ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ

ಯುಧಿಷ್ಠಿರ ಸಾಂತ್ವನ; ಅಶ್ವಮೇಧದ ಸೂಚನೆ ಮಹಾಬಾಹು ಯುಧಿಷ್ಠಿರನು ಭೀಷ್ಮನಿಗೆ ಜಲತರ್ಪಣವನ್ನಿತ್ತು ರಾಜಾ ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ವ್ಯಾಕುಲಚಿತ್ತನಾಗಿ ಗಂಗಾನದಿಯ ತಟವನ್ನೇರಿದನು. ಮೇಲೇರುತ್ತಲೇ ಕಣ್ಣೀರಿನವ್ಯಾಕುಲಕಣ್ಣುಗಳ ಆ ಮಹೀಪಾಲನು ಬೇಟೆಗಾರನಿಂದ ಹೊಡೆಯಲ್ಪಟ್ಟ ಆನೆಯಂತೆ ಗಂಗಾನದಿಯ ತೀರದಲ್ಲಿಯೇ ಬಿದ್ದುಬಿಟ್ಟನು. ಕುಸಿಯುತ್ತಿದ್ದ ಅವನನ್ನು ಕೃಷ್ಣನ ಹೇಳಿಕೆಯಂತೆ ಭೀಮನು ಹಿಡಿದುಕೊಂಡನು. ಪರಬಲಾರ್ದನ ಕೃಷ್ಣನು “ಹೀಗಾಗಬೇಡ!” ಎಂದು ಯುಧಿಷ್ಠಿರನಿಗೆ ಹೇಳಿದನು. ಆರ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ನೆಲದ ಮೇಲೆ ಬಿದ್ದ ಧರ್ಮಾತ್ಮ ಯುಧಿಷ್ಠಿರನನ್ನು ಪಾಂಡವರು ನೋಡಿದರು. ಸತ್ವವನ್ನು ಕಳೆದುಕೊಂಡು…

Continue reading

ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು

[spacer height=”20px”] ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ; ಕೃಷ್ಣನು ದ್ವಾರಕೆಗೆ ತೆರಳಿದುದು ಪಾಂಡವರಿಗೆ ವಿಜಯವಾಗಿ ಅವರು ಪ್ರಶಾಂತರಾಗಲು ವಾಸುದೇವ-ಧನಂಜಯರು ಹರ್ಷಿತರಾದರು. ಮುದಿತರಾಗಿ ಅವನು ತಮ್ಮ ಅನುಯಾಯಿಗಳೊಂದಿಗೆ ದಿವಿಯಲ್ಲಿ ದೇವೇಶ್ವರರಂತೆ ವಿಚಿತ್ರ ವನ-ಪರ್ವತಗಳಲ್ಲಿ ವಿಹರಿಸಿದರು. ಅಶ್ವಿನಿಯರು ನಂದನ ವನದಲ್ಲಿ ಹೇಗೋ ಹಾಗೆ ಅವರಿಬ್ಬರೂ ರಮಣೀಯ ಶೈಲಗಳಲ್ಲಿ ಮತ್ತು ನದಿ-ತೀರ್ಥಗಳಲ್ಲಿ ವಿಹರಿಸುತ್ತಾ ಹರ್ಷಿತರಾದರು. ಮಹಾತ್ಮ ಕೃಷ್ಣ-ಪಾಂಡವರು ಇಂದ್ರಪ್ರಸ್ಥದಲ್ಲಿ ರಮಿಸಿದರು. ಆ ರಮ್ಯ ಸಭೆಯನ್ನು ಪ್ರವೇಶಿಸಿ ವಿಹರಿಸಿದರು. ಅಲ್ಲಿ ಅವರಿಬ್ಬರೂ ವಿಚಿತ್ರ ಯುದ್ಧಕಥೆಗಳನ್ನೂ, ತಮಗಾದ ಪರಿಕ್ಲೇಶಗಳನ್ನೂ…

Continue reading

ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ

ಪಾಂಡವರಿಗೆ ಮರುತ್ತನಿಧಿಲಾಭ ಮತ್ತು ಪರೀಕ್ಷಿತ್ಸಂಜೀವನ ಹಸ್ತಿನಾಪುರ ನಗರದಲ್ಲಿ ಕೂಡ ವೀರ ಪಾಂಡವರು ಅಭಿಮನ್ಯುವು ಇಲ್ಲದೇ ಶಾಂತಿಯನ್ನು ಪಡೆಯಲಿಲ್ಲ. ಪತಿಶೋಕದಿಂದ ಆರ್ತಳಾಗಿದ್ದ ವಿರಾಟನ ಮಗಳು ಉತ್ತರೆಯು ಅನೇಕ ದಿವಸಗಳು ಊಟವನ್ನೇ ಮಾಡಲಿಲ್ಲ. ಅದೊಂದು ಮಹಾ ಕರುಣಾಜನಕ ವಿಷಯವಾಗಿತ್ತು. ಹಾಗೆಯೇ ಅವಳ ಗರ್ಭದಲ್ಲಿದ್ದ ಭ್ರೂಣವೂ ದಿನ-ದಿನಕ್ಕೆ ಕ್ಷೀಣಿಸತೊಡಗಿತು. ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಧೀಮಂತ ಮಹಾತೇಜಸ್ವೀ ವ್ಯಾಸನು ಆಗಮಿಸಿ ಕುಂತಿ ಮತ್ತು ಪೃಥುಲಲೋಚನೆ ಉತ್ತರೆಗೆ ಶೋಕವನ್ನು ಪರಿತ್ಯಜಿಸುವಂತೆ ಹೇಳಿದನು. “ಯಶಸ್ವಿನೀ! ನಿನ್ನಲ್ಲಿ ಮಹಾತೇಜಸ್ವಿಯಾದ…

Continue reading

ಅಶ್ವಮೇಧ ಯಜ್ಞ

[spacer height=”20px”] ಅಶ್ವಮೇಧ ಯಜ್ಞ ಯುಧಿಷ್ಠಿರನ ಯಜ್ಞದೀಕ್ಷೆ ಅದಾದ ಕೆಲವು ದಿನಗಳ ನಂತರ ಸತ್ಯವತೀ ಸುತ ಮಹಾತೇಜಸ್ವೀ ವ್ಯಾಸನು ನಾಗಸಾಹ್ವಯ ನಗರಕ್ಕೆ ಆಗಮಿಸಿದನು. ಆಗ ಎಲ್ಲ ಕುರೂದ್ವಹರೂ ವೃಷ್ಣಿ-ಅಂಧಕವ್ಯಾಘ್ರರೊಂದಿಗೆ ಅವನಿಗೆ ಯಥಾನ್ಯಾಯವಾಗಿ ಸೇವೆಸಲ್ಲಿಸಿದರು. ಅಲ್ಲಿ ನಾನಾ ವಿಧದ ಮಾತುಕಥೆಗಳು ನಡೆಯುತ್ತಿರಲು ಧರ್ಮಸುತ ಯುಧಿಷ್ಠಿರನು ವ್ಯಾಸನಿಗೆ ಇಂತೆಂದನು: “ಭಗವನ್! ನಿನ್ನ ಅನುಗ್ರಹದಿಂದ ಈ ರತ್ನವನ್ನು ತಂದಿದ್ದೇವೆ. ಇದನ್ನು ಮಹಾಕ್ರತು ವಾಜಿಮೇಧಕ್ಕೆ ಉಪಯೋಗಿಸಲು ಇಚ್ಛಿಸುತ್ತೇನೆ. ನೀನು ನನಗೆ ಅಪ್ಪಣೆಯನ್ನು ಕೊಡಬೇಕು. ನಾವೆಲ್ಲರೂ ನಿನ್ನ…

Continue reading

ಯುಧಿಷ್ಠಿರ-ಭೀಷ್ಮ ಸಂವಾದ

ಯುಧಿಷ್ಠಿರ-ಭೀಷ್ಮ ಸಂವಾದ ರಾತ್ರಿಯು ಕಳೆಯಲು ಇನ್ನೂ ಅರ್ಧ ಯಾಮವಿರುವಾಗಲೇ ಅವನು ಎದ್ದನು. ಮಾಧವನು ಧ್ಯಾನಮಾರ್ಗವನ್ನಾಶ್ರಯಿಸಿ ಸರ್ವಜ್ಞಾನಗಳನ್ನೂ ಕಂಡು ಅನಂತರ ಸನಾತನಬ್ರಹ್ಮನನ್ನು ಧ್ಯಾನಿಸಿದನು. ಆಗ ಶ್ರುತಿಪುರಾಣಗಳನ್ನು ತಿಳಿದಿದ್ದ, ವಿದ್ಯಾವಂತರಾದ, ಸುಂದರ ಕಂಠವುಳ್ಳವರು ಆ ವಿಶ್ವಕರ್ಮಿ ಪ್ರಜಾಪತಿ ವಾಸುದೇವನನ್ನು ಸ್ತುತಿಸಿದರು. ಕೈಗಳಿಂದ ತಾಳಹಾಕುತ್ತಾ ಭಜನೆ ಮಾಡುತ್ತಿದ್ದರು. ಮಧುರ ಕಂಠದಲ್ಲಿ ಗಾಯನ ಹಾಡುತ್ತಿದ್ದರು. ಸಹಸ್ರಾರು ಶಂಖ-ಆನಕ-ಮೃದಂತಗಳನ್ನು ಮೊಳಗಿಸಿದರು. ಅತಿಮನೋರಮವಾದ ವೀಣೆ-ಪವಣ-ವೇಣುಗಳ ಧ್ವನಿಗಳು, ಅವನ ಭವನವೇ ಸಂತೋಷದಿಂದ ನಗುತ್ತಿದೆಯೋ ಎನ್ನುವಂತೆ ಬಹು ವಿಸ್ತೀರ್ಣದವರೆಗೆ ಕೇಳಿಬರುತ್ತಿತ್ತು. ಹಾಗೆಯೇ…

Continue reading

ಹದಿನೆಂಟನೇ ದಿನದ ಯುದ್ಧ: ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ

ಹದಿನೆಂಟನೇ ದಿನದ ಸಾಯಂಕಾಲ ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ ವಾರ್ತಾವಾಹಿಗಳಿಂದ ದುರ್ಯೋಧನನು ಹತನಾದನೆಂದು ಕೇಳಿ ಹತರಾಗದೇ ಉಳಿದಿದ್ದ ಆದರೆ ನಿಶಿತ ಬಾಣಗಳಿಂದ, ಗದೆ-ತೋಮರ-ಶಕ್ತಿಗಳ ಹೊಡೆತದಿಂದ ಗಾಯಗೊಂಡಿದ್ದ ಕೌರವರ ಮಹಾರಥರು – ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು – ತ್ವರೆಮಾಡಿ ವೇಗಶಾಲೀ ಕುದುರೆಗಳೊಂದಿಗೆ ರಣರಂಗಕ್ಕೆ ತಲುಪಿದರು. ಅಲ್ಲಿ ಅವರು ಚಂಡಮಾರುತದಿಂದ ವನದಲ್ಲಿ ಮುರಿದುಬಿದ್ದ ಮಹಾಶಾಲ ವೃಕ್ಷದಂತೆ ಕೆಳಗೆ ಬಿದ್ದಿದ್ದ ಮಹಾತ್ಮ ಧಾರ್ತರಾಷ್ಟ್ರನನ್ನು ನೋಡಿದರು. ಅರಣ್ಯದಲ್ಲಿ ವ್ಯಾಧನಿಂದ ಕೆಳಗುರುಳಿಸಲ್ಪಟ್ಟ ಮಹಾಗಜದಂತೆ ಅವನು ರಕ್ತದಲ್ಲಿ…

Continue reading

ಭೀಷ್ಮಸ್ವರ್ಗಾರೋಹಣ

ಭೀಷ್ಮಸ್ವರ್ಗಾರೋಹಣ ಭೀಷ್ಮಸ್ವರ್ಗಾನುಜ್ಞಾ ಅನಂತರ ರಾಜಾ ಕುಂತೀಸುತನು ಪೌರ-ಜಾನಪದ ಜನರನ್ನು ಯಥಾನ್ಯಾಯವಾಗಿ ಪೂಜಿಸಿ ತಮ್ಮ ತಮ್ಮ ಮನೆಗಳಿಗೆ ಹೋಗಲು ಅನುಮತಿಯನ್ನಿತ್ತನು. ಆಗ ಪಾಂಡುಸುತ ನೃಪನು ವೀರರನ್ನು ಕಳೆದುಕೊಂಡಿದ್ದ ಮತ್ತು ಪತಿಯಂದಿರನ್ನು ಕಳೆದುಕೊಂಡಿದ್ದ ನಾರೀಗಣಗಳಿಗೆ ಅಪಾರ ಐಶ್ವರ್ಯವನ್ನು ದಾನಮಾಡಿ ಸಂತವಿಸಿದನು. ಅಭಿಷಿಕ್ತನಾಗಿ ರಾಜ್ಯವನ್ನು ಪಡೆದ ಮಹಾಪ್ರಾಜ್ಞ ನರಶ್ರೇಷ್ಠ ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನು ಮಂತ್ರಿಗಳೇ ಮೊದಲಾದ ಸಮಸ್ತ ಪ್ರಕೃತಿಗಣಗಳನ್ನೂ ಅವರವರ ಸ್ಥಾನಗಳಲ್ಲಿ ನಿಯೋಜಿಸಿ ಶಕ್ತಿಯುತ ದ್ವಿಜ ಮುಖ್ಯರಿಂದ ಶ್ರೇಷ್ಠ ಆಶೀರ್ವಾದಗಳನ್ನು ಪಡೆದನು. ಶ್ರೀಮಾನ್ ಪುರುಷರ್ಷಭನು…

Continue reading

ರಣದಲ್ಲಿ ಭೀಷ್ಮನು ಹತನಾದುದನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು

ರಣದಲ್ಲಿ ಭೀಷ್ಮನು ಹತನಾದುದನ್ನು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು ಯುದ್ಧಪ್ರಾರಂಭವಾದ ಹತ್ತನೆಯ ದಿನದ ರಾತ್ರಿ ಭೂತ-ಭವ್ಯ-ಭವಿಷ್ಯಗಳೆಲ್ಲವನ್ನೂ ತಿಳಿದಿದ್ದ ಪ್ರತ್ಯಕ್ಷದರ್ಶೀ ಗಾವಲ್ಗಣೀ ಸಂಜಯನು ರಣಭೂಮಿಯಿಂದ ಬಂದನು. ದುಃಖಿತನಾಗಿ ಯೋಚನೆಯಲ್ಲಿ ಮುಳುಗಿದ್ದ ಧೃತರಾಷ್ಟ್ರನಿಗೆ ಭಾರತ ಪಿತಾಮಹ ಭೀಷ್ಮನು ಹತನಾದನೆಂದು ಹೇಳಿದನು. “ಮಹಾರಾಜ! ನಿನಗೆ ನಮಸ್ಕಾರ. ನಾನು ಸಂಜಯ. ಭರತರ ಪಿತಾಮಹ ಶಾಂತನವ ಭೀಷ್ಮನು ಹತನಾದನು. ಸರ್ವಯೋಧರಲ್ಲಿ ಶ್ರೇಷ್ಠನಾದ, ಸರ್ವ ಧನುಷ್ಮತರ ಧಾಮ ಕುರುಪಿತಾಮಹನು ಇಂದು ಶರತಲ್ಪಗತನಾಗಿದ್ದಾನೆ. ಯಾರ ವೀರ್ಯವನ್ನು ಆಶ್ರಯಿಸಿ ನಿನ್ನ ಪುತ್ರರು ದ್ಯೂತವನ್ನಾಡಿದ್ದರೋ…

Continue reading

Chitrangada and Vichitravirya

Chitrangada and Vichitravirya After the nuptials were over, king Shantanu established his beautiful bride in his household. Soon after was born of Satyavati an intelligent and heroic son of Santanu named Chitrangada. He was endued with great energy and became an eminent man. The lord Santanu of great prowess also…

Continue reading