Bhishma Parva: Chapter 49

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೯

ಧೃಷ್ಟದ್ಯುಮ್ನ-ದ್ರೋಣರ ಯುದ್ಧ (೧-೩೫). ಭೀಮಸೇನನು ಧೃಷ್ಟದ್ಯುಮ್ನನನ್ನು ತನ್ನ ರಥದ ಮೇಲೇರಿಸಿಕೊಳ್ಳಲು, ದುರ್ಯೋಧನನು ಕಲಿಂಗ ಸೇನೆಯನ್ನು ಭೀಮನ ಮೇಲೆ ಆಕ್ರಮಣಮಾಡಲು ಪ್ರಚೋದಿಸಿದುದು (೩೬-೪೦).

06049001 ಧೃತರಾಷ್ಟ್ರ ಉವಾಚ|

06049001a ಕಥಂ ದ್ರೋಣೋ ಮಹೇಷ್ವಾಸಃ ಪಾಂಚಾಲ್ಯಶ್ಚಾಪಿ ಪಾರ್ಷತಃ||

06049001c ರಣೇ ಸಮೀಯತುರ್ಯತ್ತೌ ತನ್ಮಮಾಚಕ್ಷ್ವ ಸಂಜಯ|

ಧೃತರಾಷ್ಟ್ರನು ಹೇಳಿದನು: “ಸಂಜಯ! ಮಹೇಷ್ವಾಸ ದ್ರೋಣ ಮತ್ತು ಪಾರ್ಷತ ಪಾಂಚಾಲ್ಯರೂ ಕೂಡ ರಣದಲ್ಲಿ ಪ್ರಯತ್ನಪೂರ್ವಕವಾಗಿ ಯಾವ ರೀತಿಯಲ್ಲಿ ಯುದ್ಧ ಮಾಡಿದರು ಎನ್ನುವುದನ್ನು ನನಗೆ ಹೇಳು.

06049002a ದಿಷ್ಟಮೇವ ಪರಂ ಮನ್ಯೇ ಪೌರುಷಾದಪಿ ಸಂಜಯ||

06049002c ಯತ್ರ ಶಾಂತನವೋ ಭೀಷ್ಮೋ ನಾತರದ್ಯುಧಿ ಪಾಂಡವಂ|

ಸಂಜಯ! ಯುದ್ಧದಲ್ಲಿ ಪಾಂಡವನನ್ನು ಶಾಂತನವ ಭೀಷ್ಮನೂ ಕೂಡ ದಾಟಲಾಗಲಿಲ್ಲವೆಂದರೆ ಪೌರುಷಕ್ಕಿಂತಲೂ ದೈವವೇ ಹೆಚ್ಚಿನದೆಂದು ತಿಳಿಯುತ್ತೇನೆ.

06049003a ಭೀಷ್ಮೋ ಹಿ ಸಮರೇ ಕ್ರುದ್ಧೋ ಹನ್ಯಾಲ್ಲೋಕಾಂಶ್ಚರಾಚರಾನ್||

06049003c ಸ ಕಥಂ ಪಾಂಡವಂ ಯುದ್ಧೇ ನಾತರತ್ಸಂಜಯೌಜಸಾ|

ಸಂಜಯ! ಏಕೆಂದರೆ ಸಮರದಲ್ಲಿ ಕ್ರುದ್ಧನಾಗಿ ತನ್ನ ಓಜಸ್ಸಿನಿಂದ ಲೋಕ ಚರಾಚರಗಳನ್ನೇ ಕೊಲ್ಲಬಲ್ಲ ಭೀಷ್ಮನು ಹೇಗೆ ಪಾಂಡವನನ್ನು ಯುದ್ಧದಲ್ಲಿ ಮೀರಿಸಲಿಲ್ಲ?”

06049004 ಸಂಜಯ ಉವಾಚ|

06049004a ಶೃಣು ರಾಜನ್ ಸ್ಥಿರೋ ಭೂತ್ವಾ ಯುದ್ಧಮೇತತ್ಸುದಾರುಣಂ|

06049004c ನ ಶಕ್ಯಃ ಪಾಂಡವೋ ಜೇತುಂ ದೇವೈರಪಿ ಸವಾಸವೈಃ||

ಸಂಜಯನು ಹೇಳಿದನು: “ರಾಜನ್! ಸ್ಥಿರನಾಗಿದ್ದುಕೊಂಡು ಈ ಸುದಾರುಣ ಯುದ್ಧವನ್ನು ಕೇಳು. ಪಾಂಡವರನ್ನು ಗೆಲ್ಲಲು ವಾಸವನೊಂದಿಗೆ ದೇವತೆಗಳಿಗೂ ಸಾಧ್ಯವಿಲ್ಲ.

06049005a ದ್ರೋಣಸ್ತು ನಿಶಿತೈರ್ಬಾಣೈರ್ಧೃಷ್ಟದ್ಯುಮ್ನಮಯೋಧಯತ್|

06049005c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾತಯತ್|

ದ್ರೋಣನಾದರೋ ನಿಶಿತ ಬಾಣಗಳಿಂದ ಧೃಷ್ಟದ್ಯುಮ್ನನನ್ನು ಗಾಯಗೊಳಿಸಿದನು. ಅವನ ಸಾರಥಿಯನ್ನು ಕೂಡ ಭಲ್ಲದಿಂದ ಹೊಡೆದು ರಥದಿಂದ ಬೀಳಿಸಿದನು.

06049006a ತಸ್ಯಾಥ ಚತುರೋ ವಾಹಾಂಶ್ಚತುರ್ಭಿಃ ಸಾಯಕೋತ್ತಮೈಃ|

06049006c ಪೀಡಯಾಮಾಸ ಸಂಕ್ರುದ್ಧೋ ಧೃಷ್ಟದ್ಯುಮ್ನಸ್ಯ ಮಾರಿಷ||

ಮಾರಿಷ! ಸಂಕ್ರುದ್ಧನಾಗಿ ಧೃಷ್ಟದ್ಯುಮ್ನನ ನಾಲ್ಕು ಕುದುರೆಗಳನ್ನು ಉತ್ತಮ ಸಾಯಕಗಳಿಂದ ಪೀಡಿಸಿದನು.

06049007a ಧೃಷ್ಟದ್ಯುಮ್ನಸ್ತತೋ ದ್ರೋಣಂ ನವತ್ಯಾ ನಿಶಿತೈಃ ಶರೈಃ|

06049007c ವಿವ್ಯಾಧ ಪ್ರಹಸನ್ವೀರಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಆಗ ಧೃಷ್ಟದ್ಯುಮ್ನನು ನಗುತ್ತಾ ದ್ರೋಣನನ್ನು ತೊಂಭತ್ತು ನಿಶಿತ ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.

06049008a ತತಃ ಪುನರಮೇಯಾತ್ಮಾ ಭಾರದ್ವಾಜಃ ಪ್ರತಾಪವಾನ್|

06049008c ಶರೈಃ ಪ್ರಚ್ಛಾದಯಾಮಾಸ ಧೃಷ್ಟದ್ಯುಮ್ನಮಮರ್ಷಣಂ||

ಆಗ ಪುನಃ ಅಮೇಯಾತ್ಮ ಪ್ರತಾಪವಾನ್ ಭಾರದ್ವಾಜನು ಅಮರ್ಷಣ ಧೃಷ್ಟದ್ಯುಮ್ನನನ್ನು ಶರಗಳಿಂದ ಮುಚ್ಚಿಬಿಟ್ಟನು.

06049009a ಆದದೇ ಚ ಶರಂ ಘೋರಂ ಪಾರ್ಷತಸ್ಯ ವಧಂ ಪ್ರತಿ|

06049009c ಶಕ್ರಾಶನಿಸಮಸ್ಪರ್ಶಂ ಮೃತ್ಯುದಂಡಮಿವಾಪರಂ||

ಪಾರ್ಷತನ ವಧೆಗೆಂದು ಮುಟ್ಟಲು ವಜ್ರದಂತೆ ಕಠೋರವಾಗಿದ್ದ, ಮೃತ್ಯುದಂಡದಂತಿದ್ದ ಘೋರ ಶರವನ್ನು ಎತ್ತಿಕೊಂಡನು.

06049010a ಹಾಹಾಕಾರೋ ಮಹಾನಾಸೀತ್ಸರ್ವಸೈನ್ಯಸ್ಯ ಭಾರತ|

06049010c ತಮಿಷುಂ ಸಂಧಿತಂ ದೃಷ್ಟ್ವಾ ಭಾರದ್ವಾಜೇನ ಸಂಯುಗೇ||

ಭಾರತ! ಸಂಯುಗದಲ್ಲಿ ಭಾರದ್ವಾಜನು ಆ ಬಾಣವನ್ನು ಹೂಡಿದ್ದುದನ್ನು ನೋಡಿ ಸರ್ವ ಸೈನ್ಯಗಳಲ್ಲಿ ಮಹಾ ಹಾಹಾಕಾರವುಂಟಾಯಿತು.

06049011a ತತ್ರಾದ್ಭುತಮಪಶ್ಯಾಮ ಧೃಷ್ಟದ್ಯುಮ್ನಸ್ಯ ಪೌರುಷಂ|

06049011c ಯದೇಕಃ ಸಮರೇ ವೀರಸ್ತಸ್ಥೌ ಗಿರಿರಿವಾಚಲಃ||

ಆಗ ಧೃಷ್ಟದ್ಯುಮ್ನನ ಅದ್ಭುತ ಪೌರುಷವನ್ನು ನೋಡಿದೆವು. ಅವನೊಬ್ಬನೇ ವೀರನು ಸಮರದಲ್ಲಿ ಗಿರಿಯಂತೆ ಅಚಲನಾಗಿ ನಿಂತಿದ್ದನು.

06049012a ತಂ ಚ ದೀಪ್ತಂ ಶರಂ ಘೋರಮಾಯಾಂತಂ ಮೃತ್ಯುಮಾತ್ಮನಃ|

06049012c ಚಿಚ್ಛೇದ ಶರವೃಷ್ಟಿಂ ಚ ಭಾರದ್ವಾಜೇ ಮುಮೋಚ ಹ||

ತನ್ನ ಮೃತ್ಯುವಾಗಿಯೇ ಭಾರದ್ವಾಜನು ಬಿಟ್ಟ ಆ ಘೋರವಾಗಿ ಉರಿಯುತ್ತಾ ಬರುತ್ತಿದ್ದ ಬಾಣವನ್ನು ಅವನು ಶರವೃಷ್ಟಿಯಿಂದ ಕತ್ತರಿಸಿದನು.

06049013a ತತ ಉಚ್ಚುಕ್ರುಶುಃ ಸರ್ವೇ ಪಾಂಚಾಲಾಃ ಪಾಂಡವೈಃ ಸಹ|

06049013c ಧೃಷ್ಟದ್ಯುಮ್ನೇನ ತತ್ಕರ್ಮ ಕೃತಂ ದೃಷ್ಟ್ವಾ ಸುದುಷ್ಕರಂ||

ಸುದುಷ್ಕರವಾದ ಆ ಕೆಲಸವನ್ನು ಮಾಡಿದ ಧೃಷ್ಟದ್ಯುಮ್ನನನ್ನು ನೋಡಿ ಪಾಂಚಾಲ-ಪಾಂಡವರೆಲ್ಲರೂ ಒಟ್ಟಿಗೇ ಹರ್ಷೋದ್ಗಾರ ಮಾಡಿದರು.

06049014a ತತಃ ಶಕ್ತಿಂ ಮಹಾವೇಗಾಂ ಸ್ವರ್ಣವೈಡೂರ್ಯಭೂಷಿತಾಂ|

06049014c ದ್ರೋಣಸ್ಯ ನಿಧನಾಕಾಂಕ್ಷೀ ಚಿಕ್ಷೇಪ ಸ ಪರಾಕ್ರಮೀ||

ಆಗ ಆ ಪರಾಕ್ರಮಿಯು ದ್ರೋಣನ ಸಾವನ್ನು ಬಯಸಿ ಮಹಾವೇಗದ ಸ್ವರ್ಣವೈಡೂರ್ಯಭೂಷಿತ ಶಕ್ತಿಯನ್ನು ಎಸೆದನು.

06049015a ತಾಮಾಪತಂತೀಂ ಸಹಸಾ ಶಕ್ತಿಂ ಕನಕಭೂಷಣಾಂ|

06049015c ತ್ರಿಧಾ ಚಿಕ್ಷೇಪ ಸಮರೇ ಭಾರದ್ವಾಜೋ ಹಸನ್ನಿವ||

ಸಮರದಲ್ಲಿ ವೇಗದಿಂದ ಬೀಳುತ್ತಿರುವ ಆ ಕನಕಭೂಷಣ ಶಕ್ತಿಯನ್ನು ಭಾರದ್ವಾಜನು ನಗುತ್ತಾ ಮೂರು ಭಾಗಗಳಾಗಿ ತುಂಡರಿಸಿದನು.

06049016a ಶಕ್ತಿಂ ವಿನಿಹತಾಂ ದೃಷ್ಟ್ವಾ ಧೃಷ್ಟದ್ಯುಮ್ನಃ ಪ್ರತಾಪವಾನ್|

06049016c ವವರ್ಷ ಶರವರ್ಷಾಣಿ ದ್ರೋಣಂ ಪ್ರತಿ ಜನೇಶ್ವರ||

ಜನೇಶ್ವರ! ಶಕ್ತಿಯು ನಾಶವಾದುದನ್ನು ನೋಡಿ ಪ್ರತಾಪವಾನ್ ಧೃಷ್ಟದ್ಯುಮ್ನನು ದ್ರೋಣನ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು.

06049017a ಶರವರ್ಷಂ ತತಸ್ತಂ ತು ಸನ್ನಿವಾರ್ಯ ಮಹಾಯಶಾಃ|

06049017c ದ್ರೋಣೋ ದ್ರುಪದಪುತ್ರಸ್ಯ ಮಧ್ಯೇ ಚಿಚ್ಛೇದ ಕಾರ್ಮುಕಂ||

ಆಗ ಆ ಶರವರ್ಷವನ್ನು ನಿಲ್ಲಿಸಿ ಮಹಾಯಶ ದ್ರೋಣನು ದ್ರುಪದಪುತ್ರನ ಧನುಸ್ಸನ್ನು ಮಧ್ಯದಲ್ಲಿ ತುಂಡರಿಸಿದನು.

06049018a ಸ ಚ್ಛಿನ್ನಧನ್ವಾ ಸಮರೇ ಗದಾಂ ಗುರ್ವೀಂ ಮಹಾಯಶಾಃ|

06049018c ದ್ರೋಣಾಯ ಪ್ರೇಷಯಾಮಾಸ ಗಿರಿಸಾರಮಯೀಂ ಬಲೀ||

ಸಮರದಲ್ಲಿ ಧನುಸ್ಸು ತುಂಡಾಗಲು ಆ ಬಲೀ ಮಹಾಯಶಸ್ವಿಯು ಭಾರವಾದ ಲೋಹನಿರ್ಮಿತ ಗದೆಯನ್ನು ತಿರುತಿರುಗಿಸಿ ದ್ರೋಣನ ಮೇಲೆ ಎಸೆದನು.

06049019a ಸಾ ಗದಾ ವೇಗವನ್ಮುಕ್ತಾ ಪ್ರಾಯಾದ್ದ್ರೋಣಜಿಘಾಂಸಯಾ|

06049019c ತತ್ರಾದ್ಭುತಮಪಶ್ಯಾಮ ಭಾರದ್ವಾಜಸ್ಯ ವಿಕ್ರಮಂ||

ವೇಗವಾಗಿ ಎಸೆಯಲ್ಪಟ್ಟು ದ್ರೋಣನ ಜೀವವನ್ನು ಕಳೆಯಬಲ್ಲ ಆ ಗದೆಯು ಬರುತ್ತಿರಲು ಅಲ್ಲಿ ಭಾರದ್ವಾಜನ ಅದ್ಭುತ ವಿಕ್ರಮವನ್ನು ಕಂಡೆವು.

06049020a ಲಾಘವಾದ್ವ್ಯಂಸಯಾಮಾಸ ಗದಾಂ ಹೇಮವಿಭೂಷಿತಾಂ|

06049020c ವ್ಯಂಸಯಿತ್ವಾ ಗದಾಂ ತಾಂ ಚ ಪ್ರೇಷಯಾಮಾಸ ಪಾರ್ಷತೇ||

06049021a ಭಲ್ಲಾನ್ಸುನಿಶಿತಾನ್ಪೀತಾನ್ಸ್ವರ್ಣಪುಂಖಾಂ ಶಿಲಾಶಿತಾನ್|

ಹೇಮವಿಭೂಷಿತ ಗದೆಯನ್ನು ಲಾಘವದಿಂದ ವ್ಯರ್ಥಗೊಳಿಸಿದನು. ಆ ಗದೆಯನ್ನು ವ್ಯರ್ಥಗೊಳಿಸಿ ಪಾರ್ಷತನ ಮೇಲೆ ಹರಿತಾದ, ಶಿಲಾಶಿತ ಸ್ವರ್ಣಪುಂಖ ಭಲ್ಲೆಗಳನ್ನು ಪ್ರಯೋಗಿಸಿದನು.

06049021c ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ||

06049022a ಅಥಾನ್ಯದ್ಧನುರಾದಾಯ ಧೃಷ್ಟದ್ಯುಮ್ನೋ ಮಹಾಮನಾಃ|

06049022c ದ್ರೋಣಂ ಯುಧಿ ಪರಾಕ್ರಮ್ಯ ಶರೈರ್ವಿವ್ಯಾಧ ಪಂಚಭಿಃ||

ಅವು ಅವನ ಕವಚವನ್ನು ಭೇದಿಸಿ ರಕ್ತವನ್ನು ಕುಡಿದವು. ಆಗ ಆಹವದಲ್ಲಿ ಮಹಾಮನಸ್ವಿ ಧೃಷ್ಟದ್ಯುಮ್ನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪರಾಕ್ರಮದಿಂದ ಐದು ಶರಗಳಿಂದ ಹೊಡೆದನು.

06049023a ರುಧಿರಾಕ್ತೌ ತತಸ್ತೌ ತು ಶುಶುಭಾತೇ ನರರ್ಷಭೌ|

06049023c ವಸಂತಸಮಯೇ ರಾಜನ್ಪುಷ್ಪಿತಾವಿವ ಕಿಂಶುಕ||

ರಾಜನ್! ಆಗ ರಕ್ತದಿಂದ ತೋಯ್ದುಹೋಗಿದ್ದ ಅವರಿಬ್ಬರು ನರರ್ಷಭರೂ ವಸಂತಸಮಯದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ಶೋಭಿಸಿದರು.

06049024a ಅಮರ್ಷಿತಸ್ತತೋ ರಾಜನ್ಪರಾಕ್ರಮ್ಯ ಚಮೂಮುಖೇ|

06049024c ದ್ರೋಣೋ ದ್ರುಪದಪುತ್ರಸ್ಯ ಪುನಶ್ಚಿಚ್ಛೇದ ಕಾರ್ಮುಕಂ||

ರಾಜನ್! ಆಗ ಕೋಪಗೊಂಡ ದ್ರೋಣನು ಪರಾಕ್ರಮದಿಂದ ಸೇನಾಮುಖದಲ್ಲಿ ದ್ರುಪದಪುತ್ರನ ಧನುಸ್ಸನ್ನು ಪುನಃ ತುಂಡರಿಸಿದನು.

06049025a ಅಥೈನಂ ಚಿನ್ನಧನ್ವಾನಂ ಶರೈಃ ಸಮ್ನತಪರ್ವಭಿಃ|

06049025c ಅವಾಕಿರದಮೇಯಾತ್ಮಾ ವೃಷ್ಟ್ಯಾ ಮೇಘ ಇವಾಚಲಂ||

ಆಗ ಆ ಧನುಸ್ಸು ಮುರಿದವನನ್ನು ಅಮೇಯಾತ್ಮನು ಸನ್ನತಪರ್ವ ಬಾಣಗಳಿಂದ ಮೋಡವು ಮಳೆಯಿಂದ ಗಿರಿಯನ್ನು ಮುಚ್ಚುವಂತೆ ಮುಚ್ಚಿದನು.

06049026a ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾತಯತ್|

06049026c ಅಥಾಸ್ಯ ಚತುರೋ ವಾಹಾಂಶ್ಚತುರ್ಭಿರ್ನಿಶಿತೈಃ ಶರೈಃ||

ಆಗ ಭಲ್ಲದಿಂದ ಅವನ ಸಾರಥಿಯನ್ನು ರಥದಿಂದ ಬೀಳಿಸಿದನು. ಅವನ ನಾಲ್ಕು ಕುದುರೆಗಳನ್ನೂ ನಾಲ್ಕು ನಿಶಿತ ಶರಗಳಿಂದ ವಧಿಸಿದನು.

06049027a ಪಾತಯಾಮಾಸ ಸಮರೇ ಸಿಂಹನಾದಂ ನನಾದ ಚ|

06049027c ತತೋಽಪರೇಣ ಭಲ್ಲೇನ ಹಸ್ತಾಚ್ಚಾಪಮಥಾಚ್ಛಿನತ್||

ಸಮರದಲ್ಲಿ ಆಗ ಇನ್ನೊಂದು ಭಲ್ಲದಿಂದ ಅವನ ಕೈಯಲ್ಲಿದ್ದ ಧನುಸ್ಸನ್ನು ತುಂಡರಿಸಿ ಸಿಂಹನಾದಗೈದನು.

06049028a ಸ ಚ್ಛಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ|

06049028c ಗದಾಪಾಣಿರವಾರೋಹತ್ ಖ್ಯಾಪಯನ್ಪೌರುಷಂ ಮಹತ್||

ಧನುಸ್ಸು ತುಂಡಾಗಲು, ರಥವನ್ನು ಕಳೆದುಕೊಂಡ, ಅಶ್ವಗಳನ್ನು ಕಳೆದುಕೊಂಡ, ಸಾರಥಿಯನ್ನು ಕಳೆದುಕೊಂಡ ಧೃಷ್ಟದ್ಯುಮ್ನನು ಮಹಾ ಪೌರುಷವನ್ನು ತೋರಿಸುತ್ತಾ ಗದೆಯನ್ನು ಹಿಡಿದು ಇಳಿದುಬಂದನು.

06049029a ತಾಮಸ್ಯ ವಿಶಿಖೈಸ್ತೂರ್ಣಂ ಪಾತಯಾಮಾಸ ಭಾರತ|

06049029c ರಥಾದನವರೂಢಸ್ಯ ತದದ್ಭುತಮಿವಾಭವತ್||

ಭಾರತ! ರಥದಿಂದ ಕೆಳಗಿಳಿಯುತ್ತಿದ್ದಾಗಲೇ ವೇಗವಾಗಿ ಅವನ ಗದೆಯನ್ನೂ ಪುಡಿಮಾಡಿ ಬೀಳಿಸಿದನು. ಅದೊಂದು ಅದ್ಭುತವಾಗಿತ್ತು.

06049030a ತತಃ ಸ ವಿಪುಲಂ ಚರ್ಮ ಶತಚಂದ್ರಂ ಚ ಭಾನುಮತ್|

06049030c ಖಡ್ಗಂ ಚ ವಿಪುಲಂ ದಿವ್ಯಂ ಪ್ರಗೃಹ್ಯ ಸುಭುಜೋ ಬಲೀ||

06049031a ಅಭಿದುದ್ರಾವ ವೇಗೇನ ದ್ರೋಣಸ್ಯ ವಧಕಾಂಕ್ಷಯಾ|

06049031c ಆಮಿಷಾರ್ಥೀ ಯಥಾ ಸಿಂಹೋ ವನೇ ಮತ್ತಮಿವ ದ್ವಿಪಂ||

ಆಗ ಆ ಸುಭುಜ ಬಲಿಯು ವಿಶಾಲವಾಗಿದ್ದ, ನೂರು ಚಂದ್ರರಂತೆ ಪ್ರಕಾಶಮಾನವಾಗಿದ್ದ ಗುರಾಣಿಯನ್ನೂ ವಿಪುಲ ದಿವ್ಯ ಖಡ್ಗವನ್ನೂ ಹಿಡಿದು ವೇಗದಿಂದ ದ್ರೋಣನನ್ನು ವಧಿಸಲು ಇಚ್ಛಿಸಿ, ವನದಲ್ಲಿ ಸಿಂಹವು ಮದಿಸಿದ ಆನೆಯ ಮೇಲೆ ಬೀಳುವಂತೆ ಓಡಿ ಬಂದನು.

06049032a ತತ್ರಾದ್ಭುತಮಪಶ್ಯಾಮ ಭಾರದ್ವಾಜಸ್ಯ ಪೌರುಷಂ|

06049032c ಲಾಘವಂ ಚಾಸ್ತ್ರಯೋಗಂ ಚ ಬಲಂ ಬಾಹ್ವೋಶ್ಚ ಭಾರತ||

ಭಾರತ! ಆಗ ಅಲ್ಲಿ ನಾವು ಭಾರದ್ವಾಜನ ಪೌರುಷವನ್ನೂ, ಲಾಘವವನ್ನೂ, ಅಸ್ತ್ರಯೋಗವನ್ನೂ, ಬಾಹುಗಳ ಬಲವನ್ನೂ ಕಂಡೆವು.

06049033a ಯದೇನಂ ಶರವರ್ಷೇಣ ವಾರಯಾಮಾಸ ಪಾರ್ಷತಂ|

06049033c ನ ಶಶಾಕ ತತೋ ಗಂತುಂ ಬಲವಾನಪಿ ಸಂಯುಗೇ||

ಪಾರ್ಷತನನ್ನು ಶರವರ್ಷಗಳಿಂದ ತಡೆದನು. ಬಲಶಾಲಿಯಾಗಿದ್ದರೂ ಅವನು ಸಂಯುಗದಲ್ಲಿ ಮುಂದುವರೆಯಲು ಶಕ್ತನಾಗಲಿಲ್ಲ.

06049034a ತತ್ರ ಸ್ಥಿತಮಪಶ್ಯಾಮ ಧೃಷ್ಟದ್ಯುಮ್ನಂ ಮಹಾರಥಂ|

06049034c ವಾರಯಾಣಂ ಶರೌಘಾಂಶ್ಚ ಚರ್ಮಣಾ ಕೃತಹಸ್ತವತ್||

ಅಲ್ಲಿ ಮಹಾರಥ ಧೃಷ್ಟದ್ಯುಮ್ನನು ಖಡ್ಗ-ಗುರಾಣಿಗಳನ್ನು ಹಿಡಿದು ಶರಗಳಿಂದ ತಡೆಯಲ್ಪಟ್ಟು ನಿಂತಿರುವುದನ್ನು ಭೀಮಸೇನನು ನೋಡಿದನು.

06049035a ತತೋ ಭೀಮೋ ಮಹಾಬಾಹುಃ ಸಹಸಾಭ್ಯಪತದ್ಬಲೀ|

06049035c ಸಾಹಾಯ್ಯಕಾರೀ ಸಮರೇ ಪಾರ್ಷತಸ್ಯ ಮಹಾತ್ಮನಃ||

ಆಗ ಮಹಾಬಾಹು ಬಲೀ ಭೀಮನು ಸಮರದಲ್ಲಿ ಮಹಾತ್ಮ ಪಾರ್ಷತನಿಗೆ ಸಹಾಯ ಮಾಡಲು ಬೇಗನೇ ಅಲ್ಲಿಗೆ ಧಾವಿಸಿದನು.

06049036a ಸ ದ್ರೋಣಂ ನಿಶಿತೈರ್ಬಾಣೈ ರಾಜನ್ವಿವ್ಯಾಧ ಸಪ್ತಭಿಃ|

06049036c ಪಾರ್ಷತಂ ಚ ತದಾ ತೂರ್ಣಮನ್ಯಮಾರೋಪಯದ್ರಥಂ||

ರಾಜನ್! ಅವನು ದ್ರೋಣನನ್ನು ಏಳು ಬಾಣಗಳಿಂದ ಹೊಡೆದನು ಮತ್ತು ಬೇಗನೆ ಪಾರ್ಷತನನ್ನು ತನ್ನ ರಥದ ಮೇಲೇರಿಸಿಕೊಂಡನು.

06049037a ತತೋ ದುರ್ಯೋಧನೋ ರಾಜಾ ಕಲಿಂಗಂ ಸಮಚೋದಯತ್|

06049037c ಸೈನ್ಯೇನ ಮಹತಾ ಯುಕ್ತಂ ಭಾರದ್ವಾಜಸ್ಯ ರಕ್ಷಣೇ||

ಆಗ ರಾಜಾ ದುರ್ಯೋಧನನು ಭಾರದ್ವಾಜನ ರಕ್ಷಣೆಗೆ ಮಹಾ ಸೇನೆಯಿಂದ ಕೂಡಿದ ಕಲಿಂಗನನ್ನು ಪ್ರಚೋದಿಸಿದನು.

06049038a ತತಃ ಸಾ ಮಹತೀ ಸೇನಾ ಕಲಿಂಗಾನಾಂ ಜನೇಶ್ವರ|

06049038c ಭೀಮಮಭ್ಯುದ್ಯಯೌ ತೂರ್ಣಂ ತವ ಪುತ್ರಸ್ಯ ಶಾಸನಾತ್||

ಆಗ ಜನೇಶ್ವರ! ತಕ್ಷಣವೇ ನಿನ್ನ ಪುತ್ರನ ಶಾಸನದಂತೆ ಕಲಿಂಗರ ಮಹಾಸೇನೆಯು ಭೀಮನನ್ನು ಎದುರಿಸಿತು.

06049039a ಪಾಂಚಾಲ್ಯಮಭಿಸಂತ್ಯಜ್ಯ ದ್ರೋಣೋಽಪಿ ರಥಿನಾಂ ವರಃ|

06049039c ವಿರಾಟದ್ರುಪದೌ ವೃದ್ಧೌ ಯೋಧಯಾಮಾಸ ಸಂಗತೌ|

06049039e ಧೃಷ್ಟದ್ಯುಮ್ನೋಽಪಿ ಸಮರೇ ಧರ್ಮರಾಜಂ ಸಮಭ್ಯಯಾತ್||

ರಥಿಗಳಲ್ಲಿ ಶ್ರೇಷ್ಠನಾದ ದ್ರೋಣನೂ ಕೂಡ ಪಾಂಚಾಲ್ಯನನ್ನು ಬಿಟ್ಟು ವೃದ್ಧರಾದ ವಿರಾಟ-ದ್ರುಪದರ ಒಟ್ಟಿಗೆ ಯುದ್ಧಮಾಡಿದನು. ಧೃಷ್ಟದ್ಯುಮ್ನನೂ ಕೂಡ ಸಮರದಲ್ಲಿ ಧರ್ಮರಾಜನನ್ನು ಸೇರಿದನು.

06049040a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ|

06049040c ಕಲಿಂಗಾನಾಂ ಚ ಸಮರೇ ಭೀಮಸ್ಯ ಚ ಮಹಾತ್ಮನಃ|

06049040e ಜಗತಃ ಪ್ರಕ್ಷಯಕರಂ ಘೋರರೂಪಂ ಭಯಾನಕಂ||

ಆಗ ಸಮರದಲ್ಲಿ ಕಲಿಂಗರು ಮತ್ತು ಮಹಾತ್ಮ ಭೀಮನ ನಡುವೆ ಜಗತ್ತನ್ನೇ ನಾಶಗೊಳಿಸುವಂತಹ ಘೋರರೂಪೀ ಭಯಾನಕ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಧೃಷ್ಟದ್ಯುಮ್ನದ್ರೋಣಯುದ್ಧೇ ಏಕೋನಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಧೃಷ್ಟದ್ಯುಮ್ನದ್ರೋಣಯುದ್ಧ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.

Image result for flowers against white background

Comments are closed.