ತೃತೀಯ ಸ್ಕಂಧಃ, ಅಧ್ಯಾಯ 7: ಮೈತ್ರೇಯ-ವಿದುರ ಸಂವಾದ
ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 7: ಮೈತ್ರೇಯ-ವಿದುರ ಸಂವಾದ ಶ್ರೀಶುಕ ಉವಾಚ । ಏವಂ ಬ್ರುವಾಣಂ ಮೈತ್ರೇಯಂ ದ್ವೈಪಾಯನಸುತೋ ಬುಧಃ । ಪ್ರೀಣಯನ್ನಿವ ಭಾರತ್ಯಾ ವಿದುರಃ ಪ್ರತ್ಯಭಾಷತ ।। 1 ।। ಶ್ರೀಶುಕನು ಹೇಳಿದನು: “ಮೈತ್ರೇಯನ ಈ ನಿರೂಪಣೆಯನ್ನು ಕೇಳಿ ದ್ವೈಪಾಯನಸುತ ವಿದ್ವಾಂಸ ವಿದುರನು ತನ್ನ ಮಧುರ ವಾಣಿಯಿಂದ ಅವನನ್ನು ಸಂತೋಷಪಡಿಸುತ್ತಾ ತಿರುಗಿ ಮಾತನಾಡಿದನು. ವಿದುರ ಉವಾಚ । ಬ್ರಹ್ಮನ್ಕಥಂ ಭಗವತಶ್ಚಿನ್ಮಾತ್ರಸ್ಯಾವಿಕಾರಿಣಃ । ಲೀಲಯಾ ಚಾಪಿ ಯುಜ್ಯೇರನ್ನಿರ್ಗುಣಸ್ಯ ಗುಣಾಃ ಕ್ರಿಯಾಃ ।। 2 ।। ಕ್ರೀಡಾಯಾಮುದ್ಯಮೋಽರ್ಭಸ್ಯ…