Harivamsha: Chapter 36

ಹರಿವಂಶ: ಹರಿವಂಶ ಪರ್ವ

36

ಕ್ರೋಷ್ಟುವಂಶವರ್ಣನಮ್

 ವೈಶಂಪಾಯನ ಉವಾಚ

ಕ್ರೋಷ್ಟೋರೇವಾಭವತ್ಪುತ್ರೋ ವೃಜಿನೀವಾನ್ಮಹಾಯಶಾಃ |

ವೃಜಿನೀವತ್ಸುತಶ್ಚಾಪಿ ಸ್ವಾಹಿಃ ಸ್ವಾಹಾಕೃತಂ ವರಃ || ೧-೩೬-೧

ವೈಶಂಪಾಯನನು ಹೇಳಿದನು: “ಕ್ರೋಷ್ಟುವಿಗೆ ವೃಜಿನೀವಾನ್ ಎಂಬ ಮಹಾಯಶಸ್ವೀ ಪುತ್ರನಾದನು. ವೃಜಿನೀವಾನನನಿಗೆ ಸ್ವಾಹಿ ಎಂಬ ಯಜ್ಞಗಳಲ್ಲಿ ಸ್ವಾಹಾಗಳನ್ನು ಮಾಡುವವರಲ್ಲಿ ಶ್ರೇಷ್ಠನು ಮಗನಾದನು.

ಸ್ವಾಹಿಪುತ್ರೋಽಭವದ್ರಾಜಾ ರುಷದ್ಗುರ್ವದತಾಂ ವರಃ |

ಮಹಾಕ್ರತುಭಿರೀಜೇ ಯೋ ವಿವಿಧೈರ್ಭೂರಿದಕ್ಷಿಣೈಃ || ೧-೩೬-೨

ಮಾತನಾಡುವವರಲ್ಲಿ ಶ್ರೇಷ್ಠ ರಾಜಾ ರುಷದ್ಗುವು ಸ್ವಾಹಿಯ ಪುತ್ರನಾದನು. ಅವನು ವಿವಿಧ ಭೂರಿದಕ್ಷಿಣೆಗಳಿಂದ ಮಹಾಕ್ರತುಗಳನ್ನು ಯಜಿಸಿದನು.

ಸುತಪ್ರಸೂತಿಮನ್ವಿಚ್ಛನ್ರುಷದ್ಗುಃ ಸೋಽಗ್ರ್ಯಮಾತ್ಮಜಮ್ |

ಜಜ್ಞೇ ಚಿತ್ರರಥಸ್ತಸ್ಯ ಪುತ್ರಃ ಕರ್ಮಭಿರನ್ವಿತಃ || ೧-೩೬-೩

ಪುತ್ರಪೌತ್ರರನ್ನು ಹೊಂದುವ ಮಗನನ್ನು ಬಯಸಿ ಋಷದ್ಗುವು ಯಜ್ಞಗಳನ್ನು ನಡೆಸಲು ಅವನಿಗೆ ಚಿತ್ರರಥನೆಂಬ ಪುತ್ರನಾದನು.

ಆಸೀಚ್ಚೈತ್ರರಥಿರ್ವೀರೋ ಯಜ್ವಾ ವಿಪುಲದಕ್ಷಿಣಃ |

ಶಶಬಿಂದುಃ ಪರಂ ವೃತ್ತಂ ರಾಜರ್ಷೀಣಾಮನುಷ್ಠಿತಃ || ೧-೩೬-೪

ಚಿತ್ರರಥನ ಮಗ ವೀರ ಶಶಬಿಂದುವು ವಿಪುಲದಕ್ಷಿಣಾಯುಕ್ತ ಯಜ್ಞಗಳನ್ನು ಮಾಡಿ ರಾಜರ್ಷಿಗಳ ಪರಮ ವೃತಿಯಲ್ಲಿ ನೆಲೆಸಿದ್ದನು.

ಪೃಥುಶ್ರವಾಃ ಪೃಥುಯಶಾ ರಾಜಾಽಽಸೀಚ್ಛಶಬಿಂದುಜಃ |

ಶಂಸಂತಿ ಚ ಪುರಾಣಜ್ಞಾಃ ಪಾರ್ಥಶ್ರವಸಮುತ್ತರಮ್ || ೧-೩೬-೫

ಶಶಬಿಂದುವಿನ ಮಗನು ರಾಜಾ ಪೃಥುಯಶ ಪೃಥುಶ್ರವನಾದನು. ಪುರಾಣಜ್ಞರು ಪೃಥುಶ್ರವನ ಮಗನು ಉತ್ತರನೆಂದು ಹೇಳುತ್ತಾರೆ.

ಅನಂತರಂ ಸುಯಜ್ಞಸ್ತು ಸುಯಜ್ಞತನಯೋಽಭವತ್ |

ಉಶತೋ ಯಜ್ಞಮಖಿಲಂ ಸ್ವಧರ್ಮಮುಶತಾಂ ವರಃ || ೧-೩೬-೬

ಉತ್ತರನ ಮಗನು ಸುಯಜ್ಞ ಮತ್ತು ಉಶತನು ಸುಯಜ್ಞನ ತನಯನಾದನು. ಸ್ವಧರ್ಮಿಗಳಲ್ಲಿ ಶ್ರೇಷ್ಠನಾದ ಉಶತನು ಅಖಿಲ ಯಜ್ಞಗಳಲ್ಲಿ ನಿರತನಾಗಿದ್ದನು.

ಶಿನೇಯುರಭವತ್ಸೂನುರುಶತಃ ಶತ್ರುತಾಪನಃ |

ಮರುತ್ತಸ್ತಸ್ಯ ತನಯೋ ರಾಜರ್ಷಿರಭವನ್ನೃಪ || ೧-೩೬-೭

ಉಶತನ ಮಗನು ಶತ್ರುತಾಪನ ಶಿನೇಯು. ನೃಪ! ಅವನ ತನಯನು ರಾಜರ್ಷಿ ಮರುತ್ತನು.

ಮರುತ್ತೋಽಲಭತ ಜ್ಯೇಷ್ಠಂ ಸುತಂ ಕಂಬಲಬರ್ಹಿಷಮ್  |

ಚಚಾರ ವಿಪುಲಂ ಧರ್ಮಮಮರ್ಷಾತ್ಪ್ರೇತ್ಯಭಾಗಪಿ || ೧-೩೬-೮

ಮರುತ್ತನು ಕಂಬಲಬರ್ಹಿಷನನ್ನು ಜ್ಯೇಷ್ಠ ಸುತನನ್ನಾಗಿ ಪಡೆದುಕೊಂಡನು. ಅವನು ಮರಣಾನಂತರ ಫಲವನ್ನೀಡುವ ವಿಪುಲ ಧರ್ಮಾಚರಣೆಗಳಲ್ಲಿ ತೊಡಗಿದ್ದನು.

ಸುತಪ್ರಸೂತಿಮಿಚ್ಛನ್ವೈ ಸುತಂ ಕಂಬಲಬರ್ಹಿಷಃ |

ಬಭೂವ ರುಕ್ಮಕವಚಃ ಶತಪ್ರಸವತಃ ಸುತಃ || ೧-೩೬-೯

ಪುತ್ರಪೌತ್ರರನ್ನು ಇಚ್ಛಿಸಿದ ಕಂಬಲಬರ್ಹಿಷನಿಗೆ ರುಕ್ಮಕವಚನು ಸುತನಾದನು. ಅವನು ನೂರು ಮಕ್ಕಳಲ್ಲಿ ಉಳಿದುಕೊಂಡ ಒಬ್ಬನೇ ಮಗನಾಗಿದ್ದನು.

ನಿಹತ್ಯ ರುಕ್ಮಕವಚಃ ಶತಂ ಕವಚಿನಾಂ ರಣೇ |

ಧನ್ವಿನಾಂ ನಿಶಿತೈರ್ಬಾಣೈರವಾಪ ಶ್ರಿಯಮುತ್ತಮಾಮ್ || ೧-೩೬-೧೦

ರುಕ್ಮಕವಚನು ರಣದಲ್ಲಿ ನೂರು ಕವಚಧಾರೀ ಧನುರ್ಧಾರಿಗಳನ್ನು ನಿಶಿತ ಬಾಣಗಳಿಂದ ಸಂಹರಿಸಿ ಉತ್ತಮ ಶ್ರೀಯನ್ನು ಪಡೆದುಕೊಂಡಿದ್ದನು.

ಜಜ್ಞೇಽಥ ರುಕ್ಮಕವಚಾತ್ಪರಾಜಿತ್ಪರವೀರಹಾ |

ಜಜ್ಞಿರೇ ಪಂಚ ಪುತ್ರಾಸ್ತು ಮಹಾವೀರ್ಯಾಃ ಪರಾಜಿತಃ || ೧-೩೬-೧೧

ರುಕ್ಮಕವಚನಿಗೆ ಪರವೀರಹಾ ಪರಾಜಿತನು ಜನಿಸಿದನು. ಪರಾಜಿತನಿಗೆ ಮಹಾವೀರ್ಯ ಐವರು ಪುತ್ರರು ಜನಿಸಿದರು.

ರುಕ್ಮೇಷುಃಪೃಥುರುಕ್ಮಶ್ಚ ಜ್ಯಾಮಘಃ ಪಾಲಿತೋ ಹರಿಃ |

ಪಾಲಿತಂ ಚ ಹರಿಂ ಚೈವ ವಿದೇಹೇಭ್ಯಃ ಪಿತಾ ದದೌ || ೧-೩೬-೧೨

ರುಕ್ಮೇಷು, ಪೃಥುರುಕ್ಮ, ಜ್ಯಾಮಘ, ಪಾಲಿತ ಮತ್ತು ಹರಿ. ಪಾಲಿತ ಮತ್ತು ಹರಿ ಇವರನ್ನು ತಂದೆಯು ವಿದೇಹರಾಜನಿಗೆ ಕೊಟ್ಟಿದ್ದನು.

ರುಕ್ಮೇಷುರಭವದ್ರಾಜಾ ಪೃಥುರುಕ್ಮಸ್ಯ ಸಂಶ್ರಿತಃ |

ತಾಭ್ಯಾಂ ಪ್ರವ್ರಾಜಿತೋ ರಾಜ್ಯಾಜ್ಜ್ಯಾಮಘೋಽವಸದಾಶ್ರಮೇ || ೧-೩೬-೧೩

ಪೃಥುರುಕ್ಮನ ಆಶ್ರಯದಲ್ಲಿ ರುಕ್ಮೇಷುವು ರಾಜನಾದನು. ಅವರಿಬ್ಬರೂ ತಂದೆಯನ್ನು ರಾಜ್ಯದಿಂದ ಹೊರಹಾಕಲು ಜ್ಯಾಮಘನು ಆಶ್ರಮದಲ್ಲಿ ವಾಸಿಸತೊಡಗಿದನು.

ಪ್ರಶಾಂತಃ ಸ ವನಸ್ಥಸ್ತು ಬ್ರಾಹ್ಮಣೈಶ್ಚಾವಬೋಧಿತಃ |

ಜಿಗಾಯ ರಥಮಾಸ್ಥಾಯ ದೇಶಮನ್ಯಂ ಧ್ವಜೀ ರಥೀ || ೧-೩೬-೧೪

ವನದಲ್ಲಿದ್ದು ಪ್ರಶಾಂತನಾಗಿದ್ದ ಅವನು ಬ್ರಾಹ್ಮಣರಿಂದ ಶಕ್ತಿವಂತನಾಗಿ ಧ್ವಜಯುಕ್ತ ರಥದಲ್ಲಿ ಕುಳಿತು ಅನ್ಯ ದೇಶವನ್ನು ಗೆದ್ದನು.

ನರ್ಮದಾಕೂಲಮೇಕಾಕೀ ನಗರೀಂ ಮೃತ್ತಿಕಾವತೀಮ್ |

ಋಕ್ಷವಂತಂ ಗಿರಿಂ ಜಿತ್ವಾ ಶುಕ್ತಿಮತ್ಯಾಮುವಾಸ ಸಃ || ೧-೩೬-೧೫

ಏಕಾಕಿಯಾಗಿ ಅವನು ನರ್ಮದಾತೀರದ ಮೃತ್ತಿಕಾವತೀ ನಗರಿಯನ್ನೂ ಋಕ್ಷವಂತ ಗಿರಿಯನ್ನು ಗೆದ್ದು ಶುಕ್ತಿಮತಿಯಲ್ಲಿ ತನ್ನ ಪುರವನ್ನು ಸ್ಥಾಪಿಸಿದನು.

ಜ್ಯಾಮಘಸ್ಯಾಭವದ್ಭಾರ್ಯಾ ಶೈಬ್ಯಾ ಬಲವತೀ ಸತೀ |

ಅಪುತ್ರೋಽಪಿ ಚ ರಾಜಾ ಸ ನಾನ್ಯಾಂ ಭಾರ್ಯಾಮವಿಂದತ || ೧-೩೬-೧೬

ಚ್ಯಾಮಘನ ಪತ್ನಿ ಸತೀ ಶೈಬ್ಯೆಯು ಬಲವತಿಯಾಗಿದ್ದಳು. ಆದುದರಿಂದ ಪುತ್ರರಿಲ್ಲದಿದ್ದರೂ ರಾಜನು ಅನ್ಯ ಭಾರ್ಯೆಯನ್ನು ವಿವಾಹವಾಗಲಿಲ್ಲ.

ತಸ್ಯಾಸೀದ್ವಿಜಯೋ ಯುದ್ಧೇ ತತ್ರ ಕನ್ಯಾಮವಾಪ ಸಃ |

ಭಾರ್ಯಾಮುವಾಚ ಸಂತ್ರಸ್ತಃ ಸ್ನುಷೇತಿ ಸ ನರೇಶ್ವರಃ || ೧-೩೬-೧೭

ಅವನು ಒಂದು ಯುದ್ಧದಲ್ಲಿ ವಿಜಯಿಯಾದಾಗ ಕನ್ಯೆಯೋರ್ವಳನ್ನು ಪಡೆದುಕೊಂಡನು. ಆದರೆ ಹೆದರಿ ಆ ನರೇಶ್ವರನು ಪತ್ನಿಗೆ ಇವಳು ಸೊಸೆ ಎಂದುಬಿಟ್ಟನು.

ಏತಚ್ಛ್ರುತ್ವಾಬ್ರವೀದ್ದೇವೀ ಕಸ್ಯ ಚೇಯಂ ಸ್ನುಷೇತಿ ವೈ |

ಅಬ್ರವೀತ್ತದುಪಶ್ರುತ್ಯ ಜ್ಯಾಮಘೋ ರಾಜಸತ್ತಮಃ || ೧-೩೬-೧೮

ಇದನ್ನು ಕೇಳಿದ ದೇವಿಯು ಇವಳು ಯಾರ ಸೊಸೆ ಎಂದು ಹೇಳಿದಾಗ ರಾಜಸತ್ತಮ ಜ್ಯಾಮಘನು ಅವಳಿಗೆ ಹೇಳಿದನು:

ಯಸ್ತೇ ಜನಿಷ್ಯತೇ ಪುತ್ರಃ ತಸ್ಯ ಭಾರ್ಯೋಪದಾನವೀ |

ಉಗ್ರೇಣ ತಪಸಾ ತಸ್ಯಾಃ ಕನ್ಯಾಯಾಃ ಸ ವ್ಯಜಾಯತ |

ಪುತ್ರಂ ವಿದರ್ಭಂ ಸುಭಗಾ ಶೈಬ್ಯಾ ಪರಿಣತಾ ಸತೀ || ೧-೩೬-೧೯

“ಈ ಉಪದಾನವಿಯು ನಿನ್ನಲ್ಲಿ ಜನಿಸುವ ಪುತ್ರನ ಭಾರ್ಯೆಯಾಗುತ್ತಾಳೆ.” ಆ ಕನ್ಯೆಯ ಉಗ್ರ ತಪಸ್ಸಿನಿಂದಾಗಿ ವೃದ್ಧೆಯಾಗಿದ್ದರೂ ಸತೀ ಸುಭಗೆ ಶೈಬ್ಯೆಯಲ್ಲಿ ವಿದರ್ಭನೆಂಬ ಪುತ್ರನು ಜನಿಸಿದನು.

ರಾಜಪುತ್ರ್ಯಾಂ ತು ವಿದ್ವಾಂಸೌ ಸ್ನುಷಾಯಾಂ ಕ್ರಥಕೌಶಿಕೌ |

ಪಶ್ಚಾದ್ವಿದರ್ಭೋಽಜನಯಚ್ಛೂರೌ ರಣವಿಶಾರದೌ || ೧-೩೬-೨೦

ನಂತರ ಆ ರಾಜಪುತ್ರಿಯಲ್ಲಿ ವಿದರ್ಭನು ವಿದ್ವಾಂಸರೂ, ಶೂರರೂ, ರಣವಿಶಾರದರೂ ಆದ ಕ್ರಥ ಮತ್ತು ಕೌಶಿಕರೆಂಬ ಈರ್ವರು ಪುತ್ರರನ್ನು ಪಡೆದನು.

ಲೋಮಪಾದಂ ತೃತೀಯಂ ತು ಪುತ್ರಂ ಪರಮಧಾರ್ಮಿಕಮ್ |

ಲೋಮಪಾದಾತ್ಮಜೋ ಬಭ್ರುರಾಹ್ವತಿಸ್ತಸ್ಯ ಚಾತ್ಮಜಃ || ೧-೩೬-೨೧

ಲೋಮಪಾದನೆಂಬ ಮೂರನೆಯ ಪರಮಧಾರ್ಮಿಕ ಪುತ್ರನಿಗೂ ಜನ್ಮವಿತ್ತನು. ಲೋಮಪಾದನ ಮಗನು ಬಭ್ರು ಮತ್ತು ಆಹ್ವತಿಯು ಬಭ್ರುವಿನ ಮಗನು.

ಆಹ್ವತೇಃ ಕೌಶಿಕಶ್ಚೈವ ವಿದ್ವಾನ್ಪರಮಧಾರ್ಮಿಕಃ |

ಚೇದಿಃ ಪುತ್ರಃ ಕೌಶಿಕಸ್ಯ ತಸ್ಮಾಚ್ಚೈದ್ಯಾ  ನೃಪಾಃ ಸ್ಮೃತಾಃ || ೧-೩೬-೨೨

ಆಹ್ವತನಿಗೆ ಕೌಶಿಕನೆಂಬ ವಿದ್ವಾನ್ ಮತ್ತು ಪರಮಧಾರ್ಮಿಕ ಪುತ್ರನಾದನು. ಚೇದಿಯು ಕೌಶಿಕನ ಪುತ್ರ. ಅವನಿಂದ ಚೈದ್ಯನೃಪರೆಂದಾದರು.

ಭೀಮೋ ವಿದರ್ಭಸ್ಯ ಸುತಃ ಕುಂತಿಸ್ತಸ್ಯಾತ್ಮಜೋಽಭವತ್ |

ಕುಂತೇರ್ಧೃಷ್ಟಸುತೋ ಜಜ್ಞೇ ರಣಧೃಷ್ಟಃ ಪ್ರತಾಪವಾನ್ |

ಧೃಷ್ಟಸ್ಯ ಜಜ್ಞಿರೇ ಶೂರಾಸ್ತ್ರಯಃ ಪರಮಧಾರ್ಮಿಕಾಃ || ೧-೩೬-೨೩

ವಿದರ್ಭನ ನಾಲ್ಕನೇ ಪುತ್ರನು ಭೀಮನು. ಕುಂತಿಯು ಅವನ ಪುತ್ರನಾದನು. ಕುಂತಿಗೆ ದೃಷ್ಟನು ಸುತನಾಗಿ ಜನಿಸಿದನು. ದೃಷ್ಟನು ರಣದಲ್ಲಿ ಪ್ರತಾಪವಾನನಾಗಿದ್ದನು. ಧೃಷ್ಟನಿಗೆ ಮೂವರು ಪರಮಧಾರ್ಮಿಕ ಶೂರರು ಹುಟ್ಟಿದರು.

ಆವಂತಶ್ಚ ದಶಾರ್ಹಶ್ಚ ಬಲೀ ವಿಷಹರಶ್ಚ ಯಃ |

ದಶಾರ್ಹಸ್ಯ ಸುತೋ ವ್ಯೋಮಾ ವ್ಯೋಮ್ನೋ ಜೀಮೂತ ಉಚ್ಯತೇ ||೧-೩೬-೨೪

ಆವಂತ, ದಶಾರ್ಹ ಮತ್ತು ಬಲಶಾಲೀ ವಿಷಹರ. ದಶಾರ್ಹನ ಸುತನ ವ್ಯೋಮನು ಮತ್ತು ವ್ಯೋಮನ ಮಗನು ಜೀಮೂತನು.

ಜೀಮೂತಪುತ್ರೋ ಬೃಹತಿಸ್ತಸ್ಯ ಭೀಮರಥಃ ಸುತಃ |

ಅಥ ಭೀಮರಥಸ್ಯಾಸೀತ್ಪುತ್ರೋ ನವರಥಸ್ತಥಾ || ೧-೩೬-೨೫

ಜೀಮೂತನ ಪುತ್ರನು ಬೃಹತಿ ಮತ್ತು ಭೀಮರಥನು ಅವನ ಸುತನು. ಭೀಮರಥನಿಗೆ ನವರಥನು ಪುತ್ರನಾದನು.

ತಸ್ಯ ಚಾಸೀದ್ದಶರಥಾಃ ಶಕುನಿಸ್ತಸ್ಯ ಚಾತ್ಮಜಃ |

ತಸ್ಮಾತ್ಕರಂಭಃ ಕಾರಂಭಿರ್ದೇವರಾತೋಽಭವನ್ನೃಪಃ || ೧-೩೬-೨೬

ಅವನ ಪುತ್ರನು ದಶರಥನು ಮತ್ತು ಶಕುನಿಯು ಅವನ ಮಗನು. ಶಕುನಿಯಿಂದ ಕರಂಭ ಮತ್ತು ಕರಂಭನಿಂದ ನೃಪ ದೇವರಾತನಾದನು.

ದೇವಕ್ಷತ್ರೋಽಭವತ್ತಸ್ಯ ದೈವಕ್ಷತ್ರಿರ್ಮಹಾಯಶಾಃ |

ದೇವಗರ್ಭಸಮೋ ಜಜ್ಞೇ ದೇವಕ್ಷತ್ರಸ್ಯ ನಂದನಃ || ೧-೩೬-೨೭

ದೇವರಾತನಿಗೆ ದೇವಕ್ಷತ್ರನು ಮಗನಾದನು. ದೇವಕ್ಷತ್ರಿಗೆ ಮಹಾಯಶಸ್ವೀ ದೇವಗರ್ಭಸಮ ದೈವಕ್ಷತ್ರಿಯು ಮಗನಾದನು.

ಮಧೂನಾಂ ವಂಶಕೃದ್ರಾಜಾ ಮಧುರ್ಮಧುರವಾಗಪಿ |

ಮಧೋರ್ಜಜ್ಞೇಽಥ ವೈದರ್ಭ್ಯಾಂ ಪುತ್ರೋ ಮರುವಸಾಸ್ತಥಾ || ೧-೩೬-೨೮

ಅವನ ಹೆಸರು ಮಧು ಎಂದಾಗಿತ್ತು. ಮಧುಗಳ ವಂಶವರ್ಧಕನಾದ ಆ ರಾಜನ ವಾಣಿಯೂ ಮಧುರವಾಗಿತ್ತು. ಮಧುವಿಗೆ ವೈದರ್ಭಿಯಲ್ಲಿ ಮರುವಸು ಎಂಬ ಪುತ್ರನು ಜನಿಸಿದನು.

ಆಸೀನ್ಮರುವಸಃ ಪುತ್ರಃ ಪುರುದ್ವಾನ್ಪುರುಷೋತ್ತಮಃ |

ಮಧುರ್ಜಜ್ಞೇಽಥ ವೈದರ್ಭ್ಯಾಂ ಭದ್ರವತ್ಯಾಂ ಕುರೂದ್ವಹಃ || ೧-೩೬-೨೯

ಮರುವಸುವಿನ ಪುತ್ರನು ಪುರುಷೋತ್ತಮ ಪುರುದ್ವಾನನಾದನು. ಅವನಿಗೆ ವೈದರ್ಭಿ ಭದ್ರವತಿಯಲ್ಲಿ ಮಧು ಎಂಬ ಕುರೂದ್ವಹನು ಹುಟ್ಟಿದನು.

ಐಕ್ಷ್ವಾಕೀ ಚಾಭವದ್ಭಾರ್ಯಾ ಸತ್ತ್ವಾಂಸ್ತಸ್ಯಾಮಜಾಯತ |

ಸತ್ತ್ವಾನ್ಸರ್ವಗುಣೋಪೇತಃ ಸಾತ್ತ್ವತಾಂ ಕೀರ್ತಿವರ್ಧನಃ || ೧-೩೬-೩೦

ಮರುವಸುವಿನ ಇನ್ನೊಬ ಭಾರ್ಯೆ ಇಕ್ಷ್ವಾಕಿಯಲ್ಲಿ ಸತ್ತ್ವಾನ್ ಎನ್ನುವ ಮಗನು ಜನಿಸಿದನು. ಸತ್ತ್ವಾನನು ಸರ್ವಗುಣೋಪೇತನೂ ಸಾತ್ತ್ವತರ ಕೀರ್ತಿವರ್ಧನನೂ ಆಗಿದ್ದನು.

ಇಮಾಂ ವಿಸೃಷ್ಟಿಂ ವಿಜ್ಞಾಯ ಜ್ಯಾಮಘಸ್ಯ ಮಹಾತ್ಮನಃ |

ಯುಜ್ಯತೇ ಪರಯಾ ಕೀರ್ತ್ಯಾ ಪ್ರಜಾವಾಂಶ್ಚ ಭವೇನ್ನರಃ || ೧-೩೬-೩೧

ಮಹಾತ್ಮ ಜ್ಯಾಮಘನ ಈ ವಂಶವನ್ನು ತಿಳಿದುಕೊಂಡ ನರನು ಪರಮ ಕೀರ್ತಿಯನ್ನು ಪಡೆದುಕೊಳ್ಳುತ್ತಾನೆ ಮತ್ತು ಸಂತಾನವಂತನಾಗುತ್ತಾನೆ.”

 ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಷಟ್ತ್ರಿಂಶೋಽಧ್ಯಾಯಃ

Free yellow flower white background Images, Pictures, and Royalty-Free  Stock Photos - FreeImages.com

Comments are closed.