Aranyaka Parva: Chapter 235

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೩೫

ಪತ್ನಿಯರೊಡನೆ ಕೌರವರನ್ನು ಏಕೆ ಬಂಧಿಸಿದೆ ಎಂದು ಅರ್ಜುನನು ಕೇಳಲು ಚಿತ್ರರಥನು “ಇವರು ನಿಮ್ಮನ್ನು ಮತ್ತು ದ್ರೌಪದಿಯನ್ನು ಅಣಗಿಸಲು ಇಲ್ಲಿಗೆ ಬಂದಿದ್ದಾರೆ” ಎಂದೂ ತಾನು ಇಂದ್ರನ ವಚನದಂತೆ ದುರ್ಯೋಧನಾದಿಗಳನ್ನು ಸೆರೆಹಿಡಿದು ಸುರಲೋಕಕ್ಕೆ ಕೊಂಡೊಯ್ಯುತ್ತಿದ್ದೇನೆ ಎನ್ನುವುದು (೧-೭). ಗಂಧರ್ವರು ಹೊರಟುಹೋದುದು; ದೇವರಾಜನು ಮೃತರಾದ ಗಂಧರ್ವರನ್ನು ಬದುಕಿಸಿದುದು (೮-೧೭). ಪಾಂಡವರು ರಾಜಪತ್ನಿಯರೊಂದಿಗೆ ತಮ್ಮ ಕುಲದವರನ್ನು ಬಿಡುಗಡೆ ಮಾಡಿದುದು; ಪಾಂಡವರಿಂದ ಬೀಳ್ಕೊಂಡ ದುರ್ಯೋಧನನು ನಾಚಿಕೆಯಿಂದ ಪೀಡಿತನಾಗಿ ನಗರದ ಕಡೆ ಹೊರಟಿದುದು (೧೮-೨೫).

03235001 ವೈಶಂಪಾಯನ ಉವಾಚ|

03235001a ತತೋಽರ್ಜುನಶ್ಚಿತ್ರಸೇನಂ ಪ್ರಹಸನ್ನಿದಮಬ್ರವೀತ್|

03235001c ಮಧ್ಯೇ ಗಂಧರ್ವಸೈನ್ಯಾನಾಂ ಮಹೇಷ್ವಾಸೋ ಮಹಾದ್ಯುತಿಃ||

ವೈಶಂಪಾಯನನು ಹೇಳಿದನು: “ಆಗ ಮಹೇಷ್ವಾಸ ಮಹಾದ್ಯುತಿ ಅರ್ಜುನನು ಆ ಗಂಧರ್ವ ಸೇನೆಯ ಮಧ್ಯೆ ನಗುತ್ತಾ ಚಿತ್ರಸೇನನಿಗೆ ಹೇಳಿದನು:

03235002a ಕಿಂ ತೇ ವ್ಯವಸಿತಂ ವೀರ ಕೌರವಾಣಾಂ ವಿನಿಗ್ರಹೇ|

03235002c ಕಿಮರ್ಥಂ ಚ ಸದಾರೋಽಯಂ ನಿಗೃಹೀತಃ ಸುಯೋಧನಃ||

“ವೀರ! ಏಕೆ ನೀನು ಕೌರವರನ್ನು ಶಿಕ್ಷಿಸಲು ತೊಡಗಿದೆ? ಏಕೆ ಸುಯೋಧನನನ್ನು ಅವನ ಪತ್ನಿಯೊಂದಿಗೆ ಸೆರೆಹಿಡಿದೆ?”

03235003 ಚಿತ್ರಸೇನ ಉವಾಚ|

03235003a ವಿದಿತೋಽಯಮಭಿಪ್ರಾಯಸ್ತತ್ರಸ್ಥೇನ ಮಹಾತ್ಮನಾ|

03235003c ದುರ್ಯೋಧನಸ್ಯ ಪಾಪಸ್ಯ ಕರ್ಣಸ್ಯ ಚ ಧನಂಜಯ||

ಚಿತ್ರಸೇನನು ಹೇಳಿದನು: “ಧನಂಜಯ! ಅಲ್ಲಿ ಕುಳಿತಿರುವ ಮಹಾತ್ಮನಿಗೆ ಪಾಪಿ ದುರ್ಯೋಧನ ಮತ್ತು ಕರ್ಣನ ಉದ್ದೇಶವು ತಿಳಿದಿದೆ.

03235004a ವನಸ್ಥಾನ್ಭವತೋ ಜ್ಞಾತ್ವಾ ಕ್ಲಿಶ್ಯಮಾನಾನನರ್ಹವತ್|

03235004c ಇಮೇಽವಹಸಿತುಂ ಪ್ರಾಪ್ತಾ ದ್ರೌಪದೀಂ ಚ ಯಶಸ್ವಿನೀಂ||

ನೀವು ಈ ವನದಲ್ಲಿ ವಾಸಿಸುತ್ತಿದ್ದೀರಿ ಮತ್ತು ಅನರ್ಹರಾದರೂ ಕಷ್ಟಗಳನ್ನು ಅನುಭವಿಸುತ್ತಿದ್ದೀರಿ ಎಂದು ತಿಳಿದು ಇವರು ನಿಮ್ಮನ್ನು ಮತ್ತು ಯಶಸ್ವಿನೀ ದ್ರೌಪದಿಯನ್ನು ಅಣಗಿಸಲು ಇಲ್ಲಿಗೆ ಬಂದಿದ್ದಾರೆ.

03235005a ಜ್ಞಾತ್ವಾ ಚಿಕೀರ್ಷಿತಂ ಚೈಷಾಂ ಮಾಮುವಾಚ ಸುರೇಶ್ವರಃ|

03235005c ಗಚ್ಚ ದುರ್ಯೋಧನಂ ಬದ್ಧ್ವಾ ಸಾಮಾತ್ಯಂ ತ್ವಮಿಹಾನಯ||

ಅವರ ಇಂಗಿತವನ್ನು ತಿಳಿದ ಸುರೇಶ್ವರನು ನನಗೆ ಹೇಳಿದನು: “ಹೋಗು! ಅಮಾತ್ಯರೊಂದಿಗೆ ದುರ್ಯೋಧನನನ್ನು ಬಂದಿಸಿ ಇಲ್ಲಿಗೆ ಕರೆದುಕೊಂಡು ಬಾ!

03235006a ಧನಂಜಯಶ್ಚ ತೇ ರಕ್ಷ್ಯಃ ಸಹ ಭ್ರಾತೃಭಿರಾಹವೇ|

03235006c ಸ ಹಿ ಪ್ರಿಯಃ ಸಖಾ ತುಭ್ಯಂ ಶಿಷ್ಯಶ್ಚ ತವ ಪಾಂಡವಃ||

ಯುದ್ಧದಲ್ಲಿ ಅವನ ಸಹೋದರರೊಂದಿಗೆ ಧನಂಜಯನನ್ನು ರಕ್ಷಿಸು. ಏಕೆಂದರೆ ಆ ಪಾಂಡವನು ನಿನ್ನ ಪ್ರಿಯ ಸಖ ಮತ್ತು ಶಿಷ್ಯ.”

03235007a ವಚನಾದ್ದೇವರಾಜಸ್ಯ ತತೋಽಸ್ಮೀಹಾಗತೋ ದ್ರುತಂ|

03235007c ಅಯಂ ದುರಾತ್ಮಾ ಬದ್ಧಶ್ಚ ಗಮಿಷ್ಯಾಮಿ ಸುರಾಲಯಂ||

ದೇವರಾಜನ ವಚನದಂತೆ ನಾನು ಬೇಗ ಇಲ್ಲಿಗೆ ಬಂದೆ. ಈ ದುರಾತ್ಮನನ್ನು ಬಂಧಿಸಿ ಸುರಾಲಯಕ್ಕೆ ಹೋಗುತ್ತೇನೆ.”

03235008 ಅರ್ಜುನ ಉವಾಚ|

03235008a ಉತ್ಸೃಜ್ಯತಾಂ ಚಿತ್ರಸೇನ ಭ್ರಾತಾಸ್ಮಾಕಂ ಸುಯೋಧನಃ|

03235008c ಧರ್ಮರಾಜಸ್ಯ ಸಂದೇಶಾನ್ಮಮ ಚೇದಿಚ್ಚಸಿ ಪ್ರಿಯಂ||

ಅರ್ಜುನನು ಹೇಳಿದನು: “ಚಿತ್ರಸೇನ! ನನಗೆ ಪ್ರಿಯವಾದುದನ್ನು ಮಾಡಬೇಕೆಂದಾದರೆ ಧರ್ಮರಾಜನ ಸಂದೇಶದಂತೆ ನಮ್ಮ ಭ್ರಾತಾ ಸುಯೋಧನನನ್ನು ಬಿಟ್ಟುಬಿಡು!”

03235009 ಚಿತ್ರಸೇನ ಉವಾಚ|

03235009a ಪಾಪೋಽಯಂ ನಿತ್ಯಸಂದುಷ್ಟೋ ನ ವಿಮೋಕ್ಷಣಮರ್ಹತಿ|

03235009c ಪ್ರಲಬ್ಧಾ ಧರ್ಮರಾಜಸ್ಯ ಕೃಷ್ಣಾಯಾಶ್ಚ ಧನಂಜಯ||

ಚಿತ್ರಸೇನನು ಹೇಳಿದನು: “ನಿತ್ಯವೂ ಪಾಪಿಯೂ ಅತಿದುಷ್ಟನೂ ಆಗಿರುವ ಇವನು ಬಿಡುಗಡೆಗೆ ಅರ್ಹನಲ್ಲ. ಧನಂಜಯ! ಇವನು ಧರ್ಮರಾಜನನ್ನೂ ಕೃಷ್ಣೆಯನ್ನೂ ಕಾಡಿಸಿದ್ದಾನೆ.

03235010a ನೇದಂ ಚಿಕೀರ್ಷಿತಂ ತಸ್ಯ ಕುಂತೀಪುತ್ರೋ ಮಹಾವ್ರತಃ|

03235010c ಜಾನಾತಿ ಧರ್ಮರಾಜೋ ಹಿ ಶ್ರುತ್ವಾ ಕುರು ಯಥೇಚ್ಚಸಿ||

ಮಹಾವ್ರತ ಕುಂತೀಪುತ್ರ ಧರ್ಮರಾಜನಿಗೆ ಇವನ ಉದ್ದೇಶವು ತಿಳಿದಿಲ್ಲ. ಇದನ್ನು ಕೇಳಿ ಬಯಸಿದುದನ್ನು ಮಾಡು.””

03235011 ವೈಶಂಪಾಯನ ಉವಾಚ|

03235011a ತೇ ಸರ್ವ ಏವ ರಾಜಾನಮಭಿಜಗ್ಮುರ್ಯುಧಿಷ್ಠಿರಂ|

03235011c ಅಭಿಗಮ್ಯ ಚ ತತ್ಸರ್ವಂ ಶಶಂಸುಸ್ತಸ್ಯ ದುಷ್ಕೃತಂ||

ವೈಶಂಪಾಯನನು ಹೇಳಿದನು: “ಅವರೆಲ್ಲರೂ ರಾಜ ಯುಧಿಷ್ಠಿರನ ಬಳಿ ಹೋದರು. ಹೋಗಿ ಅವನ ದುಷ್ಕೃತ್ಯಗಳೆಲ್ಲವನ್ನೂ ಹೇಳಿದರು.

03235012a ಅಜಾತಶತ್ರುಸ್ತಚ್ಚ್ರುತ್ವಾ ಗಂಧರ್ವಸ್ಯ ವಚಸ್ತದಾ|

03235012c ಮೋಕ್ಷಯಾಮಾಸ ತಾನ್ಸರ್ವಾನ್ಗಂಧರ್ವಾನ್ಪ್ರಶಶಂಸ ಚ||

ಗಂಧರ್ವನ ಮಾತನ್ನು ಕೇಳಿ ಅಜಾತಶತ್ರುವು ಆ ಗಂಧರ್ವರೆಲ್ಲರನ್ನೂ ಬಿಡುಗಡೆ ಮಾಡಿ ಹೇಳಿದನು.

03235013a ದಿಷ್ಟ್ಯಾ ಭವದ್ಭಿರ್ಬಲಿಭಿಃ ಶಕ್ತೈಃ ಸರ್ವೈರ್ನ ಹಿಂಸಿತಃ|

03235013c ದುರ್ವೃತ್ತೋ ಧಾರ್ತರಾಷ್ಟ್ರೋಽಯಂ ಸಾಮಾತ್ಯಜ್ಞಾತಿಬಾಂಧವಃ||

“ನೀವು ಶಕ್ತಿಯಲ್ಲಿ ಬಲಿಷ್ಟರಾಗಿದ್ದರೂ ಅಮಾತ್ಯ ಮತ್ತು ಜ್ಞಾತಿಬಾಂಧವರ ಜೊತೆಗೆ ಈ ಧಾರ್ತರಾಷ್ಟ್ರನೊಡನೆ ದುರ್ವೃತ್ತಿಯನ್ನೆಸಗಲಿಲ್ಲ ಎನ್ನುವುದು ಒಳ್ಳೆಯದೇ ಆಯಿತು.

03235014a ಉಪಕಾರೋ ಮಹಾಂಸ್ತಾತ ಕೃತೋಽಯಂ ಮಮ ಖೇಚರಾಃ|

03235014c ಕುಲಂ ನ ಪರಿಭೂತಂ ಮೇ ಮೋಕ್ಷೇಣಾಸ್ಯ ದುರಾತ್ಮನಃ||

ಮಹಾಖೇಚರರೇ! ಕುಲವನ್ನು ಅತಿಕ್ರಮಿಸದೇ ಈ ದುರಾತ್ಮನನ್ನು ಬಿಡುಗಡೆಮಾಡಿ ನೀವು ನನಗೆ ದೊಡ್ಡ ಉಪಕಾರವನ್ನು ಮಾಡಿದ್ದೀರಿ.

03235015a ಆಜ್ಞಾಪಯಧ್ವಮಿಷ್ಟಾನಿ ಪ್ರೀಯಾಮೋ ದರ್ಶನೇನ ವಃ|

03235015c ಪ್ರಾಪ್ಯ ಸರ್ವಾನಭಿಪ್ರಾಯಾಂಸ್ತತೋ ವ್ರಜತ ಮಾಚಿರಂ||

ನಿಮ್ಮ ದರ್ಶನದಿಂದ ನಾವು ಸಂತುಷ್ಟರಾಗಿದ್ದೇವೆ. ನಿಮಗಿಷ್ಟವಾದುದನ್ನು ಆಜ್ಞಾಪಿಸಿ. ಬೇಕಾದುದನ್ನು ಪಡೆದು ಬೇಗ ಹೊರಡಿ.”

03235016a ಅನುಜ್ಞಾತಾಸ್ತು ಗಂಧರ್ವಾಃ ಪಾಂಡುಪುತ್ರೇಣ ಧೀಮತಾ|

03235016c ಸಹಾಪ್ಸರೋಭಿಃ ಸಂಹೃಷ್ಟಾಶ್ಚಿತ್ರಸೇನಮುಖಾ ಯಯುಃ||

ಧೀಮತ ಪಾಂಡುಪುತ್ರನಿಂದ ಬೀಳ್ಕೊಂಡು ಸಂತೋಷಗೊಂಡ ಗಂಧರ್ವರು ಚಿತ್ರಸೇನನನ್ನು ಮುಂದಿಟ್ಟುಕೊಂಡು ಅಪ್ಸರೆಯರೊಂದಿಗೆ ಹೋದರು.

03235017a ದೇವರಾಡಪಿ ಗಂಧರ್ವಾನ್ಮೃತಾಂಸ್ತಾನ್ಸಮಜೀವಯತ್|

03235017c ದಿವ್ಯೇನಾಮೃತವರ್ಷೇಣ ಯೇ ಹತಾಃ ಕೌರವೈರ್ಯುಧಿ||

ದೇವರಾಜನೂ ಕೂಡ ಯುದ್ಧದಲ್ಲಿ ಕೌರವರಿಂದ ಮೃತರಾಗಿದ್ದ ಗಂಧರ್ವರನ್ನು ದಿವ್ಯ ಅಮೃತದ ಮಳೆಸುರಿಸಿ ಪುನರ್ಜೀವಗೊಳಿಸಿದನು.

03235018a ಜ್ಞಾತೀಂಸ್ತಾನವಮುಚ್ಯಾಥ ರಾಜದಾರಾಂಶ್ಚ ಸರ್ವಶಃ|

03235018c ಕೃತ್ವಾ ಚ ದುಷ್ಕರಂ ಕರ್ಮ ಪ್ರೀತಿಯುಕ್ತಾಶ್ಚ ಪಾಂಡವಾಃ||

ಪಾಂಡವರು ರಾಜಪತ್ನಿಯರೊಂದಿಗೆ ತಮ್ಮ ಕುಲದವರನ್ನು ಬಿಡುಗಡೆ ಮಾಡಿದರು. ಈ ದುಷ್ಕರ ಕೃತ್ಯವನ್ನು ಮಾಡಿ ಅವರು ಸಂತೋಷಗೊಂಡರು.

03235019a ಸಸ್ತ್ರೀಕುಮಾರೈಃ ಕುರುಭಿಃ ಪೂಜ್ಯಮಾನಾ ಮಹಾರಥಾಃ|

03235019c ಬಭ್ರಾಜಿರೇ ಮಹಾತ್ಮಾನಃ ಕುರುಮಧ್ಯೇ ಯಥಾಗ್ನಯಃ||

ಸ್ತ್ರೀಯರು ಮತ್ತು ಕುಮಾರರೊಂದಿಗೆ ಕುರುಗಳಿಂದ ಪೂಜಿಸಲ್ಪಟ್ಟ ಆ ಮಹಾರಥಿ ಮಹಾತ್ಮರು ಕುರುಗಳ ಮಧ್ಯದಲ್ಲಿ ಅಗ್ನಿಗಳಂತೆ ಪ್ರಜ್ವಲಿಸಿದರು.

03235020a ತತೋ ದುರ್ಯೋಧನಂ ಮುಚ್ಯ ಭ್ರಾತೃಭಿಃ ಸಹಿತಂ ತದಾ|

03235020c ಯುಧಿಷ್ಠಿರಃ ಸಪ್ರಣಯಮಿದಂ ವಚನಮಬ್ರವೀತ್||

ಆಗ ಭ್ರಾತೃಗಳ ಸಹಿತ ದುರ್ಯೋಧನನ್ನು ಬಿಡುಗಡೆ ಮಾಡುವಾಗ ಯುಧಿಷ್ಠಿರನು ಪ್ರೀತಿಯಿಂದ ಈ ಮಾತುಗಳನ್ನಾಡಿದನು.

03235021a ಮಾ ಸ್ಮ ತಾತ ಪುನಃ ಕಾರ್ಷೀರೀದೃಶಂ ಸಾಹಸಂ ಕ್ವ ಚಿತ್|

03235021c ನ ಹಿ ಸಾಹಸಕರ್ತಾರಃ ಸುಖಮೇಧಂತಿ ಭಾರತ||

“ಭಾರತ! ತಮ್ಮ! ಪುನಃ ಎಂದೂ ಈ ರೀತಿಯ ಸಾಹಸವನ್ನು ಮಾಡಬೇಡ. ಏಕೆಂದರೆ ಸಾಹಸಮಾಡುವವರು ಸುಖವನ್ನು ಹೊಂದುವುದಿಲ್ಲ.

03235022a ಸ್ವಸ್ತಿಮಾನ್ಸಹಿತಃ ಸರ್ವೈರ್ಭ್ರಾತೃಭಿಃ ಕುರುನಂದನ|

03235022c ಗೃಹಾನ್ವ್ರಜ ಯಥಾಕಾಮಂ ವೈಮನಸ್ಯಂ ಚ ಮಾ ಕೃಥಾಃ||

ಕುರುನಂದನ! ನಿನಗಿಷ್ಟಬಂದಂತೆ ಒಳ್ಳೆಯದಾಗಿ ನಿನ್ನ ತಮ್ಮಂದಿರೊಡನೆ ಮನೆಗೆ ಹೊರಡು. ಬೇಸರಪಟ್ಟುಕೊಳ್ಳಬೇಡ!”

03235023a ಪಾಂಡವೇನಾಭ್ಯನುಜ್ಞಾತೋ ರಾಜಾ ದುರ್ಯೋಧನಸ್ತದಾ|

03235023c ವಿದೀರ್ಯಮಾಣೋ ವ್ರೀಡೇನ ಜಗಾಮ ನಗರಂ ಪ್ರತಿ||

ಪಾಂಡವರಿಂದ ಬೀಳ್ಕೊಂಡ ರಾಜಾ ದುರ್ಯೋಧನನು ನಾಚಿಕೆಯಿಂದ ಪೀಡಿತನಾಗಿ ನಗರದ ಕಡೆ ಹೊರಟನು.

03235024a ತಸ್ಮಿನ್ಗತೇ ಕೌರವೇಯೇ ಕುಂತೀಪುತ್ರೋ ಯುಧಿಷ್ಠಿರಃ|

03235024c ಭ್ರಾತೃಭಿಃ ಸಹಿತೋ ವೀರಃ ಪೂಜ್ಯಮಾನೋ ದ್ವಿಜಾತಿಭಿಃ||

03235025a ತಪೋಧನೈಶ್ಚ ತೈಃ ಸರ್ವೈರ್ವೃತಃ ಶಕ್ರ ಇವಾಮರೈಃ|

03235025c ವನೇ ದ್ವೈತವನೇ ತಸ್ಮಿನ್ವಿಜಹಾರ ಮುದಾ ಯುತಃ||

ಆ ಕೌರವರು ಹೋಗಲು ವೀರ ಕುಂತೀಪುತ್ರ ಯುಧಿಷ್ಠಿರನು ಭ್ರಾತೃಗಳೊಂದಿಗೆ ದ್ವಿಜಾತಿ-ತಪೋಧನರಿಂದ ಪೂಜಿತನಾಗಿ, ಅಮರರಿಂದ ಶಕ್ರನು ಹೇಗೋ ಹಾಗೆ ಎಲ್ಲರಿಂದ ಸುತ್ತುವರೆಯಲ್ಪಟ್ಟು, ಆ ದ್ವೈತವನದಲ್ಲಿ ಸಂತೋಷದಿಂದ ವಿಹರಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಮೋಕ್ಷಣೇ ಪಂಚತ್ರಿಂಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಮೋಕ್ಷಣದಲ್ಲಿ ಇನ್ನೂರಾಮೂವತ್ತೈದನೆಯ ಅಧ್ಯಾಯವು.

Related image

Comments are closed.