ಸದಾ ಎಳೆದಿದ್ದಿರುವ ಅವನ ಆದಿತ್ಯನ ಸಮನಾದ ಪ್ರಭೆಯುಳ್ಳ ಮಹಾ ಚಾಪವನ್ನು ಸಮರದಲ್ಲಿ ಯುದ್ಧಮಾಡುತ್ತಿದ್ದ ಶತ್ರುಗಳು ನೋಡಿದರು.

06057008a ಸ ದ್ರೌಣಿಮಿಷುಣೈಕೇನ ವಿದ್ಧ್ವಾ ಶಲ್ಯಂ ಚ ಪಂಚಭಿಃ|

06057008c ಧ್ವಜಂ ಸಾಮ್ಯಮನೇಶ್ಚಾಪಿ ಸೋಽಷ್ಟಾಭಿರಪವರ್ಜಯತ್||

ಅವನು ದ್ರೌಣಿಯನ್ನು ಒಂದೇ ಇಷುಣದಿಂದ ಹೊಡೆದು ಶಲ್ಯನನ್ನು ಐದರಿಂದ ಮತ್ತು ಸಾಮ್ಯಮನಿಯ ಧ್ವಜವನ್ನು ಎಂಟು ಬಾಣಗಳಿಂದ ಹೊಡೆದನು.

06057009a ರುಕ್ಮದಂಡಾಂ ಮಹಾಶಕ್ತಿಂ ಪ್ರೇಷಿತಾಂ ಸೌಮದತ್ತಿನಾ|

06057009c ಶಿತೇನೋರಗಸಂಕಾಶಾಂ ಪತ್ರಿಣಾ ವಿಜಹಾರ ತಾಂ||

ಸೌಮದತ್ತಿಯು ಪ್ರಯೋಗಿಸಿದ್ದ ರುಕ್ಮದಂಡದ ಮಹಾಶಕ್ತಿಯನ್ನು ಸರ್ಪದಂತೆ ಹರಿತವಾಗಿದ್ದ ಪತ್ರಿಣದಿಂದ ತುಂಡರಿಸಿದನು.

06057010a ಶಲ್ಯಸ್ಯ ಚ ಮಹಾಘೋರಾನಸ್ಯತಃ ಶತಶಃ ಶರಾನ್|

06057010c ನಿವಾರ್ಯಾರ್ಜುನದಾಯಾದೋ ಜಘಾನ ಸಮರೇ ಹಯಾನ್||

ಅರ್ಜುನದಾಯಾದನು ಶಲ್ಯನು ನೋಡುತ್ತಿದ್ದಂತೆಯೇ ನೂರಾರು ಶರಗಳನ್ನು ಪ್ರಯೋಗಿಸಿ ಸಮರದಲ್ಲಿ ಅವನ ಕುದುರೆಗಳನ್ನು ಸಂಹರಿಸಿದನು.

06057011a ಭೂರಿಶ್ರವಾಶ್ಚ ಶಲ್ಯಶ್ಚ ದ್ರೌಣಿಃ ಸಾಮ್ಯಮನಿಃ ಶಲಃ|

06057011c ನಾಭ್ಯವರ್ತಂತ ಸಂರಬ್ಧಾಃ ಕಾರ್ಷ್ಣೇರ್ಬಾಹುಬಲಾಶ್ರಯಾತ್||

ಆಗ ಸಂರಬ್ಧರಾದ ಭೂರಿಶ್ರವ, ಶಲ್ಯ, ದ್ರೌಣಿ, ಸಾಮ್ಯಮನಿ ಮತ್ತು ಶಲರು ಕಾರ್ಷ್ಣಿಯ ಬಾಹುಬಲದಡಿಯಲ್ಲಿ ಯುದ್ಧಮಾಡಲಾರದಂತಾದರು.

06057012a ತತಸ್ತ್ರಿಗರ್ತಾ ರಾಜೇಂದ್ರ ಮದ್ರಾಶ್ಚ ಸಹ ಕೇಕಯೈಃ|

06057012c ಪಂಚತ್ರಿಂಶತಿಸಾಹಸ್ರಾಸ್ತವ ಪುತ್ರೇಣ ಚೋದಿತಾಃ||

06057013a ಧನುರ್ವೇದವಿದೋ ಮುಖ್ಯಾ ಅಜೇಯಾಃ ಶತ್ರುಭಿರ್ಯುಧಿ|

06057013c ಸಹಪುತ್ರಂ ಜಿಘಾಂಸಂತಂ ಪರಿವವ್ರುಃ ಕಿರೀಟಿನಂ||

ರಾಜೇಂದ್ರ! ಆಗ ನಿನ್ನ ಮಗನಿಂದ ಪ್ರಚೋದಿತರಾದ ತ್ರಿಗರ್ತರು ಮತ್ತು ಮದ್ರರು ಕೇಕಯರೊಂದಿಗೆ, ಒಟ್ಟು ಇಪ್ಪತ್ತೈದು ಸಾವಿರ ಧನುವೇದವಿದ ಮುಖ್ಯರು ಯುದ್ಧದಲ್ಲಿ ಶತ್ರುಗಳಿಗೆ ಅಜೇಯರಾದವರು ಪುತ್ರನೊಂದಿಗೆ ಕಿರೀಟಿಯನ್ನು ಸಂಹರಿಸಲು ಸುತ್ತುವರೆದರು.

06057014a ತೌ ತು ತತ್ರ ಪಿತಾಪುತ್ರೌ ಪರಿಕ್ಷಿಪ್ತೌ ರಥರ್ಷಭೌ|

06057014c ದದರ್ಶ ರಾಜನ್ಪಾಂಚಾಲ್ಯಃ ಸೇನಾಪತಿರಮಿತ್ರಜಿತ್||

ರಾಜನ್! ಅಲ್ಲಿ ತಂದೆ ಮತ್ತು ಮಗ ಇಬ್ಬರು ರಥರ್ಷಭರೂ ಸುತ್ತುವರೆಯಲ್ಪಟ್ಟಿರುವುದನ್ನು ಸೇನಾಪತಿ ಅಮಿತ್ರಜಿತು ಧೃಷ್ಟದ್ಯುಮ್ನನು ನೋಡಿದನು.

06057015a ಸ ವಾರಣರಥೌಘಾನಾಂ ಸಹಸ್ರೈರ್ಬಹುಭಿರ್ವೃತಃ|

06057015c ವಾಜಿಭಿಃ ಪತ್ತಿಭಿಶ್ಚೈವ ವೃತಃ ಶತಸಹಸ್ರಶಃ||

06057016a ಧನುರ್ವಿಸ್ಫಾರ್ಯ ಸಂಕ್ರುದ್ಧಶ್ಚೋದಯಿತ್ವಾ ವರೂಥಿನೀಂ|

06057016c ಯಯೌ ತನ್ಮದ್ರಕಾನೀಕಂ ಕೇಕಯಾಂಶ್ಚ ಪರಂತಪಃ||

ಆ ಪರಂತಪನು ಅನೇಕ ಸಹಸ್ರ ವಾರಣ-ರಥ ಸೇನೆಗಳಿಂದ ಆವೃತನಾಗಿ, ಸಹಸ್ರಾರು ಕುದುರೆಗಳ ಮತ್ತು ಪದಾತಿಸೇನೆಗಳಿಂದ ಆವೃತನಾಗಿ, ಸಂಕ್ರುದ್ಧನಾಗಿ ಧನುಸ್ಸನ್ನು ಟೇಂಕರಿಸುತ್ತಾ, ಸೇನೆಯನ್ನು ಹುರುದುಂಬಿಸುತ್ತಾ ಆ ಮದ್ರ-ಕೇಕಯ ಸೇನೆಗಳಿರುವಲ್ಲಿಗೆ ಬಂದನು.

06057017a ತೇನ ಕೀರ್ತಿಮತಾ ಗುಪ್ತಮನೀಕಂ ದೃಢಧನ್ವನಾ|

06057017c ಪ್ರಯುಕ್ತರಥನಾಗಾಶ್ವಂ ಯೋತ್ಸ್ಯಮಾನಮಶೋಭತ||

ಆ ಕೀರ್ತಿಮತ ದೃಢಧನ್ವಿಯಿಂದ ರಕ್ಷಿತಗೊಂಡು ಯುದ್ಧ ಮಾಡುತ್ತಿದ್ದ ರಥನಾಗಾಶ್ವಗಳಿಂದ ಕೂಡಿದ್ದ ಸೇನೆಯು ಶೋಭಿಸಿತು.

06057018a ಸೋಽರ್ಜುನಂ ಪ್ರಮುಖೇ ಯಾಂತಂ ಪಾಂಚಾಲ್ಯಃ ಕುರುನಂದನ|

06057018c ತ್ರಿಭಿಃ ಶಾರದ್ವತಂ ಬಾಣೈರ್ಜತ್ರುದೇಶೇ ಸಮರ್ಪಯತ್||

ಕುರುನಂದನ! ಅರ್ಜುನನ ಹತ್ತಿರ ಬರುತ್ತಲೇ ಪಾಂಚಾಲ್ಯನು ಶಾರದ್ವತನ ಜತ್ರುಪ್ರದೇಶಕ್ಕೆ ಗುರಿಯಿಟ್ಟು ಮೂರು ಬಾಣಗಳನ್ನು ಹೊಡೆದನು.

06057019a ತತಃ ಸ ಮದ್ರಕಾನ್ ಹತ್ವಾ ದಶಭಿರ್ದಶಭಿಃ ಶರೈಃ|

06057019c ಹೃಷ್ಟ ಏಕೋ ಜಘಾನಾಶ್ವಂ ಭಲ್ಲೇನ ಕೃತವರ್ಮಣಃ||

ಆಗ ಅವನು ಹತ್ತು ಬಾಣಗಳಿಂದ ಹತ್ತು ಮದ್ರಕರನ್ನು ಸಂಹರಿಸಿ ಹೃಷ್ಟನಾಗಿ ಒಂದೇ ಭಲ್ಲದಿಂದ ಕೃತವರ್ಮನ ಕುದುರೆಯನ್ನು ಹೊಡೆದನು.

06057020a ದಮನಂ ಚಾಪಿ ದಾಯಾದಂ ಪೌರವಸ್ಯ ಮಹಾತ್ಮನಃ|

06057020c ಜಘಾನ ವಿಪುಲಾಗ್ರೇಣ ನಾರಾಚೇನ ಪರಂತಪಃ||

ಪರಂತಪ ಮಹಾತ್ಮನು ಪೌರವನ ಮಗ ದಮನನನ್ನೂ ವಿಪುಲಾಗ್ರ ನಾರಾಚದಿಂದ ಸಂಹರಿಸಿದನು.

06057021a ತತಃ ಸಾಮ್ಯಮನೇಃ ಪುತ್ರಃ ಪಾಂಚಾಲ್ಯಂ ಯುದ್ಧದುರ್ಮದಂ|

06057021c ಅವಿಧ್ಯತ್ತ್ರಿಂಶತಾ ಬಾಣೈರ್ದಶಭಿಶ್ಚಾಸ್ಯ ಸಾರಥಿಂ||

ಆಗ ಸಾಮ್ಯಮನಿಯ ಮಗನು ಯುದ್ಧ ದುರ್ಮದ ಪಾಂಚಾಲ್ಯನನ್ನು ಮೂವತ್ತು ಬಾಣಗಳಿಂದ ಮತ್ತು ಅವನ ಸಾರಥಿಯನ್ನು ಹತ್ತರಿಂದ ಹೊಡೆದನು.

06057022a ಸೋಽತಿವಿದ್ಧೋ ಮಹೇಷ್ವಾಸಃ ಸೃಕ್ಕಿಣೀ ಪರಿಸಂಲಿಹನ್|

06057022c ಭಲ್ಲೇನ ಭೃಶತೀಕ್ಷ್ಣೇನ ನಿಚಕರ್ತಾಸ್ಯ ಕಾರ್ಮುಕಂ||

ಅತಿಯಾಗಿ ಗಾಯಗೊಂಡ ಮಹೇಷ್ವಾಸನು ಕಟಬಾಯಿಯನ್ನು ನೆಕ್ಕುತ್ತಾ ತಕ್ಷಣವೇ ತೀಕ್ಷ್ಣ ಭಲ್ಲದಿಂದ ಅವನ ಕಾರ್ಮುಕವನ್ನು ಕತ್ತರಿಸಿದನು.

06057023a ಅಥೈನಂ ಪಂಚವಿಂಶತ್ಯಾ ಕ್ಷಿಪ್ರಮೇವ ಸಮರ್ಪಯತ್|

06057023c ಅಶ್ವಾಂಶ್ಚಾಸ್ಯಾವಧೀದ್ರಾಜನ್ನುಭೌ ತೌ ಪಾರ್ಷ್ಣಿಸಾರಥೀ||

ಮರುಕ್ಷಣದಲ್ಲಿಯೇ ಇಪ್ಪತ್ತೈದು ಬಾಣಗಳಿಂದ ಅವನನ್ನು ಹೊಡೆದು ಅವನ ಕುದುರೆಗಳನ್ನೂ, ಪಕ್ಷರಕ್ಷಕರ ಸಾರಥಿಗಳಿಬ್ಬರನ್ನೂ ಸಂಹರಿಸಿದನು.

06057024a ಸ ಹತಾಶ್ವೇ ರಥೇ ತಿಷ್ಠನ್ದದರ್ಶ ಭರತರ್ಷಭ|

06057024c ಪುತ್ರಃ ಸಾಮ್ಯಮನೇಃ ಪುತ್ರಂ ಪಾಂಚಾಲ್ಯಸ್ಯ ಮಹಾತ್ಮನಃ||

ಭರತರ್ಷಭ! ಕುದುರೆಗಳು ಹತರಾದ ರಥದ ಮೇಲೆಯೇ ನಿಂತುಕೊಂಡು ಮಹಾತ್ಮ ಸಾಮ್ಯಮನಿಯ ಮಗನು ಪಾಂಚಾಲ್ಯನ ಮಗನನ್ನು ನೋಡಿದನು.

06057025a ಸ ಸಂಗೃಹ್ಯ ಮಹಾಘೋರಂ ನಿಸ್ತ್ರಿಂಶವರಮಾಯಸಂ|

06057025c ಪದಾತಿಸ್ತೂರ್ಣಮಭ್ಯರ್ಚದ್ರಥಸ್ಥಂ ದ್ರುಪದಾತ್ಮಜಂ||

ತಕ್ಷಣವೇ ಮಹಾಘೋರ ಲೋಹಮಯ ಖಡ್ಗವನ್ನು ಕೈಯಲ್ಲಿ ಹಿಡಿದು ರಥದಿಂದ ಧುಮುಕಿ ಕಾಲ್ನಡುಗೆಯಲ್ಲಿಯೇ ದ್ರುಪದಾತ್ಮಜನ ಕಡೆ ಧಾವಿಸಿದನು.

06057026a ತಂ ಮಹೌಘಮಿವಾಯಾಂತಂ ಖಾತ್ಪತಂತಮಿವೋರಗಂ|

06057026c ಭ್ರಾಂತಾವರಣನಿಸ್ತ್ರಿಂಶಂ ಕಾಲೋತ್ಸೃಷ್ಟಮಿವಾಂತಕಂ||

ವೇಗವಾಗಿ ಬರುತ್ತಿದ್ದ ದೊಡ್ಡ ಜಲಪ್ರವಾಹದಂತೆ ಮತ್ತು ಆಕಾಶದಿಂದ ಬೀಳುತ್ತಿದ್ದ ಸರ್ಪದಂತೆ ತೋರುತ್ತಿದ್ದ ಅವನು ಖಡ್ಗವನ್ನು ತಿರುಗಿಸುತ್ತಾ ಅಂತಕನಂತೆ ತೋರುತ್ತಿದ್ದನು.

06057027a ದೀಪ್ಯಂತಮಿವ ಶಸ್ತ್ರಾರ್ಚ್ಯಾ ಮತ್ತವಾರಣವಿಕ್ರಮಂ|

06057027c ಅಪಶ್ಯನ್ಪಾಂಡವಾಸ್ತತ್ರ ಧೃಷ್ಟದ್ಯುಮ್ನಶ್ಚ ಪಾರ್ಷತಃ||

ಶಸ್ತ್ರದೊಂದಿಗೆ ಸೂರ್ಯನಂತೆ ಬೆಳಗುತ್ತಿರುವ ಆ ಮತ್ತವಾರಣವಿಕ್ರಮನನ್ನು ಅಲ್ಲಿ ಪಾಂಡವರೂ ಪಾರ್ಷತ ಧೃಷ್ಟದ್ಯುಮ್ನನೂ ನೋಡಿದರು.

06057028a ತಸ್ಯ ಪಾಂಚಾಲಪುತ್ರಸ್ತು ಪ್ರತೀಪಮಭಿಧಾವತಃ|

06057028c ಶಿತನಿಸ್ತ್ರಿಂಶಹಸ್ತಸ್ಯ ಶರಾವರಣಧಾರಿಣಃ||

06057029a ಬಾಣವೇಗಮತೀತಸ್ಯ ರಥಾಭ್ಯಾಶಮುಪೇಯುಷಃ|

06057029c ತ್ವರನ್ಸೇನಾಪತಿಃ ಕ್ರುದ್ಧೋ ಬಿಭೇದ ಗದಯಾ ಶಿರಃ||

ಹರಿತ ಖಡ್ಗವನ್ನೂ, ಬಾಣವನ್ನು ತಡೆಯುವ ಗುರಾಣಿಯನ್ನೂ ಹಿಡಿದು ಉರಿಯುತ್ತಾ ಬಾಣವೇಗದಿಂದ ರಥದಕಡೆ ಓಡಿಬರುತ್ತಿದ್ದ ಅವನನ್ನು ರಥದ ಬಳಿ ಬಂದ ಕೂಡಲೇ ಸೇನಾಪತಿಯು ಕ್ರುದ್ಧನಾಗಿ ಗದೆಯಿಂದ ಅವನ ಶಿರವನ್ನು ಒಡೆದನು.

06057030a ತಸ್ಯ ರಾಜನ್ಸನಿಸ್ತ್ರಿಂಶಂ ಸುಪ್ರಭಂ ಚ ಶರಾವರಂ|

06057030c ಹತಸ್ಯ ಪತತೋ ಹಸ್ತಾದ್ವೇಗೇನ ನ್ಯಪತದ್ಭುವಿ||

ರಾಜನ್! ಹೊಡೆತಕ್ಕೆ ಸಿಕ್ಕ ಅವನ ಪ್ರಭೆಯುಳ್ಳ ಖಡ್ಗವೂ ಗುರಾಣಿಯೂ ವೇಗದಿಂದ ಅವನ ಕೈಯಿಂದ ಬೀಳಲು ಅವನೂ ಭೂಮಿಯ ಮೇಲೆ ಬಿದ್ದನು.

06057031a ತಂ ನಿಹತ್ಯ ಗದಾಗ್ರೇಣ ಲೇಭೇ ಸ ಪರಮಂ ಯಶಃ|

06057031c ಪುತ್ರಃ ಪಾಂಚಾಲರಾಜಸ್ಯ ಮಹಾತ್ಮಾ ಭೀಮವಿಕ್ರಮಃ||

ಗದಾಗ್ರದಿಂದ ಅವನನ್ನು ಕೊಂದು ಭೀಮವಿಕ್ರಮ ಮಹಾತ್ಮ ಪಾಂಚಾಲರಾಜಪುತ್ರನು ಪರಮ ಯಶಸ್ಸನ್ನು ಪಡೆದನು.

06057032a ತಸ್ಮಿನ್ ಹತೇ ಮಹೇಷ್ವಾಸೇ ರಾಜಪುತ್ರೇ ಮಹಾರಥೇ|

06057032c ಹಾಹಾಕಾರೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ||

ಮಾರಿಷ! ಆ ಮಹೇಷ್ವಾಸ ಮಹಾರಥ ರಾಜಪುತ್ರನು ಹತನಾಗಲು ನಿನ್ನ ಸೈನ್ಯದಲ್ಲಿ ಮಹಾ ಹಾಹಾಕಾರವುಂಟಾಯಿತು.

06057033a ತತಃ ಸಾಮ್ಯಮನಿಃ ಕ್ರುದ್ಧೋ ದೃಷ್ಟ್ವಾ ನಿಹತಮಾತ್ಮಜಂ|

06057033c ಅಭಿದುದ್ರಾವ ವೇಗೇನ ಪಾಂಚಾಲ್ಯಂ ಯುದ್ಧದುರ್ಮದಂ||

ಆಗ ಮಗನು ನಿಹತನಾದುದನ್ನು ನೋಡಿ ಕ್ರುದ್ಧನಾದ ಸಾಮ್ಯಮನಿಯು ವೇಗದಿಂದ ಯುದ್ಧದುರ್ಮದ ಪಾಂಚಾಲ್ಯನ್ನು ಆಕ್ರಮಿಸಿದನು.

06057034a ತೌ ತತ್ರ ಸಮರೇ ವೀರೌ ಸಮೇತೌ ರಥಿನಾಂ ವರೌ|

06057034c ದದೃಶುಃ ಸರ್ವರಾಜಾನಃ ಕುರವಃ ಪಾಂಡವಾಸ್ತಥಾ||

ಅಲ್ಲಿ ಸಮರದಲ್ಲಿ ಅವರಿಬ್ಬರು ರಥಶ್ರೇಷ್ಠ ವೀರರೂ ಒಟ್ಟಿಗೇ ಯುದ್ಧಮಾಡುವುದನ್ನು ಕುರುಗಳ ಮತ್ತು ಪಾಂಡವರ ಎಲ್ಲ ರಾಜರು ನೋಡಿದರು.

06057035a ತತಃ ಸಾಮ್ಯಮನಿಃ ಕ್ರುದ್ಧಃ ಪಾರ್ಷತಂ ಪರವೀರಹಾ|

06057035c ಆಜಘಾನ ತ್ರಿಭಿರ್ಬಾಣೈಸ್ತೋತ್ತ್ರೈರಿವ ಮಹಾದ್ವಿಪಂ||

ಆಗ ಕ್ರುದ್ಧನಾದ ಪರವೀರಹ ಸಾಮ್ಯಮನಿಯು ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಪಾರ್ಷತನನ್ನು ಮೂರು ಬಾಣಗಳಿಂದ ಹೊಡೆದನು.

06057036a ತಥೈವ ಪಾರ್ಷತಂ ಶೂರಂ ಶಲ್ಯಃ ಸಮಿತಿಶೋಭನಃ|

06057036c ಆಜಘಾನೋರಸಿ ಕ್ರುದ್ಧಸ್ತತೋ ಯುದ್ಧಮವರ್ತತ||

ಆಗ ಸಮಿತಿಶೋಭನ ಶಲ್ಯನೂ ಕೂಡ ಶೂರ ಪಾರ್ಷತನನ್ನು ಕ್ರುದ್ಧನಾಗಿ ಎದೆಯಮೇಲೆ ಹೊಡೆದನು. ಆಗ ಯುದ್ಧವು ಮುಂದುವರೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಚತುರ್ಥಯುದ್ಧದಿವಸೇ ಸಾಮ್ಯಮನಿಪುತ್ರವಧೇ ಸಪ್ತಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಚತುರ್ಥಯುದ್ಧದಿವಸೇ ಸಾಮ್ಯಮನಿಪುತ್ರವಧೆ ಎನ್ನುವ ಐವತ್ತೇಳನೇ ಅಧ್ಯಾಯವು.

Image result for flowers against white background

Comments are closed.