Bhishma Parva: Chapter 52

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೨

ಮೂರನೆಯ ದಿನದ ಯುದ್ಧ

ಭೀಷ್ಮನು ಗರುಡವ್ಯೂಹವನ್ನು ರಚಿಸಿದುದು (೧-೯). ಅರ್ಜುನನು ಅರ್ಧಚಂದ್ರದ ವ್ಯೂಹವನ್ನು ರಚಿಸಿದುದು (೧೦-೧೮). ಯುದ್ಧಾರಂಭ (೧೯-).

06052001 ಸಂಜಯ ಉವಾಚ|

06052001a ಪ್ರಭಾತಾಯಾಂ ತು ಶರ್ವರ್ಯಾಂ ಭೀಷ್ಮಃ ಶಾಂತನವಸ್ತತಃ|

06052001c ಅನೀಕಾನ್ಯನುಸಮ್ಯಾನೇ ವ್ಯಾದಿದೇಶಾಥ ಭಾರತ||

ಸಂಜಯನು ಹೇಳಿದನು: “ಭಾರತ! ರಾತ್ರಿಯು ಕಳೆದು ಪ್ರಭಾತವಾಗಲು ಶಾಂತನವ ಭೀಷ್ಮನು ಯುದ್ಧಕ್ಕೆ ಹೊರಡುವಂತೆ ಸೇನೆಗಳಿಗೆ ಆದೇಶವಿತ್ತನು.

06052002a ಗಾರುಡಂ ಚ ಮಹಾವ್ಯೂಹಂ ಚಕ್ರೇ ಶಾಂತನವಸ್ತದಾ|

06052002c ಪುತ್ರಾಣಾಂ ತೇ ಜಯಾಕಾಂಕ್ಷೀ ಭೀಷ್ಮಃ ಕುರುಪಿತಾಮಹಃ||

ಆಗ ನಿನ್ನ ಪುತ್ರರ ವಿಜಯಾಕಾಂಕ್ಷಿಯಾದ ಕುರುಪಿತಾಮಹ ಶಾಂತನವ ಭೀಷ್ಮನು ಗರುಡ ಮಹಾವ್ಯೂಹವನ್ನು ರಚಿಸಿದನು.

06052003a ಗರುಡಸ್ಯ ಸ್ವಯಂ ತುಂಡೇ ಪಿತಾ ದೇವವ್ರತಸ್ತವ|

06052003c ಚಕ್ಷುಷೀ ಚ ಭರದ್ವಾಜಃ ಕೃತವರ್ಮಾ ಚ ಸಾತ್ವತಃ||

ಗರುಡನ ಕೊಕ್ಕಿನ ಪ್ರದೇಶತಲ್ಲಿ ನಿನ್ನ ಪಿತ ಸ್ವಯಂ ದೇವವ್ರತನಿದ್ದನು. ಭಾರದ್ವಾಜ ಮತ್ತು ಸಾತ್ವತ ಕೃತವರ್ಮರು ಅದರ ಕಣ್ಣುಗಳಾಗಿದ್ದರು.

06052004a ಅಶ್ವತ್ಥಾಮಾ ಕೃಪಶ್ಚೈವ ಶೀರ್ಷಮಾಸ್ತಾಂ ಯಶಸ್ವಿನೌ|

06052004c ತ್ರಿಗರ್ತೈರ್ಮತ್ಸ್ಯಕೈಕೇಯೈರ್ವಾಟಧಾನೈಶ್ಚ ಸಂಯುತೌ||

ಅದರ ಶೀರ್ಷಭಾಗದಲ್ಲಿ ಯಶಸ್ವಿ ಅಶ್ವತ್ಥಾಮ-ಕೃಪರೂ, ಒಟ್ಟಿಗೆ ತ್ರಿಗರ್ತರು, ಕೇಕಯರು, ವಾಟದಾನರೂ ಇದ್ದರು.

06052005a ಭೂರಿಶ್ರವಾಃ ಶಲಃ ಶಲ್ಯೋ ಭಗದತ್ತಶ್ಚ ಮಾರಿಷ|

06052005c ಮದ್ರಕಾಃ ಸಿಂಧುಸೌವೀರಾಸ್ತಥಾ ಪಂಚನದಾಶ್ಚ ಯೇ||

06052006a ಜಯದ್ರಥೇನ ಸಹಿತಾ ಗ್ರೀವಾಯಾಂ ಸಮ್ನಿವೇಶಿತಾಃ|

06052006c ಪೃಷ್ಠೇ ದುರ್ಯೋಧನೋ ರಾಜಾ ಸೋದರೈಃ ಸಾನುಗೈರ್ವೃತಃ||

ಭೂರಿಶ್ರವ, ಶಲ, ಶಲ್ಯ, ಭಗದತ್ತ, ಮದ್ರಕ, ಸಿಂಧು-ಸೌವೀರರು, ಪಂಚನದರು ಜಯದ್ರಥನ ಸಹಿತ ಅದರ ಕುತ್ತಿಗೆಯ ಭಾಗದಲ್ಲಿ ಸೇರಿದ್ದರು. ಹಿಂಭಾಗದಲ್ಲಿ ರಾಜಾ ದುರ್ಯೋಧನನು ಸೋದರರು ಮತ್ತು ಅನುಗರಿಂದ ಆವೃತನಾಗಿದ್ದನು.

06052007a ವಿಂದಾನುವಿಂದಾವಾವಂತ್ಯೌ ಕಾಂಬೋಜಶ್ಚ ಶಕೈಃ ಸಹ|

06052007c ಪುಚ್ಛಮಾಸನ್ಮಹಾರಾಜ ಶೂರಸೇನಾಶ್ಚ ಸರ್ವಶಃ||

ಮಹಾರಾಜ! ಅವಂತಿಯ ವಿಂದಾನುವಿಂದರು, ಕಾಂಬೋಜರು ಮತ್ತು ಶಕರೊಂದಿಗೆ ಶೂರಸೇನರು ಅದರ ಪುಕ್ಕಗಳಾದರು.

06052008a ಮಾಗಧಾಶ್ಚ ಕಲಿಂಗಾಶ್ಚ ದಾಶೇರಕಗಣೈಃ ಸಹ|

06052008c ದಕ್ಷಿಣಂ ಪಕ್ಷಮಾಸಾದ್ಯ ಸ್ಥಿತಾ ವ್ಯೂಹಸ್ಯ ದಂಶಿತಾಃ||

ದಾಶೇರಕಣಗಳೊಂದಿಗೆ ಮಾಗಧರು ಮತ್ತು ಕಲಿಂಗರು ಕವಚಧಾರಿಗಳಾಗಿ ವ್ಯೂಹದ ಬಲಗಡೆಯಲ್ಲಿ ನಿಂತಿದ್ದರು.

06052009a ಕಾನನಾಶ್ಚ ವಿಕುಂಜಾಶ್ಚ ಮುಕ್ತಾಃ ಪುಂಡ್ರಾವಿಷಸ್ತಥಾ|

06052009c ಬೃಹದ್ಬಲೇನ ಸಹಿತಾ ವಾಮಂ ಪಕ್ಷಮುಪಾಶ್ರಿತಾಃ||

ಕಾನನರು, ವಿಕುಂಜರು, ಮುಕ್ತರು, ಪುಂಡ್ರದೇಶದವರು ಬೃಹದ್ಬಲನ ಸಹಿತ ಎಡಭಾಗದಲ್ಲಿ ನಿಂತಿದ್ದರು.

06052010a ವ್ಯೂಢಂ ದೃಷ್ಟ್ವಾ ತು ತತ್ಸೈನ್ಯಂ ಸವ್ಯಸಾಚೀ ಪರಂತಪಃ|

06052010c ಧೃಷ್ಟದ್ಯುಮ್ನೇನ ಸಹಿತಃ ಪ್ರತ್ಯವ್ಯೂಹತ ಸಂಯುಗೇ|

06052010e ಅರ್ಧಚಂದ್ರೇಣ ವ್ಯೂಹೇನ ವ್ಯೂಹಂ ತಮತಿದಾರುಣಂ||

ಆ ಸೇನ್ಯದ ವ್ಯೂಹವನ್ನು ನೋಡಿ ಪರಂತಪ ಸವ್ಯಸಾಚಿಯು ಧೃಷ್ಟದ್ಯುಮ್ನನ ಸಹಿತ ಸಂಯುಗದಲ್ಲಿ ಪ್ರತಿವ್ಯೂಹವಾಗಿ ಅರ್ಧಚಂದ್ರದ ವ್ಯೂಹವನ್ನು ರಚಿಸಿದನು. ಆ ವ್ಯೂಹವು ಅತಿದಾರುಣವಾಗಿತ್ತು.

06052011a ದಕ್ಷಿಣಂ ಶೃಂಗಮಾಸ್ಥಾಯ ಭೀಮಸೇನೋ ವ್ಯರೋಚತ|

06052011c ನಾನಾಶಸ್ತ್ರೌಘಸಂಪನ್ನೈರ್ನಾನಾದೇಶ್ಯೈರ್ನೃಪೈರ್ ವೃತಃ||

ಅದರ ದಕ್ಷಿಣ ಶೃಂಗದಲ್ಲಿ ಭೀಮಸೇನನು ನಾನಾದೇಶದ ನಾನಾಶಸ್ತ್ರಸಂಪನ್ನ ನೃಪರಿಂದ ಆವೃತನಾಗಿ ರಾಜಿಸಿದನು.

06052012a ತದನ್ಯೇವ ವಿರಾಟಶ್ಚ ದ್ರುಪದಶ್ಚ ಮಹಾರಥಃ|

06052012c ತದನಂತರಮೇವಾಸೀನ್ನೀಲೋ ನೀಲಾಯುಧೈಃ ಸಹ||

ಅವನ ಹಿಂದೆ ಮಹಾರಥ ವಿರಾಟ-ದ್ರುಪದರೂ, ತದನಂತರ ನೀಲಾಯುಧರೊಂದಿಗೆ ನೀಲನೂ ಇದ್ದರು.

06052013a ನೀಲಾದನಂತರಂ ಚೈವ ಧೃಷ್ಟಕೇತುರ್ಮಹಾರಥಃ|

06052013c ಚೇದಿಕಾಶಿಕರೂಷೈಶ್ಚ ಪೌರವೈಶ್ಚಾಭಿಸಂವೃತಃ||

ನೀಲನ ಅನಂತರ ಮಹಾರಥ ಧೃಷ್ಟಕೇತುವು ಚೇದಿ-ಕಾಶಿ-ಕರೂಷ-ಪೌರವರಿಂದ ಸಂವೃತನಾಗಿ ನಿಂತಿದ್ದನು.

06052014a ಧೃಷ್ಟದ್ಯುಮ್ನಃ ಶಿಖಂಡೀ ಚ ಪಾಂಚಾಲಾಶ್ಚ ಪ್ರಭದ್ರಕಾಃ|

06052014c ಮಧ್ಯೇ ಸೈನ್ಯಸ್ಯ ಮಹತಃ ಸ್ಥಿತಾ ಯುದ್ಧಾಯ ಭಾರತ||

ಭಾರತ! ಆ ಮಹಾಸೇನೆಯ ಮಧ್ಯದಲ್ಲಿ ಯುದ್ಧಕ್ಕೆಂದು ಧೃಷ್ಟದ್ಯುಮ್ನ-ಶಿಖಂಡಿಯರು ಪಾಂಚಾಲ-ಪ್ರಭದ್ರಕರೊಂದಿಗೆ ನಿಂತಿದ್ದರು.

06052015a ತಥೈವ ಧರ್ಮರಾಜೋಽಪಿ ಗಜಾನೀಕೇನ ಸಂವೃತಃ|

06052015c ತತಸ್ತು ಸಾತ್ಯಕೀ ರಾಜನ್ದ್ರೌಪದ್ಯಾಃ ಪಂಚ ಚಾತ್ಮಜಾಃ||

06052016a ಅಭಿಮನ್ಯುಸ್ತತಸ್ತೂರ್ಣಂ ಇರಾವಾಂಶ್ಚ ತತಃ ಪರಂ|

06052016c ಭೈಮಸೇನಿಸ್ತತೋ ರಾಜನ್ಕೇಕಯಾಶ್ಚ ಮಹಾರಥಾಃ||

ಅಲ್ಲಿಯೇ ಗಜಸೇನೆಯಿಂದ ಸಂವೃತನಾಗಿ ಧರ್ಮರಾಜನೂ, ಅನಂತರ ಸಾತ್ಯಕಿಯೂ, ದ್ರೌಪದಿಯ ಐವರು ಪುತ್ರರೂ, ಅಭಿಮನ್ಯುವೂ, ಅವನ ಪಕ್ಕದಲ್ಲಿಯೇ ಇರಾವಾನನೂ, ಅವನ ನಂತರ ಭೈಮಸೇನಿ (ಘಟೋತ್ಕಚ) ಯೂ ಅನಂತರ ಮಹಾರಥ ಕೇಕಯರೂ ಇದ್ದರು.

06052017a ತತೋಽಭೂದ್ದ್ವಿಪದಾಂ ಶ್ರೇಷ್ಠೋ ವಾಮಂ ಪಾರ್ಶ್ವಮುಪಾಶ್ರಿತಃ|

06052017c ಸರ್ವಸ್ಯ ಜಗತೋ ಗೋಪ್ತಾ ಗೋಪ್ತಾ ಯಸ್ಯ ಜನಾರ್ದನಃ||

ಆಗ ಎಡಭಾಗವನ್ನು ಸರ್ವಜಗತ್ತಿನ ರಕ್ಷಕನಾದ ಜನಾರ್ದನನಿಂದ ರಕ್ಷಣೆಯನ್ನು ಪಡೆದ ದ್ವಿಪದರಲ್ಲಿ ಶ್ರೇಷ್ಠನು ನಿಂತಿದ್ದನು.

06052018a ಏವಮೇತನ್ಮಹಾವ್ಯೂಹಂ ಪ್ರತ್ಯವ್ಯೂಹಂತ ಪಾಂಡವಾಃ|

06052018c ವಧಾರ್ಥಂ ತವ ಪುತ್ರಾಣಾಂ ತತ್ಪಕ್ಷಂ ಯೇ ಚ ಸಂಗತಾಃ||

ಈ ರೀತಿ ಮಹಾವ್ಯೂಹವನ್ನು ಪ್ರತಿವ್ಯೂಹವಾಗಿ ರಚಿಸಿ ಪಾಂಡವರು ನಿನ್ನ ಪುತ್ರರ ಮತ್ತು ಅವರ ಪಕ್ಷದಲ್ಲಿ ಸೇರಿದವರ ವಧೆಗಾಗಿ ಸಿದ್ಧರಾದರು.

06052019a ತತಃ ಪ್ರವವೃತೇ ಯುದ್ಧಂ ವ್ಯತಿಷಕ್ತರಥದ್ವಿಪಂ|

06052019c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ||

ಆಗ ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾದ ನಿನ್ನವರು ಮತ್ತು ಪರರ ರಥಸಂಕುಲಗಳ ನಡುವೆ ಯುದ್ಧವು ಪ್ರಾರಂಭವಾಯಿತು.

06052020a ಹಯೌಘಾಶ್ಚ ರಥೌಘಾಶ್ಚ ತತ್ರ ತತ್ರ ವಿಶಾಂ ಪತೇ|

06052020c ಸಂಪತಂತಃ ಸ್ಮ ದೃಶ್ಯಂತೇ ನಿಘ್ನಮಾನಾಃ ಪರಸ್ಪರಂ||

ವಿಶಾಂಪತೇ! ಅಲ್ಲಲ್ಲಿ ಅಶ್ವಸೇನೆಗಳು ರಥಸೇನೆಗಳು ಪರಸ್ಪರರನ್ನು ಕೊಲ್ಲುವುದರಲ್ಲಿ ತೊಡಗಿರುವುದು ಕಂಡುಬಂದಿತು.

06052021a ಧಾವತಾಂ ಚ ರಥೌಘಾನಾಂ ನಿಘ್ನತಾಂ ಚ ಪೃಥಕ್ಪೃಥಕ್|

06052021c ಬಭೂವ ತುಮುಲಃ ಶಬ್ದೋ ವಿಮಿಶ್ರೋ ದುಂದುಭಿಸ್ವನೈಃ||

ಓಡುತ್ತಿರುವ ಮತ್ತು ಪುನಃ ಪುನಃ ಬೀಳುತ್ತಿರುವ ರಥಗಳ ತುಮುಲ ಶಬ್ಧವು ದುಂದುಭಿಸ್ವನಗಳೊಂದಿಗೆ ಮಿಶ್ರಿತವಾಯಿತು.

06052022a ದಿವಸ್ಪೃಮ್ನರವೀರಾಣಾಂ ನಿಘ್ನತಾಂ ಇತರೇತರಂ|

06052022c ಸಂಪ್ರಹಾರೇ ಸುತುಮುಲೇ ತವ ತೇಷಾಂ ಚ ಭಾರತ||

ಭಾರತ! ಪರಸ್ಪರರನ್ನು ಪ್ರಹರಿಸಿ ಕೊಲ್ಲುತ್ತಿರುವ ನಿನ್ನವರ ಮತ್ತು ಅವರ ನರವೀರರ ತುಮುಲವು ಆಕಾಶವನ್ನೇ ವ್ಯಾಪಿಸಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ತೃತೀಯಯುದ್ಧದಿವಸೇ ಪರಸ್ಪರವ್ಯೂಹರಚನಾಯಾಂ ದ್ವಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ತೃತೀಯಯುದ್ಧದಿವಸೇ ಪರಸ್ಪರವ್ಯೂಹರಚನೆ ಎನ್ನುವ ಐವತ್ತೆರಡನೇ ಅಧ್ಯಾಯವು.

Image result for flowers against white background

Comments are closed.