Aranyaka Parva: Chapter 224

ಆರಣ್ಯಕ ಪರ್ವ: ದ್ರೌಪದೀಸತ್ಯಭಾಮಾಸಂವಾದ ಪರ್ವ

೨೨೪

ಮಾರ್ಕಂಡೇಯಾದಿ ವಿಪ್ರರೊಂದಿಗೆ ಮತ್ತು ಪಾಂಡವರೊಂದಿಗೆ ಬೀಳ್ಕೊಂಡು ಕೃಷ್ಣನು ಹೊರಡಲು ಸಿದ್ಧನಾಗಲು ಸತ್ಯಭಾಮೆಯು ದ್ರೌಪದಿಯನ್ನು ಸಂತವಿಸಿ ಬೀಳ್ಕೊಂಡಿದುದು (೧-೧೪). ಕೃಷ್ಣ-ಸತ್ಯಭಾಮೆಯರು ಹಿಂದಿರುಗಿ ಹೋದುದು (೧೫-೧೭).

03224001 ವೈಶಂಪಾಯನ ಉವಾಚ|

03224001a ಮಾರ್ಕಂಡೇಯಾದಿಭಿರ್ವಿಪ್ರೈಃ ಪಾಂಡವೈಶ್ಚ ಮಹಾತ್ಮಭಿಃ|

03224001c ಕಥಾಭಿರನುಕೂಲಾಭಿಃ ಸಹಾಸಿತ್ವಾ ಜನಾರ್ದನಃ||

03224002a ತತಸ್ತೈಃ ಸಂವಿದಂ ಕೃತ್ವಾ ಯಥಾವನ್ಮಧುಸೂದನಃ|

03224002c ಆರುರುಕ್ಷೂ ರಥಂ ಸತ್ಯಾಮಾಹ್ವಯಾಮಾಸ ಕೇಶವಃ||

ವೈಶಂಪಾಯನನು ಹೇಳಿದನು: “ಜನಾರ್ದನ ಮಧುಸೂದನನು ಮಾರ್ಕಂಡೇಯಾದಿ ವಿಪ್ರರೊಂದಿಗೆ ಮತ್ತು ಮಹಾತ್ಮ ಪಾಂಡವರೊಂದಿಗೆ ಅನುಕೂಲಕರವಾದ ಮಾತುಕಥೆಗಳನ್ನಾಡಿ ಅವರೊಂದಿಗೆ ಯಥಾವಿಧಿಯಾಗಿ ಬೀಳ್ಕೊಂಡನು ಮತ್ತು ರಥವನ್ನೇರಲು ಸಿದ್ಧನಾದ ಕೇಶವನು ಸತ್ಯಭಾಮೆಯನ್ನು ಕರೆದನು.

03224003a ಸತ್ಯಭಾಮಾ ತತಸ್ತತ್ರ ಸ್ವಜಿತ್ವಾ ದ್ರುಪದಾತ್ಮಜಾಂ|

03224003c ಉವಾಚ ವಚನಂ ಹೃದ್ಯಂ ಯಥಾಭಾವಸಮಾಹಿತಂ||

ಆಗ ಸತ್ಯಭಾಮೆಯು ದ್ರುಪದಾತ್ಮಜೆಯನ್ನು ಬಿಗಿದಪ್ಪಿ, ಹೃದಯದಲ್ಲಿ ಭಾವವನ್ನು ತುಂಬಿಸಿಕೊಂಡು ಈ ಮಾತುಗಳನ್ನಾಡಿದಳು.

03224004a ಕೃಷ್ಣೇ ಮಾ ಭೂತ್ತವೋತ್ಕಂಠಾ ಮಾ ವ್ಯಥಾ ಮಾ ಪ್ರಜಾಗರಃ|

03224004c ಭರ್ತೃಭಿರ್ದೇವಸಂಕಾಶೈರ್ಜಿತಾಂ ಪ್ರಾಪ್ಸ್ಯಸಿ ಮೇದಿನೀಂ||

“ಕೃಷ್ಣೇ! ದುಗುಡಗೊಳ್ಳಬೇಡ! ವ್ಯಥೆಮಾಡಬೇಡ! ನಿದ್ದೆಯನ್ನು ಕಳೆದುಕೊಳ್ಳಬೇಡ! ದೇವಸಂಕಾಶ ಪತಿಗಳು ಗೆಲ್ಲುವ ಮೇದಿನಿಯನ್ನು ಹೊಂದುತ್ತೀಯೆ.

03224005a ನ ಹ್ಯೇವಂ ಶೀಲಸಂಪನ್ನಾ ನೈವಂ ಪೂಜಿತಲಕ್ಷಣಾಃ|

03224005c ಪ್ರಾಪ್ನುವಂತಿ ಚಿರಂ ಕ್ಲೇಶಂ ಯಥಾ ತ್ವಮಸಿತೇಕ್ಷಣೇ||

ಅಸಿತೇಕ್ಷಣೇ! ನಿನ್ನ ಹಾಗೆ ಪೂಜಿತ ಲಕ್ಷಣಗಳನ್ನುಳ್ಳ, ಶೀಲಸಂಪನ್ನೆಯು ತುಂಬಾ ಸಮಯದವರೆಗೆ ಕ್ಲೇಶವನ್ನು ಹೊಂದುವುದಿಲ್ಲ.

03224006a ಅವಶ್ಯಂ ಚ ತ್ವಯಾ ಭೂಮಿರಿಯಂ ನಿಹತಕಂಟಕಾ|

03224006c ಭರ್ತೃಭಿಃ ಸಹ ಭೋಕ್ತವ್ಯಾ ನಿರ್ದ್ವಂದ್ವೇತಿ ಶ್ರುತಂ ಮಯಾ||

ಅವಶ್ಯವಾಗಿಯೂ ಕಂಟಕರು ನಿಹತರಾಗಿ ನೀನು ಈ ಭೂಮಿಯನ್ನು ಪತಿಗಳೊಂದಿಗೆ, ಪ್ರತಿಸ್ಪರ್ಧಿಗಳಿಲ್ಲದೇ ಭೋಗಿಸುತ್ತೀಯೆ ಎಂದು ಕೇಳಿದ್ದೇನೆ.

03224007a ಧಾರ್ತರಾಷ್ಟ್ರವಧಂ ಕೃತ್ವಾ ವೈರಾಣಿ ಪ್ರತಿಯಾತ್ಯ ಚ|

03224007c ಯುಧಿಷ್ಠಿರಸ್ಥಾಂ ಪೃಥಿವೀಂ ದ್ರಷ್ಟಾಸಿ ದ್ರುಪದಾತ್ಮಜೇ||

ದ್ರುಪದಾತ್ಮಜೇ! ಧಾರ್ತರಾಷ್ಟ್ರರ ವಧೆಯನ್ನು ಮಾಡಿ, ವೈರಕ್ಕೆ ಪ್ರತೀಕಾರವನ್ನು ಮಾಡಿ, ಪೃಥ್ವಿಯು ಯುಧಿಷ್ಠಿರನಲ್ಲಿ ನೆಲೆಸುವುದನ್ನು ನಾನು ಕಂಡಿದ್ದೇನೆ.

03224008a ಯಾಸ್ತಾಃ ಪ್ರವ್ರಾಜಮಾನಾಂ ತ್ವಾಂ ಪ್ರಾಹಸನ್ದರ್ಪಮೋಹಿತಾಃ|

03224008c ತಾಃ ಕ್ಷಿಪ್ರಂ ಹತಸಂಕಲ್ಪಾ ದ್ರಕ್ಷ್ಯಸಿ ತ್ವಂ ಕುರುಸ್ತ್ರಿಯಃ||

ನೀನು ವನದಲ್ಲಿರುವಾಗ ದರ್ಪಮೋಹಿತರಾಗಿ ನಕ್ಕ ಕುರುಸ್ತ್ರೀಯರು ಬೇಗನೇ ಹತಸಂಕಲ್ಪರಾಗುವುದನ್ನು ನೀನು ನೋಡುತ್ತೀಯೆ.

03224009a ತವ ದುಃಖೋಪಪನ್ನಾಯಾ ಯೈರಾಚರಿತಮಪ್ರಿಯಂ|

03224009c ವಿದ್ಧಿ ಸಂಪ್ರಸ್ಥಿತಾನ್ಸರ್ವಾಂಸ್ತಾನ್ಕೃಷ್ಣೇ ಯಮಸಾದನಂ||

ಕೃಷ್ಣೇ! ನೀನು ದುಃಖದಲ್ಲಿರುವಾಗ ಯಾರು ಕೆಟ್ಟದಾಗಿ ನಡೆದುಕೊಂಡರೋ ಅವರೆಲ್ಲರೂ ಯಮಸಾದನಕ್ಕೆ ಹೋಗುತ್ತಾರೆಂದು ತಿಳಿ.

03224010a ಪುತ್ರಸ್ತೇ ಪ್ರತಿವಿಂಧ್ಯಶ್ಚ ಸುತಸೋಮಸ್ತಥಾ ವಿಭುಃ|

03224010c ಶ್ರುತಕರ್ಮಾರ್ಜುನಿಶ್ಚೈವ ಶತಾನೀಕಶ್ಚ ನಾಕುಲಿಃ|

03224010e ಸಹದೇವಾಚ್ಚ ಯೋ ಜಾತಃ ಶ್ರುತಸೇನಸ್ತವಾತ್ಮಜಃ||

03224011a ಸರ್ವೇ ಕುಶಲಿನೋ ವೀರಾಃ ಕೃತಾಸ್ತ್ರಾಶ್ಚ ಸುತಾಸ್ತವ|

03224011c ಅಭಿಮನ್ಯುರಿವ ಪ್ರೀತಾ ದ್ವಾರವತ್ಯಾಂ ರತಾ ಭೃಶಂ||

ನಿನ್ನ ಮಕ್ಕಳು ಪ್ರತಿವಿಂಧ್ಯ ಮತ್ತು ರಾಜಕುಮಾರ ಸುತಸೋಮ, ಅರ್ಜುನನ ಶ್ರುತಕರ್ಮ, ನಕುಲನ ಶತಾನೀಕ ಮತ್ತು ಸಹದೇವನಿಂದ ಹುಟ್ಟಿದ ನಿನ್ನ ಮಗ ಶ್ರುತಸೇನ ಈ ಎಲ್ಲ ಮಕ್ಕಳೂ ಕುಶಲರೂ ಕೃತಾಸ್ತ್ರರೂ ಆಗಿದ್ದಾರೆ. ಅಭಿಮನ್ಯುವಿನಂತೆ ಅವರೆಲ್ಲರೂ ಸಂತೋಷದಿಂದ ದ್ವಾರಾವತಿಯನ್ನು ತುಂಬಾ ಇಷ್ಟಪಡುತ್ತಾರೆ.

03224012a ತ್ವಮಿವೈಷಾಂ ಸುಭದ್ರಾ ಚ ಪ್ರೀತ್ಯಾ ಸರ್ವಾತ್ಮನಾ ಸ್ಥಿತಾ|

03224012c ಪ್ರೀಯತೇ ಭಾವನಿರ್ದ್ವಂದ್ವಾ ತೇಭ್ಯಶ್ಚ ವಿಗತಜ್ವರಾ||

ಸುಭದ್ರೆಯು ನಿನ್ನ ಹಾಗೆ ಅವರನ್ನು ಸಂಪೂರ್ಣವಾಗಿ ಪ್ರೀತಿಸುತ್ತಾಳೆ. ಪ್ರೀತಿಗೆ ಪ್ರತಿಸ್ಪರ್ಧಿಗಳಲ್ಲದೇ ಪ್ರೀತಿಸಿ, ಅವರ ಕುರಿತು ಸ್ವಲ್ಪವೂ ಚಿಂತಿಸುವುದಿಲ್ಲ.

03224013a ಭೇಜೇ ಸರ್ವಾತ್ಮನಾ ಚೈವ ಪ್ರದ್ಯುಮ್ನಜನನೀ ತಥಾ|

03224013c ಭಾನುಪ್ರಭೃತಿಭಿಶ್ಚೈನಾನ್ವಿಶಿನಷ್ಟಿ ಚ ಕೇಶವಃ||

ಪ್ರದ್ಯುಮ್ನನ ತಾಯಿಯೂ ಕೂಡ ಅವರನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾಳೆ. ಕೇಶವನೂ ಕೂಡ ಭಾನುವಿನೊಂದಿಗೆ ಅವರ ಮೇಲ್ವಿಚಾರಣೆ ಮಾಡುತ್ತಾನೆ.

03224014a ಭೋಜನಾಚ್ಚಾದನೇ ಚೈಷಾಂ ನಿತ್ಯಂ ಮೇ ಶ್ವಶುರಃ ಸ್ಥಿತಃ|

03224014c ರಾಮಪ್ರಭೃತಯಃ ಸರ್ವೇ ಭಜಂತ್ಯಂಧಕವೃಷ್ಣಯಃ|

03224014e ತುಲ್ಯೋ ಹಿ ಪ್ರಣಯಸ್ತೇಷಾಂ ಪ್ರದ್ಯುಮ್ನಸ್ಯ ಚ ಭಾಮಿನಿ||

ನನ್ನ ಮಾವನು ಯಾವಾಗಲೂ ಅವರ ಊಟ ಉಪಚಾರಗಳನ್ನು ನೋಡಿಕೊಳ್ಳುತ್ತಾನೆ. ರಾಮನೂ ಸೇರಿ ಎಲ್ಲ ಅಂಧಕ-ವೃಷ್ಣಿಗಳು ಕೂಡ ಅವರನ್ನು ಇಷ್ಟಪಡುತ್ತಾರೆ. ಭಾಮಿನೀ! ಪ್ರದ್ಯುಮ್ನನಷ್ಟೇ ಅವರನ್ನೂ ಅವರು ಪ್ರೀತಿಸುತ್ತಾರೆ.”

03224015a ಏವಮಾದಿ ಪ್ರಿಯಂ ಪ್ರೀತ್ಯಾ ಹೃದ್ಯಮುಕ್ತ್ವಾ ಮನೋನುಗಂ|

03224015c ಗಮನಾಯ ಮನಶ್ಚಕ್ರೇ ವಾಸುದೇವರಥಂ ಪ್ರತಿ||

ಈ ರೀತಿ ಮನಸ್ಸಿಗೆ ಹಿಡಿಯುವ, ಹೃದಯದಿಂದ ಹೊರಟ ಪ್ರಿಯವಾದ ಮಾತುಗಳನ್ನು ಪ್ರೀತಿಯಿಂದ ಹೇಳಿ, ಹೊರಡಲು ಮನಸ್ಸುಮಾಡಿ ವಾಸುದೇವನ ರಥದ ಕಡೆ ಹೋದಳು.

03224016a ತಾಂ ಕೃಷ್ಣಾಂ ಕೃಷ್ಣಮಹಿಷೀ ಚಕಾರಾಭಿಪ್ರದಕ್ಷಿಣಂ|

03224016c ಆರುರೋಹ ರಥಂ ಶೌರೇಃ ಸತ್ಯಭಾಮಾ ಚ ಭಾಮಿನೀ||

ಕೃಷ್ಣನ ಮಹಿಷಿ ಭಾಮಿನೀ ಸತ್ಯಭಾಮೆಯು ಕೃಷ್ಣೆಗೆ ಪ್ರದಕ್ಷಿಣೆ ಮಾಡಿ ಶೌರಿಯ ರಥವನ್ನೇರಿದಳು.

03224017a ಸ್ಮಯಿತ್ವಾ ತು ಯದುಶ್ರೇಷ್ಠೋ ದ್ರೌಪದೀಂ ಪರಿಸಾಂತ್ವ್ಯ ಚ|

03224017c ಉಪಾವರ್ತ್ಯ ತತಃ ಶೀಘ್ರೈರ್ಹಯೈಃ ಪ್ರಾಯಾತ್ ಪರಂತಪಃ||

ಮುಗುಳ್ನಕ್ಕು ದ್ರೌಪದಿಯನ್ನು ಸಂತವಿಸಿ ಪರಂತಪ ಯದುಶ್ರೇಷ್ಠನು ಶೀಘ್ರ ಹಯಗಳೊಡನೆ ಹಿಂತಿರುಗಿ ಹೋದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಸತ್ಯಭಾಮಾಸಂವಾದ ಪರ್ವಣಿ ಚತ್ರುರ್ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಸತ್ಯಭಾಮಾಸಂವಾದ ಪರ್ವದಲ್ಲಿ ಇನ್ನೂರಾಇಪ್ಪತ್ನಾಲ್ಕನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀ-ಸತ್ಯಭಾಮಾಸಂವಾದ ಪರ್ವಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀ-ಸತ್ಯಭಾಮಾಸಂವಾದ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೮/೧೦೦, ಅಧ್ಯಾಯಗಳು-೫೨೧/೧೯೯೫, ಶ್ಲೋಕಗಳು-೧೭೫೧೨/೭೩೭೮೪

Related image

Comments are closed.