Bhishma Parva: Chapter 113

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೧೩

ಭೀಷ್ಮಪರಾಕ್ರಮ (೧-೪೯).

06113001 ಸಂಜಯ ಉವಾಚ|

06113001a ಏವಂ ವ್ಯೂಢೇಷ್ವನೀಕೇಷು ಭೂಯಿಷ್ಠಮನುವರ್ತಿಷು|

06113001c ಬ್ರಹ್ಮಲೋಕಪರಾಃ ಸರ್ವೇ ಸಮಪದ್ಯಂತ ಭಾರತ||

ಸಂಜಯನು ಹೇಳಿದನು: “ಭಾರತ! ಈ ರೀತಿ ವ್ಯೂಹಗೊಂಡ ಸೇನೆಗಳು ಪಲಾಯನ ಮಾಡದೇ ನಿಂತುಕೊಂಡು ಎಲ್ಲರೂ ಬ್ರಹ್ಮಲೋಕಪರರಾಗಿ ಸೇರಿದ್ದರು.

06113002a ನ ಹ್ಯನೀಕಮನೀಕೇನ ಸಮಸಜ್ಜತ ಸಂಕುಲೇ|

06113002c ನ ರಥಾ ರಥಿಭಿಃ ಸಾರ್ಧಂ ನ ಪದಾತಾಃ ಪದಾತಿಭಿಃ||

06113003a ಅಶ್ವಾ ನಾಶ್ವೈರಯುಧ್ಯಂತ ನ ಗಜಾ ಗಜಯೋಧಿಭಿಃ|

06113003c ಮಹಾನ್ವ್ಯತಿಕರೋ ರೌದ್ರಃ ಸೇನಯೋಃ ಸಮಪದ್ಯತ||

ಆಗ ಸೇನೆ ಸೇನೆಗಳೊಡನೆ ಸಂಕುಲಯುದ್ಧವು ಪ್ರಾರಂಭವಾಯಿತು. ರಥಿಕರು ರಥಿಕರೊಡನೆ, ಪದಾತಿಗಳು ಪದಾತಿಗಳೊಡನೆ, ಅಶ್ವಯೋಧರು ಅಶ್ವಯೋಧರೊಡನೆ ಮತ್ತು ಗಜಯೋಧರು ಗಜಯೋಧರೊಡನೆ ಯುದ್ಧಮಾಡಲಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಸೇನೆಗಳ ಮಧ್ಯೆ ಮಹಾ ರೌದ್ರ ಯುದ್ಧವುಂಟಾಯಿತು.

06113004a ನರನಾಗರಥೇಷ್ವೇವಂ ವ್ಯವಕೀರ್ಣೇಷು ಸರ್ವಶಃ|

06113004c ಕ್ಷಯೇ ತಸ್ಮಿನ್ಮಹಾರೌದ್ರೇ ನಿರ್ವಿಶೇಷಮಜಾಯತ||

ಎಲ್ಲೆಡೆಯಲ್ಲಿಯೂ ಚದುರಿಹೋಗಿದ್ದ ನರ-ರಥ-ಅಶ್ವ-ಗಜಸೇನೆಗಳ ನಡುವೆ ನಡೆದ ಆ ಮಹಾರೌದ್ರ ಕ್ಷಯಕಾರಕ ಯುದ್ಧದಲ್ಲಿ ಪರಸ್ಪರರ ನಡುವೆ ವ್ಯತ್ಯಾಸವೇ ಇಲ್ಲದಂತಾಯಿತು.

06113005a ತತಃ ಶಲ್ಯಃ ಕೃಪಶ್ಚೈವ ಚಿತ್ರಸೇನಶ್ಚ ಭಾರತ|

06113005c ದುಃಶಾಸನೋ ವಿಕರ್ಣಶ್ಚ ರಥಾನಾಸ್ಥಾಯ ಸತ್ವರಾಃ|

06113005e ಪಾಂಡವಾನಾಂ ರಣೇ ಶೂರಾ ಧ್ವಜಿನೀಂ ಸಮಕಂಪಯನ್||

ಆಗ ಭಾರತ! ಶೂರರಾದ ಶಲ್ಯ, ಕೃಪ, ಚಿತ್ರಸೇನ, ದುಃಶಾಸನ, ವಿಕರ್ಣರು ಕಾಂತಿಯುಕ್ತ ರಥಗಳನ್ನೇರಿ ರಣದಲ್ಲಿ ಪಾಂಡವರ ಸೇನೆಗಳನ್ನು ನಡುಗಿಸಿದರು.

06113006a ಸಾ ವಧ್ಯಮಾನಾ ಸಮರೇ ಪಾಂಡುಸೇನಾ ಮಹಾತ್ಮಭಿಃ|

06113006c ತ್ರಾತಾರಂ ನಾಧ್ಯಗಚ್ಛದ್ವೈ ಮಜ್ಜಮಾನೇವ ನೌರ್ಜಲೇ||

ಆ ಮಹಾತ್ಮರಿಂದ ವಧಿಸಲ್ಪಡುತ್ತಿದ್ದ ಪಾಂಡವಸೇನೆಯು ಚಂಡಮಾರುತಕ್ಕೆ ಸಿಲುಕಿ ನೀರಿನ ಮೇಲಿರುವ ದೋಣಿಯು ಎಲ್ಲೆಲ್ಲೋ ಸೆಳೆದೊಯ್ಯಲ್ಪಡುವಂತೆ ದಿಕ್ಕುಪಾಲಾಯಿತು.

06113007a ಯಥಾ ಹಿ ಶೈಶಿರಃ ಕಾಲೋ ಗವಾಂ ಮರ್ಮಾಣಿ ಕೃಂತತಿ|

06113007c ತಥಾ ಪಾಂಡುಸುತಾನಾಂ ವೈ ಭೀಷ್ಮೋ ಮರ್ಮಾಣ್ಯಕೃಂತತ||

ಹೇಗೆ ಶಿಶಿರ ಋತುವಿನ ಛಳಿಯು ಗೋವುಗಳ ಮರ್ಮಾಂಗಗಳನ್ನು ಕತ್ತರಿಸುವುದೋ ಹಾಗೆ ಭೀಷ್ಮನು ಪಾಂಡುಸುತರ ಮರ್ಮಾಂಗಗಳನ್ನು ಕತ್ತರಿಸುತ್ತಿದ್ದನು.

06113008a ಅತೀವ ತವ ಸೈನ್ಯಸ್ಯ ಪಾರ್ಥೇನ ಚ ಮಹಾತ್ಮನಾ|

06113008c ನಗಮೇಘಪ್ರತೀಕಾಶಾಃ ಪಾತಿತಾ ಬಹುಧಾ ಗಜಾಃ||

ಹಾಗೆಯೇ ನಿನ್ನ ಸೇನೆಯಲ್ಲಿಯೂ ಸಹ ಮಹಾತ್ಮ ಪಾರ್ಥನು ದೊಡ್ಡ ದೊಡ್ಡ ಮೋಡಗಳಂತಿದ್ದ ಬಹಳಷ್ಟು ಆನೆಗಳನ್ನು ಬೀಳಿಸಿದನು.

06113009a ಮೃದ್ಯಮಾನಾಶ್ಚ ದೃಶ್ಯಂತೇ ಪಾರ್ಥೇನ ನರಯೂಥಪಾಃ|

06113009c ಇಷುಭಿಸ್ತಾಡ್ಯಮಾನಾಶ್ಚ ನಾರಾಚೈಶ್ಚ ಸಹಸ್ರಶಃ||

ಪಾರ್ಥನು ಸಹಸ್ರಾರು ನಾರಾಚ ಬಾಣಗಳಿಂದ ಹೊಡೆದು ನರಯೂಥಪರನ್ನು ಮಣ್ಣುಮುಕ್ಕಿಸಿದುದು ಕಾಣುತ್ತಿತ್ತು.

06113010a ಪೇತುರಾರ್ತಸ್ವರಂ ಕೃತ್ವಾ ತತ್ರ ತತ್ರ ಮಹಾಗಜಾಃ|

06113010c ಆಬದ್ಧಾಭರಣೈಃ ಕಾಯೈರ್ನಿಹತಾನಾಂ ಮಹಾತ್ಮನಾಂ||

06113011a ಚನ್ನಮಾಯೋಧನಂ ರೇಜೇ ಶಿರೋಭಿಶ್ಚ ಸಕುಂಡಲೈಃ|

06113011c ತಸ್ಮಿನ್ನತಿಮಹಾಭೀಮೇ ರಾಜನ್ವೀರವರಕ್ಷಯೇ|

06113011e ಭೀಷ್ಮೇ ಚ ಯುಧಿ ವಿಕ್ರಾಂತೇ ಪಾಂಡವೇ ಚ ಧನಂಜಯೇ||

ರಾಜನ್! ಯುದ್ಧದಲ್ಲಿ ಭೀಷ್ಮನ ಮತ್ತು ಪಾಂಡವ ಧನಂಜಯನ ವಿಕ್ರಾಂತದಿಂದ ಆ ಮಹಾಭಯಂಕರ ವೀರವರಕ್ಷಯದಲ್ಲಿ ಬಾಣಗಳಿಂದ ಹೊಡೆಯಲ್ಪಟ್ಟು ಆರ್ತಸ್ವರದಲ್ಲಿ ಕೂಗಿ ಮಹಾಗಜಗಳೂ, ಆಭರಣಗಳನ್ನು ಧರಿಸಿದ್ದ ಮಹಾತ್ಮರ ಶರೀರಗಳೂ, ಕರ್ಣಕುಂಡಲಗಳನ್ನು ಧರಿಸಿದ್ದ ಶಿರಸ್ಸುಗಳೂ ಅಲ್ಲಲ್ಲಿ ಬಿದ್ದಿದ್ದವು.

06113012a ತೇ ಪರಾಕ್ರಾಂತಮಾಲೋಕ್ಯ ರಾಜನ್ಯುಧಿ ಪಿತಾಮಹಂ|

06113012c ನ ನ್ಯವರ್ತಂತ ಕೌರವ್ಯಾ ಬ್ರಹ್ಮಲೋಕಪುರಸ್ಕೃತಾಃ|

06113013a ಇಚ್ಛಂತೋ ನಿಧನಂ ಯುದ್ಧೇ ಸ್ವರ್ಗಂ ಕೃತ್ವಾ ಪರಾಯಣಂ|

06113013c ಪಾಂಡವಾನಭ್ಯವರ್ತಂತ ತಸ್ಮಿನ್ವೀರವರಕ್ಷಯೇ||

ರಾಜನ್! ಯುದ್ಧದಲ್ಲಿ ಪಿತಾಮಹನ ಪರಾಕ್ರಮವನ್ನು ನೋಡಿ ಬ್ರಹ್ಮಲೋಕಪುರಸ್ಕೃತರಾದ ಕೌರವ್ಯರು ಯುದ್ಧದಿಂದ ಹಿಂದಿರುಗಲಿಲ್ಲ. ಸ್ವರ್ಗವನ್ನೇ ಗುರಿಯನ್ನಾಗಿರಿಸಿಕೊಂಡ ಯುದ್ಧದಲ್ಲಿ ಸಾವನ್ನು ಇಚ್ಛಿಸುತ್ತಾ ಆ ವೀರವರಕ್ಷಯದಲ್ಲಿ ಪಾಂಡವರ ಮೇಲೆ ಆಕ್ರಮಣ ಮಾಡಿದರು.

06113014a ಪಾಂಡವಾಪಿ ಮಹಾರಾಜ ಸ್ಮರಂತೋ ವಿವಿಧಾನ್ಬಹೂನ್|

06113014c ಕ್ಲೇಶಾನ್ ಕೃತಾನ್ಸಪುತ್ರೇಣ ತ್ವಯಾ ಪೂರ್ವಂ ನರಾಧಿಪ||

06113015a ಭಯಂ ತ್ಯಕ್ತ್ವಾ ರಣೇ ಶೂರಾ ಬ್ರಹ್ಮಲೋಕಪುರಸ್ಕೃತಾಃ|

06113015c ತಾವಕಾಂಸ್ತವ ಪುತ್ರಾಂಶ್ಚ ಯೋಧಯಂತಿ ಸ್ಮ ಹೃಷ್ಟವತ್||

ಮಹಾರಾಜ! ನರಾಧಿಪ! ಶೂರ ಪಾಂಡವರೂ ಕೂಡ ನಿನ್ನ ಪುತ್ರರು ಹಿಂದೆ ಮಾಡಿಕೊಟ್ಟ ಬಹುವಿಧದ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ, ಬ್ರಹ್ಮಲೋಕಪುರಸ್ಕೃತರಾಗಿ ರಣದಲ್ಲಿ ಭಯವನ್ನು ತೊರೆದು ನಿನ್ನ ಮಕ್ಕಳನ್ನೂ ನಿನ್ನ ಕಡೆಯವರನ್ನೂ ಎದುರಿಸಿ ಸಂತೋಷದಿಂದ ಹೋರಾಡಿದರು.

06113016a ಸೇನಾಪತಿಸ್ತು ಸಮರೇ ಪ್ರಾಹ ಸೇನಾಂ ಮಹಾರಥಃ|

06113016c ಅಭಿದ್ರವತ ಗಾಂಗೇಯಂ ಸೋಮಕಾಃ ಸೃಂಜಯೈಃ ಸಹ||

ಸಮರದಲ್ಲಿ ಮಹಾರಥಿ ಸೇನಾಪತಿಯು ಸೇನೆಗಳಿಗೆ “ಸೋಮಕರೂ ಸೃಜಯರೂ ಒಟ್ಟಿಗೇ ಗಾಂಗೇಯನನ್ನು ಆಕ್ರಮಿಸಿರಿ!” ಎಂದು ಆಜ್ಞೆಯಿತ್ತನು.

06113017a ಸೇನಾಪತಿವಚಃ ಶ್ರುತ್ವಾ ಸೋಮಕಾಃ ಸಹ ಸೃಂಜಯೈಃ|

06113017c ಅಭ್ಯದ್ರವಂತ ಗಾಂಗೇಯಂ ಶಸ್ತ್ರವೃಷ್ಟ್ಯಾ ಸಮಂತತಃ||

ಸೇನಾಪತಿಯ ಮಾತನ್ನು ಕೇಳಿ ಸೃಂಜಯರೊಂದಿಗೆ ಸೋಮಕರು ಶಸ್ತ್ರವೃಷ್ಟಿಗಳಿಂದ ಎಲ್ಲ ಕಡೆಗಳಿಂದ ಮುತ್ತಿಗೆ ಹಾಕಿದರು.

06113018a ವಧ್ಯಮಾನಸ್ತತೋ ರಾಜನ್ಪಿತಾ ಶಾಂತನವಸ್ತವ|

06113018c ಅಮರ್ಷವಶಮಾಪನ್ನೋ ಯೋಧಯಾಮಾಸ ಸೃಂಜಯಾನ್||

ರಾಜನ್! ಹೀಗೆ ಹೊಡೆಯಲ್ಪಡಲು ನಿನ್ನ ತಂದೆ ಶಾಂತನವನು ಕ್ರುದ್ಧನಾಗಿ ಸೃಂಜಯರೊಡನೆ ಯುದ್ಧಮಾಡಿದನು.

06113019a ತಸ್ಯ ಕೀರ್ತಿಮತಸ್ತಾತ ಪುರಾ ರಾಮೇಣ ಧೀಮತಾ|

06113019c ಸಂಪ್ರದತ್ತಾಸ್ತ್ರಶಿಕ್ಷಾ ವೈ ಪರಾನೀಕವಿನಾಶಿನೀ||

ಅಯ್ಯಾ! ಹಿಂದೆ ಧೀಮತ ರಾಮನಿಂದ ಆ ಕೀರ್ತಿವಂತನು ಪರಾನೀಕವಿನಾಶಿನೀ ಎಂಬ ಅಸ್ತ್ರದ ಶಿಕ್ಷೆಯನ್ನು ಪಡೆದಿದ್ದನು.

06113020a ಸ ತಾಂ ಶಿಕ್ಷಾಮಧಿಷ್ಠಾಯ ಕೃತ್ವಾ ಪರಬಲಕ್ಷಯಂ|

06113020c ಅಹನ್ಯಹನಿ ಪಾರ್ಥಾನಾಂ ವೃದ್ಧಃ ಕುರುಪಿತಾಮಹಃ|

06113020e ಭೀಷ್ಮೋ ದಶ ಸಹಸ್ರಾಣಿ ಜಘಾನ ಪರವೀರಹಾ||

ಅದೇ ಶಿಕ್ಷೆಯನ್ನು ಅವಲಂಬಿಸಿ ಪರವೀರಹ ವೃದ್ಧ ಕುರುಪಿತಾಮಹ ಭೀಷ್ಮನು ಪ್ರತಿದಿನವೂ ಪಾರ್ಥರ ಹತ್ತುಸಾವಿರರನ್ನು ಕೊಂದು ಪರವೀರರ ಬಲಕ್ಷಯವನ್ನುಂಟುಮಾಡುತ್ತಿದ್ದನು.

06113021a ತಸ್ಮಿಂಸ್ತು ದಿವಸೇ ಪ್ರಾಪ್ತೇ ದಶಮೇ ಭರತರ್ಷಭ|

06113021c ಭೀಷ್ಮೇಣೈಕೇನ ಮತ್ಸ್ಯೇಷು ಪಾಂಚಾಲೇಷು ಚ ಸಂಯುಗೇ|

06113021e ಗಜಾಶ್ವಮಮಿತಂ ಹತ್ವಾ ಹತಾಃ ಸಪ್ತ ಮಹಾರಥಾಃ||

ಭರತರ್ಷಭ! ಪ್ರಾಪ್ತವಾದ ಆ ಹತ್ತನೆಯ ದಿವಸದಲ್ಲಿ ಭೀಷ್ಮನೊಬ್ಬನೇ ಮತ್ಸ್ಯ-ಪಾಂಚಾಲರೊಡನೆಯ ಸಂಯುಗದಲ್ಲಿ ಅಸಂಖ್ಯ ಗಜಾಶ್ವಗಳನ್ನು ಕೊಂದು ಏಳು ಮಹಾರಥರನ್ನು ಸಂಹರಿಸಿದನು.

06113022a ಹತ್ವಾ ಪಂಚ ಸಹಸ್ರಾಣಿ ರಥಿನಾಂ ಪ್ರಪಿತಾಮಹಃ|

06113022c ನರಾಣಾಂ ಚ ಮಹಾಯುದ್ಧೇ ಸಹಸ್ರಾಣಿ ಚತುರ್ದಶ||

06113023a ತಥಾ ದಂತಿಸಹಸ್ರಂ ಚ ಹಯಾನಾಮಯುತಂ ಪುನಃ|

06113023c ಶಿಕ್ಷಾಬಲೇನ ನಿಹತಂ ಪಿತ್ರಾ ತವ ವಿಶಾಂ ಪತೇ||

ವಿಶಾಂಪತೇ! ಶಿಕ್ಷಾಬಲದಿಂದ ನಿನ್ನ ತಂದೆ, ಪ್ರಪಿತಾಮಹನು ಐದು ಸಾವಿರ ರಥಿಗಳನ್ನು ಸಂಹರಿಸಿ ಮಹಾಯುದ್ಧದಲ್ಲಿ ಹದಿನಾಲ್ಕು ಸಾವಿರ ಪದಾತಿಗಳನ್ನೂ, ಸಾವಿರ ಆನೆಗಳನ್ನೂ, ಮತ್ತು ಹತ್ತುಸಾವಿರ ಅಶ್ವಸೈನಿಕರನ್ನೂ ಸಂಹರಿಸಿದನು.

06113024a ತತಃ ಸರ್ವಮಹೀಪಾನಾಂ ಕ್ಷೋಭಯಿತ್ವಾ ವರೂಥಿನೀಂ|

06113024c ವಿರಾಟಸ್ಯ ಪ್ರಿಯೋ ಭ್ರಾತಾ ಶತಾನೀಕೋ ನಿಪಾತಿತಃ||

ಆಗ ಸರ್ವಮಹೀಪಾಲರ ವರೂಥಿನಿಯನ್ನು ಕ್ಷೋಭೆಗೊಳಿಸಿ ವಿರಾಟನ ಪ್ರೀತಿಯ ತಮ್ಮ ಶತಾನೀಕನನ್ನು ಉರುಳಿಸಿದನು.

06113025a ಶತಾನೀಕಂ ಚ ಸಮರೇ ಹತ್ವಾ ಭೀಷ್ಮಃ ಪ್ರತಾಪವಾನ್|

06113025c ಸಹಸ್ರಾಣಿ ಮಹಾರಾಜ ರಾಜ್ಞಾಂ ಭಲ್ಲೈರ್ನ್ಯಪಾತಯತ್||

ಮಹಾರಾಜ! ಸಮರದಲ್ಲಿ ಶತಾನೀಕನನ್ನು ಸಂಹರಿಸಿ ಪ್ರತಾಪವಾನ್ ಭೀಷ್ಮನು ಸಹಸ್ರಾರು ರಾಜರನ್ನು ಭಲ್ಲೆಗಳಿಂದ ಉರುಳಿಸಿದನು.

06113026a ಯೇ ಚ ಕೇ ಚನ ಪಾರ್ಥಾನಾಮಭಿಯಾತಾ ಧನಂಜಯಂ|

06113026c ರಾಜಾನೋ ಭೀಷ್ಮಮಾಸಾದ್ಯ ಗತಾಸ್ತೇ ಯಮಸಾದನಂ||

ಯಾರು ಪಾರ್ಥ ಧನಂಜಯನನ್ನು ಸೇರಿ ಭೀಷ್ಮನನ್ನು ಎದುರಿಸುತ್ತಿದ್ದರೋ ಆ ಎಲ್ಲ ರಾಜರೂ ಯಮಸಾದನವನ್ನು ಸೇರಿದರು.

06113027a ಏವಂ ದಶ ದಿಶೋ ಭೀಷ್ಮಃ ಶರಜಾಲೈಃ ಸಮಂತತಃ|

06113027c ಅತೀತ್ಯ ಸೇನಾಂ ಪಾರ್ಥಾನಾಮವತಸ್ಥೇ ಚಮೂಮುಖೇ||

ಹೀಗೆ ಹತ್ತೂ ದಿಕ್ಕುಗಳಿಂದಲೂ ಶರಜಾಲಗಳಿಂದ ಸುತ್ತುವರೆದು ಭೀಷ್ಮನು ಪಾರ್ಥರ ಸೇನೆಯನ್ನು ಸೋಲಿಸಿ ತನ್ನ ಸೇನಾಗ್ರದಲ್ಲಿ ನಿಂತಿದ್ದನು.

06113028a ಸ ಕೃತ್ವಾ ಸುಮಹತ್ಕರ್ಮ ತಸ್ಮಿನ್ವೈ ದಶಮೇಽಹನಿ|

06113028c ಸೇನಯೋರಂತರೇ ತಿಷ್ಠನ್ಪ್ರಗೃಹೀತಶರಾಸನಃ||

ಆ ಹತ್ತನೆಯ ದಿನದಲ್ಲಿ ಮಹಾಕರ್ಮವನ್ನೆಸಗಿ ಅವನು ಧನುಸ್ಸನ್ನು ಹಿಡಿದು ಎರಡು ಸೇನೆಗಳ ಮಧ್ಯೆ ನಿಂತಿದ್ದನು.

06113029a ನ ಚೈನಂ ಪಾರ್ಥಿವಾ ರಾಜನ್ ಶೇಕುಃ ಕೇ ಚಿನ್ನಿರೀಕ್ಷಿತುಂ|

06113029c ಮಧ್ಯಂ ಪ್ರಾಪ್ತಂ ಯಥಾ ಗ್ರೀಷ್ಮೇ ತಪಂತಂ ಭಾಸ್ಕರಂ ದಿವಿ||

ರಾಜನ್! ಗ್ರೀಷ್ಮ‌ಋತುವಿನಲ್ಲಿ ನಡುನೆತ್ತಿಗೆ ಬಂದು ಸುಡುತ್ತಿರುವ ಭಾಸ್ಕರನನ್ನು ಆಕಾಶದಲ್ಲಿ ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ ರಾಜರು ಅವನನ್ನು ನೋಡಲೂ ಶಕ್ಯರಾಗಲಿಲ್ಲ.

06113030a ಯಥಾ ದೈತ್ಯಚಮೂಂ ಶಕ್ರಸ್ತಾಪಯಾಮಾಸ ಸಂಯುಗೇ|

06113030c ತಥಾ ಭೀಷ್ಮಃ ಪಾಂಡವೇಯಾಂಸ್ತಾಪಯಾಮಾಸ ಭಾರತ||

ಭಾರತ! ಸಂಯುಗದಲ್ಲಿ ಶಕ್ರನು ಹೇಗೆ ದೈತ್ಯಸೇನೆಯನ್ನು ತಡೆದು ನಿಲ್ಲಿಸಿದನೋ ಹಾಗೆ ಭೀಷ್ಮನು ಪಾಂಡವರ ಸೇನೆಯನ್ನು ತಡೆದು ನಿಲ್ಲಿಸಿದನು.

06113031a ತಥಾ ಚ ತಂ ಪರಾಕ್ರಾಂತಮಾಲೋಕ್ಯ ಮಧುಸೂದನಃ|

06113031c ಉವಾಚ ದೇವಕೀಪುತ್ರಃ ಪ್ರೀಯಮಾಣೋ ಧನಂಜಯಂ||

ಅವನ ಆ ಪರಾಕ್ರಾಂತವನ್ನು ನೋಡಿದ ದೇವಕೀಪುತ್ರ ಮಧುಸೂದನನು ಧನಂಜಯನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು:

06113032a ಏಷ ಶಾಂತನವೋ ಭೀಷ್ಮಃ ಸೇನಯೋರಂತರೇ ಸ್ಥಿತಃ|

06113032c ನಾನಿಹತ್ಯ ಬಲಾದೇನಂ ವಿಜಯಸ್ತೇ ಭವಿಷ್ಯತಿ||

“ಸೇನೆಗಳ ಮಧ್ಯೆ ನಿಂತಿರುವ ಈ ಶಾಂತನವ ಭೀಷ್ಮನನ್ನು ಬಲವನ್ನುಪಯೋಗಿಸಿ ಸಂಹರಿಸಿದರೆ ನಿನಗೆ ವಿಜಯವಾಗುತ್ತದೆ.

06113033a ಯತ್ತಃ ಸಂಸ್ತಂಭಯಸ್ವೈನಂ ಯತ್ರೈಷಾ ಭಿದ್ಯತೇ ಚಮೂಃ|

06113033c ನ ಹಿ ಭೀಷ್ಮಶರಾನನ್ಯಃ ಸೋಢುಮುತ್ಸಹತೇ ವಿಭೋ||

ಯಾವ ಸ್ಥಳದಲ್ಲಿ ಈ ನಮ್ಮ ಸೇನೆಯು ಭೀಷ್ಮನಿಂದ ಬೇರೆಯಾಗಿದೆಯೋ ಅದೇ ಸ್ಥಳದಲ್ಲಿ ನೀನು ಭೀಷ್ಮನನ್ನು ಹಿಂದೆ-ಮುಂದೆ ಹೋಗದಂತೆ ಬಲಪೂರ್ವಕವಾಗಿ ನಿರ್ಬಂಧಿಸು.”

06113034a ತತಸ್ತಸ್ಮಿನ್ ಕ್ಷಣೇ ರಾಜಂಶ್ಚೋದಿತೋ ವಾನರಧ್ವಜಃ|

06113034c ಸಧ್ವಜಂ ಸರಥಂ ಸಾಶ್ವಂ ಭೀಷ್ಮಮಂತರ್ದಧೇ ಶರೈಃ||

ರಾಜನ್! ತಕ್ಷಣವೇ ಪ್ರಚೋದಿತನಾದ ವಾನರಧ್ವಜನು ಧ್ವಜ, ರಥ ಮತ್ತು ಕುದುರೆಗಳೊಂದಿಗೆ ಭೀಷ್ಮನನ್ನು ಶರಗಳಿಂದ ಮುಚ್ಚಿಬಿಟ್ಟನು.

06113035a ಸ ಚಾಪಿ ಕುರುಮುಖ್ಯಾನಾಂ ಋಷಭಃ ಪಾಂಡವೇರಿತಾನ್|

06113035c ಶರವ್ರಾತೈಃ ಶರವ್ರಾತಾನ್ಬಹುಧಾ ವಿದುಧಾವ ತಾನ್||

ಆ ಕುರುಮುಖ್ಯರ ಋಷಭನೂ ಕೂಡ ಪಾಂಡವನು ಪ್ರಯೋಗಿಸಿದ ಬಾಣ ಸಮೂಹಗಳನ್ನು ಬಾಣಸಮೂಹಗಳನ್ನು ಪ್ರಯೋಗಿಸಿ ಕತ್ತರಿಸಿ ಚೂರು ಚೂರು ಮಾಡಿದನು.

06113036a ತೇನ ಪಾಂಚಾಲರಾಜಶ್ಚ ಧೃಷ್ಟಕೇತುಶ್ಚ ವೀರ್ಯವಾನ್|

06113036c ಪಾಂಡವೋ ಭೀಮಸೇನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ||

06113037a ಯಮೌ ಚ ಚೇಕಿತಾನಶ್ಚ ಕೇಕಯಾಃ ಪಂಚ ಚೈವ ಹ|

06113037c ಸಾತ್ಯಕಿಶ್ಚ ಮಹಾರಾಜ ಸೌಭದ್ರೋಽಥ ಘಟೋತ್ಕಚಃ||

06113038a ದ್ರೌಪದೇಯಾಃ ಶಿಖಂಡೀ ಚ ಕುಂತಿಭೋಜಶ್ಚ ವೀರ್ಯವಾನ್|

06113038c ಸುಶರ್ಮಾ ಚ ವಿರಾಟಶ್ಚ ಪಾಂಡವೇಯಾ ಮಹಾಬಲಾಃ||

06113039a ಏತೇ ಚಾನ್ಯೇ ಚ ಬಹವಃ ಪೀಡಿತಾ ಭೀಷ್ಮಸಾಯಕೈಃ|

06113039c ಸಮುದ್ಧೃತಾಃ ಫಲ್ಗುನೇನ ನಿಮಗ್ನಾಃ ಶೋಕಸಾಗರೇ||

ಮಹಾರಾಜ! ಆಗ ಪಾಂಚಾಲರಾಜ, ವೀರ್ಯವಾನ್ ಧೃಷ್ಟಕೇತು, ಪಾಂಡವ ಭೀಮ, ಪಾರ್ಷತ ಧೃಷ್ಟದ್ಯುಮ್ನ, ಯಮಳರು, ಚೇಕಿತಾನ, ಐವರು ಕೇಕಯರು, ಸಾತ್ಯಕಿ, ಸೌಭದ್ರಿ, ಘಟೋತ್ಕಚ, ದ್ರೌಪದೇಯರು, ಶಿಖಂಡಿ, ವೀರ್ಯವಾನ್ ಕುಂತಿಬೋಜ, ಸುಶರ್ಮ, ವಿರಾಟ, ಮಹಾಬಲಿ ಪಾಂಡವೇಯ ಇವರು ಮತ್ತು ಇನ್ನೂ ಬಹಳಷ್ಟು ಇತರರು ಭೀಷ್ಮನ ಬಾಣಗಳಿಂದ ಪೀಡಿತರಾಗಿ ಶೋಕಸಾಗರದಲ್ಲಿ ಮುಳುಗಿರಲು ಫಲ್ಗುನನ್ನು ಅವರನ್ನು ಮೇಲೆತ್ತಿದನು.

06113040a ತತಃ ಶಿಖಂಡೀ ವೇಗೇನ ಪ್ರಗೃಹ್ಯ ಪರಮಾಯುಧಂ|

06113040c ಭೀಷ್ಮಮೇವಾಭಿದುದ್ರಾವ ರಕ್ಷ್ಯಮಾಣಃ ಕಿರೀಟಿನಾ||

ಆಗ ಕಿರೀಟಿಯಿಂದ ರಕ್ಷಿತನಾದ ಶಿಖಂಡಿಯು ವೇಗದಿಂದ ಪರಮಾಯುಧವನ್ನು ಹಿಡಿದು ಭೀಷ್ಮನ ಮೇಲೆ ಪ್ರಯೋಗಿಸಿದನು.

06113041a ತತೋಽಸ್ಯಾನುಚರಾನ್ ಹತ್ವಾ ಸರ್ವಾನ್ರಣವಿಭಾಗವಿತ್|

06113041c ಭೀಷ್ಮಮೇವಾಭಿದುದ್ರಾವ ಬೀಭತ್ಸುರಪರಾಜಿತಃ||

ಆಗ ರಣವಿಭಾಗಗಳನ್ನು ತಿಳಿದಿದ್ದ ಅಪರಾಜಿತ ಬೀಭತ್ಸುವು ಭೀಷ್ಮನ ಅನುಚರರೆಲ್ಲರನ್ನೂ ಸಂಹರಿಸಿ ಭೀಷ್ಮನನ್ನೇ ಆಕ್ರಮಣಿಸಿದನು.

06113042a ಸಾತ್ಯಕಿಶ್ಚೇಕಿತಾನಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|

06113042c ವಿರಾಟೋ ದ್ರುಪದಶ್ಚೈವ ಮಾದ್ರೀಪುತ್ರೌ ಚ ಪಾಂಡವೌ|

06113042e ದುದ್ರುವುರ್ಭೀಷ್ಮಮೇವಾಜೌ ರಕ್ಷಿತಾ ದೃಢಧನ್ವನಾ||

ದೃಢಧನ್ವಿಯಿಂದ ರಕ್ಷಿತರಾಗಿ ಸಾತ್ಯಕಿ, ಚೇಕಿತಾನ, ಪಾರ್ಷತ ಧೃಷ್ಟದ್ಯುಮ್ನ, ವಿರಾಟ, ದ್ರುಪದ, ಮತ್ತು ಮಾದ್ರೀಪುತ್ರ ಪಾಂಡವರಿಬ್ಬರೂ ಭೀಷ್ಮನ ಮೇಲೆಯೇ ಆಕ್ರಮಣ ಮಾಡಿದರು.

06113043a ಅಭಿಮನ್ಯುಶ್ಚ ಸಮರೇ ದ್ರೌಪದ್ಯಾಃ ಪಂಚ ಚಾತ್ಮಜಾಃ|

06113043c ದುದ್ರುವುಃ ಸಮರೇ ಭೀಷ್ಮಂ ಸಮುದ್ಯತಮಹಾಯುಧಾಃ||

ಸಮರದಲ್ಲಿ ಅಭಿಮನ್ಯುವಾದರೋ ದ್ರೌಪದಿಯ ಐವರು ಮಕ್ಕಳೊಂದಿಗೆ ಮಹಾಯುಧಗಳನ್ನು ಹಿಡಿದು ಸಮರದಲ್ಲಿ ಭೀಷ್ಮನನ್ನು ಆಕ್ರಮಣಿಸಿದರು.

06113044a ತೇ ಸರ್ವೇ ದೃಢಧನ್ವಾನಃ ಸಂಯುಗೇಷ್ವಪಲಾಯಿನಃ|

06113044c ಬಹುಧಾ ಭೀಷ್ಮಮಾನರ್ಚನ್ಮಾರ್ಗಣೈಃ ಕೃತಮಾರ್ಗಣಾಃ||

ಆ ಎಲ್ಲ ದೃಢಧನ್ವಿಗಳೂ ಸಂಯುಗದಲ್ಲಿ ಪಲಾಯನ ಮಾಡದೇ ಬಹಳ ಕೃತಮಾರ್ಗಣ ಬಾಣಗಳಿಂದ ಭೀಷ್ಮನನ್ನು ಚುಚ್ಚಿದರು.

06113045a ವಿಧೂಯ ತಾನ್ಬಾಣಗಣಾನ್ಯೇ ಮುಕ್ತಾಃ ಪಾರ್ಥಿವೋತ್ತಮೈಃ|

06113045c ಪಾಂಡವಾನಾಮದೀನಾತ್ಮಾ ವ್ಯಗಾಹತ ವರೂಥಿನೀಂ|

06113045e ಕೃತ್ವಾ ಶರವಿಘಾತಂ ಚ ಕ್ರೀಡನ್ನಿವ ಪಿತಾಮಹಃ||

ಆದರೆ ಪಿತಾಮನನು ಆಟವಾಡುತ್ತಿರುವನೋ ಎನ್ನುವಂತೆ ತನ್ನನ್ನು ಎದುರಿಸಿ ಬರುತ್ತಿದ್ದ ಪಾರ್ಥಿವೋತ್ತಮರು ಬಿಟ್ಟ ಆ ಬಾಣಗಣಗಳನ್ನು ತಡೆದು ಶರವಿಘಾತ ಮಾಡಿದನು ಮತ್ತು ಪಾಂಡವರ ಸೇನೆಯನ್ನು ದುಃಖಕ್ಕೀಡುಮಾಡಿದನು.

06113046a ನಾಭಿಸಂಧತ್ತ ಪಾಂಚಾಲ್ಯಂ ಸ್ಮಯಮಾನೋ ಮುಹುರ್ಮುಹುಃ|

06113046c ಸ್ತ್ರೀತ್ವಂ ತಸ್ಯಾನುಸಂಸ್ಮೃತ್ಯ ಭೀಷ್ಮೋ ಬಾಣಾಂ ಶಿಖಂಡಿನಃ|

06113046e ಜಘಾನ ದ್ರುಪದಾನೀಕೇ ರಥಾನ್ಸಪ್ತ ಮಹಾರಥಃ||

ಆದರೆ ಅವನ ಸ್ತ್ರೀತ್ವವನ್ನು ಸ್ಮರಿಸಿ, ಪುನಃ ಪುನಃ ಮುಗುಳ್ನಗುತ್ತಾ ಭೀಷ್ಮನು ಪಾಂಚಾಲ್ಯ ಶಿಖಂಡಿಯ ಮೇಲೆ ಬಾಣಪ್ರಯೋಗ ಮಾಡಲಿಲ್ಲ, ಮತ್ತು ಆ ಮಹಾರಥನು ದ್ರುಪದನ ಸೇನೆಯ ಏಳು ರಥರನ್ನು ಸಂಹರಿಸಿದನು.

06113047a ತತಃ ಕಿಲಕಿಲಾಶಬ್ದಃ ಕ್ಷಣೇನ ಸಮಪದ್ಯತ|

06113047c ಮತ್ಸ್ಯಪಾಂಚಾಲಚೇದೀನಾಂ ತಮೇಕಮಭಿಧಾವತಾಂ||

ಆಗ ತಕ್ಷಣವೇ ಒಂಟಿಯಾದ ಭೀಷ್ಮನೊಡನೆ ಹೋರಾಡುತ್ತಿದ್ದ ಮತ್ಸ್ಯ-ಪಾಂಚಾಲ-ಚೇದಿಗಳ ಸೇನೆಯಲ್ಲಿ ಕಿಲಕಿಲ ಶಬ್ಧವುಂಟಾಯಿತು.

06113048a ತೇ ವರಾಶ್ವರಥವ್ರಾತೈರ್ವಾರಣೈಃ ಸಪದಾತಿಭಿಃ|

06113048c ತಮೇಕಂ ಚಾದಯಾಮಾಸುರ್ಮೇಘಾ ಇವ ದಿವಾಕರಂ||

06113048e ಭೀಷ್ಮಂ ಭಾಗೀರಥೀಪುತ್ರಂ ಪ್ರತಪಂತಂ ರಣೇ ರಿಪೂನ್||

ಅವರ ಶ್ರೇಷ್ಠ ಅಶ್ವ-ರಥವ್ರಾತ-ವಾರಣಗಳಿಂದ ಮತ್ತು ಪದಾತಿಗಳಿಂದ ರಣದಲ್ಲಿ ರಿಪುಗಳನ್ನು ಸುಡುತ್ತಿದ್ದ ಭಾಗೀರಥೀಪುತ್ರ ಭೀಷ್ಮನೊಬ್ಬನನ್ನೇ ದಿವಾಕರನನ್ನು ಮೇಘಗಳಂತೆ ಮುತ್ತಿಗೆ ಹಾಕಿದರು.

06113049a ತತಸ್ತಸ್ಯ ಚ ತೇಷಾಂ ಚ ಯುದ್ಧೇ ದೇವಾಸುರೋಪಮೇ|

06113049c ಕಿರೀಟೀ ಭೀಷ್ಮಮಾನರ್ಚತ್ಪುರಸ್ಕೃತ್ಯ ಶಿಖಂಡಿನಂ||

ಆಗ ದೇವಾಸುರರ ನಡುವಿನಂತಿದ್ದ ಅವರ ಆ ಯುದ್ಧದಲ್ಲಿ ಶಿಖಂಡಿಯನ್ನು ಮುಂದಿರಿಸಿಕೊಂಡು ಕಿರೀಟಿಯು ಭೀಷ್ಮನನ್ನು ಗಾಯಗೊಳಿಸಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಪರಾಕ್ರಮೇ ತ್ರಯೋದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಪರಾಕ್ರಮ ಎನ್ನುವ ನೂರಾಹದಿಮೂರನೇ ಅಧ್ಯಾಯವು.

Image result for indian motifs against white background

Comments are closed.