ಕೂರ್ಮ ಪುರಾಣ
ಕೂರ್ಮ ಪುರಾಣ [ಕೂರ್ಮಪುರಾಣಂ, (4 ಸಂಪುಟಗಳಲ್ಲಿ) ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 40, ಮೈಸೂರು, ಶ್ರೀ ವಿನಾಯಕ ಪ್ರಿಂಟಿಂಗ್ ಪ್ರೆಸ್, 1947] ಮತ್ಸ್ಯಪುರಾಣದ 53ನೇ ಅಧ್ಯಾಯದ 47-48ನೇ ಶ್ಲೋಕಗಳ ಪ್ರಕಾರ ಯತ್ರ ಧರ್ಮಾರ್ಥಕಾಮಾನಾಂ ಮೋಕ್ಷಸ್ಯ ಚ ರಸಾತಲೇ । ಮಾಹಾತ್ಮ್ಯಂ ಕಥಯಾಮಾಸ ಕೂರ್ಮರೂಪೀ ಜನಾರ್ದನಃ ।। ಇಂದ್ರದ್ಯುಮ್ನಪ್ರಸಂಗೇನ ಋಷಿಭ್ಯಃ ಶಕ್ರಸಂನಿಧೌ । ಅಷ್ಟಾದಶ ಸಹಸ್ರಾಣಿ ಲಕ್ಷ್ಮೀಕಲ್ಪಾನುಷಂಗಿಕಮ್ ।। ಅರ್ಥಾತ್: ಕೂರ್ಮರೂಪವನ್ನು ಧರಿಸಿದ ಮಹಾವಿಷ್ಣುವು ಇಂದ್ರದ್ಯುಮ್ನನ ಪ್ರಸಂಗದಿಂದ ಇಂದ್ರನೆದುರ್ನಲ್ಲಿ,…