Bhishma Parva: Chapter 2

ಭೀಷ್ಮ ಪರ್ವ: ಜಂಬೂಖಂಡವಿನಿರ್ಮಾಣ ಪರ್ವ

ವ್ಯಾಸದರ್ಶನ

ವ್ಯಾಸನು ಸಂಜಯನಿಗೆ ದಿವ್ಯದೃಷ್ಠಿಯನ್ನಿತ್ತು ಧೃತರಾಷ್ಟ್ರನಿಗೆ ಯುದ್ಧದ ವರ್ಣನೆಯನ್ನು ಮಾಡಲು ಹೇಳಿದುದು (೧-೧೪). ಯುದ್ಧದಲ್ಲಿ ಮಹಾಕ್ಷಯವನ್ನು ಸೂಚಿಸುವ ಭಯಾನಕ ನಿಮಿತ್ತಗಳ ಕುರಿತು ವ್ಯಾಸನು ಹೇಳಿದುದು (೧೫-೩೩).

06002001 ವೈಶಂಪಾಯನ ಉವಾಚ|

06002001a ತತಃ ಪೂರ್ವಾಪರೇ ಸಂಧ್ಯೇ ಸಮೀಕ್ಷ್ಯ ಭಗವಾನೃಷಿಃ|

06002001c ಸರ್ವವೇದವಿದಾಂ ಶ್ರೇಷ್ಠೋ ವ್ಯಾಸಃ ಸತ್ಯವತೀಸುತಃ||

06002002a ಭವಿಷ್ಯತಿ ರಣೇ ಘೋರೇ ಭರತಾನಾಂ ಪಿತಾಮಹಃ|

06002002c ಪ್ರತ್ಯಕ್ಷದರ್ಶೀ ಭಗವಾನ್ಭೂತಭವ್ಯಭವಿಷ್ಯವಿತ್||

06002003a ವೈಚಿತ್ರವೀರ್ಯಂ ರಾಜಾನಂ ಸ ರಹಸ್ಯಂ ಬ್ರವೀದಿದಂ|

06002003c ಶೋಚಂತಮಾರ್ತಂ ಧ್ಯಾಯಂತಂ ಪುತ್ರಾಣಾಮನಯಂ ತದಾ||

ವೈಶಂಪಾಯನನು ಹೇಳಿದನು: “ಹೀಗೆ ಪೂರ್ವ-ಪಶ್ಚಿಮ ಮುಖಗಳಾಗಿ ಸೇರಿದ್ದ ಅವರನ್ನು ನೋಡಿ ಭಗವಾನ್ ಋಷಿ, ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸ ಸತ್ಯವತೀ ಸುತ, ಭರತರ ಪಿತಾಮಹ, ಭೂತ-ಭವ್ಯ-ಭವಿಷ್ಯಗಳನ್ನು ತಿಳಿದಿದ್ದ, ಘೋರ ರಣವು ನಡೆಯಲಿದೆಯೆಂದು ಪ್ರತ್ಯಕ್ಷವಾಗಿ ಕಂಡ ಭಗವಾನನು ತನ್ನ ಪುತ್ರರ ಅನ್ಯಾಯದ ಕುರಿತು ಯೋಚಿಸಿ ಶೋಕಿಸಿ ಆರ್ತನಾಗಿರುವ ರಾಜ ವೈಚಿತ್ರವೀರ್ಯನಿಗೆ ರಹಸ್ಯದಲ್ಲಿ ಇದನ್ನು ಹೇಳಿದನು.

06002004 ವ್ಯಾಸ ಉವಾಚ|

06002004a ರಾಜನ್ಪರೀತಕಾಲಾಸ್ತೇ ಪುತ್ರಾಶ್ಚಾನ್ಯೇ ಚ ಭೂಮಿಪಾಃ|

06002004c ತೇ ಹನಿಷ್ಯಂತಿ ಸಂಗ್ರಾಮೇ ಸಮಾಸಾದ್ಯೇತರೇತರಂ||

ವ್ಯಾಸನು ಹೇಳಿದನು: “ರಾಜನ್! ನಿನ್ನ ಪುತ್ರರು ಮತ್ತು ಅನ್ಯ ಭೂಮಿಪರ ಕಾಲವು ಬಂದಾಗಿದೆ. ಅವರು ಸಂಗ್ರಾಮದಲ್ಲಿ ಪರಸ್ಪರರರನ್ನು ಕೊಲ್ಲುತ್ತಾರೆ.

06002005a ತೇಷು ಕಾಲಪರೀತೇಷು ವಿನಶ್ಯತ್ಸು ಚ ಭಾರತ|

06002005c ಕಾಲಪರ್ಯಾಯಮಾಜ್ಞಾಯ ಮಾ ಸ್ಮ ಶೋಕೇ ಮನಃ ಕೃಥಾಃ||

ಭಾರತ! ಕಾಲದ ಬದಲಾವಣೆಗಳಿಂದ ಆಗುವ ಈ ವಿನಾಶವನ್ನು ಕಾಲಪರ್ಯಾಯವೆಂದು ತಿಳಿದು ಮನಸ್ಸಿನಲ್ಲಿ ಶೋಕಪಡಬೇಡ.

06002006a ಯದಿ ತ್ವಿಚ್ಛಸಿ ಸಂಗ್ರಾಮೇ ದ್ರಷ್ಟುಮೇನಂ ವಿಶಾಂ ಪತೇ|

06002006c ಚಕ್ಷುರ್ದದಾನಿ ತೇ ಹಂತ ಯುದ್ಧಮೇತನ್ನಿಶಾಮಯ||

ವಿಶಾಂಪತೇ! ಈ ಸಂಗ್ರಾಮವನ್ನು ನೋಡಲು ಬಯಸುವೆಯಾದರೆ ನಿನಗೆ ಕಣ್ಣುಗಳನ್ನು ಕೊಡುತ್ತೇನೆ. ಅದನ್ನು ನೋಡು!”

06002007 ಧೃತರಾಷ್ಟ್ರ ಉವಾಚ|

06002007a ನ ರೋಚಯೇ ಜ್ಞಾತಿವಧಂ ದ್ರಷ್ಟುಂ ಬ್ರಹ್ಮರ್ಷಿಸತ್ತಮ|

06002007c ಯುದ್ಧಮೇತತ್ತ್ವಶೇಷೇಣ ಶೃಣುಯಾನ್ತವ ತೇಜಸಾ||

ಧೃತರಾಷ್ಟ್ರನು ಹೇಳಿದನು: “ಬ್ರಹ್ಮರ್ಷಿಸತ್ತಮ! ಜ್ಞಾತಿವಧೆಯನ್ನು ನೋಡಲು ನನಗೆ ಇಷ್ಟವಿಲ್ಲ. ಆದರೆ ನಿನ್ನ ತೇಜಸ್ಸಿನಿಂದ ಈ ಯುದ್ಧದ ಕುರಿತು ಯಾವುದನ್ನೂ ಬಿಟ್ಟುಹೋಗದ ಹಾಗೆ ಕೇಳುತ್ತೇನೆ.””

06002008 ವೈಶಂಪಾಯನ ಉವಾಚ|

06002008a ತಸ್ಮಿನ್ನನಿಚ್ಛತಿ ದ್ರಷ್ಟುಂ ಸಂಗ್ರಾಮಂ ಶ್ರೋತುಮಿಚ್ಛತಿ|

06002008c ವರಾಣಾಮೀಶ್ವರೋ ದಾತಾ ಸಂಜಯಾಯ ವರಂ ದದೌ||

ವೈಶಂಪಾಯನನು ಹೇಳಿದನು: “ಅವನು ಸಂಗ್ರಾಮವನ್ನು ನೋಡಲು ಇಚ್ಛಿಸುವುದಿಲ್ಲ. ಕೇಳಲು ಬಯಸುತ್ತಾನೆ ಎಂದು ತಿಳಿದ ಈಶ್ವರ ವ್ಯಾಸನು ಸಂಜಯನಿಗೆ ವರವನ್ನಿತ್ತನು.

06002009 ವ್ಯಾಸ ಉವಾಚ|

06002009a ಏಷ ತೇ ಸಂಜಯೋ ರಾಜನ್ಯುದ್ಧಮೇತದ್ವದಿಷ್ಯತಿ|

06002009c ಏತಸ್ಯ ಸರ್ವಂ ಸಂಗ್ರಾಮೇ ನಪರೋಕ್ಷಂ ಭವಿಷ್ಯತಿ||

ವ್ಯಾಸನು ಹೇಳಿದನು: “ರಾಜನ್! ಈ ಸಂಜಯನು ನಿನಗೆ ಯುದ್ಧದಲ್ಲಿ ನಡೆಯುವ ಸಕಲ ಸಮಾಚಾರಗಳನ್ನೂ ಹೇಳುತ್ತಾನೆ. ಸಂಗ್ರಾಮದಲ್ಲಿ ಎಲ್ಲವೂ ಇವನಿಗೆ ಕಾಣುವಂತಾಗುತ್ತದೆ.

06002010a ಚಕ್ಷುಷಾ ಸಂಜಯೋ ರಾಜನ್ದಿವ್ಯೇನೈಷ ಸಮನ್ವಿತಃ|

06002010c ಕಥಯಿಷ್ಯತಿ ತೇ ಯುದ್ಧಂ ಸರ್ವಜ್ಞಶ್ಚ ಭವಿಷ್ಯತಿ||

ರಾಜನ್! ದಿವ್ಯದೃಷ್ಟಿಯಿಂದ ಸಮನ್ವಿತನಾದ ಈ ಸಂಜಯನು ಸರ್ವಜ್ಞನಾಗುತ್ತಾನೆ ಮತ್ತು ನಿನಗೆ ಯುದ್ಧದ ಎಲ್ಲವನ್ನೂ ಹೇಳುತ್ತಾನೆ.

06002011a ಪ್ರಕಾಶಂ ವಾ ರಹಸ್ಯಂ ವಾ ರಾತ್ರೌ ವಾ ಯದಿ ವಾ ದಿವಾ|

06002011c ಮನಸಾ ಚಿಂತಿತಮಪಿ ಸರ್ವಂ ವೇತ್ಸ್ಯತಿ ಸಂಜಯಃ||

ಬಹಿರಂಗವಾಗಿರಲಿ ಅಥವಾ ರಹಸ್ಯವಾಗಿರಲಿ, ರಾತ್ರಿಯಾಗಿರಲಿ ಅಥವಾ ದಿನವಾಗಿರಲಿ, ಮನಸ್ಸಿನಲ್ಲಿ ಯೋಚಿಸಿದ್ದು ಕೂಡ ಏಲ್ಲವೂ ಸಂಜಯನಿಗೆ ತಿಳಿಯುತ್ತದೆ.

06002012a ನೈನಂ ಶಸ್ತ್ರಾಣಿ ಭೇತ್ಸ್ಯಂತಿ ನೈನಂ ಬಾಧಿಷ್ಯತೇ ಶ್ರಮಃ|

06002012c ಗಾವಲ್ಗಣಿರಯಂ ಜೀವನ್ಯುದ್ಧಾದಸ್ಮಾದ್ವಿಮೋಕ್ಷ್ಯತೇ||

ಇವನನ್ನು ಶಸ್ತ್ರಗಳು ಭೇದಿಸುವುದಿಲ್ಲ. ಇವನನ್ನು ಶ್ರಮವು ಬಾಧಿಸುವುದಿಲ್ಲ. ಈ ಗಾವಲ್ಗಣಿಯು ಜೀವಂತನಾಗಿಯೇ ಯುದ್ಧದಿಂದ ಆಚೆ ಬರುತ್ತಾನೆ.

06002013a ಅಹಂ ಚ ಕೀರ್ತಿಮೇತೇಷಾಂ ಕುರೂಣಾಂ ಭರತರ್ಷಭ|

06002013c ಪಾಂಡವಾನಾಂ ಚ ಸರ್ವೇಷಾಂ ಪ್ರಥಯಿಷ್ಯಾಮಿ ಮಾ ಶುಚಃ||

ಭರತರ್ಷಭ! ನಾನಾದರೋ ಈ ಕುರುಗಳ ಮತ್ತು ಪಾಂಡವರ ಎಲ್ಲರ ಕೀರ್ತಿಯನ್ನು ಪಸರಿಸುತ್ತೇನೆ. ಶೋಕಿಸಬೇಡ.

06002014a ದಿಷ್ಟಮೇತತ್ಪುರಾ ಚೈವ ನಾತ್ರ ಶೋಚಿತುಮರ್ಹಸಿ[1]|

06002014c ನ ಚೈವ ಶಕ್ಯಂ ಸಮ್ಯಂತುಂ ಯತೋ ಧರ್ಮಸ್ತತೋ ಜಯಃ||

ಇದು ಮೊದಲೇ ದೈವನಿಶ್ಚಯವಾದುದು. ಇದರ ಕುರಿತು ಶೋಕಿಸಬಾರದು. ಅದನ್ನು ತಡೆಯಲು ಶಕ್ಯವಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.””

06002015 ವೈಶಂಪಾಯನ ಉವಾಚ|

06002015a ಏವಮುಕ್ತ್ವಾ ಸ ಭಗವಾನ್ಕುರೂಣಾಂ ಪ್ರಪಿತಾಮಹಃ|

06002015c ಪುನರೇವ ಮಹಾಬಾಹುಂ ಧೃತರಾಷ್ಟ್ರಂ ಉವಾಚ ಹ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಕುರುಗಳ ಪ್ರಪಿತಾಮಹ ಭಗವಾನನು ಪುನಃ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು:

06002016a ಇಹ ಯುದ್ಧೇ ಮಹಾರಾಜ ಭವಿಷ್ಯತಿ ಮಹಾನ್ ಕ್ಷಯಃ|

06002016c ಯಥೇಮಾನಿ ನಿಮಿತ್ತಾನಿ ಭಯಾಯಾದ್ಯೋಪಲಕ್ಷಯೇ||

“ಮಹಾರಾಜ! ಭಯವನ್ನು ಸೂಚಿಸುವ ಈ ನಿಮಿತ್ತಗಳ ಪ್ರಕಾರ ಈ ಯುದ್ಧದಲ್ಲಿ ಮಹಾ ಕ್ಷಯವುಂಟಾಗುತ್ತದೆ.

06002017a ಶ್ಯೇನಾ ಗೃಧ್ರಾಶ್ಚ ಕಾಕಾಶ್ಚ ಕಂಕಾಶ್ಚ ಸಹಿತಾ ಬಲೈಃ|

06002017c ಸಂಪತಂತಿ ವನಾಂತೇಷು ಸಮವಾಯಾಂಶ್ಚ ಕುರ್ವತೇ||

ಗಿಡುಗ, ಹದ್ದು, ಕಾಗೆ, ಮತ್ತು ಕಂಕಗಳು ಗುಂಪುಗುಂಪಾಗಿ ಮರಗಳ ಮೇಲೆ ಬಂದಿಳಿಯುತ್ತಿವೆ ಮತ್ತು ಕೆಳಗೆ ನೋಡುತ್ತಾ ಕಾಯುತ್ತಿವೆ.

06002018a ಅತ್ಯುಗ್ರಂ ಚ ಪ್ರಪಶ್ಯಂತಿ ಯುದ್ಧಮಾನಂದಿನೋ ದ್ವಿಜಾಃ|

06002018c ಕ್ರವ್ಯಾದಾ ಭಕ್ಷಯಿಷ್ಯಂತಿ ಮಾಂಸಾನಿ ಗಜವಾಜಿನಾಂ||

ಉಗ್ರವಾದವುಗಳು ಯುದ್ಧದಲ್ಲಿ ಕುದುರೆ ಆನೆಗಳ ಮಾಂಸವನ್ನು ಭಕ್ಷಿಸಲು ಕಾಯುತ್ತ ಕುಳಿತಿವೆ.

06002019a ಖಟಾಖಟೇತಿ ವಾಶಂತೋ ಭೈರವಂ ಭಯವೇದಿನಃ|

06002019c ಕಹ್ವಾಃ ಪ್ರಯಾಂತಿ ಮಧ್ಯೇನ ದಕ್ಷಿಣಾಮಭಿತೋ ದಿಶಂ||

ಖಟಾ ಖಟಾ ಎಂದು ಭೈರವ ಭಯವೇದನೆಯನ್ನುಂಟುಮಾಡುವ ಕೂಗನ್ನು ಕೂಗುತ್ತಾ ಕಾಗೆಗಳು ಮಧ್ಯದಿಂದ ದಕ್ಷಿಣಾಭಿಮುಖವಾಗಿ ಹಾರಿಹೋಗುತ್ತಿವೆ.

06002020a ಉಭೇ ಪೂರ್ವಾಪರೇ ಸಂಧ್ಯೇ ನಿತ್ಯಂ ಪಶ್ಯಾಮಿ ಭಾರತ|

06002020c ಉದಯಾಸ್ತಮನೇ ಸೂರ್ಯಂ ಕಬಂಧೈಃ ಪರಿವಾರಿತಂ||

ಭಾರತ! ಬೆಳಿಗ್ಗೆ ಮತ್ತು ಸಂಧ್ಯಾಕಾಲಗಳೆರಡೂ ಹೊತ್ತು ನಿತ್ಯವೂ ನಾನು ಉದಯ-ಅಸ್ತಮಾನಗಳ ವೇಳೆಗಳಲ್ಲಿ ಸೂರ್ಯನು ಕಬಂಧ (ತಲೆಯಿಲ್ಲದ ದೇಹ) ಗಳಿಂದ ಸುತ್ತುವರೆದಿದ್ದುದನ್ನು ನೋಡುತ್ತಿದ್ದೇನೆ.

06002021a ಶ್ವೇತಲೋಹಿತಪರ್ಯಂತಾಃ ಕೃಷ್ಣಗ್ರೀವಾಃ ಸವಿದ್ಯುತಃ|

06002021c ತ್ರಿವರ್ಣಾಃ ಪರಿಘಾಃ ಸಂಧೌ ಭಾನುಮಾವಾರಯಂತ್ಯುತ||

ಬಿಳಿ ಮತ್ತು ಕೆಂಪು ರೆಕ್ಕೆಗಳು ಹಾಗೂ ಕಪ್ಪು ಕೊರಳು - ಈ ಮೂರು ವರ್ಣದ ಪಕ್ಷಿಗಳು ಸಂಧ್ಯಾಸಮಯದಲ್ಲಿ ಸೂರ್ಯನನ್ನು ಗುಂಪಾಗಿ ಮುತ್ತುತ್ತಿವೆ.

06002022a ಜ್ವಲಿತಾರ್ಕೇಂದುನಕ್ಷತ್ರಂ ನಿರ್ವಿಶೇಷದಿನಕ್ಷಪಂ|

06002022c ಅಹೋರಾತ್ರಂ ಮಯಾ ದೃಷ್ಟಂ ತತ್ಕ್ಷಯಾಯ ಭವಿಷ್ಯತಿ||

ಪ್ರಜ್ವಲಿಸುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ವಿಶೇಷ ದಿನಗಳಲ್ಲದಿದ್ದರೂ ನಾನು ಆಹೋ ರಾತ್ರಿ ನೋಡುತ್ತಿದ್ದೇನೆ. ಇದರಿಂದ ಕ್ಷಯವಾಗುತ್ತದೆ.

06002023a ಅಲಕ್ಷ್ಯಃ ಪ್ರಭಯಾ ಹೀನಃ ಪೌರ್ಣಮಾಸೀಂ ಚ ಕಾರ್ತ್ತಿಕೀಂ|

06002023c ಚಂದ್ರೋಽಭೂದಗ್ನಿವರ್ಣಶ್ಚ ಸಮವರ್ಣೇ ನಭಸ್ತಲೇ||

ಕಾರ್ತೀಕ ಪೂರ್ಣಿಮೆಯಂದೂ ಪ್ರಭೆಯನ್ನು ಕಳೆದುಕೊಂಡ ಚಂದ್ರನು ಕಾಣದಂತಾಗಿದ್ದಾನೆ. ಅವನು ನಭಸ್ತಲದಲ್ಲಿ ಅಗ್ನಿವರ್ಣದ ಮಂಡಲದಲ್ಲಿ ಕಾಣುತ್ತಾನೆ.

06002024a ಸ್ವಪ್ಸ್ಯಂತಿ ನಿಹತಾ ವೀರಾ ಭೂಮಿಮಾವೃತ್ಯ ಪಾರ್ಥಿವಾಃ|

06002024c ರಾಜಾನೋ ರಾಜಪುತ್ರಾಶ್ಚ ಶೂರಾಃ ಪರಿಘಬಾಹವಃ||

ಪರಿಘದಂಥಹ ಬಾಹುಗಳಿಂದ ವೀರ ಪಾರ್ಥಿವರು, ರಾಜರು, ರಾಜಪುತ್ರರು, ಶೂರರು ಭೂಮಿಯಲ್ಲಿ ಹತರಾಗಿ ಮಲಗುತ್ತಾರೆ.

06002025a ಅಂತರಿಕ್ಷೇ ವರಾಹಸ್ಯ ವೃಷದಂಶಸ್ಯ ಚೋಭಯೋಃ|

06002025c ಪ್ರಣಾದಂ ಯುಧ್ಯತೋ ರಾತ್ರೌ ರೌದ್ರಂ ನಿತ್ಯಂ ಪ್ರಲಕ್ಷಯೇ||

ನಿತ್ಯವೂ ರಾತ್ರಿಯಲ್ಲಿ ಅಂತರಿಕ್ಷದಲ್ಲಿ ವರಾಹ ವೃಷದಂಶಗಳೀರ್ವರ ರೌದ್ರ ರೋದನೆಯು ಕ್ಷಯವನ್ನು ಸೂಚಿಸುತ್ತದೆ.

06002026a ದೇವತಾಪ್ರತಿಮಾಶ್ಚಾಪಿ ಕಂಪಂತಿ ಚ ಹಸಂತಿ ಚ|

06002026c ವಮಂತಿ ರುಧಿರಂ ಚಾಸ್ಯೈಃ ಸ್ವಿದ್ಯಂತಿ ಪ್ರಪತಂತಿ ಚ||

ದೇವತೆಗಳ ಪ್ರತಿಮೆಗಳೂ ಕೂಡ ಅಲುಗಾಡುತ್ತವೆ ಮತ್ತು ನಗುತ್ತವೆ. ಕೆಲವೊಮ್ಮೆ ರಕ್ತವನ್ನು ಕಾರುತ್ತವೆ, ಮುಕ್ಕರಿಸಿ ಬೀಳುತ್ತಿವೆ.

06002027a ಅನಾಹತಾ ದುಂದುಭಯಃ ಪ್ರಣದಂತಿ ವಿಶಾಂ ಪತೇ|

06002027c ಅಯುಕ್ತಾಶ್ಚ ಪ್ರವರ್ತಂತೇ ಕ್ಷತ್ರಿಯಾಣಾಂ ಮಹಾರಥಾಃ||

ವಿಶಾಂಪತೇ! ಬಾರಿಸದೆಯೇ ನಗಾರಿಗಳು ಶಬ್ಧಮಾಡುತ್ತಿವೆ. ಕ್ಷತ್ರಿಯರ ಮಹಾರಥಗಳು ಕುದುರೆಗಳನ್ನು ಕಟ್ಟದೆಯೇ ನಡೆಯುತ್ತಿವೆ.

06002028a ಕೋಕಿಲಾಃ ಶತಪತ್ರಾಶ್ಚ ಚಾಷಾ ಭಾಸಾಃ ಶುಕಾಸ್ತಥಾ|

06002028c ಸಾರಸಾಶ್ಚ ಮಯೂರಾಶ್ಚ ವಾಚೋ ಮುಂಚಂತಿ ದಾರುಣಾಃ||

ಕೋಕಿಲಗಳು, ಮರಕುಟುಕಗಳು, ನೀರು ಕಾರುಂಡೆಗಳು, ಗಿಳಿಗಳು, ಸಾರಸಗಳು, ನವಿಲುಗಳು ದಾರುಣವಾಗಿ ಕೂಗುತ್ತಿವೆ.

06002029a ಗೃಹೀತಶಸ್ತ್ರಾಭರಣಾ ವರ್ಮಿಣೋ ವಾಜಿಪೃಷ್ಠಗಾಃ|

06002029c ಅರುಣೋದಯೇಷು ದೃಶ್ಯಂತೇ ಶತಶಃ ಶಲಭವ್ರಜಾಃ||

ಶಸ್ತ್ರಾಭರಣಗಳನ್ನು ಹಿಡಿದ, ಕವಚಧಾರಿಗಳು ಕುದುರೆಗಳ ಮೇಲೆ ಇರುತ್ತಾರೆ. ಅರುಣೋದಯದಲ್ಲಿ ನೂರಾರು ಚಿಟ್ಟೆಗಳು ಕಾಣುತ್ತವೆ.

06002030a ಉಭೇ ಸಂಧ್ಯೇ ಪ್ರಕಾಶೇತೇ ದಿಶಾಂ ದಾಹಸಮನ್ವಿತೇ|

06002030c ಆಸೀದ್ರುಧಿರವರ್ಷಂ ಚ ಅಸ್ಥಿವರ್ಷಂ ಚ ಭಾರತ||

ಭಾರತ! ಎರಡೂ ಸಂಧ್ಯೆಗಳಲ್ಲಿ ಪ್ರಕಾಶಿಸುವ ದಿಕ್ಕುಗಳು ಬಾಯಾರಿಕೆಗೊಂಡಿವೆಯೋ ಎನ್ನುವಂತೆ ರಕ್ತ ಮತ್ತು ಎಲುಬುಗಳ ಮಳೆಯಾಗುತ್ತಿವೆ.

06002031a ಯಾ ಚೈಷಾ ವಿಶ್ರುತಾ ರಾಜಂಸ್ತ್ರೈಲೋಕ್ಯೇ ಸಾಧುಸಮ್ಮತಾ|

06002031c ಅರುಂಧತೀ ತಯಾಪ್ಯೇಷ ವಸಿಷ್ಠಃ ಪೃಷ್ಠತಃ ಕೃತಃ||

ರಾಜನ್! ತ್ರೈಲೋಕ್ಯಗಳಲ್ಲಿ ಸಾಧುಸಮ್ಮತಳಾದ ಅರುಂಧತಿಯು ವಸಿಷ್ಠನನ್ನು ಹಿಂದೆ ಹಾಕಿದಳೆಂದು ತೋರುತ್ತಿದೆ.

06002032a ರೋಹಿಣೀಂ ಪೀಡಯನ್ನೇಷ ಸ್ಥಿತೋ ರಾಜನ್ ಶನೈಶ್ಚರಃ|

06002032c ವ್ಯಾವೃತ್ತಂ ಲಕ್ಷ್ಮ ಸೋಮಸ್ಯ ಭವಿಷ್ಯತಿ ಮಹದ್ಭಯಂ||

ರಾಜನ್! ರೋಹಿಣಿಯನ್ನು ಪೀಡಿಸುತ್ತಿರುವಂತೆ ಶನೈಶ್ಚರನು ನಿಂತಿದ್ದಾನೆ. ಚಂದ್ರನ ಲಕ್ಷಣವಾಗಿರುವ ಜಿಂಕೆಯು ತನ್ನ ಸ್ಥಾನವನ್ನು ತಪ್ಪಿ ಮಹಾಭಯವುಂಟಾಗಲಿದೆ.

06002033a ಅನಭ್ರೇ ಚ ಮಹಾಘೋರಂ ಸ್ತನಿತಂ ಶ್ರೂಯತೇಽನಿಶಂ|

06002033c ವಾಹನಾನಾಂ ಚ ರುದತಾಂ ಪ್ರಪತಂತ್ಯಶ್ರುಬಿಂದವಃ||

ಮೋಡಗಳಿಲ್ಲದಿದ್ದರೂ ಆಕಾಶದಲ್ಲಿ ಮಹಾಘೋರ ಶಬ್ಧವು ಕೇಳಿಬರುತ್ತಿದೆ. ವಾಹನ ಪ್ರಾಣಿಗಳೆಲ್ಲವೂ ಅಳುತ್ತಾ ಕಣ್ಣೀರನ್ನು ಬೀಳಿಸುತ್ತಿವೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಶ್ರೀವೇದವ್ಯಾಸದರ್ಶನೇ ದ್ವಿತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಶ್ರೀವೇದವ್ಯಾಸದರ್ಶನ ಎನ್ನುವ ಎರಡನೇ ಅಧ್ಯಾಯವು.

Image result for indian motifs earth

[1] ದಿಷ್ಟಮೇತನ್ನರವ್ಯಾಘ್ರ ನಾಭಿಶೋಚಿತುಮರ್ಹಸಿ| ಎಂಬ ಪಾಠಾಂತರವಿದೆ [ಭಾರತ ದರ್ಶನ, ಸಂಪುಟ ೧೨, ಪುಟಸಂಖ್ಯೆ ೧೧].

Comments are closed.