Bhishma Parva: Chapter 110

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೧೦

ಭೀಮಾರ್ಜುನರ ಪರಾಕ್ರಮ (೧-೪೬).

06110001 ಸಂಜಯ ಉವಾಚ|

06110001a ಅರ್ಜುನಸ್ತು ರಣೇ ಶಲ್ಯಂ ಯತಮಾನಂ ಮಹಾರಥಂ|

06110001c ಚಾದಯಾಮಾಸ ಸಮರೇ ಶರೈಃ ಸನ್ನತಪರ್ವಭಿಃ||

ಸಂಜಯನು ಹೇಳಿದನು: “ರಣದಲ್ಲಿ ಅರ್ಜುನನಾದರೋ ಸಮರದಲ್ಲಿ ಪ್ರಯತ್ನಿಸುತ್ತಿದ್ದ ಮಹಾರಥ ಶಲ್ಯನನ್ನು ಸನ್ನತಪರ್ವ ಶರಗಳಿಂದ ಹೊಡೆದನು.

06110002a ಸುಶರ್ಮಾಣಂ ಕೃಪಂ ಚೈವ ತ್ರಿಭಿಸ್ತ್ರಿಭಿರವಿಧ್ಯತ|

06110002c ಪ್ರಾಗ್ಜ್ಯೋತಿಷಂ ಚ ಸಮರೇ ಸೈಂಧವಂ ಚ ಜಯದ್ರಥಂ||

06110003a ಚಿತ್ರಸೇನಂ ವಿಕರ್ಣಂ ಚ ಕೃತವರ್ಮಾಣಮೇವ ಚ|

06110003c ದುರ್ಮರ್ಷಣಂ ಚ ರಾಜೇಂದ್ರ ಆವಂತ್ಯೌ ಚ ಮಹಾರಥೌ||

06110004a ಏಕೈಕಂ ತ್ರಿಭಿರಾನರ್ಚತ್ಕಂಕಬರ್ಹಿಣವಾಜಿತೈಃ|

06110004c ಶರೈರತಿರಥೋ ಯುದ್ಧೇ ಪೀಡಯನ್ವಾಹಿನೀಂ ತವ||

ರಾಜೇಂದ್ರ! ಸುಶರ್ಮನನ್ನೂ ಕೃಪನನ್ನೂ ಮೂರು ಬಾಣಗಳಿಂದ ಹೊಡೆದನು. ಸಮರದಲ್ಲಿ ಪ್ರಗ್ಜ್ಯೋತಿಷನನ್ನು, ಸೈಂಧವ ಜಯದ್ರಥನನ್ನು, ಚಿತ್ರಸೇನನನ್ನು, ವಿಕರ್ಣನನ್ನು, ಕೃತವರ್ಮನನ್ನು ಕೂಡ, ದುರ್ಮರ್ಷಣನನ್ನು, ಮತ್ತು ಅವಂತಿಯ ಮಹಾರಥರೀರ್ವರನ್ನು ಒಬ್ಬೊಬ್ಬರನ್ನೂ ಮೂರು ಮೂರು ಕಂಕಬರ್ಹಿಣ ಬಾಣಗಳಿಂದ ಹೊಡೆದು ಆ ಅತಿರಥನು ನಿನ್ನ ವಾಹಿನಿಯನ್ನು ಯುದ್ಧದಲ್ಲಿ ಪೀಡಿಸಿದನು.

06110005a ಜಯದ್ರಥೋ ರಣೇ ಪಾರ್ಥಂ ಭಿತ್ತ್ವಾ ಭಾರತ ಸಾಯಕೈಃ|

06110005c ಭೀಮಂ ವಿವ್ಯಾಧ ತರಸಾ ಚಿತ್ರಸೇನರಥೇ ಸ್ಥಿತಃ||

ಭಾರತ! ರಣದಲ್ಲಿ ಚಿತ್ರಸೇನರಥದಲ್ಲಿ ನಿಂತ ಜಯದ್ರಥನು ಪಾರ್ಥನನ್ನು ಸಾಯಕಗಳಿಂದ ಭೇದಿಸಿ, ತಕ್ಷಣವೇ ಭೀಮನನ್ನು ಹೊಡೆದನು.

06110006a ಶಲ್ಯಶ್ಚ ಸಮರೇ ಜಿಷ್ಣುಂ ಕೃಪಶ್ಚ ರಥಿನಾಂ ವರಃ|

06110006c ವಿವ್ಯಧಾತೇ ಮಹಾಬಾಹುಂ ಬಹುಧಾ ಮರ್ಮಭೇದಿಭಿಃ||

ಸಮರದಲ್ಲಿ ಶಲ್ಯ ಮತ್ತು ರಥಿಗಳಲ್ಲಿ ಶ್ರೇಷ್ಠ ಕೃಪರು ಮಹಾಬಾಹು ಜಿಷ್ಣುವನ್ನು ಅನೇಕ ಮರ್ಮಭೇದಿಗಳಿಂದ ಹೊಡೆದರು.

06110007a ಚಿತ್ರಸೇನಾದಯಶ್ಚೈವ ಪುತ್ರಾಸ್ತವ ವಿಶಾಂ ಪತೇ|

06110007c ಪಂಚಭಿಃ ಪಂಚಭಿಸ್ತೂರ್ಣಂ ಸಂಯುಗೇ ನಿಶಿತೈಃ ಶರೈಃ|

06110007e ಆಜಘ್ನುರರ್ಜುನಂ ಸಂಖ್ಯೇ ಭೀಮಸೇನಂ ಚ ಮಾರಿಷ||

ವಿಶಾಂಪತೇ! ಚಿತ್ರಸೇನನೇ ಮೊದಲಾದ ನಿನ್ನ ಮಕ್ಕಳು ಕೂಡ ಸಂಯುಗದಲ್ಲಿ ಬೇಗನೇ ಐದು ಐದು ನಿಶಿತ ಶರಗಳಿಂದ ಅರ್ಜುನ ಮತ್ತು ಭೀಮಸೇನರನ್ನು ಹೊಡೆದರು.

06110008a ತೌ ತತ್ರ ರಥಿನಾಂ ಶ್ರೇಷ್ಠೌ ಕೌಂತೇಯೌ ಭರತರ್ಷಭೌ|

06110008c ಅಪೀಡಯೇತಾಂ ಸಮರೇ ತ್ರಿಗರ್ತಾನಾಂ ಮಹದ್ಬಲಂ||

ಅಲ್ಲಿ ರಥಿಗಳಲ್ಲಿ ಶ್ರೇಷ್ಠರಾದ ಆ ಇಬ್ಬರು ಕೌಂತೇಯ ಭರತರ್ಷಭರೂ ಸಮರದಲ್ಲಿ ತ್ರಿಗರ್ತರ ಮಹಾಬಲವನ್ನು ಪೀಡಿಸುತ್ತಿದ್ದರು.

06110009a ಸುಶರ್ಮಾಪಿ ರಣೇ ಪಾರ್ಥಂ ವಿದ್ಧ್ವಾ ಬಹುಭಿರಾಯಸೈಃ|

06110009c ನನಾದ ಬಲವನ್ನಾದಂ ನಾದಯನ್ವೈ ನಭಸ್ತಲಂ||

ಸುಶರ್ಮನೂ ಕೂಡ ರಣದಲ್ಲಿ ಪಾರ್ಥನನ್ನು ಅನೇಕ ರಾಯಸಗಳಿಂದ ಹೊಡೆದು ನಭಸ್ತಲವನ್ನೂ ಮೊಳಗಿಸುತ್ತಾ ಮಹಾ ಕೂಗನ್ನು ಕೂಗಿದನು.

06110010a ಅನ್ಯೇ ಚ ರಥಿನಃ ಶೂರಾ ಭೀಮಸೇನಧನಂಜಯೌ|

06110010c ವಿವ್ಯಧುರ್ನಿಶಿತೈರ್ಬಾಣೈ ರುಕ್ಮಪುಂಖೈರಜಿಹ್ಮಗೈಃ||

ಅನ್ಯ ಶೂರ ರಥಿಗಳೂ ಭೀಮಸೇನ ಧನಂಜಯರನ್ನು ರುಕ್ಮಪುಂಖ, ತೀಕ್ಷ್ಣವಾದ, ನಿಶಿತ ಬಾಣಗಳಿಂದ ಹೊಡೆದರು.

06110011a ತೇಷಾಂ ತು ರಥಿನಾಂ ಮಧ್ಯೇ ಕೌಂತೇಯೌ ರಥಿನಾಂ ವರೌ|

06110011c ಕ್ರೀಡಮಾನೌ ರಥೋದಾರೌ ಚಿತ್ರರೂಪೌ ವ್ಯರೋಚತಾಂ|

06110011e ಆಮಿಷೇಪ್ಸೂ ಗವಾಂ ಮಧ್ಯೇ ಸಿಂಹಾವಿವ ಬಲೋತ್ಕಟೌ||

ಆ ರಥಿಗಳ ಮಧ್ಯೆ ರಥಿಗಳಲ್ಲಿ ಶ್ರೇಷ್ಠರಾದ, ರಥೋದಾರರಾದ, ಚಿತ್ರರೂಪರಾದ ಕೌಂತೇಯರಿಬ್ಬರೂ ಗೋವುಗಳ ಮಧ್ಯೆ ಬಲೋತ್ಕಟ ಸಿಂಹಗಳಂತೆ ಆಸೆತೋರಿಸಿ ಆಟವಾಡುತ್ತಿದ್ದರು.

06110012a ಚಿತ್ತ್ವಾ ಧನೂಂಷಿ ವೀರಾಣಾಂ ಶರಾಂಶ್ಚ ಬಹುಧಾ ರಣೇ|

06110012c ಪಾತಯಾಮಾಸತುರ್ವೀರೌ ಶಿರಾಂಸಿ ಶತಶೋ ನೃಣಾಂ||

ಆ ಇಬ್ಬರು ವೀರರು ರಣದಲ್ಲಿ ಅನೇಕ ವೀರರ ಧನುಸ್ಸುಗಳನ್ನೂ ಶಿರಗಳನ್ನೂ ತುಂಡರಿಸಿ, ನೂರಾರು ನರರ ಶಿರಗಳನ್ನು ಕಡಿದುರುಳಿಸಿದರು.

06110013a ರಥಾಶ್ಚ ಬಹವೋ ಭಗ್ನಾ ಹಯಾಶ್ಚ ಶತಶೋ ಹತಾಃ|

06110013c ಗಜಾಶ್ಚ ಸಗಜಾರೋಹಾಃ ಪೇತುರುರ್ವ್ಯಾಂ ಮಹಾಮೃಧೇ||

ಆ ಮಹಾಯುದ್ಧದಲ್ಲಿ ಅನೇಕ ರಥಗಳು ತುಂಡಾದವು. ನೂರಾರು ಕುದುರೆಗಳು ಹತವಾದವು. ಗಜಾರೋಹರೊಂದಿಗೆ ಗಜಗಳು ನೆಲಕ್ಕುರುಳಿದವು.

06110014a ರಥಿನಃ ಸಾದಿನಶ್ಚೈವ ತತ್ರ ತತ್ರ ನಿಸೂದಿತಾಃ|

06110014c ದೃಶ್ಯಂತೇ ಬಹುಧಾ ರಾಜನ್ವೇಷ್ಟಮಾನಾಃ ಸಮಂತತಃ||

ರಾಜನ್! ಅನೇಕ ರಥಿಗಳು, ಅಶ್ವಾರೋಹಿಗಳು ಕೊಲ್ಲಲ್ಪಟ್ಟು ಅಲ್ಲಲ್ಲಿ ಎಲ್ಲ ಕಡೆ ಬಿದ್ದಿರುವುದು ಕಂಡಿತು.

06110015a ಹತೈರ್ಗಜಪದಾತ್ಯೋಘೈರ್ವಾಜಿಭಿಶ್ಚ ನಿಸೂದಿತೈಃ|

06110015c ರಥೈಶ್ಚ ಬಹುಧಾ ಭಗ್ನೈಃ ಸಮಾಸ್ತೀರ್ಯತ ಮೇದಿನೀ||

ಹತರಾದ ಗಜ ಪದಾತಿಗಳಿಂದ, ಸಂಹರಿಸಲ್ಪಟ್ಟ ಕುದುರೆಗಳ ಸಮೂಹಗಳಿಂದ, ಭಗ್ನವಾಗಿದ್ದ ಅನೇಕ ರಥಗಳಿಂದ ಮೇದಿನಿಯು ತುಂಬಿಹೋಗಿತ್ತು.

06110016a ಚತ್ರೈಶ್ಚ ಬಹುಧಾ ಚಿನ್ನೈರ್ಧ್ವಜೈಶ್ಚ ವಿನಿಪಾತಿತೈಃ|

06110016c ಅಂಕುಶೈರಪವಿದ್ಧೈಶ್ಚ ಪರಿಸ್ತೋಮೈಶ್ಚ ಭಾರತ||

06110017a ಕೇಯೂರೈರಂಗದೈರ್ಹಾರೈ ರಾಂಕವೈರ್ಮೃದಿತೈಸ್ತಥಾ|

06110017c ಉಷ್ಣೀಷೈರಪವಿದ್ಧೈಶ್ಚ ಚಾಮರವ್ಯಜನೈರಪಿ||

06110018a ತತ್ರ ತತ್ರಾಪವಿದ್ಧೈಶ್ಚ ಬಾಹುಭಿಶ್ಚಂದನೋಕ್ಷಿತೈಃ|

06110018c ಊರುಭಿಶ್ಚ ನರೇಂದ್ರಾಣಾಂ ಸಮಾಸ್ತೀರ್ಯತ ಮೇದಿನೀ||

ಭಾರತ! ಹರಿದು ಕೆಳಗೆ ಬಿದ್ದಿದ್ದ ಅನೇಕ ಬಣ್ಣಗಳ ಧ್ವಜಗಳಿಂದ, ಚತ್ರಗಳಿಂದ, ಅಂಕುಶಗಳಿಂದ, ಪರಿಸ್ತೋಮಗಳಿಂದ, ಚಿನ್ನದ ಕೇಯೂರ-ಅಂಗದ- ಹಾರಗಳಿಂದ, ಉಷ್ಣೀಷ-ಅಪವಿದ್ಧಗಳಿಂದ, ಚಾಮರ-ವ್ಯಜನಗಳಿಂದ ಅಲ್ಲಲ್ಲಿ ಬಿದ್ದಿದ್ದ ನರೇಂದ್ರರ ತುಂಡಾದ ಬಾಹುಗಳಿಂದ, ಹೊಟ್ಟೆ-ತೊಡೆಗಳಿಂದ ಮೇದಿನಿಯು ಹರಡಿ ಹೋಗಿತ್ತು.

06110019a ತತ್ರಾದ್ಭುತಮಪಶ್ಯಾಮ ರಣೇ ಪಾರ್ಥಸ್ಯ ವಿಕ್ರಮಂ|

06110019c ಶರೈಃ ಸಂವಾರ್ಯ ತಾನ್ವೀರಾನ್ನಿಜಘಾನ ಬಲಂ ತವ||

ಅಲ್ಲಿ ರಣದಲ್ಲಿ ಶರಗಳನ್ನು ತೂರಿ ನಿನ್ನ ಬಲದಲ್ಲಿರುವ ವೀರರನ್ನು ಸಂಹರಿಸುತ್ತಿರುವ ಪಾರ್ಥನ ಅದ್ಭುತ ವಿಕ್ರಮವನ್ನು ನೋಡಿದೆವು.

06110020a ಪುತ್ರಸ್ತು ತವ ತಂ ದೃಷ್ಟ್ವಾ ಭೀಮಾರ್ಜುನಸಮಾಗಮಂ|

06110020c ಗಾಂಗೇಯಸ್ಯ ರಥಾಭ್ಯಾಶಂ ಉಪಜಗ್ಮೇ ಮಹಾಭಯೇ||

ಭೀಮಾರ್ಜುನರ ಸಮಾಗಮವನ್ನು ನೋಡಿ ನಿನ್ನ ಪುತ್ರರಾದರೋ ಮಹಾಭಯದಿಂದ ಗಾಂಗೇಯನ ರಥದ ಹಿಂದೆ ಹೋಗಿ ಅಡಗಿಕೊಂಡರು.

06110021a ಕೃಪಶ್ಚ ಕೃತವರ್ಮಾ ಚ ಸೈಂಧವಶ್ಚ ಜಯದ್ರಥಃ|

06110021c ವಿಂದಾನುವಿಂದಾವಾವಂತ್ಯಾವಾಜಗ್ಮುಃ ಸಂಯುಗಂ ತದಾ||

ಕೃಪ, ಕೃತವರ್ಮ, ಸೈಂಧವ ಜಯದ್ರಥ, ಅವಂತಿಯ ವಿಂದಾನುವಿಂದರು ಸಂಯುಗದಿಂದ ಹಿಮ್ಮೆಟ್ಟಲಿಲ್ಲ.

06110022a ತತೋ ಭೀಮೋ ಮಹೇಷ್ವಾಸಃ ಫಲ್ಗುನಶ್ಚ ಮಹಾರಥಃ|

06110022c ಕೌರವಾಣಾಂ ಚಮೂಂ ಘೋರಾಂ ಭೃಶಂ ದುದ್ರುವತೂ ರಣೇ||

ಆಗ ಮಹೇಷ್ವಾಸ ಭೀಮ ಮತ್ತು ಮಹಾರಥ ಫಲ್ಗುನರು ಕೌರವರ ಘೋರ ಸೇನೆಯನ್ನು ರಣದಲ್ಲಿ ನಾಶಗೊಳಿಸತೊಡಗಿದರು.

06110023a ತತೋ ಬರ್ಹಿಣವಾಜಾನಾಮಯುತಾನ್ಯರ್ಬುದಾನಿ ಚ|

06110023c ಧನಂಜಯರಥೇ ತೂರ್ಣಂ ಪಾತಯಂತಿ ಸ್ಮ ಸಂಯುಗೇ||

ಆಗ ಸಂಯುಗದಲ್ಲಿ ತಕ್ಷಣವೇ ರಾಜರು ಹತ್ತುಸಾವಿರ ಲಕ್ಷಗಟ್ಟಲೆ ಬಾಣಗಳನ್ನು ಧನಂಜಯನ ರಥದಮೇಲೆ ಸುರಿದರು.

06110024a ತತಸ್ತಾಂ ಶರಜಾಲೇನ ಸನ್ನಿವಾರ್ಯ ಮಹಾರಥಾನ್|

06110024c ಪಾರ್ಥಃ ಸಮಂತಾತ್ಸಮರೇ ಪ್ರೇಷಯಾಮಾಸ ಮೃತ್ಯವೇ||

ಆಗ ಆ ಶರಜಾಲಗಳನ್ನು ತಡೆದು ಪಾರ್ಥನು ಸಮರದಲ್ಲಿ ಸೇರಿರುವ ಮಹಾರಥರನ್ನು ಒಟ್ಟಿಗೇ ಮೃತ್ಯುವಿಗೆ ಕಳುಹಿಸಿದನು.

06110025a ಶಲ್ಯಸ್ತು ಸಮರೇ ಜಿಷ್ಣುಂ ಕ್ರೀಡನ್ನಿವ ಮಹಾರಥಃ|

06110025c ಆಜಘಾನೋರಸಿ ಕ್ರುದ್ಧೋ ಭಲ್ಲೈಃ ಸನ್ನತಪರ್ವಭಿಃ||

ಸಮರದಲ್ಲಿ ಆಡುತ್ತಿರುವಂತೆ ಮಹಾರಥ ಶಲ್ಯನು ಕ್ರುದ್ಧನಾಗಿ ಭಲ್ಲ ಮತ್ತು ಸನ್ನತಪರ್ವಗಳಿಂದ ಜಿಷ್ಣುವಿನ ಎದೆಗೆ ಹೊಡೆದು ಗಾಯಗೊಳಿಸಿದನು.

06110026a ತಸ್ಯ ಪಾರ್ಥೋ ಧನುಶ್ಚಿತ್ತ್ವಾ ಹಸ್ತಾವಾಪಂ ಚ ಪಂಚಭಿಃ|

06110026c ಅಥೈನಂ ಸಾಯಕೈಸ್ತೀಕ್ಷ್ಣೈರ್ಭೃಶಂ ವಿವ್ಯಾಧ ಮರ್ಮಣಿ||

ಪಾರ್ಥನು ಐದು ಬಾಣಗಳಿಂದ ಅವನ ಧನುಸ್ಸನ್ನು ಮತ್ತು ಹಸ್ತಾವಾಪವನ್ನು ಕತ್ತರಿಸಿ, ತೀಕ್ಷ್ಣ ಸಾಯಕಗಳಿಂದ ಜೋರಾಗಿ ಅವನ ಮರ್ಮಗಳಿಗೆ ಹೊಡೆದನು.

06110027a ಅಥಾನ್ಯದ್ಧನುರಾದಾಯ ಸಮರೇ ಭಾರಸಾಧನಂ|

06110027c ಮದ್ರೇಶ್ವರೋ ರಣೇ ಜಿಷ್ಣುಂ ತಾಡಯಾಮಾಸ ರೋಷಿತಃ||

06110028a ತ್ರಿಭಿಃ ಶರೈರ್ಮಹಾರಾಜ ವಾಸುದೇವಂ ಚ ಪಂಚಭಿಃ|

06110028c ಭೀಮಸೇನಂ ಚ ನವಭಿರ್ಬಾಹ್ವೋರುರಸಿ ಚಾರ್ಪಯತ್||

ಮದ್ರೇಶ್ವರನು ಇನ್ನೊಂದು ಭಾರಸಾಧನ ಧನುಸ್ಸನ್ನು ಎತ್ತಿಕೊಂಡು ರಣದಲ್ಲಿ ರೋಷಿತನಾಗಿ ಮೂರು ಶರಗಳಿಂದ ಜಿಷ್ಣುವನ್ನೂ, ಐದರಿಂದ ವಾಸುದೇವನನ್ನೂ, ಒಂಭತ್ತು ಬಾಣಗಳಿಂದ ಭೀಮಸೇನನ ಭುಜ-ತೊಡೆಗಳಿಗೆ ಹೊಡೆದನು.

06110029a ತತೋ ದ್ರೋಣೋ ಮಹಾರಾಜ ಮಾಗಧಶ್ಚ ಮಹಾರಥಃ|

06110029c ದುರ್ಯೋಧನಸಮಾದಿಷ್ಟೌ ತಂ ದೇಶಮುಪಜಗ್ಮತುಃ||

06110030a ಯತ್ರ ಪಾರ್ಥೋ ಮಹಾರಾಜ ಭೀಮಸೇನಶ್ಚ ಪಾಂಡವಃ|

06110030c ಕೌರವ್ಯಸ್ಯ ಮಹಾಸೇನಾಂ ಜಘ್ನತುಸ್ತೌ ಮಹಾರಥೌ||

ಮಹಾರಾಜ! ಆಗ ಮಹಾರಥ ದ್ರೋಣ ಮಾಗಧರು ದುರ್ಯೋಧನನ್ನೊಡಗೂಡಿ ಎಲ್ಲಿ ಮಹಾರಥ ಪಾರ್ಥ ಮತ್ತು ಪಾಂಡವ ಭೀಮಸೇನರು ಕೌರವ ಮಹಾಸೇನೆಯನ್ನು ಸಂಹರಿಸುತ್ತಿರುವ ಪ್ರದೇಶಕ್ಕೆ ಬಂದರು.

06110031a ಜಯತ್ಸೇನಸ್ತು ಸಮರೇ ಭೀಮಂ ಭೀಮಾಯುಧಂ ಯುವಾ|

06110031c ವಿವ್ಯಾಧ ನಿಶಿತೈರ್ಬಾಣೈರಷ್ಟಭಿರ್ಭರತರ್ಷಭ||

ಭರತರ್ಷಭ! ಯುವಕ ಜಯತ್ಸೇನನು ಸಮರದಲ್ಲಿ ಭೀಮಾಯುಧ ಭೀಮನನ್ನು ಎಂಟು ನಿಶಿತ ಬಾಣಗಳಿಂದ ಹೊಡೆದನು.

06110032a ತಂ ಭೀಮೋ ದಶಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ|

06110032c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್||

ಅವನನ್ನು ಭೀಮನು ಹತ್ತು ಭಲ್ಲಗಳಿಂದ ಹೊಡೆದು ಪುನಃ ಏಳರಿಂದ ಹೊಡೆದನು. ಮತ್ತು ಅವನ ಸಾರಥಿಯನ್ನು ಭಲ್ಲದಿಂದ ಹೊಡೆದು ರಥನೀಡದಿಂದ ಉರುಳಿಸಿದನು.

06110033a ಉದ್ಭ್ರಾಂತೈಸ್ತುರಗೈಃ ಸೋಽಥ ದ್ರವಮಾಣೈಃ ಸಮಂತತಃ|

06110033c ಮಾಗಧೋಽಪಹೃತೋ ರಾಜಾ ಸರ್ವಸೈನ್ಯಸ್ಯ ಪಶ್ಯತಃ||

ರಾಜಾ! ಉದ್ಭ್ರಾಂತ ಕುದುರೆಗಳು ಎಲ್ಲಕಡೆ ಓಡುತ್ತಾ ಎಲ್ಲ ಸೈನ್ಯಗಳು ನೋಡುತ್ತಿದ್ದಂತೆ ಮಾಗಧನನ್ನು ಎತ್ತಿಕೊಂಡು ಹೋದವು.

06110034a ದ್ರೋಣಸ್ತು ವಿವರಂ ಲಬ್ಧ್ವಾ ಭೀಮಸೇನಂ ಶಿಲೀಮುಖೈಃ|

06110034c ವಿವ್ಯಾಧ ಬಾಣೈಃ ಸುಶಿತೈಃ ಪಂಚಷಷ್ಟ್ಯಾ ತಮಾಯಸೈಃ||

ದ್ರೋಣನು ಅಂತರವನ್ನು ಪಡೆದು ಭೀಮಸೇನನನ್ನು ಅರವತ್ತೈದು ಚೆನ್ನಾಗಿ ಹರಿತಮಾಡಿದ ಆಯಸಗಳ ಶಿಲೀಮುಖ ಬಾಣಗಳಿಂದ ಹೊಡೆದನು.

06110035a ತಂ ಭೀಮಃ ಸಮರಶ್ಲಾಘೀ ಗುರುಂ ಪಿತೃಸಮಂ ರಣೇ|

06110035c ವಿವ್ಯಾಧ ನವಭಿರ್ಭಲ್ಲೈಸ್ತಥಾ ಷಷ್ಟ್ಯಾ ಚ ಭಾರತ||

ಭಾರತ! ಪಿತೃಸಮನಾದ ಗುರುವನ್ನು ರಣದಲ್ಲಿ ಸಮರಶ್ಲಾಘೀ ಭೀಮನು ಒಂಭತ್ತು ಭಲ್ಲಗಳಿಂದ ಮತ್ತು ನಂತರ ಅರವತ್ತರಿಂದ ಹೊಡೆದನು.

06110036a ಅರ್ಜುನಸ್ತು ಸುಶರ್ಮಾಣಂ ವಿದ್ಧ್ವಾ ಬಹುಭಿರಾಯಸೈಃ|

06110036c ವ್ಯಧಮತ್ತಸ್ಯ ತತ್ಸೈನ್ಯಂ ಮಹಾಭ್ರಾಣಿ ಯಥಾನಿಲಃ||

ಅರ್ಜುನನಾದರೋ ಸುಶರ್ಮನನ್ನು ಅನೇಕ ಆಯಸಗಳಿಂದ ಹೊಡೆದು ಗಾಳಿಯು ದೊಡ್ಡ ದೊಡ್ಡ ಮೋಡಗಳನ್ನು ಹೇಗೋ ಹಾಗೆ ಅವನ ಸೇನೆಯನ್ನು ಚದುರಿಸಿದನು.

06110037a ತತೋ ಭೀಷ್ಮಶ್ಚ ರಾಜಾ ಚ ಸೌಬಲಶ್ಚ ಬೃಹದ್ಬಲಃ|

06110037c ಅಭ್ಯದ್ರವಂತ ಸಂಕ್ರುದ್ಧಾ ಭೀಮಸೇನಧನಂಜಯೌ||

ಆಗ ರಾಜ ಭೀಷ್ಮ, ಸೌಬಲ ಮತ್ತು ಬೃಹದ್ಬಲರು ಭೀಮಸೇನ-ಧನಂಜಯರನ್ನು ಧಾವಿಸಿ ಎದುರಿಸಿದರು.

06110038a ತಥೈವ ಪಾಂಡವಾಃ ಶೂರಾ ಧೃಷ್ಟದ್ಯುಮ್ನಶ್ಚ ಪಾರ್ಷತಃ|

06110038c ಅಭ್ಯದ್ರವನ್ರಣೇ ಭೀಷ್ಮಂ ವ್ಯಾದಿತಾಸ್ಯಮಿವಾಂತಕಂ||

ಆಗ ಅಂತಕನು ಬಾಯಿಕಳೆದಿರುವಂತಿರುವ ಭೀಷ್ಮನನ್ನು ರಣದಲ್ಲಿ ಪಾಂಡವ ಶೂರರೂ ಪಾರ್ಷತ ಧೃಷ್ಟದ್ಯುಮ್ನನೂ ಎದುರಿಸಿದರು.

06110039a ಶಿಖಂಡೀ ತು ಸಮಾಸಾದ್ಯ ಭಾರತಾನಾಂ ಪಿತಾಮಹಂ|

06110039c ಅಭ್ಯದ್ರವತ ಸಂಹೃಷ್ಟೋ ಭಯಂ ತ್ಯಕ್ತ್ವಾ ಯತವ್ರತಂ||

ಶಿಖಂಡಿಯಾದರೋ ಸಂಹೃಷ್ಟನಾಗಿ ಭಯವನ್ನು ತ್ಯಜಿಸಿ ಭಾರತರ ಪಿತಾಮಹ ಯತವ್ರತನನ್ನು ಸಮೀಪಿಸಿ ಎದುರಿಸಿದನು.

06110040a ಯುಧಿಷ್ಠಿರಮುಖಾಃ ಪಾರ್ಥಾಃ ಪುರಸ್ಕೃತ್ಯ ಶಿಖಂಡಿನಂ|

06110040c ಅಯೋಧಯನ್ರಣೇ ಭೀಷ್ಮಂ ಸಂಹತಾಃ ಸಹ ಸೃಂಜಯೈಃ||

ಯುಧಿಷ್ಠಿರ ಪ್ರಮುಖರಾದ ಪಾರ್ಥರು ಸೃಂಜಯರೊಡನೆ  ಶಿಖಂಡಿಯನ್ನು ಮುಂದಿರಿಸಿಕೊಂಡು ರಣದಲ್ಲಿ ಭೀಷ್ಮನನ್ನು ಎದರಿಸಿ ಯದ್ಧಮಾಡಿದರು.

06110041a ತಥೈವ ತಾವಕಾಃ ಸರ್ವೇ ಪುರಸ್ಕೃತ್ಯ ಯತವ್ರತಂ|

06110041c ಶಿಖಂಡಿಪ್ರಮುಖಾನ್ಪಾರ್ಥಾನ್ಯೋಧಯಂತಿ ಸ್ಮ ಸಂಯುಗೇ||

ಹಾಗೆಯೇ ನಿನ್ನವರೆಲ್ಲರೂ ಯತವ್ರತನನ್ನು ಮುಂದಿರಿಸಿಕೊಂಡು ಸಂಯುಗದಲ್ಲಿ ಶಿಖಂಡಿಪ್ರಮುಖ ಪಾರ್ಥರೊಡನೆ ಯುದ್ಧಮಾಡಿದರು.

06110042a ತತಃ ಪ್ರವವೃತೇ ಯುದ್ಧಂ ಕೌರವಾಣಾಂ ಭಯಾವಹಂ|

06110042c ತತ್ರ ಪಾಂಡುಸುತೈಃ ಸಾರ್ಧಂ ಭೀಷ್ಮಸ್ಯ ವಿಜಯಂ ಪ್ರತಿ||

ಆಗ ಅಲ್ಲಿ ಭೀಷ್ಮನ ವಿಜಯಕ್ಕಾಗಿ ಪಾಂಡುಸುತರೊಂದಿಗೆ ಕೌರವರ ಭಯಾವಹ ಯುದ್ಧವು ನಡೆಯಿತು.

06110043a ತಾವಕಾನಾಂ ರಣೇ ಭೀಷ್ಮೋ ಗ್ಲಹ ಆಸೀದ್ವಿಶಾಂ ಪತೇ|

06110043c ತತ್ರ ಹಿ ದ್ಯೂತಮಾಯಾತಂ ವಿಜಯಾಯೇತರಾಯ ವಾ||

ವಿಶಾಂಪತೇ! ರಣದಲ್ಲಿ ಭೀಷ್ಮನು ನಿನ್ನವರ ಪಣವಾದನು. ಏಕೆಂದರೆ ಅಲ್ಲಿ ವಿಜಯ ಅಥವ ಸೋಲಿನ ದ್ಯೂತವು ನಡೆದಿತ್ತು.

06110044a ಧೃಷ್ಟದ್ಯುಮ್ನೋ ಮಹಾರಾಜ ಸರ್ವಸೈನ್ಯಾನ್ಯಚೋದಯತ್|

06110044c ಅಭಿದ್ರವತ ಗಾಂಗೇಯಂ ಮಾ ಭೈಷ್ಟ ನರಸತ್ತಮಾಃ||

ಮಹಾರಾಜ! ಧೃಷ್ಟದ್ಯುಮ್ನನು ಸರ್ವ ಸೇನೆಗಳನ್ನೂ “ನರಸತ್ತಮರೇ! ಗಾಂಗೇಯನನ್ನು ಆಕ್ರಮಿಸಿ! ಭಯಪಡಬೇಡಿ!” ಎಂದು ಹುರಿದುಂಬಿಸಿದನು.

06110045a ಸೇನಾಪತಿವಚಃ ಶ್ರುತ್ವಾ ಪಾಂಡವಾನಾಂ ವರೂಥಿನೀ|

06110045c ಭೀಷ್ಮಮೇವಾಭ್ಯಯಾತ್ತೂರ್ಣಂ ಪ್ರಾಣಾಂಸ್ತ್ಯಕ್ತ್ವಾ ಮಹಾಹವೇ||

ಸೇನಾಪತಿಯ ಮಾತನ್ನು ಕೇಳಿ ತಕ್ಷಣವೇ ಪಾಂಡವರ ಸೇನೆಯು ಮಹಾಹವದಲ್ಲಿ ಪ್ರಾಣವನ್ನೂ ತೊರೆದು ಭೀಷ್ಮನ ಮೇಲೆರಗಿತು.

06110046a ಭೀಷ್ಮೋಽಪಿ ರಥಿನಾಂ ಶ್ರೇಷ್ಠಃ ಪ್ರತಿಜಗ್ರಾಹ ತಾಂ ಚಮೂಂ|

06110046c ಆಪತಂತೀಂ ಮಹಾರಾಜ ವೇಲಾಮಿವ ಮಹೋದಧಿಃ||

ಮಹಾರಾಜ! ರಥಿಗಳಲ್ಲಿ ಶ್ರೇಷ್ಠ ಭೀಷ್ಮನೂ ಕೂಡ ಮೇಲೆ ಬೀಳುತ್ತಿರುವ ಆ ಸೇನೆಯನ್ನು ಮಹಾಸಾಗರವನ್ನು ಖಂಡವು ಹೇಗೋ ಹಾಗೆ ತಡೆ ಹಿಡಿದನು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಮಾರ್ಜುನಪರಾಕ್ರಮೇ ದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಮಾರ್ಜುನಪರಾಕ್ರಮ ಎನ್ನುವ ನೂರಾಹತ್ತನೇ ಅಧ್ಯಾಯವು.

Image result for indian motifs against white background

Comments are closed.