|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleಆರಣ್ಯಕ ಪರ್ವ: ಮೃಗಸ್ವಪ್ನೋದ್ಭವ ಪರ್ವ
೨೪೪
ದ್ವೈತವನದಲ್ಲಿ ರಾತ್ರಿ ಯುಧಿಷ್ಠಿರನು ಮಲಗಿಕೊಂಡಿರಲು ಸ್ವಪ್ನದಲ್ಲಿ ರೋದಿಸುತ್ತಿರುವ ಜಿಂಕೆಗಳು ಕಾಣಿಸಿಕೊಂಡು “ನಿನ್ನ ವಾಸಸ್ಥಾನವನ್ನು ಬದಲಾಯಿಸು. ಇಲ್ಲವಾದರೆ ನಾವೂ ಕೂಡ ಇಲ್ಲಿ ಇಲ್ಲವಾಗುತ್ತೇವೆ” ಎಂದು ಹೇಳಿದುದು (೧-೭). ಯುಧಿಷ್ಠಿರನು ಜಿಂಕೆಗಳನ್ನು ಮನ್ನಿಸಿ ಕಾಮ್ಯಕವನಕ್ಕೆ ಹೋದುದು (೮-೧೬).
03244001 ಜನಮೇಜಯ ಉವಾಚ|
03244001a ದುರ್ಯೋಧನಂ ಮೋಚಯಿತ್ವಾ ಪಾಂಡುಪುತ್ರಾ ಮಹಾಬಲಾಃ|
03244001c ಕಿಮಕಾರ್ಷುರ್ವನೇ ತಸ್ಮಿಂಸ್ತನ್ಮಮಾಖ್ಯಾತುಮರ್ಹಸಿ||
ಜನಮೇಜಯನು ಹೇಳಿದನು: “ದುರ್ಯೋಧನನನ್ನು ಬಿಡಿಸಿದ ನಂತರ ಮಹಾಬಲಿ ಪಾಂಡುಪುತ್ರರು ವನದಲ್ಲಿ ಏನುಮಾಡಿದರು? ಅದನ್ನು ನನಗೆ ಹೇಳಬೇಕು.”
03244002 ವೈಶಂಪಾಯನ ಉವಾಚ|
03244002a ತತಃ ಶಯಾನಂ ಕೌಂತೇಯಂ ರಾತ್ರೌ ದ್ವೈತವನೇ ಮೃಗಾಃ|
03244002c ಸ್ವಪ್ನಾಂತೇ ದರ್ಶಯಾಮಾಸುರ್ಬಾಷ್ಪಕಂಠಾ ಯುಧಿಷ್ಠಿರಂ||
ವೈಶಂಪಾಯನನು ಹೇಳಿದನು: “ದ್ವೈತವನದಲ್ಲಿ ರಾತ್ರಿ ಕೌಂತೇಯನು ಮಲಗಿಕೊಂಡಿರಲು ಸ್ವಪ್ನದಲ್ಲಿ ಯುಧಿಷ್ಠಿರನಿಗೆ ಕಣ್ಣೀರಿನಿಂದ ಕಟ್ಟಿದ ಕಂಠಗಳ ಜಿಂಕೆಗಳು ಕಾಣಿಸಿಕೊಂಡವು.
03244003a ತಾನಬ್ರವೀತ್ಸ ರಾಜೇಂದ್ರೋ ವೇಪಮಾನಾನ್ಕೃತಾಂಜಲೀನ್|
03244003c ಬ್ರೂತ ಯದ್ವಕ್ತುಕಾಮಾಃ ಸ್ಥ ಕೇ ಭವಂತಃ ಕಿಮಿಷ್ಯತೇ||
ಅಂಜಲೀಬದ್ಧರಾಗಿ ನಡುಗುತ್ತಾ ನಿಂತಿದ್ದ ಅವುಗಳನ್ನುದ್ದೇಶಿಸಿ ರಾಜೇಂದ್ರನು ಹೇಳಿದನು: “ನೀವು ಏನು ಹೇಳಬೇಕೆಂದಿರುವಿರೋ ಹೇಳಿ. ನೀವು ಯಾರು ಮತ್ತು ನಿಮ್ಮ ಬಯಕೆಯೇನು?”
03244004a ಏವಮುಕ್ತಾಃ ಪಾಂಡವೇನ ಕೌಂತೇಯೇನ ಯಶಸ್ವಿನಾ|
03244004c ಪ್ರತ್ಯಬ್ರುವನ್ಮೃಗಾಸ್ತತ್ರ ಹತಶೇಷಾ ಯುಧಿಷ್ಠಿರಂ||
ಯಶಸ್ವಿ ಕೌಂತೇಯ ಪಾಂಡವನು ಹೀಗೆ ಕೇಳಲು ಹತಶೇಷರಾದ ಜಿಂಕೆಗಳು ಯುಧಿಷ್ಠಿರನಿಗೆ ಉತ್ತರಿಸಿದವು.
03244005a ವಯಂ ಮೃಗಾ ದ್ವೈತವನೇ ಹತಶಿಷ್ಟಾಃ ಸ್ಮ ಭಾರತ|
03244005c ನೋತ್ಸೀದೇಮ ಮಹಾರಾಜ ಕ್ರಿಯತಾಂ ವಾಸಪರ್ಯಯಃ||
“ಭಾರತ! ನಾವು ದ್ವೈತವನದಲ್ಲಿ ಸಾಯದೇ ಉಳಿದಿರುವ ಜಿಂಕೆಗಳು. ಮಹಾರಾಜ! ನಿನ್ನ ವಾಸಸ್ಥಾನವನ್ನು ಬದಲಾಯಿಸು. ಇಲ್ಲವಾದರೆ ನಾವೂ ಕೂಡ ಇಲ್ಲಿ ಇಲ್ಲವಾಗುತ್ತೇವೆ.
03244006a ಭವಂತೋ ಭ್ರಾತರಃ ಶೂರಾಃ ಸರ್ವ ಏವಾಸ್ತ್ರಕೋವಿದಾಃ|
03244006c ಕುಲಾನ್ಯಲ್ಪಾವಶಿಷ್ಟಾನಿ ಕೃತವಂತೋ ವನೌಕಸಾಂ||
ನಿನ್ನ ತಮ್ಮಂದಿರೆಲ್ಲರೂ ಶೂರರು ಮತ್ತು ಅಸ್ತ್ರಕೋವಿದರು. ನೀನು ವನದಲ್ಲಿ ವಾಸಿಸುವರ ಕುಲಗಳನ್ನು ಕೆಲವೇ ಸಂಖ್ಯೆಗಳಲ್ಲಿ ಉಳಿಸಿರುವೆ.
03244007a ಬೀಜಭೂತಾ ವಯಂ ಕೇ ಚಿದವಶಿಷ್ಟಾ ಮಹಾಮತೇ|
03244007c ವಿವರ್ಧೇಮಹಿ ರಾಜೇಂದ್ರ ಪ್ರಸಾದಾತ್ತೇ ಯುಧಿಷ್ಠಿರ||
ಯುಧಿಷ್ಠಿರ! ರಾಜೇಂದ್ರ! ಮಹಾಮತೇ! ಬೀಜಭೂತರಾಗಿ ನಾವೇ ಕೆಲವರು ಉಳಿದುಕೊಂಡಿದ್ದೇವೆ. ನಿನ್ನ ಪ್ರಸಾದದಿಂದ ನಾವು ಸಂಖ್ಯೆಯಲ್ಲಿ ಬೆಳೆಯುವಂಥವರಾಗಲಿ.”
03244008a ತಾನ್ವೇಪಮಾನಾನ್ವಿತ್ರಸ್ತಾನ್ಬೀಜಮಾತ್ರಾವಶೇಷಿತಾನ್|
03244008c ಮೃಗಾನ್ದೃಷ್ಟ್ವಾ ಸುದುಃಖಾರ್ತೋ ಧರ್ಮರಾಜೋ ಯುಧಿಷ್ಠಿರಃ||
ಬೀಜಮಾತ್ರಗಳಾಗಿ ಉಳಿದುಕೊಂಡಿರುವ ಆ ಕಂಪಿಸಿ ವಿತ್ರಸ್ತರಾಗಿರುವ ಜಿಂಕೆಗಳನ್ನು ಕಂಡು ಧರ್ಮರಾಜ ಯುಧಿಷ್ಠಿರನು ದುಃಖಾರ್ತನಾದನು.
03244009a ತಾಂಸ್ತಥೇತ್ಯಬ್ರವೀದ್ರಾಜಾ ಸರ್ವಭೂತಹಿತೇ ರತಃ|
03244009c ತಥ್ಯಂ ಭವಂತೋ ಬ್ರುವತೇ ಕರಿಷ್ಯಾಮಿ ಚ ತತ್ತಥಾ||
ಸರ್ವಭೂತಹಿತರತನಾದ ಆ ರಾಜನು “ಹಾಗೆಯೇ ಆಗಲಿ. ನೀವು ಹೇಳಿದಂತೆ ಮಾಡುತ್ತೇನೆ” ಎಂದು ಅವರಿಗೆ ಹೇಳಿದನು.
03244010a ಇತ್ಯೇವಂ ಪ್ರತಿಬುದ್ಧಃ ಸ ರಾತ್ರ್ಯಂತೇ ರಾಜಸತ್ತಮಃ|
03244010c ಅಬ್ರವೀತ್ಸಹಿತಾನ್ ಭ್ರಾತೄನ್ದಯಾಪನ್ನೋ ಮೃಗಾನ್ಪ್ರತಿ||
ರಾತ್ರಿಯು ಕಳೆಯಲು ಎಚ್ಚೆತ್ತ ರಾಜಸತ್ತಮನು ದಯಾಪನ್ನನಾಗಿ ತನ್ನ ತಮ್ಮಂದಿರಿಗೆ ಜಿಂಕೆಗಳ ಕುರಿತು ಹೇಳಿದನು.
03244011a ಉಕ್ತೋ ರಾತ್ರೌ ಮೃಗೈರಸ್ಮಿ ಸ್ವಪ್ನಾಂತೇ ಹತಶೇಷಿತೈಃ|
03244011c ತನುಭೂತಾಃ ಸ್ಮ ಭದ್ರಂ ತೇ ದಯಾ ನಃ ಕ್ರಿಯತಾಮಿತಿ||
“ಸಾಯದೇ ಉಳಿದಿರುವ ಜಿಂಕೆಗಳು ರಾತ್ರಿ ಸ್ವಪ್ನದಲ್ಲಿ ಬಂದು ಹೇಳಿದವು: “ನಾವು ಕಡಿಮೆಯಾಗಿದ್ದೇವೆ. ನಿನಗೆ ಮಂಗಳವಾಗಲಿ. ದಯೆಯನ್ನು ತೋರಿಸು.”
03244012a ತೇ ಸತ್ಯಮಾಹುಃ ಕರ್ತವ್ಯಾ ದಯಾಸ್ಮಾಭಿರ್ವನೌಕಸಾಂ|
03244012c ಸಾಷ್ಟಮಾಸಂ ಹಿ ನೋ ವರ್ಷಂ ಯದೇನಾನುಪಯುಂಜ್ಮಹೇ||
ಅವುಗಳು ಸತ್ಯವನ್ನೇ ಆಡುತ್ತಿವೆ. ನಾವು ವನೌಕಸರಿಗೆ ದಯೆಯನ್ನು ತೋರಿಸಬೇಕು. ಅವುಗಳನ್ನು ಅವಲಂಬಿಸಿದ್ದು ಈಗ ಒಂದು ವರ್ಷ ಎಂಟು ತಿಂಗಳಾಯಿತು.
03244013a ಪುನರ್ಬಹುಮೃಗಂ ರಮ್ಯಂ ಕಾಮ್ಯಕಂ ಕಾನನೋತ್ತಮಂ|
03244013c ಮರುಭೂಮೇಃ ಶಿರಃ ಖ್ಯಾತಂ ತೃಣಬಿಂದುಸರಃ ಪ್ರತಿ|
03244013e ತತ್ರೇಮಾ ವಸತೀಃ ಶಿಷ್ಟಾ ವಿಹರಂತೋ ರಮೇಮಹಿ||
ಉತ್ತಮ ರಮ್ಯ ಕಾಮ್ಯಕ ಕಾನನದಲ್ಲಿ ಮರುಭೂಮಿಯ ತಲೆಯಲ್ಲಿ ತೃಣಬಿಂದು ಸರೋವರದ ಬಳಿ ಬಹಳಷ್ಟು ಜಿಂಕೆಗಳಿವೆ. ಅಲ್ಲಿಯೇ ಉಳಿದುಕೊಂಡು ಉಳಿದ ಸಮಯವನ್ನು ವಿಹರಿಸಿ ಸಂತೋಷದಿಂದ ಕಳೆಯೋಣ.”
03244014a ತತಸ್ತೇ ಪಾಂಡವಾಃ ಶೀಘ್ರಂ ಪ್ರಯಯುರ್ಧರ್ಮಕೋವಿದಾಃ|
03244014c ಬ್ರಾಹ್ಮಣೈಃ ಸಹಿತಾ ರಾಜನ್ಯೇ ಚ ತತ್ರ ಸಹೋಷಿತಾಃ|
03244014e ಇಂದ್ರಸೇನಾದಿಭಿಶ್ಚೈವ ಪ್ರೇಷ್ಯೈರನುಗತಾಸ್ತದಾ||
ರಾಜನ್! ನಂತರ ಶೀಘ್ರದಲ್ಲಿಯೇ ಆ ಧರ್ಮಕೋವಿದ ಪಾಂಡವರು ತಮ್ಮೊಂದಿಗೆ ವಾಸಿಸುತ್ತಿದ್ದ ಇಂದ್ರಸೇನಾದಿ ಸೇವಕರು ಮತ್ತು ಹಿಂಬಾಲಿಸಿ ಬಂದ ಬ್ರಾಹ್ಮಣರೊಂದಿಗೆ ಹೊರಟರು.
03244015a ತೇ ಯಾತ್ವಾನುಸೃತೈರ್ಮಾರ್ಗೈಃ ಸ್ವನ್ನೈಃ ಶುಚಿಜಲಾನ್ವಿತೈಃ|
03244015c ದದೃಶುಃ ಕಾಮ್ಯಕಂ ಪುಣ್ಯಮಾಶ್ರಮಂ ತಾಪಸಾಯುತಂ||
ಉತ್ತಮ ಆಹಾರ ಮತ್ತು ಶುಚಿಯಾದ ನೀರಿರುವ ಸರಿ ದಾರಿಯಲ್ಲಿ ಪ್ರಯಾಣಿಸಿ ತಾಪಸರಿಂದ ಕೂಡಿದ್ದ ಪುಣ್ಯ ಕಾಮ್ಯಕ ಆಶ್ರಮವನ್ನು ಕಂಡರು.
03244016a ವಿವಿಶುಸ್ತೇ ಸ್ಮ ಕೌರವ್ಯಾ ವೃತಾ ವಿಪ್ರರ್ಷಭೈಸ್ತದಾ|
03244016c ತದ್ವನಂ ಭರತಶ್ರೇಷ್ಠಾಃ ಸ್ವರ್ಗಂ ಸುಕೃತಿನೋ ಯಥಾ||
ಭರತಶ್ರೇಷ್ಠ! ವಿಪ್ರರ್ಷಿಗಳಿಂದ ಸುತ್ತುವರೆಯಲ್ಪಟ್ಟ ಆ ಕೌರವರು ಸುಕೃತರು ಸ್ವರ್ಗವನ್ನು ಹೇಗೋ ಹಾಗೆ ಆ ವನವನ್ನು ಪ್ರವೇಶಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮೃಗಸ್ವಪ್ನೋದ್ಭವ ಪರ್ವಣಿ ಕಾಮ್ಯಕಪ್ರವೇಶೇ ಚತುಶ್ಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮೃಗಸ್ವಪ್ನೋದ್ಭವ ಪರ್ವದಲ್ಲಿ ಕಾಮ್ಯಕಪ್ರವೇಶದಲ್ಲಿ ಇನ್ನೂರಾನಲ್ವತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮೃಗಸ್ವಪ್ನೋದ್ಭವ ಪರ್ವಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮೃಗಸ್ವಪ್ನೋದ್ಭವ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೪೦/೧೦೦, ಅಧ್ಯಾಯಗಳು-೫೪೧/೧೯೯೫, ಶ್ಲೋಕಗಳು-೧೮೦೪೭/೭೩೭೮೪
