Shanti Parva: Chapter 183

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೮೩

ಸತ್ಯದ ಮಹಿಮೆ, ಅಸತ್ಯದ ದೋಷ ಮತ್ತು ಇಹಲೋಕ-ಪರಲೋಕಗಳ ಸುಖ-ದುಃಖಗಳ ವಿವೇಚನೆ (೧-೧೬).

12183001 ಭೃಗುರುವಾಚ|

12183001a ಸತ್ಯಬ್ರಹ್ಮ ತಪಃ ಸತ್ಯಂ ಸತ್ಯಂ ಸೃಜತಿ ಚ ಪ್ರಜಾಃ|

12183001c ಸತ್ಯೇನ ಧಾರ್ಯತೇ ಲೋಕಃ ಸ್ವರ್ಗಂ ಸತ್ಯೇನ ಗಚ್ಚತಿ||

ಭೃಗುವು ಹೇಳಿದನು: “ಸತ್ಯವೇ ಬ್ರಹ್ಮ. ಸತ್ಯವೇ ತಪಸ್ಸು. ಸತ್ಯವೇ ಪ್ರಜೆಗಳನ್ನು ಸೃಷ್ಟಿಸುತ್ತದೆ. ಸತ್ಯವೇ ಲೋಕವನ್ನು ಧರಿಸಿದೆ ಮತ್ತು ಸತ್ಯದಿಂದಲೇ ಮನುಷ್ಯನು ಸ್ವರ್ಗಕ್ಕೆ ಹೋಗುತ್ತಾನೆ.

12183002a ಅನೃತಂ ತಮಸೋ ರೂಪಂ ತಮಸಾ ನೀಯತೇ ಹ್ಯಧಃ|

12183002c ತಮೋಗ್ರಸ್ತಾ ನ ಪಶ್ಯಂತಿ ಪ್ರಕಾಶಂ ತಮಸಾವೃತಮ್||

ಅಸತ್ಯವು ಅಂಧಕಾರ ರೂಪವು. ತಮಸ್ಸು ಮನುಷ್ಯನನ್ನು ಕೆಳಗೆ ಎಳೆದುಕೊಂಡು ಹೋಗುತ್ತದೆ. ಅಜ್ಞಾನವೆಂಬ ಅಂಧಕಾರದಿಂದ ಆವೃತನಾದವನು ಬೆಳಕನ್ನು ಕಾಣುವುದಿಲ್ಲ.

12183003a ಸ್ವರ್ಗಃ ಪ್ರಕಾಶ ಇತ್ಯಾಹುರ್ನರಕಂ ತಮ ಏವ ಚ|

12183003c ಸತ್ಯಾನೃತಾತ್ತದುಭಯಂ ಪ್ರಾಪ್ಯತೇ ಜಗತೀಚರೈಃ||

ಸ್ವರ್ಗವನ್ನು ಪ್ರಕಾಶವೆಂದೂ ನರಕವನ್ನು ಅಂಧಕಾರವೆಂದೂ ಹೇಳುತ್ತಾರೆ. ಸತ್ಯ ಮತ್ತು ಅಸತ್ಯ ಇವೆರಡನ್ನೂ ಹೊಂದಿರುವ ಮನುಷ್ಯಯೋನಿಯು ಜ್ಞಾನ ಮತ್ತು ಅಜ್ಞಾನ ಇವೆರಡರ ಸಮ್ಮಿಶ್ರಣದಿಂದ ಜಗತ್ತಿನ ಜೀವಗಳಿಗೆ ದೊರೆಯುತ್ತದೆ.

12183004a ತತ್ರ ತ್ವೇವಂವಿಧಾ ವೃತ್ತಿರ್ಲೋಕೇ ಸತ್ಯಾನೃತಾ ಭವೇತ್|

12183004c ಧರ್ಮಾಧರ್ಮೌ ಪ್ರಕಾಶಶ್ಚ ತಮೋ ದುಃಖಂ ಸುಖಂ ತಥಾ||

ಈ ವಿಧದಲ್ಲಿ ಸತ್ಯ ಮತ್ತು ಅಸತ್ಯಗಳು ಲೋಕದ ವೃತ್ತಿಯೆಂದು ತಿಳಿಯಬೇಕು. ಅವೇ ಧರ್ಮ-ಅಧರ್ಮಗಳು, ಪ್ರಕಾಶ-ಅಂಧಕಾರಗಳು ಮತ್ತು ಸುಖ-ದುಃಖಗಳು.

12183005A ತತ್ರ ಯತ್ಸತ್ಯಂ ಸ ಧರ್ಮೋ ಯೋ ಧರ್ಮಃ ಸ ಪ್ರಕಾಶೋ

         ಯಃ ಪ್ರಕಾಶಸ್ತತ್ಸುಖಮಿತಿ|

12183005B ತತ್ರ ಯದನೃತಂ ಸೋಽಧರ್ಮೋ ಯೋಽಧರ್ಮಸ್ತತ್ತಮೋ

ಯತ್ತಮಸ್ತದ್ದುಃಖಮಿತಿ||

ಎಲ್ಲಿ ಸತ್ಯವಿದೆಯೋ ಅದೇ ಧರ್ಮ. ಎಲ್ಲಿ ಧರ್ಮವಿದೆಯೋ ಅದೇ ಪ್ರಕಾಶ. ಪ್ರಕಾಶವೇ ಸುಖ. ಇದೇ ರೀತಿ ಎಲ್ಲಿ ಅನೃತವಿದೆಯೋ ಅದು ಅಧರ್ಮ. ಯಾವುದು ಅಧರ್ಮವೋ ಅದು ಅಂಧಕಾರ. ಮತ್ತು ಅಂಧಕಾರವೇ ದುಃಖ.

12183006A ಅತ್ರೋಚ್ಯತೇ|

12183006a ಶಾರೀರೈರ್ಮಾನಸೈರ್ದುಃಖೈಃ ಸುಖೈಶ್ಚಾಪ್ಯಸುಖೋದಯೈಃ|

12183006c ಲೋಕಸೃಷ್ಟಿಂ ಪ್ರಪಶ್ಯಂತೋ ನ ಮುಹ್ಯಂತಿ ವಿಚಕ್ಷಣಾಃ||

ಈ ವಿಷಯದಲ್ಲಿ ಹೀಗೆ ಹೇಳುತ್ತಾರೆ: ಶಾರೀರಿಕ ಮತ್ತು ಮಾನಸಿಕ ದುಃಖಗಳಿಂದ ಕೂಡಿರುವ, ಸುಖಕರವಾಗಿ ಕಂಡರೂ ಕೊನೆಯಲ್ಲಿ ದುಃಖವನ್ನೇ ಉಂಟುಮಾಡುವ ಈ ಲೋಕಸೃಷ್ಟಿಯನ್ನು ವೀಕ್ಷಿಸುತ್ತಿರುವ ವಿದ್ವಾಂಸರು ಪ್ರಾಪಂಚಿಕ ವಿಷಯಗಳಲ್ಲಿ ಮೋಹಗೊಳ್ಳುವುದಿಲ್ಲ.

12183007a ತತ್ರ ದುಃಖವಿಮೋಕ್ಷಾರ್ಥಂ ಪ್ರಯತೇತ ವಿಚಕ್ಷಣಃ|

12183007c ಸುಖಂ ಹ್ಯನಿತ್ಯಂ ಭೂತಾನಾಮಿಹ ಲೋಕೇ ಪರತ್ರ ಚ||

ಆದುದರಿಂದ ವಿಚಕ್ಷಣರು ದುಃಖವಿಮೋಚನೆಗಾಗಿ ಸದಾ ಪ್ರಯತ್ನಿಸುತ್ತಿರಬೇಕು. ಆದರೆ ಇಹಲೋಕ ಮತ್ತು ಪರಲೋಕಗಳೆರಡರಲ್ಲಿಯೂ ಪ್ರಾಣಿಗಳಿಗೆ ಸಿಗುವ ಸುಖವು ಅನಿತ್ಯವಾದುದು.

12183008a ರಾಹುಗ್ರಸ್ತಸ್ಯ ಸೋಮಸ್ಯ ಯಥಾ ಜ್ಯೋತ್ಸ್ನಾ ನ ಭಾಸತೇ|

12183008c ತಥಾ ತಮೋಭಿಭೂತಾನಾಂ ಭೂತಾನಾಂ ಭ್ರಶ್ಯತೇ ಸುಖಮ್||

ರಾಹುಗ್ರಸ್ತನಾದ ಚಂದ್ರನ ಬೆಳದಿಂಗಳು ಹೇಗೆ ಪ್ರಕಾಶಿಸುವುದಿಲ್ಲವೋ ಹಾಗೆ ತಮಸ್ಸಿನಿಂದ ಆವರಿಸಲ್ಪಟ್ಟ ಪ್ರಾಣಿಗಳ ಸುಖವೂ ನಶಿಸಿಹೋಗುತ್ತದೆ.

12183009A ತತ್ಖಲು ದ್ವಿವಿಧಂ ಸುಖಮುಚ್ಯತೇ ಶಾರೀರಂ ಮಾನಸಂ ಚ|

12183009B ಇಹ ಖಲ್ವಮುಷ್ಮಿಂಶ್ಚ ಲೋಕೇ ಸರ್ವಾರಂಭಪ್ರವೃತ್ತಯಃ[1]

         ಸುಖಾರ್ಥಾ ಅಭಿಧೀಯಂತೇ||

12183009C ನ ಹ್ಯತಸ್ತ್ರಿವರ್ಗಫಲಂ ವಿಶಿಷ್ಟತರಮಸ್ತಿ|

12183009D ಸ ಏಷ ಕಾಮ್ಯೋ ಗುಣವಿಶೇಷೋ

         ಧರ್ಮಾರ್ಥಯೋರಾರಂಭಸ್ತದ್ಧೇತುರಸ್ಯೋತ್ಪತ್ತಿಃ

ಸುಖಪ್ರಯೋಜನಾ[2]||

ಸುಖವು ಎರಡು ಪ್ರಕಾರದವುಗಳೆಂದು ಹೇಳಿದ್ದಾರೆ: ಶಾರೀರಕ ಮತ್ತು ಮಾನಸಿಕ. ಈ ಲೋಕದಲ್ಲಿ ಸರ್ವಾರಂಭ ಪ್ರವೃತ್ತಿಗಳೂ ಸುಖಕ್ಕಾಗಿಯೇ ಎಂದು ಹೇಳುತ್ತಾರೆ. ಈ ಸುಖವಲ್ಲದೇ ಧರ್ಮ-ಅರ್ಥ-ಕಾಮವೆಂಬ ತ್ರಿವರ್ಗಕ್ಕೆ ವಿಶೇಷವಾದ ಬೇರೆ ಯಾವ ಫಲವೂ ಇಲ್ಲ. ಇದೇ ಪ್ರಾಣಿಗಳ ಕಾಮ್ಯ ಗುಣವಿಶೇಷವು. ಧರ್ಮ-ಅರ್ಥಗಳು ಯಾವುದರ ಅಂಗವೋ ಆ ಸುಖಕ್ಕಾಗಿಯೇ ಕರ್ಮಗಳನ್ನು ಪ್ರಾರಂಭಿಸುತ್ತೇವೆ. ಏಕೆಂದರೆ ಸುಖವನ್ನುಂಟುಮಾಡುವುದೇ ಉದ್ಯಮೆಗಳ ಉದ್ದೇಶ. ಆದುದರಿಂದ ಸುಖದ ಉದ್ದೇಶಕ್ಕಾಗಿಯೇ ಕರ್ಮಗಳನ್ನು ಆರಂಭಿಸುತ್ತೇವೆ.”

12183010 ಭರದ್ವಾಜ ಉವಾಚ|

12183010A ಯದೇತದ್ಭವತಾಭಿಹಿತಂ ಸುಖಾನಾಂ ಪರಮಾಃ ಸ್ತ್ರಿಯ ಇತಿ

ತನ್ನ ಗೃಹ್ಣೀಮಃ|

12183010B ನ ಹ್ಯೇಷಾಮೃಷೀಣಾಂ ಮಹತಿ ಸ್ಥಿತಾನಾಮಪ್ರಾಪ್ಯ ಏಷ

         ಗುಣವಿಶೇಷೋ ನ ಚೈನಮಭಿಲಷಂತಿ||

12183010C ಶ್ರೂಯತೇ ಚ ಭಗವಾಂಸ್ತ್ರಿಲೋಕಕೃದ್ಬ್ರಹ್ಮಾ

         ಪ್ರಭುರೇಕಾಕೀ ತಿಷ್ಠತಿ|

12183010D ಬ್ರಹ್ಮಚಾರೀ ನ ಕಾಮಸುಖೇಷ್ವಾತ್ಮಾನಮವದಧಾತಿ||

12183010E ಅಪಿ ಚ ಭಗವಾನ್ವಿಶ್ವೇಶ್ವರ ಉಮಾಪತಿಃ

         ಕಾಮಮಭಿವರ್ತಮಾನಮನಂಗತ್ವೇನ ಶಮಮನಯತ್|

12183010F ತಸ್ಮಾದ್ಬ್ರೂಮೋ ನ ಮಹಾತ್ಮಭಿರಯಂ ಪ್ರತಿಗೃಹೀತೋ ನ

         ತ್ವೇಷ ತಾವದ್ವಿಶಿಷ್ಟೋ ಗುಣ ಇತಿ ನೈತದ್ಭಗವತಃ       ಪ್ರತ್ಯೇಮಿ||

12183010G ಭಗವತಾ ತೂಕ್ತಂ ಸುಖಾನಾಂ ಪರಮಾಃ ಸ್ತ್ರಿಯ ಇತಿ|

12183010H ಲೋಕಪ್ರವಾದೋಽಪಿ ಚ ಭವತಿ ದ್ವಿವಿಧಃ ಫಲೋದಯಃ

         ಸುಕೃತಾತ್ಸುಖಮವಾಪ್ಯತೇ ದುಷ್ಕೃತಾದ್ದುಃಖಮಿತಿ||

12183010I ಅತ್ರೋಚ್ಯತಾಮ್|

ಭರದ್ವಾಜನು ಹೇಳಿದನು: “ಸುಖಕ್ಕೇ ಉಚ್ಛಸ್ಥಾನವಿದೆ ಮತ್ತು ಸುಖಕ್ಕಿಂತಲೂ ಹೆಚ್ಚಿನದಾದ ಫಲವು ತ್ರಿವರ್ಗಗಳಿಗಿಲ್ಲ ಎಂದು ನೀನು ಹೇಳಿದ ಈ ಮಾತು ನನಗೆ ಸರಿಯೆಂದು ತೋರುವುದಿಲ್ಲ. ಏಕೆಂದರೆ ಮಹಾ ತಪಸ್ಸಿನಲ್ಲಿ ನಿರತರಾಗಿರುವ ಋಷಿಗಳಿಗೆ ಈ ವಾಂಛನೀಯ ಗುಣವಿಶೇಷ ಸುಖವು ಪ್ರಾಪ್ತವಾದರೂ ಅವರು ಅದನ್ನು ಬಯಸುವುದಿಲ್ಲ. ಮೂರೂಲೋಕಗಳ ಸೃಷ್ಟಿಕರ್ತಾ ಭಗವಾನ್ ಬ್ರಹ್ಮನು ಒಬ್ಬಂಟಿಗನಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ ಮತ್ತು ಕಾಮಸುಖದಲ್ಲಿ ಎಂದೂ ಮನಸ್ಸನ್ನು ತೊಡಗಿಸಿಕೊಳ್ಳುವುದಿಲ್ಲ ಎಂದು ಕೇಳಿದ್ದೇವೆ. ಭಗವತೀ ಉಮೆಯ ಪ್ರಾಣವಲ್ಲಭ ಭಗವಾನ್ ವಿಶ್ವೇಶ್ವರನೂ ಕೂಡ ತನ್ನ ಎದಿರು ಬಂದ ಕಾಮನನ್ನು ಸುಟ್ಟು ಶಾಂತಗೊಳಿಸಿ ಅವನನ್ನು ಅನಂಗನನ್ನಾಗಿಸಿದನು. ಆದುದರಿಂದ ಮಹಾತ್ಮಪುರುಷರು ಇದನ್ನು ಎಂದೂ ಸ್ವೀಕರಿಸುವುದಿಲ್ಲ ಎಂದು ನನ್ನ ಮತ. ಅವರಿಗೆ ಈ ಕಾಮ ಸುಖವು ಎಲ್ಲಕ್ಕಿಂತಲೂ ಹೆಚ್ಚಿನ ಸುಖವಿಶೇಷವಲ್ಲ. ಆದರೆ ನಿನ್ನ ಮಾತಿನಿಂದ ನನಗೆ ಇದೇ ಪ್ರತೀತವಾಗುತ್ತದೆ. ನೀನಾದರೋ ಈ ಸುಖಕ್ಕಿಂತಲೂ ದೊಡ್ಡದಾದ ಬೇರೆ ಯಾವ ಫಲವೂ ಇಲ್ಲವೆಂದು ಹೇಳಿದ್ದೀಯೆ. ಪುಣ್ಯಕರ್ಮದಿಂದ ಸುಖವುಂಟಾಗುತ್ತದೆ ಮತ್ತು ಪಾಪಕರ್ಮದಿಂದ ದುಃಖವುಂಟಾಗುತ್ತದೆ.”

12183011 ಭೃಗುರುವಾಚ|

12183011A ಅನೃತಾತ್ಖಲು ತಮಃ ಪ್ರಾದುರ್ಭೂತಂ ತಮೋಗ್ರಸ್ತಾ

         ಅಧರ್ಮಮೇವಾನುವರ್ತಂತೇ ನ ಧರ್ಮಮ್|

12183011B ಕ್ರೋಧಲೋಭಮೋಹಮಾನಾನೃತಾದಿಭಿರವಚ್ಚನ್ನಾ ನ

         ಖಲ್ವಸ್ಮಿಽಲ್ಲೋಕೇ ನ ಚಾಮುತ್ರ ಸುಖಮಾಪ್ನುವಂತಿ||

12183011C ವಿವಿಧವ್ಯಾಧಿಗಣೋಪತಾಪೈರವಕೀರ್ಯಂತೇ|

12183011D ವಧಬಂಧರೋಗಪರಿಕ್ಲೇಶಾದಿಭಿಶ್ಚ

         ಕ್ಷುತ್ಪಿಪಾಸಾಶ್ರಮಕೃತೈರುಪತಾಪೈರುಪತಪ್ಯಂತೇ||

12183011E ಚಂಡವಾತಾತ್ಯುಷ್ಣಾತಿಶೀತಕೃತೈಶ್ಚ ಪ್ರತಿಭಯೈಃ

         ಶಾರೀರೈರ್ದುಃಖೈರುಪತಪ್ಯಂತೇ|

12183011F ಬಂಧುಧನವಿನಾಶವಿಪ್ರಯೋಗಕೃತೈಶ್ಚ ಮಾನಸೈಃ

         ಶೋಕೈರಭಿಭೂಯಂತೇ ಜರಾಮೃತ್ಯುಕೃತೈಶ್ಚಾನ್ಯೈರಿತಿ||

ಭೃಗುವು ಹೇಳಿದನು: “ಅಸತ್ಯದಿಂದ ಅಜ್ಞಾನದ ಉತ್ಪತ್ತಿಯಾಗಿದೆ. ಆದುದರಿಂದ ತಮೋಗ್ರಸ್ತ ಮನುಷ್ಯನು ಅಧರ್ಮವನ್ನೇ ಅನುಸರಿಸುತ್ತಾನೆ. ಧರ್ಮವನ್ನು ಅನುಸರಿಸುವುದಿಲ್ಲ. ಕ್ರೋಧ, ಲೋಭ, ಹಿಂಸೆ ಮತ್ತು ಅಸತ್ಯ ಮೊದಲಾದವುಗಳಿಂದ ಆಚ್ಛಾದಿತರಾದವರು ಈ ಲೋಕದಲ್ಲಿಯೂ ಸುಖಿಯಾಗಿರುವುದಿಲ್ಲ ಮತ್ತು ಪರಲೋಕಲ್ಲಿಯೂ ಸುಖಿಯಾಗಿರುವುದಿಲ್ಲ. ಅವರು ನಾನಾ ವಿಧದ ರೋಗ, ವ್ಯಾಧಿ ಮತ್ತು ತಾಪಗಳಿಂದ ಸಂತಪ್ತರಾಗುತ್ತಿರುತ್ತಾರೆ. ವಧೆ-ಬಂಧನ ಮೊದಲಾದ ಕ್ಲೇಶಗಳಿಂದ ಹಾಗೂ ಹಸಿವು-ಬಾಯಾರಿಕೆ-ಆಯಾಸಗಳ ಸಂತಾಪದಿಂದಲೂ ಪೀಡಿತರಾಗುತ್ತಿರುತ್ತಾರೆ. ಇಷ್ಟೇ ಅಲ್ಲದೇ ಅವರಿಗೆ ಭಿರುಗಾಳಿ, ಪ್ರವಾಹ, ಅತಿಯಾದ ಬೇಸಗೆ ಮತ್ತು ಅತಿಯಾದ ಛಳಿಗಳಿಂದ ಉಂಟಾಗುವ ಭಯಂಕರ ಶಾರೀರಿಕ ಕಷ್ಟವನ್ನೂ ಸಹಿಸಬೇಕಾಗುತ್ತದೆ. ಬಂಧು-ಬಾಂಧವರ ಮೃತ್ಯು, ಧನನಾಶ, ಮತ್ತು ಪ್ರೇಮಿಗಳ ವಿಯೋಗಗಳಿಂದ ಆಗುವ ಮಾನಸಿಕ ಶೋಕಗಳನ್ನೂ ಸಹಿಸಬೇಕಾಗುತ್ತದೆ. ವೃದ್ಧಾಪ್ಯ ಮತ್ತು ಮೃತ್ಯುಗಳಿಂದಾಗುವ ಇನ್ನೂ ಅನೇಕ ಕ್ಲೇಶಗಳನ್ನೂ ಅವರಿಗೆ ಅನುಭವಿಸಬೇಕಾಗುತ್ತದೆ.

12183012A ಯಸ್ತ್ವೇತೈಃ ಶಾರೀರೈರ್ಮಾನಸೈರ್ದುಃಖೈರ್ನ ಸ್ಪೃಶ್ಯತೇ ಸ

         ಸುಖಂ ವೇದ|

12183012B ನ ಚೈತೇ ದೋಷಾಃ ಸ್ವರ್ಗೇ ಪ್ರಾದುರ್ಭವಂತಿ|

12183012C ತತ್ರ ಭವತಿ ಖಲು||

ಈ ರೀತಿಯ ಶಾರೀರಿಕ ಮತ್ತು ಮಾನಸಿಕ ದುಃಖರಹಿತರಾಗಿರುವವರಿಗೇ ಸುಖದ ಅನುಭವವಾಗುತ್ತದೆ. ಸ್ವರ್ಗಲೋಕದಲ್ಲಿ ಇಂತಹ ದುಃಖರೂಪ ದೋಷಗಳು ಉಂಟಾಗುವುದಿಲ್ಲ. ಅಲ್ಲಿ ಈಗ ಹೇಳುವ ವಿಷಯಗಳು ಆಗುತ್ತವೆ.

12183013a ಸುಸುಖಃ ಪವನಃ ಸ್ವರ್ಗೇ ಗಂಧಶ್ಚ ಸುರಭಿಸ್ತಥಾ|

12183013c ಕ್ಷುತ್ಪಿಪಾಸಾಶ್ರಮೋ ನಾಸ್ತಿ ನ ಜರಾ ನ ಚ ಪಾಪಕಮ್||

ಸ್ವರ್ಗದಲ್ಲಿ ಸುಖಕರವಾದ ಗಾಳಿಯು ಬೀಸುತ್ತದೆ. ಮನೋಹರ ಸುಗಂಧವೂ ಪಸರಿಸಿರುತ್ತದೆ. ಹಸಿವು, ಬಾಯಾರಿಕೆ, ಆಯಾಸ, ವೃದ್ಧಾಪ್ಯ ಮತ್ತು ಪಾಪದ ಫಲಗಳ ಕಷ್ಟವನ್ನು ಅಲ್ಲಿ ಎಂದೂ ಭೋಗಿಸಬೇಕಾಗುವುದಿಲ್ಲ.

12183014a ನಿತ್ಯಮೇವ ಸುಖಂ ಸ್ವರ್ಗೇ ಸುಖಂ ದುಃಖಮಿಹೋಭಯಮ್|

12183014c ನರಕೇ ದುಃಖಮೇವಾಹುಃ ಸಮಂ ತು ಪರಮಂ ಪದಮ್||

ಸ್ವರ್ಗದಲ್ಲಿ ಸದಾ ಸುಖವೇ ಆಗುತ್ತದೆ. ಈ ಮರ್ತ್ಯಲೋಕದಲ್ಲಿ ಸುಖ-ದುಃಖ ಎರಡೂ ಆಗುತ್ತಿರುತ್ತದೆ. ನರಕದಲ್ಲಿ ಕೇವಲ ದುಃಖವೆಂದು ಹೇಳಿದ್ದರೆ. ವಾಸ್ತವದಲ್ಲಿ ಸುಖವಾದರೋ ಪರಮಪದಸ್ವರೂಪ ಪರಬ್ರಹ್ಮ ಪರಮಾತ್ಮನೇ.

12183015a ಪೃಥಿವೀ ಸರ್ವಭೂತಾನಾಂ ಜನಿತ್ರೀ ತದ್ವಿಧಾಃ ಸ್ತ್ರಿಯಃ|

12183015c ಪುಮಾನ್ ಪ್ರಜಾಪತಿಸ್ತತ್ರ ಶುಕ್ರಂ ತೇಜೋಮಯಂ ವಿದುಃ||

ಪೃಥ್ವಿಯು ಸರ್ವಭೂತಗಳ ಜನಿನಿಯು. ಸಂಸಾರದ ಸ್ತ್ರೀಯರೂ ಕೂಡ ಪೃಥ್ವಿಯಂತೆ ಸಂತಾನಗಳ ಜನನಿಯರು. ಪುರುಷನೇ ಅಲ್ಲಿ ಪ್ರಜಾಪತಿ ಸಮಾನನು. ಪುರುಷನ ವೀರ್ಯವು ತೇಜಃಸ್ವರೂಪವೆಂದು ತಿಳಿಯಬೇಕು.

12183016a ಇತ್ಯೇತಲ್ಲೋಕನಿರ್ಮಾಣಂ ಬ್ರಹ್ಮಣಾ ವಿಹಿತಂ ಪುರಾ|

12183016c ಪ್ರಜಾ ವಿಪರಿವರ್ತಂತೇ ಸ್ವೈಃ ಸ್ವೈಃ ಕರ್ಮಭಿರಾವೃತಾಃ||

ಪೂರ್ವಕಾಲದಲ್ಲಿ ಬ್ರಹ್ಮನೇ ಈ ಸ್ತ್ರೀ-ಪುರುಷಸ್ವರೂಪ ಜಗತ್ತನ್ನು ಸೃಷ್ಟಿಸಿದನು. ಇಲ್ಲಿ ಸಮಸ್ತ ಪ್ರಜೆಗಳೂ ತಮ್ಮ ತಮ್ಮ ಕಾಮಗಳಿಂದ ಆವೃತಗೊಂಡು ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತವೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ತ್ರ್ಯಾಶೀತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಂಭತ್ಮೂರನೇ ಅಧ್ಯಾಯವು.

[1] ವಸ್ತುಪ್ರವೃತ್ತಯಃ (ಗೀತಾ ಪ್ರೆಸ್).

[2] ಸುಖಪ್ರಯೋಜನಾರ್ಥಂ ಆರಂಭಃ|| (ಗೀತಾ ಪ್ರೆಸ್).

Comments are closed.