Ashvamedhika Parva: Chapter 2

ಅಶ್ವಮೇಧಿಕ ಪರ್ವ

ಶೋಕಗೈಯುತ್ತಿದ್ದ ಯುಧಿಷ್ಠಿರನನ್ನು ಕೃಷ್ಣನು ಸಂತವಿಸಿದುದು (೧-೮). ಯಾವ ಕರ್ಮಗಳನ್ನು ಮಾಡುವುದರಿಂದ ತಾನು ಮಾಡಿದ ಕ್ರೂರ ಪಾಪಗಳಿಂದ ಬಿಡುಗಡೆಹೊಂದಬಲ್ಲ ಎಂದು ಯುಧಿಷ್ಠಿರನು ಕೃಷ್ಣನನ್ನು ಕೇಳಿದುದು (೯-೧೩). ಆಗ ವ್ಯಾಸನು “ಪ್ರಾಯಶ್ಚಿತ್ತಗಳೆಲ್ಲವನ್ನೂ ತಿಳಿದಿರುವ ನೀನು ಹೀಗೆ ಏಕೆ ಪುನಃ ಪುನಃ ಮೋಹಗೊಳ್ಳುತ್ತಿರುವೆ?” ಎಂದು ಪ್ರಶ್ನಿಸಿದುದು (೧೪-೨೦).

14002001 ವೈಶಂಪಾಯನ ಉವಾಚ|

14002001a ಏವಮುಕ್ತಸ್ತು ರಾಜ್ಞಾ ಸ ಧೃತರಾಷ್ಟ್ರೇಣ ಧೀಮತಾ|

14002001c ತೂಷ್ಣೀಂ ಬಭೂವ ಮೇಧಾವೀ ತಮುವಾಚಾಥ ಕೇಶವಃ||

ವೈಶಂಪಾಯನನು ಹೇಳಿದನು: “ಧೀಮಂತ ರಾಜಾ ಧೃತರಾಷ್ಟ್ರನ ಈ ಮಾತುಗಳನ್ನು ಕೇಳಿ ಸುಮ್ಮನಾಗಿದ್ದ ಮೇಧಾವೀ ಯುಧಿಷ್ಠಿರನಿಗೆ ಕೇಶವನು ಹೇಳಿದನು:

14002002a ಅತೀವ ಮನಸಾ ಶೋಕಃ ಕ್ರಿಯಮಾಣೋ ಜನಾಧಿಪ|

14002002c ಸಂತಾಪಯತಿ ವೈತಸ್ಯ ಪೂರ್ವಪ್ರೇತಾನ್ಪಿತಾಮಹಾನ್||

“ಜನಾಧಿಪ! ಮನಸಾ ಅತೀವ ಶೋಕವನ್ನು ಮಾಡುವುದರಿಂದ ನೀನು ಈ ಮೊದಲೇ ತೀರಿಹೋಗಿರುವ ಪಿತಾಮಹರನ್ನು ಸಂತಾಪಗೊಳಿಸುತ್ತಿದ್ದೀಯೆ.

14002003a ಯಜಸ್ವ ವಿವಿಧೈರ್ಯಜ್ಞೈರ್ಬಹುಭಿಃ ಸ್ವಾಪ್ತದಕ್ಷಿಣೈಃ|

14002003c ದೇವಾಂಸ್ತರ್ಪಯ ಸೋಮೇನ ಸ್ವಧಯಾ ಚ ಪಿತೄನಪಿ||

ಅನೇಕ ಆಪ್ತದಕ್ಷಿಣೆಗಳಿಂದೊಡಗೂಡಿದ ವಿವಿಧ ಯಜ್ಞಗಳನ್ನು ಮಾಡಿ ಸೋಮರಸದಿಂದ ದೇವತೆಗಳನ್ನೂ ಸ್ವಧಾರಸದಿಂದ ಪಿತೃಗಳನ್ನೂ ತೃಪ್ತಿಗೊಳಿಸು.

14002004a ತ್ವದ್ವಿಧಸ್ಯ ಮಹಾಬುದ್ಧೇ ನೈತದದ್ಯೋಪಪದ್ಯತೇ|

14002004c ವಿದಿತಂ ವೇದಿತವ್ಯಂ ತೇ ಕರ್ತವ್ಯಮಪಿ ತೇ ಕೃತಮ್||

ಮಹಾಬುದ್ಧಿಯೇ! ಇವಕ್ಕೆ ಸಿದ್ಧತೆಗಳನ್ನು ಮಾಡುವುದಿದೆ ಎನ್ನುವುದನ್ನು ತಿಳಿದುಕೋ! ಮಾಡಬೇಕಾದುದು ಏನು ಎಂದು ನಿನಗೆ ತಿಳಿದಿದೆ ಮತ್ತು ಮಾಡಬೇಕಾದುದನ್ನು ನೀನು ಮಾಡಿದ್ದೀಯೆ ಕೂಡ!

14002005a ಶ್ರುತಾಶ್ಚ ರಾಜಧರ್ಮಾಸ್ತೇ ಭೀಷ್ಮಾದ್ಭಾಗೀರಥೀಸುತಾತ್|

14002005c ಕೃಷ್ಣದ್ವೈಪಾಯನಾಚ್ಚೈವ ನಾರದಾದ್ವಿದುರಾತ್ತಥಾ||

ಭಾಗೀರಥೀ ಸುತ ಭೀಷ್ಮ, ಕೃಷ್ಣ ದ್ವೈಪಾಯನ, ನಾರದ ಮತ್ತು ವಿದುರರಿಂದ ರಾಜಧರ್ಮಗಳ ಕುರಿತೂ ನೀನು ಕೇಳಿದ್ದೀಯೆ.

14002006a ನೇಮಾಮರ್ಹಸಿ ಮೂಢಾನಾಂ ವೃತ್ತಿಂ ತ್ವಮನುವರ್ತಿತುಮ್|

14002006c ಪಿತೃಪೈತಾಮಹೀಂ ವೃತ್ತಿಮಾಸ್ಥಾಯ ಧುರಮುದ್ವಹ||

ನೀನು ಮೂಡರ ಈ ವೃತ್ತಿಯನ್ನು ಅನುಸರಿಸುವುದು ಸರಿಯಲ್ಲ. ಯುದ್ಧದಲ್ಲಿ ಗೆದ್ದವನೇ! ನಿನ್ನ ಪಿತೃ-ಪಿತಾಮಹರ ವೃತ್ತಿಯನ್ನು ಅನುಸರಿಸು!

14002007a ಯುಕ್ತಂ ಹಿ ಯಶಸಾ ಕ್ಷತ್ರಂ ಸ್ವರ್ಗಂ ಪ್ರಾಪ್ತುಮಸಂಶಯಮ್|

14002007c ನ ಹಿ ಕಶ್ಚನ ಶೂರಾಣಾಂ ನಿಹತೋಽತ್ರ ಪರಾಙ್ಮುಖಃ||

ಕ್ಷತ್ರಿಯನಿಗೆ ಯುದ್ಧದಲ್ಲಿ ಯಶಸ್ಸನ್ನು ಬಯಸುವುದಕ್ಕಿಂತ ಸ್ವರ್ಗವನ್ನು ಪಡೆಯುವ ಬಯಕೆಯೇ ಹೆಚ್ಚಿನದು ಎನ್ನುವುದರಲ್ಲಿ ಸಂಶಯವಿಲ್ಲ. ಈಗ ಸತ್ತ ಶೂರರಲ್ಲಿ ಪರಾಙ್ಮುಖರಾದವರು ಯಾರೂ ಇಲ್ಲ.

14002008a ತ್ಯಜ ಶೋಕಂ ಮಹಾರಾಜ ಭವಿತವ್ಯಂ ಹಿ ತತ್ತಥಾ|

14002008c ನ ಶಕ್ಯಾಸ್ತೇ ಪುನರ್ದ್ರಷ್ಟುಂ ತ್ವಯಾ ಹ್ಯಸ್ಮಿನ್ರಣೇ ಹತಾಃ||

ಮಹಾರಾಜ! ನೀನು ಶೋಕವನ್ನು ಬಿಡು! ಅದು ಹಾಗೆಯೇ ಆಗಬೇಕಾಗಿತ್ತು. ಈ ರಣದಲ್ಲಿ ಹತರಾದವನ್ನು ಪುನಃ ನೀನು ನೋಡಲು ಶಕ್ಯನಿಲ್ಲ.”

14002009a ಏತಾವದುಕ್ತ್ವಾ ಗೋವಿಂದೋ ಧರ್ಮರಾಜಂ ಯುಧಿಷ್ಠಿರಮ್|

14002009c ವಿರರಾಮ ಮಹಾತೇಜಾಸ್ತಮುವಾಚ ಯುಧಿಷ್ಠಿರಃ||

ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಗೋವಿಂದನು ಸುಮ್ಮನಾದನು. ಆಗ ಮಹಾತೇಜಸ್ವಿ ಯುಧಿಷ್ಠಿರನು ಅವನಿಗೆ ಉತ್ತರಿಸಿದನು:

14002010a ಗೋವಿಂದ ಮಯಿ ಯಾ ಪ್ರೀತಿಸ್ತವ ಸಾ ವಿದಿತಾ ಮಮ|

14002010c ಸೌಹೃದೇನ ತಥಾ ಪ್ರೇಮ್ಣಾ ಸದಾ ಮಾಮನುಕಂಪಸೇ||

“ಗೋವಿಂದ! ನನ್ನ ಮೇಲೆ ನಿನಗೆ ಪ್ರೀತಿಯಿದೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಸ್ನೇಹ ಮತ್ತು ಪ್ರೀತಿಗಳಿಂದ ನೀನು ಸದಾ ನನ್ನ ಮೇಲೆ ಅನುಕಂಪವನ್ನೇ ತೋರಿಸುತ್ತಿರುವೆ.

14002011a ಪ್ರಿಯಂ ತು ಮೇ ಸ್ಯಾತ್ಸುಮಹತ್ಕೃತಂ ಚಕ್ರಗದಾಧರ|

14002011c ಶ್ರೀಮನ್ಪ್ರೀತೇನ ಮನಸಾ ಸರ್ವಂ ಯಾವದನಂದನ||

14002012a ಯದಿ ಮಾಮನುಜಾನೀಯಾದ್ಭವಾನ್ಗಂತುಂ ತಪೋವನಮ್|

ಚಕ್ರ-ಗದಾಧರ! ಯಾದವನಂದನ! ಶ್ರೀಮನ್! ನೀನೇನಾದರೂ ನನಗೆ ತಪೋವನಕ್ಕೆ ಹೋಗಲು ಅನುಮತಿಯನ್ನಿತ್ತಿದ್ದರೆ ನನಗೆ ಪ್ರೀತಿಯಾದುದೆಲ್ಲವನ್ನೂ ಮಾಡಿದಂತಾಗುತ್ತಿತ್ತು.

14002012c ನ ಹಿ ಶಾಂತಿಂ ಪ್ರಪಶ್ಯಾಮಿ ಘಾತಯಿತ್ವಾ ಪಿತಾಮಹಮ್|

14002012e ಕರ್ಣಂ ಚ ಪುರುಷವ್ಯಾಘ್ರಂ ಸಂಗ್ರಾಮೇಷ್ವಪಲಾಯಿನಮ್||

ಪಿತಾಮಹನನ್ನು ಮತ್ತು ಸಂಗ್ರಾಮದಲ್ಲಿ ಪಲಾಯನಮಾಡದಿದ್ದ ಪುರುಷವ್ಯಾಘ್ರ ಕರ್ಣನನ್ನು ಕೊಂದು ನನಗೆ ಶಾಂತಿಯೇ ಇಲ್ಲವಾಗಿದೆ.

14002013a ಕರ್ಮಣಾ ಯೇನ ಮುಚ್ಯೇಯಮಸ್ಮಾತ್ಕ್ರೂರಾದರಿಂದಮ|

14002013c ಕರ್ಮಣಸ್ತದ್ವಿಧತ್ಸ್ವೇಹ ಯೇನ ಶುಧ್ಯತಿ ಮೇ ಮನಃ||

ಅರಿಂದಮ! ಯಾವ ಕರ್ಮಗಳನ್ನು ಮಾಡುವುದರಿಂದ ನಾನು ಈ ಕ್ರೂರ ಪಾಪದಿಂದ ಬಿಡುಗಡೆಹೊಂದುತ್ತೇನೋ ಮತ್ತು ನನ್ನ ಮನಸ್ಸು ಶುದ್ಧಿಯಾಗುತ್ತದೆಯೋ ಆ ಕರ್ಮಗಳ ಕುರಿತು ನನಗೆ ಹೇಳು!”

14002014a ತಮೇವಂವಾದಿನಂ ವ್ಯಾಸಸ್ತತಃ ಪ್ರೋವಾಚ ಧರ್ಮವಿತ್|

14002014c ಸಾಂತ್ವಯನ್ಸುಮಹಾತೇಜಾಃ ಶುಭಂ ವಚನಮರ್ಥವತ್||

ಕೃಷ್ಣನೊಡನೆ ಹೀಗೆ ಮಾತನಾಡುತ್ತಿದ್ದ ಅವನನ್ನು ಸಮಾಧಾನಗೊಳಿಸುತ್ತಾ  ಧರ್ಮವಿದು ಸುಮಹಾತೇಜಸ್ವಿ ವ್ಯಾಸನು ಅರ್ಥವತ್ತಾದ ಈ ಶುಭ ಮಾತುಗಳನ್ನಾಡಿದನು:

14002015a ಅಕೃತಾ ತೇ ಮತಿಸ್ತಾತ ಪುನರ್ಬಾಲ್ಯೇನ ಮುಹ್ಯಸೇ|

14002015c ಕಿಮಾಕಾಶೇ ವಯಂ ಸರ್ವೇ ಪ್ರಲಪಾಮ ಮುಹುರ್ಮುಹುಃ||

“ಮಗೂ! ನಿನ್ನ ಬುದ್ಧಿಯು ಇನ್ನೂ ಬೆಳೆದಿಲ್ಲ. ಪುನಃ ಬಾಲಕನಂತೆ ಮೋಹಕ್ಕೊಳಗಾಗುತ್ತಿದ್ದೀಯೆ. ಮಧ್ಯದಲ್ಲಿ ನಾವೆಲ್ಲರೂ ಏಕೆ ಹೀಗೆ ಪುನಃ ಪುನಃ ಪ್ರಲಾಪಮಾಡುತ್ತಿದ್ದೇವೆ!

14002016a ವಿದಿತಾಃ ಕ್ಷತ್ರಧರ್ಮಾಸ್ತೇ ಯೇಷಾಂ ಯುದ್ಧೇನ ಜೀವಿಕಾ|

14002016c ಯಥಾ ಪ್ರವೃತ್ತೋ ನೃಪತಿರ್ನಾಧಿಬಂಧೇನ ಯುಜ್ಯತೇ||

ಯುದ್ಧದಿಂದಲೇ ಜೀವನ ನಡೆಸುವ ಕ್ಷತ್ರಿಯರ ಧರ್ಮವೆಲ್ಲವೂ ನಿನಗೆ ತಿಳಿದೇ ಇದೆ. ಹಾಗೆ ನಡೆದುಕೊಳ್ಳುವ ನೃಪತಿಯು ಈ ರೀತಿಯ ಶೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ.

14002017a ಮೋಕ್ಷಧರ್ಮಾಶ್ಚ ನಿಖಿಲಾ ಯಾಥಾತಥ್ಯೇನ ತೇ ಶ್ರುತಾಃ|

14002017c ಅಸಕೃಚ್ಚೈವ ಸಂದೇಹಾಶ್ಚಿನ್ನಾಸ್ತೇ ಕಾಮಜಾ ಮಯಾ||

ಮೋಕ್ಷಧರ್ಮವನ್ನೂ ಸಂಪೂರ್ಣವಾಗಿ ನೀನು ಇದ್ದಹಾಗೆ ಕೇಳಿದ್ದೀಯೆ. ನಿನಗೆ ಸಂದೇಹಗಳಿದ್ದಾಗಲೆಲ್ಲಾ ನೀನು ಬಯಸಿದಂತೆ ಎಲ್ಲವನ್ನೂ ಹೇಳಿದ್ದೇನೆ.

14002018a ಅಶ್ರದ್ದಧಾನೋ ದುರ್ಮೇಧಾ ಲುಪ್ತಸ್ಮೃತಿರಸಿ ಧ್ರುವಮ್|

14002018c ಮೈವಂ ಭವ ನ ತೇ ಯುಕ್ತಮಿದಮಜ್ಞಾನಮೀದೃಶಮ್||

ಆದರೆ ನಿನ್ನ ದುರ್ಬುದ್ಧಿಯಿಂದಾಗಿ ನನ್ನ ಮಾತುಗಳ ಮೇಲೆ ನಿನಗೆ ಶ್ರದ್ಧೆಯೇ ಇಲ್ಲವಾಗಿದೆ. ಅಥವಾ ನಿಜವಾಗಿ ನಿನ್ನ ಸ್ಮರಣಶಕ್ತಿಯೇ ಕಳೆದುಹೋಗಿದೆ. ನೀನು ಹೀಗೆಂದೂ ಆಡಬೇಡ. ಮತ್ತು ಈ ರೀತಿ ಅಜ್ಞಾನವನ್ನು ತೋರಿಸಿಕೊಳ್ಳುವುದು ನಿನಗೆ ಸರಿಯಲ್ಲ.

14002019a ಪ್ರಾಯಶ್ಚಿತ್ತಾನಿ ಸರ್ವಾಣಿ ವಿದಿತಾನಿ ಚ ತೇಽನಘ|

14002019c ಯುದ್ಧಧರ್ಮಾಶ್ಚ ತೇ ಸರ್ವೇ ದಾನಧರ್ಮಾಶ್ಚ ತೇ ಶ್ರುತಾಃ||

ಅನಘ! ಪ್ರಾಯಶ್ಚಿತ್ತಗಳೆಲ್ಲವೂ ನಿನಗೆ ತಿಳಿದೇ ಇದೆ. ಯುದ್ಧಧರ್ಮ ಮತ್ತು ದಾನಧರ್ಮಗಳೆಲ್ಲವನ್ನೂ ನೀನು ಕೇಳಿರುವೆ.

14002020a ಸ ಕಥಂ ಸರ್ವಧರ್ಮಜ್ಞಃ ಸರ್ವಾಗಮವಿಶಾರದಃ|

14002020c ಪರಿಮುಹ್ಯಸಿ ಭೂಯಸ್ತ್ವಮಜ್ಞಾನಾದಿವ ಭಾರತ||

ಭಾರತ! ಸರ್ವಧರ್ಮಜ್ಞನೂ ಸರ್ವ ಆಗಮ ವಿಶಾರದನೂ ಆಗಿರುವವನು ಹೇಗೆ ತಾನೇ ಹೀಗೆ ಪುನಃ ಪುನಃ ಅಜ್ಞಾನಿಯಂತೆ ಮೋಹಗೊಳ್ಳುತ್ತಾನೆ?”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವ್ಯಾಸವಾಕ್ಯೇ ದ್ವಿತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಎರಡನೇ ಅಧ್ಯಾಯವು.

Related image

 

Comments are closed.