Aranyaka Parva: Chapter 47

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೪೭

ಪಾಂಡವರ ಆಹಾರ-ಬೇಟೆಗಳ ಕುರಿತು ವರ್ಣನೆ (೧-೧೨).

03047001 ಜನಮೇಜಯ ಉವಾಚ|

03047001a ಯದಿದಂ ಶೋಚಿತಂ ರಾಜ್ಞಾ ಧೃತರಾಷ್ಟ್ರೇಣ ವೈ ಮುನೇ|

03047001c ಪ್ರವ್ರಾಜ್ಯ ಪಾಂಡವಾನ್ವೀರಾನ್ಸರ್ವಮೇತನ್ನಿರರ್ಥಕಂ||

ಜನಮೇಜಯನು ಹೇಳಿದನು: “ಮುನೇ! ವೀರ ಪಾಂಡವರೆಲ್ಲರನ್ನೂ ಹೊರಹಾಕಿದ ನಂತರ ರಾಜ ಧೃತರಾಷ್ಟ್ರನು ಈ ರೀತಿ ಶೋಕಿಸುವುದು ನಿರರ್ಥಕವಾಗಿತ್ತು.

03047002a ಕಥಂ ಹಿ ರಾಜಾ ಪುತ್ರಂ ಸ್ವಮುಪೇಕ್ಷೇತಾಲ್ಪಚೇತಸಂ|

03047002c ದುರ್ಯೋಧನಂ ಪಾಂಡುಪುತ್ರಾನ್ಕೋಪಯಾನಂ ಮಹಾರಥಾನ್||

ತನ್ನ ಅಲ್ಪಚೇತಸ ಮಗ ದುರ್ಯೋಧನನಿಗೋಸ್ಕರ ರಾಜನು ಮಹಾರಥಿ ಪಾಂಡುಪುತ್ರರನ್ನು ಹೇಗೆ ಕೆರಳಿಸಿದನು?

03047003a ಕಿಮಾಸೀತ್ಪಾಂಡುಪುತ್ರಾಣಾಂ ವನೇ ಭೋಜನಮುಚ್ಯತಾಂ|

03047003c ವಾನೇಯಮಥ ವಾ ಕೃಷ್ಟಮೇತದಾಖ್ಯಾತು ಮೇ ಭವಾನ್||

ವನದಲ್ಲಿ ಪಾಂಡುಪುತ್ರರು ಯಾವರೀತಿಯ ಆಹಾರವನ್ನು ಸೇವಿಸುತ್ತಿದ್ದರು? ವನಪದಾರ್ಥಗಳನ್ನು ಸೇವಿಸುತ್ತಿದ್ದರೇ ಅಥವಾ ಕೃಷಿಮಾಡಿ ಬೆಳೆದ ಆಹಾರವನ್ನು ಸೇವಿಸುತ್ತಿದ್ದರೇ? ಇದನ್ನು ನೀನು ಹೇಳಬೇಕು.”

03047004 ವೈಶಂಪಾಯನ ಉವಾಚ|

03047004a ವಾನೇಯಂ ಚ ಮೃಗಾಂಶ್ಚೈವ ಶುದ್ಧೈರ್ಬಾಣೈರ್ನಿಪಾತಿತಾನ್|

03047004c ಬ್ರಾಹ್ಮಣಾನಾಂ ನಿವೇದ್ಯಾಗ್ರಮಭುಂಜನ್ಪುರುಷರ್ಷಭಾಃ||

ವೈಶಂಪಾಯನನು ಹೇಳಿದನು: “ಶುದ್ಧಬಾಣಗಳಿಂದ ವನ್ಯ ಮೃಗಗಳನ್ನು ಬೇಟೆಯಾಡಿ ಅದನ್ನು ಮೊದಲು ಬ್ರಾಹ್ಮಣರಿಗೆ ಬಡಿಸಿ ನಂತರ ಆ ಪುರುಷರ್ಷಭರು ಸೇವಿಸುತ್ತಿದ್ದರು.

03047005a ತಾಂಸ್ತು ಶೂರಾನ್ಮಹೇಷ್ವಾಸಾಂಸ್ತದಾ ನಿವಸತೋ ವನೇ|

03047005c ಅನ್ವಯುರ್ಬ್ರಾಹ್ಮಣಾ ರಾಜನ್ಸಾಗ್ನಯೋಽನಗ್ನಯಸ್ತಥಾ||

ರಾಜನ್! ಆ ಶೂರ ಮಹೇಷ್ವಾಸರು ವನದಲ್ಲಿ ವಾಸಿಸುವಾಗ ಅಗ್ನಿಯನ್ನು ಹೊಂದಿದ್ದ ಮತ್ತು ಅಗ್ನಿಯನ್ನು ಹೊಂದಿರದ ಬ್ರಾಹ್ಮಣರು ಅವರನ್ನು ಅನುಸರಿಸಿ ಹೋಗಿದ್ದರು.

03047006a ಬ್ರಾಹ್ಮಣಾನಾಂ ಸಹಸ್ರಾಣಿ ಸ್ನಾತಕಾನಾಂ ಮಹಾತ್ಮನಾಂ|

03047006c ದಶ ಮೋಕ್ಷವಿದಾಂ ತದ್ವದ್ಯಾನ್ಬಿಭರ್ತಿ ಯುಧಿಷ್ಠಿರಃ||

ಯುಧಿಷ್ಠಿರನ ಆಶ್ರಯದಲ್ಲಿ ಮೋಕ್ಷದ ಹತ್ತು ಬಗೆಗಳನ್ನೂ ತಿಳಿದಿದ್ದ ಸಹಸ್ರಾರು ಮಹಾತ್ಮ ಸ್ನಾತಕ ಬ್ರಾಹ್ಮಣರು ಇದ್ದರು.

03047007a ರುರೂನ್ಕೃಷ್ಣಮೃಗಾಂಶ್ಚೈವ ಮೇಧ್ಯಾಂಶ್ಚಾನ್ಯಾನ್ವನೇಚರಾನ್|

03047007c ಬಾಣೈರುನ್ಮಥ್ಯ ವಿಧಿವದ್ಬ್ರಾಹ್ಮಣೇಭ್ಯೋ ನ್ಯವೇದಯತ್||

ರುರು, ಕೃಷ್ಣಮೃಗ, ಮತ್ತು ಆಹಾರಕ್ಕೆ ಅನುಗುಣವಾದ ಇತರ ವನ್ಯಪ್ರಾಣಿಗಳನ್ನು ಬಾಣಗಳಿಂದ ಬೇಟೆಯಾಡಿ, ವಿಧಿವತ್ತಾಗಿ ಬ್ರಾಹ್ಮಣರಿಗೆ ನೀಡುತ್ತಿದ್ದರು.

03047008a ನ ತತ್ರ ಕಶ್ಚಿದ್ದುರ್ವರ್ಣೋ ವ್ಯಾಧಿತೋ ವಾಪ್ಯದೃಶ್ಯತ|

03047008c ಕೃಶೋ ವಾ ದುರ್ಬಲೋ ವಾಪಿ ದೀನೋ ಭೀತೋಽಪಿ ವಾ ನರ||

ಅವರಲ್ಲಿ ಒಬ್ಬನೂ ವಿವರ್ಣನಾದವನು, ರೋಗಹೊಂದಿದವನು, ಬಡಕಲಾಗಿ ಅಥವಾ ದುರ್ಬಲನಾಗಿ, ದೀನನಾಗಿ ಅಥವಾ ಭೀತನಾಗಿ ಇರುವ ಮನುಷ್ಯನು ಕಾಣುತ್ತಿರಲಿಲ್ಲ.

03047009a ಪುತ್ರಾನಿವ ಪ್ರಿಯಾಂಜ್ಞಾತೀನ್ಭ್ರಾತೄನಿವ ಸಹೋದರಾನ್|

03047009c ಪುಪೋಷ ಕೌರವಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ||

ಕೌರವಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಅವರನ್ನು ಪ್ರಿಯಪುತ್ರರಂತೆ, ಬಂಧುಗಳಂತೆ, ಸಹೋದರ ತಮ್ಮಂದಿರಂತೆ ಪೋಷಿಸಿದನು.

03047010a ಪತೀಂಶ್ಚ ದ್ರೌಪದೀ ಸರ್ವಾನ್ದ್ವಿಜಾಂಶ್ಚೈವ ಯಶಸ್ವಿನೀ|

03047010c ಮಾತೇವ ಭೋಜಯಿತ್ವಾಗ್ರೇ ಶಿಷ್ಟಮಾಹಾರಯತ್ತದಾ||

ತಾಯಿಯಂತೆ ಯಶಸ್ವಿನೀ ದ್ರೌಪದಿಯು ಮೊದಲು ಎಲ್ಲ ಬ್ರಾಹ್ಮಣರಿಗೂ, ಗಂಡಂದಿರಿಗೂ ಬಡಿಸಿ ನಂತರ ಉಳಿದ ಆಹಾರವನ್ನು ಸೇವಿಸುತ್ತಿದ್ದಳು.

03047011a ಪ್ರಾಚೀಂ ರಾಜಾ ದಕ್ಷಿಣಾಂ ಭೀಮಸೇನೋ|

         ಯಮೌ ಪ್ರತೀಚೀಮಥ ವಾಪ್ಯುದೀಚೀಂ||

03047011c ಧನುರ್ಧರಾ ಮಾಂಸಹೇತೋರ್ಮೃಗಾಣಾಂ|

         ಕ್ಷಯಂ ಚಕ್ರುರ್ನಿತ್ಯಮೇವೋಪಗಮ್ಯ||

ರಾಜನು ಪೂರ್ವದಲ್ಲಿ, ಭೀಮಸೇನನು ದಕ್ಷಿಣದಲ್ಲಿ, ಯಮಳರು ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ತಮ್ಮ ಧನುಸ್ಸುಗಳನ್ನು ಹಿಡಿದು ನಿತ್ಯವೂ ಮೃಗಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರು.

03047012a ತಥಾ ತೇಷಾಂ ವಸತಾಂ ಕಾಮ್ಯಕೇ ವೈ|

         ವಿಹೀನಾನಾಮರ್ಜುನೇನೋತ್ಸುಕಾನಾಂ|

03047012c ಪಂಚೈವ ವರ್ಷಾಣಿ ತದಾ ವ್ಯತೀಯುರ್|

         ಅಧೀಯತಾಂ ಜಪತಾಂ ಜುಹ್ವತಾಂ ಚ||

ಹೀಗೆ ಅವರು ಕಾಮ್ಯಕ ವನದಲ್ಲಿ ಅರ್ಜುನನಿಲ್ಲದೇ ಉತ್ಸಾಹಹೀನರಾಗಿ ವಾಸಿಸಿ, ಅಧ್ಯಯನ, ಜಪ ಮತ್ತು ಹೋಮಗಳಲ್ಲಿ ಐದು ವರ್ಷಗಳನ್ನು ಕಳೆದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಪಾರ್ಥಾಹಾರಕಥನೇ ಸಪ್ತಚತ್ವಾರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಪಾರ್ಥಾಹಾರಕಥನವೆಂಬ ನಲ್ವತ್ತೇಳನೆಯ ಅಧ್ಯಾಯವು.

Related image

Comments are closed.