ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ
ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 3: ಮುಖೋತ್ಪತ್ತಿಃ ಮನುರುವಾಚ । ಚತುರ್ಮುಖತ್ವಮಗಮತ್ಕಸ್ಮಾಲ್ಲೋಕಪಿತಾಮಹಃ । ಕಥಂ ತು ಲೋಕಾನಸೃಜದ್ಬ್ರಹ್ಮಾ ಬ್ರಹ್ಮವಿದಾಂ ವರಃ ।। 1 ।। ಮನುವು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ ಲೋಕಪಿತಾಮಹ ಬ್ರಹ್ಮನು ಚತುರ್ಮುಖತ್ವವನ್ನು ಹೇಗೆ ಪಡೆದನು ಮತ್ತು ಅವನು ಲೋಕಗಳನ್ನು ಹೇಗೆ ಸೃಷ್ಟಿಸಿದನು?” ಮತ್ಸ್ಯ ಉವಾಚ । ತಪಶ್ಚಚಾರ ಪ್ರಥಮಮಮರಾಣಾಂ ಪಿತಾಮಹಃ । ಆವಿರ್ಭೂತಾಸ್ತತೋ ವೇದಾಃ ಸಾಂಗೋಪಾಂಗಪದಕ್ರಮಾಃ ।। 2 ।। ಪುರಾಣಂ ಸರ್ವಶಾಸ್ತ್ರಾಣಾಂ ಪ್ರಥಮಂ ಬ್ರಹ್ಮಣಾ ಸ್ಮೃತಮ್ । ನಿತ್ಯಂ ಶಬ್ದಮಯಂ ಪುಣ್ಯಂ ಶತಕೋಟಿಪ್ರವಿಸ್ತರಮ್ ।। 3…