ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 8: ಆಧಿಪತ್ಯಾಭಿಷೇಚನಂ
ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 8: ಆಧಿಪತ್ಯಾಭಿಷೇಚನಂ ಋಷಯ ಊಚುಃ । ಆದಿಸರ್ಗಶ್ಚ ಯಃ ಸೂತ ಕಥಿತೋ ವಿಸ್ತರೇಣ ತು । ಪ್ರತಿಸರ್ಗಶ್ಚ ಯೇ ಯೇಷಾಮಧಿಪಾಸ್ತಾನ್ವದಸ್ವ ನಃ ।। 1 ।। ಋಷಿಗಳು ಹೇಳಿದರು: “ಸೂತ! ಆದಿಸರ್ಗದ ಕುರಿತು ವಿಸ್ತಾರವಾಗಿ ಹೇಳಿದ್ದೀಯೆ. ಇನ್ನುಮುಂದೆ ಪ್ರತಿಸರ್ಗ[1]ವನ್ನೂ, ಯಾವ್ಯಾವ ವರ್ಗಕ್ಕೆ ಯಾರ್ಯಾರು ಅಧಿಪತಿಗಳು ಎನ್ನುವುದನ್ನೂ ನಮಗೆ ಹೇಳು.” ಸೂತ ಉವಾಚ । ಯದಾಭಿಷಿಕ್ತಃ ಸಕಲಾಧಿರಾಜ್ಯೇ ಪೃಥುರ್ಧರಿತ್ರ್ಯಾಮಧಿಪೋ ಬಭೂವ । ತದೌಷಧೀನಾಮಧಿಪಂ ಚಕಾರ ಯಜ್ಞವ್ರತಾನಾಂ ತಪಸಾಂ ಚ ಚಂದ್ರಮ್ ।। 2 ।। ನಕ್ಷತ್ರತಾರಾದ್ವಿಜವೃಕ್ಷಗುಲ್ಮಲತಾವಿತಾನಸ್ಯ…