ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೩೧
ದುರ್ಯೋಧನ, ದುಃಶಾಸನ, ಮತ್ತು ಇತರ ಯೋಧರನ್ನೂ ರಾಜಪತ್ನಿಯರನ್ನೂ ಗಂಧರ್ವರು ಸೆರೆಹಿಡಿದು ಆಕಾಶಮಾರ್ಗದಲ್ಲಿ ಕೊಂಡೊಯ್ದುದು (೧-೧೨). ದುರ್ಯೋಧನನ ಅಮಾತ್ಯರು ಯುಧಿಷ್ಠಿರನಲ್ಲಿ ಬಂದು ಸಹಾಯ ಕೋರಿದಾಗ ಭೀಮನು ಚುಚ್ಚುಮಾತುಗಳಿಂದ ಮೂದಲಿಸಿದ್ದುದು (೧೩-೨೧).
03231001 ವೈಶಂಪಾಯನ ಉವಾಚ|
03231001a ಗಂಧರ್ವೈಸ್ತು ಮಹಾರಾಜ ಭಗ್ನೇ ಕರ್ಣೇ ಮಹಾರಥೇ|
03231001c ಸಂಪ್ರಾದ್ರವಚ್ಚಮೂಃ ಸರ್ವಾ ಧಾರ್ತರಾಷ್ಟ್ರಸ್ಯ ಪಶ್ಯತಃ||
ವೈಶಂಪಾಯನನು ಹೇಳಿದನು: “ಮಹಾರಾಜ! ಗಂಧರ್ವರು ಮಹಾರಥಿ ಕರ್ಣನನ್ನು ಭಗ್ನಗೊಳಿಸಲು ಸೇನೆಯೆಲ್ಲವೂ ಧಾರ್ತರಾಷ್ಟ್ರನು ನೋಡುತ್ತಿದ್ದಂತೆಯೇ ಪಲಾಯನಗೈಯಿತು.
03231002a ತಾನ್ದೃಷ್ಟ್ವಾ ದ್ರವತಃ ಸರ್ವಾನ್ಧಾರ್ತರಾಷ್ಟ್ರಾನ್ಪರಾಙ್ಮುಖಾನ್|
03231002c ದುರ್ಯೋಧನೋ ಮಹಾರಾಜ ನಾಸೀತ್ತತ್ರ ಪರಾಙ್ಮುಖಃ||
ಮಹಾರಾಜ! ಅವರೆಲ್ಲ ಧಾರ್ತರಾಷ್ಟ್ರರು ಓಡಿ ಹೋದುದನ್ನು ನೋಡಿ ದುರ್ಯೋಧನನು ಪಾರಾಂಙ್ಮುಖನಾಗದೇ ಅಲ್ಲಿಯೇ ನಿಂತನು.
03231003a ತಾಮಾಪತಂತೀಂ ಸಂಪ್ರೇಕ್ಷ್ಯ ಗಂಧರ್ವಾಣಾಂ ಮಹಾಚಮೂಂ|
03231003c ಮಹತಾ ಶರವರ್ಷೇಣ ಸೋಽಭ್ಯವರ್ಷದರಿಂದಮಃ||
ಗಂಧರ್ವರ ಮಹಾಸೇನೆಯು ತನ್ನ ಮೇಲೆರಗುತ್ತಿದ್ದುದನ್ನು ನೋಡಿದ ಆ ಅರಿಂದಮನು ಅವರ ಮೇಲೆ ಮಹಾ ಶರವರ್ಷವನ್ನು ಸುರಿಸಿದನು.
03231004a ಅಚಿಂತ್ಯ ಶರವರ್ಷಂ ತು ಗಂಧರ್ವಾಸ್ತಸ್ಯ ತಂ ರಥಂ|
03231004c ದುರ್ಯೋಧನಂ ಜಿಘಾಂಸಂತಃ ಸಮಂತಾತ್ಪರ್ಯವಾರಯನ್||
ಶರವರ್ಷವನ್ನು ಲಕ್ಷಿಸದೇ ಆ ಗಂಧರ್ವರು ದುರ್ಯೋಧನನನ್ನು ಸಂಹರಿಸುವ ಉದ್ದೇಶದಿಂದ ಎಲ್ಲ ಕಡೆಯಿಂದಲೂ ಅವನ ರಥವನ್ನು ಸುತ್ತುವರೆದರು.
03231005a ಯುಗಂ ಈಷಾಂ ವರೂಥಂ ಚ ತಥೈವ ಧ್ವಜಸಾರಥೀ|
03231005c ಅಶ್ವಾಂಸ್ತ್ರಿವೇಣುಂ ತಲ್ಪಂ ಚ ತಿಲಶೋಽಭ್ಯಹನನ್ರಥಂ||
ನೊಗ, ಆವರಣ, ವರೂಥ, ಧ್ವಜ ಮತ್ತು ಸಾರಥಿ, ಕುದುರೆ, ತ್ರಿವೇಣು, ಮತ್ತು ರಥವನ್ನು ಎಳ್ಳಿನಷ್ಟು ಸಣ್ಣಗೆ ಪುಡಿಪುಡಿ ಮಾಡಿದರು.
03231006a ದುರ್ಯೋಧನಂ ಚಿತ್ರಸೇನೋ ವಿರಥಂ ಪತಿತಂ ಭುವಿ|
03231006c ಅಭಿದ್ರುತ್ಯ ಮಹಾಬಾಹುರ್ಜೀವಗ್ರಾಹಮಥಾಗ್ರಹೀತ್||
ವಿರಥನಾಗಿ ದುರ್ಯೋಧನನು ಭೂಮಿಯ ಮೇಲೆ ಬೀಳಲು ಮಹಾಬಾಹು ಚಿತ್ರಸೇನನು ಓಡಿಬಂದು ಅವನನ್ನು ಸೆರೆ ಹಿಡಿದನು.
03231007a ತಸ್ಮಿನ್ಗೃಹೀತೇ ರಾಜೇಂದ್ರ ಸ್ಥಿತಂ ದುಃಶಾಸನಂ ರಥೇ|
03231007c ಪರ್ಯಗೃಹ್ಣಂತ ಗಂಧರ್ವಾಃ ಪರಿವಾರ್ಯ ಸಮಂತತಃ||
ರಾಜೇಂದ್ರ! ಅವನು ಬಂಧಿಯಾಗಲು ರಥದಲ್ಲಿ ನಿಂತಿದ್ದ ದುಃಶಾಸನನ್ನು ಗಂಧರ್ವರು ಎಲ್ಲಕಡೆಯಿಂದ ಸುತ್ತುವರೆದು ಸೆರೆಹಿಡಿದರು.
03231008a ವಿವಿಂಶತಿಂ ಚಿತ್ರಸೇನಮಾದಾಯಾನ್ಯೇ ಪ್ರದುದ್ರುವುಃ|
03231008c ವಿಂದಾನುವಿಂದಾವಪರೇ ರಾಜದಾರಾಂಶ್ಚ ಸರ್ವಶಃ||
ಇತರರು ಚಿತ್ರಸೇನನನ್ನು ಕರೆದುಕೊಂಡು ವಿವಿಂಶತಿಯ ಮೇಲೆ, ಇತರರು ವಿಂದ-ಅನುವಿಂದರ ಮೇಲೆ ಮತ್ತು ರಾಜಪತ್ನಿಯರೆಲ್ಲರ ಮೇಲೆ ಆಕ್ರಮಣ ಮಾಡಿದರು.
03231009a ಸೈನ್ಯಾಸ್ತು ಧಾರ್ತರಾಷ್ಟ್ರಸ್ಯ ಗಂಧರ್ವೈಃ ಸಮಭಿದ್ರುತಾಃ|
03231009c ಪೂರ್ವಂ ಪ್ರಭಗ್ನೈಃ ಸಹಿತಾಃ ಪಾಂಡವಾನಭ್ಯಯುಸ್ತದಾ||
ಗಂಧರ್ವರಿಂದ ಹೊಡೆದೋಡಿಸಲ್ಪಟ್ಟ ಧಾರ್ತರಾಷ್ಟ್ರನ ಸೇನೆಯು ಮೊದಲೇ ಗಾಯಗೊಂಡವರ ಸಹಿತ ಪಾಂಡವರ ಬಳಿ ಹೋಯಿತು.
03231010a ಶಕಟಾಪಣವೇಶ್ಯಾಶ್ಚ ಯಾನಯುಗ್ಯಂ ಚ ಸರ್ವಶಃ|
03231010c ಶರಣಂ ಪಾಂಡವಾಂ ಜಗ್ಮುರ್ಹ್ರಿಯಮಾಣೇ ಮಹೀಪತೌ||
ಅವರ ರಾಜರು ಬಂಧಿಗಳಾಗಲು ಮಾರುವ ಬಂಡಿಗಳು, ವೇಶ್ಯೆಯರು, ಯಾನ-ವಾಹನಗಳೆಲ್ಲವೂ ಪಾಂಡವರ ಶರಣು ಹೊಕ್ಕರು.
03231011a ಪ್ರಿಯದರ್ಶನೋ ಮಹಾಬಾಹುರ್ಧಾರ್ತರಾಷ್ಟ್ರೋ ಮಹಾಬಲಃ|
03231011c ಗಂಧರ್ವೈರ್ಹ್ರಿಯತೇ ರಾಜಾ ಪಾರ್ಥಾಸ್ತಮನುಧಾವತ||
ಗಂಧರ್ವರು ಆ ಪ್ರಿಯದರ್ಶನ ಮಹಾಬಾಹು ಮಹಾಬಲ ರಾಜಾ ಧಾರ್ತರಾಷ್ಟ್ರನನ್ನು ಕೊಂಡೊಯ್ದರು ಮತ್ತು ಪಾರ್ಥರು ಅವನ ಹಿಂದೆಯೇ ಹೋದರು.
03231012a ದುಃಶಾಸನೋ ದುರ್ವಿಷಹೋ ದುರ್ಮುಖೋ ದುರ್ಜಯಸ್ತಥಾ|
03231012c ಬದ್ಧ್ವಾ ಹ್ರಿಯಂತೇ ಗಂಧರ್ವೈ ರಾಜದಾರಾಶ್ಚ ಸರ್ವಶಃ||
ದುಃಶಾಸನ, ದುರ್ವಿಷಹ, ದುರ್ಮುಖ, ದುರ್ಜಯ ಮತ್ತು ರಾಜಪತ್ನಿಯರೆಲ್ಲರೂ ಗಂಧರ್ವರಿಂದ ಕಟ್ಟಲ್ಪಟ್ಟಿದ್ದರು.
03231013a ಇತಿ ದುರ್ಯೋಧನಾಮಾತ್ಯಾಃ ಕ್ರೋಶಂತೋ ರಾಜಗೃದ್ಧಿನಃ|
03231013c ಆರ್ತಾ ದೀನಸ್ವರಾಃ ಸರ್ವೇ ಯುಧಿಷ್ಠಿರಮುಪಾಗಮನ್||
ಈ ರೀತಿ ದುರ್ಯೋಧನನ ಎಲ್ಲ ಅಮಾತ್ಯರು ತಮ್ಮ ರಾಜನಿಗೆ ಅರಸಿ ದೀನಸ್ವರದಲ್ಲಿ ಕೂಗುತ್ತಾ ಯುಧಿಷ್ಠಿರನಲ್ಲಿಗೆ ಬಂದರು.
03231014a ತಾಂಸ್ತಥಾ ವ್ಯಥಿತಾನ್ದೀನಾನ್ಭಿಕ್ಷಮಾಣಾನ್ಯುಧಿಷ್ಠಿರಂ|
03231014c ವೃದ್ಧಾನ್ದುರ್ಯೋಧನಾಮಾತ್ಯಾನ್ಭೀಮಸೇನೋಽಭ್ಯಭಾಷತ||
ಆಗ ಯುಧಿಷ್ಠಿರನನ್ನು ಬೇಡುತ್ತಿದ್ದ ವ್ಯಥಿತ-ದೀನ ದುರ್ಯೋಧನನ ವೃದ್ಧ ಅಮಾತ್ಯರನ್ನುದ್ದೇಶಿಸಿ ಭೀಮಸೇನನು ಹೇಳಿದನು:
03231015a ಅನ್ಯಥಾ ವರ್ತಮಾನಾನಾಮರ್ಥೋ ಜಾತೋಽಯಮನ್ಯಥಾ|
03231015c ಅಸ್ಮಾಭಿರ್ಯದನುಷ್ಠೇಯಂ ಗಂಧರ್ವೈಸ್ತದನುಷ್ಠಿತಂ||
“ನಾವೇ ಮಾಡಬೇಕಾದುದನ್ನು ಗಂಧರ್ವರು ಮಾಡಿದರೆಂದರೆ ತಪ್ಪು ಮಾಡಿದವರಿಗೆ ಶಿಕ್ಷೆ ದೊರೆದಂತಾಯಿತು!
03231016a ದುರ್ಮಂತ್ರಿತಮಿದಂ ತಾತ ರಾಜ್ಞೋ ದುರ್ದ್ಯೂತದೇವಿನಃ|
03231016c ದ್ವೇಷ್ಟಾರಮನ್ಯೇ ಕ್ಲೀಬಸ್ಯ ಪಾತಯಂತೀತಿ ನಃ ಶ್ರುತಂ||
ಕೆಟ್ಟ ಸಲಹೆಯಿಂದ ರಾಜನು ಕೆಟ್ಟ ದ್ಯೂತದ ಆಟವನ್ನಾಡಿದನೆಂದೂ, ಹೇಡಿಗಳ ದ್ವೇಷಿಗಳನ್ನು ಇತರರು ಕೆಳಗುರಿಳಿಸುತ್ತಾರೆ ಎಂದೂ ಕೇಳಿದ್ದೇವೆ.
03231017a ತದಿದಂ ಕೃತಂ ನಃ ಪ್ರತ್ಯಕ್ಷಂ ಗಂಧರ್ವೈರತಿಮಾನುಷಂ|
03231017c ದಿಷ್ಟ್ಯಾ ಲೋಕೇ ಪುಮಾನಸ್ತಿ ಕಶ್ಚಿದಸ್ಮತ್ಪ್ರಿಯೇ ಸ್ಥಿತಃ|
03231017e ಯೇನಾಸ್ಮಾಕಂ ಹೃತೋ ಭಾರ ಆಸೀನಾನಾಂ ಸುಖಾವಹಃ||
ಗಂಧರ್ವರ ಈ ಅಮಾನುಷ ಕೃತ್ಯವನ್ನು ನಾವು ಪ್ರತ್ಯಕ್ಷವಾಗಿ ನೋಡಿದೆವು. ಲೋಕದಲ್ಲಿ ನಮ್ಮ ಒಳ್ಳೆಯದನ್ನು ಬಯಸುವ ಪುರುಷರಿದ್ದಾರೆ ಮತ್ತು ನಾವು ಹತ್ತಿರವೇ ನಿಂತು ನೋಡುತ್ತಿರುವಾಗ ನಮ್ಮ ಭಾರವನ್ನು ಕಳೆದು ಸಂತೋಷವನ್ನು ತಂದಿದ್ದಾರೆಂದರೆ ನಮ್ಮ ಅದೃಷ್ಠವೇ ಸರಿ.
03231018a ಶೀತವಾತಾತಪಸಹಾಂಸ್ತಪಸಾ ಚೈವ ಕರ್ಶಿತಾನ್|
03231018c ಸಮಸ್ಥೋ ವಿಷಮಸ್ಥಾನ್ ಹಿ ದ್ರಷ್ಟುಮಿಚ್ಚತಿ ದುರ್ಮತಿಃ||
ಸುಖವಾಗಿರುವ ಆ ದುರ್ಮತಿಯು ನಾವು ಕಷ್ಟದಲ್ಲಿರುವುದನ್ನು, ಛಳಿ, ಗಾಳಿ, ಬಿಸಿಲುಗಳಿಂದ ಬಳಲುವುದನ್ನು ಮತ್ತು ತಪಸ್ಸಿನಿಂದ ಸೋತಿರುವುದನ್ನು ನೋಡಲು ಬಯಸಿದ್ದನು.
03231019a ಅಧರ್ಮಚಾರಿಣಸ್ತಸ್ಯ ಕೌರವ್ಯಸ್ಯ ದುರಾತ್ಮನಃ|
03231019c ಯೇ ಶೀಲಮನುವರ್ತಂತೇ ತೇ ಪಶ್ಯಂತಿ ಪರಾಭವಂ||
ಆ ಅಧರ್ಮಚಾರಿಣಿ ದುರಾತ್ಮ ಕೌರವನ ನಡತೆಯನ್ನು ಅನುಸರಿಸುವವರು ಪರಾಭವವನ್ನು ಕಾಣುತ್ತಾರೆ.
03231020a ಅಧರ್ಮೋ ಹಿ ಕೃತಸ್ತೇನ ಯೇನೈತದುಪಶಿಕ್ಷಿತಂ|
03231020c ಅನೃಶಂಸಾಸ್ತು ಕೌಂತೇಯಾಸ್ತಸ್ಯಾಧ್ಯಕ್ಷಾನ್ಬ್ರವೀಮಿ ವಃ||
ಅವನ ಅಧರ್ಮಕ್ಕಾಗಿಯೇ ಅವನು ಈ ರೀತಿಯ ಶಿಕ್ಷೆಗೊಳಗಾಗಿದ್ದಾನೆ. ಆ ಕ್ರೂರಿ ಕೌರವನಿಗೆ ನೀವೇ ಸಾಕ್ಷಿಗಳಾಗಿರುವಿರಿ ಎಂದು ಹೇಳುತ್ತೇನೆ.”
03231021a ಏವಂ ಬ್ರುವಾಣಂ ಕೌಂತೇಯಂ ಭೀಮಸೇನಮಮರ್ಷಣಂ|
03231021c ನ ಕಾಲಃ ಪರುಷಸ್ಯಾಯಮಿತಿ ರಾಜಾಭ್ಯಭಾಷತ||
ಈ ರೀತಿ ಕೋಪದಿಂದ ಮಾತನಾಡುತ್ತಿರುವ ಕೌಂತೇಯ ಭೀಮಸೇನನಿಗೆ ರಾಜನು “ಇದು ಗಡುಸಾಗಿರುವ ಕಾಲವಲ್ಲ” ಎಂದು ನುಡಿದನು.
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಾದಿಹರಣೇ ಏಕತ್ರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಾದಿಹರಣದಲ್ಲಿ ಇನ್ನೂರಾಮೂವತ್ತೊಂದನೆಯ ಅಧ್ಯಾಯವು.
