Bhishma Parva: Chapter 100

ಭೀಷ್ಮ ಪರ್ವ: ಭೀಷ್ಮವಧ ಪರ್ವ

೧೦೦

ಅರ್ಜುನ-ಸುಶರ್ಮರ ಯುದ್ಧ (೧-೧೫). ದ್ವಂದ್ವಯುದ್ಧಗಳು (೧೬-೨೬). ಸಾತ್ಯಕಿ-ಭೀಷ್ಮರ ಯುದ್ಧ (೨೭-೩೭).

06100001 ಸಂಜಯ ಉವಾಚ|

06100001a ಅರ್ಜುನಸ್ತು ನರವ್ಯಾಘ್ರ ಸುಶರ್ಮಪ್ರಮುಖಾನ್ನೃಪಾನ್|

06100001c ಅನಯತ್ಪ್ರೇತರಾಜಸ್ಯ ಭವನಂ ಸಾಯಕೈಃ ಶಿತೈಃ||

ಸಂಜಯನು ಹೇಳಿದನು: “ನರವ್ಯಾಘ್ರ! ಅರ್ಜುನನಾದರೋ ಸುಶರ್ಮನ ನಾಯಕತ್ವದಲ್ಲಿದ್ದ ನೃಪರನ್ನು ನಿಶಿತ ಸಾಯಕಗಳಿಂದ ಪ್ರೇತರಾಜನ ಭವನಕ್ಕೆ ಕಳುಹಿಸಿದನು.

06100002a ಸುಶರ್ಮಾಪಿ ತತೋ ಬಾಣೈಃ ಪಾರ್ಥಂ ವಿವ್ಯಾಧ ಸಂಯುಗೇ|

06100002c ವಾಸುದೇವಂ ಚ ಸಪ್ತತ್ಯಾ ಪಾರ್ಥಂ ಚ ನವಭಿಃ ಪುನಃ||

ಸುಶರ್ಮನೂ ಕೂಡ ಸಂಯುಗದಲ್ಲಿ ಬಾಣಗಳಿಂದ ಪಾರ್ಥನನ್ನು ಮತ್ತು ಪುನಃ ಏಳರಿಂದ ವಾಸುದೇವನನ್ನು ಹಾಗೂ ಎಂಭತ್ತರಿಂದ ಪಾರ್ಥನನ್ನು ಹೊಡೆದನು.

06100003a ತಾನ್ನಿವಾರ್ಯ ಶರೌಘೇಣ ಶಕ್ರಸೂನುರ್ಮಹಾರಥಃ|

06100003c ಸುಶರ್ಮಣೋ ರಣೇ ಯೋಧಾನ್ಪ್ರಾಹಿಣೋದ್ಯಮಸಾದನಂ||

ಅವನನ್ನು ಶರೌಘಗಳಿಂದ ತಡೆದು ಮಹಾರಥ ಶಕ್ರಸೂನುವು ರಣದಲ್ಲಿ ಸುಶರ್ಮನ ಯೋಧರನ್ನು ಯಮಸಾದನಕ್ಕೆ ಕಳುಹಿಸಿದನು.

06100004a ತೇ ವಧ್ಯಮಾನಾಃ ಪಾರ್ಥೇನ ಕಾಲೇನೇವ ಯುಗಕ್ಷಯೇ|

06100004c ವ್ಯದ್ರವಂತ ರಣೇ ರಾಜನ್ಭಯೇ ಜಾತೇ ಮಹಾರಥಾಃ||

ರಾಜನ್! ಯುಗಕ್ಷಯದಲ್ಲಿ ಕಾಲನಂತೆ ಪಾರ್ಥನಿಂದ ವಧಿಸಲ್ಪಟ್ಟ ಆ ಮಹಾರಥರಿಗೆ ಭಯವು ಹುಟ್ಟಿ ಪಲಾಯನ ಮಾಡಿದರು.

06100005a ಉತ್ಸೃಜ್ಯ ತುರಗಾನ್ಕೇ ಚಿದ್ರಥಾನ್ಕೇ ಚಿಚ್ಚ ಮಾರಿಷ|

06100005c ಗಜಾನನ್ಯೇ ಸಮುತ್ಸೃಜ್ಯ ಪ್ರಾದ್ರವಂತ ದಿಶೋ ದಶ||

ಮಾರಿಷ! ಕೆಲವರು ಕುದುರೆಗಳನ್ನು ಬಿಟ್ಟು, ಕೆಲವರು ರಥಗಳನ್ನು ಬಿಟ್ಟು, ಇನ್ನು ಕೆಲವರು ಆನೆಗಳನ್ನು ಬಿಟ್ಟು ಹತ್ತೂ ಕಡೆಗಳಲ್ಲಿ ಓಡತೊಡಗಿದರು.

06100006a ಅಪರೇ ತುದ್ಯಮಾನಾಸ್ತು ವಾಜಿನಾಗರಥಾ ರಣಾತ್|

06100006c ತ್ವರಯಾ ಪರಯಾ ಯುಕ್ತಾಃ ಪ್ರಾದ್ರವಂತ ವಿಶಾಂ ಪತೇ||

ವಿಶಾಂಪತೇ! ಇನ್ನು ಕೆಲವರು ತಮ್ಮೊಂದಿಗೆ ಕುದುರೆ, ರಥ, ಆನೆಗಳನ್ನು ಕರೆದುಕೊಂಡು ತ್ವರೆಮಾಡಿ ರಣದಿಂದ ಪಲಾಯನ ಮಾಡುತ್ತಿದ್ದರು.

06100007a ಪಾದಾತಾಶ್ಚಾಪಿ ಶಸ್ತ್ರಾಣಿ ಸಮುತ್ಸೃಜ್ಯ ಮಹಾರಣೇ|

06100007c ನಿರಪೇಕ್ಷಾ ವ್ಯಧಾವಂತ ತೇನ ತೇನ ಸ್ಮ ಭಾರತ||

ಭಾರತ! ಪದಾತಿಗಳು ಕೂಡ ಮಹಾರಣದಲ್ಲಿ ಶಸ್ತ್ರಗಳನ್ನು ಬಿಸುಟು ಇತರರ ಮೇಲೆ ಅನುಕಂಪವಿಲ್ಲದೇ ಅಲ್ಲಲ್ಲಿ ಓಡಿ ಹೋಗುತ್ತಿದ್ದರು.

06100008a ವಾರ್ಯಮಾಣಾಃ ಸ್ಮ ಬಹುಶಸ್ತ್ರೈಗರ್ತೇನ ಸುಶರ್ಮಣಾ|

06100008c ತಥಾನ್ಯೈಃ ಪಾರ್ಥಿವಶ್ರೇಷ್ಠೈರ್ನ ವ್ಯತಿಷ್ಠಂತ ಸಂಯುಗೇ||

ತ್ರೈಗರ್ತ ಸುಶರ್ಮ ಮತ್ತು ಇತರ ಪಾರ್ಥಿವಶ್ರೇಷ್ಠರು ಅವರನ್ನು ಬಹಳವಾಗಿ ತಡೆದರೂ ಸಂಯುಗದಲ್ಲಿ ಅವರು ನಿಲ್ಲಲಿಲ್ಲ.

06100009a ತದ್ಬಲಂ ಪ್ರದ್ರುತಂ ದೃಷ್ಟ್ವಾ ಪುತ್ರೋ ದುರ್ಯೋಧನಸ್ತವ|

06100009c ಪುರಸ್ಕೃತ್ಯ ರಣೇ ಭೀಷ್ಮಂ ಸರ್ವಸೈನ್ಯಪುರಸ್ಕೃತಂ||

06100010a ಸರ್ವೋದ್ಯೋಗೇನ ಮಹತಾ ಧನಂಜಯಮುಪಾದ್ರವತ್|

06100010c ತ್ರಿಗರ್ತಾಧಿಪತೇರರ್ಥೇ ಜೀವಿತಸ್ಯ ವಿಶಾಂ ಪತೇ||

ವಿಶಾಂಪತೇ! ಆ ಸೇನೆಯು ಪಲಾಯನ ಮಾಡುತ್ತಿರುವುದನ್ನು ನೋಡಿ ನಿನ್ನ ಮಗ ದುರ್ಯೋಧನನು ರಣದಲ್ಲಿ ಭೀಷ್ಮನನ್ನು ಮುಂದಿಟ್ಟುಕೊಂಡು, ಸರ್ವಸೇನೆಗಳನ್ನು ಕರೆದುಕೊಂಡು ಎಲ್ಲರನ್ನೂ ಒಟ್ಟುಗೂಡಿಕೊಂಡು ತ್ರಿಗರ್ತರಾಜನ ಜೀವವನ್ನುಳಿಸಲು ಧನಂಜಯನ ಮೇಲೆರಗಿದನು.

06100011a ಸ ಏಕಃ ಸಮರೇ ತಸ್ಥೌ ಕಿರನ್ಬಹುವಿಧಾಂ ಶರಾನ್|

06100011c ಭ್ರಾತೃಭಿಃ ಸಹಿತಃ ಸರ್ವೈಃ ಶೇಷಾ ವಿಪ್ರದ್ರುತಾ ನರಾಃ||

ಅವನೊಬ್ಬನೇ ಬಹವಿಧದ ಬಾಣಗಳನ್ನು ಬೀರುತ್ತಾ ತನ್ನ ಸಹೋದರರೊಂದಿಗೆ ಸಮರದಲ್ಲಿ ನಿಂತಿದ್ದನು. ಉಳಿದವರೆಲ್ಲರೂ ಪಲಾಯನ ಮಾಡಿದ್ದರು.

06100012a ತಥೈವ ಪಾಂಡವಾ ರಾಜನ್ಸರ್ವೋದ್ಯೋಗೇನ ದಂಶಿತಾಃ|

06100012c ಪ್ರಯಯುಃ ಫಲ್ಗುನಾರ್ಥಾಯ ಯತ್ರ ಭೀಷ್ಮೋ ವ್ಯವಸ್ಥಿತಃ||

ರಾಜನ್! ಹಾಗೆಯೇ ಪಾಂಡವರೂ ಕೂಡ ಸರ್ವಸೇನೆಗಳಿಂದೊಡಗೂಡಿ ಕವಚಗಳನ್ನು ಧರಿಸಿ ಫಲ್ಗುನನಿಗಾಗಿ ಭೀಷ್ಮನಿದ್ದಲ್ಲಿಗೆ ಬಂದರು.

06100013a ಜಾನಂತೋಽಪಿ ರಣೇ ಶೌರ್ಯಂ ಘೋರಂ ಗಾಂಡೀವಧನ್ವನಃ|

06100013c ಹಾಹಾಕಾರಕೃತೋತ್ಸಾಹಾ ಭೀಷ್ಮಂ ಜಗ್ಮುಃ ಸಮಂತತಃ||

ಗಾಂಡೀವಧನ್ವಿಯ ಘೋರ ಶೌರ್ಯವನ್ನು ತಿಳಿದಿದ್ದರೂ ಅವರು ಹಾಹಾಕಾರಗೈಯುತ್ತಾ ಉತ್ಸಾಹದಿಂದ ಹೋಗಿ ಭೀಷ್ಮನನ್ನು ಸುತ್ತುವರೆದರು.

06100014a ತತಸ್ತಾಲಧ್ವಜಃ ಶೂರಃ ಪಾಂಡವಾನಾಮನೀಕಿನೀಂ|

06100014c ಚಾದಯಾಮಾಸ ಸಮರೇ ಶರೈಃ ಸನ್ನತಪರ್ವಭಿಃ||

ಆಗ ಶೂರ ತಾಲದ್ವಜನು ಸಮರದಲ್ಲಿ ಪಾಂಡವರ ಸೇನೆಯನ್ನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು.

06100015a ಏಕೀಭೂತಾಸ್ತತಃ ಸರ್ವೇ ಕುರವಃ ಪಾಂಡವೈಃ ಸಹ|

06100015c ಅಯುಧ್ಯಂತ ಮಹಾರಾಜ ಮಧ್ಯಂ ಪ್ರಾಪ್ತೇ ದಿವಾಕರೇ||

ಮಹಾರಾಜ! ಸೂರ್ಯನು ನಡುನೆತ್ತಿಯ ಮೇಲೆ ಬರಲು ಕುರುಗಳು ಎಲ್ಲರೂ ಒಂದಾಗಿ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದರು.

06100016a ಸಾತ್ಯಕಿಃ ಕೃತವರ್ಮಾಣಂ ವಿದ್ಧ್ವಾ ಪಂಚಭಿರಾಯಸೈಃ|

06100016c ಅತಿಷ್ಠದಾಹವೇ ಶೂರಃ ಕಿರನ್ ಬಾಣಾನ್ ಸಹಸ್ರಶಃ||

ಶೂರ ಸಾತ್ಯಕಿಯು ಕೃತವರ್ಮನನ್ನು ಐದು ಆಯಸಗಳಿಂದ ಹೊಡೆದು ಸಹಸ್ರಾರು ಬಾಣಗಳನ್ನು ಹರಡಿ ಯುದ್ಧದಲ್ಲಿ ತೊಡಗಿದನು.

06100017a ತಥೈವ ದ್ರುಪದೋ ರಾಜಾ ದ್ರೋಣಂ ವಿದ್ಧ್ವಾ ಶಿತೈಃ ಶರೈಃ|

06100017c ಪುನರ್ವಿವ್ಯಾಧ ಸಪ್ತತ್ಯಾ ಸಾರಥಿಂ ಚಾಸ್ಯ ಸಪ್ತಭಿಃ||

ಹಾಗೆಯೇ ರಾಜ ದ್ರುಪದನು ದ್ರೋಣನನ್ನು ನಿಶಿತ ಶರಗಳಿಂದ ಹೊಡೆದು ಪುನಃ ಅವನನ್ನು ಏಳರಿಂದ ಮತ್ತು ಸಾರಥಿಯನ್ನು ಏಳರಿಂದ ಹೊಡೆದನು.

06100018a ಭೀಮಸೇನಸ್ತು ರಾಜಾನಂ ಬಾಹ್ಲಿಕಂ ಪ್ರಪಿತಾಮಹಂ|

06100018c ವಿದ್ಧ್ವಾನದನ್ಮಹಾನಾದಂ ಶಾರ್ದೂಲ ಇವ ಕಾನನೇ||

ಭೀಮಸೇನನಾದರೋ ಪ್ರಪಿತಾಮಹ ರಾಜಾ ಬಾಹ್ಲೀಕನನ್ನು ಹೊಡೆದು ಕಾನನದಲ್ಲಿ ಸಿಂಹದಂತೆ ಮಹಾನಾದಗೈದನು.

06100019a ಆರ್ಜುನಿಶ್ಚಿತ್ರಸೇನೇನ ವಿದ್ಧೋ ಬಹುಭಿರಾಶುಗೈಃ|

06100019c ಚಿತ್ರಸೇನಂ ತ್ರಿಭಿರ್ಬಾಣೈರ್ವಿವ್ಯಾಧ ಹೃದಯೇ ಭೃಶಂ||

ಚಿತ್ರಸೇನನಿಂದ ಅನೇಕ ಆಶುಗಗಳಿಂದ ಹೊಡೆಯಲ್ಪಟ್ಟ ಆರ್ಜುನಿಯು ಚಿತ್ರಸೇನನ ಹೃದಯವನ್ನು ಮೂರು ಬಾಣಗಳಿಂದ ಚೆನ್ನಾಗಿ ಹೊಡೆದನು.

06100020a ಸಮಾಗತೌ ತೌ ತು ರಣೇ ಮಹಾಮಾತ್ರೌ ವ್ಯರೋಚತಾಂ|

06100020c ಯಥಾ ದಿವಿ ಮಹಾಘೋರೌ ರಾಜನ್ಬುಧಶನೈಶ್ಚರೌ||

ರಾಜನ್! ದಿವಿಯಲ್ಲಿ ಮಹಾಘೋರರಾದ ಬುಧ-ಶನೈಶ್ಚರರಂತೆ ರಣದಲ್ಲಿ ಸೇರಿದ್ದ ಆ ಮಹಾಕಾಯರಿಬ್ಬರೂ ಬೆಳಗಿದರು.

06100021a ತಸ್ಯಾಶ್ವಾಂಶ್ಚತುರೋ ಹತ್ವಾ ಸೂತಂ ಚ ನವಭಿಃ ಶರೈಃ|

06100021c ನನಾದ ಬಲವನ್ನಾದಂ ಸೌಭದ್ರಃ ಪರವೀರಹಾ||

ಪರವೀರಹ ಸೌಭದ್ರನು ಅವನ ನಾಲ್ಕೂ ಕುದುರೆಗಳನ್ನೂ ಸೂತನನ್ನೂ ಒಂಭತ್ತು ಶರಗಳಿಂದ ಸಂಹರಿಸಿ ಜೋರಾಗಿ ಕೂಗಿದನು.

06100022a ಹತಾಶ್ವಾತ್ತು ರಥಾತ್ತೂರ್ಣಮವಪ್ಲುತ್ಯ ಮಹಾರಥಃ|

06100022c ಆರುರೋಹ ರಥಂ ತೂರ್ಣಂ ದುರ್ಮುಖಸ್ಯ ವಿಶಾಂ ಪತೇ||

ವಿಶಾಂಪತೇ! ಅಶ್ವಗಳು ಹತರಾಗಲು ಆ ಮಹಾರಥನು ತಕ್ಷಣವೇ ರಥದಿಂದ ಧುಮುಕಿ ದುರ್ಮುಖನ ರಥವನ್ನೇರಿದರು.

06100023a ದ್ರೋಣಶ್ಚ ದ್ರುಪದಂ ವಿದ್ಧ್ವಾ ಶರೈಃ ಸನ್ನತಪರ್ವಭಿಃ|

06100023c ಸಾರಥಿಂ ಚಾಸ್ಯ ವಿವ್ಯಾಧ ತ್ವರಮಾಣಃ ಪರಾಕ್ರಮೀ||

ಪರಾಕ್ರಮೀ ದ್ರೋಣನು ದ್ರುಪದನನ್ನು ಸನ್ನತಪರ್ವ ಶರಗಳಿಂದ ಹೊಡೆದು ತಕ್ಷಣವೇ ಅವನ ಸಾರಥಿಯನ್ನೂ ಹೊಡೆದನು.

06100024a ಪೀಡ್ಯಮಾನಸ್ತತೋ ರಾಜಾ ದ್ರುಪದೋ ವಾಹಿನೀಮುಖೇ|

06100024c ಅಪಾಯಾಜ್ಜವನೈರಶ್ವೈಃ ಪೂರ್ವವೈರಮನುಸ್ಮರನ್||

ಸೇನಾಮುಖದಲ್ಲಿ ಹಾಗೆ ಪೀಡೆಗೊಳಗಾದ ರಾಜಾ ದ್ರುಪದನು ಹಿಂದಿನ ವೈರವನ್ನು ಸ್ಮರಿಸಿಕೊಂಡು ವೇಗಶಾಲಿ ಕುದುರೆಗಳ ಮೇಲೇರಿ ಪಲಾಯನ ಮಾಡಿದನು.

06100025a ಭೀಮಸೇನಸ್ತು ರಾಜಾನಂ ಮುಹೂರ್ತಾದಿವ ಬಾಹ್ಲಿಕಂ|

06100025c ವ್ಯಶ್ವಸೂತರಥಂ ಚಕ್ರೇ ಸರ್ವಸೈನ್ಯಸ್ಯ ಪಶ್ಯತಃ||

ಭೀಮಸೇನನಾದರೋ ಮುಹೂರ್ತದಲ್ಲಿಯೇ ಎಲ್ಲ ಸೇನೆಗಳೂ ನೋಡುತ್ತಿರುವಂತೆ ರಾಜ ಬಾಹ್ಲೀಕನ ಕುದುರೆಗಳು, ಸಾರಥಿ ಮತ್ತು ರಥವನ್ನು ಧ್ವಂಸ ಮಾಡಿದನು.

06100026a ಸಸಂಭ್ರಮೋ ಮಹಾರಾಜ ಸಂಶಯಂ ಪರಮಂ ಗತಃ|

06100026c ಅವಪ್ಲುತ್ಯ ತತೋ ವಾಹಾದ್ಬಾಹ್ಲಿಕಃ ಪುರುಷೋತ್ತಮಃ|

06100026e ಆರುರೋಹ ರಥಂ ತೂರ್ಣಂ ಲಕ್ಷ್ಮಣಸ್ಯ ಮಹಾರಥಃ||

ಮಹಾರಾಜ! ಆಗ ಗಾಭರಿಗೊಂಡು ಅತೀವ ಸಂಶಯದಿಂದ ಪುರುಷೋತ್ತಮ ಬಾಹ್ಲೀಕನು ವಾಹನದಿಂದ ಕೆಳಗೆ ಹಾರಿ ತಕ್ಷಣವೇ ಮಹಾರಥ ಲಕ್ಷ್ಮಣನ ರಥವನ್ನೇರಿದನು.

06100027a ಸಾತ್ಯಕಿಃ ಕೃತವರ್ಮಾಣಂ ವಾರಯಿತ್ವಾ ಮಹಾರಥಃ|

06100027c ಶರೈರ್ಬಹುವಿಧೈ ರಾಜನ್ನಾಸಸಾದ ಪಿತಾಮಹಂ||

ರಾಜನ್! ಕೃತವರ್ಮನನ್ನು ತಡೆಹಿದಿದು ಮಹಾರಥ ಸಾತ್ಯಕಿಯು ಬಹುವಿಧದ ಶರಗಳಿಂದ ಪಿತಾಮಹನನ್ನು ಎದುರಿಸಿದನು.

06100028a ಸ ವಿದ್ಧ್ವಾ ಭಾರತಂ ಷಷ್ಟ್ಯಾ ನಿಶಿತೈರ್ಲೋಮವಾಹಿಭಿಃ|

06100028c ನನರ್ತೇವ ರಥೋಪಸ್ಥೇ ವಿಧುನ್ವಾನೋ ಮಹದ್ಧನುಃ||

ಅವನು ಭಾರತನನ್ನು ಅರವತ್ತು ನಿಶಿತ ಲೋಮವಾಹಿಗಳಿಂದ ಹೊಡೆದನು. ಅವನು ಮಹಾಧನುಸ್ಸನ್ನು ಅಲುಗಾಡಿಸುತ್ತಾ ರಥದಲ್ಲಿ ನಿಂತು ನರ್ತಿಸುವಂತಿದ್ದನು.

06100029a ತಸ್ಯಾಯಸೀಂ ಮಹಾಶಕ್ತಿಂ ಚಿಕ್ಷೇಪಾಥ ಪಿತಾಮಹಃ|

06100029c ಹೇಮಚಿತ್ರಾಂ ಮಹಾವೇಗಾಂ ನಾಗಕನ್ಯೋಪಮಾಂ ಶುಭಾಂ||

ಅವನ ಮೇಲೆ ಪಿತಾಮಹನು ಹೇಮಚಿತ್ರದ, ಮಹಾವೇಗದ, ನಾಗಕನ್ಯೆಯಂತೆ ಶುಭವಾಗಿದ್ದ ಮಹಾ ಶಕ್ತಿಯನ್ನು ಎಸೆದನು.

06100030a ತಾಮಾಪತಂತೀಂ ಸಹಸಾ ಮೃತ್ಯುಕಲ್ಪಾಂ ಸುತೇಜನಾಂ|

06100030c ಧ್ವಂಸಯಾಮಾಸ ವಾರ್ಷ್ಣೇಯೋ ಲಾಘವೇನ ಮಹಾಯಶಾಃ||

ತನ್ನ ಮೇಲೆ ಬೀಳಲು ಬರುತ್ತಿದ್ದ ಮೃತ್ಯುವನಂತಿದ್ದ ಆ ತೇಜಸ್ಸುಳ್ಳದ್ದನ್ನು ವಾರ್ಷ್ಣೇಯನು ತಕ್ಷಣವೇ ಕೈಚಳಕದಿಂದ ಧ್ವಂಸಮಾಡಿದನು.

06100031a ಅನಾಸಾದ್ಯ ತು ವಾರ್ಷ್ಣೇಯಂ ಶಕ್ತಿಃ ಪರಮದಾರುಣಾ|

06100031c ನ್ಯಪತದ್ಧರಣೀಪೃಷ್ಠೇ ಮಹೋಲ್ಕೇವ ಗತಪ್ರಭಾ||

ವಾರ್ಷ್ಣೇಯನನ್ನು ತಲುಪದಿದ್ದ ಆ ಪರಮದಾರುಣ ಶಕ್ತಿಯು ಪ್ರಭೆಯನ್ನು ಕಳೆದುಕೊಂಡು ಮಹಾ‌ಉಲ್ಕದಂತೆ ಭೂಮಿಯ ಮೇಲೆ ಬಿದ್ದಿತು.

06100032a ವಾರ್ಷ್ಣೇಯಸ್ತು ತತೋ ರಾಜನ್ಸ್ವಾಂ ಶಕ್ತಿಂ ಘೋರದರ್ಶನಾಂ|

06100032c ವೇಗವದ್ಗೃಹ್ಯ ಚಿಕ್ಷೇಪ ಪಿತಾಮಹರಥಂ ಪ್ರತಿ||

ರಾಜನ್! ಆಗ ವಾರ್ಷ್ಣೇಯನಾದರೋ ನೋಡಲು ಘೋರವಾಗಿದ್ದ ತನ್ನದೇ ಶಕ್ತಿಯನ್ನು ಹಿಡಿದು ವೇಗದಿಂದ ಪಿತಾಮಹನ ರಥದ ಮೇಲೆ ಎಸೆದನು.

06100033a ವಾರ್ಷ್ಣೇಯಭುಜವೇಗೇನ ಪ್ರಣುನ್ನಾ ಸಾ ಮಹಾಹವೇ|

06100033c ಅಭಿದುದ್ರಾವ ವೇಗೇನ ಕಾಲರಾತ್ರಿರ್ಯಥಾ ನರಂ||

ವಾರ್ಷ್ಣೇಯನ ಭುಜವೇಗದಿಂದ ಪ್ರಯಾಣಿಸಿದ ಅದು ಮಹಾಹವದಲ್ಲಿ ಕಾಲರಾತ್ರಿಯಂತೆ ಧಾವಿಸಿ ಬಂದಿತು.

06100034a ತಾಮಾಪತಂತೀಂ ಸಹಸಾ ದ್ವಿಧಾ ಚಿಚ್ಛೇದ ಭಾರತ|

06100034c ಕ್ಷುರಪ್ರಾಭ್ಯಾಂ ಸುತೀಕ್ಷ್ಣಾಭ್ಯಾಂ ಸಾನ್ವಕೀರ್ಯತ ಭೂತಲೇ||

ಬರುತ್ತಿದ್ದ ಅದನ್ನು ಭಾರತನು ಎರಡು ತೀಕ್ಷ್ಣ ಕ್ಷುರಪ್ರಗಳಿಂದ ತಕ್ಷಣವೇ ಎರಡಾಗಿ ಕತ್ತರಿಸಿ, ನೆಲದ ಮೇಲೆ ಬೀಳಿಸಿದನು.

06100035a ಚಿತ್ತ್ವಾ ತು ಶಕ್ತಿಂ ಗಾಂಗೇಯಃ ಸಾತ್ಯಕಿಂ ನವಭಿಃ ಶರೈಃ|

06100035c ಆಜಘಾನೋರಸಿ ಕ್ರುದ್ಧಃ ಪ್ರಹಸನ್ ಶತ್ರುಕರ್ಶನಃ||

ಶಕ್ತಿಯನ್ನು ಗೆದ್ದು ಶತ್ರುಕರ್ಶನ ಗಾಂಗೇಯನು ಜೋರಾಗಿ ನಕ್ಕು ಸಾತ್ಯಕಿಯನ್ನು ಎದೆಯಲ್ಲಿ ಒಂಭತ್ತು ಶರಗಳಿಂದ ಹೊಡೆದನು.

06100036a ತತಃ ಸರಥನಾಗಾಶ್ವಾಃ ಪಾಂಡವಾಃ ಪಾಂಡುಪೂರ್ವಜ|

06100036c ಪರಿವವ್ರೂ ರಣೇ ಭೀಷ್ಮಂ ಮಾಧವತ್ರಾಣಕಾರಣಾತ್||

ಪಾಂಡುಪೂರ್ವಜ! ಆಗ ಮಾಧವನು ಕಷ್ಟದಲ್ಲಿದ್ದುದರಿಂದ ಪಾಂಡವರು ರಥ-ಆನೆ-ಕುದುರೆಗಳೊಂದಿಗೆ ರಣದಲ್ಲಿ ಭೀಷ್ಮನನ್ನು ಸುತ್ತುವರೆದರು.

06100037a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣ|

06100037c ಪಾಂಡವಾನಾಂ ಕುರೂಣಾಂ ಚ ಸಮರೇ ವಿಜಯೈಷಿಣಾಂ||

ಆಗ ಸಮರದಲ್ಲಿ ವಿಜಯವನ್ನು ಬಯಸಿದ ಪಾಂಡವರ ಮತ್ತು ಕುರುಗಳ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಾರ್ಷ್ಣೇಯಯುದ್ಧೇ ಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಾರ್ಷ್ಣೇಯಯುದ್ಧ ಎನ್ನುವ ನೂರನೇ ಅಧ್ಯಾಯವು.

Image result for indian motifs against white background

Comments are closed.