Bhishma Parva: Chapter 51

ಭೀಷ್ಮ ಪರ್ವ: ಭೀಷ್ಮವಧ ಪರ್ವ

೫೧

ಅಭಿಮನ್ಯು-ಅರ್ಜುನರ ಪರಾಕ್ರಮ; ಎರಡನೇ ದಿನದ ಯುದ್ಧಸಮಾಪ್ತಿ (೧-೪೩).

06051001 ಸಂಜಯ ಉವಾಚ|

06051001a ಗತಾಪರಾಹ್ಣಭೂಯಿಷ್ಠೇ ತಸ್ಮಿನ್ನಹನಿ ಭಾರತ|

06051001c ರಥನಾಗಾಶ್ವಪತ್ತೀನಾಂ ಸಾದಿನಾಂ ಚ ಮಹಾಕ್ಷಯೇ||

06051002a ದ್ರೋಣಪುತ್ರೇಣ ಶಲ್ಯೇನ ಕೃಪೇಣ ಚ ಮಹಾತ್ಮನಾ|

06051002c ಸಮಸಜ್ಜತ ಪಾಂಚಾಲ್ಯಸ್ತ್ರಿಭಿರೇತೈರ್ಮಹಾರಥೈಃ||

ಸಂಜಯನು ಹೇಳಿದನು: “ಭಾರತ! ಆದಿನದ ಅಪರಾಹ್ಣವು ಕಳೆಯಲು ರಥನಾಗಾಶ್ವಪದಾತಿಗಳ ಮಹಾಕ್ಷಯವು ಮುಂದುವರೆದಿರಲು ಪಾಂಚಾಲ್ಯನು ಈ ಮೂವರು ಮಹಾರಥ ಮಹಾತ್ಮರೊಂದಿಗೆ - ದ್ರೋಣಪುತ್ರ, ಶಲ್ಯ ಮತ್ತು ಕೃಪ - ಯುದ್ಧದಲ್ಲಿ ತೊಡಗಿದನು.

06051003a ಸ ಲೋಕವಿದಿತಾನಶ್ವಾನ್ನಿಜಘಾನ ಮಹಾಬಲಃ|

06051003c ದ್ರೌಣೇಃ ಪಾಂಚಾಲದಾಯಾದಃ ಶಿತೈರ್ದಶಭಿರಾಶುಗೈಃ||

ಆ ಮಹಾಬಲ ಪಾಂಚಾಲದಾಯಾದನು ಹತ್ತು ಹರಿತ ಆಶುಗಗಳಿಂದ ದ್ರೌಣಿಯ ಲೋಕವಿಶ್ರುತ ಕುದುರೆಗಳನ್ನು ಸಂಹರಿಸಿದನು.

06051004a ತತಃ ಶಲ್ಯರಥಂ ತೂರ್ಣಮಾಸ್ಥಾಯ ಹತವಾಹನಃ|

06051004c ದ್ರೌಣಿಃ ಪಾಂಚಾಲದಾಯಾದಮಭ್ಯವರ್ಷದಥೇಷುಭಿಃ||

ಆಗ ಹತವಾಹನನಾದ ದ್ರೌಣಿಯು ತಕ್ಷಣವೇ ಶಲ್ಯನ ರಥವನ್ನು ಏರಿ ಪಾಂಚಾಲದಾಯದನ ಮೇಲೆ ಬಾಣಗಳಿಂದ ಆಕ್ರಮಣ ಮಾಡಿದನು.

06051005a ಧೃಷ್ಟದ್ಯುಮ್ನಂ ತು ಸಂಸಕ್ತಂ ದ್ರೌಣಿನಾ ದೃಶ್ಯ ಭಾರತ|

06051005c ಸೌಭದ್ರೋಽಭ್ಯಪತತ್ತೂರ್ಣಂ ವಿಕಿರನ್ನಿಶಿತಾಂ ಶರಾನ್||

ಭಾರತ! ಧೃಷ್ಟದ್ಯುಮ್ನನು ದ್ರೌಣಿಯೊಂದಿಗೆ ಯುದ್ಧದಲ್ಲಿ ನಿರತನಾಗಿದ್ದುದನ್ನು ನೋಡಿ ಸೌಭದ್ರನು ವೇಗದಿಂದ ನಿಶಿತ ಶರಗಳನ್ನು ಎರಚುತ್ತಾ ದ್ರೌಣಿಯನ್ನು ಎದುರಿಸಿದನು.

06051006a ಸ ಶಲ್ಯಂ ಪಂಚವಿಂಶತ್ಯಾ ಕೃಪಂ ಚ ನವಭಿಃ ಶರೈಃ|

06051006c ಅಶ್ವತ್ಥಾಮಾನಮಷ್ಟಾಭಿರ್ವಿವ್ಯಾಧ ಪುರುಷರ್ಷಭ||

ಪುರುಷರ್ಷಭ! ಅವನು ಶಲ್ಯನನ್ನು ಇಪ್ಪತ್ತೈದು ಶರಗಳಿಂದ, ಕೃಪನನ್ನು ಒಂಭತ್ತರಿಂದ ಮತ್ತು ಅಶ್ವತ್ಥಾಮನನ್ನು ಎಂಟು ಬಾಣಗಳಿಂದ ಹೊಡೆದನು.

06051007a ಆರ್ಜುನಿಂ ತು ತತಸ್ತೂರ್ಣಂ ದ್ರೌಣಿರ್ವಿವ್ಯಾಧ ಪತ್ರಿಣಾ|

06051007c ಶಲ್ಯೋ ದ್ವಾದಶಭಿಶ್ಚೈವ ಕೃಪಶ್ಚ ನಿಶಿತೈಸ್ತ್ರಿಭಿಃ||

ಆಗ ತಕ್ಷಣವೇ ಆರ್ಜುನಿಯನ್ನು ದ್ರೌಣಿಯು ಪತ್ರಿಗಳಿಂದ, ಶಲ್ಯನು ಹನ್ನೆರಡು ಮತ್ತು ಕೃಪನು ಮೂರು ನಿಶಿತಬಾಣಗಳಿಂದ ಹೊಡೆದರು.

06051008a ಲಕ್ಷ್ಮಣಸ್ತವ ಪೌತ್ರಸ್ತು ತವ ಪೌತ್ರಮವಸ್ಥಿತಂ|

06051008c ಅಭ್ಯವರ್ತತ ಸಂಹೃಷ್ಟಸ್ತತೋ ಯುದ್ಧಮವರ್ತತ||

ನಿನ್ನ ಮೊಮ್ಮಗ ಲಕ್ಷ್ಮಣನು ನಿನ್ನ ಮೊಮ್ಮಗನನ್ನು ಎದುರಿಸಲು, ಆಗ ಸಂಹೃಷ್ಟರಾದ ಅವರಿಬ್ಬರ ನಡುವೆ ಯುದ್ಧವು ನಡೆಯಿತು.

06051009a ದೌರ್ಯೋಧನಿಸ್ತು ಸಂಕ್ರುದ್ಧಃ ಸೌಭದ್ರಂ ನವಭಿಃ ಶರೈಃ|

06051009c ವಿವ್ಯಾಧ ಸಮರೇ ರಾಜಂಸ್ತದದ್ಭುತಮಿವಾಭವತ್||

ರಾಜನ್! ದೌರ್ಯೋಧನಿಯಾದರೋ ಸಂಕ್ರುದ್ಧನಾಗಿ ಸಮರದಲ್ಲಿ ಸೌಭದ್ರನನ್ನು ಒಂಭತ್ತು ಶರಗಳಿಂದ ಹೊಡೆದನು. ಆಗ ಈ ಅದ್ಭುತವಾಯಿತು.

06051010a ಅಭಿಮನ್ಯುಸ್ತು ಸಂಕ್ರುದ್ಧೋ ಭ್ರಾತರಂ ಭರತರ್ಷಭ|

06051010c ಶರೈಃ ಪಂಚಾಶತಾ ರಾಜನ್ ಕ್ಷಿಪ್ರಹಸ್ತೋಽಭ್ಯವಿಧ್ಯತ||

ರಾಜನ್! ಭರತರ್ಷಭ! ಸಂಕ್ರುದ್ಧನಾದ ಅಭಿಮನ್ಯುವಾದರೋ ತನ್ನ ಹಸ್ತಲಾಘವದಿಂದ ತಮ್ಮನನ್ನು ಐವತ್ತು ಶರಗಳಿಂದ ಹೊಡೆದನು.

06051011a ಲಕ್ಷ್ಮಣೋಽಪಿ ತತಸ್ತಸ್ಯ ಧನುಶ್ಚಿಚ್ಛೇದ ಪತ್ರಿಣಾ|

06051011c ಮುಷ್ಟಿದೇಶೇ ಮಹಾರಾಜ ತತ ಉಚ್ಚುಕ್ರುಶುರ್ಜನಾಃ||

ಮಹಾರಾಜ! ಆಗ ಲಕ್ಷ್ಮಣನೂ ಕೂಡ ಪತ್ರಿಗಳಿಂದ ಅವನ ಮುಷ್ಟಿಪ್ರದೇಶಕ್ಕೆ ಹೊಡೆದು ಧನುಸ್ಸನ್ನು ತುಂಡರಿಸಿದನು. ಆಗ ಜನರು ಕೂಗಾಡಿದರು.

06051012a ತದ್ವಿಹಾಯ ಧನುಶ್ಚಿನ್ನಂ ಸೌಭದ್ರಃ ಪರವೀರಹಾ|

06051012c ಅನ್ಯದಾದತ್ತವಾಂಶ್ಚಿತ್ರಂ ಕಾರ್ಮುಕಂ ವೇಗವತ್ತರಂ||

ತುಂಡಾಗಿದ್ದ ಧನುಸ್ಸನ್ನು ಬಿಸಾಡಿ ಪರವೀರಹ ಸೌಭದ್ರನು ಇನ್ನೊಂದು ಚಿತ್ರ, ವೇಗವತ್ತರ ಕಾರ್ಮುಕವನ್ನು ಎತ್ತಿಕೊಂಡನು.

06051013a ತೌ ತತ್ರ ಸಮರೇ ಹೃಷ್ಟೌ ಕೃತಪ್ರತಿಕೃತೈಷಿಣೌ|

06051013c ಅನ್ಯೋನ್ಯಂ ವಿಶಿಖೈಸ್ತೀಕ್ಷ್ಣೈರ್ಜಘ್ನತುಃ ಪುರುಷರ್ಷಭೌ||

ಆ ಇಬ್ಬರು ಪುರುಷರ್ಷಭರೂ ಸಮರದಲ್ಲಿ ಹರ್ಷಿತರಾಗಿ, ಪ್ರತಿಗೆ ಪ್ರತಿಮಾಡುವುದರಲ್ಲಿ ಇಚ್ಛೆಯುಳ್ಳವರಾಗಿದ್ದು ಅನ್ಯೋನ್ಯರನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆದರು.

06051014a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಪುತ್ರಂ ಮಹಾರಥಂ|

06051014c ಪೀಡಿತಂ ತವ ಪೌತ್ರೇಣ ಪ್ರಾಯಾತ್ತತ್ರ ಜನೇಶ್ವರಃ||

ಆಗ ರಾಜಾ ಜನೇಶ್ವರ ದುರ್ಯೋಧನನು ನಿನ್ನ ಪೌತ್ರನಿಂದ ತನ್ನ ಮಗ ಮಹಾರಥನು ಪೀಡಿತನಾಗುತ್ತಿರುವುದನ್ನು ಕಂಡು ಅಲ್ಲಿಗೆ ಬಂದನು.

06051015a ಸಮ್ನಿವೃತ್ತೇ ತವ ಸುತೇ ಸರ್ವ ಏವ ಜನಾಧಿಪಾಃ|

06051015c ಆರ್ಜುನಿಂ ರಥವಂಶೇನ ಸಮಂತಾತ್ಪರ್ಯವಾರಯನ್||

ನಿನ್ನ ಮಗನು ಅಲ್ಲಿಗೆ ಬರಲು ಎಲ್ಲ ಜನಾಧಿಪರೂ ಕೂಡ ರಥಸಂಕುಲಗಳಿಂದ ಆರ್ಜುನಿಯನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.

06051016a ಸ ತೈಃ ಪರಿವೃತಃ ಶೂರೈಃ ಶೂರೋ ಯುಧಿ ಸುದುರ್ಜಯೈಃ|

06051016c ನ ಸ್ಮ ವಿವ್ಯಥತೇ ರಾಜನ್ ಕೃಷ್ಣತುಲ್ಯಪರಾಕ್ರಮಃ||

ರಾಜನ್! ಯುದ್ಧದಲ್ಲಿ ಆ ಸುದುರ್ಜಯ ಶೂರರಿಂದ ಪರಿವೃತನಾಗಿದ್ದರೂ ಆ ಕೃಷ್ಣತುಲ್ಯ ಪರಾಕ್ರಮಿಯು ಸ್ವಲ್ಪವೂ ವ್ಯಥಿತನಾಗಲಿಲ್ಲ.

06051017a ಸೌಭದ್ರಮಥ ಸಂಸಕ್ತಂ ತತ್ರ ದೃಷ್ಟ್ವಾ ಧನಂಜಯಃ|

06051017c ಅಭಿದುದ್ರಾವ ಸಂಕ್ರುದ್ಧಸ್ತ್ರಾತುಕಾಮಃ ಸ್ವಮಾತ್ಮಜಂ||

ಸಂಸಕ್ತನಾಗಿದ್ದ ಸೌಭದ್ರನನ್ನು ನೋಡಿ ಧನಂಜಯನು ತನ್ನ ಮಗನನ್ನು ರಕ್ಷಿಸಲು ಬಯಸಿ ಸಂಕ್ರುದ್ಧನಾಗಿ ಅಲ್ಲಿಗೆ ಧಾವಿಸಿದನು.

06051018a ತತಃ ಸರಥನಾಗಾಶ್ವಾ ಭೀಷ್ಮದ್ರೋಣಪುರೋಗಮಾಃ|

06051018c ಅಭ್ಯವರ್ತಂತ ರಾಜಾನಃ ಸಹಿತಾಃ ಸವ್ಯಸಾಚಿನಂ||

ಆಗ ರಥ-ಆನೆ-ಅಶ್ವಗಳೊಡನೆ ಭೀಷ್ಮ-ದ್ರೋಣರನ್ನು ಮುಂದಿರಿಸಿಕೊಂಡು ರಾಜರು ಒಟ್ಟಿಗೇ ಸವ್ಯಸಾಚಿಯನ್ನು ಎದುರಿಸಿದರು.

06051019a ಉದ್ಧೂತಂ ಸಹಸಾ ಭೌಮಂ ನಾಗಾಶ್ವರಥಸಾದಿಭಿಃ|

06051019c ದಿವಾಕರಪಥಂ ಪ್ರಾಪ್ಯ ರಜಸ್ತೀವ್ರಮದೃಶ್ಯತ||

ಒಮ್ಮಿಂದೊಮ್ಮೆಲೇ ಆನೆ-ರಥ-ಕುದುರೆಗಳ ಚಲನವಲನದಿಂದ ಭೂಮಿಯಲ್ಲಿ ತೀವ್ರವಾದ ಧೂಳೆದ್ದು ಅದು ಸೂರ್ಯನ ಮಾರ್ಗದ ವರೆಗೂ ತಲುಪಿದುದು ಕಂಡುಬಂದಿತು.

06051020a ತಾನಿ ನಾಗಸಹಸ್ರಾಣಿ ಭೂಮಿಪಾಲಶತಾನಿ ಚ|

06051020c ತಸ್ಯ ಬಾಣಪಥಂ ಪ್ರಾಪ್ಯ ನಾಭ್ಯವರ್ತಂತ ಸರ್ವಶಃ||

ಅರ್ಜುನನ ಬಾಣಪಥಕ್ಕೆ ಸಿಲುಕಿ ಸಹಸ್ರಾರು ಆನೆಗಳು ಮತ್ತು ನೂರಾರು ಭುಮಿಪಾಲರು ಎಲ್ಲಕಡೆ ಓಡಿ ಹೋಗತೊಡಗಿದರು.

06051021a ಪ್ರಣೇದುಃ ಸರ್ವಭೂತಾನಿ ಬಭೂವುಸ್ತಿಮಿರಾ ದಿಶಃ|

06051021c ಕುರೂಣಾಮನಯಸ್ತೀವ್ರಃ ಸಮದೃಶ್ಯತ ದಾರುಣಃ||

ಎಲ್ಲ ಭೂತಗಳು ನೋವಿನಿಂದ ಕೂಗಿದವು. ದಿಕ್ಕುಗಳು ಕತ್ತಲೆಯಿಂದ ತುಂಬಿದವು. ಕುರುಗಳು ತೀವ್ರ ಕಷ್ಟಕ್ಕೀಡಾಗಿರುವುದು ಕಂಡುಬರುತ್ತಿತ್ತು.

06051022a ನಾಪ್ಯಂತರಿಕ್ಷಂ ನ ದಿಶೋ ನ ಭೂಮಿರ್ನ ಚ ಭಾಸ್ಕರಃ|

06051022c ಪ್ರಜಜ್ಞೇ ಭರತಶ್ರೇಷ್ಠ ಶರಸಂಘೈಃ ಕಿರೀಟಿನಃ||

ಕಿರೀಟಿಯ ಶರಸಂಘಗಳಿಂದ ತುಂಬಿ ಅಂತರಿಕ್ಷವಾಗಲೀ, ದಿಕ್ಕುಗಳಾಗಲೀ, ಭೂಮಿಯಾಗಲೀ, ಭಾಸ್ಕರನಾಗಲೀ ಕಾಣಲಿಲ್ಲ.

06051023a ಸಾದಿತಧ್ವಜನಾಗಾಸ್ತು ಹತಾಶ್ವಾ ರಥಿನೋ ಭೃಶಂ|

06051023c ವಿಪ್ರದ್ರುತರಥಾಃ ಕೇ ಚಿದ್ದೃಶ್ಯಂತೇ ರಥಯೂಥಪಾಃ||

ಅನೇಕ ಧ್ವಜಗಳು ನಾಶವಾದವು, ಕುದುರೆ-ಆನೆ-ರಥಿಕರು ಹತರಾದರು. ಕೆಲವು ರಥಯೂಥಪರೂ ಓಡಿಹೋಗುತ್ತಿರುವುದು ಕಂಡುಬಂದಿತು.

06051024a ವಿರಥಾ ರಥಿನಶ್ಚಾನ್ಯೇ ಧಾವಮಾನಾಃ ಸಮಂತತಃ|

06051024c ತತ್ರ ತತ್ರೈವ ದೃಶ್ಯಂತೇ ಸಾಯುಧಾಃ ಸಾಂಗದೈರ್ಭುಜೈಃ||

ಅನ್ಯ ವಿರಥ ರಥಿಗಳು ಎಲ್ಲಕಡೆ ಅಲ್ಲಲ್ಲಿ ಆಯುಧಗಳನ್ನು ಹಿಡಿದು, ಅಂಗದ-ಭುಜಾಭರಣಗಳೊಂದಿಗೆ ಓಡಿಹೋಗುತ್ತಿರುವುದು ಕಂಡುಬಂದಿತು.

06051025a ಹಯಾರೋಹಾ ಹಯಾಂಸ್ತ್ಯಕ್ತ್ವಾ ಗಜಾರೋಹಾಶ್ಚ ದಂತಿನಃ|

06051025c ಅರ್ಜುನಸ್ಯ ಭಯಾದ್ರಾಜನ್ಸಮಂತಾದ್ವಿಪ್ರದುದ್ರುವುಃ||

ರಾಜನ್! ಅರ್ಜುನನ ಭಯದಿಂದ ಹಯಾರೂಢರು ಕುದುರೆಗಳನ್ನು ಮತ್ತು ಗಜಾರೂಢರು ಆನೆಗಳನ್ನು ಬಿಟ್ಟು ಎಲ್ಲ ಕಡೆ ಓಡಿ ಹೋಗುದರು.

06051026a ರಥೇಭ್ಯಶ್ಚ ಗಜೇಭ್ಯಶ್ಚ ಹಯೇಭ್ಯಶ್ಚ ನರಾಧಿಪಾಃ|

06051026c ಪತಿತಾಃ ಪಾತ್ಯಮಾನಾಶ್ಚ ದೃಶ್ಯಂತೇಽರ್ಜುನತಾಡಿತಾಃ||

ಅರ್ಜುನನಿಂದ ಹೊಡೆಯಲ್ಪಟ್ಟು ರಥಗಳು, ಆನೆಗಳು, ಕುದುರೆಗಳು ಮತ್ತು ನರಾಧಿಪರು ಬಿದ್ದುದು ಮತ್ತು ಬೀಳುತ್ತಿರುವುದು ಕಂಡುಬಂದಿತು.

06051027a ಸಗದಾನುದ್ಯತಾನ್ಬಾಹೂನ್ಸಖಡ್ಗಾಂಶ್ಚ ವಿಶಾಂ ಪತೇ|

06051027c ಸಪ್ರಾಸಾಂಶ್ಚ ಸತೂಣೀರಾನ್ಸಶರಾನ್ಸಶರಾಸನಾನ್||

06051028a ಸಾಂಕುಶಾನ್ಸಪತಾಕಾಂಶ್ಚ ತತ್ರ ತತ್ರಾರ್ಜುನೋ ನೃಣಾಂ|

06051028c ನಿಚಕರ್ತ ಶರೈರುಗ್ರೈ ರೌದ್ರಂ ಬಿಭ್ರದ್ವಪುಸ್ತದಾ||

ವಿಶಾಂಪತೇ! ಗದೆ-ಖಡ್ಗಗಳನ್ನು ಎತ್ತಿ ಹಿಡಿದಿದ್ದ ಕೈಗಳನ್ನೂ, ಪ್ರಾಸ-ತೂಣೀರ-ಶರ-ಧನುಸ್ಸು-ಅಂಕುಶ-ಪತಾಕೆಗಳನ್ನು ಹಿಡಿದ ಕೈಗಳನ್ನೂ ಮತ್ತು ಅವುಗಳೊಂದಿಗೆ ನರರನ್ನು ಅರ್ಜುನನು ಉಗ್ರ ಬಾಣಗಳಿಂದ ಕತ್ತರಿಸಿದನು. ಆಗ ಅವನ ಮುಖವು ರೌದ್ರಾಕಾರವನ್ನು ತಾಳಿತ್ತು.

06051029a ಪರಿಘಾಣಾಂ ಪ್ರವೃದ್ಧಾನಾಂ ಮುದ್ಗರಾಣಾಂ ಚ ಮಾರಿಷ|

06051029c ಪ್ರಾಸಾನಾಂ ಭಿಂಡಿಪಾಲಾನಾಂ ನಿಸ್ತ್ರಿಂಶಾನಾಂ ಚ ಸಂಯುಗೇ||

06051030a ಪರಶ್ವಧಾನಾಂ ತೀಕ್ಷ್ಣಾನಾಂ ತೋಮರಾಣಾಂ ಚ ಭಾರತ|

06051030c ವರ್ಮಣಾಂ ಚಾಪವಿದ್ಧಾನಾಂ ಕವಚಾನಾಂ ಚ ಭೂತಲೇ||

06051031a ಧ್ವಜಾನಾಂ ಚರ್ಮಣಾಂ ಚೈವ ವ್ಯಜನಾನಾಂ ಚ ಸರ್ವಶಃ|

06051031c ಚತ್ರಾಣಾಂ ಹೇಮದಂಡಾನಾಂ ಚಾಮರಾಣಾಂ ಚ ಭಾರತ||

06051032a ಪ್ರತೋದಾನಾಂ ಕಶಾನಾಂ ಚ ಯೋಕ್ತ್ರಾಣಾಂ ಚೈವ ಮಾರಿಷ|

06051032c ರಾಶಯಶ್ಚಾತ್ರ ದೃಶ್ಯಂತೇ ವಿನಿಕೀರ್ಣಾ ರಣಕ್ಷಿತೌ||

ಮಾರಿಷ! ಭಾರತ! ಆ ಸಂಯುಗದ ರಣಭೂಮಿಯಲ್ಲಿ ಭೂತಲದಲ್ಲಿ ಪರಿಘ-ಮುದ್ಗರ-ಪ್ರಾಸ-ಭಿಂಡಿಪಾಲ-ಕತ್ತಿ-ತೀಕ್ಷ್ಣ ಗಂಡುಗೊಡಲಿ-ತೋಮರ--ಕವಚ-ತುಂಡಾದ ಬಿಲ್ಲುಗಳು-ಧ್ವಜ-ಗುರಾಣಿ-ವ್ಯಜನಗಳು-ಛತ್ರಗಳು-ಹೇಮದಂಡಗಳು-ಚಾಮರಗಳು-ಚಾವಟಿಗಳು-ನೊಗಪಟ್ಟಿಗಳು-ಮತ್ತು ಅಂಕುಶಗಳು ರಾಶಿರಾಶಿಯಾಗಿ ಹರಡಿ ಬಿದ್ದಿರುವುದು ಕಂಡಿತು.

06051033a ನಾಸೀತ್ತತ್ರ ಪುಮಾನ್ಕಶ್ಚಿತ್ತವ ಸೈನ್ಯಸ್ಯ ಭಾರತ|

06051033c ಯೋಽರ್ಜುನಂ ಸಮರೇ ಶೂರಂ ಪ್ರತ್ಯುದ್ಯಾಯಾತ್ಕಥಂ ಚನ||

ಭಾರತ! ಆಗ ಅರ್ಜುನನೊಂದಿಗೆ ಸಮರದಲ್ಲಿ ಪ್ರತಿಯುದ್ಧ ಮಾಡಬಲ್ಲ ಯಾವ ಪುರುಷನೂ ನಿನ್ನ ಸೇನೆಯಲ್ಲಿ ಇರಲಿಲ್ಲ.

06051034a ಯೋ ಯೋ ಹಿ ಸಮರೇ ಪಾರ್ಥಂ ಪತ್ಯುದ್ಯಾತಿ ವಿಶಾಂ ಪತೇ|

06051034c ಸ ಸ ವೈ ವಿಶಿಖೈಸ್ತೀಕ್ಷ್ಣೈಃ ಪರಲೋಕಾಯ ನೀಯತೇ||

ವಿಶಾಂಪತೇ! ಯಾರು ಯಾರು ಸಮರದಲ್ಲಿ ಪಾರ್ಥನನ್ನು ಎದುರಿಸಿ ಯುದ್ಧಮಾಡಿದರೋ ಅವರೆಲ್ಲರೂ ತೀಕ್ಷ್ಣ ವಿಶಿಖಗಳಿಂದ ಪರಲೋಕಕ್ಕೆ ಕೊಂಡೊಯ್ಯಲ್ಪಟ್ಟರು.

06051035a ತೇಷು ವಿದ್ರವಮಾಣೇಷು ತವ ಯೋಧೇಷು ಸರ್ವಶಃ|

06051035c ಅರ್ಜುನೋ ವಾಸುದೇವಶ್ಚ ದಧ್ಮತುರ್ವಾರಿಜೋತ್ತಮೌ||

ನಿನ್ನ ಯೋಧರು ಹಾಗೆ ದಿಕ್ಕಾಪಾಲಾಗಿ ಓಡಿಹೋಗುತ್ತಿರಲು ಅರ್ಜುನ-ವಾಸುದೇವರು ತಮ್ಮ ಉತ್ತಮ ಶಂಖಗಳನ್ನು ಊದಿದರು.

06051036a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಪಿತಾ ದೇವವ್ರತಸ್ತವ|

06051036c ಅಬ್ರವೀತ್ಸಮರೇ ಶೂರಂ ಭಾರದ್ವಾಜಂ ಸ್ಮಯನ್ನಿವ||

ಆ ಬಲವು ಪ್ರಭಗ್ನವಾಗುತ್ತಿರುವುದನ್ನು ನೋಡಿ ನಿನ್ನ ಪಿತ ದೇವವ್ರತನು ಸಮರದಲ್ಲಿ ಶೂರ ಭಾರದ್ವಾಜನಿಗೆ ಮುಗುಳ್ನಕ್ಕು ಹೇಳಿದನು:

06051037a ಏಷ ಪಾಂಡುಸುತೋ ವೀರಃ ಕೃಷ್ಣೇನ ಸಹಿತೋ ಬಲೀ|

06051037c ತಥಾ ಕರೋತಿ ಸೈನ್ಯಾನಿ ಯಥಾ ಕುರ್ಯಾದ್ಧನಂಜಯಃ||

“ಕೃಷ್ಣನ ಸಹಿತ ಈ ವೀರ ಬಲೀ ಪಾಂಡುಸುತನು ಸೈನ್ಯಗಳಲ್ಲಿ ಧನಂಜಯನು ಹೇಗೆ ಮಾಡುತ್ತಾನೋ ಹಾಗೆಯೇ ಮಾಡುತ್ತಿದ್ದಾನೆ!

06051038a ನ ಹ್ಯೇಷ ಸಮರೇ ಶಕ್ಯೋ ಜೇತುಮದ್ಯ ಕಥಂ ಚನ|

06051038c ಯಥಾಸ್ಯ ದೃಶ್ಯತೇ ರೂಪಂ ಕಾಲಾಂತಕಯಮೋಪಮಂ||

ಕಾಲಾಂತಕ ಯಮನೋಪಾದಿಯಲ್ಲಿ ಕಾಣುವ ರೂಪವುಳ್ಳ ಇವನನ್ನು ಇಂದು ಸಮರದಲ್ಲಿ ಗೆಲ್ಲಲು ಖಂಡಿತ ಸಾಧ್ಯವಿಲ್ಲ.

06051039a ನ ನಿವರ್ತಯಿತುಂ ಚಾಪಿ ಶಕ್ಯೇಯಂ ಮಹತೀ ಚಮೂಃ|

06051039c ಅನ್ಯೋನ್ಯಪ್ರೇಕ್ಷಯಾ ಪಶ್ಯ ದ್ರವತೀಯಂ ವರೂಥಿನೀ||

ಅನ್ಯೋನ್ಯರನ್ನು ನೋಡಿ ಓಡಿಹೋಗುತ್ತಿರುವ ಈ ಮಹಾಸೇನೆ ವರೂಥಿನಿಯನ್ನು ಹಿಂದೆ ಕರೆತರಲೂ ಶಕ್ಯವಿಲ್ಲ.

06051040a ಏಷ ಚಾಸ್ತಂ ಗಿರಿಶ್ರೇಷ್ಠಂ ಭಾನುಮಾನ್ಪ್ರತಿಪದ್ಯತೇ|

06051040c ವಪೂಂಷಿ ಸರ್ವಲೋಕಸ್ಯ ಸಂಹರನ್ನಿವ ಸರ್ವಥಾ||

ಸರ್ವಲೋಕಗಳ ದೃಷ್ಟಿಗಳನ್ನು ಸರ್ವಥಾ ಸಂಹರಿಸಲಿದ್ದಾನೆಯೋ ಎನ್ನುವಂತೆ ಭಾನುಮತನು ಗಿರಿಶ್ರೇಷ್ಠನಲ್ಲಿ ಅಸ್ತನಾಗುತ್ತಿದ್ದಾನೆ.

06051041a ತತ್ರಾವಹಾರಂ ಸಂಪ್ರಾಪ್ತಂ ಮನ್ಯೇಽಹಂ ಪುರುಷರ್ಷಭ|

06051041c ಶ್ರಾಂತಾ ಭೀತಾಶ್ಚ ನೋ ಯೋಧಾ ನ ಯೋತ್ಸ್ಯಂತಿ ಕಥಂ ಚನ||

ಪುರುಷರ್ಷಭ! ಹಿಂದೆಸರಿಯುವ ಕಾಲವು ಬಂದೊದಗಿದೆಯೆಂದು ನನಗನ್ನಿಸುತ್ತದೆ. ಆಯಾಸಗೊಂಡ, ಭೀತರಾದ ಯೋಧರು ಎಂದೂ ಯುದ್ಧಮಾಡಲಾರರು.”

06051042a ಏವಮುಕ್ತ್ವಾ ತತೋ ಭೀಷ್ಮೋ ದ್ರೋಣಮಾಚಾರ್ಯಸತ್ತಮಂ|

06051042c ಅವಹಾರಮಥೋ ಚಕ್ರೇ ತಾವಕಾನಾಂ ಮಹಾರಥಃ||

ಹೀಗೆ ಆಚಾರ್ಯಸತ್ತಮ ದ್ರೋಣನಿಗೆ ಹೇಳಿ ಮಹಾರಥ ಭೀಷ್ಮನು ನಿನ್ನವರನ್ನು ಹಿಂದಕ್ಕೆ ಕರೆಸಿಕೊಂಡನು.

06051043a ತತೋಽವಹಾರಃ ಸೈನ್ಯಾನಾಂ ತವ ತೇಷಾಂ ಚ ಭಾರತ|

06051043c ಅಸ್ತಂ ಗಚ್ಛತಿ ಸೂರ್ಯೇಽಭೂತ್ಸಂಧ್ಯಾಕಾಲೇ ಚ ವರ್ತತಿ||

ಭಾರತ! ಸೂರ್ಯನು ಅಸ್ತವಾಗಲು, ಸಂದ್ಯಾಕಾಲವುಂಟಾಗಲು, ಅವರು ಮತ್ತು ನಿನ್ನವರು ಸೇನೆಗಳನ್ನು ಹಿಂದೆತೆಗೆದುಕೊಂಡರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ದ್ವಿತೀಯಯುದ್ಧದಿವಸಾವಹಾರೇ ಏಕಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ದ್ವಿತೀಯಯುದ್ಧದಿವಸಾವಹಾರ ಎನ್ನುವ ಐವತ್ತೊಂದನೇ ಅಧ್ಯಾಯವು.

Image result for flowers against white background

Comments are closed.