Aranyaka Parva: Chapter 15

ಆರಣ್ಯಕ ಪರ್ವ: ಕೈರಾತ ಪರ್ವ

೧೫

ಸೌಭವಧೋಽಪಾಖ್ಯಾನ

ಆ ಸಮಯದಲ್ಲಿ ಅವನು ಎಲ್ಲಿದ್ದ ಎನ್ನುವುದನ್ನು ಯುಧಿಷ್ಠಿರನು ಕೇಳಲು ಕೃಷ್ಣನು ಶಿಶುಪಾಲನ ವಧೆಯ ಸೇಡು ತೀರಿಸಿಕೊಳ್ಳಲು ತನ್ನ ದ್ವಾರಕೆಗೆ ಆಕ್ರಮಣ ಮಾಡಿದ ಸೌಭಪತಿ ಶಾಲ್ವನೊಂದಿಗೆ ಹೋರಾಡುತ್ತಿದ್ದನೆಂದು ಹೇಳುವುದು (೧-೨೨).

[1]03015001 ಯುಧಿಷ್ಠಿರ ಉವಾಚ|

03015001a ಅಸಾನ್ನಿಧ್ಯಂ ಕಥಂ ಕೃಷ್ಣ ತವಾಸೀದ್ವೃಷ್ಣಿನಂದನ|

03015001c ಕ್ವ ಚಾಸೀದ್ವಿಪ್ರವಾಸಸ್ತೇ ಕಿಂ ವಾಕಾರ್ಷೀಃ ಪ್ರವಾಸಕಃ||

ಯುಧಿಷ್ಠಿರನು ಹೇಳಿದನು: “ಕೃಷ್ಣ! ವೃಷ್ಣಿನಂದನ! ನಿನಗೆ ಏಕೆ ಅಲ್ಲಿ ಇರಲಿಕ್ಕಾಗಲಿಲ್ಲ? ನೀನು ಎಲ್ಲಿ ಪ್ರಯಾಣ ಮಾಡುತ್ತಿದ್ದೆ ಮತ್ತು ಏಕೆ ಅಲ್ಲಿಗೆ ಹೋಗಿದ್ದೆ?”

03015002 ಕೃಷ್ಣ ಉವಾಚ|

03015002a ಶಾಲ್ವಸ್ಯ ನಗರಂ ಸೌಭಂ ಗತೋಽಹಂ ಭರತರ್ಷಭ|

03015002c ವಿನಿಹಂತುಂ ನರಶ್ರೇಷ್ಠ ತತ್ರ ಮೇ ಶೃಣು ಕಾರಣಂ||

ಕೃಷ್ಣನು ಹೇಳಿದನು: “ಭರತರ್ಷಭ! ನಾನು ಶಾಲ್ವನ ನಗರ ಸೌಭವನ್ನು ನಾಶಗೊಳಿಸಲು ಹೋಗಿದ್ದೆ. ನರಶ್ರೇಷ್ಠ! ಅದರ ಕಾರಣವನ್ನು ನನ್ನಿಂದ ಕೇಳು.

03015003a ಮಹಾತೇಜಾ ಮಹಾಬಾಹುರ್ಯಃ ಸ ರಾಜಾ ಮಹಾಯಶಾಃ|

03015003c ದಮಘೋಷಾತ್ಮಜೋ ವೀರಃ ಶಿಶುಪಾಲೋ ಮಯಾ ಹತಃ||

03015004a ಯಜ್ಞೇ ತೇ ಭರತಶ್ರೇಷ್ಠ ರಾಜಸೂಯೇಽರ್ಹಣಾಂ ಪ್ರತಿ|

03015004c ಸ ರೋಷವಶಸಂಪ್ರಾಪ್ತೋ ನಾಮೃಷ್ಯತ ದುರಾತ್ಮವಾನ್||

ಭರತಶ್ರೇಷ್ಠ! ನಿನ್ನ ರಾಜಸೂಯ ಯಾಗದಲ್ಲಿ ನಾನು ಆ ವೀರ ದಮಘೋಷನ ಮಗ ಮಹಾತೇಜಸ್ವಿ ಮಹಾಬಾಹು ಮಹಾಯಶ ರಾಜ ದುರಾತ್ಮ ಶಿಶುಪಾಲನು ರೋಷವಶನಾಗಿ ನನಗೆ ಗೌರವ ಪೂಜೆಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ನಾನು ಅವನನ್ನು ಸಂಹರಿಸಿದೆ.

03015005a ಶ್ರುತ್ವಾ ತಂ ನಿಹತಂ ಶಾಲ್ವಸ್ತೀವ್ರರೋಷಸಮನ್ವಿತಃ|

03015005c ಉಪಾಯಾದ್ದ್ವಾರಕಾಂ ಶೂನ್ಯಾಮಿಹಸ್ಥೇ ಮಯಿ ಭಾರತ||

ಭಾರತ! ನನ್ನಿಂದ ಅವನು ಹತನಾದನೆಂದು ಕೇಳಿ ತೀವ್ರ ರೋಷಸಮನ್ವಿತನಾದ ಶಾಲ್ವನು, ನಾನು ನಿಮ್ಮೊಂದಿಗಿರುವಾಗ ನಾನಿಲ್ಲದ ದ್ವಾರಕೆಗೆ ಉಪಾಯದಿಂದ ಆಕ್ರಮಣ ಮಾಡಿದನು.

03015006a ಸ ತತ್ರ ಯೋಧಿತೋ ರಾಜನ್ಬಾಲಕೈರ್ವೃಷ್ಣಿಪುಂಗವೈಃ|

ರಾಜನ್! ಅಲ್ಲಿ ಬಾಲಕ ವೃಷ್ಣಿವೀರರು ಹೋರಾಡಿದರು.

03015006c ಆಗತಃ ಕಾಮಗಂ ಸೌಭಮಾರುಃಶೈವ ನೃಶಂಸಕೃತ್||

03015007a ತತೋ ವೃಷ್ಣಿಪ್ರವೀರಾಂಸ್ತಾನ್ಬಾಲಾನ್ ಹತ್ವಾ ಬಹೂಂಸ್ತದಾ|

03015007c ಪುರೋದ್ಯಾನಾನಿ ಸರ್ವಾಣಿ ಭೇದಯಾಮಾಸ ದುರ್ಮತಿಃ||

ಆ ಕ್ರೂರಿ ದುರ್ಮತಿಯು ಬೇಕಾದರಲ್ಲಿ ಹೋಗಬಲ್ಲ ಸೌಭವನ್ನೇರಿ ಬಂದು ಬಹಳಷ್ಟು ಬಾಲಕ ವೃಷ್ಣಿಪ್ರವೀರರನ್ನು ಸಂಹರಿಸಿ ಎಲ್ಲ ಪುರೋದ್ಯಾನಗಳನ್ನೂ ನಾಶಪಡಿಸಿದನು.

03015008a ಉಕ್ತವಾಂಶ್ಚ ಮಹಾಬಾಹೋ ಕ್ವಾಸೌ ವೃಷ್ಣಿಕುಲಾಧಮಃ|

03015008c ವಾಸುದೇವಃ ಸುಮಂದಾತ್ಮಾ ವಸುದೇವಸುತೋ ಗತಃ||

ಮಹಾಬಾಹೋ! ಅವನು “ವೃಷ್ಣಿಕುಲಾಧಮ ಮೂಢ ವಸುದೇವಸುತ ವಾಸುದೇವನು ಎಲ್ಲಿದ್ದಾನೆ?” ಎಂದು ಕೂಗಿದನು.

03015009a ತಸ್ಯ ಯುದ್ಧಾರ್ಥಿನೋ ದರ್ಪಂ ಯುದ್ಧೇ ನಾಶಯಿತಾಸ್ಮ್ಯಹಂ|

03015009c ಆನರ್ತಾಃ ಸತ್ಯಮಾಖ್ಯಾತ ತತ್ರ ಗಂತಾಸ್ಮಿ ಯತ್ರ ಸಃ||

“ಯುದ್ಧವನ್ನು ಬಯಸುವ ಅವನ ದರ್ಪವನ್ನು ನಾನು ಯುದ್ಧದಲ್ಲಿ ನಾಶಪಡಿಸುತ್ತೇನೆ. ಅನಾರ್ತರೇ! ಅವನೆಲ್ಲಿದ್ದಾನೆ ಹೇಳಿ! ಎಲ್ಲಿದ್ದರೂ ಅಲ್ಲಿಗೇ ಹೋಗುತ್ತೇನೆ.

03015010a ತಂ ಹತ್ವಾ ವಿನಿವರ್ತಿಷ್ಯೇ ಕಂಸಕೇಶಿನಿಷೂದನಂ|

03015010c ಅಹತ್ವಾ ನ ನಿವರ್ತಿಷ್ಯೇ ಸತ್ಯೇನಾಯುಧಮಾಲಭೇ||

ಕಂಸ-ಕೇಶಿನಿಯರನ್ನು ಕೊಂದ ಅವನನ್ನು ಸಂಹರಿಸಿಯೇ ಹಿಂದಿರುಗುತ್ತೇನೆ. ಅವನನ್ನು ಕೊಲ್ಲದೇ ನಾನು ಹಿಂದಿರುಗುವುದಿಲ್ಲ. ಇದು ನನ್ನ ಈ ಖಡ್ಗದ ಮೇಲಿನ ಆಣೆ!

03015011a ಕ್ವಾಸೌ ಕ್ವಾಸಾವಿತಿ ಪುನಸ್ತತ್ರ ತತ್ರ ವಿಧಾವತಿ|

03015011c ಮಯಾ ಕಿಲ ರಣೇ ಯುದ್ಧಂ ಕಾಂಕ್ಷಮಾಣಃ ಸ ಸೌಭರಾಟ್||

ಎಲ್ಲಿದ್ದಾನೆ? ಎಲ್ಲಿದ್ದಾನೆ?” ಎಂದು ಪುನಃ ಪುನಃ ಕೂಗಿ ಕೇಳುತ್ತಾ ನನ್ನೊಡನೆ ರಣದಲ್ಲಿ ಯುದ್ಧಮಾಡ ಬಯಸಿದ ಆ ಸೌಭರಾಜನು ಒಂದೆಡೆಯಿಂದ ಇನ್ನೊಂದೆಡೆಗೆ ಹಾರಿಹೋಗುತ್ತಿದ್ದನು.

03015012a ಅದ್ಯ ತಂ ಪಾಪಕರ್ಮಾಣಂ ಕ್ಷುದ್ರಂ ವಿಶ್ವಾಸಘಾತಿನಂ|

03015012c ಶಿಶುಪಾಲವಧಾಮರ್ಷಾದ್ಗಮಯಿಷ್ಯೇ ಯಮಕ್ಷಯಂ||

“ಶಿಶುಪಾಲನನ್ನು ಸಂಹರಿಸಿದುದಕ್ಕಾಗಿ ಇಂದು ನಾನು ಆ ಪಾಪಕರ್ಮಿ, ಕ್ಷುದ್ರ, ವಿಶ್ವಾಸಘಾತಿಯನ್ನು ಸಿಟ್ಟಿನಿಂದ ಯಮಸದನಕ್ಕೆ ಕಳುಹಿಸುತ್ತೇನೆ!

03015013a ಮಮ ಪಾಪಸ್ವಭಾವೇನ ಭ್ರಾತಾ ಯೇನ ನಿಪಾತಿತಃ|

03015013c ಶಿಶುಪಾಲೋ ಮಹೀಪಾಲಸ್ತಂ ವಧಿಷ್ಯೇ ಮಹೀತಲೇ||

ನನ್ನ ಭ್ರಾತಾ ಮಹೀಪಾಲ ಶಿಶುಪಾಲನನ್ನು ಪಾಪಸ್ವಭಾವದಿಂದ ಕೆಳಗುರುಳಿಸಿದವನನ್ನು ವಧಿಸಿ ನೆಲಕ್ಕುರಿಳಿಸುತ್ತೇನೆ.

03015014a ಭ್ರಾತಾ ಬಾಲಶ್ಚ ರಾಜಾ ಚ ನ ಚ ಸಂಗ್ರಾಮಮೂರ್ಧನಿ|

03015014c ಪ್ರಮತ್ತಶ್ಚ ಹತೋ ವೀರಸ್ತಂ ಹನಿಷ್ಯೇ ಜನಾರ್ದನಂ||

ಆ ಭ್ರಾತ ಬಾಲಕ ರಾಜನು ಸಂಗ್ರಾಮದ ಮನಸ್ಸಿನಲ್ಲಿರದಿದ್ದಾಗ, ಬೇರೆಯ ವಿಷಯದ ಗುಂಗಿನಲ್ಲಿದ್ದಾಗ ಆ ವೀರನನ್ನು ಕೊಂದ ಜನಾರ್ದನನನ್ನು ಸಂಹರಿಸುತ್ತೇನೆ!”

03015015a ಏವಮಾದಿ ಮಹಾರಾಜ ವಿಲಪ್ಯ ದಿವಮಾಸ್ಥಿತಃ|

03015015c ಕಾಮಗೇನ ಸ ಸೌಭೇನ ಕ್ಷಿಪ್ತ್ವಾ ಮಾಂ ಕುರುನಂದನ||

ಮಹಾರಾಜ! ಕುರುನಂದನ! ಹೀಗೆ ಕೂಗಾಡಿ ನನ್ನನ್ನು ಬೈದು ಅವನು ಕಾಮಗ ಸೌಭದಲ್ಲಿ ಆಕಾಶವನ್ನೇರಿದನು.

03015016a ತಮಶ್ರೌಷಮಹಂ ಗತ್ವಾ ಯಥಾ ವೃತ್ತಃ ಸುದುರ್ಮತಿಃ|

03015016c ಮಯಿ ಕೌರವ್ಯ ದುಷ್ಟಾತ್ಮಾ ಮಾರ್ತ್ತಿಕಾವತಕೋ ನೃಪಃ||

ಕೌರವ್ಯ! ನಾನು ಹಿಂದಿರುಗಿ ಬಂದ ನಂತರ ಆ ಸುದುರ್ಮತಿ ದುಷ್ಟಾತ್ಮ ಮಾರ್ತ್ತಿಕಾವತಕ ನೃಪನು ನನ್ನ ವಿಷಯದಲ್ಲಿ ನಡೆದುಕೊಂಡ ಕುರಿತು ಕೇಳಿದೆನು.

03015017a ತತೋಽಹಮಪಿ ಕೌರವ್ಯ ರೋಷವ್ಯಾಕುಲಲೋಚನಃ|

03015017c ನಿಶ್ಚಿತ್ಯ ಮನಸಾ ರಾಜನ್ವಧಾಯಾಸ್ಯ ಮನೋ ದಧೇ||

03015018a ಆನರ್ತೇಷು ವಿಮರ್ದಂ ಚ ಕ್ಷೇಪಂ ಚಾತ್ಮನಿ ಕೌರವ|

03015018c ಪ್ರವೃದ್ಧಮವಲೇಪಂ ಚ ತಸ್ಯ ದುಷ್ಕೃತಕರ್ಮಣಃ||

ಕೌರವ್ಯ! ರಾಜನ್! ಅವನು ಆನರ್ತವನ್ನು ಧ್ವಂಸ ಮಾಡಿದುದನ್ನು, ನನ್ನ ಕುರಿತು ನಡೆದುಕೊಂಡಿದ್ದುದನ್ನು, ಮತ್ತು ಅವನ ದುಷ್ಕರ್ಮಗಳು ಹೆಚ್ಚಾಗುತ್ತಿರುವುದನ್ನು ಕೇಳಿದಾಗ ನನ್ನ ಕಣ್ಣುಗಳು ಕೆಂಪಾಗಿ ರೋಷಗೊಂಡು ಮನಸ್ಸಿನಲ್ಲಿಯೇ ಅವನನ್ನು ವಧಿಸುವ ನಿಶ್ಚಯ ಮಾಡಿದೆ. 

03015019a ತತಃ ಸೌಭವಧಾಯಾಹಂ ಪ್ರತಸ್ಥೇ ಪೃಥಿವೀಪತೇ|

03015019c ಸ ಮಯಾ ಸಾಗರಾವರ್ತೇ ದೃಷ್ಟ ಆಸೀತ್ಪರೀಪ್ಸತಾ||

ಪೃಥಿವೀಪತೇ! ಆಗ ಸೌಭನನ್ನು ಸಂಹರಿಸಲು ಹೊರಟೆ ಮತ್ತು ಅವನನ್ನು ಹುಡುಕುತ್ತಿರಲು ನನಗೆ ಅವನು ಸಾಗರದ ತೀರದಲ್ಲಿ ಇದ್ದುದನ್ನು ನೋಡಿದೆನು.

03015020a ತತಃ ಪ್ರಧ್ಮಾಪ್ಯ ಜಲಜಂ ಪಾಂಚಜನ್ಯಮಹಂ ನೃಪ|

03015020c ಆಹೂಯ ಶಾಲ್ವಂ ಸಮರೇ ಯುದ್ಧಾಯ ಸಮವಸ್ಥಿತಃ||

ನೃಪ ! ಆಗ ನಾನು ಸಾಗರದಿಂದ ಹುಟ್ಟಿದ ಪಾಂಚಜನ್ಯವನ್ನು ಊದಿ ಶಾಲ್ವನನ್ನು ಸಮರಕ್ಕೆ ಆಹ್ವಾನಿಸಿದೆ.

03015021a ಸುಮುಹೂರ್ತಮಭೂದ್ಯುದ್ಧಂ ತತ್ರ ಮೇ ದಾನವೈಃ ಸಹ|

03015021c ವಶೀಭೂತಾಶ್ಚ ಮೇ ಸರ್ವೇ ಭೂತಲೇ ಚ ನಿಪಾತಿತಾಃ||

ಅಲ್ಲಿ ನಾನು ಮತ್ತು ದಾನವರೊಡನೆ ತುಂಬಾ ಸಮಯದ ವರೆಗೆ ನಡೆದ ಯುದ್ಧದಲ್ಲಿ ಅವರೆಲ್ಲರನ್ನೂ ಗೆದ್ದು ಭೂಮಿಗುರುಳಿಸಿದೆನು.

03015022a ಏತತ್ಕಾರ್ಯಂ ಮಹಾಬಾಹೋ ಯೇನಾಹಂ ನಾಗಮಂ ತದಾ|

03015022c ಶ್ರುತ್ವೈವ ಹಾಸ್ತಿನಪುರಂ ದ್ಯೂತಂ ಚಾವಿನಯೋತ್ಥಿತಂ||

ಮಹಾಬಾಹೋ! ಇದೇ ಕೆಲಸವು ನನ್ನನ್ನು ಹಸ್ತಿನಾಪುರದಲ್ಲಿ ನಡೆದ ಅವಿನಯದ ದ್ಯೂತದ ಕುರಿತು ಕೇಳಿದ ಕೂಡಲೇ ನನಗೆ ಬರಲಿಕ್ಕಾಗದ ಹಾಗೆ ತಡೆಯಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಸೌಭವಧೋಪಾಖ್ಯಾನೇ ಪಂಚದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಸೌಭವಧೋಪಾಖ್ಯಾನದಲ್ಲಿ ಹದಿನೈದನೆಯ ಅಧ್ಯಾಯವು.

Related image

[1]ಶ್ರೀಮದ್ಭಾಗವತ ಮಹಾಪುರಾಣದ ದಶಮ ಸ್ಕಂಧದ ಉತ್ತರಾರ್ಧದ ೭೬ನೆ ಮತ್ತು ೭೭ ಅಧ್ಯಾಯಗಳಲ್ಲಿ ಶಾಲ್ವನೊಡನೆ ಯಾದವರ ಯುದ್ಧ ಮತ್ತು ಶಾಲ್ವನ ಸಂಹಾರದ ಕುರಿತಿದೆ. ಇದನ್ನು ಪರಿಶಿಷ್ಠದಲ್ಲಿ ನೀಡಲಾಗಿದೆ.

Comments are closed.